ಭಾರತಕ್ಕೆ ಒಲಿದ ‘ಕಾಮನ್‌ವೆಲ್ತ್ ಗೇಮ್ಸ್ 2030’ ಆತಿಥ್ಯ! – Kannada News | Ahmedabad All Set to Host Historic 100th Anniversary CWG in 2030

2026ರ ಗ್ಲ್ಯಾಸ್ಗೋ ಕಾಮನ್​ವೆಲ್ತ್ ಗೇಮ್ಸ್​ಗೆ  ತೆರೆಬಿದ್ದಿದೆ. ಇದರ ಬೆನ್ನಲ್ಲೇ, 2030ರ ಕಾಮನ್​ವೆಲ್ತ್ ಕ್ರೀಡಾಕೂಟದ ಆತಿಥ್ಯವನ್ನು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರಿಸಲಾಗಿದೆ. ಇದರೊಂದಿಗೆ, ಶತಮಾನದ ಐತಿಹಾಸಿಕ ಹೆಗ್ಗುರುತಿನ ಮುಂದಿನ ಕಾಮನ್​ವೆಲ್ತ್ ಗೇಮ್ಸ್​ಗೆ ಗುಜರಾತ್‌ನ ಅಹಮದಾಬಾದ್ ಆತಿಥ್ಯ ವಹಿಸುವುದು ಖಚಿತವಾಗಿದೆ.

ಗ್ಲ್ಯಾಸ್ಗೋ ಕಾಮನ್​ವೆಲ್ತ್ ಗೇಮ್ಸ್​ನ ಸಮಾರೋಪ ಸಮಾರಂಭದ ಅಂತ್ಯದಲ್ಲಿ ಸ್ಕಾಟ್​ಲ್ಯಾಂಡ್​ನ ಅಧಿಕಾರಿಗಳು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್ (CGF) ಧ್ವಜ ಮತ್ತು ಆತಿಥ್ಯದ ಬ್ಯಾಟನ್ ಅನ್ನು ಭಾರತೀಯ ನಿಯೋಗಕ್ಕೆ ಹಸ್ತಾಂತತಿಸಿದ್ದಾರೆ. ಭಾರತದ ಪರವಾಗಿ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಅಧ್ಯಕ್ಷೆ ಪಿ.ಟಿ. ಉಷಾ ಮತ್ತು ಗುಜರಾತ್ ರಾಜ್ಯದ ಉಪಮುಖ್ಯಮಂತ್ರಿ ಹರ್ಷ್ ಸಂಘವಿ ಈ ಆತಿಥ್ಯದ ಹಕ್ಕನ್ನು ಸ್ವೀಕರಿಸಿದ್ದಾರೆ.

‘ಶತಮಾನದ ಕ್ರೀಡಾಕೂಟ’

1930ರಲ್ಲಿ ಕೆನಡಾದ ಹ್ಯಾಮಿಲ್ಟನ್‌ನಲ್ಲಿ ಆರಂಭವಾದ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ 2030ರ ವೇಳೆಗೆ ಸರಿಯಾಗಿ 100 ವರ್ಷ ತುಂಬಲಿದೆ. ಈ ಶತಮಾನದ ಸ್ಮರಣೀಯ ಆವೃತ್ತಿಗೆ ಭಾರತ ಸಾಕ್ಷಿಯಾಗಲಿರುವುದು ವಿಶೇಷ.

2010ರಲ್ಲಿ ನವದೆಹಲಿಯಲ್ಲಿ ನಡೆದ ಕಾಮನ್​ವೆಲ್ತ್ ಗೇಮ್ಸ್​ ಬಳಿಕ ಭಾರತದಲ್ಲಿ ಆಯೋಜನೆಯಾಗುತ್ತಿರುವ ಎರಡನೇ ಕಾಮನ್‌ವೆಲ್ತ್ ಗೇಮ್ಸ್ ಇದಾಗಿದೆ. ಹೀಗಾಗಿಯೇ ಅಹಮದಾಬಾದ್​ನಲ್ಲಿ ನಡೆಯಲಿರುವ ಕ್ರೀಡಾಕೂಟವು ವಿಶೇಷವಾಗಿರಲಿದೆ.

ಇನ್ನು ಗ್ಲ್ಯಾಸ್ಗೋ ಕಾಮನ್​ವೆಲ್ತ್​ ಕ್ರೀಡಾಕೂಟವನ್ನು​ ಕೇವಲ 10 ಕ್ರೀಡೆಗಳಿಗೆ ಸೀಮಿತಗೊಳಿಸಲಾಗಿತ್ತು, ಆದರೆ ಅಹಮದಾಬಾದ್ 2030ರಲ್ಲಿ 15 ರಿಂದ 17 ಕ್ರೀಡಾ ವಿಭಾಗಗಳನ್ನು ಸೇರಿಸಲು ಕಾಮನ್‌ವೆಲ್ತ್ ಸ್ಪೋರ್ಟ್ಸ್ ಸಂಸ್ಥೆ ಒಪ್ಪಿಗೆ ನೀಡಿದೆ. ಹೀಗಾಗಿ ಮುಂದಿನ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಹೆಚ್ಚಿನ ಕ್ರೀಡಾಪಟುಗಳು ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

ಮಿನುಗಿದ ಭಾರತೀಯ ಸಂಸ್ಕೃತಿ:

ಧ್ವಜ ಹಸ್ತಾಂತರದ ವೇಳೆ ಗ್ಲ್ಯಾಸ್ಗೋ ಹೈಡ್ರೋ ಸ್ಟೇಡಿಯಂನಲ್ಲಿ ಭಾರತದ ಭವ್ಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸಲಾಯಿತು. ಖ್ಯಾತ ಗಾಯಕ ಶಂಕರ್ ಮಹದೇವನ್, ನಟಿ ಮಾನುಷಿ ಛಿಲ್ಲರ್ ಮತ್ತು ಸಿತಾರ್ ವಾದಕ ರಿಷಭ್ ಶರ್ಮಾ ನೇತೃತ್ವದಲ್ಲಿ ನಡೆದ ಪ್ರದರ್ಶನವು ಜಗತ್ತಿನ ಗಮನ ಸೆಳೆಯಿತು.

‘ವಂದೇ ಮಾತರಂ’ ಗೀತೆಯ 150ನೇ ವರ್ಷದ ನೆನಪಿನಲ್ಲಿ ಮೂಡಿಬಂದ ಸಂಗೀತ ಮತ್ತು ಸ್ಕಾಟಿಷ್ ಪೈಪರ್‌ಗಳೊಂದಿಗಿನ ಜುಗಲ್‌ಬಂದಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಅಹಮದಾಬಾದ್‌ನ ಪರಂಪರೆ ಹಾಗೂ ನಾವೀನ್ಯತೆಯನ್ನು ಬಿಂಬಿಸುವ ವಿಶೇಷ ಕಿರುಚಿತ್ರದ ಮೂಲಕ ಇಡೀ ಜಗತ್ತಿಗೆ ‘ವಸುಧೈವ ಕುಟುಂಬಕಂ’ ಎಂಬ ಸಂದೇಶದೊಂದಿಗೆ 2030ರ ಕಾಮನ್​ವೆಲ್ತ್​ ಕ್ರೀಡಾಕೂಟಕ್ಕೆ ಆಹ್ವಾನ ನೀಡಲಾಯಿತು.

ಒಲಿಂಪಿಕ್ಸ್ ಕನಸಿಗೆ ಬೂಸ್ಟರ್!

ಭಾರತವು 2036ರ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲು ಬಿಡ್ ಸಲ್ಲಿಸುತ್ತಿದೆ. ಅದಕ್ಕೂ ಮುನ್ನ 2030ರಲ್ಲಿ ಇಷ್ಟು ದೊಡ್ಡ ಮಟ್ಟದ ಜಾಗತಿಕ ಕೂಟವನ್ನು ಯಶಸ್ವಿಯಾಗಿ ನಡೆಸುವುದು ಭಾರತದ ಮೂಲಭೂತ ಸೌಕರ್ಯ ಮತ್ತು ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಲಿದೆ.

2030ರ ಕಾಮನ್​ವೆಲ್ತ್ ಗೇಮ್ಸ್​ಗೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಲೇವ್ ಪ್ರಮುಖ ವೇದಿಕೆಗಳಾಗಲಿದ್ದು, ನಗರದಲ್ಲಿ ಈಗಾಗಲೇ ವಿಶ್ವದರ್ಜೆಯ ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿ ಆರಂಭವಾಗಿದೆ.

ಇದನ್ನೂ ಓದಿ: CWG 2026: 61 ರಿಂದ 39… ಈ ಬಾರಿ ಪದಕ ಕಮ್ಮಿಯಾಗಲು ಇದುವೇ ಅಸಲಿ ಕಾರಣ!

