Headlines

ರಾಯರ ಸನ್ನಿಧಿಯಲ್ಲಿ ತಂದೆಗೆ ಗೌರವ ಡಾಕ್ಟರೇಟ್: ಯುವ ರಾಜ್​ಕುಮಾರ್ ಫುಲ್ ಖುಷ್ – Kannada News | Yuva Rajkumar reaction after her father Raghavendra Rajkumar gets honorary doctorate in Mantralaya

ಮಂತ್ರಾಲಯದಲ್ಲಿ ನಡೆದ ಗುರುವೈಭವೋತ್ಸವ ಕಾರ್ಯಕ್ರಮದಲ್ಲಿ ನಟ ರಾಘವೇಂದ್ರ ರಾಜ್​ಕುಮಾರ್ (Raghavendra Rajkumar) ಅವರಿಗೆ ಗೌರವ ಡಾಕ್ಟರೇಟ್ ಪದವಿ ಪದಾನ ಮಾಡಲಾಗಿದೆ. ಈ ಬಗ್ಗೆ ಅವರ ಪುತ್ರ ಯುವ ರಾಜ್​ಕುಮಾರ್ ಮಾತನಾಡಿದ್ದಾರೆ. ‘ಇದಕ್ಕಿಂತ ಇನ್ನೇನೂ ಸಂತೋಷ ಇಲ್ಲ. ನಮ್ಮ ತಾತ ಮಂತ್ರಾಲಯ ಮಹಾತ್ಮೆ ಸಿನಿಮಾ ಮಾಡುವಾಗ ನಮ್ಮ ತಂದೆ ಹುಟ್ಟಿದ್ದು. ಅದಕ್ಕೆ ಅವರಿಗೆ ರಾಘವೇಂದ್ರ ಅಂತ ಹೆಸರು ಇಟ್ಟಿದ್ದು. ಇಂದು ಇಲ್ಲಿ ರಾಯರ ಸಮ್ಮುಖದಲ್ಲಿ ಗೌರವ ಡಾಕ್ಟರೇಟ್ ಸಿಗುತ್ತಿರುವುದು ಬಹಳ ಸಂತೋಷದ ವಿಷಯ. ರಾಯರ ಬಗ್ಗೆ ನಮ್ಮ ತಾತ…

Read More

ಗ್ಯಾಸ್ ಟ್ರಬಲ್: ನಾಡಿನಿಂದ ಕಾಡಿಗೆ, ಅರಣ್ಯದಲ್ಲಿ ಸೌದೆಗಾಗಿ ಮುಗಿಬಿದ್ದ ಜನ

ಕಾರವಾರ, (ಮಾರ್ಚ್ 31): ಗಲ್ಫ್​ ರಾಷ್ಟ್ರಗಳ ಕಾಳಗ ಕೊನೆ ಆಗುತ್ತಿಲ್ಲ. ಜನರ ಪರದಾಟ ಅಂತ್ಯವಾಗುತ್ತಿಲ್ಲ. ಗ್ಯಾಸ್​​ ಅಭಾವದಿಂದ ಹತ್ತಾರು ಸಮಸ್ಯೆ ಉದ್ಭವ ಆಗಿವೆ. ಗ್ಯಾಸ್ ಸಿಲಿಂಡರ್ (lpg Gas cylinder) ಸಿಗದಿದ್ದಕ್ಕೆ ಹಳ್ಳಿ ಕಡೆ ಜನರು ಸೌದೆ ಒಲೆ ಮೊರೆ ಹೋಗಿದ್ದು, ಸೌದೆಗಾಗಿ (Wood) ಅರಣ್ಣದಲ್ಲಿ ಮುಗಿಬಿದ್ದಿದ್ದಾರೆ. ಹೌದು…ಉತ್ತರ ಕನ್ನಡ (Uttara Kananda) ಜಿಲ್ಲೆಯ ಮುಂಡಗೋಡಿನ ಕೆಎಫ್​ಡಿಸಿ ಅರಣ್ಯ ಪ್ರದೇಶದಲ್ಲಿ ಜನರು ಸೌದೆಗಾಗಿ ಮುಗಿದ್ದಿದ್ದಾರೆ. ಪ್ರತಿ ವರ್ಷ ಅಕೇಶಿಯಾ ಮರಗಳ ಕಟಾವಿನ ಬಳಿಕ ಅರಣ್ಯ ಇಲಾಖೆ, ಸಣ್ಣಪುಟ್ಟ…

Read More

International Zebra Day 2026: ಜೀಬ್ರಾ ದಿನವನ್ನು ಆಚರಿಸುವುದೇಕೆ? ಇದರ ಹಿಂದಿನ ಕಾರಣವನ್ನು ತಿಳಿಯಿರಿ – Kannada News | International Zebra Day 2026: Know the history and significance of International Zebra Day

