Headlines

ಭಾರತಕ್ಕೆ ದಿಢೀರ್ ಪೆಟ್ರೋಲಿಯಂ ಪೂರೈಕೆ ನಿಂತು ಹೋದರೆ, ಎಷ್ಟು ದಿನಕ್ಕೆ ಆಗುವಷ್ಟು ಪೆಟ್ರೋಲ್ ರಿಸರ್ವ್ ಇದೆ ಗೊತ್ತಾ? – Kannada News | How much petroleum reserves India have, and how many days they last in case of emergency

ನವದೆಹಲಿ, ಫೆಬ್ರುವರಿ 9: ಯೂರೋಪ್ ಸೇರಿದಂತೆ ವಿಶ್ವದ ಪ್ರಮುಖ ದೇಶಗಳು 90 ದಿನಗಳಿಗಾಗುವಷ್ಟು ಪೆಟ್ರೋಲಿಯಂ ಸಂಗ್ರಹದ ಗುರಿ ಹೊಂದಿವೆ. ಅಕಸ್ಮಾತ್ ಜಾಗತಿಕ ಪ್ರಕ್ಷುಬ್ದತೆಯ ಪರಿಸ್ಥಿತಿ ಬಂದು ತೈಲ ಪೂರೈಕೆ ಸ್ಥಗಿತಗೊಂಡರೆ ಕನಿಷ್ಠ 90 ದಿನಗಳಿಗಾಗುವಷ್ಟಾದರೂ ಪೆಟ್ರೋಲ್ ಲಭ್ಯ ಇರಬೇಕು ಎನ್ನುವುದು ಈ ಗುರಿಯ ಉದ್ದೇಶ. ಹಾಗಾದರೆ, ಭಾರತದಲ್ಲಿ ಪೆಟ್ರೋಲಿಯಂ ಸಂಗ್ರಹ (Strategic Petroleum Reserves) ಎಷ್ಟಿದೆ? ಕೇಂದ್ರ ಪೆಟ್ರೋಲಿಯಂ ಸಚಿವರಾದ ಹರ್ದೀಪ್ ಸಿಂಗ್ ಪುರಿ (Hardeep Singh Puri) ಸೋಮವಾರ ರಾಜ್ಯಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ….

Read More

19 ವರ್ಷದ ಯುವತಿಗೂ ಎರಡು ಮಕ್ಕಳ ತಂದೆಗೂ ಲವ್​: ಬಲಿಯಾಗಿದ್ದು 2 ಜೀವ – Kannada News | Mandya Tragedy: Mother, Daughter Die by Suicide Over Teen’s Love Affair with Married Man

ಮೃತ ಮಗಳು ಮತ್ತು ತಾಯಿImage Credit source: Tv9 Kannada ಮಂಡ್ಯ, ಫೆಬ್ರವರಿ 09: 19 ವರ್ಷದ ಯುವತಿ ಮತ್ತು ಎರಡು ಮಕ್ಕಳ ತಂದೆಯ ಪ್ರೇಮ ಪ್ರಕರಣದ ಹಿನ್ನೆಲೆ ಮರ್ಯಾದೆಗೆ ಹೆದರಿ ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಕುಂತಲಾದೇವಿ(46) ಮತ್ತು ಪ್ರಿಯಾಂಕಾ(19) ಮೃತರು. ಪ್ರಿಯಾಂಕಾಳ ಮದುವೆಗೆ ಕುಟುಂಬಸ್ಥರು ಸಿದ್ಧತೆ ನಡೆಸಿದ್ದರು ಎನ್ನಲಾಗಿದ್ದು, ವಿವಾಹಿತ ಪುರುಷನ ಜೊತೆಗಿನ ಆಕೆಯ ಪ್ರೇಮವೇ ಘಟನೆಗೆ ಕಾರಣ…

Read More

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ವಿಳಂಬ: ಸಿಡಿದೆದ್ದ ರೈತರಿಂದ ನಾಳೆ ಬಂದ್‌ಗೆ ಕರೆ – Kannada News | Chitradurga: Bhadra Project Delay Sparks Farmers Bandh Call on February 10

