Horoscope Today 02 January: ಇಂದು ಈ ರಾಶಿಯವರ ಮೇಲೆ ಸಕಾರಣದಿಂದ ಒತ್ತಡ ಹೇರುವರು – Kannada News | Horoscope Today in Kannada on 02 January Thursday; Dina Bhavishya Tithi Panchanga Details here
ಮೇಷ ರಾಶಿ: ಅಪವಾದದ ಸಾಧ್ಯತೆ ಇರುವುದರಿಂದ ಮಾತಿನಲ್ಲಿ ಮೌನ ಪಾಲಿಸಿ. ಕೆಲಸಗಳಲ್ಲಿ ಆಸಕ್ತಿ ಕಡಿಮೆಯಾಗಬಹುದು. ಹಣ ಹಾಗೂ ವಸ್ತು ನಷ್ಟದ ಸೂಚನೆ. ವಾಹನದ ದುರಸ್ತಿ ಕಾರ್ಯಗಳಿಗೆ ಖರ್ಚು. ಮಕ್ಕಳ ವರ್ತನೆಗಳು ನಿಮಗೆ ಕಷ್ಟಕೊಡಬಹುದು. ಸ್ನೇಹಸಂಬಂಧ ಗಟ್ಟಿಮಾಡಿಕೊಳ್ಳಲು ಇಷ್ಟವಾಗುವುದು. ಮಕ್ಕಳ ವಿವಾಹದ ಬಗ್ಗೆ ಒಂದೊಂದೇ ಚಿಂತೆ ಆರಂಭವಾಗುವುದು. ಇಂದಿನ ನಿಮ್ಮ ಅಜಾಗರೂಕತೆಯಿಂದ ಹಣವನ್ನು ಕಳೆದುಕೊಳ್ಳುವಿರಿ. ಅನಿವಾರ್ಯ ಕಾರಣದಿಂದ ನೀವು ಅಧಿಕಾರವನ್ನು ವಹಿಸಿಕೊಳ್ಳಬೇಕಾಗಬಹುದು. ದುಃಸ್ವಪ್ನದಿಂದ ಭಯಗೊಳ್ಳುವಿರಿ. ದೂರಪ್ರಯಾಣದಿಂದ ಆಯಾಸ. ಬೋಧನೆ, ಮಾರ್ಗದರ್ಶನದಲ್ಲಿ ಜನರ ವಿಶ್ವಾಸ ಸಿಗುತ್ತದೆ. ಆದಾಯ ಹಂಚಿಕೆಯಲ್ಲಿ ನ್ಯಾಯ…