ಕನ್ನಡ ಚಿತ್ರರಂಗಕ್ಕೆ 93ರ ಸಂಭ್ರಮ: ಒಂದೇ ವೇದಿಕೆಯಲ್ಲಿ ಸೇರಿದ ಸೆಲೆಬ್ರಿಟಿಗಳು – Kannada News | Kannada Film Industry celebrates 93 years of Sati Sulochana movie

ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ’ (Sati Sulochana) 1934ರ ಮಾರ್ಚ್ 3ರಂದು ಬಿಡುಗಡೆ ಆಗಿತ್ತು. ಕನ್ನಡ ಚಿತ್ರರಂಗಕ್ಕೆ (Kannada Film Industry) ಈಗ 93 ವರ್ಷಗಳ ಸಂಭ್ರಮ. ಆ ಪ್ರಯುಕ್ತ ಅನೇಕ ಸೆಲೆಬ್ರಿಟಿಗಳು ಒಂದೇ ವೇದಿಕೆಯಲ್ಲಿ ಸೇರಿದ್ದಾರೆ. ನಿರ್ಮಾಪಕರ ಸಂಘದಲ್ಲಿ ವಿಶೇಷ ಕಾರ್ಯಕ್ರಮ ಮಾಡಲಾಗಿದೆ. ಸೃಜನ್ ಲೋಕೇಶ್ (Srujan Lokesh) ಮತ್ತು ಗಿರಿಜಾ ಲೋಕೇಶ್ ಅವರು ಅತಿಥಿಗಳಾಗಿ ಭಾಗಿಯಾಗಿದ್ದಾರೆ. ‘ಸತಿ ಸುಲೋಚನ’ ಸಿನಿಮಾದಲ್ಲಿ ಸುಬ್ಬಯ್ಯ ನಾಯ್ಡು ಅವರು ನಾಯಕನಾಗಿ ನಟಿಸಿದ್ದರು. ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಈ ಕಾರ್ಯಕ್ರಮ ಮಾಡಲಾಗಿದೆ. ಅನೇಕ ನಿರ್ಮಾಪಕರು ಪಾಲ್ಗೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಬಿ-ರಿಪೋರ್ಟ್’ ಸಲ್ಲಿಸಲು ಲಂಚಕ್ಕೆ ಬೇಡಿಕೆಯಿಟ್ಟಿ ಪಿಎಸ್​​​​ಐ, ಎಎಸ್​​​​ಐ ಇದೀಗ ಲೋಕಾಯುಕ್ತ ಅತಿಥಿ – Kannada News | Corrupt Chikkaballapur PSI and ASI caught by Lokayukta for land dispute bribe

ಪಿಎಸ್ಐ (PSI) ಶರಣಪ್ಪ ಮತ್ತು ಎಎಸ್ಐ (ASI) ವೆಂಕಟೇಶಪ್ಪ

ಚಿಕ್ಕಬಳ್ಳಾಪುರ, ಮಾ.3: ಜಮೀನು ವಿವಾದವೊಂದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ‘ಬಿ-ರಿಪೋರ್ಟ್’ ಸಲ್ಲಿಸಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಇಬ್ಬರು ಅಧಿಕಾರಿಗಳು ಈಗ ಲೋಕಾಯುಕ್ತ ಪೊಲೀಸರ ಅತಿಥಿಗಳಾಗಿದ್ದಾರೆ. ಪಿಎಸ್ಐ (PSI) ಶರಣಪ್ಪ ಮತ್ತು ಎಎಸ್ಐ (ASI) ವೆಂಕಟೇಶಪ್ಪ ಬಂಧಿತ ಆರೋಪಿಗಳು.

ಮೊಟ್ಲೂರು ಗ್ರಾಮದ ರಘು ಎಂಬುವವರ ಜಮೀನು ವಿವಾದಕ್ಕೆ ಸಂಬಂಧಿಸಿದ ಗಲಾಟೆ ಪ್ರಕರಣದಲ್ಲಿ ಅನುಕೂಲಕರವಾಗಿ ‘ಬಿ-ರಿಪೋರ್ಟ್’ (B-Report) ಸಲ್ಲಿಸಲು ಎಎಸ್ಐ ವೆಂಕಟೇಶಪ್ಪ 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು.ಪಿಎಸ್ಐ ಶರಣಪ್ಪ ಅವರ ಸೂಚನೆಯ ಮೇರೆಗೆ ಎಎಸ್ಐ ವೆಂಕಟೇಶಪ್ಪ ಈ ಹಣದ ಡೀಲ್ ನಡೆಸುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ನನ್ನ ಮನೆ ಹಾಳು ಮಾಡಿದ್ದೀರಿ, ಸಾಲ ಮಾಡಿದ್ದೇನೆ: ವೇದಿಕೆ ಮೇಲೆ ಗಳಗಳನೇ ಅತ್ತ ಕಾಂಗ್ರೆಸ್‌ ಶಾಸಕ

ಲಂಚದ ಹಣದ ಪೈಕಿ ಮೊದಲ ಕಂತಾಗಿ 70,000 ರೂಪಾಯಿ ಹಣವನ್ನು ಚಿಕ್ಕಬಳ್ಳಾಪುರ ನಗರದ ಕನ್ನಡ ಭವನದ ಬಳಿ ರಘು ಅವರಿಂದ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಎಎಸ್ಐ ವೆಂಕಟೇಶಪ್ಪ ಅವರನ್ನು ವಶಕ್ಕೆ ಪಡೆದರು. ವೆಂಕಟೇಶಪ್ಪ ಹಣ ಪಡೆದ ಬೆನ್ನಲ್ಲೇ ವಿಚಾರಣೆ ನಡೆಸಿದ ಲೋಕಾಯುಕ್ತ ತಂಡ, ಪಿಎಸ್ಐ ಶರಣಪ್ಪ ಅವರ ಪಾತ್ರವನ್ನು ಖಚಿತಪಡಿಸಿಕೊಂಡು ಅವರನ್ನೂ ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಲಾಗಿದೆ. ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರ ಈ ಕ್ಷಿಪ್ರ ಕಾರ್ಯಾಚರಣೆ ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SA vs NZ: ಮೊದಲ ಸೆಮೀಸ್ ಕಾಳಗಕ್ಕೆ ಮಳೆ ಅಡ್ಡಿ? ಮೀಸಲು ದಿನದ ನಿಯಮವೇನು? – Kannada News | SA vs NZ T20 World Cup Semifinal: Eden Gardens Weather, Pitch & Reserve Day Explained

ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ (South Africa vs New Zealand) ತಂಡಗಳು 2026 ರ ಟಿ20 ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ (T20 World Cup Semifinal 2026) ಪರಸ್ಪರ ಮುಖಾಮುಖಿಯಾಗುತ್ತಿವೆ. ಈ ಪಂದ್ಯವು ಮಾರ್ಚ್ 4 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಎರಡೂ ತಂಡಗಳು ಈ ಪಂದ್ಯವನ್ನು ಗೆದ್ದು ಫೈನಲ್ ತಲುಪಲು ಎದುರು ನೋಡುತ್ತಿವೆ. ದಕ್ಷಿಣ ಆಫ್ರಿಕಾ ಈ ಪಂದ್ಯಾವಳಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಮತ್ತೊಂದೆಡೆ, ಅದೃಷ್ಟದ ಬಲದಿಂದ ನ್ಯೂಜಿಲೆಂಡ್ ಸೆಮಿಫೈನಲ್ ತಲುಪಿದೆ. ಈಗ ಉಭಯ ತಂಡಗಳು ಸೆಮಿಫೈನಲ್‌ನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೂ ಮುನ್ನ ಕೋಲ್ಕತ್ತಾದ ಹವಾಮಾನ ಹೇಗಿರಲಿದೆ? ಈ ಪಂದ್ಯಕ್ಕೆ ಮೀಸಲು ದಿನವಿದೆಯಾ?. ಮೀಸಲು ದಿನದ ನಿಯಮಗಳೇನು? ಹಾಗೆಯೇ ಈಡನ್ ಗಾರ್ಡನ್ಸ್‌ ಪಿಚ್ ಯಾರಿಗೆ ಸಹಕಾರಿಯಾಗಲಿದೆ ಎಂಬ ವರದಿ ಇಲ್ಲಿದೆ.

ಹವಾಮಾನ ಹೇಗಿರುತ್ತದೆ?

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮಾರ್ಚ್ 4 ರಂದು ಕೋಲ್ಕತ್ತಾದಲ್ಲಿ ಆಕಾಶವು ಸ್ಪಷ್ಟವಾಗಿರಲಿದೆ. ಅಂದರೆ ಮಳೆ ಬರುವ ಸಾಧ್ಯತೆ ಇಲ್ಲ. ಆದ್ದರಿಂದ, ಈ ಪಂದ್ಯವನ್ನು ಅಭಿಮಾನಿಗಳು ಯಾವುದೇ ಆತಂಕವಿಲ್ಲದೆ ವೀಕ್ಷಿಸಬಹುದು. ಕನಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ. ಆದ್ದರಿಂದ, ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬನಿ ಇರಲಿದ್ದು, ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವುದು ಕಷ್ಟಕರವಾಗುತ್ತದೆ. ಆದ್ದರಿಂದ, ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡುವ ಸಾಧ್ಯತೆಗಳು ಹೆಚ್ಚಿವೆ.

ಮೀಸಲು ದಿನ ನಿಗದಿ

ನಿಗದಿಪಡಿಸಿದ ದಿನದಂದು ಮಳೆ ಅಥವಾ ಇತರೆ ಕಾರಣದಿಂದಾಗಿ ಪಂದ್ಯ ನಡೆಯದಿದ್ದರೆ, ಮೀಸಲು ದಿನದಂದು ಪಂದ್ಯವನ್ನು ನಡೆಸಲಾಗುತ್ತದೆ. ಇದರರ್ಥ ಐಸಿಸಿ ಈ ಎರಡು ಸೆಮಿಫೈನಲ್ ಪಂದ್ಯಗಳಿಗೆ ಮೀಸಲು ದಿನವನ್ನು ನಿಗದಿಪಡಿಸಿದೆ. ಅಂದರೆ ಮಾರ್ಚ್​ 4 ರಂದು ನಡೆಯಬೇಕಿರುವ ಮೊದಲ ಸೆಮಿಫೈನಲ್‌ ಪಂದ್ಯವನ್ನು ನಡೆಸಲು ಸಾಧ್ಯವಾಗದಿದ್ದರೆ, ಈ ಪಂದ್ಯವನ್ನು ಮಾರ್ಚ್​ 5 ರಂದು ನಡೆಸಲಾಗುತ್ತದೆ. ಆ ದಿನದಂದು ಕೂಡ ಪಂದ್ಯ ನಡೆಯದಿದ್ದರೆ, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡ ಫೈನಲ್​ಗೇರಲಿದೆ. ಅಂದರೆ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಫೈನಲ್​ಗೆ ಟಿಕೆಟ್ ಪಡೆಯಲಿದೆ.

ಆಫ್ರಿಕಾ- ಕಿವೀಸ್ ಸೆಮಿಫೈನಲ್‌ ಪಂದ್ಯ ಆರಂಭದ ಸಮಯದಲ್ಲಿ ಬದಲಾವಣೆ? ಎಲ್ಲಿ, ಯಾವಾಗ, ಎಷ್ಟು ಗಂಟೆಗೆ ಆರಂಭ?

ಈಡನ್ ಗಾರ್ಡನ್ಸ್ ಪಿಚ್ ಯಾರಿಗೆ ಸಹಕಾರಿ?

ಈಡನ್ ಗಾರ್ಡನ್ಸ್‌ನ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿದೆ. ಹೀಗಾಗಿ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಯಾಗುವುದರಲ್ಲಿ ಸಂದೇಹವಿಲ್ಲ. ಚೆಂಡು ವಿಕೆಟ್ ಮೇಲೆ ಉತ್ತಮ ಬೌನ್ಸ್ ಪಡೆಯುತ್ತದೆ ಮತ್ತು ಚೆಂಡು ಬ್ಯಾಟ್‌ಗೆ ಬರುತ್ತದೆ. ಅಲ್ಲದೆ ಇಲ್ಲಿ ಇಬ್ಬನಿ ಪ್ರಮುಖ ಪಾತ್ರವಹಿಸುವುದರಿಂದ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡುವುದು ಉತ್ತಮ ಆಯ್ಕೆ. ಏಕೆಂದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಗುರಿ ಬೆನ್ನಟ್ಟುವುದು ಸುಲಭವಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಾವಣಗೆರೆಯ ನಾಲ್ವರಿಗೆ ಜೈನ ಸನ್ಯಾಸ ಧೀಕ್ಷೆ: ಸನ್ಯಾಸತ್ವ ಪಡೆಯುವುದರ ಹಿಂದಿದೆ ಈ ಬಲವಾದ ಕಾರಣ – Kannada News | Davangere Jain Youth and Family Choose Sanyasa: MBA Grads and Parents Embrace Asceticism

