Headlines

ಬೆಂಗಳೂರಿನಲ್ಲಿ ಜೂ. ಎನ್​ಟಿಆರ್ ನೋಡಲು ಮುಗಿಬಿದ್ದ ಜನ; ಪೊಲೀಸ್ ಲಾಠಿ ಚಾರ್ಜ್

ಟಾಲಿವುಡ್ ನಟ ಜೂನಿಯರ್ ಎನ್​ಟಿಆರ್ (Jr NTR) ಅವರಿಗೆ ಬೆಂಗಳೂರಿನಲ್ಲೂ ಅಭಿಮಾನಿಗಳು ಇದ್ದಾರೆ. ಇಂದು (ಮಾರ್ಚ್ 8) ಮಹಾದೇವಪುರ ಕಿಮ್ಸ್ ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿದ ಏನ್​ಟಿಆರ್ ಅವರನ್ನು ನೋಡಲು ಫ್ಯಾನ್ಸ್ ಮುಗಿಬಿದ್ದರು. ಆಸ್ಪತ್ರೆಯ ಎದುರು ಅಪಾರ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ದರು. ತಮ್ಮ ನೆಚ್ಚಿನ ನಟನನ್ನು ನೋಡಲು ಫ್ಯಾನ್ಸ್ ಮುಗಿಬಿದ್ದರು. ಈ ವೇಳೆ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು. ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು. ಜೂನಿಯರ್ ಎನ್​ಟಿಆರ್ ಅವರನ್ನು ಹತ್ತಿರದಿಂದ ನೋಡಬೇಕು ಎಂಬ…

Read More

Ugadi Horoscope 2026: ಯುಗಾದಿ ವರ್ಷ ಭವಿಷ್ಯ; ಸಿಂಹ ರಾಶಿಗೆ ಈ ವರ್ಷ ಹೇಗಿರಲಿದೆ?

ಡಾ. ಬಸವರಾಜ ಗುರೂಜಿಯವರ ಪ್ರಕಾರ, 2026ರ ಪರಾಭವ ನಾಮ ಸಂವತ್ಸರದ ಯುಗಾದಿಯಲ್ಲಿ ಸಿಂಹ ರಾಶಿಯವರಿಗೆ ಗುರು, ಶನಿ, ರಾಹು, ಕೇತು ಗ್ರಹಗಳ ಸಂಚಾರವು ವಿವಿಧ ಫಲಿತಾಂಶಗಳನ್ನು ನೀಡಲಿದೆ. ವರ್ಷವಿಡೀ ಅಷ್ಟಮ ಶನಿಯ ಪ್ರಭಾವವಿರುತ್ತದೆ. ಆದಾಯ ಆರು ಭಾಗವಿದ್ದರೆ, ಖರ್ಚು ನಾಲ್ಕು ಭಾಗವಿರುತ್ತದೆ. ಆರೋಗ್ಯದ ವಿಚಾರದಲ್ಲಿ 50-50 ಪರಿಸ್ಥಿತಿ ಇರುತ್ತದೆ. ಸುಖ ಮೂರು ಭಾಗ ಹಾಗೂ ದುಃಖ ಏಳು ಭಾಗ ಇರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಯೋಗವಿದೆ. ಮಹಿಳೆಯರಿಗೆ ಅಪೇಕ್ಷಿತ ಕಾರ್ಯಗಳು ಪೂರ್ಣಗೊಳ್ಳುತ್ತವೆ ಮತ್ತು ಅದೃಷ್ಟ ಒಲಿದು ಬರುತ್ತದೆ. ಮಕ್ಕಳ…

