Headlines

ಪವಿತ್ರಾ ಗೌಡ ಮನೆ ಊಟಕ್ಕೆ ಸಂಪೂರ್ಣ ಬ್ರೇಕ್: ಹೈಕೋರ್ಟ್ ಆದೇಶ – Kannada News | Renuka Swamy case: High court cancels trail court order on Pavithra Gowda home food

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪವಿತ್ರಾ ಗೌಡಗೆ ಹೈಕೋರ್ಟ್​ನಲ್ಲಿ ಹಿನ್ನಡೆ ಆಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಗೌಡ ವಿಶೇಷ ಅನುಮತಿಗಳೊಂದಿಗೆ ಜೈಲಿಗೆ ಮನೆಯಿಂದಲೇ ಊಟ ತರಿಸಿಕೊಳ್ಳುತ್ತಿದ್ದರು. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಪವಿತ್ರಾ ಗೌಡ, ನಾಗರಾಜ್ ಮತ್ತು ಲಕ್ಷ್ಮಣ್ ಅವರುಗಳು ಮನೆಯಿಂದ ಊಟ ತರಿಸಿಕೊಳ್ಳುತ್ತಿದ್ದರು. ಇದೀಗ ಆ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದ್ದು, ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳ ಮನೆ ಊಟಕ್ಕೆ ಬ್ರೇಕ್ ಬಿದ್ದಿದೆ. ಅವರ ಮನೆ…

Read More

ಮಕ್ಕಳ ಮುಂದೆಯೇ ಪತ್ನಿಗೆ ಬೆಂಕಿ ಹಚ್ಚಿ, ಅದೇ ಬೆಂಕಿಗೆ ಮಗಳ ತಳ್ಳಿದ ಪಾಪಿ ತಂದೆ – Kannada News | Man Arrested After Woman Dies in Suspected Domestic Violence Case in Hyderabad

ಹೈದರಾಬಾದ್, ಡಿಸೆಂಬರ್ 26: ಮಕ್ಕಳ ಮುಂದೆಯೇ ತಂದೆಯೊಬ್ಬ ಪತ್ನಿಗೆ ಬೆಂಕಿ(Fire) ಹಚ್ಚಿದ್ದಲ್ಲದೆ ಅದೇ ಬೆಂಕಿಗೆ ಮಗಳನ್ನೂ ತಳ್ಳಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಪತಿ ಬೆಂಕಿ ಹಚ್ಚಿದ ಪರಿಣಾಮ ಮಹಿಳೆಯೊಬ್ಬರು ಸಜೀವ ದಹನಗೊಂಡಿದ್ದಾರೆ. ಮಗಳನ್ನು ಬೆಂಕಿಗೆ ತಳ್ಳಿ ಪರಾರಿಯಾಗಿದ್ದಾನೆ. ಕ್ರಿಸ್‌ಮಸ್‌ಗೆ ಒಂದು ದಿನ ಮೊದಲು ನಗರದ ನಲ್ಲಕುಂಟಾ ಪ್ರದೇಶದಲ್ಲಿ ಈ ಭೀಕರ ಘಟನೆ ನಡೆದಿದೆ. ವೆಂಕಟೇಶ್ ತನ್ನ ಪತ್ನಿ ತ್ರಿವೇಣಿ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 24 ರಂದು, ಮಕ್ಕಳ ಮುಂದೆಯೇ ತ್ರಿವೇಣಿ ಮೇಲೆ ಹಲ್ಲೆ…

Read More

Video: ಭಾರತಕ್ಕೆ ಹೋಲಿಸಿದ್ರೆ ಸ್ವಿಟ್ಜರ್‌ಲ್ಯಾಂಡ್‌ ಬಲು ದುಬಾರಿ; ಕಾಸ್ಟ್ಲಿ ಜೀವನಶೈಲಿ ಬಗ್ಗೆ ವಿವರಿಸಿದ ದಂಪತಿ – Kannada News | Switzerland is very expensive compared to India: Couple explains costly lifestyle