ಭದ್ರಾ ಮೇಲ್ದಂಡೆ ಯೋಜನೆ, ರೈತರಿಂದ ಪ್ರತಿಭಟನೆ ಚಿತ್ರದುರ್ಗ, ಫೆಬ್ರವರಿ 09: ಭದ್ರಾ ಮೇಲ್ದಂಡೆ ಯೋಜನೆ (Upper Bhadra Project) ಬಯಲು ಸೀಮೆಯ ಜನರ ಬಹುಕಾಲದ ಕನಸು. ಆದರೆ ಯೋಜನೆ ಆರಂಭವಾಗಿ ಎರಡು ದಶಕಗಳೇ ಕಳೆಯುತ್ತ ಬಂದರೂ ಯೋಜನೆ ಮಾತ್ರ ಪೂರ್ಣಗೊಂಡಿಲ್ಲ. ಹೀಗಾಗಿ ಕಾದು ಕಾದು ಸಿಡಿದೆದ್ದ ಚಿತ್ರದುರ್ಗದ ರೈತರು ನಾಳೆ ಅಂದರೆ ಫೆಬ್ರವರಿ 10ರಂದು ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳ ಬಂದ್​ಗೆ (Bandh) ಕರೆ ನೀಡಿದ್ದಾರೆ. ಪೂರ್ಣಗೊವಾದ ಯೋಜನೆ  ಚಿತ್ರದುರ್ಗದ ಜನರ ದಶಕಗಳ ಹೋರಾಟದ ಫಲವಾಗಿ ಭದ್ರಾ…

Read More

ದರ್ಶನ್ ಭೇಟಿಗೆ ಪ್ರಯತ್ನಿಸಿದ್ರೂ ಅವಕಾಶ ಸಿಗಲಿಲ್ಲ: ಸತ್ಯ ತೆರೆದಿಟ್ಟ ಗಿಲ್ಲಿ ನಟ – Kannada News | This is why Gilli Nata did not meet Darshan after Bigg Boss Kannada 12

ಕಳೆದ ವರ್ಷ ಬಿಡುಗಡೆ ಆದ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾದಲ್ಲಿ ಗಿಲ್ಲಿ ನಟ (Gilli Nata) ಅವರು ಒಂದು ಪಾತ್ರ ಮಾಡಿದ್ದರು. ಆದರೆ ಆ ಸಿನಿಮಾ ರಿಲೀಸ್ ಆದಾಗ ಗಿಲ್ಲಿ ಅವರು ಬಿಗ್ ಬಾಸ್ ಮನೆಯೊಳಗೆ ಇದ್ದರು. ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು. ಬಿಗ್ ಬಾಸ್ ಮುಗಿದ ಬಳಿಕ ದರ್ಶನ್ (Darshan) ಅವರನ್ನು ಗಿಲ್ಲಿ ನಟ ಭೇಟಿ ಮಾಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆ ಬಗ್ಗೆ ಸ್ವತಃ ಗಿಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ….

Read More

ಪುರುಷ ಹಾಗೂ ಮಹಿಳಾ ತಂಡಗಳ ಹೊಸ ಕೇಂದ್ರ ಒಪ್ಪಂದ ಪಟ್ಟಿ ಪ್ರಕಟಿಸಿದ ಬಿಸಿಸಿಐ – Kannada News | Indian Cricket Player Contracts: BCCI Abolishes A+ Grade, New Men’s and Women’s List

ಟಿ20 ವಿಶ್ವಕಪ್ ನಡುವೆ ಬಿಸಿಸಿಐ (BCCI), ಪುರುಷ ಹಾಗೂ ಮಹಿಳಾ ತಂಡಗಳ ಕೇಂದ್ರ ಒಪ್ಪಂದವನ್ನು ಪ್ರಕಟಿಸಿದೆ. ಅದರಂತೆ ಪುರುಷರ ಕೇಂದ್ರ ಒಪ್ಪಂದ ಪಟ್ಟಿಯಲ್ಲಿ ಒಟ್ಟು 30 ಆಟಗಾರರು ಸೇರಿದ್ದರೆ, ಮಹಿಳೆಯರ ಕೇಂದ್ರ ಒಪ್ಪಂದ ಪಟ್ಟಿಯಲ್ಲಿ 21 ಆಟಗಾರ್ತಿಯರು ಸೇರಿದ್ದಾರೆ. ಆದರೆ ಈ ಬಾರಿ ಗ್ರೇಡ್ ವಿಭಾಗದಲ್ಲಿ ಪ್ರಮುಖ ಬದಲಾವಣೆ ಮಾಡಿರುವ ಬಿಸಿಸಿಐ, A+ ಗ್ರೇಡ್ ಅನ್ನು ರದ್ದುಗೊಳಿಸಿದೆ. ಉಳಿದಂತೆ A,B,C ಗ್ರೇಡ್​ನಲ್ಲಿ 30 ಆಟಗಾರರಿಗೆ ಅವಕಾಶ ನೀಡಲಾಗಿದೆ. ಅದರಂತೆ ಎ ಗ್ರೇಡ್​ನಲ್ಲಿ ಮೂವರು ಆಟಗಾರರು ಸೇರಿದ್ದರೆ, ಬಿ…

Read More

ಪ್ರಧಾನಿ ಮೋದಿ ವಿರುದ್ಧ ಬೆಂಗಳೂರಿನಲ್ಲಿ ಕಾಂಗ್ರೆಸ್ ಫ್ಲೆಕ್ಸ್: ಪೊಲೀಸ್ ದೂರು ದಾಖಲಿಸಿದ ಬಿಜೆಪಿ – Kannada News | BJP Files Police Complaint Over Congress Flex Targeting PM Modi in Bengaluru, Row Over ‘Trump Fear’ Remark

ಬೆಂಗಳೂರು, ಫೆಬ್ರವರಿ 9: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಬೆಂಗಳೂರಿನಲ್ಲಿ ಹಾಕಿದ್ದ ಕೆಲವು ಫ್ಲೆಕ್ಸ್‌ಗಳಿಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಫ್ಲೆಕ್ಸ್‌ಗಳಲ್ಲಿ, ‘ಟ್ರಂಪ್‌ಗೆ ಹೆದರಿದ ಮೋದಿ’ ಮತ್ತು ‘ಚೀನಾಗೆ ಹೆದರಿದ ಮೋದಿ’ ಎಂದು ಫ್ಲೆಕ್ಸ್​​ಗಳಲ್ಲಿ ನಮೂದಿಸಲಾಗಿತ್ತು. ಮೋದಿ ಅವರ ನಡೆಯಿಂದ ದೇಶದ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಂಡಂತಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಫ್ಲೆಕ್ಸ್‌ಗಳ ವಿರುದ್ಧ ಬಿಜೆಪಿ ಆಕ್ರೋಶಗೊಂಡಿದ್ದು, ಪೊಲೀಸ್ ದೂರು ದಾಖಲಿಸಿದೆ. ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಮತ್ತು…

Read More

ಬಗೆದಷ್ಟು ಬಯಲಾಗುತ್ತಿದೆ ಲಕ್ಕುಂಡಿ ರಹಸ್ಯ: ಸಿದ್ಧರ ಗುಹೆಯೊಳಗಿದೆ ಅಪಾರ ಸಂಪತ್ತು? – Kannada News | Lakkundi Nagavi Link: Gadag Hidden Gold, Siddhi Purusha Caves and Ancient Mysteries

ಗದಗ, ಫೆಬ್ರವರಿ 09: ಐತಿಹಾಸಿಕ ಲಕ್ಕುಂಡಿಯಲ್ಲಿ (Lakkundi) ನಿಧಿ ಸಿಕ್ಕ ಬೆನ್ನಲ್ಲೇ ಬಗೆದಷ್ಟು ರಹಸ್ಯಗಳು ಬಯಲಾಗುತ್ತಿವೆ. ಇದೀಗ ನಾಗಾವಿ ಗ್ರಾಮದ ಗುಡ್ಡದಲ್ಲಿನ ನಿಗೂಢ ಗುಹೆಯ ಬಾವಿಗೂ ಲಕ್ಕುಂಡಿಯ ಮುಸುಕಿನ ಬಾವಿಗೆ ಸಂಬಂಧವಿದೆ. ನಾಗಾವಿ ಗುಹೆಯಲ್ಲಿನ ಬಾವಿಯಲ್ಲಿ ವಸ್ತುವೊಂದನ್ನು ತೇಲಿ ಬಿಟ್ಟರೆ ಅದು ಲಕ್ಕುಂಡಿ ಮುಸುಕಿನ ಬಾವಿಗೆ ಹೋಗ್ತಾಯಿತ್ತಂತೆ. ಸಿದ್ಧಿ ಪುರುಷರು ವಾಸವಾಗಿದ್ದ ಗುಹೆಯಲ್ಲಿ ಅಪಾರ ನಿಧಿ ಸಂಪತ್ತಿಗೆ ಹಾವಿನ ಕಾವಲುವಿದೆಯಂತೆ. ಚಿನ್ನದ ನಿಧಿ ಮುಟ್ಟಲು ಬಿಡೋದಿಲ್ಲ. ಇನ್ನೊಂದೆಡೆ ಶತಮಾನಗಳ ಹಿಂದೆ ಆಕಳೊಂದು ಈ ಗುಹೆಯೊಳಗೆ ಹೋಗಿ ಸಿದ್ಧಿ…

Read More

ಎವರಿಒನ್ ವಾಂಟ್ಸ್ ದಿಸ್: ಒಂದೇ ಸಿನಿಮಾದಲ್ಲಿ ಹಲವು ಭಾಷೆ; ಆದರೆ ಡಬ್ಬಿಂಗ್ ಅಲ್ಲ – Kannada News | Everyone Wants This movie getting ready for release in multiple languages

