ಜಿಬಿಎಯ 5 ಪಾಲಿಕೆಗಳ ಚುನಾವಣೆ: ವಾರ್ಡ್ ವಾರು ಅಂತಿಮ ಮೀಸಲಾತಿ ಪ್ರಕಟ
ಬೆಂಗಳೂರು, ಮಾರ್ಚ್ 08: ಗ್ರೇಟರ್ ಬೆಂಗಳೂರು ಪ್ರಾಧಿಕಾರ 5 ಪಾಲಿಕೆಗಳ ಚುನಾವಣೆಗೆ ಸಿದ್ಧತೆ ಭರದಿಂದ ನಡೆದಿದ್ದು, ವಾರ್ಡ್ ವಾರು ಅಂತಿಮ ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ. ಒಟ್ಟು 369 ವಾರ್ಡ್ಗಳಿಗೆ ನಗರಾಭಿವೃದ್ದಿ ಇಲಾಖೆ ಮೀಸಲಾತಿ ಅಂತಿಮಗೊಳಿಸಿದ್ದು, ಈ ಪೈಕಿ 176 ವಾರ್ಡ್ಗಳು ಮಹಿಳೆಯರಿಗೆ ಮೀಸಲಾಗಿವೆ. ಕರಡು ಪಟ್ಟಿಗೆ ಸಾರ್ವಜನಿಕರಿಂದ ವ್ಯಕ್ತವಾಗಿದ್ದ ಸಲಹೆ ಮತ್ತು ಸೂಚನೆಗಳ ಜೊತೆಗೆ ಸರ್ಕಾರದ ಜೊತೆಗೂ ಕೆಲ ವಿಚಾರಗಳನ್ನು ಚರ್ಚಿಸಿ, ಸೂಕ್ತವಾದವುಗಳನ್ನು ಆಯ್ದುಕೊಂಡು ಈ ಅಂತಿಮ ಮೀಸಲಾತಿಯನ್ನು ನಿಗದಿ ಮಾಡಲಾಗಿದೆ. ಮೀಸಲಾತಿ ವಿವರ ಬೆಂಗಳೂರು ಕೇಂದ್ರ…