ಇಡೀ ದೇಶವೇ ಅಚ್ಚರಿ ಪಟ್ಟುವ ದಿಟ್ಟ ನಿರ್ಧಾರ ತೆಗೆದುಕೊಂಡ ಕುಟುಂಬವೊಂದರ ಕಥೆ ಇದು. ಲೈಫ್​​ನ್ನು ಎಂಜಾಯಿ ಮಾಡಬಬೇಕಾದ ವಯಸ್ಸಿ ಅವರದ್ದು, ಆದರೆ ಸನ್ಯಾಸತ್ವ ಸ್ವೀಕಾರ ಮಾಡುವ ಮೂಲಕ ಆಧ್ಯಾತ್ಮಿಕತೆ ಕಡೆ ಸಾಗಿರುವುದು ಇಡೀ ಜಿಲ್ಲೆಯನ್ನೇ ಅಚ್ಚರಿಗೊಳಿಸಿದೆ. ಇದು ದಾವಣಗೆರೆ ನಗರದ ಚೌಕಿಪೇಟೆಯಲ್ಲಿ ನಡೆದ ಘಟನೆ. ಈ ಪ್ರದೇಶವನ್ನು ದೊಡ್ಡ ವಾಣಿಜ್ಯ ಪ್ರದೇಶ ಎಂದು ಕರೆಯುತ್ತಾರೆ. ಇಲ್ಲಿನ ಜೈನ ಮಂದಿರದ ಬಳಿ ವಿಶೇಷವಾದ ಸಂಭ್ರಮ, ಬಣ್ಣ ಬಣ್ಣದ ಬಟ್ಟೆ ಹಾಕಿಕೊಂಡು ಹಬ್ಬಕ್ಕೆ ಬಂದವರು ಯುವ ಸಮೂಹ,  ಜೈನ ಗುರು ಆಚಾರ್ಯ ಅಭಯ್ ಶೇಖರ್ ಸುರೀಶ್ವರ ಮಹಾರಾಜ್ ಅವರು ಸಮ್ಮುಖದಲ್ಲಿ ನಾಲ್ವರಿಗೆ ನಾಳೆ (ಮಾ.4) ಸನ್ಯಾಸ ಧೀಕ್ಷೆ ನೀಡಲಾಗುವುದು.

ಧೀಕ್ಷೆಗೂ ಮೊದಲು ರಾಜಬೀದಿಯಲ್ಲಿ ಸನ್ಯಾಸತ್ವ ಪಡೆಯುವರ ಭವ್ಯ ಮೆರವಣಿಯಲ್ಲಿ ಬರುತ್ತಾರೆ. ಇದರಲ್ಲಿ ಮೊದಲೇ ದೀಕ್ಷೆ ಪಡೆಯುವವರು 30 ವರ್ಷದ ಕ್ರುನಾಲಿ ಬೇನ್, ದಾವಣಗೆರೆ ನಗರದ ಕಮಲೇಶ್ ಜೈನ್ ಹಾಗೂ ಬಬಿತಾ ಜೈನ್ ದಂಪತಿಗಳ ಪುತ್ರಿ. ಕ್ರುನಾಲಿ ಜೈನ್ ಪುಣೆಯ ಸಿಂಬೋಸಿಸ್ ಕಾಲೇಜಿನಿಂದ ಎಂಬಿಎ ಮುಗಿಸಿ ಓದು ಮುಗಿದ ಬಳಿಕ ಸನ್ಯಾಸತ್ವಕ್ಕೆ ಮುಂದಾಗಿದ್ದಾರೆ. ಇನ್ನು ಎರಡನೇಯವರು 28 ವರ್ಷದ ದೀಕ್ಷಿತ ಬೇನ್. ಅರುಣ್ ಕುಮಾರ್ ಜೈನ್- ಅನ್ನಪೂರ್ಣ ಬಾಯಿ ದಂಪತಿಗಳ ಪುತ್ರಿ. ಇವರು ದಾವಣಗೆರೆಯಲ್ಲಿ ಬಿಕಾಂ ಮುಗಿಸಿದ್ದಾರೆ. ಈ ಇಬ್ಬರು ಕೋಟ್ಯಾಧೀಶ್ವರರ ಮಕ್ಕಳು. ಮೇಲಾಗಿ ಉನ್ನತ ಶಿಕ್ಷಣ ಪಡೆದವರು. ಸನ್ಯಾಸತ್ವ ಸ್ವೀಕರಿಸಿದ್ರೆ ಮಾತ್ರ ಸುಖ ಎಂದು ಈ ಯುವತಿಯರು ಹೇಳುತ್ತಾರೆ.

ಇನ್ನು ಈ ಇಬ್ಬರು ಯುವತಿಯರು ಸನ್ಯಾಸತ್ವ ಸ್ವೀಕರಿಸಿದ ನಂತರ, ಮತ್ತೆ 52 ವರ್ಷ ಭರತ್ ಜೈನ್ ಹಾಗೂ 50 ವರ್ಷದ ಆರತಿ ಬೇನ್ ಅವರಿಗೆ ಸನ್ಯಾಸತ್ವ ನೀಡಲಾಗುವುದು.  ದಾವಣಗೆರೆಯ ಲಲಿತ್ ಗಾರ್ಮೇಟ್ ನ ಮಾಲೀಕರು. ಎಲ್ಲವನ್ನ ಬಿಟ್ಟು ಆಧ್ಯಾತ್ಮದ ಕಡೆ ಬಂದಿದ್ದಾರೆ. ಇಲ್ಲಿ ಇನ್ನೊಂದು ವಿಶೇಷ ಅಂದ್ರೆ ಈ ದಂಪತಿಗಳಿಗೆ ಇಬ್ಬರು ಗಂಡ ಮಕ್ಕಳಿದ್ದರು. ಅವರಿಬ್ಬರೂ ಮೂರು ವರ್ಷದ ಹಿಂದೆ ಜೈನ್ ಸನ್ಯಾಸತ್ವ ದೀಕ್ಷೆಯನ್ನು ಪಡೆದ್ದಾರೆ. ಈಗ ಅವರ ಹೆಸರು ಮಗ್ನಶೇಖರ್ ವಿಜಯ್ ಜಿ ಮಹಾರಾಜ್ ಹಾಗೂ ಪೂರ್ಣ ಶೇಖರ್ ವಿಜಯ್ ಜಿ ಮಹರಾಜ್ ಎಂದಾಗಿದೆ. ಹೀಗೆ ಇದ್ದ ಇಬ್ಬರು ಗಂಡು ಮಕ್ಕಳು ಸನ್ಯಾಸ ಸ್ವೀಕರಿಸಿ ಮೂರು ವರ್ಷವಾಗಿದೆ. ಈಗ ತಂದೆ ತಾಯಿ ಸಹ ಇದೇ ದಾರಿ ಹಿಡಿದಿದ್ದಾರೆ. ಜೀವನ ನೋಡಿ ಬಿಟ್ಟಿದ್ದೇನೆ. ಇನ್ನೇನಿದ್ದರು ಈ ಜೀವ ದೇವರ ಸೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದಾವಣಗೆರೆಯ ಜೈನ ಸಮಾಜದ ನಾಲ್ವರಿಂದ ಸನ್ಯಾಸ ದೀಕ್ಷೆ ಸ್ವೀಕಾರ

ಕಳೆದ ಕೆಲ ದಿನಗಳ ಹಿಂದೆ ಓರ್ವ ರ್ಯಾಂಕ್ ವಿಜೇತ ಇಂಜಿನೀಯರಿಂಗ್ ಓದಿದವಳು ಸನ್ಯಾಸಿನಿ ಆಗ ಧೀಕ್ಷೆ ಪಡೆದಿದ್ದಳು. ಮುಂದಿನ ವಾರದಲ್ಲಿ ಇನ್ನು ನಾಲ್ವರು ಯುವತಿಯರು ಧೀಕ್ಷೆಗೆ ಸಜ್ಜಾಗಿದ್ದಾರೆ. ಹೀಗೆ ಯುವ ಜನಾಂಗ ಇಂತಹ ಆಧುನಿಕ ಯುಗದಲ್ಲಿ ಸನ್ಯಾಸದಂತಹ ಅತ್ಯಂತ ಕಠಿಣ ವೃತದ ಜೀವನಕ್ಕೆ ಮುಂದಾಗುವುದು ಅಚ್ಚರಿ ಮೂಡಿಸಿದೆ. ಬರಿಗಾಲಿನಲ್ಲಿ ನಡಿಗೆಯಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರವಾಸ ಮಾಡಬೇಕು. ಸೂರ್ಯೋಧಯಕ್ಕೆ ಮೊದಲು ಸೂರ್ಯಾಸ್ತದ ನಂತರ ಆಹಾರ ಸೇವನೆ ನಿಷೇಧ. ಇಂತದ ದಿಟ್ಟ ನಿರ್ಧಾರಕ್ಕೆ ನಿಖರ ಕಾರಣ ಮಾತ್ರ ನಿಗೂಢವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:21 pm, Tue, 3 March 26

Source link

ಹಾಲು-ಜೇನಿನ ಸಂಬಂಧ ಎಂದ ಸಿಎಂ: ಕುಚಿಕು ಗೆಳೆಯನಿಗಾಗಿ ತ್ಯಾಗ ಪ್ರದರ್ಶಿಸಿ ಎಂದು ಕುಮಾರಣ್ಣ ಕೌಂಟರ್ – Kannada News | Phone Tapping Row In Karnataka Politics: HD Kumaraswamy Hits back at Siddaramaiah

ಬೆಂಗಳೂರು, ಮಾರ್ಚ್ 03): ವಿಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ  (JDS And BJP) ಸೇರಿಕೊಂಡು ಅಧಿಕಾರ ಹಂಚಿಕೆ ಬಿಕ್ಕಟ್ಟು ಕಾಂಗ್ರೆಸ್​ನೊಳಗಿನ ಕಿಚ್ಚಿಗೆ ಫೋನ್ ಕದ್ದಾಲಿಕೆ (Phone Tapping) ಎನ್ನುವ ತುಪ್ಪ ಸುರಿದಿದ್ದು, ಇದು ತೀವ್ರ ಸ್ವರೂಪ ಪಡೆದುಕೊಂಡಿದೆ. ಡಿಸಿಎಂ ಡಿಕೆ ಬಣದ ಮೇಲೆ ನಿಗಾ ಇಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಆ್ಯಂಡ್ ಟೀಮ್​ನ ಮೇಲೆ ಕುಮಾರಸ್ವಾಮಿ (HD Kumaraswamy) ಪರೋಕ್ಷವಾಗಿ ಆರೋಪ ಮಾಡಿದ್ದು, ಇದಕ್ಕೆ ಸಿದ್ದರಾಮಯ್ಯ ಸಹ ವಿಪಕ್ಷಗಳಿಗೆ ತಿರುಗೇಟು ನೀಡಿದ್ದರು. ಇದೀಗ ಸಿದ್ದರಾಮಯ್ಯ ಹೊರಡಿಸಿದ ಪತ್ರಿಕಾ ಪ್ರಕಟಣೆಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಸಿದ್ದರಾಮಯ್ಯನವರೇ ಈ ನಡುವೆ ನೀವು ಬಹಳ ಪುರುಸೊತ್ತಾಗಿದ್ದೀರಿ ಎಂದು ಭಾವಿಸಿದ್ದೇನೆ. ಕೆಲಸ ಮಾಡುವುದು ಬಿಟ್ಟು ಕೌಂಟರ್ ಕೊಡುವುದರಲ್ಲಿ ಹೆಚ್ಚು ಬ್ಯುಸಿಯಾಗಿದ್ದೀರಿ. ಕುಂಬಳಕಾಯಿ ಕಳ್ಳ ಎಂದರೆ ನಾನೇ ನಾನೇ ಎಂದು ಹೆಗಲು ಮುಟ್ಟಿ ನೋಡಿಕೊಂಡರೆ ನಾನೇನು ಮಾಡಲಿ ಎಂದು ಟಾಂಗ್ ಕೊಟ್ಟಿದ್ದಾರೆ.

ಮತ್ತೊಬ್ಬರನ್ನು ಆಡಿಕೊಳ್ಳುವುದರಲ್ಲೇ ಹೆಚ್ಚು ಆಸಕ್ತಿ

ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಸಿದ್ದರಾಮಯ್ಯನವರೇ, ಈ ನಡುವೆ ನೀವು ಬಹಳ ಪುರುಸೊತ್ತಾಗಿದ್ದೀರಿ ಎಂದು ಭಾವಿಸಿದ್ದೇನೆ. ಕೆಲಸ ಮಾಡುವುದು ಬಿಟ್ಟು ಕೌಂಟರ್ ಕೊಡುವುದರಲ್ಲಿ ಹೆಚ್ಚು ಬ್ಯುಸಿಯಾಗಿದ್ದೀರಿ. ಕುಂಬಳಕಾಯಿ ಕಳ್ಳ ಎಂದರೆ ನಾನೇ.. ನಾನೇ.. ಹೆಗಲು ಮುಟ್ಟಿ ನೋಡಿಕೊಂಡರೆ ನಾನೇನು ಮಾಡಲಿ. ಫೋನ್ ಕದ್ದಾಲಿಕೆ ಬಗ್ಗೆ ಮಾಧ್ಯಮಗಳೇ ಮಾತನಾಡುತ್ತಿವೆ. ಆ ಬಗ್ಗೆ ನಾನು ಪ್ರತಿಕ್ರಿಯಿಸಿದ್ದೇನೆ ಅಷ್ಟೇ. ನಿಮ್ಮ ಪುಂಖಾನುಪುಂಖ ಪುರಾಣ ನೋಡಿದರೆ ನಿಮಗೆ ಆಡಳಿತಕ್ಕಿಂತ ಮತ್ತೊಬ್ಬರನ್ನು ಆಡಿಕೊಳ್ಳುವುದರಲ್ಲೇ ಹೆಚ್ಚು ಮುತುವರ್ಜಿ, ಆಸಕ್ತಿ ಇದ್ದಂತಿದೆ. ಪ್ರತಿಪಕ್ಷಗಳು ತಮ್ಮ ಕೆಲಸ ತಾವು ಮಾಡುತ್ತಿವೆ. ಜನರು ದಯೆ ತೋರಿ ನಿಮಗೆ 140 ಸೀಟು ಕೊಟ್ಟರೆ ಆಡಳಿತ ನಡೆಸುವುದು ಬಿಟ್ಟು ಅಡ್ನಾಡಿಗಳಂತೆ ಹಾದಿಬೀದಿಯಲ್ಲಿ ಕಚ್ಚಾಡುತ್ತಿದ್ದೀರಿ. ನಿಮ್ಮ ಪಕ್ಷದಲ್ಲಿನ ಕುರ್ಚಿ ಕಾಳಗದ ಮುಂದುವರಿದ ಭಾಗವೇ ಫೋನ್ ಕದ್ದಾಲಿಕೆ ಎನ್ನುವ ಅನುಮಾನ ಪ್ರತಿಪಕ್ಷಗಳದ್ದು ಮತ್ತು ಮಾಧ್ಯಮಗಳದ್ದು. ಪ್ರಶ್ನಿಸುವ ಜಾಗದಲ್ಲಿ ಪ್ರತಿಪಕ್ಷಗಳಿವೆ, ಉತ್ತರಿಸಿ. ವಿಷಯಾಂತರ ಬಿಟ್ಟು ಸತ್ಯ ಹೇಳಿ. ಸತ್ಯ ನಿಮ್ಮನೆ ದೇವರು ಅಲ್ಲವೇ? ಸತ್ಯಮೇವ ಜಯತೇ ನಿಮ್ಮ ಸಿದ್ದಸ್ಲೋಗನ್! ಕಥೆ ಕಟ್ಟಿ ಕಾಲಹರಣ ಮಾಡುತ್ತಿರೇಕೆ? ನಾನು ಎರಡು ಸಣ್ಣ ಅವಧಿಗೆ ಮುಖ್ಯಮಂತ್ರಿ ಆಗಿದ್ದೆ.ಸ್ವತಂತ್ರ ಸರಕಾರವೂ ನನ್ನದಲ್ಲ. ಕದ್ದಾಲಿಸುವ ಕರ್ಮ ನನಗೇಕೆ? ನಿಮ್ಮಂತೆ ಸಿದ್ದವನದಲ್ಲಿ ಕೂತು ಮನೆಹಾಳು ಮಾಡೋದಕ್ಕೆ ಶಾಸಕರಿಗೆ ಬ್ರೈನ್ ವಾಶ್ ಮಾಡುವ ಹೀನ ಜಾಯಮಾನ ನನ್ನದಲ್ಲ. ನಿಮ್ಮ ಮೊದಲ ಐದು ವರ್ಷದ ಸರಕಾರವೂ.. ಈಗಿನ ನಿಮ್ಮ ಗುಪ್ತಚರವೂ ರಾಜಕಾರಣವನ್ನು ನಾನು ಕಂಡಿರುವುದೇ ಅಲ್ಲವೇ? ಎಂದು ತಿವಿದಿದ್ದಾರೆ.

ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ಫೋನ್​​ ಟ್ಯಾಪಿಂಗ್​​ ಬಿರುಗಾಳಿ: ವಿಪಕ್ಷಗಳ ಮೇಲೆ ಮುಗಿಬಿದ್ದ ಕಾಂಗ್ರೆಸ್​​

ಗುರುವಿಗೆ ಗುನ್ನ ಇಟ್ಟಿರಿ

ನನ್ನ ಜತೆ ನೇರ ಸಂಘರ್ಷಕ್ಕೆ ಬಂದಾಗಲೆಲ್ಲ ನೀವು ದೇವೇಗೌಡರನ್ನು ಎಳೆದು ತರುತ್ತೀರಿ. ದೇವೇಗೌಡರು ನಿಮ್ಮ ರಾಜಕೀಯ ಗುರು, ನಿಮ್ಮನ್ನು ಗುರುತಿಸಿ ಬೆಳೆಸಿದವರು. ಅದಕ್ಕಾಗಿ ಎಷ್ಟೋ ನಾಯಕರ ವಿರೋಧ ಕಟ್ಟಿಕೊಂಡರು. ಅದೂ ನಿಮಗೂ ಗೊತ್ತಿದೆ. ಆದರೆ, ಸಮಯಕ್ಕೆ ಕಾಯುತ್ತಿದ್ದ ನೀವು ಗುರುವಿಗೆ ಗುನ್ನ ಇಟ್ಟಿರಿ. ಅಷ್ಟರ ಮಟ್ಟಿಗೆ ನಿಮ್ಮ ಕಪಟತನ, ಕುಟಿಲತೆಯನ್ನು ಸ್ವಯಂ ಸ್ಮರಣೆ ಮಾಡುತ್ತಿದ್ದೀರಿ, ಸಂತೋಷ. ದೆಹಲಿಯಲ್ಲಿ ದೇವೇಗೌಡರು ಅಧಿಕಾರ ಕಳೆದುಕೊಂಡಾಗ ನೀವು ಯಾವ ಪಕ್ಷದಲ್ಲಿದ್ದಿರಿ ಎನ್ನುವುದನ್ನು ಅರೆಕ್ಷಣ ನೆನಪು ಮಾಡಿಕೊಳ್ಳಿ. ನಿಮಗೂ ಆತ್ಮಸಾಕ್ಷಿ ಎನ್ನುವುದು ಇರಬೇಕಲ್ಲಾ? ಆಗ ನಿಮ್ಮ ನಾಲಿಗೆಯಿಂದ ಉದುರಿದ್ದ ಸರಣಿ ನುಡಿಮುತ್ತುಗಳನ್ನು ಒಮ್ಮೆ ಪುನಾಸ್ಮರಣೆ ಮಾಡಿಕೊಳ್ಳಿ? ಅವತ್ತು ಅದೇ ಸೀತಾರಾಂ ಕೇಸರಿ ಬಗ್ಗೆ ತಾವು ಏನೇನು ಹೇಳಿದಿರಿ? ಆ ನಂತರದ ಕಾಲದಲ್ಲಿ ಶ್ರೀಮತಿ ಸೋನಿಯಾ ಗಾಂಧಿ ಅವರನ್ನು ಅದೆಷ್ಟು ವಾಚಾಮಗೋಚರ ನಿಂದಿಸಿದ್ದಿರಿ ಎಂಬುದನ್ನು ಜ್ಞಾಪಕ ಮಾಡಿಕೊಳ್ಳಿ ಅಂದಿನ ಘಟನೆಯನ್ನು ನೆನಪಿಸಿ ತಿರುಗೇಟು ನೀಡಿದ್ದಾರೆ.

ವಿರೋಚಿತ ತ್ಯಾಗವನ್ನು ಒಮ್ಮೆ ಪ್ರದರ್ಶಿಸಿ

ದೇವೇಗೌಡರು ಅಧಿಕಾರವನ್ನು ವಿರೋಚಿತವಾಗಿ ತ್ಯಜಿಸಿದರು. ರಾಜೀನಾಮೆ ಘೋಷಿಸಿದ ಮರುಕ್ಷಣದಲ್ಲೇ ಸಂಸತ್ತಿನಲ್ಲಿಯೇ ವಾಜಪೇಯಿ ಅವರು ಮುಕ್ತ ಬೆಂಬಲ ಕೊಡುತ್ತೇವೆ ಎಂದರೂ ಆ ಅಧಿಕಾರ ಬೇಡವೆಂದು ವಿನಯದಿಂದ ಧಿಕ್ಕರಿಸಿದರು. ಅವರ ಗರಡಿಯಲ್ಲಿ ಪಳಗಿ, ಈಗಲೂ ಬೆಳಗುತ್ತಿರುವ ನೀವೂ ಅಂಥ ಕೆಚ್ಚನ್ನು, ವಿರೋಚಿತ ತ್ಯಾಗವನ್ನು ಒಮ್ಮೆ ಪ್ರದರ್ಶಿಸಿ. ನಿಮ್ಮ ಕುಚುಕು ಗೆಳೆಯನ ಮೇಲೆ ಪ್ರೀತಿ ತೋರಿಸಿ. ಗುಂಡಿಗೆ ಸಾಲುತ್ತಿಲ್ಲವೇ ಮಿಸ್ಟರ್ ಸಿದ್ದರಾಮಯ್ಯನವರೇ, ಸೋತರೆ ಸೋಲಬೇಕು ಬಾಹುಬಲಿಯಂತೆ! ನಾನು ಸೋತಿದ್ದೇನೆ, ಓಡಿ ಹೋಗಿಲ್ಲ. ನಾನು ರಣಹೇಡಿಯಂತೆ ಪಲಾಯನ ಮಾಡುವುದಿಲ್ಲ, ನೆನಪಿರಲಿ ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 10:09 pm, Tue, 3 March 26

Source link

ದರ್ಶನ್ ಜೊತೆ ‘ಭೀಮ ತೀರದಲ್ಲಿ’ ಸಿನಿಮಾ ಯಾಕೆ ಮಾಡಲಿಲ್ಲ? ಸಿಕ್ತು ಉತ್ತರ – Kannada News | This is why Darshan did not act in Bheema Theeradalli movie

ನಿರ್ಮಾಪಕ ಅಣಜಿ ನಾಗರಾಜ್, ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಒಟ್ಟಾಗಿ 2012ರಲ್ಲಿ ‘ಭೀಮ ತೀರದಲ್ಲಿ’ (Bheema Theeradalli) ಸಿನಿಮಾ ಮಾಡಿದ್ದರು. ಅವರ ಜೊತೆ ದರ್ಶನ್ ಆಪ್ತವಾಗಿದ್ದರೂ ಕೂಡ ಆ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು ದುನಿಯಾ ವಿಜಯ್. ಹಾಗಾದ್ರೆ, ದರ್ಶನ್ (Darshan) ಜೊತೆ ಈ ಸಿನಿಮಾವನ್ನು ಯಾಕೆ ಮಾಡಲಿಲ್ಲ ಎಂಬ ಪ್ರಶ್ನೆಗೆ ಓಂ ಪ್ರಕಾಶ್ ರಾವ್ ಮತ್ತು ಅಣಜಿ ನಾಗರಾಜ್ ಅವರು ಉತ್ತರಿಸಿದ್ದಾರೆ. ‘ಈ ಕತೆಯನ್ನು ತಂದಿದ್ದೇ ದುನಿಯಾ ವಿಜಯ್. ಪಾತ್ರಕ್ಕಾಗಿ ವಿಜಯ್ ಅವರು ಅದಾಗಲೇ ಡ್ರೆಸ್ ಹೊಲಿಸಿಕೊಂಡಿದ್ದರು. ಅವರು ಬಹಳ ಇಷ್ಟಪಟ್ಟು ಮಾಡಿದ ಸಿನಿಮಾ ಇದು. ದುನಿಯಾ ವಿಜಯ್ ಅವರಿಗೆ ಈ ಪಾತ್ರ ತುಂಬಾ ಹೊಂದಿಕೆ ಆಯಿತು’ ಎಂದು ನಿರ್ಮಾಪಕ ಅಣಜಿ ನಾಗರಾಜ್ ಅವರು ಹೇಳಿದ್ದಾರೆ. ಈ ಬಾರಿ ತೆಲುಗಿನಲ್ಲಿ ಕೂಡ ಈ ಸಿನಿಮಾವನ್ನು ಬಿಡುಗಡೆ ಮಾಡಲು ಅವರು ನಿರ್ಧರಿಸಿದ್ದಾರೆ. ತೆಲುಗಿನಲ್ಲಿ ‘ಕಡಪ’ ಎಂದು ಶೀರ್ಷಿಕೆ ಇಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇರಾನ್​ನ ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ; ಟೆಹ್ರಾನ್​ ತುಂಬ ದಟ್ಟ ಹೊಗೆ – Kannada News | Iran’s Tehran Mehrabad International airport bombed by US Israel strikes

ಟೆಹ್ರಾನ್, ಮಾರ್ಚ್ 3: ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕದ ಪಡೆಗಳ ದಾಳಿ ಮುಂದುವರೆದಿದೆ. ಇಂದು ಟೆಹ್ರಾನ್‌ನಲ್ಲಿ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ. ಇರಾನ್‌ನ (Iran) ಮೆಹ್ರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ವೈಮಾನಿಕ ದಾಳಿ ನಡೆದಿದ್ದರಿಂದ ಸುತ್ತಲೂ ಹೊಗೆಯಿಂದ ಆವೃತವಾಗಿದೆ.

ಅಮೆರಿಕ ಮತ್ತು ಇಸ್ರೇಲ್​ನಿಂದ ಟೆಹ್ರಾನ್‌ನ ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೆ ವೈಮಾನಿಕ ದಾಳಿ ನಡೆದಿದೆ ಎಂದು ಇರಾನಿನ ಮಾಧ್ಯಮಗಳು ತಿಳಿಸಿವೆ. ಈ ವಿಮಾನ ನಿಲ್ದಾಣ ಛಿದ್ರವಾಗಿದ್ದು, ಕಪ್ಪು ಹೊಗೆಯೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಇಸ್ರೇಲ್ ಪೈಲಟ್‌ಗಳು ಇರಾನ್ ಮತ್ತು ಲೆಬನಾನ್‌ನ ಮೇಲೆ ದಾಳಿ ನಡೆಸುತ್ತಲೇ ಇದ್ದಾರೆ. ನಮ್ಮ ರಾಷ್ಟ್ರವು ಹೆಚ್ಚಿನ ಬಲದಿಂದ ಪ್ರತಿಕ್ರಿಯಿಸುತ್ತದೆ. ಯುದ್ಧದಿಂದ ಹಿಂದೆ ಸರಿಯುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಇರಾನ್‌ನ ಸುಪ್ರೀಂ ಲೀಡರ್ ಆಯ್ಕೆ ಸಮಿತಿಗೆ ಸಂಬಂಧಿಸಿದ ಕಟ್ಟಡದ ಮೇಲೆ ಇಸ್ರೇಲ್ ದಾಳಿ – Kannada News | Israel strike hits building linked to Iran Supreme Leader selection panel

ಜೆರುಸಲೇಂ, ಮಾರ್ಚ್ 3: ಇಸ್ರೇಲ್ ಇಂದು ಇರಾನ್‌ನ ತಜ್ಞರ ಮಂಡಳಿಯನ್ನು ಹೊಂದಿರುವ ಕೋಮ್‌ನಲ್ಲಿರುವ ಕಟ್ಟಡದ ಮೇಲೆ ವೈಮಾನಿಕ ದಾಳಿ ನಡೆಸಿದೆ. ಇರಾನ್‌ನ (Iran Conflict) ಹೊಸ ಸುಪ್ರೀಂ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಈ ಮಂಡಳಿ ಹೊಂದಿದೆ. ಹಿಂದಿನ ಇಸ್ರೇಲ್ ದಾಳಿಗಳಲ್ಲಿ ಮಾಜಿ ಸುಪ್ರೀಂ ನಾಯಕ ಅಲಿ ಖಮೇನಿ ಸಾವನ್ನಪ್ಪಿದ ನಂತರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಸದಸ್ಯರು ಮತಗಳನ್ನು ಹಾಕುತ್ತಿದ್ದಾಗ ಈ ದಾಳಿ ನಡೆದಿದೆ. ಕೌನ್ಸಿಲ್‌ನ 88 ಸದಸ್ಯರಲ್ಲಿ ಎಷ್ಟು ಮಂದಿ ಆ ಸಮಯದಲ್ಲಿ ಕಟ್ಟಡದೊಳಗೆ ಇದ್ದರು ಅಥವಾ ಎಷ್ಟು ಹಾನಿಯಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇಸ್ರೇಲ್ ಮತ್ತು ಯುಎಸ್ ಪಡೆಗಳು ಟೆಹ್ರಾನ್‌ನಲ್ಲಿರುವ ಪ್ರಮುಖ ಸರ್ಕಾರಿ ಕಟ್ಟಡಗಳನ್ನು ಸಹ ಹೊಡೆದವು. ಇಸ್ರೇಲ್ ರಕ್ಷಣಾ ಪಡೆಗಳ (IDF) ಪ್ರಕಾರ, ದಾಳಿಗಳು ಅಧ್ಯಕ್ಷೀಯ ಕಚೇರಿ ಮತ್ತು ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯ ಕಟ್ಟಡವನ್ನು ಗುರಿಯಾಗಿಸಿಕೊಂಡವು. ಖಮೇನಿ ಮತ್ತು ಇತರ ಹಿರಿಯ ಇರಾನಿನ ನಾಯಕರ ಹತ್ಯೆಯ ನಂತರ, ಇರಾನ್ ಮಧ್ಯಪ್ರಾಚ್ಯದಲ್ಲಿ ಇಸ್ರೇಲಿ ಮತ್ತು ಅಮೆರಿಕದ ಗುರಿಗಳ ಮೇಲೆ ತನ್ನ ದಾಳಿಯನ್ನು ಹೆಚ್ಚಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಒಮಾನ್, ಕುವೈತ್​ ನಾಯಕರಿಗೆ ಕರೆ ಮಾಡಿದ ಪ್ರಧಾನಿ ಮೋದಿ; ಇರಾನ್ ದಾಳಿಗೆ ಖಂಡನೆ – Kannada News | Iran Israel conflict; PM Modi speaks to leadership in Oman Qatar Kuwait condemns attacks

ನವದೆಹಲಿ, ಮಾರ್ಚ್ 3: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವಾಗಲೇ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಇಬ್ಬರು ಪ್ರಮುಖ ಗಲ್ಫ್ ನಾಯಕರೊಂದಿಗೆ ಮಾತನಾಡಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ಜಂಟಿ ಕಾರ್ಯಾಚರಣೆಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿಯನ್ನು ಕೊಂದ ನಂತರ ಈ ಪ್ರದೇಶವು ನಿರಂತರವಾಗಿ ದಾಳಿಗಳು ಮತ್ತು ಪ್ರತಿದಾಳಿಗಳಿಗೆ ಸಾಕ್ಷಿಯಾಗುತ್ತಿದೆ. ಖಮೇನಿಯ ಸಾವಿಗೆ ಪ್ರತೀಕಾರವಾಗಿ ಇರಾನ್ ಗಲ್ಫ್​ ದೇಶಗಳಲ್ಲಿರುವ ಅಮೆರಿಕದ ವಾಯುನೆಲೆಗಳನ್ನು ಧ್ವಂಸ ಮಾಡಿದೆ.

ಪ್ರಧಾನಿ ಮೋದಿ ಅವರು ಭಾರತೀಯ ಸಮುದಾಯದ ಭದ್ರತೆಯ ಬಗ್ಗೆ ಇಬ್ಬರೂ ನಾಯಕರೊಂದಿಗೆ ಚರ್ಚಿಸಿದರು. ಪ್ರಧಾನಿ ಮೋದಿ ಇಂದು ಒಮಾನ್ ರಾಜ ಹೈತಮ್ ಬಿನ್ ತಾರಿಕ್ ಮತ್ತು ಕುವೈತ್‌ನ ಕ್ರೌನ್ ಪ್ರಿನ್ಸ್ ಸಬಾ ಅಲ್-ಖಾಲೆದ್ ಅಲ್-ಹಮದ್ ಅಲ್-ಮುಬಾರಕ್ ಅಲ್-ಸಬಾ ಅವರೊಂದಿಗೆ ಮಾತನಾಡಿದರು. ಇಬ್ಬರೊಂದಿಗಿನ ಮಾತುಕತೆಯ ಸಮಯದಲ್ಲಿ ಪ್ರಧಾನಿ ಮೋದಿ ಮಧ್ಯಪ್ರಾಚ್ಯದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ: ಇಸ್ರೇಲ್-ಯುಎಸ್ ದಾಳಿಯಿಂದಾಗಿ ಇರಾನ್​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತ ಸ್ಥಳಕ್ಕೆ ಶಿಫ್ಟ್

ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ಇರಾನ್ ಒಳಗೆ ದೊಡ್ಡ ಪ್ರಮಾಣದ ಮಿಲಿಟರಿ ದಾಳಿಗಳನ್ನು ನಡೆಸಿದ ನಂತರ ಭಾನುವಾರ ಮಧ್ಯಪ್ರಾಚ್ಯದಾದ್ಯಂತ ಉದ್ವಿಗ್ನತೆ ತೀವ್ರವಾಗಿ ಹೆಚ್ಚಾಯಿತು. ಈ ದಾಳಿಗಳು ಬ್ಯಾಲಿಸ್ಟಿಕ್ ಕ್ಷಿಪಣಿ ತಾಣಗಳು ಮತ್ತು ನೌಕಾ ಹಡಗುಗಳ ಮೇಲೆ ಕೇಂದ್ರೀಕರಿಸಿದ್ದು, ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದ ಅತ್ಯಂತ ತೀವ್ರವಾದ ಸಂಘರ್ಷದಲ್ಲಿ ಒಂದಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಯಶ್ ನಟನೆಯ ‘ರಾಮಾಯಣ’ ಸಿನಿಮಾಗೆ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಸಾಥ್? – Kannada News | Christopher Nolan likely to review final cut of Yash starrer Ramayana movie

ಭಾರತೀಯ ಚಿತ್ರರಂಗದ ಅತ್ಯಂತ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಎನಿಸಿಕೊಂಡಿರುವ ‘ರಾಮಾಯಣ’ (Ramayana) ಚಿತ್ರದ ಬಗ್ಗೆ ಈಗ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ನಿತೇಶ್ ತಿವಾರಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಯಶ್ (Yash), ರಣಬೀರ್ ಕಪೂರ್, ಸಾಯಿ ಪಲ್ಲವಿ ಮುಂತಾದವರನ್ನು ಒಳಗೊಂಡ ಬೃಹತ್ ತಾರಾಗಣ ಮತ್ತು ಮೇಕಿಂಗ್‌ನಿಂದ ಸುದ್ದಿಯಾಗಿದ್ದ ಈ ಸಿನಿಮಾಗೆ ಈಗ ಹಾಲಿವುಡ್‌ನ ದಿಗ್ಗಜ ನಿರ್ದೇಶಕ ಕ್ರಿಸ್ಟೋಫರ್ ನೋಲನ್ (Christopher Nolan) ಅವರ ಹೆಸರು ತಳುಕು ಹಾಕಿಕೊಂಡಿದೆ. ನೋಲನ್ ಅವರಿಗೂ ‘ರಾಮಾಯಣ’ ಚಿತ್ರತಂಡಕ್ಕೂ ಏನು ಸಂಬಂಧ? ಇಲ್ಲಿದೆ ಉತ್ತರ..

ವರದಿಗಳ ಪ್ರಕಾರ, ಆಸ್ಕರ್ ವಿಜೇತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಮತ್ತು ಅವರ ಆಪ್ತ ಛಾಯಾಗ್ರಾಹಕ, ಅಕಾಡೆಮಿ ಪ್ರಶಸ್ತಿ ವಿಜೇತ ಹೊಯ್ತೆ ವಾನ್ ಹೊಯ್ತೆಮಾ (Hoyte van Hoytema) ಅವರು ‘ರಾಮಾಯಣ’ ಚಿತ್ರದ ಫೈನಲ್ ಕಟ್ ವೀಕ್ಷಿಸಲಿದ್ದಾರೆ ಎನ್ನಲಾಗುತ್ತಿದೆ. ಇವರು ಚಿತ್ರಕ್ಕೆ ಅಧಿಕೃತವಾಗಿ ಕೆಲಸ ಮಾಡದಿದ್ದರೂ, ಚಿತ್ರದ ತಾಂತ್ರಿಕ ಗುಣಮಟ್ಟ ಮತ್ತು ದೃಶ್ಯ ವೈಭವವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ತಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡಲಿದ್ದಾರೆ ಎಂಬ ಗುಸುಗುಸು ಹಬ್ಬಿದೆ.

ಈ ಸಂಪರ್ಕ ಸಾಧ್ಯವಾಗಿದ್ದು ಹೇಗೆ?

ಈ ಸುದ್ದಿಗೆ ಪುಷ್ಟಿ ನೀಡುವಂತೆ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಹೆಸರು ಕೇಳಿಬರುತ್ತಿದೆ. ನಮಿತ್ ಅವರ ಒಡೆತನದ ವಿಶ್ವವಿಖ್ಯಾತ VFX ಸಂಸ್ಥೆ DNEG, ಕ್ರಿಸ್ಟೋಫರ್ ನೋಲನ್ ಅವರ ‘ಇನ್ಸೆಪ್ಷನ್’, ‘ಟೆನೆಟ್’, ‘ಆಪೆನ್‌ಹೈಮರ್’ ಚಿತ್ರಗಳಿಗೆ ಕೆಲಸ ಮಾಡಿದೆ. ಈ ಹಳೆಯ ಬಾಂಧವ್ಯದ ಹಿನ್ನೆಲೆಯಲ್ಲಿ ನೋಲನ್ ಅವರು ‘ರಾಮಾಯಣ’ ಚಿತ್ರಕ್ಕೆ ಬೆಂಬಲ ನೀಡಲು ಒಪ್ಪಿರಬಹುದು ಎಂದು ಹೇಳಲಾಗುತ್ತಿದೆ.

‘ರಾಮಾಯಣ ಕೇವಲ ಭಾರತೀಯ ಸಿನಿಮಾವಾಗದೆ, ಜಾಗತಿಕ ಮಟ್ಟದ ಅದ್ಭುತವಾಗಿ ಹೊರಹೊಮ್ಮಬೇಕು ಎಂಬುದು ಚಿತ್ರತಂಡದ ಗುರಿ. ಇದಕ್ಕಾಗಿ ದೃಶ್ಯ ಕಾವ್ಯದ ಮಾಂತ್ರಿಕ ನೋಲನ್ ಅವರ ಮಾರ್ಗದರ್ಶನ ಪಡೆಯಲು ತಯಾರಿ ನಡೆದಿದೆ’ ಎಂದು ಮೂಲಗಳು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಮೊದಲ ಹಾಡಿನಿಂದ ಯಶ್ ಅಭಿಮಾನಿಗಳಿಗೆ ನಿರಾಸೆ: ಕಾರಣ ಏನು?

ಒಂದು ಕಡೆ ನೋಲನ್ ಅವರ ಆಗಮನದ ಸುದ್ದಿ ಸದ್ದು ಮಾಡುತ್ತಿದ್ದರೆ, ಇನ್ನೊಂದೆಡೆ ಅವರು ತಮ್ಮದೇ ಆದ ‘ದಿ ಒಡಿಸ್ಸಿ’ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದು 2026ರ ಜುಲೈನಲ್ಲಿ ಬಿಡುಗಡೆಯಾಗಲಿದ್ದು, ನೋಲನ್ ಅವರ ಸಂಪೂರ್ಣ ಗಮನ ಅಲ್ಲಿಯೇ ಇರಲಿದೆ. ಹಾಗಾಗಿ, ‘ರಾಮಾಯಣ’ ಚಿತ್ರಕ್ಕೆ ಅವರು ಎಷ್ಟು ಸಮಯ ಮೀಸಲಿಡುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version