ಹೆಚ್ಚಿನವರಿಗೆ ವಿದೇಶಕ್ಕೆ (foreign) ತೆರಳಬೇಕು ಎನ್ನುವುದಿರುತ್ತದೆ. ಅಲ್ಲೇ ಸೆಟ್ಲ್ ಆಗಬೇಕು ಹೀಗೆ ಸಾಕಷ್ಟು ಆಸೆಗಳಿರುತ್ತವೆ. ಆದರೆ, ಭಾರತಕ್ಕೆ ಹೋಲಿಸಿದ್ರೆ ವಿದೇಶಿ ಜೀವನ ದುಬಾರಿ. ಕೈತುಂಬಾ ಸಂಬಳ ಪಡೆದರೂ ಅಲ್ಲಿನ ಖರ್ಚು ವೆಚ್ಚಗಳು ಅಷ್ಟೇ ದುಬಾರಿಯಾಗಿರುತ್ತದೆ. ಇದೀಗ ಸ್ವಿಟ್ಜರ್‌ಲ್ಯಾಂಡ್‌ನ (Switzerland’s) 7 ಲಕ್ಷ ರೂಪಾಯಿ ಹಾಗೂ ಭಾರತದ 40,000 ರೂ ಆದಾಯವನ್ನು ಹೋಲಿಕೆ ಮಾಡಿದ್ದಾರೆ. ವಿದೇಶದ ಜೀವನಶೈಲಿ ದುಬಾರಿ ಎಂದು ತಮ್ಮ ಅನುಭವವನ್ನು ಹೇಳಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ಇವರ ಮಾತನ್ನು ಒಪ್ಪಿಕೊಂಡಿದ್ದಾರೆ. ಚಂತಾಲ್…

Read More

ಕಲ್ಪಾಕ್ಕಂನಲ್ಲಿ ವಿದ್ಯುತ್ ಬದಲು ಪರಮಾಣು ರಿಯಾಕ್ಟರ್​ನ ಶಾಖ ಬಳಸಿ ಹೈಡ್ರೋಜನ್ ಉತ್ಪಾದಿಸುವ ವಿಶ್ವದ ಮೊದಲ ಘಟಕ – Kannada News | World’s first Hydrogen Plant that uses nuclear reactor heat inaugurated in India

ಬವೇರಿಯಾದಲ್ಲಿರುವ ಪರಮಾಣು ವಿದ್ಯುತ್ ಘಟಕImage Credit source: Getty Images ಚೆನ್ನೈ, ಜೂನ್ 28: ತಮಿಳುನಾಡಿನ ಕಲ್ಪಾಕ್ಕಂನಲ್ಲಿರುವ ಇಂದಿರಾ ಗಾಂಧಿ ಪರಮಾಣು ಸಂಶೋಧನಾ ಕೇಂದ್ರದಲ್ಲಿ (IGCAR) ಭಾರತವು ಜಗತ್ತಿನಲ್ಲೇ ಮೊದಲ ಬಾರಿಗೆ ಪರಮಾಣು ರಿಯಾಕ್ಟರ್‌ನ ಶಾಖವನ್ನು (Nuclear Reactor heat) ಬಳಸಿ ಹೈಡ್ರೋಜನ್ (Hydrogen) ಉತ್ಪಾದಿಸಲಾಗುತ್ತಿದೆ. ಅಣು ಶಕ್ತಿ ಸಂಸ್ಥೆಯಾದ ಡಿಎಇ ಇಂಥದ್ದೊಂದು ಹೈಡ್ರೋಜನ್ ಘಟಕವನ್ನು ಉದ್ಘಾಟಿಸಿದೆ. ಈ ತಂತ್ರಜ್ಞಾನವು ಇಂಧನ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲಾಗಿದೆ. ಸಾಮಾನ್ಯವಾಗಿ ಹೈಡ್ರೋಜನ್ ಉತ್ಪಾದಿಸಲು ವಿದ್ಯುತ್ ಬಳಸುವ ‘ಎಲೆಕ್ಟ್ರೋಲಿಸಿಸ್’ (Electrolysis) ವಿಧಾನವನ್ನು…