Read More

ರಾಜ್ಯದಲ್ಲಿ ಮೂರು ಪ್ರತ್ಯೇಕ ರಸ್ತೆ ಅಪಘಾತಗಳು; ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಬೆಂಗಳೂರು, ಮಾರ್ಚ್​ 08: ಬೆಂಗಳೂರು, ನೆಲಮಂಗಲ ಮತ್ತು ತುಮಕೂರಿನಲ್ಲಿ ಭಾನುವಾರ ಮೂರು ಪ್ರತ್ಯೇಕ ರಸ್ತೆ ಅಪಘಾತಗಳು (Road Accidents) ಸಂಭವಿಸಿದ್ದು, ಒಬ್ಬರು ಮೃತಪಟ್ಟರೆ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂರೂ ಪ್ರಕರಣಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣಗಳು ಸಂಬಂಧಿತ ಠಾಣೆಗಳಲ್ಲಿ ದಾಖಲಾಗಿವೆ. ಕಾರು-ಬೈಕ್ ಮುಖಾಮುಖಿ ಬೆಂಗಳೂರಿನ ಜಯಮಹಲ್ ಮೊದಲನೇ ಕ್ರಾಸ್‌ನಲ್ಲಿ ಇನ್ನೋವಾ ಕಾರು ಚಾಲಕನಿಂದ ಹಿಟ್ ಅಂಡ್ ರನ್ ಘಟನೆ ನಡೆದಿದೆ. ಬೈಕ್‌ಗೆ ಡಿಕ್ಕಿ ಹೊಡೆದ ಕಾರು ಬೈಕ್ ಅನ್ನು ಕೆಲ ದೂರ ಎಳೆದೊಯ್ದಿದೆ. ಪರಿಣಾಮ ಬೈಕ್‌ನಲ್ಲಿದ್ದ ಮಹಿಳೆಗೆ…

Read More

ನೀರಿನ ಟ್ಯಾಂಕಿನಲ್ಲಿ ಮೂವರು ಬಾಲಕಿಯರು ಶವವಾಗಿ ಪತ್ತೆ, ತಂದೆಯೇ ತಳ್ಳಿ ಕೊಂದಿರುವ ಶಂಕೆ

ಕಾಮರೆಡ್ಡಿ, ಮಾರ್ಚ್​ 08: ಮೂವರು ಬಾಲಕಿಯರು ನೀರಿನ ಟ್ಯಾಂಕಿನಲ್ಲಿ ಶವ(Dead Body)ವಾಗಿ ಪತ್ತೆಯಾಗಿರುವ ಘಟನೆ ತೆಲಂಗಾಣದ ಕಾಮರೆಡ್ಡಿಯಲ್ಲಿ ನಡೆದಿದೆ. ತಂದೆಯೇ ಅವರನ್ನು ನೀರಿಗೆ ತಳ್ಳಿರಬಹುದು ಎಂದು ಅನುಮಾನಿಸಲಾಗಿದೆ. ಬಾಲಕಿಯರು ಬೆಳಗ್ಗೆ ಆತನೊಂದಿಗೆ ಹೊರಗೆ ಹೋಗಿದ್ದರು ಮತ್ತು ಮನೆಗೆ ಹಿಂತಿರುಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು 8, 7 ಮತ್ತು 5 ವರ್ಷ ವಯಸ್ಸಿನವರಾಗಿದ್ದು, ಕಾಮರೆಡ್ಡಿ ನಿವಾಸಿಗಳಾಗಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ, ಮಕ್ಕಳು ತಮ್ಮ ತಂದೆಯೊಂದಿಗೆ ಹತ್ತಿರದ ದಿನಸಿ ಅಂಗಡಿಯಿಂದ ತಿಂಡಿ ಖರೀದಿಸಲು ಹೋಗಿದ್ದರು. ಅವರು ಹಲವಾರು ಗಂಟೆಗಳ…

Read More

ಅಸಭ್ಯ ಸಾಹಿತ್ಯಕ್ಕೆ ವಿರೋಧ: ಕ್ಷಮೆ ಕೇಳಿ ರಾತ್ರೋರಾತ್ರಿ ಸಾಂಗ್ ಡಿಲೀಟ್ ಮಾಡಿದ ಬಾದ್​ಶಾ

ಬಾಲಿವುಡ್‌ನ ಖ್ಯಾತ ರ‍್ಯಾಪರ್ ಮತ್ತು ಗಾಯಕ ಆದಿತ್ಯ ಪ್ರತೀಕ್ ಸಿಂಗ್ ಸಿಸೋಡಿಯಾ ಅಲಿಯಾಸ್ ಬಾದ್‌ಶಾ (Badshah) ಅವರ ಹೊಸ ಹಾಡು ‘ಟಟೀರಿ’ (Tateeree) ಈಗ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ. ಈ ಹಾಡಿನ ದೃಶ್ಯಾವಳಿಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಹರಿಯಾಣ ಪೊಲೀಸರು ಗಾಯಕನ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ, ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಗೊಳಿಸುವ ಪ್ರಕ್ರಿಯೆಯನ್ನೂ ಪೊಲೀಸರು ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಾದ್​ಶಾ ಅವರು ಕ್ಷಮೆ ಕೇಳಿದ್ದಾರೆ. ‘ಟಟೀರಿ’ ಹಾಡಿನಲ್ಲಿ ಶಾಲಾ…

Read More

ಕೊಲ್ಲಿ ದೇಶಗಳ ಮೇಲೆ ಇರಾನ್​ನಿಂದ ಮುಂದುವರಿದ ದಾಳಿ; ಕುವೇತ್ ಏರ್​ಪೋರ್ಟ್ ಮೇಲೂ ದಾಳಿ

ನವದೆಹಲಿ, ಮಾರ್ಚ್ 8: ಅಮೆರಿಕದ ನೆಲೆಗಳನ್ನು ಹೊಂದಿರುವ ವಿವಿಧ ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ವೈಮಾನಿಕ ದಾಳಿಗಳನ್ನು (Iran Attacks) ಮುಂದುವರಿಸಿದೆ. ಕುವೇತ್, ಬಹರೇನ್, ಕತಾರ್, ಸೌದಿ ಅರೇಬಿಯಾ, ಯುಎಇ, ಲೆಬನಾನ್ ದೇಶಗಳ ಮೇಲೆ ಇರಾನ್​ನಿಂದ ಡ್ರೋನ್, ಮಿಸೈಲ್​ಗಳಿಂದ ದಾಳಿಗಳಾಗಿವೆ. ನೆರೆಯ ದೇಶಗಳ ಮೇಲೆ ದಾಳಿ ಮಾಡುವುದಿಲ್ಲ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್​ಕಿಯನ್ ಭರವವಸೆ ನೀಡಿದ ಒಂದೇ ದಿನದಲ್ಲಿ ಈ ಸಾಲು ಸಾಲು ದಾಳಿಗಳಾಗಿರುವುದು ಗಮನಾರ್ಹ. ಕುವೇತ್ ಏರ್​ಪೋರ್ಟ್​ನಲ್ಲಿರುವ ಇಂಧನ ಟ್ಯಾಂಕ್​ಗಳನ್ನು ಗುರಿಯಾಗಿಸಿ ಇರಾನ್​ನಿಂದ ಡ್ರೋನ್…

Read More

ಖಾಸಗಿ ದೃಶ್ಯ ಇಟ್ಟುಕೊಂಡು 78 ವರ್ಷದ ವ್ಯಕ್ತಿಗೆ ಮಹಿಳೆ ಬ್ಲ್ಯಾಕ್​​ಮೇಲ್​​: ದೂರು ದಾಖಲು

ಬೆಂಗಳೂರು, ಮಾರ್ಚ್​​ 08: 78 ವರ್ಷದ ವ್ಯಕ್ತಿಯೋರ್ವರನ್ನು ಸಾಮಾಜಿಕ ಜಾಲತಾಣದ ಮೂಲಕ ಪರಿಚಯಿಸಿಕೊಂಡ ಮಹಿಳೆಯೊಬ್ಬಳು ಅವರ ಜೊತೆ ಸ್ನೇಹ ಬೆಳೆಸಿ, ಈಗ ಬ್ಲ್ಯಾಕ್​​ಮೇಲ್​​ ಮಾಡುತ್ತಿರುವ ಆರೋಪ ಬೆಂಗಳೂರಲ್ಲಿ ಕೇಳಿಬಂದಿದೆ. ಸಂತ್ರಸ್ತ ವ್ಯಕ್ತಿಯ ಸೊಸೆ ಈ ಬಗ್ಗೆ ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಮಾರ್ಚ್​​ 3ರಂದೇ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿತ ಮಹಿಳೆ ಮೊದಲು ಫೇಸ್‌ಬುಕ್‌ನಲ್ಲಿ 78 ವರ್ಷದ ವ್ಯಕ್ತಿಯನ್ನು ಸಂಪರ್ಕಿಸಿದ್ದಾಳೆ. ಬಳಿಕ ತನ್ನ…

Read More

ಡಾರ್ಜಿಲಿಂಗ್​​ನಲ್ಲಿ ರಾಷ್ಟ್ರಪತಿ ಮುರ್ಮು ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ, ವರದಿ ಕೇಳಿದ ಗೃಹ ಕಾರ್ಯದರ್ಶಿ

