ವಿಜಯ್-ರಶ್ಮಿಕಾ ಮಾನ್ಯವರ್ ‘ಮೇಡ್ ಫಾರ್ ಈಚ್ ಒದರ್ ’ ಕ್ಯಾಂಪೇನ್; 300 ಮಿಲಿಯನ್ ವೀಕ್ಷಣೆ

ವಿಜಯ್-ರಶ್ಮಿಕಾ ಮಾನ್ಯವರ್ ‘ಮೇಡ್ ಫಾರ್ ಈಚ್ ಒದರ್ ’ ಕ್ಯಾಂಪೇನ್; 300 ಮಿಲಿಯನ್ ವೀಕ್ಷಣೆ

ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ವಿವಾಹ ಆಗುತ್ತಿದ್ದಂತೆ ಅನೇಕ ಜಾಹೀರಾತು ಕಂಪನಿಗಳಿಂದ ಆಫರ್ ಪಡೆದರು. ಈ ಪೈಕಿ ಎಥ್ನಿಕ್ ಬಟ್ಟೆ ಬ್ರ್ಯಾಂಡ್ ಮಾನ್ಯವರ್ ಜೊತೆ ದಂಪತಿ ಕೈ ಜೋಡಿಸಿದರು. ಈಗ ಮಾನ್ಯಾವರ್ ಮೋಹೆ ಇತ್ತೀಚೆಗೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರೊಂದಿಗೆ ಹೊಸ ಅಭಿಯಾನವನ್ನು ಪ್ರಾರಂಭಿಸಿದೆ. ‘ಮೇಡ್ ಫಾರ್ ಈಚ್ ಒದರ್’ ಹೆಸರಲ್ಲಿ ರಚಿಸಿರೋ ಈ ಅಭಿಯಾನ ಭರ್ಜರಿ ಮೆಚ್ಚುಗೆ ಪಡೆದಿದೆ.

ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಮಾನ್ಯವರ್ ಜಾಹೀರಾತಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಕೆಲವೇ ದಿನಗಳಲ್ಲಿ ಸಾಕಷ್ಟು ಗಮನ ಸೆಳೆದಿದೆ. ಈ ಪೋಸ್ಟ್ ಇನ್​​ಸ್ಟಾಗ್ರಾಮ್ ಅಲ್ಲಿ 72 ಗಂಟೆಗಳಲ್ಲಿ 100 ಮಿಲಿಯನ್​ ವೀವ್ಸ್ ದಾಟಿದೆ. ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ, ಈ ಅಭಿಯಾನವು ಈಗ 300 ಮಿಲಿಯನ್ ವೀವ್ಸ್ ಪಡೆದಿದೆ. ಅಲ್ಲದೆ, 250 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ತಲುಪಿದೆ.

ಪೋಸ್ಟ್ ಎಂಗೇಜ್‌ಮೆಂಟ್ ಬಗ್ಗೆ ನೋಡೋದಾದರೆ, ಈ ವಿಡಿಯೋ 4 ಲಕ್ಷಕ್ಕೂ ಹೆಚ್ಚು ಶೇರ್, 65 ಸಾವಿರ ರಿಪೋಸ್ಟ್‌ ಮತ್ತು 29,500 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಪ್ರಚಾರ್ ಕಮ್ಯುನಿಕೇಷನ್ ವ್ಯವಸ್ಥಾಪಕರು ಈ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ರಶ್ಮಿಕಾ ಮತ್ತು ವಿಜಯ್ ‘ಮೇಡ್ ಫಾರ್ ಈಚ್ ಒದರ್’ ಅಭಿಯಾನವು ಪ್ರಸ್ತುತ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮಾತ್ರ ನಡೆಯುತ್ತಿದೆ. ಈ ಅಭಿಯಾನವನ್ನು ಶೀಘ್ರದಲ್ಲೇ ಸಿನಿಮಾ ಥಿಯೇಟರ್‌ಗಳಿಗೂ ಲಗ್ಗೆ ಇಡಲಿದೆ.

ಪ್ರಚಾರ್ ಕಮ್ಯುನಿಕೇಷನ್ಸ್ ನಿರ್ದೇಶಕ ರಕ್ಷಿತ್ ಜೈನ್ ಈ ಬಗ್ಗೆ ಮಾತನಾಡಿ, ‘ಕೇವಲ ಮೂರು ದಿನಗಳಲ್ಲಿ ಇಂತಹ ಅಭಿಯಾನವನ್ನು ಕಲ್ಪಿಸಿ, ಅದನ್ನು ಜಾರಿಗೊಳಿಸಲಾಗಿದೆ. ಈ ಕಲ್ಪನೆಗೆ ಅದ್ಭುತ ಪ್ರತಿಕ್ರಿಯೆಯನ್ನು ಪಡೆದಿದ್ದಕ್ಕೆ ನಮಗೆ ಸಂತೋಷವಾಗಿದೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ದಂಪತಿ ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯಿಸಿದರು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ನಿಮ್ಮನ್ನು ಸ್ವತಂತ್ರ್ಯಗೊಳಿಸುವ ಪ್ರೀತಿಯನ್ನು ಕಂಡುಕೊಳ್ಳಿ’; ರಶ್ಮಿಕಾ ಭಾವುಕ ಪೋಸ್ಟ್

‘ಮಾನ್ಯವರ್ ಮೋಹೆ ಅವರ ಮದುವೆ ಉಡುಗೆ ಬಗ್ಗೆ ರಶ್ಮಿಕಾ ಹಾಗೂ ವಿಜಯ್ ಸಂತಸ ಹೊರಹಾಕಿದ್ದಾರೆ. ಮಾನ್ಯವರ್ ಮೋಹೆ ಭಾವನೆಗಳು ಮತ್ತು ಕಥೆ ಹೇಳುವ ಮೂಲಕ ಮದುವೆಗಳನ್ನು ಆಚರಿಸುವ ಸುಂದರವಾದ ವಿಧಾನ’ ಎಂದಿದ್ದಾರೆ ರಶ್ಮಿಕಾ ಹಾಗೂ ವಿಜಯ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಿಡಲ್ ಕ್ಲಾಸ್ ಹುಡುಗ UPSC ಪರೀಕ್ಷೆ ಪಾಸ್ ಮಾಡಿದ್ಹೇಗೆ? ಟಿವಿ9 ಜತೆ ಮನದಾಳ ಬಿಚ್ಚಿಟ್ಟ ಟಾಪರ್

ಯಾದಗಿರಿ, ಮಾರ್ಚ್ 10: ಯಾದಗಿರಿ ಜಿಲ್ಲೆಯ ಪ್ರತಿಭಾವಂತ ಯುವಕ ಸಂದೀಪ್ ಬಾಡದ್ ಅವರು ಪ್ರತಿಷ್ಠಿತ ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 89ನೇ ರ್ಯಾಂಕ್ ಗಳಿಸಿ, ತಮ್ಮ ಹುಟ್ಟೂರಿಗೆ ಹಾಗೂ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ. ಇದೀಗ ತಮ್ಮ ಯುಪಿಎಸ್ಸಿ ಸಾಧನೆ ಬಗ್ಗೆ ಟಿವಿ9 ಜತೆ ಮುಕ್ತವಾಗಿ ಮಾತನಾಡಿದ್ದಾರೆ. ಪೋಷಕರಿಗೆ ಯುಪಿಎಸ್​​ಸಿ ಬಗ್ಗೆ ಅರಿವೇ ಇರಲಿಲ್ಲ ಎಂದು ಮಧ್ಯಮ ವರ್ಗದ ಕುಟುಂಬದಿಂದ ಬಂದ ಸಂದೀಪ್ ಹೇಳಿದ್ದಾರೆ. ಅಲ್ಲದೆ, ತಮ್ಮ ಯಶಸ್ಸಿನ ಸೀಕ್ರೆಟ್ ತಿಳಿಸಿದ ಅವರು, ಕನಸು ಕಾಣಿ, ಪ್ರಯತ್ನ ಪಟ್ಟರೆ ಯಾವುದು ಅಸಾಧ್ಯವಲ್ಲ ಎಂಬ ಸಂದೇಶ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೇಳಿದ್ದು ಗಿಳಿಶಾಸ್ತ್ರ, ಇಕ್ಕಿದ್ದು ದುಡ್ಡು, ಚಿನ್ನಾಭರಣಕ್ಕೆ ಗಾಳ! ಐಟಿ ಅಧಿಕಾರಿಗೆ ಲಕ್ಷಾಂತರ ರೂ. ಪಂಗನಾಮ

ಬೆಂಗಳೂರು, ಮಾರ್ಚ್ 10: ವರ್ಗಾವಣೆಯ ಆಸೆಯಿಂದ ಗಿಳಿಶಾಸ್ತ್ರ ಹೇಳುವವನನ್ನು ನಂಬಿದ ಆದಾಯ ತೆರಿಗೆ ಇಲಾಖೆಯ (IT) ಅಧಿಕಾರಿಯೊಬ್ಬರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ (Bangalore) ಬೆಳಕಿಗೆ ಬಂದಿದೆ. ಸುಮಾರು 35 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಪಡೆದು ಪರಾರಿಯಾದ, ಗಿಳಿಶಾಸ್ತ್ರ ಹೇಳುತ್ತಿದ್ದ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕೆಲವು ವರ್ಷಗಳಿಂದ ಬೆಂಗಳೂರಿನ ಐಟಿ ಇಲಾಖೆ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಯೊಬ್ಬರು ಕಳೆದ ಡಿಸೆಂಬರ್ ತಿಂಗಳಲ್ಲಿ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಎಂಬಾತನ ಪರಿಚಯವಾಗಿತ್ತು. ಭಾರತಿನಗರದ ಶ್ರೀ ಸರ್ಕಲ್ ಬಳಿ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಎಂಬಾತ, ಮುಖ ನೋಡಿ ಜಾತಕ ಹಾಗೂ ಭವಿಷ್ಯ ಹೇಳುತ್ತೇನೆ ಎಂದು ಅಧಿಕಾರಿಯನ್ನು ನಂಬಿಸಿದ್ದ.

ವಿಶೇಷ ಪೂಜೆ ನೆಪದಲ್ಲಿ 50 ಸಾವಿರ ರೂ. ಲೂಟಿ

ಜೀವನದಲ್ಲಿ ಅಭಿವೃದ್ಧಿ ಆಗಬೇಕಾದರೆ ವಿಶೇಷ ಪೂಜೆ ಮಾಡಿಸಬೇಕು ಎಂದು ಹೇಳಿದ ಗಿಳಿಶಾಸ್ತ್ರದ ಶೇಖರ್, ಅದಕ್ಕಾಗಿ ಆರಂಭದಲ್ಲಿ ಸುಮಾರು 50 ಸಾವಿರ ರೂಪಾಯಿ ಪಡೆದು ಪೂಜೆ ಮಾಡಿಸಿದ್ದ. ನಂತರವೂ ಆ ಅಧಿಕಾರಿಗೆ ಪದೇ ಪದೇ ಕರೆ ಮಾಡಿ ವಿವಿಧ ಪೂಜೆಗಳ ಬಗ್ಗೆ ಹೇಳುತ್ತಿದ್ದ.

ಇದೇ ವೇಳೆ ವರ್ಗಾವಣೆಯ ವಿಚಾರವಾಗಿ ಗಿಳಿಶಾಸ್ತ್ರ ಕೇಳಿದಾಗ, ದೊಡ್ಡ ಪೂಜೆ ಮಾಡಬೇಕು. ಅದಕ್ಕಾಗಿ ಮನೆಯಲ್ಲಿರುವ ಚಿನ್ನಾಭರಣಗಳನ್ನು ತರಬೇಕು ಎಂದು ಶೇಖರ್ ಸಲಹೆ ನೀಡಿದ್ದ. ಅವನ ಮಾತನ್ನು ನಂಬಿದ ಐಟಿ ಅಧಿಕಾರಿ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ 194 ಗ್ರಾಂ ಚಿನ್ನಾಭರಣ ಮತ್ತು 1 ಕೆಜಿ 300 ಗ್ರಾಂ ಬೆಳ್ಳಿಯನ್ನು ತೆಗೆದುಕೊಂಡು ಹೋಗಿ ಆತನಿಗೆ ನೀಡಿದ್ದರು.

ಒಂದು ದಿನದಲ್ಲೇ ವಾಪಸ್ ಕೊಡುತ್ತೇನೆ ಎಂದು ಹೇಳಿದ್ದ ಶೇಖರ್, ನಂತರ ‘ಪೂಜೆ ಇನ್ನೂ ಮುಗಿದಿಲ್ಲ’ ಎಂದು ಹೇಳಿ ಸುಮಾರು ಒಂದು ವಾರ ಕಾಲ ಅಧಿಕಾರಿಯನ್ನು ಸತಾಯಿಸಿದ್ದ. ಬಳಿಕ ಐಟಿ ಅಧಿಕಾರಿ ಭಾರತಿನಗರದ ಶ್ರೀ ಸರ್ಕಲ್ ಬಳಿ ಹೋದಾಗ ಅಲ್ಲಿಗೆ ಗಿಳಿಯೂ ಇಲ್ಲ, ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಕೂಡ ಇರಲಿಲ್ಲ. ಆತ ಅದಗಲೇ ಪರಾರಿಯಾಗಿದ್ದ.

ಇದನ್ನೂ ಓದಿ: ಕದ್ದ ವಾಹನಗಳನ್ನೇ ಬಳಸಿ ಮತ್ತೊಂದು ಕಳ್ಳತನ: ಅಂತಾರಾಜ್ಯ ಗ್ಯಾಂಗ್​ ಪೊಲೀಸ್​​ ಬಲೆಗೆ

ವಂಚನೆಗೆ ಒಳಗಾದ ವಿಚಾರ ತಿಳಿದು ಐಟಿ ಅಧಿಕಾರಿಯು ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಶೇಖರ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

T20 World Cup 2026: ಕಾರ್ ಸಿಕ್ಕಿದ್ದು ಯಾರಿಗೆ?

ಟಿ20 ವಿಶ್ವಕಪ್ ಮುಕ್ತಾಯಗೊಂಡಿದೆ. ಈ ಬಾರಿಯ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ನ್ಯೂಝಿಲೆಂಡ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇತ್ತ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಮ್ ಇಂಡಿಯಾಗೆ 27.56 ಕೋಟಿ ರೂ. ಬಹುಮಾನ ಮೊತ್ತ ಸಿಕ್ಕರೆ, ಅತ್ತ ನ್ಯೂಝಿಲೆಂಡ್​ಗೆ 14.70 ಕೋಟಿ ರೂ. ಲಭಿಸಿದೆ.

ಇನ್ನು ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಸಂಜು ಸ್ಯಾಮ್ಸನ್​ ಪಾಲಾದರೆ, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಜಸ್​ಪ್ರೀತ್ ಬುಮ್ರಾ ಪಡೆದಿದ್ದರು. ಇದರ ಬೆನ್ನಲ್ಲೇ ಟಿ20 ವಿಶ್ವಕಪ್ ಪಂದ್ಯದ ವೇಳೆ ಕಾಣಿಸಿಕೊಂಡ ಹುಂಡೈ ಕಾರ್ ಸಿಕ್ಕಿದ್ದು ಯಾರಿಗೆ ಎಂಬ ಪ್ರಶ್ನೆ ಹಲವರಲ್ಲಿ ಮೂಡಿತ್ತು. ಈ ಪ್ರಶ್ನೆಗೆ ಇಲ್ಲಿದೆ ಉತ್ತರ.

ಕಾರ್ ಸಿಕ್ಕಿದ್ದು ಯಾರಿಗೆ?

ಈ ಬಾರಿಯ ಟಿ20 ವಿಶ್ವಕಪ್​ ಟೂರ್ನಿಯ ಅಧಿಕೃತ ಪಾಲುದಾರರಾಗಿ ಹ್ಯುಂಡೈ ಕಂಪನಿ ಕಾಣಿಸಿಕೊಂಡಿದ್ದರು. ಅಲ್ಲದೆ ಪ್ರತಿ ಪಂದ್ಯದ ವೇಳೆ ಮೈದಾನದಲ್ಲಿ Creta ಕಾರನ್ನು ಪ್ರದರ್ಶಿಸಲಾಗಿತ್ತು. ಇದಾಗ್ಯೂ ಈ ಕಾರನ್ನು ಪ್ರಶಸ್ತಿಯಾಗಿ ನೀಡಲಾಗಿಲ್ಲ ಎಂಬುದೇ ಸತ್ಯ.

ಅಂದರೆ ಟಿ20 ವಿಶ್ವಕಪ್‌ನಲ್ಲಿ ಯಾವುದೇ ಆಟಗಾರನಿಗೆ ಅಧಿಕೃತವಾಗಿ ಕಾರನ್ನು ಬಹುಮಾನವಾಗಿ ನೀಡಲಾಗಿಲ್ಲ. ಇಲ್ಲಿ ಹುಂಡೈ ಕಂಪೆನಿಯು ಕ್ರೆಟಾ ಕಾರನ್ನು ಕೇವಲ ಜಾಹೀರಾತಿಗಾಗಿ ಬಳಸಿದ್ದಾರೆ. ಇದರ ಹೊರತಾಗಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಅಥವಾ ಪ್ಲೇಯರ್ ಆಫ್ ದಿ ಮ್ಯಾಚ್​ಗೆ ಕಾರ್​ ನೀಡುವುದಾಗಿ ತಿಳಿಸಿರಲಿಲ್ಲ.

ಇದಾಗ್ಯೂ ಈ ಬಾರಿಯ ಟೂರ್ನಿಯಲ್ಲಿ 321 ರನ್​ಗಳಿಸಿರುವ ಸಂಜು ಸ್ಯಾಮ್ಸನ್​ ಅವರಿಗೆ ಕಾರು ನೀಡಲಾಗಿದೆ ಎಂಬ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಇವೆಲ್ಲವೂ ಫೇಕ್ ನ್ಯೂಸ್. ಬದಲಾಗಿ ಐಸಿಸಿ ಟೂರ್ನಿಯಲ್ಲಿ ಕಾರನ್ನು ಪ್ರಶಸ್ತಿಯಾಗಿ ನೀಡಲಾಗುತ್ತಿಲ್ಲ ಎಂಬುದೇ ಸತ್ಯ.

ಈ ಹಿಂದೆ ನೀಡಲಾಗಿತ್ತೇ?

ಐಸಿಸಿ  ತನ್ನ ಅಧಿಕೃತ ಟೂರ್ನಿಗಳಲ್ಲಿ ಸಾಮಾನ್ಯವಾಗಿ ಆಟಗಾರರಿಗೆ ಕಾರನ್ನು ಬಹುಮಾನವಾಗಿ ನೀಡುವುದಿಲ್ಲ. ಆದರೆ, ಕ್ರಿಕೆಟ್ ಇತಿಹಾಸದಲ್ಲಿ ಕೆಲವು ಪ್ರಮುಖ ಸಂದರ್ಭಗಳಲ್ಲಿ ಪ್ರಾಯೋಜಕರು ಅಥವಾ ಖಾಸಗಿ ಸಂಸ್ಥೆಗಳು ಆಟಗಾರರಿಗೆ ಕಾರನ್ನು ಉಡುಗೊರೆಯಾಗಿ ನೀಡಿವೆ.

ಅದರಲ್ಲ 1985ರಲ್ಲಿ ನಡೆದ 7 ತಂಡಗಳ ನಡುವಣ ಬೆನ್ಸನ್ ಅಂಡ್ ಹೆಡ್ಜಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ (ಇದು ಐಸಿಸಿ ಟೂರ್ನಿ ಅಲ್ಲ) ರವಿಶಾಸ್ತ್ರಿ ಅವರು ‘ಚಾಂಪಿಯನ್ ಆಫ್ ಚಾಂಪಿಯನ್ಸ್’ ಪ್ರಶಸ್ತಿ ಗೆದ್ದು Audi 100 ಕಾರನ್ನು ಪಡೆದಿದ್ದರು. ಇದು ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಪ್ರಸಿದ್ಧ ಕಾರು ಬಹುಮಾನವಾಗಿದೆ.

ಇದನ್ನೂ ಓದಿ: IPL 2026: ಹೆಚ್ಚುವರಿ ಪಂದ್ಯಗಳು… ಐಪಿಎಲ್​ನಲ್ಲಿ ಮಹತ್ವದ ಬದಲಾವಣೆ

ಹಾಗೆಯೇ ಐಪಿಎಲ್​ನಲ್ಲಿ ಅತ್ಯುತ್ತಮ ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟ್ ಬೀಸುವ ಆಟಗಾರನಿಗೆ ಟೂರ್ನಿಯ ಪ್ರಾಯೋಜಕರಾದ ಟಾಟಾ ಕಂಪೆನಿ ಪ್ರತಿ ಸೀಸನ್​ಗಳಲ್ಲೂ ಕಾರನ್ನು ಬಹುಮಾನವಾಗಿ ನೀಡುತ್ತಾರೆ. ಅದರಂತೆ ಕಳೆದ ಬಾರಿ 206.55 ರ ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟ್ ಬೀಸಿದ್ದ ಯುವ ಎಡಗೈ ದಾಂಡಿಗ ವೈಭವ್ ಸೂರ್ಯವಂಶಿ ಟಾಟಾ ಕರ್ವ್ ಕಾರನ್ನು ಪ್ರಶಸ್ತಿಯಾಗಿ ಪಡೆದಿದ್ದರು.

 

Source link

ವೇತನ ನಿರಾಕರಿಸಿದ ಇಬ್ಬರು ಸಂಸದರು ಯಾರು? ಸರ್ಕಾರಿ ಸೌಲಭ್ಯಗಳೂ ಬೇಡವಂತೆ

ನವದೆಹಲಿ, ಮಾರ್ಚ್​ 10: ವೇತನ ಮತ್ತು ಭತ್ಯೆಗಳನ್ನು ಹೆಚ್ಚಿಸುವಂತೆ ಸಂಸದ(Member Of Parliament)ರು ಆಗಾಗ ಸದನದಲ್ಲಿ ಕೂಗು ಕೇಳಿರಬರುತ್ತೆ. ಆದರೆ ಈ ಇಬ್ಬರು ಸಂಸದರು ತಮಗೆ ವೇತನವೂ ಬೇಡ, ಸರ್ಕಾರಿ ಸೌಲಭ್ಯಗಳು ಬೇಡ ಎಂದು ನಿರಾಕರಿಸಿರುವುದು ಅಚ್ಚರಿ ಮೂಡಿಸಿದೆ. ಲೋಕಸಭೆಯಲ್ಲಿ ಕೇವಲ ಇಬ್ಬರು ಸಂಸದರು (ಬಿಜೆಪಿಯಿಂದ ಒಬ್ಬರು ಮತ್ತು ಕಾಂಗ್ರೆಸ್‌ನಿಂದ ಒಬ್ಬರು) ತಮ್ಮ ಸಂಬಳವನ್ನು ಪಡೆಯದಿರಲು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕುರುಕ್ಷೇತ್ರದ ಬಿಜೆಪಿ ಸಂಸದ ನವೀನ್ ಜಿಂದಾಲ್ ಮತ್ತು ಇನ್ನರ್ ಮಣಿಪುರದ ಕಾಂಗ್ರೆಸ್ ಸಂಸದ ಡಾ. ಬಿಮೋಲ್ ಅಕೋಯಿಜಮ್ ಅಂಗೋಮ್ಚಾ ಈ ಇಬ್ಬರು ವೇತನ ಪಡೆಯಲು ನಿರಾಕರಿಸಿದ್ದಾರೆ.
ಲೋಕಸಭಾ ಸಚಿವಾಲಯವು ನವೀನ್ ಜಿಂದಾಲ್ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಸಂಬಳವನ್ನು ಮಾತ್ರವಲ್ಲದೆ ಎಲ್ಲಾ ಸರ್ಕಾರಿ ಭತ್ಯೆಗಳು ಮತ್ತು ಸವಲತ್ತುಗಳನ್ನು ಸಂಪೂರ್ಣವಾಗಿ ಬೇಡ ಎಂದಿದ್ದಾರೆ. ಕುರುಕ್ಷೇತ್ರದಿಂದ ಇಂಫಾಲ್‌ವರೆಗಿನ ಎರಡು ವೈವಿಧ್ಯಮಯ ಕ್ಷೇತ್ರಗಳ ಪ್ರತಿನಿಧಿಗಳು ಈ ಕೆಲಸ ಮಾಡಿದ್ದಾರೆ.

ತಮ್ಮ ಸಂಬಳ ಮತ್ತು ಭತ್ಯೆಗಳನ್ನು ತ್ಯಜಿಸಿದ ಸಂಸದರ ಆರ್ಥಿಕ ಸ್ಥಿತಿಯಲ್ಲಿ ಭಾರಿ ವ್ಯತ್ಯಾಸವಿದೆ. ನವೀನ್ ಜಿಂದಾಲ್ 1,241 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಮತ್ತು ಲೋಕಸಭೆಯ ಅತ್ಯಂತ ಶ್ರೀಮಂತ ಸಂಸದರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಡಾ. ಬಿಮೋಲ್ ಅಕೋಯಿಜಮ್ ಸುಮಾರು 97 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ.

ಮತ್ತಷ್ಟು ಓದಿ:ನಾವು ಗೆಲ್ಲಿಸುವ ಸಂಸದರ ಸಂಬಳ, ಸಿಗುವ ಸೌಲಭ್ಯಗಳ ಬಗ್ಗೆ ನಿಮಗೆಷ್ಟು ಗೊತ್ತು?

ಈ ಆರ್ಥಿಕ ಅಸಮಾನತೆಯ ಹೊರತಾಗಿಯೂ, ಇಬ್ಬರೂ ಸಾರ್ವಜನಿಕ ಸೇವೆಗಾಗಿ ಸಂಬಳವನ್ನು ಸ್ವೀಕರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಜಿಂದಾಲ್ ಖಂಡಿತವಾಗಿಯೂ ಶ್ರೀಮಂತರು, ಆದರೆ ಅವರು ಸದನದ ಅತ್ಯಂತ ಶ್ರೀಮಂತ ಸಂಸದರಲ್ಲ, ಗುಂಟೂರಿನ ಟಿಡಿಪಿ ಸಂಸದ ಡಾ. ಚಂದ್ರಶೇಖರ್ ಪೆಮ್ಮಸಾನಿ ಅತ್ಯಂತ ಶ್ರೀಮಂತ ಸಂಸದರಾಗಿದ್ದು, 5,705 ಕೋಟಿ ರೂ. ಹೆಚ್ಚು ಆಸ್ತಿ ಹೊಂದಿದ್ದಾರೆ.

ಚೆವೆಲ್ಲಾದ ಬಿಜೆಪಿ ಸಂಸದ ಕೊಂಡ ವಿಶ್ವೇಶ್ವರ ರೆಡ್ಡಿ 4,568 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. 543 ಲೋಕಸಭಾ ಸ್ಥಾನಗಳಲ್ಲಿ ಎರಡು ಸ್ಥಾನಗಳು ಪ್ರಸ್ತುತ ಖಾಲಿಯಾಗಿವೆ ಎಂದು ಆರ್‌ಟಿಐ ಬಹಿರಂಗಪಡಿಸಿದೆ. ಲೋಕಸಭೆಯ 481 ಹಾಲಿ ಸದಸ್ಯರು ಪ್ರಸ್ತುತ ಸಂಬಳ ಪಡೆಯುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹಾರ್ಮುಜ್ ಜಲಸಂಧಿಯೊಳಗೆ ತೈಲ ಹರಿವನ್ನು ನಿಲ್ಲಿಸಿದರೆ, ಇರಾನ್ ಒಂದು ರಾಷ್ಟ್ರವಾಗಿಯೇ ಉಳಿಯದು: ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್, ಮಾರ್ಚ್​ 10: ಇರಾನ್(Iran) ಹಾರ್ಮುಜ್ ಜಲಸಂಧಿಯೊಳಗೆ ತೈಲ ಹರಿವನ್ನು ನಿಲ್ಲಿಸುವ ಕೆಲಸ ಮಾಡಿದ್ದೇ ಆದಲ್ಲಿ ಇರಾನ್ ಒಂದು ದೇಶವಾಗಿಯೇ ಉಳಿಯುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಒಂದೊಮ್ಮೆ ಆ ರೀತಿಯಾದರೆ 20 ಪಟ್ಟು ಹೆಚ್ಚು ದಾಳಿಯನ್ನು ಎದುರಿಸಬೇಕಾಗುತ್ತದೆ. ಇರಾನ್ ಅನ್ನು ಮತ್ತೆ ಒಂದು ರಾಷ್ಟ್ರವಾಗಿ ನಿರ್ಮಿಸುವುದನ್ನು ಅಸಾಧ್ಯವಾಗಿಸುತ್ತದೆ ಎಂದರು. ಸಾವು, ಬೆಂಕಿ ಮತ್ತು ಕೋಪ ಅವರ ಮೇಲೆ ಆಳ್ವಿಕೆ ನಡೆಸುತ್ತದೆ. ಆದರೆ ಅದು ಸಂಭವಿಸಬಾರದು ಎಂದು ನಾನು ಭಾವಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ ನೀಡಿದ್ದಾರೆ. ಯುದ್ಧ ಈಗ ಬಹುತೇಕ ಮುಗಿದಿದೆ ಎಂದು ಟ್ರಂಪ್ ಹೇಳಿದ್ದಾರೆ. ಯಾವುದೇ ದುಸ್ಸಾಹಸಗಳಿಗೆ ಪ್ರಯತ್ನಿಸದಂತೆ ಅವರು ಇರಾನ್‌ಗೆ ಕಠಿಣ ಎಚ್ಚರಿಕೆಯನ್ನೂ ನೀಡಿದ್ದಾರೆ.

ಫೆಬ್ರವರಿ 28 ರಂದು, ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದವು. ಈ ಜಂಟಿ ಮಿಲಿಟರಿ ಕ್ರಮವು ಕ್ರಮೇಣ ದೊಡ್ಡ ಸಂಘರ್ಷಕ್ಕೆ ಕಾರಣವಾಯಿತು. ಇದು ಮಧ್ಯಪ್ರಾಚ್ಯದ ಹಲವಾರು ದೇಶಗಳನ್ನು ಪ್ರಾದೇಶಿಕ ಯುದ್ಧದ ಅಂಚಿಗೆ ತಂದಿತು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೆಹ್ರಾನ್‌ಗೆ ಭೀಕರ ಎಚ್ಚರಿಕೆ ನೀಡಿದ್ದು, ಹಾರ್ಮುಜ್ ಜಲಸಂಧಿಯ ಮೂಲಕ ಪೆಟ್ರೋಲಿಯಂ ಸಾಗಣೆಯನ್ನು ತಡೆಯುವ ಯಾವುದೇ ಪ್ರಯತ್ನಗಳಿಗೆ ಭಾರಿ ಪ್ರತೀಕಾರವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಇರಾನ್ ಹಾರ್ಮುಜ್ ಜಲಸಂಧಿಯೊಳಗೆ ತೈಲ ಹರಿವನ್ನು ನಿಲ್ಲಿಸುವ ಏನಾದರೂ ಮಾಡಿದರೆ, ಅವರು ಇಲ್ಲಿಯವರೆಗೆ ಅನುಭವಿಸಿದ್ದಕ್ಕಿಂತ ಇಪ್ಪತ್ತು ಪಟ್ಟು ಹೆಚ್ಚು ದಾಳಿಯನ್ನು ಎದುರಿಸಬೇಕಾಗಬಹುದು ಎಂದರು.

ಮತ್ತಷ್ಟು ಓದಿ: ನಮ್ಮನ್ನು ಕ್ಷಮಿಸಿ: ಮುಂದೆ ಈ ತಪ್ಪು ನಡೆಯುವುದಿಲ್ಲ, ಆದರೆ ಈ ದೇಶಗಳನ್ನು ಬಿಡುವುದಿಲ್ಲ ಎಂದ ಇರಾನ್

ಅಂತಹ ದಾಳಿಗಳು ಎಷ್ಟು ವಿನಾಶಕಾರಿಯೆಂದರೆ, ಇರಾನ್ ಒಂದು ರಾಷ್ಟ್ರವಾಗಿ ಚೇತರಿಸಿಕೊಳ್ಳುವ ಸಾಮರ್ಥ್ಯಕ್ಕೆ ಅವು ಅಡ್ಡಿಯಾಗಬಹುದು ಎಂದು ಹೇಳಿದ್ದಾರೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ವ್ಯಾಪಕ, ನಿರಂತರ ಘರ್ಷಣೆಯ ಮಧ್ಯೆ ಈ ಎಚ್ಚರಿಕೆ ಬಂದಿದೆ. ಪ್ರಸ್ತುತ ಮಿಲಿಟರಿ ಸಂಘರ್ಷವು ನಿರ್ಣಾಯಕ ಹಂತವನ್ನು ತಲುಪಿದೆ ಎಂದು ಟ್ರಂಪ್ ಪ್ರತ್ಯೇಕ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಅವರಿಗೆ ಈಗ ನೌಕಾಪಡೆ ಇಲ್ಲ. ಅವರ ಸಂವಹನಗಳು ನಿಂತುಹೋಗಿವೆ ಮತ್ತು ಅವರ ವಾಯುಪಡೆ ಬಹುತೇಕ ಇಲ್ಲವಾಗಿದೆ. ಅವರ ಕ್ಷಿಪಣಿ ವ್ಯವಸ್ಥೆಗಳು ಅಸ್ತವ್ಯಸ್ತವಾಗಿವೆ. ಅವರ ಡ್ರೋನ್‌ಗಳನ್ನು ಎಲ್ಲೆಡೆ ಹೊಡೆದುರುಳಿಸಲಾಗುತ್ತಿದೆ ಮತ್ತು ಅವರ ಡ್ರೋನ್ ತಯಾರಿಸುವ ಕಾರ್ಖಾನೆಗಳು ನಾಶವಾಗಿವೆ ಎಂದು ಅವರು ಹೇಳಿದರು.

ಯುದ್ಧ ಪ್ರಾರಂಭವಾದಾಗ, ಇರಾನ್ ವಿರುದ್ಧ ಅಮೆರಿಕದ ಕ್ರಮ ಕನಿಷ್ಠ ನಾಲ್ಕರಿಂದ ಐದು ವಾರಗಳವರೆಗೆ ಇರುತ್ತದೆ ಎಂದು ಟ್ರಂಪ್ ಹೇಳಿದ್ದರು. ಆದರೆ ಸೋಮವಾರ, ಅಮೆರಿಕ ತನ್ನ ಗಡುವನ್ನು ಮೀರಿದೆ ಮತ್ತು ಸಂಘರ್ಷ ಶೀಘ್ರದಲ್ಲೇ ಕೊನೆಗೊಳ್ಳಬಹುದು ಎಂದು ಹೇಳಿದರು. ಇಸ್ಲಾಮಿಕ್ ಗಣರಾಜ್ಯವು ಯಾವುದೇ ತಂತ್ರಗಳನ್ನು ಅಥವಾ ಹೊಸ ನಡೆಗಳನ್ನು ಪ್ರಯತ್ನಿಸಬಾರದು ಎಂದು ಅವರು ಹೇಳಿದರು.

ಹಾರ್ಮುಜ್ ಜಲಸಂಧಿ ಈಗ ತೆರೆದಿದ್ದು, ಹಡಗುಗಳು ಅದರ ಮೂಲಕ ಹಾದುಹೋಗುತ್ತಿವೆ ಎಂದು ಟ್ರಂಪ್ ಹೇಳಿದರು. ಈ ಪ್ರಮುಖ ಸಮುದ್ರ ಮಾರ್ಗವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಬಗ್ಗೆಯೂ ಅಮೆರಿಕ ಯೋಚಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಅಮೆರಿಕದ ಹೋರಾಟ ಇದೀಗ ಆರಂಭವಾಗಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿಕೆ ನೀಡಿರುವ ಸಂದರ್ಭದಲ್ಲಿ ಟ್ರಂಪ್ ಅವರ ಈ ಹೇಳಿಕೆ ಬಂದಿದೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಈ ಉದ್ವಿಗ್ನತೆಯು ಪ್ರಪಂಚದಾದ್ಯಂತದ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ತೈಲ ಬೆಲೆಗಳು ಏರಿಳಿತಗೊಳ್ಳುತ್ತಿವೆ, ಏಕೆಂದರೆ ಈ ಪ್ರದೇಶವನ್ನು ವಿಶ್ವದ ತೈಲ ಪೂರೈಕೆಯ ಪ್ರಮುಖ ಕೇಂದ್ರವೆಂದು ಪರಿಗಣಿಸಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರೇಣುಕಾಸ್ವಾಮಿ ಅಲ್ಲ, ಶಿವಸ್ವಾಮಿ ಕೊಲೆ ಕೇಸ್; ‘ಬಾಸ್’ ಸಿನಿಮಾ ಕಥೆ ರಿವೀಲ್

‘ಬಾಸ್’ ಸಿನಿಮಾ ವಿಷಯ ಚರ್ಚೆ ಹುಟ್ಟುಹಾಕಿದೆ. ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಹೀರೋ ಓರ್ವ ಕೊಲೆ ಕೇಸ್​​​ನಲ್ಲಿ ಸಿಕ್ಕಿ ಬೀಳೋ ಕಥೆ ಇದು. ಇದನ್ನು ನೋಡಿದ ಅನೇಕರಿಗೆ ಇದು ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಕರಣವೇ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಉತ್ತರಿಸಿರೋ ನಿರ್ದೇಶಕರು ‘ಇದು ರೇಣುಕಾಸ್ವಾಮಿ ಅಲ್ಲ, ಶಿವಸ್ವಾಮಿ ಕೊಲೆ ಕೇಸ್’ ಎಂದು ಹೇಳಿದ್ದಾರೆ. ಟ್ರೇಲರ್ ರಿಲೀಸ್ ಆದ ಬಳಿಕ ಎಲ್ಲ ವಿಷಯ ಗೊತ್ತಾಗಲಿದೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತದ ಗೆಲುವಲ್ಲ, ಇವರೇ ತಟ್ಟೆಯಲ್ಲಿಟ್ಟು ನೀಡಿದ ‘ಗಿಫ್ಟ್​’

ಮಳೆ ನಿಂತರೂ ಹನಿ ನಿಂತಿಲ್ಲ ಎಂಬಂತೆ ಟಿ20 ವಿಶ್ವಕಪ್​​ ಫೈನಲ್ ಪಂದ್ಯದ ಚರ್ಚೆ ಮುಂದುವರೆದಿದೆ. ಮಾರ್ಚ್ 8 ರಂದು ಅಹಮದಾಬಾದ್​ನಲ್ಲಿ ನಡೆದ ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು ಹೀನಾಯವಾಗಿ ಸೋಲಿಸಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು ಬರೋಬ್ಬರಿ 255 ರನ್​ಗಳು. 256 ರನ್​ಗಳ ಗುರಿ ಪಡೆದ ನ್ಯೂಝಿಲೆಂಡ್ ತಂಡವು 19 ಓವರ್​ಗಳಲ್ಲಿ 159 ರನ್ ಬಾರಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 96 ರನ್​ಗಳ ವಿಜಯದೊಂದಿಗೆ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಹೀಗೆ ಭಾರತ ತಂಡ ಅಮೋಘ ಗೆಲುವು ದಾಖಲಿಸಿದರೂ, ಅದು ನ್ಯೂಝಿಲೆಂಡ್ ತಂಡ ನೀಡಿದ ಉಡುಗೊರೆ ಎಂದು ಅಣಕಿಸಿದ್ದಾರೆ ಪಾಕಿಸ್ತಾನ್ ತಂಡದ ಮಾಜಿ ವೇಗಿ ಮೊಹಮ್ಮದ್ ಅಮಿರ್.

ಟಿ20 ವಿಶ್ವಕಪ್​ನ ಫೈನಲ್​ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ತೆಗೆದುಕೊಂಡ ಕೆಲ ಅಚ್ಚರಿಯ ನಿರ್ಧಾರಗಳಿಂದಲೇ ಭಾರತ ಚಾಂಪಿಯನ್ ಆಗಿದೆ.

ಏಕೆಂದರೆ ಸ್ಪಿನ್ ವಿರುದ್ಧ ತಿಣುಕಾಡುವ ಅಭಿಷೇಕ್ ಶರ್ಮಾಗೆ ಆಫ್-ಸ್ಪಿನ್ನರ್​ನಿಂದ ಕೈಯಿಂದ ಬೌಲಿಂಗ್ ಮಾಡಿಸುವ ಬದಲು ಸ್ಯಾಂಟ್ನರ್ ವೇಗಿ ಜೇಕಬ್ ಡಫಿಗೆ ಬೌಲಿಂಗ್ ಮಾಡಿಸಿದ್ದರು. ಇಂದೆಂತಹ ಸ್ಟ್ರಾಟಜಿ ಎಂಬುದೇ ಅರ್ಥವಾಗಿಲ್ಲ ಎಂದು ಅಮಿರ್ ಕಿವೀಸ್ ನಾಯಕನ ನಡೆಯನ್ನು ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲದೆ  ಸೆಮಿಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕೋಲ್ ಮೆಕಾಂಕಿಯನ್ನು ಕೈಬಿಟ್ಟಿದ್ದಕ್ಕೂ ಮೊಹಮ್ಮದ್ ಅಇರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

85,000 ಪ್ರೇಕ್ಷಕರ ಸಮ್ಮುಖದಲ್ಲಿ ನ್ಯೂಝಿಲೆಂಡ್ ಆಟಗಾರರು ಮೊದಲು ಮಾನಸಿಕವಾಗಿ ಸೋತರು. ಆ ಬಳಿಕ ಸಡಿಲವಾದ ಬೌಲಿಂಗ್ ಮೂಲಕ ಭಾರತಕ್ಕೆ ಹೆಚ್ಚಿನ ರನ್ ಬಿಟ್ಟುಕೊಟ್ಟರು.

ಇದು ಒಂದಾರ್ಥದಲ್ಲಿ ಟೀಮ್ ಇಂಡಿಯಾದ ಭರ್ಜರಿ ಗೆಲುವಲ್ಲ. ಬದಲಾಗಿ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಭಾರತಕ್ಕೆ ಪ್ರಶಸ್ತಿಯನ್ನು ತಟ್ಟೆಯಲ್ಲಿ ಇಟ್ಟು “ಉಡುಗೊರೆ”ಯಾಗಿ ನೀಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಇದಕ್ಕೂ ಮುನ್ನ ಮೊಹಮ್ಮದ್ ಅಮಿರ್, ಈ ಬಾರಿ ಟೀಮ್ ಇಂಡಿಯಾ ಸೆಮಿಫೈನಲ್​ಗೆ ಪ್ರವೇಶಿಸಲ್ಲ ಎಂದು ಭವಿಷ್ಯ ನುಡಿದಿದ್ದರು. ಇದಾದ ಬಳಿಕ ಫೈನಲ್​ನಲ್ಲಿ ಭಾರತ ತಂಡ ಸೋಲಲಿದೆ ಎಂದಿದ್ದರು.

ಇದನ್ನೂ ಓದಿ: T20 World Cup 2028: ಟಿ20 ವಿಶ್ವಕಪ್​ಗೆ 12 ತಂಡಗಳು ನೇರ ಆಯ್ಕೆ

ಆದರೆ ಅಮಿರ್ ಅವರ ಈ ಪ್ರೆಡಿಕ್ಷನ್​ಗಳು ತಲೆಕೆಳಗಾಗಿದ್ದವು. ಇದೀಗ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿರುವುದನ್ನು ನ್ಯೂಝಿಲೆಂಡ್ ನೀಡಿದ ಗಿಫ್ಟ್ ಎಂದು ಅಣಕಿಸಿದ್ದಾರೆ.

 

Source link

Bengaluru Air Quality: ಉಡುಪಿ, ಮಂಗಳೂರು ಸೇರಿ ರಾಜ್ಯದ ಹಲವೆಡೆ ವಾಯು ಗುಣಮಟ್ಟ ಕುಸಿತ

ಬೆಂಗಳೂರು, ಮಾರ್ಚ್​ 10: ಈ ನಡುವೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಾಯು ಗುಣಮಟ್ಟ (Bengaluru Air Quality) ಕುಸಿತ ಕಂಡಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ನಗರಗಳ ಗಾಳಿಯ ಕಳಪೆ ಗುಣಮಟ್ಟ, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬೆಂಗಳೂರು, ಕಲಬುರ್ಗಿ, ಬಳ್ಳಾರಿ ಸೇರಿದಂತೆ ಹಲವೆಡೆ ಇಂದು ವಾಯು ಗುಣಮಟ್ಟ 150 ದಾಟಿದೆ. ರಾಜ್ಯದೆಲ್ಲೆಡೆ ಬಿಸಿಲಿನ ಬೇಗೆ ಹೆಚ್ಚಾಗಿದ್ದು ಈ ತಿಂಗಳು ಪೂರ್ತಿ ಇದೇ ವಾತಾವರಣ ಇರಲಿದೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 161ಕ್ಕೆ ತಲುಪಿದೆ. ಕೆಲ ದಿನಗಳಿಂದ ಉಡುಪಿ, ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಏರ್ ಕ್ವಾಲಿಟಿ ತೀರಾ ಕಳಪೆ ಮಟ್ಟಕ್ಕೆ ಇಳಿದಿತ್ತು. ಆದರೆ ಇಂದು ಅದೇ ಉಡುಪಿ, ಮಂಗಳೂರು, ಕಲಬುರ್ಗಿ ಸೇರಿದಂತೆ ಹಲವೆಡೆಯ ವಾಯು ಗುಣಮಟ್ಟ 150ಕ್ಕಿಂತ ಹೆಚ್ಚಾಗಿದೆ. ಕಲಬುರ್ಗಿಯ AQI 151 ಇದ್ದು, 200ರ ಗಡಿ ತಲುಪುವ ಆತಂಕ ಎದುರಾಗಿದೆ. ಆದರೆ ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –161
  • ಮಂಗಳೂರು-158
  • ಮೈಸೂರು –158
  • ಬೆಳಗಾವಿ – 159
  • ಕಲಬುರ್ಗಿ-150
  • ಶಿವಮೊಗ್ಗ – 176
  • ಬಳ್ಳಾರಿ – 166
  • ಹುಬ್ಬಳ್ಳಿ- 161
  • ಉಡುಪಿ –158
  • ವಿಜಯಪುರ –150

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

Source link

IPL 2026: ಹೆಚ್ಚುವರಿ ಪಂದ್ಯಗಳು… ಐಪಿಎಲ್​ನಲ್ಲಿ ಮಹತ್ವದ ಬದಲಾವಣೆ

Source link

Exit mobile version