Read More

ಕಾಡು ಹಂದಿಗಾಗಿ ಇಟ್ಟಿದ್ದ ದೇಶಿ ಬಾಂಬ್ ಕಚ್ಚಿ ಆನೆ ಮರಿ ದಾರುಣ ಸಾವು – Kannada News | Baby Elephant dies after Accidentally Biting country made bomb in Erode

ಈರೋಡ್, ಜನವರಿ 13: ತಮಿಳುನಾಡಿನ ಈರೋಡ್ ಜಿಲ್ಲೆಯ ಸತ್ಯಮಂಗಲಂ ಹುಲಿ ಅಭಯಾರಣ್ಯದಲ್ಲಿ ದೇಶಿ ನಿರ್ಮಿತ ಬಾಂಬ್ ನುಂಗಿ ಹೆಣ್ಣು ಆನೆ ಮರಿ (Baby Elephant) ಸಾವನ್ನಪ್ಪಿದೆ. ಈ ಹಿನ್ನೆಲೆಯಲ್ಲಿ ರೈತನೊಬ್ಬನನ್ನು ಬಂಧಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಗುಥಿಯಾಲತ್ತೂರ್ ಮೀಸಲು ಅರಣ್ಯಕ್ಕೆ ಗಸ್ತು ತಿರುಗುತ್ತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ 2 ವರ್ಷದ ಆನೆ ಮರಿ ಸತ್ತಿರುವುದನ್ನು ಕಂಡು ಅರಣ್ಯ ಇಲಾಖೆಯ ಪಶುವೈದ್ಯರಿಗೆ ಮಾಹಿತಿ ನೀಡಿದರು. ಆನೆ ಮರಿಯ ಸೊಂಡಿಲು ಮತ್ತು ಬಾಯಿಯಲ್ಲಿ…

Read More

ಮಲಬದ್ಧತೆಯ ಸಮಸ್ಯೆ ಇದ್ಯಾ? ಪ್ರತಿದಿನ ಕಾಡುವ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ರೀತಿ ಮಾಡಿ – Kannada News | Constipation Dangers: Don’t Take It Lightly

ಇಂದಿನ ಜೀವನಶೈಲಿಯಲ್ಲಿ ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು, ಫೈಬರ್ ಕೊರತೆ, ಕಡಿಮೆ ನೀರು ಕುಡಿಯುವುದು, ದೈಹಿಕ ಚಟುವಟಿಕೆಗಳ ಕೊರತೆ ಮತ್ತು ಅಸ್ತವ್ಯಸ್ತ ದಿನಚರಿ ಮಲಬದ್ಧತೆಗೆ (Constipation) ಪ್ರಮುಖ ಕಾರಣಗಳಾಗಿವೆ. ದಿನವಿಡೀ ಕುಳಿತೇ ಕೆಲಸ ಮಾಡುವವರು, ಹೊರಗಿನ ಆಹಾರ ಹೆಚ್ಚು ತಿನ್ನುವವರು ಹಾಗೂ ರಾತ್ರಿ ತಡವಾಗಿ ನಿದ್ರೆ ಮಾಡುವವರಲ್ಲಿ ಈ ಸಮಸ್ಯೆ ಹೆಚ್ಚು ಕಂಡುಬರುತ್ತದೆ. ಪ್ರತಿದಿನ ಈ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಹೊಟ್ಟೆ ಸರಿಯಾಗಿ ಖಾಲಿಯಾಗದಿರುವುದು, ಮಲವಿಸರ್ಜನೆ ವೇಳೆ ಜೋರಾಗಿ ಒತ್ತಡ ಹಾಕಬೇಕಾಗುವುದು, ಹೊಟ್ಟೆ ಭಾರವಾಗಿರುವ ಅನುಭವ, ಗ್ಯಾಸ್ಟ್ರಿಕ್, ಉಬ್ಬರ…

