ಒಮಾನ್, ಕುವೈತ್ ನಾಯಕರಿಗೆ ಕರೆ ಮಾಡಿದ ಪ್ರಧಾನಿ ಮೋದಿ; ಇರಾನ್ ದಾಳಿಗೆ ಖಂಡನೆ – Kannada News | Iran Israel conflict; PM Modi speaks to leadership in Oman Qatar Kuwait condemns attacks
ನವದೆಹಲಿ, ಮಾರ್ಚ್ 3: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವಾಗಲೇ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಇಬ್ಬರು ಪ್ರಮುಖ ಗಲ್ಫ್ ನಾಯಕರೊಂದಿಗೆ ಮಾತನಾಡಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ಜಂಟಿ ಕಾರ್ಯಾಚರಣೆಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿಯನ್ನು ಕೊಂದ ನಂತರ ಈ ಪ್ರದೇಶವು ನಿರಂತರವಾಗಿ ದಾಳಿಗಳು ಮತ್ತು ಪ್ರತಿದಾಳಿಗಳಿಗೆ ಸಾಕ್ಷಿಯಾಗುತ್ತಿದೆ. ಖಮೇನಿಯ ಸಾವಿಗೆ ಪ್ರತೀಕಾರವಾಗಿ ಇರಾನ್ ಗಲ್ಫ್ ದೇಶಗಳಲ್ಲಿರುವ ಅಮೆರಿಕದ ವಾಯುನೆಲೆಗಳನ್ನು ಧ್ವಂಸ ಮಾಡಿದೆ. ಪ್ರಧಾನಿ ಮೋದಿ ಅವರು ಭಾರತೀಯ ಸಮುದಾಯದ ಭದ್ರತೆಯ ಬಗ್ಗೆ ಇಬ್ಬರೂ…