Headlines

ಜಿಬಿಎಯ 5 ಪಾಲಿಕೆಗಳ ಚುನಾವಣೆ: ವಾರ್ಡ್ ವಾರು ಅಂತಿಮ ಮೀಸಲಾತಿ ಪ್ರಕಟ

ಬೆಂಗಳೂರು, ಮಾರ್ಚ್​​ 08: ಗ್ರೇಟರ್ ಬೆಂಗಳೂರು ಪ್ರಾಧಿಕಾರ 5 ಪಾಲಿಕೆಗಳ ಚುನಾವಣೆಗೆ ಸಿದ್ಧತೆ ಭರದಿಂದ ನಡೆದಿದ್ದು, ವಾರ್ಡ್ ವಾರು ಅಂತಿಮ ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ. ಒಟ್ಟು 369 ವಾರ್ಡ್​​ಗಳಿಗೆ ನಗರಾಭಿವೃದ್ದಿ ಇಲಾಖೆ ಮೀಸಲಾತಿ ಅಂತಿಮಗೊಳಿಸಿದ್ದು, ಈ ಪೈಕಿ 176 ವಾರ್ಡ್​​ಗಳು ಮಹಿಳೆಯರಿಗೆ ಮೀಸಲಾಗಿವೆ. ಕರಡು ಪಟ್ಟಿಗೆ ಸಾರ್ವಜನಿಕರಿಂದ ವ್ಯಕ್ತವಾಗಿದ್ದ ಸಲಹೆ ಮತ್ತು ಸೂಚನೆಗಳ ಜೊತೆಗೆ ಸರ್ಕಾರದ ಜೊತೆಗೂ ಕೆಲ ವಿಚಾರಗಳನ್ನು ಚರ್ಚಿಸಿ, ಸೂಕ್ತವಾದವುಗಳನ್ನು ಆಯ್ದುಕೊಂಡು ಈ ಅಂತಿಮ ಮೀಸಲಾತಿಯನ್ನು ನಿಗದಿ ಮಾಡಲಾಗಿದೆ. ಮೀಸಲಾತಿ ವಿವರ ಬೆಂಗಳೂರು ಕೇಂದ್ರ…

Read More

ಕೊನೆಗೂ ಹಿಮೋಫಿಲಿಯಾ ಫೀಡಿತರಿಗೆ ಅಂಗವಿಕಲತೆಯಿಂದ ಮುಕ್ತಿ; 57 ಸಾವಿರ ರೂ. ಇಂಜೆಕ್ಷನ್ ಉಚಿತ!

ದಾವಣಗೆರೆ, ಮಾರ್ಚ್​ 08: ಹಿಮೋಫಿಲಿಯಾ ಎಂಬ ವಿರಳ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ರಾಜ್ಯ ಸರ್ಕಾರದಿಂದ ಮಹತ್ವದ ನೆರವು ಲಭ್ಯವಾಗಿದೆ. ಸುಮಾರು 57 ಸಾವಿರ ರೂ. ಮೌಲ್ಯದ ಎಮಿಸಿಜುಮ್ಯಾಬ್ (ಹೆಮ್ಲಿಬ್ರಾ) ಎಂಬ ಇಂಜೆಕ್ಷನ್ ಅನ್ನು ಇದೀಗ ಉಚಿತವಾಗಿ ನೀಡಲಾಗುತ್ತಿದೆ. ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕ ಡಾ. ನಾಗೇಂದ್ರಪ್ಪ ಈ ಯೋಜನೆಗೆ ಚಾಲನೆ ನೀಡಿದರು. ರಕ್ತ ಹೆಪ್ಪುಗಟ್ಟದ ಸಮಸ್ಯೆಯಿಂದ ಗಾಯವಾದಾಗ ಮಾತ್ರ ಚಿಕಿತ್ಸೆ ನೀಡುತ್ತಿದ್ದ ಹಿಂದಿನ ವ್ಯವಸ್ಥೆಗೆ ಬದಲಾಗಿ, ಇದೀಗ ಗಾಯವಾಗುವ ಮೊದಲುಲೇ ತಿಂಗಳಿಗೆ ಒಮ್ಮೆ ಈ ಇಂಜೆಕ್ಷನ್ ನೀಡಲಾಗುತ್ತದೆ….

Read More

ಮೈತ್ರಿ ಪಕ್ಷಗಳ ನಡುವೆ ಲಯ ತಪ್ಪಿದ ತಾಳ ಮೇಳ: ನಾಯಕರ ನಡುವೆ ಇಲ್ವಂತೆ ಸಮನ್ವಯತೆ!

ಬೆಂಗಳೂರು, ಮಾರ್ಚ್​​ 08: ಮೈತ್ರಿ ಪಕ್ಷಗಳಾಗಿರು ಬಿಜೆಪಿ ಮತ್ತು ಜೆಡಿಎಸ್​​ ನಡುವೆ ಹಲವು ವಿಚಾರಗಳಲ್ಲಿ ಸಾಬೀತಾಗಿದ್ದ ಸಮನ್ವಯದ ಕೊರತೆ ಮತ್ತೆ ಸದ್ದು ಮಾಡಿದೆ. ನಿನ್ನೆ ಬಜೆಟ್ ಖಂಡಿಸಿ ಸರ್ಕಾರದ ವಿರುದ್ಧ ಹೋರಾಟದ ವಿಚಾರದಲ್ಲೂ ಉಭಯ ಪಕ್ಷಗಳ ನಾಯಕರ ನಡುವೆ ಒಮ್ಮತ ಇರಲಿಲ್ಲ. ಬಿಜೆಪಿ ಪ್ರತ್ಯೇಕವಾಗಿ ಹೋರಾಟ ನಡೆಸಿರುವ ಬಗ್ಗೆ ಜೆಡಿಎಸ್ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ. ಬಜೆಟ್ ಖಂಡಿಸಿ ನಿನ್ನೆ ವಿಧಾನಸೌಧದಲ್ಲಿ ಚೊಂಬು ಹಿಡಿದು ಬಿಜೆಪಿ ಪ್ರತಿಭಟನೆ ನಡೆಸಿದ್ದರೆ, ಸರ್ಕಾರದ ವಿರುದ್ಧದ ಹೋರಾಟದ ಬಗ್ಗೆ ಬಿಜೆಪಿ ನಾಯಕರು ಯಾವುದೇ…

Read More

Weekly Horoscope: ನಿಮ್ಮ ರಾಶಿಗನುಗುಣವಾಗಿ ಮಾರ್ಚ್ ಎರಡನೇ ವಾರದ ಭವಿಷ್ಯ ತಿಳಿಯಿರಿ

ಇದು 2026ರ ಮಾರ್ಚ್ ನ ಎರಡನೇ ವಾರ. ಕೆಲವು ಗ್ರಹಗಳ ಸಣ್ಣ ಸ್ಥಾನ ಬದಲಾವಣೆಯಿಂದ ಹಾಗೂ ಶುಕ್ರನ ರಾಶಿ ಪರಿವರ್ತನೆಯಿಂದ ಅನೇಕ ಶುಭಗಳು ನಮ್ಮದಾಗಲಿದೆ. ಒತ್ತಡದ ಸ್ಥಿತಿಗಳನ್ನು ನಿರ್ಮಾಣ ಮಾಡಿಕೊಳ್ಳದೇ ಇರುವವಂತೆ ನೋಡಿಕೊಳ್ಳಿ. ​ಮೇಷ: ಈ ವಾರ ನಿಮಗೆ ಮಿಶ್ರಫಲ. ವೃತ್ತಿಯಲ್ಲಿ ಸಣ್ಣಪುಟ್ಟ ಅಡೆತಡೆಗಳು ಎದುರಾಗಬಹುದು, ಆದರೆ ಧೈರ್ಯಗೆಡಬೇಡಿ. ಆರ್ಥಿಕವಾಗಿ ಸಾಧಾರಣ ಸುಧಾರಣೆ ಕಂಡುಬರುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಸ್ನೇಹಿತರ ಬೆಂಬಲ ಸಿಗಲಿದೆ. ಕೋಪ ನಿಯಂತ್ರಿಸುವುದು ಉತ್ತಮ. ​ವೃಷಭ: ಉದ್ಯೋಗದಲ್ಲಿ…

Read More

ಉತ್ತರಾಖಂಡ್: ಮಹಿಳಾ ಟೂರಿಸ್ಟ್​ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಟ್ಯಾಕ್ಸಿ ಡ್ರೈವರ್, ಹೆದರಿ ಕಾಡಿನಲ್ಲಿ ರಾತ್ರಿ ಕಳೆದ ಯುವತಿ

ಉತ್ತರಾಖಂಡ, ಮಾರ್ಚ್ 08: ನೈನಿತಾಲ್​ಗೆ ಪ್ರವಾಸ(Tourism)ಕ್ಕೆಂದು ಬಂದಿದ್ದ ದೆಹಲಿಯ ಯುವತಿ ಮೇಲೆ ಟ್ಯಾಕ್ಸಿ ಡ್ರೈವರ್ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಶುಕ್ರವಾರ ತಡರಾತ್ರಿ ಮಹಿಳೆ ನೈನಿತಾಲ್‌ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಆಕೆಯ ಹೋಗಬೇಕಿದ್ದ ಪ್ರದೇಶದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಬಲ್ದಿಯಾಖಾನ್ ಬಳಿ, ಟ್ಯಾಕ್ಸಿ ಚಾಲಕನೊಬ್ಬ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆ ವಿರೋಧಿಸಿದಾಗ, ಚಾಲಕ ಆಕೆಯ ವಸ್ತುಗಳು ಮತ್ತು ಮೊಬೈಲ್ ಫೋನ್‌ನೊಂದಿಗೆ ಪರಾರಿಯಾಗಿದ್ದಾನೆ. ಈ ಭೀಕರ ಘಟನೆಯಿಂದ ಆಘಾತಕ್ಕೊಳಗಾದ ಮಹಿಳೆ, ಸ್ಥಳೀಯ ಪೊಲೀಸರು…

Read More

ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿ ಸ್ನೇಹಾಗೆ 4 ಕೋಟಿ ರೂ. ಕಾರು ಕೊಟ್ಟ ಅಲ್ಲು ಅರ್ಜುನ್

ಅಲ್ಲು ಅರ್ಜುನ್ (Allu Arjun) ಸಹೋದರ ಮತ್ತು ನಾಯಕ ಅಲ್ಲು ಸಿರೀಶ್ ಮತ್ತು ನಯನಿಕಾ ರೆಡ್ಡಿ ಅವರ ವಿವಾಹ ಸಮಾರಂಭವು ಅದ್ಧೂರಿಯಾಗಿ ನಡೆಯಿತು. ಶುಕ್ರವಾರ (ಮಾರ್ಚ್ 05) ಹೈದರಾಬಾದ್‌ನಲ್ಲಿ ನಡೆದ ಈ ಅದ್ದೂರಿ ವಿವಾಹದಲ್ಲಿ ಎರಡೂ ಕುಟುಂಬ ಸದಸ್ಯರು, ಆಪ್ತರು, ಸ್ನೇಹಿತರು ಮತ್ತು ಅನೇಕ ಚಲನಚಿತ್ರ ಗಣ್ಯರು ಭಾಗವಹಿಸಿದ್ದರು. ವಿಶೇಷವಾಗಿ ಇಡೀ ಮೆಗಾ ಕುಟುಂಬ ಅಲ್ಲು ಸಿರೀಶ್ ಅವರ ಅದ್ದೂರಿ ವಿವಾಹದಲ್ಲಿ ಸಡಗರದಿಂದ ಭಾಗವಹಿಸಿತು. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ….

Read More

ಕೇವಲ 2 ದಿನಗಳಲ್ಲಿ 16 ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾ

ಪರ್ತ್​ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಕಳಪೆ ಪ್ರದರ್ಶನ ಮುಂದುವರೆಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​ನಲ್ಲಿ ಕೇವಲ 198 ರನ್​ಗಳಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಆಸ್ಟ್ರೇಲಿಯಾ ಎರಡನೇ ದಿನದಾಟದಲ್ಲಿ 323 ರನ್​ಗಳಿಸಿ ಆಲೌಟ್ ಆಯಿತು. 125 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ 2ನೇ…

Read More

‘ಧುರಂಧರ್ 2’ ಅಡ್ವಾನ್ಸ್ ಬುಕ್ಕಿಂಗ್‌: 24 ಗಂಟೆಯಲ್ಲಿ 8 ಕೋಟಿ ರೂ. ಬೆಲೆಯ ಟಿಕೆಟ್ ಸೇಲ್

ನಟ ರಣವೀರ್ ಸಿಂಗ್ ಮತ್ತು ನಿರ್ದೇಶಕ ಆದಿತ್ಯ ಧಾರ್ ಕಾಂಬಿನೇಶನ್‌ನ ಬಹುನಿರೀಕ್ಷಿತ ‘ಧುರಂಧರ್ 2’ (Dhurandhar: The Revenge) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಲು ಸಿದ್ಧವಾಗಿದೆ. ಮಾರ್ಚ್ 19ರಂದು ಚಿತ್ರ ವಿಶ್ವದಾದ್ಯಂತ ಬಿಡುಗಡೆ ಆಗಲಿದ್ದು, ಮಾರ್ಚ್ 18ರಂದೇ ಪೇಯ್ಡ್ ಪ್ರೀಮಿಯರ್ ಶೋಗಳು (Dhurandhar 2 Paid Premiere) ನಡೆಯಲಿವೆ. ಶನಿವಾರ (ಮಾರ್ಚ್ 7) ಚಿತ್ರದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಆರಂಭವಾದ ಮುಂಗಡ ಟಿಕೆಟ್ ಬುಕ್ಕಿಂಗ್‌ನಲ್ಲಿ ಈ ಸಿನಿಮಾ ಅಬ್ಬರದ ಸಾಧನೆ ಮಾಡಿದೆ. ಬುಕ್ಕಿಂಗ್ ಆರಂಭವಾದ ಕೇವಲ…

Read More

Womenʼs Day Wishes: ನಿಮ್ಮ ಜೀವನವನ್ನು ಬೆಳಗಿದ ಸ್ತ್ರೀಶಕ್ತಿಗೆ ಈ ರೀತಿ ಮಹಿಳಾ ದಿನದ ಶುಭಾಶಯಗಳನ್ನು ತಿಳಿಸಿ

ಮಹಿಳೆ (Women) ಎಂದರೆ ಶಕ್ತಿ, ಮಹಿಳೆ ಎಂದರೆ ಧೈರ್ಯ, ಮಹಿಳೆ ಎಂದರೆ ಪ್ರೀತಿ, ಮಹಿಳೆ ಎಂದರೆ ಕಾಳಜಿ. ತಾಯಿಯಾಗಿ, ಸಹೋದರಿಯಾಗಿ, ಗೆಳತಿಯಾಗಿ, ಮಡದಿಯಾಗಿ, ಮಗಳಾಗಿ ಪ್ರತಿಯೊಬ್ಬರ ಬದುಕಿನಲ್ಲೂ ಹೆಣ್ಣು ನಿರ್ವಹಿಸುವ ಪಾತ್ರಗಳು ಹಲವು. ಆಕೆ ಜೀವವನ್ನು ನೀಡುವುದರ ಜೊತೆಗೆ ಜೀವನಕ್ಕೆ ಶಕ್ತಿ ತುಂಬುವವಳು. ಜೀವನದಲ್ಲಿ ಸರಿ ದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸುವವಳು. ಈ ಸ್ತ್ರೀ ಶಕ್ತಿಗೆ ಧನ್ಯವಾದ ತಿಳಿಸುವ ಸಲುವಾಗಿ ಪ್ರತಿವರ್ಷ ಮಾರ್ಚ್‌ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಈ ಶುಭ ದಿನ ನಿಮ್ಮ ಜೀವನಕ್ಕೂ…

Read More

ಹಾರ್ದಿಕ್ ಪಾಂಡ್ಯ ಅಂದ್ರೆ ‘ಕ್ಲಚ್’ ಎಂದ ಹಾರ್ದಿಕ್ ಪಾಂಡ್ಯ

T20 World Cup 2026: “ಕ್ಲಚ್ ಅಂದ್ರೆ ಹಾರ್ದಿಕ್ ಪಾಂಡ್ಯ” (Clutch is Hardik Pandya) ಇದನ್ನು ಹೇಳಿದ್ದು ಮತ್ಯಾರೂ ಅಲ್ಲ ಹಾರ್ದಿಕ್ ಪಾಂಡ್ಯ. 2026ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಗೆಲುವಿನ ನಂತರ ಹಾರ್ದಿಕ್ ಪಾಂಡ್ಯ ಸ್ವತಃ ತಮ್ಮನ್ನು ಕ್ಲಚ್ ಆಟಗಾರ ಎಂದು ಕರೆದಿದ್ದಾರೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್​ನ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ 7 ರನ್​ಗಳ ಜಯ ಸಾಧಿಸಿತ್ತು. ಈ ಗೆಲುವಿನಲ್ಲಿ ಹಾರ್ದಿಕ್ ಪಾಂಡ್ಯ ಅವರ…

Read More