ಕೋಲ್ಕತ್ತಾ, ಮಾರ್ಚ್​ 08: ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi murmu) ಅವರನ್ನು ಸ್ವಾಗತಿಸುವ ಶಿಷ್ಟಾಚಾರದಲ್ಲಿನ ಲೋಪಗಳು, ಡಾರ್ಜಿಲಿಂಗ್​​ನಲ್ಲಿ ನಡೆದ ಅಂತಾರಾಷ್ಟ್ರೀಯ ಸಂತಾಲ್ ಸಮ್ಮೇಳನದ ಸ್ಥಳ ಬದಲಾವಣೆ ಮತ್ತು ಸಂಬಂಧಿತ ವ್ಯವಸ್ಥೆಗಳ ಕುರಿತು ಇಂದು(ಮಾರ್ಚ್​8) ಸಂಜೆ 5 ಗಂಟೆಯ ಒಳಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರವು ಅವರು ಭಾಗವಹಿಸಬೇಕಿದ್ದ ಕಾರ್ಯಕ್ರಮದ ಸ್ಥಳವನ್ನು ಬದಲಾಯಿಸಿದ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ತೀವ್ರ ಅಸಮಾಧಾನ…

Read More

ನ್ಯೂಝಿಲೆಂಡ್ ತಂಡದ ಬಲ, ಭಾರತ ತಂಡದ ಚಿಂತೆ

T20 World Cup 2026: ಟಿ20 ವಿಶ್ವಕಪ್​ನ ಫೈನಲ್ ಮ್ಯಾಚ್​ಗೆ ವೇದಿಕೆ ಸಿದ್ಧವಾಗಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಅತ್ತ ಅಹಮದಾಬಾದ್​ನಲ್ಲಿ ಬ್ಯಾಟಿಂಗ್​ಗೆ ಪೂರಕವಾಗಿರುವ ಪಿಚ್​ ನಿರ್ಮಿಸಿರುವುದು ಬಹಿರಂಗವಾಗಿದೆ. ಹೀಗಾಗಿ ಈ ಮ್ಯಾಚ್​ನಲ್ಲಿ ಭರ್ಜರಿ ಬ್ಯಾಟಿಂಗ್ ನಿರೀಕ್ಷಿಸಬಹುದು. ಈ ನಿರೀಕ್ಷೆಯ ನಡುವೆ ಮತ್ತೊಂದು ಅಂಕಿ ಅಂಶಗಳು ಕೂಡ ಬಹಿರಂಗವಾಗಿದೆ. ಈ ಅಂಕಿ ಅಂಶಗಳು ನ್ಯೂಝಿಲೆಂಡ್ ತಂಡದ ಬಲವಾಗಿದ್ದರೆ, ಭಾರತ ತಂಡದ ಅತೀ ದೊಡ್ಡ ಚಿಂತೆ ಎಂಬುದು…

Read More

‘ಕೇಸ್ ಆದ್ಮೇಲೆ ರಾಜಿಗೆ ಬಂದ ವಿನಯ್ ಗೌಡ’: ಖಡಕ್ ತಿರುಗೇಟು ಕೊಟ್ಟ ಡಾಗ್ ಸತೀಶ್

ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋಗೆ ‘ಮಾರ್ಕ್’ ಸಿನಿಮಾದ ಹಾಡು ಬಳಸಿದ್ದಕ್ಕೆ ಡಾಗ್ ಸತೀಶ್ (Dog Satish) ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ವಿನಯ್ ಗೌಡ, ರಜತ್ ಮುಂತಾದವರು ಸತೀಶ್ ಮೇಲೆ ಗರಂ ಆಗಿದ್ದರು. ಈ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಆ ಬಗ್ಗೆ ಸತೀಶ್ ಮಾತಾಡಿದ್ದಾರೆ. ‘ಸತ್ರೂ ನಾನು ವಿಡಿಯೋ ಡಿಲೀಟ್ ಮಾಡಲ್ಲ. ನಾನು ಇರುವುದೇ ಹೀಗೆ. ತಪ್ಪು ಮಾಡಲ್ಲ. ತಪ್ಪು ಮಾಡಿದ್ದರೆ ನಾನು ಕ್ಷಮೆ ಕೇಳೋಕೆ ರೆಡಿ. ತಪ್ಪು ಮಾಡಿಲ್ಲ ಎಂದರೆ ಅದನ್ನು ಎಲ್ಲಿಯವರೆಗೆ…

Read More