Chanakya Niti: ಜೀವನದಲ್ಲಿ ಈ ವಿಚಾರಗಳು ಎಂದಿಗೂ ಅತಿಯಾಗಬಾರದು ಎನ್ನುತ್ತಾರೆ ಚಾಣಕ್ಯ

Chanakya Niti: ಜೀವನದಲ್ಲಿ ಈ ವಿಚಾರಗಳು ಎಂದಿಗೂ ಅತಿಯಾಗಬಾರದು ಎನ್ನುತ್ತಾರೆ ಚಾಣಕ್ಯ

ಆಚಾರ್ಯ ಚಾಣಕ್ಯರು (Acharya Chanakya)  ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ವಿಷಯಗಳು ಮಾತ್ರವಲ್ಲದೆ, ನಮ್ಮ ಜೀವನಕ್ಕೆ ಸಂಬಂಧಿಸಿದ ಹತ್ತು ಹಲವು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಈ ಬೋಧನೆಗಳನ್ನು ಅನುಸರಿಸುವ ಮೂಲಕ ನೀವು ಸಂತೋಷ, ಸಮೃದ್ಧ ಮತ್ತು ಯಶಸ್ವಿ ಜೀವನವನ್ನು ನಡೆಸಬಹುದು ಮತ್ತು ಸಮಾಜದಲ್ಲಿ ಗೌರವವನ್ನೂ ಪಡೆಯಬಹುದು. ಅದೇ ರೀತಿ ಜೀವನ ಸರ್ವನಾಶವಾಗಬಾರದು ಎಂದರೆ ಈ ಒಂದಷ್ಟು ವಿಷಯಗಳು ಅತಿಯಾಗಬಾರದು ಎಂದೂ ಹೇಳಿದ್ದಾರೆ. ಹೌದು ಬದುಕಿನಲ್ಲಿ ಈ ಕೆಲವೊಂದು ವಿಷಯಗಳ ಬಗ್ಗೆ ಅತಿಯಾಗಿ ಅಹಂಕಾರ ಪಟ್ಟರೆ, ಕೆಲವು ವಿಷಯಗಳು ಅತಿಯಾದರೆ ಜೀವನವೇ ನಾಶವಾಗಬಹುದು. ಅತಿಯಾಗಬಾರದ ಆ ಸಂಗತಿಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಜೀವನದಲ್ಲಿ ಈ ಸಂಗತಿಗಳ ಬಗ್ಗೆ ಅಹಂಕಾರ ಪಡಬೇಡಿ:

ನಿಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಹೆಮ್ಮೆ ಪಡಬೇಡಿ: ಆಚಾರ್ಯ ಚಾಣಕ್ಯರ ಪ್ರಕಾರ, ಸುಂದರವಾಗಿರುವುದು ಅದ್ಭುತವಾದ ವಿಷಯ, ಆದರೆ ನಿಮ್ಮ ಸೌಂದರ್ಯದ ಬಗ್ಗೆ ಅತಿಯಾಗಿ ಹೆಮ್ಮೆಪಡುವುದು ಭವಿಷ್ಯದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಸೌಂದರ್ಯವು ಶಾಶ್ವತವಲ್ಲ. ಹಾಗಾಗಿ  ಸೌಂದರ್ಯದ ಬದಲು ವ್ಯಕ್ತಿತ್ವ ಮತ್ತು ಗುಣಗಳನ್ನು ಮೆಚ್ಚಿಕೊಳ್ಳಬೇಕು.

ಜ್ಞಾನ, ಸಂಪತ್ತಿನ ಬಗ್ಗೆ ಅಹಂಕಾರ ಬೇಡ: ಚಾಣಕ್ಯ ನೀತಿಯ ಪ್ರಕಾರ, ವ್ಯಕ್ತಿಯ ದೊಡ್ಡ ಶತ್ರು ಅಹಂಕಾರ. ಒಬ್ಬ ವ್ಯಕ್ತಿಯು ತನ್ನ ಜ್ಞಾನ, ಶಕ್ತಿ ಅಥವಾ ಸಂಪತ್ತಿನ ಬಗ್ಗೆ ಅಹಂಕಾರಪಟ್ಟರೆ ಆತನ ನಾಶ ಖಚಿತ ಎಂದು ಚಾಣಕ್ಯ ಹೇಳುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ರಾವಣ. ಹಾಗಾಗಿಆಚಾರ್ಯ ಚಾಣಕ್ಯ ಹೇಳುತ್ತಾರೆ   ಪ್ರತಿಯೊಬ್ಬ ವ್ಯಕ್ತಿಯು ಅಹಂಕಾರ ಬಿಟ್ಟು ನಮ್ರತೆಯಿಂದ ಬದುಕಲು ಕಲಿಯಬೇಕು.

ಅಗತ್ಯಕ್ಕಿಂತ ಹೆಚ್ಚಿನದನ್ನು ದಾನ ಮಾಡುವುದು: ಆಚಾರ್ಯ ಚಾಣಕ್ಯರು ದಾನ ಮಾಡುವುದು ಪುಣ್ಯದ ಕಾರ್ಯ ಎಂದು ಹೇಳುತ್ತಾರೆ. ಆದರೆ ನಿಮ್ಮ ಸಾಮರ್ಥ್ಯಕ್ಕೂ ಮೀರಿ ಹೆಚ್ಚಿನದನ್ನು ದಾನ ಮಾಡಬಾರದು. ಅತಿಯಾದರೆ ಅಮೃತವೂ ವಿಷ ಎನ್ನುವಂತೆ, ನಿಮ್ಮ ಸಾಮರ್ಥ್ಯಕ್ಕೂ ಮೀರಿ ನೀವು ದಾನ ಮಾಡಿದರೆ ತೊಂದರೆಗೆ ಸಿಲುಕುತ್ತೀರಿ.  ಹಾಗಾಗಿ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ  ಮಾಡಿ.

ಇದನ್ನೂ ಓದಿ: ಯಾವುದೇ ಕಾರಣಕ್ಕೂ ಇಂತಹ ಜನರ ಸಹವಾಸ ಮಾಡಬೇಡಿ ಎಂದಿದ್ದಾರೆ ಚಾಣಕ್ಯ

ಅತಿಯಾದ ನಂಬಿಕೆ ಒಳ್ಳೆಯದಲ್ಲ: ಆಚಾರ್ಯ ಚಾಣಕ್ಯರ ಪ್ರಕಾರ, ಯಾರನ್ನಾದರೂ ಕುರುಡಾಗಿ ನಂಬುವುದು ಒಳ್ಳೆಯದಲ್ಲ. ಏಕೆಂದರೆ ಅತಿಯಾದ ನಂಬಿಕೆ ಹೆಚ್ಚಾಗಿ ದ್ರೋಹಕ್ಕೆ ಕಾರಣವಾಗಬಹುದು. ಹೌದು ಕೆಲವರು ನಿಮ್ಮ ನಂಬಿಕೆಯನ್ನು ಗಳಿಸಿ ಎಲ್ಲಾ ರೀತಿಯಲ್ಲೂ ನಿಮಗೆ ಮೋಸ ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಯಾರನ್ನೂ ಹೆಚ್ಚು ನಂಬಬೇಡಿ.

ಅತಿಯಾಗಿ ಮಾತನಾಡುವುದು: ಹೆಚ್ಚು ಮಾತನಾಡುವುದರಿಂದ ಗಂಭೀರ ತೊಂದರೆಯಾಗಬಹುದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬಂತೆ ಅತಿಯಾಗಿ ಮಾತನಾಡಿದರೆ ನೀವೇ ತೊಂದರೆಯಲ್ಲಿ ಸಿಲುಕುತ್ತೀರಿ. ಹಾಗಾಗಿ ಯಾವಾಗಲೂ ಬುದ್ಧಿವಂತಿಕೆಯಿಂದ, ಚಿಂತನಶೀಲವಾಗಿ ಮತ್ತು ಅಗತ್ಯವಿದ್ದಾಗ ಮಾತ್ರ ಮಾತನಾಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿ ನರಸೀಪುರದ ಸಿಲ್ಕ್ ಫ್ಯಾಕ್ಟರಿ ಜಾಗದಲ್ಲಿ ಕ್ರೀಡಾಂಗಣ: ಸಚಿವ ಮಹದೇವಪ್ಪ ಭೇಟಿಯಾದ ಪ್ರಮೋದಾದೇವಿ ಒಡೆಯರ್

ಮೈಸೂರು, ಮಾರ್ಚ್​​ 08: ಟಿ.ನರಸೀಪುರದ ಸಿಲ್ಕ್ ಫ್ಯಾಕ್ಟರಿ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ವಿಚಾರವಾಗಿ ರೈತರು ಸಿಡಿದೆದಿದ್ದಾರೆ. ಟಿ.ನರಸೀಪುರದ ಸಿಲ್ಕ್ ಫ್ಯಾಕ್ಟರಿ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಬಾರದು ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಸದಸ್ಯರು ಇತ್ತೀಚೆಗೆ ಮೈಸೂರಿನಲ್ಲಿ ಪ್ರತಿಭಟಿಸಿದ್ದರು. ಈ ವಿಚಾರವಾಗಿ ರಾಜಮಾತೆ ಪ್ರಮೋದಾದೇವಿ ಒಡೆಯರ್​ (pramoda devi wadiyar) ಅವರು ಸಚಿವ ಹೆಚ್.ಸಿ.ಮಹದೇವಪ್ಪ ಭೇಟಿ ಮಾಡಿದ್ದಾರೆ. ಈ ವೇಳೆ ಟಿ.ನರಸೀಪುರದ ಕೆಎಸ್​ಐಸಿ ಕಾರ್ಖಾನೆ ಮುಚ್ಚುವುದಿಲ್ಲವೆಂದು ಸಚಿವ ಮಹದೇವಪ್ಪ ಭರವಸೆ ನೀಡಿದ್ದಾರೆ.

ಇನ್ನು ಸಚಿವರ ಸಕಾರಾತ್ಮಕ ಸ್ಪಂದನೆಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಕೃತಜ್ಞತೆ ಸಲ್ಲಿಸಿದ್ದು, ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಮೈಸೂರು ಸಿಲ್ಕ್ ಇಂದು ವಿಶ್ವಪ್ರಸಿದ್ಧ. ಮೈಸೂರು ಸಿಲ್ಕ್ ಸೀರೆ ಮತ್ತು ಪಂಚೆಗೆ ಜಿಯೋಗ್ರಾಫಿಕಲ್ ಇಂಡಿಕೇಷನ್ (GI) ಟ್ಯಾಗ್​​​ ಅದರ ವಿಶಿಷ್ಟತೆ ಹಾಗೂ ಗುಣಮಟ್ಟಕ್ಕೆ ಮುದ್ರೆ.

ಇದನ್ನೂ ಓದಿ: ಯೂನಿಟಿ ಮಾಲ್ ನಿರ್ಮಾಣ ವಿವಾದ: ಪತ್ರಿಕಾ ಪ್ರಕಟಣೆ ಮೂಲಕ ಪ್ರಮೋದಾ ದೇವಿ ಸ್ಪಷ್ಟನೆ

ಭಾರತದ ಸಮೃದ್ಧ ವಸ್ತ್ರ ಪರಂಪರೆಯ ಪ್ರತೀಕವಾಗಿ ಮೈಸೂರು ಸಿಲ್ಕ್ ಗುರುತಿಸಿಕೊಂಡಿದೆ. ಪರಂಪರೆ, ಕೈಚಳಕ, ವೈಶಿಷ್ಟ್ಯ ಹಾಗೂ ಐತಿಹಾಸಿಕ ಮಹತ್ವದಿಂದ ಮೈಸೂರು ಸಿಲ್ಕ್ ಪೀಳಿಗೆಯಿಂದ ಪೀಳಿಗೆಗೆ ಸಾಗುತ್ತಿರುವ ಅಮೂಲ್ಯ ಪರಂಪರೆ. ಜಾಗತಿಕ ಫ್ಯಾಷನ್ ಕ್ಷೇತ್ರದಲ್ಲಿ ಪರಂಪರೆಯ ಹಾಗೂ ಪರಿಸರ ಸ್ನೇಹಿ ವಸ್ತ್ರಗಳಿಗೆ ಹೆಚ್ಚುತ್ತಿರುವ ಬೇಡಿಕೆಯಲ್ಲಿ ಮೈಸೂರು ಸಿಲ್ಕ್ ಪ್ರಮುಖ ಸ್ಥಾನ ಪಡೆದಿದೆ.

ಇದನ್ನೂ ಓದಿ: ಸಿದ್ದಯ್ಯನಪುರ: ಊರೇ ಖಾಲಿ ಮಾಡಬೇಕಾದ ಭೀತಿಯಲ್ಲಿ ಗ್ರಾಮಸ್ಥರು, ಆಸ್ತಿ ಖಾತೆ ಮಾಡುವಂತೆ ಪ್ರಮೋದಾದೇವಿ ಪತ್ರದ ಬೆನ್ನಲ್ಲೇ ಆತಂಕ

ಟಿ.ನರಸೀಪುರ ಪ್ರದೇಶದ ಹವಾಮಾನ, ಭೌಗೋಳಿಕ ಪರಿಸ್ಥಿತಿ ಹಾಗೂ ನೀರಿನ ಲಭ್ಯತೆ ರೇಷ್ಮೆ ಬೆಳೆಗೆ ಅತ್ಯಂತ ಸೂಕ್ತ. ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ನಡೆದರೆ ರೇಷ್ಮೆಯ ಗುಣಮಟ್ಟಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ. ಟಿ.ನರಸೀಪುರದಲ್ಲಿರುವ ಕೆಎಸ್‌ಐಸಿ ಕಾರ್ಖಾನೆ ಭವಿಷ್ಯದ ಬಗ್ಗೆ ಮೈಸೂರು ಮತ್ತು ಬೆಂಗಳೂರು ಜನರಿಂದ ಆತಂಕ ವ್ಯಕ್ತವಾಗಿದೆ. ಈ ವೇಳೆ ಮೈಸೂರು ಸಿಲ್ಕ್ ಸ್ಥಾಪನೆಗೆ ಕಾರಣವಾದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೂ ಗೌರವ ಸಮರ್ಪಣೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತಮ್ಮ ಜೀವನದಲ್ಲಿ ಪ್ರಭಾವ ಬೀರಿದ ಮಹಿಳೆಯರನ್ನು ಸ್ಮರಿಸಿದ ಗೌತಮ್ ಅದಾನಿ

ಅಹ್ಮದಾಬಾದ್, ಮಾರ್ಚ್ 8: ತಮ್ಮ ಜೀವನ ಹಾಗೂ ಮೌಲ್ಯಗಳು ರೂಪುಗೊಳ್ಳಲು ಕಾರಣರಾದ ಮಹಿಳೆಯರನ್ನು ಗೌತಮ್ ಅದಾನಿ (Gautam Adani) ಇವತ್ತಿನ ಮಹಿಳೆಯರ ದಿನದಂದು (International Women’s Day) ಸ್ಮರಿಸಿಕೊಂಡಿದ್ದಾರೆ. ತಮ್ಮ ಸಾಕ್ಷಿಪ್ರಜ್ಞೆ ರೂವಾರಿಗಳೆಂದು ಆ ಮಹಿಳೆಯರನ್ನು ಬಣ್ಣಿಸಿದ್ದಾರೆ. ಲಿಂಕ್ಡ್​ಇನ್​ನಲ್ಲಿ ಭಾವುಕವಾದ ಪೋಸ್ಟ್​ವೊಂದನ್ನು ಹಾಕಿರುವ ಗೌತಮ್ ಅದಾನಿ, ತಮ್ಮ ಕುಟುಂಬದಲ್ಲಿನ ಮಹಿಳೆಯರ ಪ್ರಭಾವ ತಮಗೆ ಅದೆಷ್ಟು ಗಾಢವಾಗಿ ಆಗಿತ್ತು ಎಂದು ವಿವರಿಸಿದ್ದಾರೆ. ತಮ್ಮ ಜೀವನ, ಜವಾಬ್ದಾರಿ, ರಾಷ್ಟ್ರ ನಿರ್ಮಾಣ ವಿಚಾರದಲ್ಲಿ ಹೊಸ ದೃಷ್ಟಿಕೋನ ಸಿಗಲು ಇವರ ಪಾತ್ರ ಮಹತ್ವದ್ದೆಂದು ಹೇಳಿಕೊಂಡಿದ್ದಾರೆ.

ಅಮ್ಮನಿಂದ ಅದಾನಿಗೆ ಸಿಕ್ಕ ಶಕ್ತಿ

ಎಲ್ಲಾ ಮಕ್ಕಳಿಗೂ ತಾಯಿಯೇ ಮೊದಲ ಗುರು. ಅಂತೆಯೇ ಗೌತಮ್ ಅದಾನಿ ಅವರಿಗೂ ತಾಯಿಯೇ ಮೊದಲು ಗುರು. ಅವರ ಅಮ್ಮನ ಪ್ರಭಾವ ಅಚ್ಚಳಿಯದೇ ಉಳಿದಿದೆ. ಭಾರತದ ಪುರಾಣ ಕಥೆಗಳನ್ನು ಅಮ್ಮನಿಂದ ಕೇಳುತ್ತಾ ಬೆಳೆದವರು ಅದಾನಿ. ಆ ಕಥೆಗಳು ಪಠ್ಯಪುಸ್ತಕಗಳಿಗಿಂತ ಬಹಳ ಉನ್ನತ ಮೌಲ್ಯಗಳನ್ನು ತಂದುಕೊಡುತ್ತವೆ. ತಮಗೆ ಧೈರ್ಯ, ತ್ಯಾಗ, ಕರ್ತವ್ಯ ಮತ್ತು ನಂಬಿಕೆಯ ಬೀಜಗಳು ಬಿತ್ತಿದ್ದು ಅಮ್ಮ ಹೇಳುತ್ತಿದ್ದ ಈ ಕಥೆಗಳೇ ಎಂದು ಅದಾನಿ ಸ್ಮರಿಸಿಕೊಂಡಿದ್ದಾರೆ.

ಸ್ವಂತವಾಗಿ ಏನಾದರೂ ಸಾಧಿಸಬೇಕೆಂಬ ಛಲದಲ್ಲಿ 16ರ ವಯಸ್ಸಿನಲ್ಲಿ ಮನೆ ತೊರೆದು ಮುಂಬೈಗೆ ಹೋಗಿದ್ದು, ಹಾಗು ಅಸ್ಪಷ್ಟ ಭವಿಷ್ಯದ ಜಗತ್ತಿಗೆ ಮಗನನ್ನು ಕಳುಹಿಸಿಕೊಡಲು ತನ್ನ ತಾಯಿ ಅದೆಷ್ಟು ಧೈರ್ಯ ಹೊಂದಿದ್ದಿರಬೇಕು ಎಂದು ಅದಾನಿ ಕೇಳಿದ್ದಾರೆ.

ಇದನ್ನೂ ಓದಿ: ಕೇಂದ್ರದ ಈ ಪ್ರಮುಖ ಹಣಕಾಸು ಯೋಜನೆಗಳಲ್ಲಿ ಮಹಿಳೆಯರೇ ಹೆಚ್ಚು ಫಲಾನುಭವಿಗಳು

ಪತ್ನಿಯನ್ನು ಹೊಗಳಿದ ಅದಾನಿ

ಗೌತಮ್ ಅದಾನಿ ಅವರು ತಮ್ಮ ಪತ್ನಿ ಪ್ರೀತಿ ಅದಾನಿಯನ್ನು ‘ನನ್ನ ಆತ್ಮಸಾಕ್ಷಿಯ ಪಾಲಕಿ’ ಎಂದು ವರ್ಣಿಸಿದ್ದಾರೆ. ದಂತವೈದ್ಯೆಯಾಗಿರುವ ಪ್ರೀತಿ ಅದಾನಿ ಅವರು ಅದಾನಿ ಫೌಂಡೇಶನ್ ಸ್ಥಾಪಿಸಿ 22 ರಾಜ್ಯಗಳಲ್ಲಿ ಶಿಕ್ಷಣ, ಆರೋಗ್ಯ, ಸುಸ್ಥಿರ ಜೀವನ, ಸಮುದಾಯ ಅಭಿವೃದ್ಧಿ ಮೂಲಕ ಕೋಟಿಗೂ ಅಧಿಕ ಜನರ ಬದುಕನ್ನು ಬದಲಿಸಿದ ಶಕ್ತಿಯಾಗಿದ್ದಾರೆ.

ಸೊಸೆಯಂದಿರಿಂದ ಹೊಸ ದೃಷ್ಟಿಕೋನ

ಗೌತಮ್ ಅದಾನಿ ತಮ್ಮ ಇಬ್ಬರು ಸೊಸೆಯಂದಿರಾದ ಪರಿಧಿ ಮತ್ತು ದಿವಾ ಅವರಿಬ್ಬರನ್ನೂ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಪ್ರಶಂಸಿಸಿದ್ದಾರೆ. ಇಬ್ಬರೂ ಕೂಡ ಕುಟುಂಬಕ್ಕೆ ಹೊಸ ದೃಷ್ಟಿಕೋನ ಮತ್ತು ಸಾಧನೆ ತಂದಿದ್ದಾರೆ ಎಂದಿದ್ದಾರೆ. ಪರಿಧಿಯವರು ಒಬ್ಬ ವಕೀಲೆ. ದಿವಾ ಅವರು ಸೃಜನಶೀಲ ವಿನ್ಯಾಸಕಿಯಾಗಿದ್ದು, ವಿಶೇಷ ಚೇತನ ಜನರಿಗೆ ನೆರವಾಗುತ್ತಿದ್ದಾರೆ.

ಅದಾನಿ ಮೇಲೆ ಮೊಮ್ಮಕ್ಕಳ ಪ್ರಭಾವ

ತಮ್ಮ ಮೂವರು ಹೆಣ್ಣು ಮೊಮ್ಮಕ್ಕಳು ತಮಗೆ ಇತ್ತ ಸಂತೋಷವನ್ನು ಅದಾನಿ ಸ್ಮರಿಸಿದ್ದಾರೆ. ಕೆಲಸದ ಒತ್ತಡವನ್ನು ಈ ಹುಡುಗಿಯರಿಂದ ಮರೆಯಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಪಿಎಂ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತಿಂಗಳಿಗೆ 1,000 ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ರಿಟರ್ನ್? ಇಲ್ಲಿದೆ ಲೆಕ್ಕಾಚಾರ

‘ಒಬ್ಬ ಪುರುಷ ತನ್ನ ಜೀವನವನ್ನು ಪೋರ್ಟ್, ಏರ್​​ಪೋರ್ಟ್, ವಿದ್ಯುತ್ ಘಟಕ, ಬ್ಯುಸಿನೆಸ್​ಗಳನ್ನು ಕಟ್ಟಲು ಕಳೆದಿರುತ್ತಾನೆ. ಆದರೆ, ಒಂದು ಮೊಮ್ಮಗು ಬಂದು ತೊಡೆ ಏರಿ ಪೂರ್ಣ ನಂಬಿಕೆಯಿಂದ ಆತನನ್ನು ಕಂಡಾಗ, ಆ ಪುರುಷನಿಗೆ ತಾನೇಕೆ ಕಟ್ಟುತ್ತಿದ್ದೇನೆ ಎಂದು ಬಹಳ ಸ್ಪಷ್ಟವಾಗಿ ಗೊತ್ತಾಗುತ್ತದೆ’ ಎಂದು ಲಿಂಕ್ಡ್​ಇನ್ ಪೋಸ್ಟ್​ನಲ್ಲಿ ಅದಾನಿ ಬರೆದುಕೊಂಡಿದ್ದಾರೆ.

‘ಜೀವನದ ಅತಿ ಭದ್ರ ಬುನಾದಿಯನ್ನು ಯಾವುದೇ ಉಕ್ಕು ಅಥವಾ ಕಾಂಕ್ರೀಟ್​ನಿಂದ ಹಾಕಲಾಗುವುದಿಲ್ಲ. ನಮ್ಮನ್ನು ರೂಪಿಸುವ ಜನರು ಈ ಬುನಾದಿ ನಿರ್ಮಿಸುತ್ತಾರೆ. ನನ್ನ ಪ್ರಯಾಣವನ್ನು ಈ ಜಗತ್ತು ನೆನಪಲ್ಲಿ ಇಟ್ಟುಕೊಳ್ಳುತ್ತದೆ ಎಂದಾದರೆ ಅದು ಇದನ್ನೇ ಎಂದು ಭಾವಿಸುತ್ತೇನೆ’ ಎಂದು ಬಹಳ ಭಾವನಾತ್ಮಕವಾಗಿ ಅದಾನಿ ತಮ್ಮ ಬರಹವನ್ನು ಮುಗಿಸಿದ್ದಾರೆ.

ಗೌತಮ್ ಅದಾನಿ ಅವರ ಲಿಂಕ್ಡ್​ಇನ್ ಪೋಸ್ಟ್​ನ ಲಿಂಕ್ ಇಲ್ಲಿದೆ

Source link

ಮುಸ್ಲಿಂ ವ್ಯಕ್ತಿಯನ್ನು ಲವ್ ಮಾಡಿ ಮತಾಂತರಗೊಂಡ ವಿವಾಹಿತ ಮಹಿಳೆ: ಈಗ ಅಸಲಿ ರೂಪ ತೋರಿಸಿದ ಪತಿ

ಬಾಗಲಕೋಟೆ, ಮಾ.8: ಪ್ರೀತಿಸಿ ಮತಾಂತರಗೊಂಡು ಮದುವೆಯಾದ ಪತಿ ತನಗೆ ಚಿತ್ರಹಿಂಸೆ ನೀಡಿ, ಹಣ ಹಾಗೂ ಬಂಗಾರವನ್ನೆಲ್ಲಾ ದೋಚಿ ಬೀದಿಗೆ ಬಿಟ್ಟಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ಕಚೇರಿ ಎದುರು ಕಣ್ಣೀರು ಹಾಕಿದ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ನಿವಾಸಿಯಾದ ಶ್ರೀದೇವಿ (ಈಗಿನ ಹೆಸರು ಹಬೀಬಾ) ಮೂಲತಃ ಕುರುಬ ಸಮುದಾಯದವರು. 14 ವರ್ಷಗಳ ಹಿಂದೆ ಇವರಿಗೆ ಸ್ವಜಾತಿಯ ವ್ಯಕ್ತಿಯೊಂದಿಗೆ ಮದುವೆಯಾಗಿ ಮಕ್ಕಳಿದ್ದರು. ಆದರೆ, ಮುಧೋಳದಲ್ಲಿ ಕೆಲಸಕ್ಕೆ ಬಂದಾಗ ಮುಸ್ಲಿಂ ಸಮುದಾಯದ ಸವಿಫ್ ಪತ್ತೆ ಎಂಬಾತನ ಪರಿಚಯವಾಗಿತ್ತು. ಸವಿಫ್‌ಗೆ ಈಗಾಗಲೇ ಇಬ್ಬರು ಪತ್ನಿಯರಿದ್ದರೂ, ಶ್ರೀದೇವಿಯವರನ್ನು ಪ್ರೀತಿಸುವುದಾಗಿ ನಂಬಿಸಿ ಮತಾಂತರ ಮಾಡಿದ್ದ ಎನ್ನಲಾಗಿದೆ.

ಸವಿಫ್ ತನ್ನನ್ನು ಬೆದರಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ್ದಾನೆ. ಶ್ರೀದೇವಿ ಎಂಬ ಹೆಸರನ್ನು ‘ಹಬೀಬಾ’ ಎಂದು ಬದಲಿಸಿ, ಫೆಬ್ರವರಿ 7, 2023 ರಂದು ಮುಸ್ಲಿಂ ಪದ್ಧತಿಯಂತೆ ನಿಖಾ ಮಾಡಿಕೊಂಡಿದ್ದ ಎಂದು ಮಹಿಳೆ ತಿಳಿಸಿದ್ದಾರೆ. ಮದುವೆಯಾದ ಕೆಲವು ದಿನಗಳ ನಂತರ ಸವಿಫ್ ತನ್ನ ಅಸಲಿ ರೂಪ ತೋರಿಸಿದ್ದಾನೆ. ತನ್ನ ಬಳಿಯಿದ್ದ 4 ಲಕ್ಷ ರೂಪಾಯಿ ನಗದು ಮತ್ತು 4 ತೊಲೆ ಚಿನ್ನದ ಆಭರಣಗಳನ್ನು ಒಯ್ದು, ಈಗ ಮೊದಲ ಪತ್ನಿ ಜೊತೆ ಸೇರಿಕೊಂಡಿದ್ದಾನೆ. ನನಗೆ ಹೊಡೆದು ಬಡಿದು ಬೀದಿಗೆ ತಳ್ಳಿದ್ದಾನೆ ಎಂದು ಶ್ರೀದೇವಿ ಗೋಳಾಡಿದ್ದಾರೆ.

ಇದನ್ನೂ ಓದಿ: ಹೆಣ್ಮಕ್ಕಳಿಗೆ ಸರ್ಕಾರದಿಂದ ಬಂಪರ್ ಪ್ಯಾಕೇಜ್: ಜನನದಿಂದ ಪದವಿಯವರೆಗೆ ಸಿಗಲಿದೆ 25 ಸಾವಿರ ರೂ.

“ನನಗೆ ಈಗ ಮೊದಲ ಗಂಡನೂ ಇಲ್ಲ, ಎರಡನೇ ಪತಿಯೂ ಕೈಕೊಟ್ಟಿದ್ದಾನೆ. ಮಕ್ಕಳನ್ನು ಕಟ್ಟಿಕೊಂಡು ಎಲ್ಲಿಗೆ ಹೋಗಲಿ?” ಎಂದು ಮಹಿಳೆ ಪ್ರಶ್ನಿಸಿದ್ದಾರೆ. ಮುಧೋಳ ಠಾಣೆಯಲ್ಲಿ ದೂರು ನೀಡಲು ಹೋದರೆ ಸ್ಪಂದಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಮಹಿಳೆಯ ಗೋಳು ಆಲಿಸಿದ ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್, “ಮಹಿಳೆಗೆ ಪತಿಯಿಂದ ಕಿರುಕುಳವಾಗಿರುವ ಬಗ್ಗೆ ದೂರು ಬಂದಿದೆ. ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಮಹಿಳಾ ಠಾಣೆಯ ಮೂಲಕವೂ ಈ ಕೇಸನ್ನು ಪರಿಶೀಲಿಸಲಾಗುವುದು” ಎಂದು ಭರವಸೆ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

T20 World Cup 2026: ಎರಡಂಕಿ ಮೊತ್ತ ದಾಖಲಿಸಿ ಇತಿಹಾಸ ಸೃಷ್ಟಿಸುವ ಹೊಸ್ತಿಲಿನಲ್ಲಿ ಸೂರ್ಯ

Source link

ಸುಡು ಬೇಸಿಗೆಯಲ್ಲಿ ಆರಾಮದಾಯಕವಾಗಿರಲು ಈ ಬಣ್ಣದ ಬಟ್ಟೆಗಳನ್ನು ಧರಿಸುವುದು ಸೂಕ್ತ

ಬೇಸಿಗೆ  (summer) ಈಗಾಗ್ಲೆ ಆರಂಭವಾಗಿದ್ದು, ಸುಡು ಬೇಸಿಗೆಯಲ್ಲಿ ವಾತಾವರಣ ಮಾತ್ರವಲ್ಲ ದೇಹ ಕೂಡ ತುಂಬಾನೆ ಬಿಸಿಯಾಗಿರುತ್ತದೆ. ಈ ತಾಪಮಾಣದ ಕಾರಣದಿಂದಾಗಿ ನಿರ್ಜಲೀಕರಣ, ಆಯಾಸದಂತಹ ಸಮಸ್ಯೆಗಳ ಜೊತೆಗೆ ಕಿರಿಕಿರಿಯೂ ಉಂಟಾಗುತ್ತದೆ. ಈ ಕಿರಿಕಿರಿಯನ್ನು ತಪ್ಪಿಸಿ ಆರಾಮದಾಯಕವಾಗಿರಲು, ಬಿಸಿಲಿನ ತಾಪದಿಂದ ದೇಹವನ್ನು ರಕ್ಷಿಸಿಕೊಳ್ಳಲು ಸೂಕ್ತ ಬಣ್ಣದ ಬಟ್ಟೆಗಳನ್ನು ಧರಿಸುವುದು ತುಂಬಾನೇ ಮುಖ್ಯ. ಹೌದು ಬೇಸಿಗೆಯಲ್ಲಿ ತೀವ್ರವಾದ ಸೂರ್ಯನ ಬೆಳಕು ಮತ್ತು ಶಾಖ ಇರುವುದರಿಂದ ಈ ಸಮಯದಲ್ಲಿ ದೇಹವನ್ನು ತಂಪಾಗಿ ಮತ್ತು ಆರಾಮದಾಯಕವಾಗಿಡಲು ತಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು.

ಬೇಸಿಗೆಯಲ್ಲಿ ಯಾವ ಬಣ್ಣದ ಬಟ್ಟೆಗಳನ್ನು ಧರಿಸುವುದು ಸೂಕ್ತ?

ಪೀಚ್‌ ಬಣ್ಣದ ಬಟ್ಟೆ: ಸೂರ್ಯನ ಕಿರಣಗಳು ಗಾಢ ಬಣ್ಣದ ಬಟ್ಟೆಗಳ ಮೇಲೆ ಬಿದ್ದಾಗ, ನಮ್ಮ ದೇಹವು ಬೆಚ್ಚಗಾಗುತ್ತದೆ. ಕೆಲವೊಮ್ಮೆ ಶಾಖ ತುಂಬಾ ತೀವ್ರವಾಗಿರುವುದರಿಂದ ಚರ್ಮವು ಉರಿಯಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪೀಚ್‌ ಬಣ್ಣದಂತಹ ತಿಳಿ ಬಣ್ಣದ ಬಟ್ಟೆ ಧರಿಸಬೇಕು. ಇದು ಆರಾಮದಾಯಕವಾಗಿರುತ್ತದೆ.

 ಆಕಾಶನೀಲಿ ಬಣ್ಣ: ಬೇಸಿಗೆಯಲ್ಲಿ ಆರಾಮದಾಯಕವಾಗಿರಲು ಆಕಾಶ ನೀಲಿ ಬಣ್ಣದ ಬಟ್ಟೆಗಳನ್ನು ಸಹ ಧರಿಸಬಹುದು.  ಇದು ಸೂರ್ಯನ ಕಿರಣಗಳಿಂದ ನಿಮ್ಮನ್ನು ನೀವು ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮನ್ನು ತಂಪಾಗಿರಿಸುತ್ತದೆ.

ಲ್ಯಾವೆಂಡರ್ ಬಣ್ಣ: ಲ್ಯಾವೆಂಡರ್ ಬಣ್ಣದ ಬಟ್ಟೆಗಳು ಬೆಚ್ಚಗಿನ ಹವಾಮಾನಕ್ಕೆ ಸೂಕ್ತವಾಗಿದೆ. ಈ ಮೃದುವಾದ ಬಣ್ಣವು ಶಾಖದ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತಿಳಿ ಬೂದು ಬಣ್ಣ: ತಿಳಿ ಬೂದು ಬಣ್ಣದ ಬಟ್ಟೆಗಳನ್ನು ಸಹ ಬೇಸಿಗೆಯಲ್ಲಿ ಧರಿಸಬಹುದು, ಏಕೆಂದರೆ ಇದು ನಿಮ್ಮ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ, ಇದು ಬೆವರನ್ನು ಹೀರಿಕೊಳ್ಳುತ್ತದೆ. ಜೊತೆಗೆ  ಬೇಸಿಗೆಯಲ್ಲಿ ಈ ಬಣ್ಣದ ಬಟ್ಟೆಗಳು ನಿಮ್ಮ ದೇಹವನ್ನು ಆರಾಮದಾಯಕವಾಗಿರಿಸುತ್ತದೆ.

ತಿಳಿ ಹಳದಿ ಬಣ್ಣ: ತಿಳಿ ಹಳದಿ ಬಣ್ಣದ ಬಟ್ಟೆಗಳು ಬೇಸಿಗೆಯಲ್ಲಿ ಆರಾಮದಾಯಕವಾಗಿರುತ್ತದೆ. ಈ  ಮೃದುವಾದ ಬಣ್ಣವು ನಿಮ್ಮ ದೇಹವನ್ನು ಸೂರ್ಯನ ಕಿರಣಗಳಿಂದ ರಕ್ಷಿಸುತ್ತದೆ, ದೇಹವನ್ನು ಬಿಸಿಯಾಗದಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಬೇಸಿಗೆಯಲ್ಲಿ ದೇಹ ತಂಪಾಗಿರಿಸಲು ಹಣ್ಣುಗಳನ್ನು ಸೇವನೆ ಮಾಡಲೇಬೇಕು

ಬಿಳಿ ಬಣ್ಣದ ಬಟ್ಟೆ: ಬೇಸಿಗೆಯಲ್ಲಿ ಆರಾಮದಾಯಕವಾಗಿರಲು ನೀವು ಬಿಳಿ ಬಣ್ಣದ ಬಟ್ಟೆಗಳನ್ನೂ ಧರಿಸಬಹುದು. ಬಿಳಿ  ಮತ್ತು ತಿಳಿ ಬಣ್ಣದ ಬಟ್ಟೆಗಳು ಸೂರ್ಯನ ಕಿರಣಗಳನ್ನು ಪ್ರತಿಬಿಂಬಿಸುತ್ತವೆ, ಇವು ಕಡಿಮೆ ಶಾಖವನ್ನು ಹೀರಿಕೊಂಡಾಗ, ದೇಹವು ಕಡಿಮೆ ಬಿಸಿಯಾಗಿರುತ್ತದೆ. ಇದು ಬೆವರುವಿಕೆಯನ್ನು ಕಡಿಮೆ ಮಾಡುತ್ತದೆ.

ಬಣ್ಣ ಮಾತ್ರವಲ್ಲ, ಬಟ್ಟೆಯ ಮೆಟಿರಿಯಲ್ ಸಹ ಮುಖ್ಯ ಪಾತ್ರವಹಿಸುತ್ತದೆ. ಹಾಗಾಗಿ ಈ ಸಮಯದಲ್ಲಿ ಹತ್ತಿ ಬಟ್ಟೆಗಳನ್ನು ಧರಿಸುವುದು ಸೂಕ್ತ. ಹತ್ತಿ ಬಟ್ಟೆ ಬೆವರು ಹೀರಿಕೊಳ್ಳುತ್ತವೆ ಮತ್ತು ದೇಹವನ್ನು ತಂಪಾಗಿರಿಸುತ್ತವೆ.  ನೈಲಾನ್, ಸ್ಯಾಟಿನ್, ಸಿಂಥೆಟಿಕ್, ವೆಲ್ವೆಟ್, ಪಾಲಿಯೆಸ್ಟರ್‌ನಂತಹ ಬಟ್ಟೆಗಳನ್ನು ಧರಿಸಿದರೆ, ಇದರಿಂದ ಬೆವರು ಒಣಗುವುದಿಲ್ಲ, ಇದು ಚರ್ಮವನ್ನು ಜಿಗುಟಾಗಿ ಮಾಡುತ್ತದೆ ಮತ್ತು ತುರಿಕೆ, ಕಿರಿಕಿರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಬೇಸಿಗೆಯಲ್ಲಿ ತಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಸೂಕ್ತ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ugadi Horoscope 2026: ಯುಗಾದಿ ಬಳಿಕ 1 ವರ್ಷ ಈ ಒಂದು ರಾಶಿಗೆ ಸಾಕಷ್ಟು ಅದೃಷ್ಟ ಕೂಡಿಬರಲಿದೆ

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿಯವರು 2026ರ ಪರಾಭವನಾಮ ಸಂವತ್ಸರದಲ್ಲಿ ಮೇಷ ರಾಶಿಯವರಿಗೆ ದೊರೆಯುವ ಫಲಾಫಲಗಳ ಕುರಿತು ವಿಸ್ತೃತ ಮಾಹಿತಿ ನೀಡಿದ್ದಾರೆ. ಮೇಷ ರಾಶಿಯವರಿಗೆ ಇದು ಬಹಳಷ್ಟು ಅನುಕೂಲಕರವಾಗಿರುವ ವರ್ಷವಾಗಿದೆ ಎಂದು ಅವರು ಹೇಳಿದ್ದಾರೆ. ರಾಶ್ಯಾಧಿಪತಿಯಾದ ಕುಜನು ರಾಜ ಮತ್ತು ಮಂತ್ರಿಯಾಗಿರುವುದರಿಂದ ಸಾಕಷ್ಟು ಅದೃಷ್ಟಗಳು ಕೂಡಿಬರಲಿವೆ.

ಗ್ರಹಗಳ ಸ್ಥಾನಗಳು ಮತ್ತು ಪ್ರಭಾವ:

ಗುರು ಗ್ರಹವು ಮೂರನೇ ಮನೆಯಿಂದ ನಾಲ್ಕನೇ ಮನೆಗೆ, ನಂತರ ಅಕ್ಟೋಬರ್‌ನಲ್ಲಿ ಐದನೇ ಮನೆಗೆ ಸಾಗಲಿದೆ. ಶನಿ ಗ್ರಹ 12ನೇ ಮನೆಯಲ್ಲಿ, ರಾಹು 11ರಿಂದ 10ಕ್ಕೆ ಮತ್ತು ಕೇತು ಐದರಿಂದ ನಾಲ್ಕಕ್ಕೆ ಚಲಿಸುತ್ತಿವೆ. ಮೇಷ ರಾಶಿಯ ಅಶ್ವಿನಿ, ಭರಣಿ, ಕೃತಿಕಾ ನಕ್ಷತ್ರದವರಿಗೆ ಸಾಡೇಸಾತಿ ಇದ್ದರೂ, ಅದರ ಪ್ರಭಾವ ಅಷ್ಟಾಗಿ ಇರುವುದಿಲ್ಲ ಎಂದು ಗುರೂಜಿ ತಿಳಿಸಿದ್ದಾರೆ. ರಾಹು 11ನೇ ಮನೆಯಲ್ಲಿ ಉತ್ತಮ ಫಲಿತಾಂಶಗಳನ್ನು ನೀಡಲಿದ್ದು, ವಾಹನ ಖರೀದಿ, ಆರೋಗ್ಯದಲ್ಲಿ ಚೇತರಿಕೆ ಮತ್ತು ಕೆಲಸ ಕಾರ್ಯಗಳಲ್ಲಿ ಶುಭವನ್ನು ತರಲಿದ್ದಾನೆ.

ಆರ್ಥಿಕ ಸ್ಥಿತಿ ಮತ್ತು ವ್ಯಾಪಾರ:

ಈ ವರ್ಷ ಆದಾಯ 11 ಭಾಗಗಳಾಗಿದ್ದರೆ, ವ್ಯಯ 8 ಭಾಗಗಳಾಗಿರಲಿದ್ದು, ಆದಾಯದ ಮೂರು ಭಾಗ ಮಾತ್ರ ಉಳಿಯಲಿದೆ. ಆದಾಗ್ಯೂ, ಆರ್ಥಿಕವಾಗಿ ಉತ್ತಮ ಪ್ರಗತಿ ಕಂಡುಬರುತ್ತದೆ. ವ್ಯವಹಾರಗಳು ಚೆನ್ನಾಗಿರುತ್ತವೆ. ದೀಪಾವಳಿಯ ನಂತರ ಹೊಸ ವ್ಯಾಪಾರ ಆರಂಭಿಸಲು ಮತ್ತು ಭೂಮಿ ಖರೀದಿಸಲು ಉತ್ತಮ ಯೋಗವಿದೆ. ಉದ್ದಿಮೆದಾರರಿಗೆ, ರಸಗೊಬ್ಬರಗಳ ಮಾರಾಟಗಾರರಿಗೆ ಹಾಗೂ ಸೇನಾ ಮತ್ತು ಪೊಲೀಸ್ ಇಲಾಖೆಯಲ್ಲಿರುವವರಿಗೆ ಅದೃಷ್ಟ ಕೂಡಿಬರಲಿದೆ. ಆರ್ಥಿಕ ವಿಷಯಗಳಲ್ಲಿ ಉತ್ತಮ ಫಲಿತಾಂಶಗಳಿದ್ದರೂ, ದುರಾಸೆಯಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಎಚ್ಚರಿಸಲಾಗಿದೆ.

ಆರೋಗ್ಯ ಮತ್ತು ಮಾನಸಿಕ ಸ್ಥಿತಿ:

ಆರೋಗ್ಯದ ವಿಷಯದಲ್ಲಿ ಸಣ್ಣಪುಟ್ಟ ತಲೆನೋವು, ಹೊಟ್ಟೆನೋವು, ಕೈ ಕಾಲು ನೋವುಗಳಂತಹ ಅನಗತ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮಾನಸಿಕವಾಗಿ ಸದೃಢರಾಗಿರಲು ಪ್ರಯತ್ನಿಸಬೇಕು, ಶನಿಯ ವ್ಯಯ ಸ್ಥಾನದ ಪ್ರಭಾವದಿಂದ ಬೇರೆಯವರ ಮಾತುಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಬಾರದು. ಸುಖದ ಭಾಗ 6 ಇದ್ದರೆ, ದುಃಖದ ಭಾಗ 3 ಇರಲಿದೆ.

ವೃತ್ತಿ ಮತ್ತು ಉದ್ಯೋಗ:

ಕೆಲಸ ಕಾರ್ಯಗಳಲ್ಲಿ ಜಯ ಸಿಗಲಿದೆ. ಹಿಡಿದ ಹಠವನ್ನು ಬಿಡದೆ ಮುಂದುವರಿಯಬೇಕು. ರೈತಾಪಿ ವರ್ಗದವರಿಗೆ ಹೊಸ ಕಾನೂನುಗಳು ಮತ್ತು ನಿಬಂಧನೆಗಳಿಂದ ಸಾಕಷ್ಟು ಶುಭವಾಗಲಿದೆ. ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆಗಳಿದ್ದು, ಕೆಲವರಿಗೆ ಸರ್ಕಾರಿ ಉದ್ಯೋಗವೂ ಸಿಗಬಹುದು. ಮಹಿಳೆಯರು, ಸರ್ಕಾರಿ ನೌಕರರು ಮತ್ತು ಉದ್ದಿಮೆದಾರರಿಗೆ ಈ ವರ್ಷ ಉತ್ತಮವಾಗಿರುತ್ತದೆ.

ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!

ಸಂಬಂಧಗಳು ಮತ್ತು ವೈಯಕ್ತಿಕ ಜೀವನ:

ಬಂಧುಗಳಿಂದ ಶತ್ರುತ್ವ ಮತ್ತು ಅನಗತ್ಯ ಅಪವಾದಗಳು ಎದುರಾಗಬಹುದು, ಎಚ್ಚರಿಕೆ ವಹಿಸಬೇಕು. ವಿವಾಹ ವಿಷಯಗಳಲ್ಲಿ ಬಹಳಷ್ಟು ಶುಭವಾಗಲಿದೆ. ಪೂರ್ವಿಕರ ಆಸ್ತಿ ಕಲಹಗಳು ಇತ್ಯರ್ಥವಾಗುವ ಸಾಧ್ಯತೆಗಳಿವೆ. ನೂತನ ಗೃಹ ಯೋಗ ಮತ್ತು ಮಕ್ಕಳ ವಿವಾಹದಲ್ಲೂ ಶುಭಫಲಗಳಿವೆ. ಆದಾಗ್ಯೂ, ವರ್ಷದ ಕೊನೆಯ ಭಾಗದಲ್ಲಿ ಸಣ್ಣಪುಟ್ಟ ಟೆನ್ಷನ್‌ಗಳು ಮತ್ತು ಬೇಕಾದವರ ಅಗಲಿಕೆಯು ದುಃಖವನ್ನುಂಟು ಮಾಡಬಹುದು. ಪಾಲುದಾರಿಕೆಯ ವಿಚಾರದಲ್ಲಿ ಬಹಳಷ್ಟು ಹುಷಾರಾಗಿರುವುದು ಅಗತ್ಯ. ರಾತ್ರಿಯ ಪ್ರಯಾಣ ಅಷ್ಟು ಶುಭಕರವಾಗಿರುವುದಿಲ್ಲ.

ಪರಿಹಾರಗಳು ಮತ್ತು ಶುಭ ದಿನಗಳು:

ಮೇಷ ರಾಶಿಯವರಿಗೆ ಬುಧವಾರ ಮತ್ತು ಶುಕ್ರವಾರಗಳು ಅತ್ಯಂತ ಶುಭದಾಯಕ ದಿನಗಳಾಗಿವೆ. ಕೇಸರಿ ಮತ್ತು ಹಳದಿ ಬಣ್ಣಗಳನ್ನು ಹೆಚ್ಚಾಗಿ ಬಳಸಬೇಕು. ಸಾಧ್ಯವಾದಷ್ಟು ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ವೆಂಕಟೇಶ್ವರನ ದರ್ಶನ ಭಾಗ್ಯ ದೊರೆಯುತ್ತದೆ. ಪ್ರತಿದಿನ “ಓಂ ನಮೋ ಭಗವತೇ ವಾಸುದೇವಾಯ” ಮಂತ್ರವನ್ನು ಜಪಿಸಬೇಕು. 9 ಮತ್ತು 4 ಅದೃಷ್ಟದ ಸಂಖ್ಯೆಗಳಾಗಿವೆ. ಯಾವುದೇ ಕೆಲಸವನ್ನು ಅರ್ಧಕ್ಕೆ ಬಿಡದೆ ಮುಗಿಸಲು ಗುರೂಜಿ ಸಲಹೆ ನೀಡಿದ್ದಾರೆ. ಒಟ್ಟಾರೆಯಾಗಿ, ಈ ವರ್ಷ ಮೇಷ ರಾಶಿಯವರಿಗೆ ಶೇ.60ರಷ್ಟು ಶುಭಫಲಗಳನ್ನು ನೀಡಲಿದೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೆಣ್ಮಕ್ಕಳಿಗೆ ಸರ್ಕಾರದಿಂದ ಬಂಪರ್ ಪ್ಯಾಕೇಜ್: ಜನನದಿಂದ ಪದವಿಯವರೆಗೆ ಸಿಗಲಿದೆ 25 ಸಾವಿರ ರೂ.

ಲಕ್ನೋ, ಮಾ.8: ಉತ್ತರ ಪ್ರದೇಶದ ಹೆಣ್ಣುಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮತ್ತು ಅವರ ಶಿಕ್ಷಣಕ್ಕೆ ಬೆಂಬಲ ನೀಡಲು ಜನನದಿಂದ ಪದವಿ ಪೂರೈಸುವವರೆಗೆ ಸಮಗ್ರ ಹಣಕಾಸಿನ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಘೋಷಿಸಿದ್ದಾರೆ. ಇಂದು (ಮಾ.8) ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ‘ರೋಜ್‌ಗಾರ್ ಸಂಗಮ್’ (Rozgar Sangam) ಪೋರ್ಟಲ್‌ನ ಮೊಬೈಲ್ ಆಪ್ ಬಿಡುಗಡೆ ಮಾಡಿದರು ಮತ್ತು ನೂತನವಾಗಿ ಆಯ್ಕೆಯಾದ ಸೇವಕಿಯರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು.

ಹೆಣ್ಣು ಮಗು ಜನಿಸಿದ ತಕ್ಷಣ ಅಧಿಕೃತ ಜನ್ಮ ನೋಂದಣಿ ವ್ಯವಸ್ಥೆಯಲ್ಲಿ ಹೆಸರು ನೋಂದಾಯಿಸಿದರೆ, ಮಗುವಿನ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗಲಿದೆ. ಹೆಣ್ಣು ಮಗುವಿಗೆ ಅಗತ್ಯವಿರುವ ಎಲ್ಲಾ ಲಸಿಕೆಗಳನ್ನು ಕೊಡಿಸಲು ಸರ್ಕಾರವು ಹಣಕಾಸಿನ ನೆರವು ನೀಡಲಿದೆ.

ಮಗು ಒಂದನೇ ತರಗತಿಗೆ ದಾಖಲಾದಾಗ, 5ನೇ ತರಗತಿ ಪಾಸಾಗಿ ಮುಂದಿನ ತರಗತಿಗೆ ಪ್ರವೇಶ ಪಡೆದಾಗಲೂ ಆರ್ಥಿಕ ನೆರವು ಸಿಗಲಿದೆ. ಹೈಸ್ಕೂಲ್, ಇಂಟರ್ ಮೀಡಿಯಟ್ ಮುಗಿಸಿ ಉನ್ನತ ಶಿಕ್ಷಣ ಅಥವಾ ಇತರ ವೃತ್ತಿಪರ ಶಿಕ್ಷಣಕ್ಕೆ ಸೇರುವವರೆಗೆ ಈ ಪ್ರಕ್ರಿಯೆಯು ಮುಂದುವರಿಯಲಿದೆ.

ಹೆಣ್ಣುಮಕ್ಕಳು ಇನ್ನು ಮುಂದೆ ಯಾರ ಮೇಲೂ ಅವಲಂಬಿತರಾಗಿರುವುದಿಲ್ಲ. ಅವರ ಶಿಕ್ಷಣವನ್ನು ಬೆಂಬಲಿಸಲು ಸರ್ಕಾರವು ಹುಟ್ಟಿನಿಂದ ಪದವಿಯವರೆಗೆ ಸಂಪೂರ್ಣ ಪ್ಯಾಕೇಜ್ ಒದಗಿಸಲಿದೆ” ಎಂದು ಸಿಎಂ ಆದಿತ್ಯನಾಥ್ ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: 1 ರೂಪಾಯಿಯ ನೋಟು ನೀಡಿದ್ರೆ ಬ್ರಾಂಡೆಡ್ ಶೂ: ಮಳಿಗೆ ಮುಂದೆ ಜನಜಂಗುಳಿ, ನಂತರ ಆಗಿದ್ದೇನು?

ಹಣ ಪಾವತಿಯ ಹಂತಗಳು:

ಹಂತ 1 (ಜನನ): ಹೆಣ್ಣು ಮಗು ಜನಿಸಿದಾಗ – ₹5,000.

ಹಂತ 2 (ಲಸಿಕೆ): ಮಗುವಿಗೆ ಒಂದು ವರ್ಷ ತುಂಬಿ, ಎಲ್ಲಾ ಲಸಿಕೆಗಳನ್ನು ಹಾಕಿಸಿದ ನಂತರ – ₹2,000.

ಹಂತ 3 (ಒಂದನೇ ತರಗತಿ): 1ನೇ ತರಗತಿಗೆ ಪ್ರವೇಶ ಪಡೆದಾಗ – ₹3,000.

ಹಂತ 4 (ಆರನೇ ತರಗತಿ): 6ನೇ ತರಗತಿಗೆ ಪ್ರವೇಶ ಪಡೆದಾಗ – ₹3,000.

ಹಂತ 5 (ಒಂಬತ್ತನೇ ತರಗತಿ): 9ನೇ ತರಗತಿಗೆ ಪ್ರವೇಶ ಪಡೆದಾಗ – ₹5,000.

ಹಂತ 6 (ಉನ್ನತ ಶಿಕ್ಷಣ): 10/12ನೇ ತರಗತಿ ಮುಗಿಸಿ ಪದವಿ ಅಥವಾ ಡಿಪ್ಲೊಮಾಗೆ ಸೇರಿದಾಗ – ₹7,000.

ಅರ್ಹತೆಗಳು: ಕುಟುಂಬದ ವಾರ್ಷಿಕ ಆದಾಯ ₹3 ಲಕ್ಷಕ್ಕಿಂತ ಕಡಿಮೆ ಇರಬೇಕು ಮತ್ತು ಒಂದು ಕುಟುಂಬದ ಗರಿಷ್ಠ ಇಬ್ಬರು ಹೆಣ್ಣುಮಕ್ಕಳಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಡುಗಡೆಗೆ ಮುಂಚೆಯೇ ‘ಧುರಂಧರ್ 2’ ಇಂದಾಗಿ ಉಸ್ತಾದ್ ಭಗತ್ ಸಿಂಗ್​​ಗೆ ಕೋಟ್ಯಂತರ ರೂಪಾಯಿ ನಷ್ಟ

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ಮಾರ್ಚ್ 19ಕ್ಕೆ ಬಿಡುಗಡೆ ಆಗಲಿದೆ. ಕಳೆದ ವರ್ಷ ಬಿಡುಗಡೆ ಆಗಿದ್ದ ‘ಧುರಂಧರ್’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಹಾಗಾಗಿ ಸಹಜವಾಗಿಯೇ ಸಿನಿಮಾದ ಎರಡನೇ ಭಾಗದ ಬಗ್ಗೆ ಭಾರಿ ನಿರೀಕ್ಷೆಗಳಿವೆ. ‘ಧುರಂಧರ್ 2’ ಸಿನಿಮಾಕ್ಕೆ ಹೆದರಿ ಹಲವು ಸಿನಿಮಾಗಳು ಬಿಡುಗಡೆ ದಿನಾಂಕ ಬದಲಿಸಿವೆ. ‘ಟಾಕ್ಸಿಕ್’ ಸಿನಿಮಾ ಸಹ ಮಾರ್ಚ್ 19ಕ್ಕೆ ಬಿಡುಗಡೆ ಆಗಲಿತ್ತು, ಆದರೆ ಬಿಡುಗಡೆ ಮುಂದೂಡಲ್ಪಟ್ಟಿತು. ಆದರೆ ‘ಟಾಕ್ಸಿಕ್’ ಮುಂದೂಡಿಕೆ ಬಳಿಕ ಆ ಸ್ಥಾನಕ್ಕೆ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಬಂದಿತ್ತು. ‘ಧುರಂಧರ್ 2’ ಜೊತೆಗೆ ಬಿಡುಗಡೆ ಆಗುವುದು ಆರ್ಥಿಕವಾಗಿ ಅಪಾಯಕಾರಿ ಎಂಬ ಮಾತುಗಳು ಕೇಳಿ ಬಂದಿದ್ದವು. ಅದೀಗ ನಿಜವಾಗಿದೆ. ಸಿನಿಮಾ ಬಿಡುಗಡೆಗೆ ಮುಂಚೆಯೇ ‘ಧುರಂಧರ್ 2’ ಸಿನಿಮಾದಿಂದಾಗಿ ಕೋಟ್ಯಂತರ ರೂಪಾಯಿ ನಷ್ಟವನ್ನು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಅನುಭವಿಸಿದೆ.

ತೆಲುಗಿನ ದೊಡ್ಡ ನಟರ ಸಿನಿಮಾಗಳು ಬಿಡುಗಡೆ ಆಗುವುದಕ್ಕೆ ಒಂದು ದಿನ ಮುಂಚಿತವಾಗಿ ಪ್ರೀಮಿಯರ್ ಶೋ, ಫ್ಯಾನ್ಸ್ ಶೋ, ಬೆನಿಫಿಟ್ ಶೋಗಳನ್ನು ಹಾಕುವುದು ರೂಢಿ. ಈ ಶೋಗಳ ಟಿಕೆಟ್ ಬೆಲೆ ಹೆಚ್ಚಿರುತ್ತದೆ. ಇದರಿಂದ ನಿರ್ಮಾಪಕರಿಗೆ, ಚಿತ್ರಮಂದಿರದವರಿಗೆ ಒಳ್ಳೆಯ ಲಾಭ ಆಗುತ್ತದೆ. ಸಿನಿಮಾ ಕೆಟ್ಟದಾಗಿದ್ದರೂ ಪ್ರೀಮಿಯರ್ ಶೋಗಳಿಂದ ಒಳ್ಳೆಯ ಮೊತ್ತವೇ ಗಳಿಕೆ ಆಗುತ್ತದೆ. ಪವನ್ ಕಲ್ಯಾಣ್ ಅವರ ಈ ಹಿಂದಿನ ಎರಡು ಸಿನಿಮಾಗಳಿಗೆ ಪ್ರೀಮಿಯರ್ ಶೋ ಆಯೋಜಿಸಲಾಗಿದ್ದು, ಒಳ್ಳೆಯ ಮೊತ್ತವನ್ನೇ ಕಲೆಕ್ಟ್ ಮಾಡಲಾಗಿತ್ತು. ಆದರೆ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಕ್ಕೆ ಪ್ರೀಮಿಯರ್ ಶೋ ಅನ್ನು ಪ್ರದರ್ಶಿಸಲಾಗುತ್ತಿಲ್ಲ ಇದಕ್ಕೆ ಕಾರಣ ‘ಧುರಂಧರ್ 2’.

ಮಾರ್ಚ್ 18ರ ರಾತ್ರಿ 10 ಗಂಟೆಗೆ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಪ್ರೀಮಿಯರ್ ಶೋಗಳನ್ನು ನಡೆಸಲು ಯೋಜಿಸಲಾಗಿತ್ತು. ಆದರೆ ಈಗ ಅದನ್ನು ರದ್ದುಗೊಳಿಸುವ ಸಾಧ್ಯತೆ ದಟ್ಟವಾಗಿದೆ. ಮಾರ್ಚ್ 18ರಂದೇ ಸಂಜೆ 5 ಗಂಟೆಗೆ ‘ಧುರಂಧರ್ 2’ ಚಿತ್ರದ ಪ್ರೀಮಿಯರ್ ಶೋಗಳು ಆರಂಭವಾಗಲಿವೆ. ಈ ಚಿತ್ರವು ಸುಮಾರು ನಾಲ್ಕು ಗಂಟೆಗಳ ಸುದೀರ್ಘ ಅವಧಿಯದಾಗಿದೆ. ಹೈದರಾಬಾದ್​​ನಲ್ಲಿಯೂ ಸಹ ‘ಧುರಂಧರ್ 2’ ಪ್ರೀಮಿಯರ್ ಶೋ ದೊಡ್ಡ ಸಂಖ್ಯೆಯಲ್ಲಿ ಆಯೋಜನೆಗೊಂಡಿದೆ.

ಇದನ್ನೂ ಓದಿ:‘ಧುರಂಧರ್ 2’ ಅಡ್ವಾನ್ಸ್ ಬುಕ್ಕಿಂಗ್‌: 24 ಗಂಟೆಯಲ್ಲಿ 8 ಕೋಟಿ ರೂ. ಬೆಲೆಯ ಟಿಕೆಟ್ ಸೇಲ್

ಸತತವಾಗಿ ನಾಲ್ಕು ಗಂಟೆಗಳ ಕಾಲ ಒಂದು ಸಿನಿಮಾವನ್ನು ನೋಡಿದ ಪ್ರೇಕ್ಷಕರು, ತಕ್ಷಣವೇ ಮತ್ತೊಂದು ದೊಡ್ಡ ಸಿನಿಮಾವನ್ನು ನೋಡಲು ಆಸಕ್ತಿ ತೋರುವುದು ಕಷ್ಟ ಎಂಬುದು ವಿತರಕರ ಅಭಿಪ್ರಾಯ. ಅಲ್ಲದೆ, ಮಲ್ಟಿಪ್ಲೆಕ್ಸ್ ಸೇರಿದಂತೆ ಹೆಚ್ಚಿನ ಚಿತ್ರಮಂದಿರಗಳು ‘ಧುರಂಧರ್ 2’ ಚಿತ್ರಕ್ಕೆ ಆದ್ಯತೆ ನೀಡುತ್ತಿರುವುದರಿಂದ, ‘ಉಸ್ತಾದ್ ಭಗತ್ ಸಿಂಗ್’ ಚಿತ್ರಕ್ಕೆ ಹೆಚ್ಚಿನ ಸ್ಕ್ರೀನ್‌ಗಳು ಸಿಗುವುದು ಕಷ್ಟವಾಗಬಹುದು ಹೀಗಾಗಿ ಸಿನಿಮಾದ ಪ್ರೀಮಿಯರ್ ಶೋ ಯೋಜನೆಯನ್ನೇ ನಿರ್ಮಾಪಕರು ಕೈಬಿಟ್ಟಿದ್ದಾರೆ.

ವಿತರಕರ ಸಲಹೆಯ ಮೇರೆಗೆ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ಮಾರ್ಚ್ 18ರ ಪ್ರೀಮಿಯರ್ ಶೋಗಳನ್ನು ಕೈಬಿಟ್ಟು, ಮಾರ್ಚ್ 19ರ ಬೆಳ್ಳಂಬೆಳಿಗ್ಗೆ ‘ಬೆನಿಫಿಟ್ ಶೋ’ಗಳನ್ನು ನಡೆಸಲು ಚಿಂತಿಸುತ್ತಿದೆ. ಚಿತ್ರದ ಬಗ್ಗೆ ಈಗಾಗಲೇ ಒಳ್ಳೆಯ ಕುತೂಹಲ ಇರುವುದರಿಂದ, ನೇರವಾಗಿ ಬಿಡುಗಡೆಯ ದಿನವೇ ಪ್ರದರ್ಶನ ಆರಂಭಿಸುವುದು ಚಿತ್ರದ ಯಶಸ್ಸಿಗೆ ಪೂರಕವಾಗಲಿದೆ ಎಂದು ಚಿತ್ರತಂಡದ ಅಭಿಪ್ರಾಯ. ಎರಡು ದೊಡ್ಡ ಸಿನಿಮಾಗಳ ನಡುವಿನ ಸಂಘರ್ಷವನ್ನು ತಪ್ಪಿಸಲು ಚಿತ್ರತಂಡ ತೆಗೆದುಕೊಂಡ ಈ ನಿರ್ಧಾರ ಜಾಣತನದಿಂದ ಕೂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮೊಬೈಲ್ ಬ್ಯಾನ್ ನಿರ್ಧಾರ ಸರಿಯಲ್ಲ: ಮಾ 12ರಂದು ಕನ್ನಡ ಶಾಲೆಗಳ ಬಂದ್​​ಗೆ ವಾಟಾಳ್​ ನಾಗರಾಜ್​ ಕರೆ ​

ಮೈಸೂರು, ಮಾರ್ಚ್​ 08: ರಾಜ್ಯದಲ್ಲಿ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಸುವುದನ್ನು ನಿಷೇಧಿಸಲಾಗಿದೆ. ತಮ್ಮ 17ನೇ ದಾಖಲೆಯ ಬಜೆಟ್​ ವೇಳೆ ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ ಮಾಡಿದ್ದಾರೆ. ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಬಗ್ಗೆ ಕನ್ನಡಪರ ಹೋರಾಟಗಾರ ವಾಟಾಳ್​ ನಾಗರಾಜ್​ (Vatal Nagaraj) ಪ್ರತಿಕ್ರಿಯಿಸಿದ್ದು, 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬ್ಯಾನ್ ನಿರ್ಧಾರ ಸರಿಯಲ್ಲ. ಸರ್ಕಾರದ ನಡೆಯನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

ಮಕ್ಕಳನ್ನ ಜೈಲಿಗೆ ಹಾಕುವುದಕ್ಕೆ ಆಗುತ್ತಾ? 

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕನ್ನಡಪರ ಹೋರಾಟಗಾರ ವಾಟಾಳ್​ ನಾಗರಾಜ್, ಮನೆಯಲ್ಲಿ ಮಕ್ಕಳು ಅವರ ಅಪ್ಪ, ಅಮ್ಮನ ಮೊಬೈಲ್ ಎತ್ತಿಕೊಂಡು ನೋಡುತ್ತಾರೆ. ಅವರನ್ನು ಏನು ಮಾಡಲು ಆಗುತ್ತೆ, ಜೈಲಿಗೆ ಹಾಕುವುದಕ್ಕೆ ಆಗುತ್ತಾ? ಕೊರೊನಾ ಸಂದರ್ಭದಲ್ಲಿ ಆನ್​ಲೈನ್ ಕ್ಲಾಸ್ ಏಕೆ ಮಾಡುತ್ತಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್: ಸರ್ಕಾರದ ನಡೆಗೆ ಬಿಜೆಪಿ ರಾಜ್ಯಸಭೆ ಸದಸ್ಯ ಮೆಚ್ಚುಗೆ

ಮೊಬೈಲ್ ಜಗತ್ತಿನ ಮಾಹಿತಿ ತಿಳಿಯಲು ವಿದ್ಯಾರ್ಥಿಗಳಿಗೆ ಅನುಕೂಲ. ಮೊಬೈಲ್ ಬ್ಯಾನ್ ಅಥವಾ ಸಾಮಾಜಿಕ ಜಾಲತಾಣ ನಿಷೇಧ ಸರಿಯಲ್ಲ. ಸರ್ಕಾರದ ಈ ಆದೇಶ ಹಿಂಪಡೆಯಬೇಕು ಎಂದು ವಾಟಾಳ್​ ನಾಗರಾಜ್ ಒತ್ತಾಯಿಸಿದ್ದಾರೆ.

ಮಾ.12 ರಂದು ಕನ್ನಡ ಶಾಲೆಗಳ ಬಂದ್​ಗೆ ಕರೆ

ಇನ್ನು ಬಜೆಟ್​ನಲ್ಲಿ ಕನ್ನಡ ಶಾಲೆಗಳ ಕಡೆಗಣನೆ ಹಿನ್ನೆಲೆ ಇದನ್ನ ಖಂಡಿಸಿ ಮಾ.12 ರಂದು ಕನ್ನಡ ಶಾಲೆಗಳ ಬಂದ್​ಗೆ ಕರೆ ನೀಡಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಅವರು, ರಾಜ್ಯಾದ್ಯಂತ ಇರುವ ಕನ್ನಡ ಶಾಲೆಗಳನ್ನು ಬಂದ್ ಮಾಡುತ್ತೇವೆ. ಮೈಸೂರಿನ ಜಯ ಚಾಮರಾಜೇಂದ್ರ ವೃತ್ತದಲ್ಲಿ ಪ್ರತಿಭಟನೆ ಮಾಡುತ್ತೇವೆ. ಇಂಗ್ಲಿಷ್ ಶಾಲೆಗಳಿಗೆ 3900 ಕೋಟಿ ರೂ ಕೊಟ್ಟಿದ್ದೀರಿ. ಕನ್ನಡ ಶಾಲೆಗಳ ಅಭಿವೃದ್ಧಿಗೆ ನಯಾ ಪೈಸೆ ಘೋಷಣೆ ಮಾಡಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Karnataka Budget 2026:16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ! ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ

ಸಿದ್ದರಾಮಯ್ಯ ಕನ್ನಡವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಖಾಸಗಿ ಶಾಲೆಗಳಲ್ಲಿ ಕನ್ನಡ ಮಾಧ್ಯಮವೇ ಇಲ್ಲ. ಕನ್ನಡ ಮಾಧ್ಯಮ ಇರುವುದು ಸರ್ಕಾರಿ ಶಾಲೆಗಳಲ್ಲಿ. ಸರ್ಕಾರಿ ಶಾಲೆ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ಕೊಡಬೇಕಿತ್ತು. ಸರ್ಕಾರದ ಧೋರಣೆಯನ್ನು ನಾನು ಖಂಡಿಸುತ್ತೇನೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಮಾ.12 ರಂದು ಎಲ್ಲಾ ಕನ್ನಡ ಶಾಲೆಗಳ ಬಂದ್ ಮಾಡಲು ವಿವಿಧ ಕನ್ನಡ ಪರ ಸಂಘಟನೆಗಳು ಕೈಜೋಡಿಸಬೇಕು ಎಂದು ಹೇಳಿದ್ದಾರೆ.

ಬಿಜೆಪಿ, ಜೆಡಿಎಸ್​ನಲ್ಲಿ ಇರುವವರು ಭ್ರಷ್ಟರು

ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಸಿದ್ದರಾಮಯ್ಯರನ್ನು ಬಿಟ್ಟರೆ ಉತ್ತಮ ವ್ಯಕ್ತಿ ಯಾರಿದ್ದಾರೆ? ಬಿಜೆಪಿ, ಜೆಡಿಎಸ್​ನಲ್ಲಿ ಇರುವವರು ಭ್ರಷ್ಟರು. ಈಗ ಇರುವವರಲ್ಲಿ ಸಿದ್ದರಾಮಯ್ಯ ಅವರೇ ಉತ್ತಮ ವ್ಯಕ್ತಿ. ಅವರನ್ನ ಕೆಳಗಿಳಿಸುವುದಕ್ಕೆ ಯಾರಿಂದಲೂ ಆಗಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version