ಈಗ ಬಹುತೇಕ ಸಿನಿಮಾಗಳು ಪ್ಯಾನ್ ಇಂಡಿಯಾ (Pan India) ಮಟ್ಟದಲ್ಲಿ ಬರುತ್ತಿವೆ. ಬೇರೆ ಬೇರೆ ಭಾಷೆಗಳಿಗೆ ಡಬ್ ಮಾಡಲಾಗುತ್ತದೆ. ಆದರೆ ಒಂದೇ ಸಿನಿಮಾದಲ್ಲಿ ಹಲವು ಭಾಷೆ ಬಳಸಿ ಅದನ್ನು ದೇಶಾದ್ಯಂತ ಬಿಡುಗಡೆ ಮಾಡುವ ಪ್ಲ್ಯಾನ್ ಸಿದ್ಧವಾಗಿದೆ. ಹೌದು, ‘ಎವರಿಒನ್ ವಾಂಟ್ಸ್ ದಿಸ್’ (Everyone Wants This) ಸಿನಿಮಾ ತಂಡ ಈ ರೀತಿ ಮಾಡಲು ಸಿದ್ಧವಾಗಿದೆ. ಇತ್ತೀಚೆಗೆ ಈ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು. ಯುವ ಉದ್ಯಮಿ ನೇಹೇಶ್ ಪೋಲ್ ಅವರು ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕೊಡುಗೆ ನೀಡಲು…

Read More

ಮಾಜಿ ಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ಅವರ ಅಪ್ರಕಟಿತ ಪುಸ್ತಕದ ಪ್ರಸಾರದ ಕುರಿತು ಕೇಸ್ ದಾಖಲು – Kannada News | Delhi Police registered FIR over circulation of former Army chief MM Naravane’s unpublished book

ನವದೆಹಲಿ, ಫೆಬ್ರವರಿ 9: ಈ ಬಾರಿಯ ಸಂಸತ್ ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭಾರತದ ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಅಪ್ರಕಟಿತ ಪುಸ್ತಕದ ಸಂಗತಿಗಳನ್ನು ಚರ್ಚಿಸಲು ಅನುಮತಿ ಕೋರಿದ್ದರು. ಅದಕ್ಕೆ ಅನುಮತಿ ಸಿಗದೇ ಇದ್ದಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಇದೀಗ ಎಂ.ಎಂ. ನರವಾಣೆ ಅವರ ಆ ಅಪ್ರಕಟಿತ ಆತ್ಮಚರಿತ್ರೆಯನ್ನು ಪಿಡಿಎಫ್​ ರೂಪದಲ್ಲಿ ಆನ್​ಲೈನ್​ನಲ್ಲಿ ಎಲ್ಲೆಡೆ ಹಂಚಲಾಗುತ್ತಿದೆ ಎಂಬ ಕುರಿತು ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಮಾಜಿ ಸೇನಾ ಮುಖ್ಯಸ್ಥ…

Read More

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; ಉಖ್ರುಲ್‌ನಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ – Kannada News | Fresh violence erupts in Manipur Ukhrul Over 20 Houses Set Ablaze in Litan Village

ಉಖ್ರುಲ್, ಫೆಬ್ರವರಿ 9: ಮಣಿಪುರದಲ್ಲಿ (Manipur) ನೂತನ ಮುಖ್ಯಮಂತ್ರಿಯಾಗಿ ಖೇಮ್ಚಂದ್ ಸಿಂಗ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಉಖ್ರುಲ್ ಜಿಲ್ಲೆಯ ಲಿಟಾನ್ ಗ್ರಾಮದಲ್ಲಿ ತಂಗ್ಕುಲ್ ನಾಗಾ ಸಮುದಾಯಕ್ಕೆ ಸೇರಿದ 20 ಮನೆಗಳಿಗೆ ಕುಕಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ. ಭಾನುವಾರ ತಂಗ್ಕುಲ್ ನಾಗಾ ಮತ್ತು ಕುಕಿ ಸಮುದಾಯಗಳ ನಡುವೆ ಘರ್ಷಣೆಗಳು ಭುಗಿಲೆದ್ದ ನಂತರ ಈ ಗ್ರಾಮದಲ್ಲಿ ಕರ್ಫ್ಯೂ ವಿಧಿಸಲಾಯಿತು. ಆದೇಶದ ಪ್ರಕಾರ, 2 ಸಮುದಾಯಗಳಾದ ತಂಗ್ಖುಲ್ ಮತ್ತು ಕುಕಿ ನಡುವೆ ಶಾಂತಿ ಮತ್ತು ನೆಮ್ಮದಿಗೆ…

Read More