Headlines

ಕಾರವಾರದ ಕಠಿಣಕೋಣ ಗ್ರಾಮದಲ್ಲಿ ಒಂದೇ ಕಡೆ 6 ಹೆಬ್ಬಾವು ಪತ್ತೆ! ಬೆಚ್ಚಿಬಿದ್ದ ಗ್ರಾಮಸ್ಥರು – Kannada News | Six Giant Pythons Found at One Spot in Karwar’s Kathinkona Village; Forest Officials Rescue Reptiles, Watch video here

ಕಾರವಾರ, ಫೆಬ್ರವರಿ 23: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಠಿಣಕೋಣ ಗ್ರಾಮದಲ್ಲಿ ಒಂದೇ ಕಡೆ ಆರು ಬೃಹತ್ ಗಾತ್ರದ ಹೆಬ್ಬಾವುಗಳು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ವಿಜಯ ತಳೇಕರ ಎಂಬುವವರ ಮನೆಯ ಆವರಣದಲ್ಲಿ ದಾಸ್ತಾನು ಮಾಡಿಟ್ಟಿದ್ದ ವಸ್ತುಗಳ ನಡುವೆ ಅವಿತುಕೊಂಡ ಸ್ಥಿತಿಯಲ್ಲಿ ಹೆಬ್ಬಾವುಗಳು ಇದ್ದವು. ಬೆಳಿಗ್ಗೆ ಮನೆ ಆವರಣದಲ್ಲಿ ಸಂಚರಿಸುವಾಗ ಚಲನವಲನ ಗಮನಿಸಿದ ಮನೆಯವರು ಪರಿಶೀಲನೆ ನಡೆಸಿದ ವೇಳೆ, ಒಂದೇ ಸ್ಥಳದಲ್ಲಿ ಹಲವು ಹೆಬ್ಬಾವುಗಳು ಇರುವುದನ್ನು ಕಂಡು ಬೆಚ್ಚಿಬಿದ್ದರು. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು,…

Read More

80ನೇ ವಯಸ್ಸಿನಲ್ಲಿ 161 ಕಿ.ಮೀ ಪ್ರಯಾಣ ಮಾಡಿ ವೈಭವ್​ನನ್ನು ಭೇಟಿಯಾದ ದಿಗ್ಗಜ ಕ್ರಿಕೆಟಿಗ – Kannada News | 15 Year Old Vaibhav Sooryavanshi’s Viral Moment with Sri Lankan Legend Anura Tennekoon

ಭಾರತ ಎ ತಂಡ ತ್ರಿಕೋನ ಏಕದಿನ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಿದೆ. ಈ ಪ್ರವಾಸಕ್ಕೆ ಭಾರತ ಎ (India A) ತಂಡದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ಅವರನ್ನು ಸಹ ಆಯ್ಕೆ ಮಾಡಲಾಗಿದೆ. ಇದುವರೆಗೆ ಈ ಪ್ರವಾಸದಲ್ಲಿ ವೈಭವ್ ಅವರ ಬ್ಯಾಟಿಂಗ್‌ ಹೆಚ್ಚು ಪರಿಣಾಮಕಾರಿಯಾಗಿರದಿದ್ದರೂ ಅವರ ಆಟವನ್ನು ನೋಡಲು ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳ ಬಳಗ ಹೆಚ್ಚಾಗಿದೆ. ವೈಭವ್​ಗೆ ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ಈ ಅಭಿಮಾನಿಗಳ ಬಳಗದಲ್ಲಿ ಮಾಜಿ ಕ್ರಿಕೆಟಿಗರು, ದಿಗ್ಗಜ…

Read More

RBI Recruitment 2026: RBIನಲ್ಲಿ ನೇಮಕಾತಿ; ದೇಶದ ಅತ್ಯುನ್ನತ ಬ್ಯಾಂಕಿಂಗ್ ಸಂಸ್ಥೆಯಲ್ಲಿ ಕೆಲಸ ಪಡೆಯಲು ಇಲ್ಲಿದೆ ಸುವರ್ಣವಕಾಶ – Kannada News | RBI Junior Engineer Recruitment 2026: Civil/Electrical Engineer Vacancies

ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶಾದ್ಯಂತ ಇರುವ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಜೂನಿಯರ್ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 11 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಇದರಲ್ಲಿ 7 ಜೂನಿಯರ್ ಎಂಜಿನಿಯರ್ (ಸಿವಿಲ್) ಮತ್ತು 4 ಜೂನಿಯರ್ ಎಂಜಿನಿಯರ್ (ಎಲೆಕ್ಟ್ರಿಕಲ್) ಹುದ್ದೆಗಳು ಸೇರಿವೆ. ಎಂಜಿನಿಯರಿಂಗ್ ಪದವೀಧರರಿಗೆ ಕೇಂದ್ರ ಬ್ಯಾಂಕ್‌ನಲ್ಲಿ ವೃತ್ತಿಜೀವನ ಆರಂಭಿಸಲು ಇದೊಂದು ಉತ್ತಮ ಅವಕಾಶವಾಗಿದೆ. ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ: ಈ…

Read More

RCB vs CSK ಪಂದ್ಯಕ್ಕೆ 6 ಆಟಗಾರರು ಅಲಭ್ಯ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳು ಮುಖಾಮುಖಿಯಾಗಲಿದೆ. ಬಹುನಿರೀಕ್ಷಿತ ಈ ಪಂದ್ಯದಿಂದ 6 ಆಟಗಾರರು ಹೊರಗುಳಿಯುವುದು ಬಹುತೇಕ ಖಚಿತವಾಗಿದೆ. ಆ ಆಟಗಾರರು ಯಾರೆಂದರೆ… ಮಹೇಂದ್ರ ಸಿಂಗ್ ಧೋನಿ: ಅಭಿಮಾನಿಗಳ ನೆಚ್ಚಿನ 'ಥಲಾ' ಸ್ನಾಯು ಸೆಳೆತದ (Calf Strain) ಸಮಸ್ಯೆಯಿಂದಾಗಿ ಚೇತರಿಸಿಕೊಳ್ಳುತ್ತಿದ್ದು,  ಹೀಗಾಗಿ ಆರ್​ಸಿಬಿ ವಿರುದ್ಧದ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಮ್ಯಾಥ್ಯೂ ಶಾರ್ಟ್: ಆಸ್ಟ್ರೇಲಿಯಾದ ಆಲ್​ರೌಂಡರ್ ಮ್ಯಾಥ್ಯೂ ಶಾರ್ಟ್ ಹೆಬ್ಬೆರಳು…

Read More

SBI Youth for India Fellowship: SBI ಯೂತ್ ಫಾರ್ ಇಂಡಿಯಾ ಫೆಲೋಶಿಪ್‌ಗೆ ಅರ್ಜಿ ಆಹ್ವಾನ; ತರಬೇತಿಯ ಜೊತೆಗೆ ಆರ್ಥಿಕ ನೆರವು – Kannada News | SBI Youth for India Fellowship: Empowering Rural Development for Young Indians

ಎಸ್‌ಬಿಐ ಫೌಂಡೇಶನ್ ಯೂತ್ ಫಾರ್ ಇಂಡಿಯಾ ಫೆಲೋಶಿಪ್‌ ಎಸ್‌ಬಿಐ ಫೌಂಡೇಶನ್ ಯೂತ್ ಫಾರ್ ಇಂಡಿಯಾ ಫೆಲೋಶಿಪ್‌ನ 13ನೇ ಬ್ಯಾಚ್‌ಗಾಗಿ ನೋಂದಣಿಗಳನ್ನು ಆರಂಭಿಸಿದೆ. ಈ ಫೆಲೋಶಿಪ್‌ ಮೂಲಕ ವಿದ್ಯಾವಂತ ಮತ್ತು ಉತ್ಸಾಹಿ ಯುವಕರಿಗೆ ದೇಶದ ಹಳ್ಳಿಗಳಲ್ಲಿ ಅಭಿವೃದ್ಧಿ ಯೋಜನೆಗಳೊಂದಿಗೆ ನೇರವಾಗಿ ಕೆಲಸ ಮಾಡುವ ಅವಕಾಶ ಸಿಗುತ್ತದೆ. ಆಯ್ಕೆಯಾದ ಫೆಲೋಗಳು ವಿವಿಧ ರಾಜ್ಯಗಳಲ್ಲಿನ ಅನುಭವೀ ಸರ್ಕಾರೇತರ ಸಂಸ್ಥೆಗಳ (NGO) ಜೊತೆಗೆ ಕೈಜೋಡಿಸಿ ಶಿಕ್ಷಣ, ಆರೋಗ್ಯ, ಜೀವನೋಪಾಯ, ಪರಿಸರ ಹಾಗೂ ಮಹಿಳಾ ಸಬಲೀಕರಣ ಮುಂತಾದ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಕಾರ್ಯಕ್ರಮವು ಕೇವಲ…

Read More

ವೈ. ಮಂಜುನಾಥ್​​ ಮತ್ತು ಆಪ್ತರ ಮನೆಗಳ ಮೇಲೆ ಇಡಿ ದಾಳಿ ಕೇಸ್​​: ರೇಡ್​​ ವೇಳೆ ಲಂಚದ ಹಣ ಹಂಚಿಕೆಯ ಲೆಕ್ಕ ಪುಸ್ತಕವೇ ಪತ್ತೆ! – Kannada News | Excise Scam Explodes: ED Recovers ‘Bribe Diary’ and 13.3 Crore Assets in Raids on Commissioner Y Manjunath and Associates

ದಾಳಿ ಬಗ್ಗೆ ಇಡಿ ಮಾಹಿತಿImage Credit source: Tv9 Kannada and ED X Account ಬೆಂಗಳೂರು, ಜೂನ್​​ 25: ಸಚಿವ ಸತೀಶ್ ಜಾರಕಿಹೊಳಿ ಬಾಮೈದ ಮತ್ತು ಬೆಳಗಾವಿ ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಸೇರಿ ಅವರ ಆಪ್ತರ ಮನೆಗಳ ಮೇಲೆ ನಿನ್ನೆ (ಜೂನ್​​ 24) ಜಾರಿ ನಿರ್ದೇಶನಾಲಯದ (Enforcement Directorate) ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಂಗಳೂರು, ಮೈಸೂರು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿರುವ ಒಟ್ಟು 14 ಸ್ಥಳಗಳಲ್ಲಿ ಅಧಿಕಾರಿಗಳಿಂದ ಶೋಧ ಕಾರ್ಯಾಚರಣೆ ನಡೆದಿತ್ತು. ಈ…

Read More

ನನ್ನ ಅತ್ತೆ ಮಕ್ಕಳು ಜೀತಕ್ಕೆ ಇದ್ದರು: ಭಾವುಕವಾಗಿ ಮಾತನಾಡಿದ ದುನಿಯಾ ವಿಜಯ್ – Kannada News | Duniya Vijay talks about his real life experience of Landlord movie story

ದುನಿಯಾ ವಿಜಯ್ ಅಭಿನಯದ ‘ಲ್ಯಾಂಡ್​ಲಾರ್ಡ್’ (Landlord) ಸಿನಿಮಾ ಹಿಟ್ ಆಗಿದೆ. ಈ ಸಿನಿಮಾದಲ್ಲಿ ದುನಿಯಾ ವಿಜಯ್ ಅವರು ಶೋಷಿತ ವರ್ಗದ ಕೊಡಲಿ ರಾಚಯ್ಯ ಎಂಬ ವ್ಯಕ್ತಿಯ ಪಾತ್ರ ಮಾಡಿದ್ದಾರೆ. ಈ ಕುರಿತು ಅವರು ಟಿವಿ9 ಸಂದರ್ಶನದಲ್ಲಿ ಮಾತನಾಡಿದ್ದಾರೆ. ತಮ್ಮ ಪಾತ್ರ ಅಷ್ಟು ಸಹಜವಾಗಿ ಮೂಡಿಬರಲು ಕಾರಣ ಆದ ಅಂಶಗಳು ಏನು ಎಂಬುದನ್ನು ಅವರು ವಿವರಿಸಿದ್ದಾರೆ. ‘ಊರಿನಲ್ಲಿ ನನ್ನ ಅತ್ತೆ ಮಕ್ಕಳು ಜೀತಕ್ಕೆ ಇದ್ದರು. ಅದನ್ನು ನಾನು ನೋಡಿದ್ದೇನೆ. ನಮ್ಮ ಊರಿನಲ್ಲಿ ನಾನು ಆ ಶೋಷಣೆ ನೋಡಿದ್ದೇನೆ. ನಮ್ಮ…

Read More

ಮಾರ್ಕ್, 45, ಡೆವಿಲ್ ಬಂದರೂ ತಗ್ಗಿಲ್ಲ ‘ಧುರಂಧರ್’ ಹವಾ; 21ನೇ ದಿನವೂ 26 ಕೋಟಿ ರೂ. ಗಳಿಕೆ – Kannada News | Dhurandhar box office collection on December 25 amid new releases

ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ (Dhurandhar) ಸಿನಿಮಾ ಬಿಡುಗಡೆ ಆಗಿ 22 ದಿನಗಳು ಕಳೆದಿವೆ. ಈ ಚಿತ್ರ ತೆರೆಕಂಡ ಬಳಿಕ ಸ್ಟಾರ್ ನಟರ ಹಲವು ಸಿನಿಮಾಗಳು ಬಿಡುಗಡೆ ಆದವು. ಹಾಗಿದ್ದರೂ ಕೂಡ ‘ಧುರಂಧರ್’ ಚಿತ್ರದ ಹವಾ ಕಡಿಮೆ ಆಗಿಲ್ಲ. ಇಂದಿಗೂ ಕೂಡ ಈ ಸಿನಿಮಾ ಪ್ರತಿ ದಿನ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿದೆ. ಈಗಾಗಲೇ ಭಾರತದಲ್ಲಿ ಈ ಸಿನಿಮಾದ ಕಲೆಕ್ಷನ್ 633 ಕೋಟಿ ರೂಪಾಯಿ ಕೋಟಿ ಆಗಿದೆ. ಇನ್ನೂ ಹಲವು ದಿನಗಳ ಕಾಲ ಕಲೆಕ್ಷನ್ (Dhurandhar…

Read More

ನನಗೆ ಯಶಸ್ವಿ ವ್ಯಕ್ತಿಗಳೆಂದರೆ ಇಷ್ಟವಿಲ್ಲ; ಅಮೆರಿಕ ಅಧ್ಯಕ್ಷ ಟ್ರಂಪ್​ಗೆ ಸೋತವರ ಸ್ನೇಹವೇ ಖುಷಿಯಂತೆ

ವಾಷಿಂಗ್ಟನ್, ಮಾರ್ಚ್ 28: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸೋತವರೊಂದಿಗೆ ಸುತ್ತಾಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಏಕೆಂದರೆ ಯಶಸ್ವಿ ಜನರು ತಮ್ಮ ಸಾಧನೆಗಳ ಬಗ್ಗೆ ಮಾತನಾಡುವುದನ್ನು ಕೇಳಲು ಅವರಿಗೆ ಇಷ್ಟವಾಗುವುದಿಲ್ಲವಂತೆ. ಇಂದು ಮಿಯಾಮಿಯಲ್ಲಿ ನಡೆದ ಭವಿಷ್ಯದ ಹೂಡಿಕೆ ಉಪಕ್ರಮದಲ್ಲಿ ಮಾತನಾಡಿದ ಟ್ರಂಪ್,”ನಾನು ಯಾವಾಗಲೂ ಸೋತವರೊಂದಿಗೆ ಇರಲು ಇಷ್ಟಪಡುತ್ತೇನೆ. ಏಕೆಂದರೆ ಅದು ನನಗೆ ಉತ್ತಮ ಭಾವನೆ ನೀಡುತ್ತದೆ. ನಾನು ತುಂಬಾ ಯಶಸ್ವಿ ವ್ಯಕ್ತಿಗಳನ್ನು ದ್ವೇಷಿಸುತ್ತೇನೆ. ಅವರ ಜೊತೆಗಿದ್ದರೆ ನೀವು ಅವರ ಯಶಸ್ಸಿನ ಕಥೆಗಳನ್ನು ಕೇಳಬೇಕಾಗುತ್ತದೆ. ಆದರೆ,…

Read More

‘ನಾನು 25 ಬಿ-ಗ್ರೇಡ್ ಚಿತ್ರಗಳಲ್ಲಿ ನಟಿಸಿದ್ದೇನೆ’; ನೊಂದುಕೊಂಡ ನಟಿ

ನಟ-ನಟಿಯರ ಜೀವನ ತುಂಬಾ ಐಷಾರಾಮಿ ಎಂದು ಅನೇಕ ಜನರು ಭಾವಿಸುತ್ತಾರೆ. ಆದರೆ ಅನೇಕರು ಹೋರಾಟಗಳನ್ನು ಎದುರಿಸುತ್ತಾರೆ. ಕೆಲವು ನಟರು ಈ ಹೋರಾಟಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಾರೆ. ಆದರೆ ಇತರರು ಅವುಗಳ ಬಗ್ಗೆ ಮಾತನಾಡುವುದಿಲ್ಲ. ಪ್ರಸಿದ್ಧ ಭೋಜ್‌ಪುರಿ ನಟಿ ಮೊನಾಲಿಸಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಮೊನಾಲಿಸಾ ಅವರ (Monasalisa) ಖ್ಯಾತಿ ಮತ್ತು ಜೀವನಶೈಲಿಯನ್ನು ನೋಡಿ, ಅವರಿಗೆ ಏನೂ ಕೊರತೆಯಿಲ್ಲ ಎಂದು ಹಲವರು ಭಾವಿಸುತ್ತಾರೆ. ಆದರೆ ಅವರು ಹಣಕ್ಕಾಗಿ 25 ಬಿ-ಗ್ರೇಡ್ ಚಿತ್ರಗಳಲ್ಲಿ…

Read More