ಹೊಸ ಉದ್ಯಮ ಆರಂಭಿಸಿದ ಗೌತಮ್; ಹೊಸ ಅಧ್ಯಾಯಕ್ಕೆ ನಾಂದಿ
‘ಅಮೃತಧಾರೆ’ ಧಾರಾವಾಹಿಯು ಕಳೆದ ಕೆಲವು ಸಮಯದಿಂದ ನಿಧಾನಗತಿಯಲ್ಲಿ ಸಾಗುತ್ತಿತ್ತು ಎಂದರೂ ತಪ್ಪಾಗಲಾರದು. ಆದರೆ, ಈಗ ಧಾರಾವಾಹಿಯಲ್ಲಿ ಮಹತ್ವದ ಬದಲಾವಣೆ ಮಾಡುವ ಸಮಯ ಬಂದಿದೆ. ಈ ಧಾರಾವಾಹಿಯಲ್ಲಿ ಇಷ್ಟು ದಿನ ಗೌತಮ್ ಉದ್ಯಮ ಮಾಡೋದಾಗಿ ಹೇಳುತ್ತಿದ್ದನು ಮತ್ತು ಅದನ್ನು ಆರಂಭಿಸಿರಲಿಲ್ಲ. ಆದರೆ, ಈಗ ಉದ್ಯಮ ಮಾಡಲು ಆತನು ಸಿದ್ಧನಾಗಿದ್ದಾನೆ. ಎದುರಾಳಿ ಜೊತೆಯೇ ಕೈ ಜೋಡಿಸಿದ್ದಾನೆ. ಕುಟುಂಬದವರೇ ಮಾಡಿದ ಮೋಸದ ಕಾರಣದಿಂದ ಗೌತಮ್ ಸಾಕಷ್ಟು ಬೇಸರ ಮಾಡಿಕೊಂಡಿದ್ದ. ಆತ ಆಸ್ತಿಯನ್ನು ಮಲ ತಮ್ಮನಿಗೆ ಬರೆದುಕೊಟ್ಟಿದ್ದ. ಆದರೂ ಆತನ ದಾಹ ತೀರಿರಲಿಲ್ಲ….