ಅಂತಾರಾಷ್ಟ್ರೀಯ ಜೀಬ್ರಾ ದಿನImage Credit source: Unsplash ಕಪ್ಪು ಬಿಳುಪಿನ ಪಟ್ಟೆಗಳನ್ನು ಹೊಂದಿರುವ ಜೀಬ್ರಾಗಳನ್ನು (Zebra) ಪ್ರಾಣಿ ಸಾಮ್ರಾಜ್ಯದ ಅತ್ಯಂತ ಆಕರ್ಷಕ ಮತ್ತು ಬುದ್ಧಿವಂತ ಪ್ರಾಣಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇವು ಈಕ್ವಿಡೇ ಕುದುರೆ ಕುಟುಂಬಕ್ಕೆ ಸೇರಿದ ಪ್ರಾಣಿಗಳಾಗಿದ್ದು, ಇವು ಹೆಚ್ಚಾಗಿ ಆಫ್ರಿಕನ್ ಖಂಡದಾದ್ಯಂತ, ಕೀನ್ಯಾ ಮತ್ತು ಇಥಿಯೋಪಿಯಾದ ಅರೆ-ಮರುಭೂಮಿ ಪ್ರದೇಶಗಳಲ್ಲಿ ಮತ್ತು ನಮೀಬಿಯಾ, ಅಂಗೋಲಾ ಮತ್ತು ದಕ್ಷಿಣ ಆಫ್ರಿಕಾದ ಪರ್ವತ ಪ್ರದೇಶಗಳಲ್ಲಿ ಕಂಡುಬರುತ್ತವೆ. ಗ್ರೆವಿಸ್ ಜೀಬ್ರಾ, ಪ್ಲೈನ್ಸ್ ಜೀಬ್ರಾ ಮತ್ತು ಮೌಂಟೇನ್ ಜೀಬ್ರಾ ಹೀಗೆ ಒಟ್ಟು ಮೂರು ವಿಧದ…

Read More

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಮಂದಿ ಸಾವು: ತನಿಖೆಗೆ ಆದೇಶಿಸಿದ ಸಿಎಂ ಸಿದ್ದರಾಮಯ್ಯ – Kannada News | Bengaluru CM Orders Probe into Bowring Hospital Wall Collapse: 7 Dead, 7 Injured

ಬೆಂಗಳೂರು, ಏಪ್ರಿಲ್​​ 29:  ಬೌರಿಂಗ್ ಆಸ್ಪತ್ರೆ ಆವರಣದಲ್ಲಿ ಸಂಭವಿಸಿದ ಕಾಂಪೌಂಡ್ ಗೋಡೆ ಕುಸಿತ ದುರಂತದ ಬಗ್ಗೆ ಮುಖ್ಯಮಂತ್ರಿ ತನಿಖೆಗೆ ಆದೇಶಿಸಿದ್ದಾರೆ. ಈ ಕುರಿತು ಮಾತನಾಡಿದ ಸಿದ್ದರಾಮಯ್ಯ, ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಏಳು ಜನ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಗೋಡೆ ಕುಸಿತದ ಕಾರಣದ ಬಗ್ಗೆ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಹೇಳಿದ್ದು, ಆಸ್ಪತ್ರೆ ಆವರಣದಲ್ಲಿ ಮಣ್ಣು ಸುರಿಯುವ ಕೆಲಸ ನಡೆಯುತ್ತಿದೆ….

Read More

ಇಬ್ಬರು ಅರ್ಧಶತಕ ಬಾರಿಸಿದರೂ, ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿದ್ದು ವಿಲ್ ಜಾಕ್ಸ್​​ಗೆ..!

ಟಿ20 ವಿಶ್ವಕಪ್​​ನ 5ನೇ ಪಂದ್ಯದಲ್ಲಿ ನೇಪಾಳ ವಿರುದ್ಧ ಇಂಗ್ಲೆಂಡ್ ತಂಡ ರೋಚಕ ಜಯ ಸಾಧಿಸಿದೆ. ಅದು ಸಹ ಕೇವಲ 4 ರನ್​​​​ಗಳ ಅಂತರದಿಂದಓ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪರ ಜೇಕಬ್ ಬೆಥೆಲ್ 35 ಎಸೆತಗಳಲ್ಲಿ 55 ರನ್ ಬಾರಿಸಿದ್ದರು. ಇದಾದ ಬಳಿಕ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಹ್ಯಾರಿ ಬ್ರೂಕ್ 32 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್​​​ಗಳೊಂದಿಗೆ 53 ರನ್ ಬಾರಿಸಿದರು. ಇನ್ನು ಅಂತಿಮ ಹಂತದಲ್ಲಿ ಬ್ಯಾಟ್…

Read More

ಬಡ ಮಕ್ಕಳ ಹೊಟ್ಟೆಮೇಲೆ ಹೊಡೆದ ವಾರ್ಡನ್; 3 ದಿನ ಅನ್ನ-ನೀರಿಲ್ಲದೆ ಪಕ್ಕದ ಹಾಸ್ಟೆಲ್‌ನಲ್ಲಿ ಕೈಚಾಚಿದ ವಿದ್ಯಾರ್ಥಿಗಳು! – Kannada News

ರಾಯಚೂರು, ಜೂನ್ 06: ಕಡು ಬಡತನದ ಹಿನ್ನೆಲೆಯಿಂದ ಬಂದು, ವಿದ್ಯಾಭ್ಯಾಸಕ್ಕಾಗಿ ಸರ್ಕಾರಿ ವಸತಿ ನಿಲಯಗಳನ್ನೇ ನಂಬಿಕೊಂಡಿರುವ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲೊಂದು ಭೀಕರ ಅನ್ಯಾಯ ನಡೆದಿದೆ. ಜಿಲ್ಲೆಯ (Raichur) ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಕಳೆದ ಮೂರು ದಿನಗಳಿಂದ ಊಟ ಮತ್ತು ಕುಡಿಯುವ ನೀರಿಲ್ಲದೆ ವಿದ್ಯಾರ್ಥಿಗಳು ತೀವ್ರ ಪರದಾಟ ನಡೆಸಿದ್ದಾರೆ. ಹಸಿವಿನ ನೋವು ತಾಳಲಾರದೇ ನೂರಾರು ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಕಚೇರಿ ಎದುರು ಬೀದಿಗಿಳಿದು ಆಕ್ರೋಶ ಹೊರಹಾಕಿದ್ದಾರೆ. ಮುಖ್ಯಾಂಶಗಳು ರಾಯಚೂರಿನ ಸರ್ಕಾರಿ ಹಾಸ್ಟೆಲ್‌ನಲ್ಲಿ…

Read More

ಆ ದೇವಸ್ಥಾನದಲ್ಲಿ ಕೂತು ‘ಪೆದ್ದಿ’ ಕತೆ ಬರೆದಿದ್ದರಂತೆ ನಿರ್ದೇಶಕ ಬುಚ್ಚಿಬಾಬು – Kannada News

ರಾಮ್ ಚರಣ್ (Ram Charan) ನಟಿಸಿ, ‘ಉಪ್ಪೇನ’ ಸಿನಿಮಾ ಖ್ಯಾತಿಯ ಬುಚ್ಚಿಬಾಬು ಸಾನಾ ನಿರ್ದೇಶನ ಮಾಡಿರುವ ‘ಪೆದ್ದಿ’ ಸಿನಿಮಾ ನಾಳೆ (ಜೂನ್ 4) ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಇಂದು ರಾತ್ರಿಯೇ ಹಲವೆಡೆ ಸಿನಿಮಾದ ಪ್ರೀಮಿಯರ್ ಶೋ ಪ್ರದರ್ಶಿಸಲಾಗುತ್ತಿದೆ. ಸಿನಿಮಾದ ನಿರ್ದೇಶಕ ಬುಚ್ಚಿಬಾಬು ಸನಾ ಅವರಿಗೆ ‘ಪೆದ್ದಿ’ ಎರಡನೇ ಸಿನಿಮಾ. ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡಿರುವ ಬುಚ್ಚಿಬಾಬು ಸನಾ, ಸಿನಿಮಾದ ಬಗ್ಗೆ ಹಾಗೂ ಶೂಟಿಂಗ್ ಬಗ್ಗೆ ಕೆಲ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ಉಪ್ಪೇನ’ ಸಿನಿಮಾ ಬಿಡುಗಡೆಯಾಗುವ ಮುನ್ನವೇ, ಕೋವಿಡ್…

Read More

ತಾಯಿ ಆಸ್ತಿ ಬೇಕು, ಆಕೆ ಬೇಡ ಎಂದ ಮಗಳಿಗೆ ಹೈಕೋರ್ಟ್​​ ತಪರಾಕಿ: ಮಹತ್ವದ ಆದೇಶ ನೀಡಿದ ಕೋರ್ಟ್​ – Kannada News | Wanted Mother’s Property, Not Her Care: Karnataka High Court Issues Order Against Daughter

ಕರ್ನಾಟಕ ಹೈಕೋರ್ಟ್​​Image Credit source: dinamalar.com ಬೆಂಗಳೂರು, ಮೇ 15: ಕಾನೂನುಬದ್ಧ, ನೈತಿಕ ಮತ್ತು ಸಾಮಾಜಿಕ ಜವಾಬ್ದಾರಿಯಿಂದ ಮಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಕರ್ನಾಟಕ ಹೈಕೋರ್ಟ್ (High Court of Karnataka)​​, ತಾಯಿಯಿಂದ ಉಡುಗೊರೆಯಾಗಿ ಪಡೆದಿದ್ದ ಆಸ್ತಿಯನ್ನು ಹಿಂತಿರುಗಿಸುವಂತೆ 44 ವರ್ಷದ ಮಹಿಳೆಗೆ ಆದೇಶಿಸಿದ್ದ ತೀರ್ಪನ್ನು ಎತ್ತಿಹಿಡಿದಿದೆ. ತಾಯಿ ನೀಡಿದ್ದ ಗಿಫ್ಟ್ ಡೀಡ್ ರದ್ದುಗೊಳಿಸಿದ್ದ ಹಿರಿಯ ನಾಗರಿಕ ನಿರ್ವಹಣಾ ನ್ಯಾಮಂಡಳಿ ಮತ್ತು ಉಪವಿಭಾಗಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ ಪವಿತ್ರಾ ಎಂಬ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ನ್ಯಾಯಮೂರ್ತಿ…

Read More

Santana Dosha: ಸಂತಾನವನ್ನು ನಿರ್ಲಕ್ಷಿಸುವುದು ಅಥವಾ ವಿಳಂಬ ಮಾಡುವುದು ದೋಷಕ್ಕೆ ಕಾರಣವಾಗುತ್ತಾ? – Kannada News | Santana Dosha: The Impact of Postponing Children According to Astrology

ಇಂದಿನ ವೇಗದ ಜೀವನಶೈಲಿಯಲ್ಲಿ, ಅನೇಕ ದಂಪತಿಗಳು ಮಕ್ಕಳನ್ನು ಪಡೆಯುವುದನ್ನು ಮುಂದೂಡಲು ನಿರ್ಧರಿಸುತ್ತಾರೆ. ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುವ ಅಥವಾ ವೈಯಕ್ತಿಕ ಬೆಳವಣಿಗೆಗೆ ಗಮನಹರಿಸುವ ಬಯಕೆಯಿಂದ, ಇನ್ನೊಂದು ಮೂರು ವರ್ಷ ಬೇಡ, ಇನ್ನೊಂದು ಎರಡು ವರ್ಷ ಬೇಡ ಎಂಬಂತಹ ಮಾತುಗಳು ಸರ್ವೇ ಸಾಮಾನ್ಯವಾಗಿವೆ. ಆದರೆ, ಧಾರ್ಮಿಕ ಮತ್ತು ಜ್ಯೋತಿಷ್ಯದ ದೃಷ್ಟಿಕೋನದಿಂದ, ಸಂತಾನವನ್ನು ನಿರ್ಲಕ್ಷಿಸುವುದು ಅಥವಾ ಉದ್ದೇಶಪೂರ್ವಕವಾಗಿ ವಿಳಂಬ ಮಾಡುವುದು ಹಲವು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ…

Read More

ಖುಲಾಯಿಸಲಿದೆಯಾ ಅದೃಷ್ಟ… ಟಿ20 ವಿಶ್ವಕಪ್​ಗೆ ಶ್ರೇಯಸ್ ಅಯ್ಯರ್ ಆಯ್ಕೆ ಸಾಧ್ಯತೆ – Kannada News | T20 World Cup 2026: Shreyas Iyer in line to replace injured Tilak Varma

ಟಿ20 ವಿಶ್ವಕಪ್​ಗೆ 15 ಸದಸ್ಯರುಗಳ ಭಾರತ ತಂಡವನ್ನು ಘೋಷಿಸಲಾಗಿದೆ. ಈ ತಂಡದಲ್ಲಿ ಸ್ಥಾನ ಪಡೆದಿದ್ದ ಟೀಮ್ ಇಂಡಿಯಾದ ಎಡಗೈ ದಾಂಡಿಗ ತಿಲಕ್ ವರ್ಮಾ ಗಾಯಗೊಂಡಿದ್ದಾರೆ. ಈ ಗಾಯದ ಕಾರಣ ಅವರು ಮುಂಬರುವ ಟಿ20 ಸರಣಿಯಲ್ಲಿ ಕಾಣಿಸಿಕೊಳ್ಳುವುದು ಅನುಮಾನ. ಏಕೆಂದರೆ ತೊಡೆಸಂಧು ಗಾಯದ ಸಮಸ್ಯೆಗೆ ಒಳಗಾಗಿರುವ ತಿಲಕ್ ವರ್ಮಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿ ನ್ಯೂಝಿಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಲಿರುವುದು ಖಚಿತವಾಗಿದೆ. ಆ ಬಳಿಕ ಸಂಪೂರ್ಣ ಫಿಟ್​ನೆಸ್ ಸಾಧಿಸಿದರೆ ಮಾತ್ರ ಅವರು ನ್ಯೂಝಿಲೆಂಡ್ ವಿರುದ್ಧದ…

Read More