ಕೈಯಲ್ಲೊಂದು ಉದ್ಯೋಗ (job) ಇದ್ರೆ ಅದೇನೋ ಧೈರ್ಯ. ಕೆಲಸ ಹೋಗುವ ಸಂದರ್ಭ ಬಂದಾಗ ಎಂತಹರಿಗಾದರೂ ಮುಂದೇನು ಎನ್ನುವ ಪ್ರಶ್ನೆ ಕಾಡುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿಯದ್ದು ಪರಿಸ್ಥಿತಿ ಕೇಳಿದ್ರೆ ನಿಮಗೆ ಅಯ್ಯೋ ಅನಿಸಬಹುದು. ಹೌದು, ವ್ಯಕ್ತಿಯೊಬ್ಬರು ಸ್ಯಾಲರಿ ಹೈಕ್ ಗಾಗಿ ಜಾಬ್ ಬದಲಾಯಿಸಿದ್ದಾರೆ. ಇದಾದ ಬಳಿಕ ಕೆಲಸಕ್ಕೆ ಸೇರಿದ ಮೂರೇ ತಿಂಗಳಲ್ಲೇ ಕಂಪನಿಯಿಂದ (company) ಈ ಉದ್ಯೋಗಿಯನ್ನು ಕೆಲಸದಿಂದ ತೆಗೆದು ಹಾಕಿದೆ. ಉದ್ಯೋಗಿ ರೆಡ್ಡಿಟ್‌ನಲ್ಲಿ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಇಂಡಿಯನ್ ವರ್ಕ್ ಪ್ಲೇಸ್ (r/IndianWorkplace) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಉದ್ಯೋಗಿಯೊಬ್ಬರು ವೃತ್ತಿ ಜೀವನದ ಕುರಿತು ಬರೆದುಕೊಂಡಿದ್ದಾರೆ. ಕೆಲಸಕ್ಕೆ ಸೇರಿದ ಮೂರೇ ತಿಂಗಳಿಗೆ ನನ್ನನ್ನು ಕೆಲಸದಿಂದ ತೆಗೆದು ಹಾಕಲಾಯಿತು ಎಂದು ಶೀರ್ಷಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಈ ಪೋಸ್ಟ್ ನಲ್ಲಿ ನಾನು ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಶೇಕಡಾ 30 ರಷ್ಟು ಸಂಬಳದ ಏರಿಕೆಗೆ ಬೇರೆಂದೂ ಕಂಪನಿಗೆ ಕೆಲಸಕ್ಕೆ ಸೇರಿಕೊಂಡೆ. ಕೆಲಸದ ಕಾರಣಕ್ಕೆ ಬೇರೆ ಕಡೆಗೆ ಸ್ಥಳಾಂತರಗೊಂಡೆ. ವಿಮಾನಗಳು, ಸಾಗಣೆದಾರರು, ಪ್ಯಾಕರ್‌ಗಳು ಮತ್ತು ಬ್ರೋಕರೇಜ್ ಶುಲ್ಕಗಳು ಸೇರಿದಂತೆ ಸ್ಥಳಾಂತರ ಖರ್ಚು ವೆಚ್ಚಗಳನ್ನು ಕಂಪನಿ ನೋಡಿಕೊಂಡಿತ್ತು.
ರೆಡ್ಡಿಟ್ ಪೋಸ್ಟ್ ಇಲ್ಲಿದೆ
Got laid off in 3 months from my job after relocating!
by
u/Dharmocracy0593 in
IndianWorkplace
ಹೊಸ ಪರಿಸರ, ಕಂಪನಿಯ ವಾತಾವರಣಕ್ಕೆ ಹೊಂದಿಕೊಂಡು ಮಾರ್ಕೆಟಿಂಗ್ ಯೋಜನೆಗಳನ್ನು ಸಿದ್ಧಪಡಿಸುತ್ತಿದ್ದೆ. ಹೀಗಿರುವಾಗ ಕೆಲಸಕ್ಕೆ ಸೇರಿದ ಮೂರೇ ತಿಂಗಳಿಗೆ ಕಂಪನಿ ತನ್ನ ಶೇಕಡಾ 15 ರಷ್ಟು ಉದ್ಯೋಗಿ ಗಳನ್ನು ಕೆಲಸದಿಂದ ತೆಗೆದು ಹಾಕುವುದಾಗಿ ತಿಳಿಸಿತು. ಹಿರಿಯ ಇಂಜಿನಿಯರ್‌ಗಳು, ಉನ್ನತ ಸಂಸ್ಥೆಗಳಿಂದ ಹೊಸ ಪದವೀಧರರು, ಅನುಭವಿ ವೃತ್ತಿಪರರು ಸೇರಿದಂತೆ ಅನೇಕರು ಉದ್ಯೋಗ ಕಳೆದುಕೊಂಡರು, ಅವರಲ್ಲಿ ನಾನು ಸೇರಿಕೊಂಡೆ ಎಂದು ಕಹಿ ಅನುಭವ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಅಂದು ಕಾಲೇಜ್ ಫೀಸ್ ಕಟ್ಟಲು ದುಡ್ಡಿಗಾಗಿ ಪರದಾಟ, ಇಂದು ಕೋಟಿ ರೂ ಸಂಪಾದನೆ; ಇದು ಬೆಂಗಳೂರು ಸಾಫ್ಟ್‌ವೇರ್ ಇಂಜಿನಿಯರ್‌ನ ಕಥೆ
ಈ ರೆಡ್ಡಿಟ್ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕೆಲಸದಿಂದ ವಜಾಗೊಳಿಸುವುದು ಹೊಸದೇನಲ್ಲ, ಎಲ್ಲದಕ್ಕೂ ತಯಾರಾಗಿರಬೇಕು ಎಂದಿದ್ದಾರೆ. ಇನ್ನೊಬ್ಬರು, ಇಲ್ಲಿ ನಿಮ್ಮನ್ನು ಮಾತ್ರ ಗುರಿ ಮಾಡಿಲ್ಲ. ನಿಮ್ಮನ್ನು ಸೇರಿಸಿ ಅನೇಕರನ್ನು ಕೆಲಸದಿಂದ ತೆಗೆದು ಹಾಕಿದೆ. ಹೀಗಾಗಿ ನೀವು ಈ ನಿರ್ಧಾರವನ್ನು ಸ್ವೀಕರಿಸಿ ಮುಂದೆ ಸಾಗಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಾವು ಅಂದುಕೊಂಡಂತೆ ಏನು ಆಗಲ್ಲ, ಹೀಗಾಗಿ ಬಂದದ್ದನ್ನು ಸ್ವೀಕರಿಸಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 4:14 pm, Tue, 7 July 26