Read More

Snow Removal Job: ಈ ದೇಶದಲ್ಲಿ ಹಿಮ ತೆಗೆಯುವ ಕೆಲಸಗಾಗರಿಗೆ ಸಿಗುತ್ತೆ ಲಕ್ಷಗಳಲ್ಲಿ ಸಂಬಳ! – Kannada News | Canada Snow Removal Jobs: Earn Lakhs! High Salary and Benefits Explained

ಹಿಮ ತೆಗೆಯುವ ಕೆಲಸ ಅಂದರೆ, ಹಿಮದಿಂದ ಆವೃತವಾಗಿರುವ ರಸ್ತೆ, ಮನೆಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಹಿಮದಿಂದ ಮುಕ್ತಗೊಳಿಸುವುದು. ಕೆನಡಾದಲ್ಲಿ ಈ ಕೆಲಸಕ್ಕೆ ಚಳಿಗಾಲದಲ್ಲಿ ಭಾರೀ ಬೇಡಿಕೆಯಿದೆ. ಕೆನಡಾದ ದೈನಂದಿನ ಜೀವನ ಮತ್ತು ಆರ್ಥಿಕತೆಯನ್ನು ನಡೆಸುವಲ್ಲಿ ಹಿಮ ತೆಗೆಯುವ ಕಾರ್ಮಿಕರು ಪ್ರಮುಖ ಪಾತ್ರ ವಹಿಸುತ್ತಾರೆ. ಅದಕ್ಕಾಗಿಯೇ ಸರ್ಕಾರ ಮತ್ತು ಖಾಸಗಿ ಕಂಪನಿಗಳು ಈ ಕೆಲಸಕ್ಕೆ ವಿಶೇಷ ಗಮನ ನೀಡುತ್ತವೆ. ಹಿಮ ತೆಗೆಯುವ ಕೆಲಸ ಉದ್ಯೋಗಿಗಳಿಗೆ ಉತ್ತಮ ಸಂಬಳ ನೀಡುವುದರ ಜೊತೆಗೆ ವಿವಿಧ ಪ್ರಯೋಜನಗಳನ್ನು ನೀಡುತ್ತವೆ. ಯಾವ ಪ್ರದೇಶಗಳಿಗೆ ಹೆಚ್ಚಿನ…

Read More

Welcome To The Jungle: 2000 ಕೋಟಿ ರೂ. ನಕಲಿ ಸಿನಿಮಾ; ಫ್ಲಾಪ್ ನಟ ಅಕ್ಷಯ್ ಕುಮಾರ್ ಪರಿಸ್ಥಿತಿ ಇದು – Kannada News

ಬಾಲಿವುಡ್ ಅಂಗಳದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ‘ವೆಲ್ಕಮ್’ ಸರಣಿಯ ಮೂರನೇ ಚಿತ್ರ ‘ವೆಲ್ಕಮ್ ಟು ದಿ ಜಂಗಲ್’ (Welcome To The Jungle) ಸಿನಿಮಾದ ಅದ್ದೂರಿ ಟ್ರೇಲರ್ ಗುರುವಾರ (ಜೂನ್ 11) ಬಿಡುಗಡೆಯಾಗಿದೆ. 4 ನಿಮಿಷ 10 ಸೆಕೆಂಡ್‌ಗಳ ಈ ಸುದೀರ್ಘ ಟ್ರೇಲರ್ ಪ್ರೇಕ್ಷಕರಿಗೆ ನಗುವಿನ ರಸದೌತಣ ನೀಡುತ್ತಿದ್ದು, ಚಿತ್ರದ ಕ್ರೇಜಿ ಕಥಾಹಂದರವನ್ನು ಬಿಚ್ಚಿಟ್ಟಿದೆ. ಕೊರಿಯೋಗ್ರಾಫರ್ ಹಾಗೂ ನಿರ್ದೇಶಕ ಅಹಮದ್ ಖಾನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. 2000 ಕೋಟಿ ರೂಪಾಯಿ ಬಜೆಟ್​ನ ನಕಲಿ ಸಿನಿಮಾದಲ್ಲಿ ನಟಿಸುವ ಫ್ಲಾಪ್…

Read More

T20 World Cup 2026: ಟಿ20 ವಿಶ್ವಕಪ್​ಗೆ 15 ಸದಸ್ಯರ ಇಂಗ್ಲೆಂಡ್‌ ತಾತ್ಕಾಲಿಕ ತಂಡ ಪ್ರಕಟ – Kannada News | England T20 World Cup 2026 Provisional Squad: Brook Captain, Livingstone Out

ಮುಂದಿನ ವರ್ಷ ಅಂದರೆ 2026 ರ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ (T20 World Cup 2026) ಇಂಗ್ಲೆಂಡ್ ತನ್ನ ತಾತ್ಕಾಲಿಕ ತಂಡವನ್ನು ಪ್ರಕಟಿಸಿದೆ. ತಾತ್ಕಾಲಿಕ ತಂಡ ಎಂದರೆ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಇಂಗ್ಲೆಂಡ್ ಈಗ ಆಯ್ಕೆ ಮಾಡಿರುವ ತಂಡದಲ್ಲಿ ಬದಲಾವಣೆಗಳನ್ನು ಮಾಡುವ ಅವಕಾಶ ಹೊಂದಿರುತ್ತದೆ. ಅಂದರೆ ಟಿ20 ವಿಶ್ವಕಪ್​ಗೆ ಇದೇ ಅಂತಿಮ ತಂಡವಲ್ಲ. ವಾಸ್ತವವಾಗಿ ಐಸಿಸಿ (ICC) ನಿಯಮಗಳ ಪ್ರಕಾರ, ಎಲ್ಲಾ ತಂಡಗಳು ಪಂದ್ಯಾವಳಿಗೆ ಒಂದು ತಿಂಗಳ ಮೊದಲು ತಮ್ಮ ತಂಡಗಳನ್ನು ಘೋಷಿಸಬೇಕು….

Read More

ಬೆಂಗಳೂರಿನಲ್ಲಿ ಬಹುತೇಕ ಹೋಟೆಲ್​ಗಳು​​ ಬಂದ್​​​ ಸಾಧ್ಯತೆ: ಮಾಲೀಕರ ಸಂಘ ಹೇಳಿದ್ದೇನು ನೋಡಿ

ಬೆಂಗಳೂರು, ಮಾರ್ಚ್ 10: ಅಮೆರಿಕ, ಇರಾನ್ ಹಾಗೂ ಇಸ್ರೇಲ್ ಯುದ್ಧದ ಪರಿಣಾಮವಾಗಿ ಎಲ್ಪಿಜಿ ಸಿಲಿಂಡರ್‌ಗಳ ಕೊರತೆ ಬೆಂಗಳೂರಿನ ಹೋಟೆಲ್‌ಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆ ಏಕಾಏಕಿ ಸ್ಥಗಿತಗೊಂಡಿದ್ದು, ಮಾರ್ಚ್ 10 ರಂದು ನಗರದ ಹಲವು ಹೋಟೆಲ್‌ಗಳು ಮುಚ್ಚುವ ಸಾಧ್ಯತೆ ದಟ್ಟವಾಗಿದೆ. ಎಲ್ಪಿಜಿ ಕೊರತೆಯಿಂದಾಗಿ ಹೋಟೆಲ್‌ಗಳಲ್ಲಿ ಕಾಫಿ, ಟೀ, ಉಪಹಾರ ಮತ್ತು ಊಟ ಲಭ್ಯವಾಗುವುದು ಅನುಮಾನ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ. ಗ್ಯಾಸ್ ಸಿಲಿಂಡರ್ ಇಲ್ಲದೆ ಹೋಟೆಲ್ ನಡೆಸಲು ಅಸಾಧ್ಯ ಎಂದು ಹೋಟೆಲ್ ಮಾಲೀಕರ…

Read More