ಒಟ್ಟಾರೆಯಾಗಿ, 2026ರ ಗ್ಲ್ಯಾಸ್ಗೋ ಕ್ರೀಡಾಕೂಟದ ಯಶಸ್ವಿ ಮುಕ್ತಾಯ ಹಾಗೂ 2030ರ ಆತಿಥ್ಯದ ಧ್ವಜ ಹಸ್ತಾಂತರವು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಒಂದು ಸುವರ್ಣ ಅಧ್ಯಾಯವನ್ನು ಬರೆದಿದೆ. ನೂರು ವರ್ಷಗಳ ಇತಿಹಾಸವಿರುವ ‘ಶತಮಾನದ ಕಾಮನ್‌ವೆಲ್ತ್ ಕ್ರೀಡಾಕೂಟ’ಕ್ಕೆ ಅಹಮದಾಬಾದ್ ಆತಿಥ್ಯ ವಹಿಸುತ್ತಿರುವುದು ಕೇವಲ ಗುಜರಾತ್‌ಗೆ ಮಾತ್ರವಲ್ಲ, ಇಡೀ ದೇಶಕ್ಕೇ ಹೆಮ್ಮೆಯ ವಿಷಯ.

Source link

ಎರಡು ಪ್ರಮುಖ ಮ್ಯೂಸಿಕ್ ಕಂಪನಿಗಳು ನನ್ನ ಬ್ಯಾನ್ ಮಾಡಿದ್ದವು; ಗಾಯಕ ಸೋನು ನಿಗಮ್ – Kannada News | Sonu Nigam Reveals How T Series and Zee Music Banned Him Over Copyright and Royalty Fight

ಭಾರತೀಯ ಚಿತ್ರರಂಗದ ಅದ್ಭುತ ಗಾಯಕ ಸೋನು ನಿಗಮ್ (Sonu Nigam) ತಮ್ಮ ವೃತ್ತಿಜೀವನದ ಅತ್ಯಂತ ಕಠಿಣ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಸಂಗೀತಗಾರರ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದಕ್ಕೆ ದೊಡ್ಡ ಕಂಪನಿಗಳು ತಮಗೆ ಹೇಗೆ ಬಹಿಷ್ಕಾರ ಹಾಕಿದ್ದವು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ. ಕೃತಿಸ್ವಾಮ್ಯ ಮತ್ತು ರಾಯಲ್ಟಿ ಹೋರಾಟದಿಂದಾಗಿ ತಾವು ಅನುಭವಿಸಿದ ವೃತ್ತಿಪರ ನಷ್ಟ ಮತ್ತು ಚಿತ್ರರಂಗದಲ್ಲಾದ ಬದಲಾವಣೆಗಳ ಕುರಿತು ಅವರು ಮುಕ್ತವಾಗಿ ಮಾತನಾಡಿದ್ದಾರೆ.

ಸೋನು ನಿಗಮ್ ಗಾಯಕರ ರಾಯಲ್ಟಿ ಹಕ್ಕುಗಳ ಪರವಾಗಿ ಸದಾ ಧ್ವನಿ ಎತ್ತುತ್ತಾ ಬಂದಿದ್ದಾರೆ. ಕಲಾವಿದರಿಗೆ ಸೂಕ್ತ ಸಂಭಾವನೆ ಮತ್ತು ಹಕ್ಕುಗಳ ರಕ್ಷಣೆ ಸಿಗಬೇಕು ಎಂಬುದು ಅವರ ವಾದವಾಗಿತ್ತು. ಈ ಹೋರಾಟದ ದಿನಗಳಲ್ಲಿ ಅವರು ಹಾಡಿದ ಹಾಡುಗಳನ್ನು ಬೇರೆ ಗಾಯಕರ ಧ್ವನಿಗೆ ಬದಲಾಯಿಸಲಾಗಿತ್ತು. ಒಪ್ಪಂದಗಳಿಗೆ ಸಹಿ ಹಾಕದ ಕಾರಣಕ್ಕೆ ಅವರಿಗೆ ಈ ಅನ್ಯಾಯ ನಡೆದಿತ್ತು.

ಇತ್ತೀಚಿನ ಸಂದರ್ಶನವೊಂದರಲ್ಲಿ ಸೋನು ನಿಗಮ್ ತಮ್ಮ ಕರಾಳ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ತಾವು ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಈ ಘಟನೆ ನಡೆದಿತ್ತು ಎಂದು ಹೇಳಿದ್ದಾರೆ. ಕೃತಿಸ್ವಾಮ್ಯದ ವಿಷಯವನ್ನು ಪ್ರಸ್ತಾಪಿಸಿದ ತಕ್ಷಣ ಟಿ-ಸೀರೀಸ್ ಸಂಸ್ಥೆ ತಮಗೆ ಬಹಿಷ್ಕಾರ ಹಾಕಿತ್ತು. ಜೀ ಮ್ಯೂಸಿಕ್ ಸಂಸ್ಥೆ ಕೂಡ ತಮ್ಮೊಂದಿಗೆ ಕೆಲಸ ಮಾಡುವುದನ್ನು ನಿಲ್ಲಿಸಿತ್ತು. ಅವರು ನನ್ನನ್ನು ಒಬ್ಬ ಹೋರಾಟಗಾರ ಎಂದು ಕರೆಯುತ್ತಿದ್ದರು ಎಂದು ಸೋನು ಹೇಳಿದ್ದಾರೆ.

ಈ ಹೋರಾಟದಿಂದ ತಮ್ಮ ವೃತ್ತಿಜೀವನಕ್ಕೆ ಇಷ್ಟೊಂದು ದೊಡ್ಡ ಹೊಡೆತ ಬೀಳುತ್ತದೆ ಎಂದು ಅವರು ಊಹಿಸಿರಲಿಲ್ಲ. ಸಿನಿಮಾಗಳಲ್ಲಿ ಹಾಡುವ ಅವಕಾಶ ತಪ್ಪಿದರೂ ಸ್ಟೇಜ್ ಶೋಗಳನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಅವರು ಅರಿತುಕೊಂಡರು. ಅಂತಿಮವಾಗಿ ಇವರ ಹೋರಾಟಕ್ಕೆ ಜಯ ಸಿಕ್ಕಿದೆ. ಇಂದು ಅದೇ ಮ್ಯೂಸಿಕ್ ಕಂಪನಿಗಳು ಗಾಯಕರಿಗೆ ರಾಯಲ್ಟಿ ನೀಡುತ್ತಿವೆ.

ಗಾಯಕಿ ಲತಾ ಮಂಗೇಶ್ಕರ್ ಅವರು ಆರಂಭಿಸಿದ್ದ ಹೋರಾಟವನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ದೇವರು ತಮಗೆ ನೀಡಿದ್ದನು ಎಂದು ಸೋನು ನಂಬಿದ್ದಾರೆ. ಭಾರತದಲ್ಲಿ 2012ರಲ್ಲಿ ಕೃತಿಸ್ವಾಮ್ಯ ಕಾಯ್ದೆಗೆ ತಿದ್ದುಪಡಿ ತರಲಾಯಿತು. ಇದಾದ ನಂತರ ಮ್ಯೂಸಿಕ್ ಕಂಪನಿಗಳಿಗೆ ಸೋನು ನಿಗಮ್ ಅವರ ವಾದ ಸರಿ ಇತ್ತು ಎಂಬುದು ಮನವರಿಕೆಯಾಯಿತು. ಈಗ ಎಲ್ಲ ಕಂಪನಿಗಳ ಜೊತೆ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿಗಳ ಪ್ರತಿಭಟನೆ: ದೆಹಲಿಯ ಸಂಗೀತ ಕಾರ್ಯಕ್ರಮ ಮುಂದೂಡಿದ ಗಾಯಕ ಸೋನು ನಿಗಮ್

ಪ್ರಸ್ತುತ ಸೋನು ನಿಗಮ್ ಅವರ ವೃತ್ತಿಜೀವನ ಮತ್ತೆ ಬಿಜಿಯಾಗಿದೆ. ‘ಲಾಲ್ ಸಿಂಗ್ ಚಡ್ಡಾ’ ಮತ್ತು ಮುಂಬರುವ ‘ಬಾರ್ಡರ್ 2’ ನಂತಹ ದೊಡ್ಡ ಸಿನಿಮಾಗಳಲ್ಲಿ ಅವರು ಹಾಡುತ್ತಿದ್ದಾರೆ. ದೇಶ ವಿದೇಶಗಳಲ್ಲಿ ಸಾಲು ಸಾಲು ಲೈವ್ ಕಾರ್ಯಕ್ರಮಗಳನ್ನು ನೀಡುತ್ತಾ ಮ್ಯುಸಿಕ್ ಜಗತ್ತಿನಲ್ಲಿ ರಾರಾಜಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಜಯ್ ಪುತ್ರ ಜೇಸನ್ ಸಂಜಯ್ ಬದುಕಿನ ರೋಚಕ ಕಥೆ; ಅಂದು ರಾತ್ರಿ ನಡೆದಿದ್ದೇನು? – Kannada News | Jason Sanjay Reveals the Night His Family Almost Filed a Missing Person Police Complaint

