ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಲೈಸೆನ್ಸ್ ರದ್ದು ಮಾಡಿದ ಆರ್‌ಬಿಐ; ಪೇಟಿಎಂ ಗ್ರಾಹಕರಿಗೆ ತೊಂದರೆಯಾ? – Kannada News | Paytm payments Bank Ltd licence canceled by RBI, know what happens next
ನವದೆಹಲಿ, ಏಪ್ರಿಲ್ 24: ಭಾರತೀಯ ರಿಸರ್ವ್ ಬ್ಯಾಂಕ್ (RBI) ಇಂದು ಶುಕ್ರವಾರ ಒಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ನ (PPBL) ಬ್ಯಾಂಕಿಂಗ್ ಪರವಾನಗಿಯನ್ನು (Licence) ಅಧಿಕೃತವಾಗಿ ರದ್ದುಗೊಳಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಪಿಪಿಬಿಎಲ್ಗೆ ಆರ್‌ಬಿಐ ವಿವಿಧ ನಿರ್ಬಂಧಗಳನ್ನು ವಿಧಿಸಿತ್ತು. ಈಗ ಈ ಸಂಸ್ಥೆಯು ಇನ್ಮುಂದೆ ಯಾವುದೇ ಬ್ಯಾಂಕಿಂಗ್ ಚಟುವಟಿಕೆ ನಡೆಸುವಂತಿಲ್ಲ. ತತ್ಕ್ಷಣದಿಂದಲೇ ಜಾರಿಯಾಗುವಂತೆ ಲೈಸೆನ್ಸ್ ಅನ್ನು ಹಿಂಪಡೆಯಲಾಗಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಪರವಾನಗಿ ರದ್ದತಿಗೆ ಕಾರಣ ಆರ್‌ಬಿಐ ಪ್ರಕಾರ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ…