ಮಂಗಳೂರು: ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುವುದಾಗಿ ಪ್ರಚೋದನಕಾರಿ ಪೋಸ್ಟ್, ಕೇಸ್ ದಾಖಲು – Kannada News | Bomb Threat Comment Near Ullal Mosque in Mangaluru; Police Register Suo Motu Case Over Viral Instagram Post

ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುವುದಾಗಿ ಪೋಸ್ಟ್, ಕೇಸ್ ದಾಖಲು

ಮಂಗಳೂರು, ಮಾರ್ಚ್ 3: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಉಳ್ಳಾಲ ಪ್ರದೇಶದ ಮಸೀದಿ ಬಳಿ ಬಾಂಬ್ ಸ್ಫೋಟ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡಿರುವ ಘಟನೆಗೆ ಸಂಬಂಧಿಸಿ ಉಳ್ಳಾಲ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಪೋಸ್ಟ್ ಮಾಡಿದ ಕಿಡಿಗೇಡಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ‘ಉಳ್ಳಾಲದ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ, ಸಪೋರ್ಟ್ ಮಾಡಿ’ ಎಂದು ಶಂಕರ್11916 (shankar11916) ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ಪೋಸ್ಟ್ ಮಾಡಲಾಗಿತ್ತು. ಈ ಕಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಹಿಂದೂ ಸಂಘಟನೆ ಕಾರ್ಯಕರ್ತನಾಗಿ ಗುರುತಿಸಿಕೊಂಡು ಕೊಲೆಯಾಗಿದ್ದ ಸುಹಾಸ್ ಶೆಟ್ಟಿ ಅವರ ಭಾವಚಿತ್ರ ಹೊಂದಿದ್ದ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದೆ ಎನ್ನಲಾಗಿದೆ. ಇದರಿಂದಾಗಿ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ.

ಘಟನೆ ಕುರಿತು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿರುವ ಉಳ್ಳಾಲ ಪೊಲೀಸರು, ಕಮೆಂಟ್ ಹಾಕಿದ ವ್ಯಕ್ತಿಯನ್ನು ಪತ್ತೆಹಚ್ಚಿ ಬಂಧಿಸಲು ಶೋಧ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಧಾರ್ಮಿಕ ದ್ವೇಷ ಹುಟ್ಟಿಸುವ, ಭಯ ಹುಟ್ಟಿಸುವ ರೀತಿಯ ಪೋಸ್ಟ್‌ಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ತಕ್ಷಣ ಬಂಧಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಸೂಚನೆ ನೀಡಿದ್ದಾರೆ. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕು, ಪ್ರಚೋದನಕಾರಿ ಅಥವಾ ಭಯ ಹುಟ್ಟಿಸುವ ರೀತಿಯ ಪೋಸ್ಟ್‌ಗಳನ್ನು ಹಂಚಿಕೊಳ್ಳಬಾರದು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.

ಮಂಗಳೂರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಪೋಸ್ಟ್​​ಗಳನ್ನು ಮಾಡಿದ ಪ್ರಕರಣಗಳು ಇತ್ತೀಚೆಗೆ ಕೆಲವು ನಡೆದಿದ್ದು, ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ. ಇತ್ತೀಚೆಗಷ್ಟೇ ಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ಸೈಬರ್ ಕ್ರೈಂ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ಅದೇ ರೀತಿ, ನಗರದ ಶಾಂತಿಗೆ ಭಂಗ ತರುವ ರೀತಿಯಲ್ಲಿ ಇನ್‌ಸ್ಟಾಗ್ರಾಂ ರೀಲ್ಸ್ ಮಾಡಿ, ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಶಬ್ದ ಬಳಸಿ ಪೋಸ್ಟ್ ಮಾಡಿದ್ದ ಗುಂಪಿನ ವಿರುದ್ಧ ಕೆಲವು ತಿಂಗಳ ಹಿಂದೆ ನಗರ ಪೊಲೀಸ್ ಆಯುಕ್ತರು ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ; ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಜಾತಿ ನಿಂದನೆ ಮಾಡಿದ ಅಪ್ಪ-ಮಗ

ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು, ಸೈಬರ್ ಪೊಲೀಸರು ಪ್ರತ್ಯೇಕ ‘ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್’ ಮೂಲಕ ನಿರಂತರ ನಿಗಾ ಇರಿಸಿದ್ದಾರೆ. ಕೇವಲ ಪೋಸ್ಟ್ ಮಾಡಿದವರಷ್ಟೇ ಅಲ್ಲದೆ, ಅಂತಹ ಪೋಸ್ಟ್‌ಗಳನ್ನು ಲೈಕ್ ಮಾಡುವ, ಶೇರ್ ಮಾಡುವ ಅಥವಾ ಪ್ರಚೋದನಕಾರಿ ಕಮೆಂಟ್ ಹಾಕುವವರ ವಿರುದ್ಧವೂ ಐಟಿ ಕಾಯ್ದೆ ಹಾಗೂ ಬಿಎನ್ಎಸ್ (BNS) ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Dry Fruit Price Hike: ಇಸ್ರೇಲ್-ಇರಾನ್ ಸಂಘರ್ಷ, ಬೆಂಗಳೂರಿನಲ್ಲಿ ದುಬಾರಿಯಾಗಲಿದೆ ಡ್ರೈ ಫ್ರೂಟ್ಸ್ – Kannada News | Dry Fruit Price Hike in Bengaluru Likely Amid Israel Iran Conflict; Supply of Iranian Dates, Pistachios, Figs May Be Hit

ಬೆಂಗಳೂರು, ಮಾರ್ಚ್ 3: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ (Israel-Iran Conflict) ಪರಿಣಾಮ ಬೆಂಗಳೂರಿನಲ್ಲಿ ಡ್ರೈ ಫ್ರೂಟ್ಸ್ ಬೆಲೆ (Dry Fruit Price) ಏರಿಕೆಯಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ, ಪೂರೈಕೆ ಸಮಸ್ಯೆಯೂ ಎದುರಾಗಬಹುದು ಎಂದು ಸ್ಥಳೀಯ ವ್ಯಾಪಾರಿಗಳು ತಿಳಿಸಿದ್ದಾರೆ. ನಗರಕ್ಕೆ ಆಮದಾಗುವ ಡ್ರೈ ಫ್ರೂಟ್ಸ್‌ಗಳಲ್ಲಿ ಹೆಚ್ಚಿನ ಪ್ರಮಾಣದ ವಸ್ತುಗಳು ಇರಾನ್‌ನಿಂದ ಬರುತ್ತವೆ. ಅಂಜೂರ, ಮಾಮ್ರಾ ಬಾದಾಮಿ, ಪಿಸ್ತಾ, ಪೈನ್ ಬೀಜಗಳ ಜೊತೆಗೆ ಮಜಾಫತಿ ಖರ್ಜೂರಗಳು ವಿಶೇಷವಾಗಿ ಹೆಚ್ಚು ಬೇಡಿಕೆಯಲ್ಲಿವೆ. ರಂಜಾನ್ ಸಮಯದಲ್ಲಿ ಮಜಫತಿ ಖರ್ಜೂರಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ ಎಂದು ಅವರು ಹೇಳಿದ್ದಾರೆ.

ಮಜಫತಿ ಖರ್ಜೂರಗಳು ಸಾಮಾನ್ಯವಾಗಿ ಪ್ರತಿ ಕೆಜಿಗೆ ಸುಮಾರು 300 ರೂ.ಗಳಂತೆ ಮಾರಾಟವಾಗುತ್ತವೆ. ರಂಜಾನ್ ವೇಳೆ ಇವುಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲಾಗುತ್ತದೆ ಎಂದು ರಸೆಲ್ ಮಾರುಕಟ್ಟೆ ಹಣ್ಣು ಮತ್ತು ಡ್ರೈ ಫ್ರೂಟ್ಸ್ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇದ್ರೀಸ್ ಚೌಧರಿ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ರಂಜಾನ್ ಹಬ್ಬದ ಹಿನ್ನೆಲೆ ನಗರದಲ್ಲಿ ಬಹುತೇಕ ವ್ಯಾಪಾರಿಗಳು ಈಗಾಗಲೇ ಸಾಕಷ್ಟು ಡ್ರೈ ಫ್ರೂಟ್ಸ್ ಸ್ಟಾಕ್ ಮಾಡಿಕೊಂಡಿದ್ದಾರೆ. ಹಬ್ಬದ ಕಾಲದಲ್ಲಿ ಮಾರಾಟ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ನಾವು ಮುಂಚಿತವಾಗಿ ಡ್ರೈ ಫ್ರೂಟ್ಸ್ ಸಂಗ್ರಹಿಸಿಡುತ್ತೇವೆ. ಆದ್ದರಿಂದ ಈದ್ ತನಕ ಯಾವುದೇ ಕೊರತೆ ಎದುರಾಗುವುದಿಲ್ಲ. ಆದರೆ ಯುದ್ಧ ಪರಿಸ್ಥಿತಿ ಮುಂದುವರಿದರೆ ಬಳಿಕ ಸಮಸ್ಯೆ ಗಂಭೀರವಾಗಬಹುದು ಎಂದು ಅವರು ಎಚ್ಚರಿಸಿರುವುದಾಗಿಯೂ ವರದಿ ಉಲ್ಲೇಖಿಸಿದೆ.

ಬೆಂಗಳೂರಿನ ಹಲವೆಡೆ ಡ್ರೈ ಫ್ರೂಟ್ಸ್ ಬೆಲೆ ಏರಿಕೆ

ಬೆಂಗಳೂರಿನ ಕೆಲವು ವ್ಯಾಪಾರಿಗಳು ಈಗಾಗಲೇ ಬೆಲೆ ಏರಿಕೆ ಮಾಡಿದ್ದಾರೆ. ಪಿಸ್ತಾ ಬೆಲೆಯಲ್ಲಿ ಈಗಾಗಲೇ ಸುಮಾರು 200 ರೂ. ಏರಿಕೆಯಾಗಿದೆ. ಬೇಡಿಕೆ ಹೆಚ್ಚಿದ್ದು, ಸ್ಟಾಕ್ ಕಡಿಮೆ ಇರುವ ಕಾರಣ ದರ ಹೆಚ್ಚಿಸಬೇಕಾಯಿತು ಎಂದು ಶಿವಾಜಿನಗರದ ಕೆಎಚ್ ಮೇವಾ ಅಂಗಡಿಯ ಮಾಲೀಕ ಅಬ್ದುಲ್ ಹಮೀದ್ ತಿಳಿಸಿದ್ದಾಗಿಯೂ ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ.

ಬೆಂಗಳೂರಿನಲ್ಲಿ ಈಗ ಹೇಗಿದೆ ಡ್ರೈ ಫ್ರೂಟ್ಸ್ ದರ?

ಪ್ರಸ್ತುತ ಬೆಂಗಳೂರಿನ ಮಾರುಕಟ್ಟೆಯಲ್ಲಿ ಇರಾನ್‌ನಿಂದ ಆಮದು ಆಗುವ ಪಿಸ್ತಾ ಕೆಜಿಗೆ 1,800 ರೂ.ನಿಂದ 2,100 ರೂ.ಗಳವರೆಗೆ ಮಾರಾಟವಾಗುತ್ತಿದೆ. ಅಂಜೂರ ಸುಮಾರು 1,600 ರೂ., ಮಾಮ್ರಾ ಬಾದಾಮಿ 2,500 ರೂ., ಪೈನ್ ಬೀಜಗಳು 8,000 ರೂ.ಗಳ ದರದಲ್ಲಿ ಮಾರಾಟವಾಗುತ್ತಿವೆ.

ಇರಾನ್ ಕೇಸರಿಗೂ ಭಾರೀ ಬೇಡಿಕೆ

ಇರಾನಿನ ಕೇಸರಿಗೆ ಕೂಡ ಭಾರೀ ಬೇಡಿಕೆ ಇದೆ. ಜಗತ್ತಿನಲ್ಲೇ ಉತ್ತಮ ತಳಿಯ ಕೇಸರಿ ಎಂದು ಪರಿಗಣಿಸಲ್ಪಡುವ ಇರಾನಿನ ಕೇಸರಿ ಪ್ರಸ್ತುತ ಕೆಜಿಗೆ 2.5 ಲಕ್ಷ ರೂ.ನಿಂದ 3 ಲಕ್ಷ ರೂ. ದರ ಹೊಂದಿದೆ. ಮುಂದಿನ ಎರಡು ವಾರಗಳಲ್ಲಿ ಇದು 4 ಲಕ್ಷ ರೂ. ತಲುಪುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ.

ಡ್ರೈ ಫ್ರೂಟ್ಸ್ ಮಾತ್ರವಲ್ಲದೆ ಜಾಯಿಕಾಯಿ, ದಾಲ್ಚಿನ್ನಿ, ಸ್ಟಾರ್ ಸೋಂಪು ಸೇರಿದಂತೆ ಕೆಲವು ಮಸಾಲೆಗಳು ಕೂಡ ಇರಾನ್‌ನಿಂದಲೇ ಆಮದಾಗುತ್ತವೆ. ಇರಾನ್‌ನಲ್ಲಿ ವ್ಯಾಪಾರ ಮತ್ತು ಬಂದರುಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾದರೆ, ಅಫ್ಘಾನಿಸ್ತಾನದಿಂದ ಬರುವ ಸರಕುಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದನ್ನೂ ಓದಿ: ಕೊಲ್ಲಿ ರಾಷ್ಟ್ರಗಳು, ಇರಾನ್​​ನಿಂದ ಬೆಂಗಳೂರಿಗೆ ಬರಬೇಕಿದ್ದ ವಿಮಾನಗಳ ಸಂಚಾರ ರದ್ದು

ಒಟ್ಟಿನಲ್ಲಿ, ಇರಾನ್ ಇಸ್ರೇಲ್ ಸಂಘರ್ಷ ಬೆಂಗಳೂರಿನ ಡ್ರೈ ಫ್ರೂಟ್ಸ್ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುವ ಸೂಚನೆಗಳು ಕಾಣಿಸುತ್ತಿದ್ದು, ಮುಂದಿನ ವಾರಗಳಲ್ಲಿ ಬೆಲೆ ಏರಿಕೆಯ ಬಿಸಿ ಎದುರಿಸಬೇಕಾಗಬಹುದು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:25 am, Tue, 3 March 26

Source link

ಟೀಮ್ ಇಂಡಿಯಾಗೆ ಆಯ್ಕೆ ಮಾಡಿ… ಸೌರವ್ ಗಂಗೂಲಿ ಮನವಿ – Kannada News | Sourav Ganguly backs Auqib Nabi for Team India

ಜಮ್ಮು-ಕಾಶ್ಮೀರ ತಂಡದ ವೇಗಿ ಆಖಿಬ್ ನಬಿ (Auqib Nabi) ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡುವಂತೆ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಸೂಚಿಸಿದ್ದಾರೆ. 2025-26ರ ದೇಶೀಯ ಕ್ರಿಕೆಟ್ ಸೀಸನ್​ನಲ್ಲಿ ನಬಿ ಅವರ ಅದ್ಭುತ ಪ್ರದರ್ಶನವನ್ನು ಕೊಂಡಾಡಿರುವ ಗಂಗೂಲಿ, ಅವರ ಆಯ್ಕೆಗೆ ಇದು ಸೂಕ್ತವಾದ ಸಮಯ ಎಂದಿದ್ದಾರೆ.

2025-26ರ ರಣಜಿ ಟ್ರೋಫಿ ಫೈನಲ್‌ನಲ್ಲಿ ಕರ್ನಾಟಕದ ವಿರುದ್ಧ ಆಖಿಬ್ ನಬಿ 5 ವಿಕೆಟ್ ಪಡೆದಿದ್ದರು. ಅಲ್ಲದೆ ಚೊಚ್ಚಲ ಬಾರಿ ಜಮ್ಮು-ಕಾಶ್ಮೀರ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದರ ಬೆನ್ನಲ್ಲೇ ನಬಿ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡುವಂತೆ ಗಂಗೂಲಿ ಸೂಚಿಸಿದ್ದಾರೆ.

ಆಖಿಬ್ ನಬಿ ಶೀಘ್ರದಲ್ಲೇ ಟೀಮ್ ಇಂಡಿಯಾ ಪರ ಆಡಲಿದ್ದಾರೆ ಎಂಬ ವಿಶ್ವಾಸವಿದೆ. ಜುಲೈ 2026ರ ಇಂಗ್ಲೆಂಡ್ ಪ್ರವಾಸಕ್ಕೆ ಇವರು ಅತ್ಯಂತ ಸೂಕ್ತ ಬೌಲರ್. ಇಂಗ್ಲೆಂಡ್‌ನಂತಹ ಸ್ವಿಂಗ್ ಪೂರಕ ಪರಿಸ್ಥಿತಿಗಳಲ್ಲಿ ಚೆಂಡನ್ನು ಎರಡೂ ಕಡೆ ಮೂವ್ ಮಾಡುವ ನಬಿ ಅವರ ಕಲೆ ಭಾರತ ತಂಡಕ್ಕೆ ದೊಡ್ಡ ಶಕ್ತಿಯಾಗಲಿದೆ ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ಕಠಿಣ ಪರಿಸ್ಥಿತಿಗಳಿಂದ ಬಂದ ನಬಿ ಅವರು ಅಷ್ಟೇ ಕಠಿಣವಾಗಿ ಪರಿಶ್ರಮ ಪಟ್ಟಿದ್ದಾರೆ. ಇದೀಗ ಅದ್ಭುತ ಲಯದಲ್ಲಿರುವ ಅವರನ್ನು ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆ ಮಾಡುವುದು ಸೂಕ್ತ. ಅವರ ಇಂಗ್ಲೆಮಡ್​ನ ಸ್ವಿಂಗ್ ಪೂರಕ ಪಿಚ್​ಗಳಲ್ಲಿ ಅತ್ಯುತ್ತಮ ದಾಳಿ ಸಂಘಟಿಸಬಲ್ಲರು ಎಂದು ಗಂಗೂಲಿ ಹೇಳಿದ್ದಾರೆ.

ಇದಕ್ಕೂ ಮುನ್ನ ಟೀಮ್ ಇಂಡಿಯಾದ ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಆಖಿಬ್ ನಬಿ ಅವರ ಪ್ರದರ್ಶನವನ್ನು ‘ಅಪ್ರತಿಮ ಚಾಂಪಿಯನ್’ ಎಂದು ಬಣ್ಣಿಸಿದ್ದರು. ಹಾಗೆಯೇ ರವಿಚಂದ್ರನ್ ಅಶ್ವಿನ್ ಅವರ ಕಳೆದ ಕೆಲ ತಿಂಗಳುಗಳಿಂದ ನಬಿ ಅವರ ಪ್ರದರ್ಶನವನ್ನು ಕೊಂಡಾಡುತ್ತಾ ಬಂದಿದ್ದಾರೆ.

ಅದರಲ್ಲೂ ಆಖಿಬ್ ನಬಿ ಅವರ ಪ್ರದರ್ಶನವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಶ್ವಿನ್ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದ್ದರು. ಇದರ ಫಲವಾಗಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಆಖಿಬ್ ನಬಿ ಬರೋಬ್ಬರಿ 8.40 ಕೋಟಿ ರೂ.ಗೆ ಹರಾಜಾಗಿದ್ದರು. ಅದರಂತೆ ಮುಂಬರುವ ಐಪಿಎಲ್​ನಲ್ಲಿ ಆಖಿಬ್ ನಬಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯಲಿದ್ದಾರೆ.

ಇದೀಗ ನಬಿ ಅವರನ್ನು ಇಂಗ್ಲೆಂಡ್ ವಿರುದ್ಧದ ಸರಣಿಗೂ ಆಯ್ಕೆ ಮಾಡುವಂತೆ ಟೀಮ್ ಇಂಡಿಯಾದ ಯಶಸ್ವಿ ನಾಯಕರುಗಳಲ್ಲಿ ಒಬ್ಬರೆನಿಸಿಕೊಂಡಿರುವ ಸೌರವ್ ಗಂಗೂಲಿ ಸೂಚಿಸಿದ್ದಾರೆ. ಹೀಗಾಗಿ ನಬಿ ಅವರಿಗೆ ಭಾರತ ತಂಡದಲ್ಲಿ ಸ್ಥಾನ ಸಿಕ್ಕರೂ ಅಚ್ಚರಿಪಡಬೇಕಿಲ್ಲ.

ಆಖಿಬ್ ನಬಿ ಅವರ 2025-26ರ ಸಾಧನೆಗಳು:

  • ಅತಿ ಹೆಚ್ಚು ವಿಕೆಟ್: ರಣಜಿ ಟ್ರೋಫಿ 2025-26ರ ಸೀಸನ್​ನಲ್ಲಿ ಕೇವಲ 10 ಪಂದ್ಯಗಳಲ್ಲಿ 60 ವಿಕೆಟ್ ಪಡೆಯುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
  • ದಾಖಲೆಯ ಬೌಲಿಂಗ್: ಒಂದೇ ರಣಜಿ ಋತುವಿನಲ್ಲಿ 7 ಬಾರಿ ‘ಐದು ವಿಕೆಟ್‌ಗಳ ಗೊಂಚಲು’ ಪಡೆದು ಹೊಸ ದಾಖಲೆ ಬರೆದಿದ್ದಾರೆ.
  • 104 ವಿಕೆಟ್ಸ್​: ಆಖಿಬ್ ನಬಿ ಕಳೆದ 2 ರಣಜಿ ಟೂರ್ನಿಗಳ ಮೂಲಕ ಮೂಲಕ ಪಡೆದಿರುವ ಒಟ್ಟು ವಿಕೆಟ್​ಗಳ ಸಂಖ್ಯೆ ಬರೋಬ್ಬರಿ 104. ಅದು ಸಹ ಕೇವಲ 18 ಪಂದ್ಯಗಳ ಮೂಲಕ.

ಇದನ್ನೂ ಒದಿ: ಇಂಡಿಯಾ ಸೋತರೆ… ಅಮೀರ್ ಗೆ ಸವಾಲಾಕಿದ ಪಾಕ್ ಕ್ರಿಕೆಟಿಗ

ಹೀಗಾಗಿಯೇ ಅದ್ಭುತ ಲಯದಲ್ಲಿರುವ ನಬಿ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಬೇಕೆಂದು ಸೌರವ್ ಗಂಗೂಲಿ ಸೂಚಿಸಿದ್ದಾರೆ. ಇತ್ತ ದಾದಾ ಕಡೆಯಿಂದ ಪ್ರಶಂಸೆ ಪಡೆದಿರುವ ಆಖಿಬ್ ನಬಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.

Published On – 10:13 am, Tue, 3 March 26

Source link

Jain Sanyasa Deeksha: ದಾವಣಗೆರೆಯ ಜೈನ್ ಸಮಾಜದ ನಾಲ್ವರಿಂದ ಸನ್ಯಾಸ ಧೀಕ್ಷೆ ಸ್ವೀಕಾರ – Kannada News | Davanagere: Jain Couple and Two Young Women Take Sanyasa Diksha in Historic Ceremony

ದಾವಣಗೆರೆಯ ಜೈನ್ ಸಮಾಜದ ನಾಲ್ವರಿಂದ ಸನ್ಯಾಸ ಧೀಕ್ಷೆ ಸ್ವೀಕಾರ

ದಾವಣಗೆರೆ, ಮಾರ್ಚ್​ 03: ಜೈನ್ ಸಮುದಾಯದಲ್ಲಿ ಅಪರೂಪದ ಆಧ್ಯಾತ್ಮಿಕ ಘಟನೆಯೊಂದು ನಗರದಲ್ಲಿ ನಡೆಯಲಿದೆ. ಜೈನ್ ಸಮಾಜದ ನಾಲ್ವರು ಸನ್ಯಾಸ ದೀಕ್ಷೆ ಸ್ವೀಕರಿಸಲು ನಿರ್ಧರಿಸಿದ್ದು, ಮಾರ್ಚ್ 4ರಂದು ನಗರದ (Davanagere) ಹೊಳೆಹೊನ್ನೂರು ತೋಟದಲ್ಲಿ ದೀಕ್ಷಾ ಮಹೋತ್ಸವ ಜರುಗಲಿದೆ. ಜೈನ ಗುರು ಅಭಯ್ ಶೇಖರ್ ಸುರೀಶ್ವರ ಮಹಾರಾಜ್ ಅವರ ಸಮ್ಮುಖದಲ್ಲಿ ಇಬ್ಬರು ಯುವತಿಯರು ಹಾಗೂ ಉದ್ಯಮಿ ದಂಪತಿ ಸನ್ಯಾಸ ಜೀವನಕ್ಕೆ ಕಾಲಿಡಲಿದ್ದಾರೆ.

ನಗರದ ಪ್ರಸಿದ್ಧ ಲಲಿತ್ ಗಾರ್ಮೆಂಟ್ಸ್ ಮಾಲೀಕರಾದ ಭರತ್ ಜೈನ್ (52) ಮತ್ತು ಅವರ ಪತ್ನಿ ಆರತಿ ಜೈನ್ (50) ಸನ್ಯಾಸ ಸ್ವೀಕರಿಸಲಿದ್ದು, ಇವರೊಂದಿಗೆ ಎಂಬಿಎ ಪದವೀಧರೆ ಕ್ರುನಾಲಿ ಜೈನ್ (30) ಹಾಗೂ ಬಿಕಾಂ ಪದವೀಧರೆ ದೀಕ್ಷಿತಾ ಜೈನ್ (28) ಸಹ ದೀಕ್ಷೆ ಪಡೆಯಲಿದ್ದಾರೆ.

ಮಕ್ಕಳ ಹಾದಿಯನ್ನೇ ಅನುಸರಿಸಿದ ದಂಪತಿ

ಕ್ರುನಾಲಿ ಜೈನ್ ಅವರು ಪುಣೆಯ ಸಿಂಬಯೋಸಿಸ್ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ದೀಕ್ಷಿತಾ ಜೈನ್ ಅವರು ಮೂಲತಃ ದಾವಣಗೆರೆಯವರಾಗಿದ್ದು, ಅರುಣ್ ಕುಮಾರ್ ಜೈನ್ ಹಾಗೂ ಅನ್ನಪೂರ್ಣ ಬಾಯಿ ಅವರ ಪುತ್ರಿಯಾಗಿದ್ದಾರೆ. ಕ್ರುನಾಲಿ ಅವರು ಕಮಲೇಶ್ ಜೈನ್ ಮತ್ತು ಬಬಿತಾ ಜೈನ್ ಅವರ ಪುತ್ರಿ. ವಿಶೇಷವೆಂದರೆ, ಭರತ್ ಜೈನ್ ಹಾಗೂ ಆರತಿ ದಂಪತಿಯ ಇಬ್ಬರು ಪುತ್ರರು ಮೂರು ವರ್ಷಗಳ ಹಿಂದೆ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು. ಮಗ್ನಶೇಖರ್ ವಿಜಯ್ ಮಹಾರಾಜ್ (28) ಹಾಗೂ ಪೂರ್ಣಶೇಖರ್ ವಿಜಯ್ (25) ಈಗ ಧಾರ್ಮಿಕ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಪುತ್ರರ ಮಾರ್ಗವನ್ನು ಅನುಸರಿಸಿ ದಂಪತಿಗಳೂ ಈಗ ಗ್ರಹಸ್ಥಾಶ್ರಮ ತ್ಯಜಿಸಿ ಧರ್ಮ ಮಾರ್ಗವನ್ನು ಆರಿಸಿಕೊಂಡಿದ್ದಾರೆ.

ಇದನ್ನೂ ಓದಿ ಸಂಸಾರದ ಜಂಜಾಟಕ್ಕಿಂತ ಸನ್ಯಾಸತ್ವ ಉತ್ತಮ: ದಾವಣಗೆರೆ ಸಿವಿಲ್ ಇಂಜಿನಿಯರಿಂಗ್ ಟಾಪರ್ ಈಗ ಜೈನ ಸನ್ಯಾಸಿ

ಸನ್ಯಾಸ ದೀಕ್ಷೆಗೆ ಮುನ್ನ ಸೋಮವಾರ ರಾತ್ರಿ ಅರುಣಾ ಟಾಕೀಸ್ ಮುಂಭಾಗದ ಹೊಳೆಹೊನ್ನೂರು ತೋಟದಲ್ಲಿ ನಾಲ್ವರಿಗೆ ಭಾವಪೂರ್ಣ ಬೀಳ್ಕೊಡುಗೆ ನೀಡಲಾಯಿತು. ಕುಟುಂಬ ಜೀವನದ ಅಂತಿಮ ದಿನವನ್ನು ಆಚರಿಸಿಕೊಂಡು, ಇಂದು (ಮಾರ್ಚ್​ 3) ನಗರದಲ್ಲಿ ಭವ್ಯ ಮೆರವಣಿಗೆ ನಡೆಯಲಿದ್ದು, ನಾಳೆ ವಿಧಿವಿಧಾನಗಳೊಂದಿಗೆ ದೀಕ್ಷಾ ಸಮಾರಂಭ ಜರುಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಹೋಳಿ ಆಚರಣೆ ವೇಳೆ ಹೊತ್ತಿಸಿದ್ದ ಬೆಂಕಿಯ ಗೋಪುರದ ಮೇಲೆ ನಡೆದ ಕಲಿಯುಗದ ಪ್ರಹ್ಲಾದ – Kannada News | Man Depicting Prahlad Enters Holi Bonfire in Mathura, Claims 45 Day Fast

ಮಥುರಾ, ಮಾರ್ಚ್​ 03: ದೇಶಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹೋಳಿ ಆಚರಣೆ ಸಂದರ್ಭದಲ್ಲಿ ಹೊತ್ತಿಸಿದ್ದ ಬೃಹತ್ ಬೆಂಕಿಯ ಗೋಪುರದ ಮೇಲೆ ವ್ಯಕ್ತಿಯೊಬ್ಬ ನಡೆದಿದ್ದಾರೆ. ಅದು ಅಲ್ಲಿಯ ಸಂಪ್ರದಾಯ, ಪ್ರತಿ ವರ್ಷ ಹೋಳಿ ಹಬ್ಬದ ಮುನ್ನಾದಿನ ಈ ಆಚರಣೆ ನಡೆಯುತ್ತದೆ. ಪ್ರಹ್ಲಾದನ ಪಾತ್ರಧಾರಿ ಈ ಬೆಂಕಿಯಲ್ಲಿ ನಡೆದುಕೊಂಡು ಹೋಗಿದ್ದಾರೆ. ಅವರು ಕಳೆದ 45 ದಿನಗಳಿಂದ ಕಠಿಣ ವ್ರತವನ್ನು ಆಚರಿಸುವುದು ಮಾತ್ರವಲ್ಲದೆ, 45 ದಿನಗಳಿಂದ ಉಪವಾಸವಿದ್ದಾರೆ. ಮನೆ ಹಾಗೂ ಕುಟುಂಬದಿಂದ ಬೇರ್ಪಟ್ಟಿರುತ್ತಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Lunar Eclipse: ಇಂದು ಕೇತುಗ್ರಸ್ತ ಚಂದ್ರಗ್ರಹಣ; ಗ್ರಹಣ ಪ್ರಾರಂಭದ ನಿಖರ ಸಮಯ ಹಾಗೂ ವಿಧಿವಿಧಾನಗಳ ಮಾಹಿತಿ ಇಲ್ಲಿದೆ – Kannada News | Grastodaya Lunar Eclipse: India Timings, Rituals and Dosha Nivaran Guide

ನಮ್ಮ ಸನಾತನ ಸಂಸ್ಕೃತಿಯಲ್ಲಿ ಗ್ರಹಣಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಇಂದು (ಮಾ.03) ಗ್ರಸ್ತೋದಯ ಪಾಕ್ಷಿಕ ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದೆ. ಇದು ಭಾರತದಲ್ಲಿ ಗೋಚರವಾಗುತ್ತದೆ. ