ಜೀನಿಯಸ್ ರೂಪದಲ್ಲಿ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡು ಬರೆದಿದ್ದ ಹಂಸಲೇಖ – Kannada News | How Hamsalekha write Akasmika’s ‘Huttidare Kannada’: The Iconic Song’s written
ಕನ್ನಡ ನೆಲ, ಜಲ ಹಾಗೂ ಭಾಷೆಯ ಹಿರಿಮೆಯನ್ನು ಸಾರುವ ನೂರಾರು ಗೀತೆಗಳು ಕನ್ನಡ ಚಿತ್ರರಂಗದಲ್ಲಿ ಮೂಡಿಬಂದಿವೆ. ಆದರೆ, ಡಾ. ರಾಜ್‌ಕುಮಾರ್ ಅಭಿನಯದ ‘ಆಕಸ್ಮಿಕ’ ಚಿತ್ರದ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು…” ಹಾಡಿಗೆ ಇರುವ ಕ್ರೇಜ್ ಹಾಗೂ ಗೌರವವೇ ಬೇರೆ. ಕನ್ನಡಿಗರ ಪಾಲಿಗೆ ಇದು ಕೇವಲ ಒಂದು ಸಿನಿಮಾದ ಹಾಡಲ್ಲ, ಇದೊಂದು ಅನಧಿಕೃತ ನಾಡಗೀತೆ. ಆದರೆ, ಕನ್ನಡ ಚಿತ್ರರಂಗದ ಇತಿಹಾಸ ಬರೆದ ಈ ಕಲ್ಟ್ ಹಾಡು ಮೊದಲು ಸಿನಿಮಾದ ಕಥೆಯಲ್ಲೇ ಇರಲಿಲ್ಲ ಎಂಬ ಅಚ್ಚರಿಯ ಸಂಗತಿ ನಿಮಗೆ ಗೊತ್ತೇ?…