ತಮಿಳುನಾಡು ಮುಖ್ಯಮಂತ್ರಿ ಹಾಗೂ ಸ್ಟಾರ್ ನಟ ವಿಜಯ್ ಅವರ (Vijay) ಪುತ್ರ ಜೇಸನ್ ಸಂಜಯ್ ಸದ್ಯ ಸುದ್ದಿಯಲ್ಲಿದ್ದಾರೆ. ಅವರು ತಮ್ಮ ಚಲನಚಿತ್ರ ರಂಗದ ಪ್ರವೇಶದ ಹೊತ್ತಿನಲ್ಲಿ ವೈಯಕ್ತಿಕ ಬದುಕಿನ ಆಸಕ್ತಿದಾಯಕ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಸ್ಟಾರ್ ಕುಟುಂಬದ ಹಿನ್ನೆಲೆಯಿಂದ ಬಂದ ಜೇಸನ್, ತಮಗೆ ಅರಿವಿಲ್ಲದೆ ಎದುರಿಸಿದ ಒಂದು ದೊಡ್ಡ ಸಂಕಷ್ಟದ ದಿನವನ್ನು ನೆನಪಿಸಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಜೇಸನ್ ಸಂಜಯ್ ಸದ್ಯದಲ್ಲೇ ‘ಸಿಗ್ಮಾ’ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದೇ ಸಂದರ್ಭದಲ್ಲಿ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ತಮ್ಮ ಕುಟುಂಬದ ಜವಾಬ್ದಾರಿಯ ಬಗ್ಗೆ ಅವರು ಹಲವು ವಿಷಯಗಳನ್ನು ತೆರೆದಿಟ್ಟಿದ್ದಾರೆ.

ಅವರು ತಮ್ಮ ತಂಗಿ ದಿವ್ಯಾ ಸಾಶಾ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. ತಂಗಿಯ ಜೊತೆ ತಮಗೆ ಅತ್ಯಂತ ನಿಕಟ ಬಾಂಧವ್ಯ ಇದೆ ಎಂದು ಹೇಳಿದ್ದಾರೆ. ಇಬ್ಬರೂ ಉನ್ನತ ಶಿಕ್ಷಣಕ್ಕಾಗಿ ಮನೆಯಿಂದ ಹೊರಗಿದ್ದಾಗ ಇವರ ಸ್ನೇಹ ಮತ್ತಷ್ಟು ಗಟ್ಟಿಯಾಗಿದೆ. ತಂಗಿ ಕೂಡ ಸಿನಿಪ್ರಿಯೆಯಾಗಿದ್ದು, ಕಥೆಗಳ ಬಗ್ಗೆ ಪ್ರಾಮಾಣಿಕ ವಿಮರ್ಶೆ ನೀಡುತ್ತಾರೆ.

ತಮ್ಮ ತಾಯಿ ಸಂಗೀತಾ ಅವರ ಬಗ್ಗೆಯೂ ಜೇಸನ್ ತಮಾಷೆಯಾಗಿ ಮಾತನಾಡಿದ್ದಾರೆ. ತಾಯಿ ಸದಾ ತಮ್ಮ ಮೇಲೆ ಕಣ್ಣಿಟ್ಟಿರುತ್ತಾರೆ ಎಂದು ಹೇಳಿದ್ದಾರೆ. ಮನೆಯವರಿಗೆ ತಿಳಿಸದೆ ಎಲ್ಲಾದರೂ ಹೋದರೆ ತಕ್ಷಣ ಸಿಕ್ಕಿಬೀಳುತ್ತೇನೆ ಎಂದಿದ್ದಾರೆ.

ಇದೇ ವೇಳೆ ಅವರು ತಮ್ಮ ಜೀವನದ ಒಂದು ಪ್ರಮುಖ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಒಂದು ರಾತ್ರಿ ಮನೆಯವರೆಲ್ಲಾ ಮಲಗಿದ್ದಾಗ ಜೇಸನ್ ಯಾರಿಗೂ ಹೇಳದೆ ಕಾರು ತಗೆದುಕೊಂಡು ಹೊರಹೋಗಿದ್ದರು. ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಅವರು ಬೆಳಿಗ್ಗೆಯವರೆಗೆ ಮನೆಗೆ ಮರಳಿ ರಲಿಲ್ಲ.

ಇದರಿಂದ ಆತಂಕಗೊಂಡ ಕುಟುಂಬಸ್ಥರು ಪೊಲೀಸ್ ದೂರು ನೀಡಲು ಮುಂದಾಗಿದ್ದರು. ಜೇಸನ್ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡುವ ಸಿದ್ಧತೆಯಲ್ಲಿದ್ದರು. ಆದರೆ ಬೆಳಿಗ್ಗೆ ಅವರು ಮನೆಗೆ ಬಂದಾಗ ಪರಿಸ್ಥಿತಿ ಶಾಂತವಾಯಿತು. ಅಂದು ಮನೆಯಲ್ಲಿ ದೊಡ್ಡ ಗದ್ದಲವೇ ನಡೆದಿತ್ತು ಎಂದು ಜೇಸನ್ ವಿವರಿಸಿದ್ದಾರೆ.

ಇದನ್ನೂ ಓದಿ: ತಂದೆ ಜೊತೆ ಹಾಲಿವುಡ್ ಸಿನಿಮಾ ಮಾಡಬೇಕು; ಆಸೆ ಬಿಚ್ಚಿಟ್ಟ ವಿಜಯ್ ಮಗ ಜೇಸನ್

ಜೇಸನ್ ನಿರ್ದೇಶನದ ‘ಸಿಗ್ಮಾ’ ಚಿತ್ರದಲ್ಲಿ ಸಂದೀಪ್ ಕಿಶನ್ ನಾಯಕರಾಗಿ ನಟಿಸಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಈ ಸಿನಿಮಾ ಆಗಸ್ಟ್ ತಿಂಗಳಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದೆಹಲಿ ನಿವಾಸದಲ್ಲಿ ಸುದ್ದಿಗೋಷ್ಠಿ ವೇಳೆ ಪಪ್ಪು ಯಾದವ್ ಮೇಲೆ ಚಾಕು ದಾಳಿ ಯತ್ನ – Kannada News | Pappu Yadav Knife Attack: MP Claims Murder Attempt in Delhi Press Meet

ನವದೆಹಲಿ, ಆಗಸ್ಟ್​ 03: ಬಿಹಾರದ ಪೂರ್ಣಿಯಾ ಕ್ಷೇತ್ರದ ಸ್ವತಂತ್ರ ಸಂಸದ ಪಪ್ಪು ಯಾದವ್(Pappu Yadav) ಅವರ ದೆಹಲಿಯ ನಿವಾಸದಲ್ಲಿ ಏರ್ಪಡಿಸಲಾಗಿದ್ದ ಮಾಧ್ಯಮಗೋಷ್ಠಿಯ ವೇಳೆ ಭಾರಿ ಗದ್ದಲ, ತಳ್ಳಾಟ ಏರ್ಪಟ್ಟಿದೆ. ಚಾಕು ಹಿಡಿದು ಬಂದಿದ್ದ ವ್ಯಕ್ತಿಯೊಬ್ಬ ಸಂಸದರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಇದು ‘ತನ್ನ ಕೊಲ್ಲುವ ಸಂಚು’ ಎಂದು ಪಪ್ಪು ಯಾದವ್ ಗಂಭೀರ ಆರೋಪ ಮಾಡಿದ್ದಾರೆ. ಪಪ್ಪು ಯಾದವ್ ಅವರು ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ, ಸಾರ್ವಜನಿಕರಂತೆ ತೂರಿಬಂದ ವ್ಯಕ್ತಿಯೊಬ್ಬ ಚಾಕುವಿನಿಂದ ದಾಳಿ ನಡೆಸಲು ಯತ್ನಿಸಿದ್ದಾನೆ.

ತಕ್ಷಣವೇ ಜಾಗರೂಕರಾದ ಸಂಸದರ ಬೆಂಬಲಿಗರು ಮತ್ತು ಆಪ್ತರು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ, ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ದಾಳಿಕೋರನನ್ನು ಉತ್ತರ ಪ್ರದೇಶದ ಬುಲಂದ್‌ಶಹರ್ ಮೂಲದ, ಪ್ರಸ್ತುತ ಗಾಜಿಯಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದ ಸುಮಿತ್ ಎಂದು ದೆಹಲಿ ಪೊಲೀಸರು ಗುರುತಿಸಿದ್ದಾರೆ. ಸಂಸದರ ನಿವಾಸದ ಹೊರಗೆ ಕಾರಿನಲ್ಲಿ ಕಾಯುತ್ತಿದ್ದ ಈತನ ಸಹಚರ ಹ್ಯಾಪಿ ಎಂಬಾತನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಾಳಿಯ ನಂತರ ಸುದ್ಧಿಸಂಸ್ಥೆ ಎಎನ್​ಐ ಜೊತೆ ಮಾತನಾಡಿದ ಸಂಸದ ಪಪ್ಪು ಯಾದವ್, ದೆಹಲಿ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದರು. ನನ್ನ ಜೀವಕ್ಕೆ ಬೆದರಿಕೆಯಿದ್ದು, ದೀರ್ಘಕಾಲದಿಂದ ಸೂಕ್ತ ಭದ್ರತೆ ನೀಡುವಂತೆ ಮನವಿ ಮಾಡುತ್ತಿದ್ದರೂ ಪೊಲೀಸರು ನಿರ್ಲಕ್ಷಿಸಿದ್ದಾರೆ. ನಿನ್ನೆ ಬೆಂಬಲಿಗರು ಇಲ್ಲದಿದ್ದರೆ ನನ್ನನ್ನು ಕೊಂದು ಹಾಕುತ್ತಿದ್ದರು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಮತ್ತಷ್ಟು ಓದಿ:
ರಾಮಮಂದಿರ ಕಾಣಿಕೆ ಕಳವು; ಕೇಸರಿ ಬಟ್ಟೆ ಧರಿಸಿ ಸಂಸತ್ ಹೊರಗೆ ಪಪ್ಪು ಯಾದವ್ ಪ್ರತಿಭಟನೆ

ಶ್ರೀರಾಮ ಜನ್ಮಭೂಮಿಯ 200 ಕೆಜಿ ಬೆಳ್ಳಿ ಮತ್ತು ಚಿನ್ನ ಎಲ್ಲಿ ಹೋಯಿತು ಎಂದು ನಾನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಈ ರೀತಿ ಕೊಲೆ ಯತ್ನ ನಡೆಸಲಾಗಿದೆ ಎಂದು ಅವರು ಆರೋಪಿಸಿದರು. ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣವನ್ನು ಉಲ್ಲೇಖಿಸಿ, ಪಪ್ಪು ಯಾದವ್ ಹಾಗೂ ಇತರ ವಿರೋಧ ಪಕ್ಷದ ಸಂಸದರು ಸಂಸತ್ತಿನ ಆವರಣದಲ್ಲಿ ಇತ್ತೀಚೆಗೆ ‘ಸ್ಕಿಟ್’ಪ್ರದರ್ಶಿಸಿದ್ದರು. ಈ ನಾಟಕವು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಬಿಜೆಪಿ ಕಟುವಾಗಿ ಟೀಕಿಸಿದೆ.

ಈ ನಾಟಕದ ವಿರುದ್ಧ ವಾರಾಣಸಿ ಪಪ್ಪು ಯಾದವ್, ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ಅಖಿಲೇಶ್ ಯಾದವ್ ಮತ್ತು ಅವಧೇಶ್ ಪ್ರಸಾದ್ ವಿರುದ್ಧ ಪ್ರಕರಣ ದಾಖಲಾಗಿದೆ. ಪಪ್ಪು ಯಾದವ್ ಅವರು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಪಡೆಯಿಂದಲೂ ಜೀವ ಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದಾಗಿ ಈ ಹಿಂದೆ ತಿಳಿಸಿದ್ದರು ಹಾಗೂ ಗೃಹ ಸಚಿವಾಲಯಕ್ಕೆ ಕಟ್ಟುನಿಟ್ಟಿನ ಭದ್ರತೆ ಒದಗಿಸುವಂತೆ ಹಲವು ಬಾರಿ ಪತ್ರ ಬರೆದಿದ್ದರು. ಈ ದಾಳಿಯ ಹಿಂದೆ ರಾಜಕೀಯ ವೈಷಮ್ಯವಿದೆಯೇ ಅಥವಾ ವೈಯಕ್ತಿಕ ಕಾರಣಗಳಿವೆಯೇ ಎಂಬ ಕೋನದಲ್ಲಿ ದೆಹಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ಹೈಕಮಾಂಡ್ ಲಿಸ್ಟ್​ಗಾಗಿ ಕಾಯುತ್ತಿರುವ ಸಿಎಂ ಡಿಕೆಶಿ, ಇಂದು ಅಧಿಕೃತ ಕಾರ್ಯಕ್ರಮಗಳೇ ಇಲ್ಲ! – Kannada News | Karnataka Cabinet Expansion: CM DK Shivakumar await the High Command’s list; no official engagements scheduled for today!

ಬೆಂಗಳೂರು, ಆಗಸ್ಟ್ 3: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯ (Karnataka Cabinet Expansion) ವಿಚಾರದಲ್ಲಿ ಕುತೂಹಲ ಮುಂದುವರಿದಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಂದು (ಆಗಸ್ಟ್ 3) ಯಾವುದೇ ಅಧಿಕೃತ ಕಾರ್ಯಕ್ರಮವನ್ನು ನಿಗದಿಪಡಿಸಿಕೊಳ್ಳದೇ ಇಡೀ ದಿನವನ್ನು ಕಾಯ್ದಿರಿಸಿರುವುದು ಗಮನ ಸೆಳೆದಿದೆ. ಕಾಂಗ್ರೆಸ್ ಹೈಕಮಾಂಡ್‌ನಿಂದ ನೂತನ ಸಚಿವರ ಅಂತಿಮ ಪಟ್ಟಿ ಯಾವುದೇ ಕ್ಷಣದಲ್ಲಾದರೂ ರವಾನೆಯಾಗುವ ನಿರೀಕ್ಷೆಯಿದ್ದು, ಪಟ್ಟಿ ಬಂದರೆ ಇಂದು ಸಂಜೆಯೇ ಪ್ರಮಾಣವಚನ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ಅಂತಿಮ ಪಟ್ಟಿ ಕೈಸೇರುವ ನಿರೀಕ್ಷೆ ಇತ್ತು. ಆದರೆ, ಈವರೆಗೆ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಕುತೂಹಲ ಮತ್ತು ಆತಂಕ ಮುಂದುವರಿದಿದೆ.

ರಾಜಭವನಕ್ಕೆ ಲಿಖಿತ ಮಾಹಿತಿ ಇಲ್ಲ

ಸಚಿವರ ಪ್ರಮಾಣವಚನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕಚೇರಿಯಿಂದ ರಾಜಭವನಕ್ಕೆ ಮೌಖಿಕ ಮಾಹಿತಿ ನೀಡಲಾಗಿದೆ. ಆದರೆ, ಇದುವರೆಗೆ ಲಿಖಿತವಾಗಿ ಯಾವುದೇ ಅಧಿಕೃತ ಸೂಚನೆ ಅಥವಾ ದಿನಾಂಕ ರವಾನೆಯಾಗಿಲ್ಲ ಎನ್ನಲಾಗಿದೆ. ಹೀಗಾಗಿ ಪ್ರಮಾಣವಚನ ಕಾರ್ಯಕ್ರಮದ ಸಿದ್ಧತೆಗಳ ಬಗ್ಗೆಯೂ ಇನ್ನೂ ಸ್ಪಷ್ಟತೆ ಮೂಡಿಲ್ಲ. ಕಾಂಗ್ರೆಸ್ ಹೈಕಮಾಂಡ್‌ನ ನಾಯಕರು ರಾಜ್ಯಕ್ಕೆ ಆಗಮಿಸಿ ಪಟ್ಟಿಯನ್ನು ನೀಡುತ್ತಾರೆಯೇ ಅಥವಾ ದೆಹಲಿಯಿಂದಲೇ ಅಂತಿಮ ಪಟ್ಟಿ ಕಳುಹಿಸಲಾಗುತ್ತದೆಯೇ ಎಂಬುದೂ ಕುತೂಹಲಕ್ಕೆ ಕಾರಣವಾಗಿದೆ.

ಕೆಲವು ಹೆಸರುಗಳ ಬಗ್ಗೆ ಇನ್ನೂ ಒಮ್ಮತದ ಕೊರತೆ


ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸಚಿವ ಸ್ಥಾನ ಹಂಚಿಕೆ ಮಾಡುವಾಗ ಸಮುದಾಯ, ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ಸಮಾನತೆಗೆ ಆದ್ಯತೆ ನೀಡಲಾಗುತ್ತಿದೆ ಎನ್ನಲಾಗಿದೆ. ಕೆಲ ಸಂಭಾವ್ಯ ಹೆಸರುಗಳ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಇನ್ನೂ ಅಂತಿಮ ಒಮ್ಮತ ಮೂಡಿಲ್ಲ ಎನ್ನಲಾಗಿದ್ದು, ಕೊನೆಯ ಕ್ಷಣದಲ್ಲಿ ಅಚ್ಚರಿಯ ಹೆಸರುಗಳು ಪಟ್ಟಿಗೆ ಸೇರುವ ಸಾಧ್ಯತೆಯೂ ಇದೆ.

ಸಚಿವ ಸಂಪುಟ ವಿಸ್ತರಣೆ ಇನ್ನೂ 2 ದಿನ ವಿಳಂಬ?

ಇಂದು ಅಂತಿಮ ಪಟ್ಟಿ ಪ್ರಕಟವಾಗದಿದ್ದರೆ ಸಚಿವ ಸಂಪುಟ ವಿಸ್ತರಣೆ ಮತ್ತೆರಡು ದಿನ ವಿಳಂಬವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

10 ಸಂಭಾವ್ಯ ಸಚಿವರ ಹೆಸರು ಚರ್ಚೆಯಲ್ಲಿ

ಹೈಕಮಾಂಡ್‌ ಅಂತಿಮಗೊಳಿಸಿದೆ ಎನ್ನಲಾಗುತ್ತಿರುವ ಸಂಭಾವ್ಯ ಪಟ್ಟಿಯಲ್ಲಿ ಜಮೀರ್ ಅಹ್ಮದ್ ಖಾನ್, ಎಸ್.ಎಸ್. ಮಲ್ಲಿಕಾರ್ಜುನ್, ಲಕ್ಷ್ಮೀ ಹೆಬ್ಬಾಳ್ಕರ್, ಲಕ್ಷ್ಮಣ ಸವದಿ, ರುದ್ರಪ್ಪ ಲಮಾಣಿ, ಎ.ಎಸ್. ಪೊನ್ನಣ್ಣ, ಟಿ. ರಘುಮೂರ್ತಿ, ಅನ್ನಪೂರ್ಣ ತುಕಾರಾಂ, ಕೆ.ಎಸ್. ಬಸವಂತಪ್ಪ ಹಾಗೂ ಶರತ್ ಬಚ್ಚೇಗೌಡ ಅವರ ಹೆಸರುಗಳು ಕೇಳಿಬರುತ್ತಿವೆ. ಇವರಲ್ಲಿ ಕೆಲವರು ಹಿಂದೆ ಸಚಿವರಾಗಿ ಕಾರ್ಯನಿರ್ವಹಿಸಿದವರಾಗಿದ್ದು, ಮತ್ತೆ ಸಂಪುಟಕ್ಕೆ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಶ್ರೀರಾಮುಲು ಟಾಂಗ್

ಸಚಿವ ಸಂಪುಟ ವಿಸ್ತರಣೆ ಇಂದು ನಡೆಯಲಿದೆ ಎಂಬ ವಿಶ್ವಾಸವನ್ನು ಸಚಿವ ಪ್ರಿಯಾಂಕ್ ಖರ್ಗೆ ವ್ಯಕ್ತಪಡಿಸಿದ್ದರೆ, ಬಿಜೆಪಿ ನಾಯಕ ಶ್ರೀರಾಮುಲು ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಇನ್ನೂ ‘ಸೂಟ್‌ಕೇಸ್’ ತಲುಪಿಲ್ಲ ಎಂದು ಶ್ರೀರಾಮುಲು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು

ಒಟ್ಟಿನಲ್ಲಿ, ಹೈಕಮಾಂಡ್‌ನ ಅಂತಿಮ ಪಟ್ಟಿಯತ್ತ ರಾಜ್ಯ ರಾಜಕಾರಣದ ಚಿತ್ತ ನೆಟ್ಟಿದ್ದು, ಪಟ್ಟಿ ರವಾನೆಯಾದ ಬಳಿಕವಷ್ಟೇ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದು ಅಧಿಕೃತವಾಗಿ ಸ್ಪಷ್ಟವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಮಂಕಾದ ಮುಂಗಾರು: 108 ವರ್ಷಗಳಲ್ಲಿ ಎರಡನೇ ಬಾರಿಗೆ ಅತಿ ಕಡಿಮೆ ಮಳೆ ದಾಖಲು! – Kannada News | Bengaluru Records 2nd Driest July in 108 Years as Monsoon Falters

ಬೆಂಗಳೂರಿನಲ್ಲಿ 108 ವರ್ಷಗಳಲ್ಲೇ ಎರಡನೇ ಶುಷ್ಕ ಜುಲೈ ದಾಖಲಾಗಿದೆ.

ಬೆಂಗಳೂರು, ಆಗಸ್ಟ್ 03: ನಗರದಲ್ಲಿ ಈ ಬಾರಿ ನೈಋತ್ಯ ಮುಂಗಾರು ಮಳೆ ತೀವ್ರ ಹಿನ್ನೆಡೆ ಅನುಭವಿಸಿದೆ. ಮೇ ತಿಂಗಳ ಪೂರ್ವ ಮುಂಗಾರು ಮಳೆಯಲ್ಲಿ ಉತ್ತಮ ಪ್ರಮಾಣದ ಮಳೆ ದಾಖಲಾಗಿದ್ದರೂ, ಜುಲೈ ತಿಂಗಳಲ್ಲಿ ಮಳೆರಾಯ ಸಂಪೂರ್ಣ ಕೈಕೊಟ್ಟಿದ್ದಾನೆ. ಪರಿಣಾಮವಾಗಿ, ಕಳೆದ 108 ವರ್ಷಗಳ ಇತಿಹಾಸದಲ್ಲೇ ಬೆಂಗಳೂರು ಅತ್ಯಂತ ಕಡಿಮೆ ಮಳೆ ಕಂಡ ಎರಡನೇ ಒಣ ಜುಲೈ (2nd Driest July) ತಿಂಗಳಿಗೆ ಸಾಕ್ಷಿಯಾಗಿದೆ.

ಕೇವಲ 23 ಮಿಲಿಮೀಟರ್ ಮಳೆ ದಾಖಲು!

ಭಾರತೀಯ ಹವಾಮಾನ ಇಲಾಖೆಯ (IMD) ವರದಿಯ ಪ್ರಕಾರ, ಜುಲೈ ತಿಂಗಳಲ್ಲಿ ಬೆಂಗಳೂರು ನಗರದಲ್ಲಿ ಕೇವಲ 23 ಮಿಮೀ ಮಳೆ ಮಾತ್ರ ದಾಖಲಾಗಿದೆ. 1918ರ ಜುಲೈನಲ್ಲಿ ನಗರದಲ್ಲಿ 18.5 ಮಿಮೀ ಅತ್ಯಂತ ಕಡಿಮೆ ಮಳೆ ದಾಖಲಾಗಿತ್ತು. ಅದಾದ ಬಳಿಕ ಅತಿ ಕಡಿಮೆ ಮಳೆ ಬಿದ್ದ ಜುಲೈ ತಿಂಗಳು ಎಂದರೆ ಇದೇ ಆಗಿದೆ.

ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಜುಲೈ ತಿಂಗಳಲ್ಲಿ ಸರಾಸರಿ 80 ಮಿಮೀ ನಿಂದ 100 ಮಿಮೀ ವರೆಗೆ ಮಳೆಯಾಗಬೇಕಿತ್ತು. ಆದರೆ ಈ ಬಾರಿ ಕೇವಲ 23 ಮಿಮೀ ಮಳೆಯಾಗುವ ಮೂಲಕ ಶೇಕಡಾ 70 ಕ್ಕಿಂತಲೂ ಹೆಚ್ಚು ಮಳೆ ಕೊರತೆ ಉಂಟಾಗಿದೆ. ಜುಲೈ ಆರಂಭದ ವೇಳೆಗೆ ಮುಂಗಾರು ಮಳೆಯ ಒಟ್ಟು ಪ್ರಮಾಣ 70 ಮಿಮೀ ಇತ್ತು, ತಿಂಗಳ ಅಂತ್ಯಕ್ಕೆ ಇದು ಕೇವಲ 94 ಮಿಮೀ ಗೆ ತಲುಪಿದೆ.

ಬಿಸಿಲಿನ ಬೇಗೆ ಮತ್ತು ಹವಾಮಾನ ಇಲಾಖೆಯ ಮುನ್ಸೂಚನೆ

ಮಳೆಯ ಅಭಾವದಿಂದಾಗಿ ನಗರದಲ್ಲಿ ತಾಪಮಾನವೂ ಗಣನೀಯವಾಗಿ ಹೆಚ್ಚಾಗಿತ್ತು. ಜುಲೈ 14 ರಂದು ಬೆಂಗಳೂರಿನಲ್ಲಿ ತಾಪಮಾನ 33.6°Cರಷ್ಟಿದ್ದು, ಇದು ಕಳೆದ 112 ವರ್ಷಗಳಲ್ಲೇ ಜುಲೈ ತಿಂಗಳ ಅತ್ಯಂತ ಬಿಸಿಲಿನ ದಿನವಾಗಿ ದಾಖಲಾಯಿತು.

ಇತ್ತೀಚೆಗೆ ಪಶ್ಚಿಮ ಕರಾವಳಿಯಲ್ಲಿ ಸೃಷ್ಟಿಯಾದ ಕರಾವಳಿ ಸುಳಿ ಗಾಳಿಯ (Offshore Trough) ಪ್ರಭಾವದಿಂದಾಗಿ ಶನಿವಾರ ನಗರದ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ. ಆದರೆ, ಈ ಮಳೆಯು ತಾತ್ಕಾಲಿಕವಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತೆ ಮಳೆಯ ಅಭಾವ ಎದುರಾಗಬಹುದು ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಆಗಸ್ಟ್ 6 ರಿಂದ 12 ರ ನಡುವೆ ಮಳೆ ಸ್ವಲ್ಪ ಚೇತರಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ ಒಟ್ಟಾರೆಯಾಗಿ ಆಗಸ್ಟ್ ತಿಂಗಳಿನ ಬಹುತೇಕ ದಿನಗಳಲ್ಲಿ ಮುಂಗಾರು ಕ್ಷೀಣವಾಗಿಯೇ ಇರಲಿದೆ. ಆದಾಗ್ಯೂ, ವರ್ಷದ ಆರಂಭದಲ್ಲಿದ್ದ ಉತ್ತಮ ಮಳೆಯಿಂದಾಗಿ ಪ್ರಸಕ್ತ ವರ್ಷದ ಒಟ್ಟು ಮಳೆ ಪ್ರಮಾಣ ಇನ್ನೂ ಸಾಮಾನ್ಯ ಮಟ್ಟದಲ್ಲೇ ಇದೆ ಎಂದು IMD ಹಿರಿಯ ವಿಜ್ಞಾನಿ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.

ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳು ಬೆಂಗಳೂರಿಗೆ ಸಾಮಾನ್ಯವಾಗಿ ಹೆಚ್ಚು ಮಳೆ ತರುವ ತಿಂಗಳುಗಳಾಗಿದ್ದು, ಮುಂಬರುವ ದಿನಗಳಲ್ಲಾದರೂ ವರುಣದೇವ ಕೃಪೆ ತೋರುತ್ತಾನೆಯೇ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

11 ದಿನ ಕಳೆದರೂ 300 ಕೋಟಿ ರೂಪಾಯಿ ತಲುಪದ ‘ಜನ ನಾಯಗನ್’ ಸಿನಿಮಾ – Kannada News | Jana Nayagan Box Office Collection Day 11: Vijay Final Film Struggles to Cross 300 Crore Mark Globally

ದಳಪತಿ ವಿಜಯ್ ಅವರ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಸೃಷ್ಟಿಸುವುದು ಹೊಸದೇನಲ್ಲ. ಈ ಹಿಂದೆ ಬಿಡುಗಡೆಯಾಗಿದ್ದ ಅವರ ‘ಲಿಯೋ’ ಸಿನಿಮಾ ಬರೋಬ್ಬರಿ 623 ಕೋಟಿ ರೂಪಾಯಿ ಹಾಗೂ ‘ಗೋಟ್’ ಚಿತ್ರ 455 ಕೋಟಿ ರೂಪಾಯಿ ಗಳಿಸಿ ಭರ್ಜರಿ ಯಶಸ್ಸು ಕಂಡಿದ್ದವು. ವಿಶೇಷವೆಂದರೆ, ವಿಮರ್ಶಕರಿಂದ ನೆಗೆಟಿವ್ ಪ್ರತಿಕ್ರಿಯೆ ಪಡೆದ ಹೊರತಾಗಿಯೂ ಈ ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಕಲೆಕ್ಷನ್ ಮಾಡಿದ್ದವು. ವಿಜಯ್ ಕೊನೆಯ ಚಿತ್ರ ‘ಜನ ನಾಯಗನ್’ಗೆ (Jana Nayagan) ಮಾತ್ರ ಈಗ ದೊಡ್ಡ ಹಿನ್ನಡೆ ಎದುರಾಗಿದೆ. ಈ ಸಿನಿಮಾ ಪ್ರೇಕ್ಷಕರಿಂದ ನಿರೀಕ್ಷಿತ ಮಟ್ಟದಲ್ಲಿ ಮನ್ನಣೆ ಗಳಿಸದೇ ಗಲ್ಲಾಪೆಟ್ಟಿಗೆಯಲ್ಲಿ ಕಷ್ಟಪಡುತ್ತಿರುವುದು ವಿಜಯ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ವಿಜಯ್ ಸಿನಿಮಾ ರಿಲೀಸ್ ಆಗಿ 11 ದಿನಗಳು ಕಳೆದಿವೆ. ಭಾನುವಾರ ಈ ಸಿನಿಮಾ ದೇಶಾದ್ಯಂತ ಒಟ್ಟು 4,321 ಶೋಗಳಿಂದ ಕೇವಲ 10.70 ಕೋಟಿ ರೂಪಾಯಿ ನಿವ್ವಳ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಇದುವರೆಗಿನ ಒಟ್ಟು ಗಳಿಕೆ 204.92 ಕೋಟಿ ರೂಪಾಯಿಗೆ ಬಂದು ನಿಂತಿದ್ದು, ಒಟ್ಟು ನೆಟ್ ಕಲೆಕ್ಷನ್ 175.60 ಕೋಟಿ ರೂಪಾಯಿ ತಲುಪಿದೆ.

ವಿದೇಶಿ ಮಾರುಕಟ್ಟೆಯಲ್ಲೂ ಚಿತ್ರದ ಹವಾ ತಣ್ಣಗಾಗಿದ್ದು, 11ನೇ ದಿನ ಕೇವಲ 3.00 ಕೋಟಿ ರೂಪಾಯಿ ಮಾತ್ರ ಗಳಿಸಲು ಶಕ್ತವಾಗಿದೆ. ಇದರಿಂದಾಗಿ ಚಿತ್ರದ ಒಟ್ಟು ಓವರ್‌ಸೀಸ್ ಗ್ರಾಸ್ ಕಲೆಕ್ಷನ್ 91.00 ಕೋಟಿ ರೂಪಾಯಿಗೆ ಮುಟ್ಟಿದೆ. ಭಾರತ ಮತ್ತು ವಿದೇಶಿ ಗಳಿಕೆಯನ್ನು ಒಟ್ಟಾಗಿ ಸೇರಿಸಿದರೂ ‘ಜನ ನಾಯಗನ್’ ಚಿತ್ರದ ವಿಶ್ವಾದ್ಯಂತ ಒಟ್ಟು ಗಳಿಕೆ ಕೇವಲ 295.92 ಕೋಟಿ ರೂಪಾಯಿ ತಲುಪಿದೆ.

ಇದನ್ನೂ ಓದಿ: ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’ ಪ್ರದರ್ಶನ

ಸಾಮಾನ್ಯವಾಗಿ ವಿಜಯ್ ಸಿನಿಮಾಗಳು ಆರಂಭಿಕ ದಿನಗಳಲ್ಲೇ 300 ಕೋಟಿ ಕ್ಲಬ್ ಸೇರುತ್ತಿದ್ದವು. ಆದರೆ ಅವರ ಕೊನೆಯ ಸಿನಿಮಾವೇ 11 ದಿನ ಕಳೆದರೂ 300 ಕೋಟಿ ರೂಪಾಯಿ ಗಡಿಯನ್ನು ಮುಟ್ಟಲು ತಡಕಾಡುತ್ತಿರುವುದು ಮತ್ತು ಆ ಮೈಲಿಗಲ್ಲು ತಲುಪೋದು ಕೂಡ ಅನುಮಾನವಾಗಿರುವುದು ವಿಜಯ್ ಕೆರಿಯರ್‌ನಲ್ಲೇ ಅತಿ ದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಸಿನಿಮಾದ ಲೀಕ್ ಹಾಗೂ ಕಳಪೆ ವಿಮರ್ಶೆ ಸಿನಿಮಾದ ಗಳಿಕೆ ತಗ್ಗಲು ಪ್ರಮುಖ ಕಾರಣ.

ಪ್ರಶ್ನೆ: ದಳಪತಿ ವಿಜಯ್ ಕೊನೆಯ ಚಿತ್ರ ಯಾವುದು?
ಉತ್ತರ: 
ಜನ ನಾಯಗನ್

ಪ್ರಶ್ನೆ: ಜನ ನಾಯಗನ್ 11 ದಿನಗಳ ಗಳಿಕೆ ಎಷ್ಟು?
ಉತ್ತರ: 
295 ಕೋಟಿ ರೂಪಾಯಿ

ಪ್ರಶ್ನೆ: ವಿಜಯ್ ಮತ್ತೆ ಸಿನಿಮಾ ಮಾಡುವುದಿಲ್ಲವೇ?
ಉತ್ತರ: 
ಇಲ್ಲ, ರಾಜಕೀಯದಲ್ಲಿ ಬ್ಯುಸಿ ಆಗಲಿದ್ದಾರೆ

Source link

ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಐವರು ಪೊಲೀಸರು ಸೇರಿ 14 ಮಂದಿ ದಾರುಣ ಸಾವು – Kannada News | Deadly Blast at Peace Rally in Pakistan Claims 14 Lives, Including Five Police Personnel

ಇಸ್ಲಾಮಾಬಾದ್, ಆಗಸ್ಟ್​ 03: ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ರಕ್ತಪಾತ ನಡೆದಿದೆ. ಸ್ವಾತ್ ಜಿಲ್ಲೆಯ ಕಬಲ್ ಪಟ್ಟಣದಲ್ಲಿ ನಡೆಯುತ್ತಿದ್ದ ಶಾಂತಿ ರ್ಯಾಲಿಯನ್ನು ಗುರಿಯಾಗಿಸಿಕೊಂಡು ನಡೆದ ಭೀಕರ ಆತ್ಮಾಹುತಿ ಬಾಂಬ್ ದಾಳಿ(Bomb Blast)ಯಲ್ಲಿ ಐವರು ಪೊಲೀಸ್ ಸಿಬ್ಬಂದಿ ಸೇರಿದಂತೆ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಹಾಗೂ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ಥಳೀಯ ‘ಸ್ವಾತ್ ಅಮಾನ್ ಜಿರ್ಗಾ’ ಆಯೋಜಿಸಿದ್ದ ಈ ರ್ಯಾಲಿಯಲ್ಲಿ ಸಾರ್ವಜನಿಕರು ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗುತ್ತಿದ್ದರು. ಈ ವೇಳೆ ಚೌಕದಲ್ಲಿದ್ದ ಪೊಲೀಸ್ ಠಾಣೆಯ ಮುಖ್ಯ ದ್ವಾರದ ಬಳಿ ತಡೆದ ಪೊಲೀಸರ ಮೇಲೆಯೇ ಉಗ್ರ ತನ್ನ ಸ್ಫೋಟಕ ಭರಿತ ಜಾಕೆಟ್ ಸ್ಫೋಟಿಸಿಕೊಂಡಿದ್ದಾನೆ.

ಟಿಟಿಪಿ ಉಗ್ರರ ಕೈವಾಡದ ಶಂಕೆ
ಈ ದಾಳಿಯ ಹೊಣೆಯನ್ನು ತಕ್ಷಣಕ್ಕೆ ಯಾವುದೇ ಸಂಘಟನೆ ವಹಿಸಿಕೊಂಡಿಲ್ಲವಾದರೂ, ನಿಷೇಧಿತ ‘ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್’ ಉಗ್ರ ಸಂಘಟನೆಯೇ ಈ ಕೃತ್ಯ ಎಸಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.ಖೈಬರ್ ಪಖ್ತುಂಖ್ವಾ ಭಾಗದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಟಿಟಿಪಿ ಉಗ್ರರ ದಾಳಿ ತೀವ್ರಗೊಂಡಿದ್ದು, ಈಗಾಗಲೇ 819 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಮತ್ತು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಮತ್ತಷ್ಟು ಓದಿ:
ಅಯೋಧ್ಯೆಯ ವೈದ್ಯಕೀಯ ಕಾಲೇಜಿನಲ್ಲಿ ಬಾಂಬ್ ‘ಸೂತ್ರ’ ಪತ್ತೆ: ಪ್ರಥಮ ವರ್ಷದ ವಿದ್ಯಾರ್ಥಿ ಸರ್ಫರಾಜ್ ಖಾನ್ ಪೊಲೀಸರ ವಶಕ್ಕೆ

ಟಿಟಿಪಿ ಉಗ್ರರು ಅಫ್ಘಾನಿಸ್ತಾನದಲ್ಲಿ ಅಡಗುತಾಣಗಳನ್ನು ಹೊಂದಿದ್ದು, ಅಲ್ಲಿಂದಲೇ ಪಾಕಿಸ್ತಾನದ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಇಸ್ಲಾಮಾಬಾದ್ ಆರೋಪಿಸುತ್ತಿದೆ. ಆದರೆ ಕಾಬೂಲ್‌ನಲ್ಲಿರುವ ತಾಲಿಬಾನ್ ಸರ್ಕಾರ ಈ ಆರೋಪವನ್ನು ಸಸಾರವಾಗಿ ನಿರಾಕರಿಸಿದೆ. ಪಾಕಿಸ್ತಾನ ಸೇನೆಯು ಅಫ್ಘಾನಿಸ್ತಾನದ ಗಡಿ ಪ್ರದೇಶಗಳ ಮೇಲೆ ನಡೆಸಿದ ಪ್ರತೀಕಾರದ ವೈಮಾನಿಕ ದಾಳಿಗಳಿಂದಾಗಿ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ.

ಪಾಕಿಸ್ತಾನವು ಗಡಿ ಮಾರ್ಗಗಳನ್ನು ಮುಚ್ಚಿ ವ್ಯಾಪಾರಿಗಳಿಗೆ ತೊಂದರೆ ನೀಡುತ್ತಿದೆ. ನಾವು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸಿದ್ಧರಿದ್ದೇವೆ ಎಂದು ಅಫ್ಘಾನ್ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದರೂ, ಪಾಕಿಸ್ತಾನದಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಸ್ವಾತ್ ಕಣಿವೆಯು ಒಂದು ಕಾಲದಲ್ಲಿ ಟಿಟಿಪಿ ಉಗ್ರರ ಭದ್ರಕೋಟೆಯಾಗಿತ್ತು. 2009 ರಲ್ಲಿ ಪಾಕಿಸ್ತಾನ ಸೇನೆಯು ಬೃಹತ್ ಮಿಲಿಟರಿ ಕಾರ್ಯಾಚರಣೆ ನಡೆಸಿ ಉಗ್ರರನ್ನು ಓಡಿಸಿತ್ತಾದರೂ, 2021 ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಮರಳಿದ ನಂತರ ಟಿಟಿಪಿ ಮತ್ತೆ ಬಲವರ್ಧನೆಗೊಂಡು ಸರಣಿ ದಾಳಿಗಳನ್ನು ನಡೆಸುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:18 am, Mon, 3 August 26

Source link

ಬಾಕ್ಸ್ ಆಫೀಸ್‌ನಲ್ಲಿ ಸ್ಪೈಡರ್-ಮ್ಯಾನ್ ಅಬ್ಬರ; 4 ದಿನಗಳಲ್ಲಿ 300 ಕೋಟಿ ಕ್ಲಬ್ ಸೇರಿದ ‘ಬ್ರ್ಯಾಂಡ್ ನ್ಯೂ ಡೇ’ – Kannada News | Spider Man: Brand New Day Roars at Indian Box Office, Crosses 300 Crore rs Gross in Just 4 Days

ಬಾಕ್ಸ್ ಆಫೀಸ್‌ನಲ್ಲಿ ಸ್ಪೈಡರ್-ಮ್ಯಾನ್ ಹವಾ ಜೋರಾಗಿದ್ದು, ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ‘ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ (Spider Man) ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ಪಡೆದುಕೊಂಡಿದ್ದು, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ವಾರಾಂತ್ಯದ ದಿನಗಳಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳತ್ತ ಮುಗಿಬಿದ್ದಿರುವುದು ಚಿತ್ರದ ಭರ್ಜರಿ ಗಳಿಕೆಗೆ ಸಾಕ್ಷಿಯಾಗಿದೆ. ಕೇವಲ ನಾಲ್ಕೇ ದಿನಗಳಲ್ಲಿ ಈ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 306.37 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿದೆ. ಚಿತ್ರದ ನೆಟ್ ಕಲೆಕ್ಷನ್ 256.20 ಕೋಟಿ ರೂಪಾಯಿ ದಾಟಿದೆ.

ಚಿತ್ರದ ದಿನದ ಗಳಿಕೆಯನ್ನು ಗಮನಿಸಿದರೆ, ಮೊದಲ ದಿನ ಅಂದರೆ ಗುರುವಾರ 17,250 ಶೋಗಳ ಮೂಲಕ 60.60 ಕೋಟಿ ರೂಪಾಯಿ ಗಳಿಸುವುದರೊಂದಿಗೆ ಚಿತ್ರ ಭರ್ಜರಿ ಆರಂಭ ಪಡೆದುಕೊಂಡಿತ್ತು. ಅಂದು ಶೇಕಡಾ 72.3 ರಷ್ಟು ಥಿಯೇಟರ್ ಭರ್ತಿಯಾಗಿತ್ತು. ಎರಡನೇ ದಿನವಾದ ಶುಕ್ರವಾರದಂದು 16,902 ಶೋಗಳಿಂದ 49.35 ಕೋಟಿ ರೂಪಾಯಿ ಗಳಿಸಿ, ಶೇಕಡಾ 64.8 ರಷ್ಟು ಆಕ್ಯುಪೆನ್ಸಿ ಕಂಡಿತ್ತು. ಇನ್ನು ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರ ಚಿತ್ರದ ಕಲೆಕ್ಷನ್ ಗಗನಕ್ಕೇರಿದೆ. ಮೂರನೇ ದಿನವಾದ ಶನಿವಾರ 17,703 ಶೋಗಳ ಪ್ರದರ್ಶನ ಕಂಡು, ಶೇಕಡಾ 77.0 ರಷ್ಟು ಆಕ್ಯುಪೆನ್ಸಿಯೊಂದಿಗೆ 70.25 ಕೋಟಿ ರೂಪಾಯಿ ಲೂಟಿ ಮಾಡಿತ್ತು.

ನಾಲ್ಕನೇ ದಿನವಾದ ಭಾನುವಾರವಂತೂ ಸ್ಪೈಡರ್-ಮ್ಯಾನ್ ಅಬ್ಬರ ನೆಕ್ಸ್ಟ್ ಲೆವೆಲ್‌ಗೆ ತಲುಪಿದೆ. ಭಾನುವಾರ ಒಂದೇ ದಿನ ದೇಶಾದ್ಯಂತ ಬರೋಬ್ಬರಿ 18,051 ಶೋಗಳು ಪ್ರದರ್ಶನಗೊಂಡಿದ್ದು, ದಾಖಲೆಯ 76.00 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಂದು ಚಿತ್ರಮಂದಿರಗಳಲ್ಲಿ ಶೇಕಡಾ 78.7 ರಷ್ಟು ಆಕ್ಯುಪೆನ್ಸಿ ದಾಖಲಾಗಿತ್ತು. ಭಾನುವಾರದ ಭಾಷಾವಾರು ಗಳಿಕೆಯನ್ನು ನೋಡುವುದಾದರೆ, ಇಂಗ್ಲಿಷ್ ಆವೃತ್ತಿಯು 8,269 ಶೋಗಳಿಂದ 40.00 ಕೋಟಿ ರೂಪಾಯಿ ಗಳಿಸಿ ಅಗ್ರಸ್ಥಾನದಲ್ಲಿದೆ.

ಇದನ್ನೂ ಓದಿ: ಭಾರತದಲ್ಲೇ ‘ಧುರಂಧರ್’, ‘ಪಠಾಣ್’ ಸಿನಿಮಾಗಳ ಹಿಂದಿಕ್ಕಿದ ಸ್ಪೈಡರ್ ಮ್ಯಾನ್

ದಕ್ಷಿಣ ಭಾರತದಲ್ಲೂ ಸ್ಪೈಡರ್-ಮ್ಯಾನ್ ಮ್ಯಾಜಿಕ್ ವರ್ಕ್ ಆಗಿದೆ. ಭಾನುವಾರ ತಮಿಳು ಆವೃತ್ತಿಯು 1,117 ಶೋಗಳಿಂದ 3.55 ಕೋಟಿ ರೂಪಾಯಿ ಹಾಗೂ ತೆಲುಗು ಆವೃತ್ತಿಯು 1,122 ಶೋಗಳಿಂದ 3.25 ಕೋಟಿ ರೂಪಾಯಿ ಗಳಿಸಿದೆ. ಇನ್ನು ಕನ್ನಡ ಆವೃತ್ತಿಯು 55 ಶೋಗಳ ಮೂಲಕ 10 ಲಕ್ಷ ರೂಪಾಯಿ ಮತ್ತು ಮಲಯಾಳಂ ಆವೃತ್ತಿಯು 47 ಶೋಗಳಿಂದ 10 ಲಕ್ಷ ಗಳಿಕೆ ಕಂಡಿದೆ. ಭಾನುವಾರದ ರಜಾದಿನವನ್ನು ಸ್ಪೈಡರ್-ಮ್ಯಾನ್ ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಿದ್ದು, ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸುವತ್ತ ಮುನ್ನುಗ್ಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:03 am, Mon, 3 August 26

Source link

Bengaluru Air Quality: ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ನಗರಗಳಲ್ಲಿ ನಿಯಂತ್ರಣದಲ್ಲಿದೆ ವಾಯು ಗುಣಮಟ್ಟ! – Kannada News | Karnataka and bangalore aqi today air quality index report for august 3

ರಾಜಧಾನಿ ಬೆಂಗಳೂರಿನಲ್ಲಿ ಉತ್ತಮ ವಾಯು ಗುಣಮಟ್ಟ

ಬೆಂಗಳೂರು, ಆಗಸ್ಟ್ 03: ಇಂದು ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚಿ (AQI) ಅತ್ಯಂತ ಆಶಾದಾಯಕವಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ವಾಯು ಮಾಲಿನ್ಯ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ನಿರಾಳವಾಗಿ ಉಸಿರಾಡುವ ವಾತಾವರಣ ನಿರ್ಮಾಣವಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಉತ್ತಮ ವಾಯು ಗುಣಮಟ್ಟ

ಬೆಂಗಳೂರಿನಲ್ಲಿ ಇಂದಿನ ಸರಾಸರಿ AQI ಮಟ್ಟ 13 ರಿಂದ 41ರ ಆಸುಪಾಸಿನಲ್ಲಿದ್ದು, ಇದನ್ನು ‘ಉತ್ತಮ’ (Good) ವರ್ಗದಲ್ಲಿ ವಿಂಗಡಿಸಲಾಗಿದೆ. ನಗರದ ಪೀಣ್ಯ, ಬಿಟಿಎಂ ಲೇಔಟ್ ಮತ್ತು ಬಸವನಗುಡಿಯಂತಹ ಜನನಿಬಿಡ ಪ್ರದೇಶಗಳಲ್ಲೂ ಮಾಲಿನ್ಯದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.

PM2.5 ಮತ್ತು PM10 ಕಣಗಳ ಪ್ರಮಾಣ ಅತ್ಯಂತ ಕೆಳಮಟ್ಟದಲ್ಲಿದ್ದು (ಕ್ರಮವಾಗಿ 8 µg/m³ ಹಾಗೂ 10 µg/m³ ನಷ್ಟಿದೆ), ಗಾಳಿಯಲ್ಲಿ ತೇಲುವ ಧೂಳಿನ ಪ್ರಮಾಣ ಕಡಿಮೆಯಾಗಿದೆ. ಇತ್ತೀಚಿನ ಮಳೆ ಹಾಗೂ ಅನುಕೂಲಕರ ಗಾಳಿಯ ವೇಗದಿಂದಾಗಿ ನಗರದ ವಾತಾವರಣ ಶುದ್ಧವಾಗಿದೆ.

ಇತರ ನಗರಗಳ ಇಂದಿನ ಸ್ಥಿತಿಗತಿ

ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೂ ವಾಯು ಗುಣಮಟ್ಟ ಉತ್ತಮವಾಗಿದ್ದು, ಇಂದಿನ AQI 37ರಷ್ಟಿದೆ. ವಿವೇಕಾನಂದ ನಗರ, ಬಸವನಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುದ್ಧ ಗಾಳಿ ದಾಖಲಾಗಿದೆ. ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಬೆಳಗಾವಿ ನಗರಗಳಲ್ಲೂ AQI 50 ಕ್ಕಿಂತ ಕಡಿಮೆಯಿದ್ದು, ‘ಸುರಕ್ಷಿತ ವಲಯ’ದಲ್ಲಿವೆ.

ಇಂದಿನ ವಾಯು ಗುಣಮಟ್ಟವು ಎಲ್ಲಾ ವಯೋಮಾನದವರಿಗೂ, ವಿಶೇಷವಾಗಿ ಉಸಿರಾಟದ ತೊಂದರೆ ಇರುವವರಿಗೂ ಹಾಗೂ ಹಿರಿಯ ನಾಗರಿಕರಿಗೂ ಸುರಕ್ಷಿತವಾಗಿದೆ. ವಾಕಿಂಗ್, ವ್ಯಾಯಾಮ ಹಾಗೂ ಹೊರಾಂಗಣ ಚಟುವಟಿಕೆಗಳಿಗೆ ಇಂದು ಅತ್ಯುತ್ತಮ ವಾತಾವರಣವಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version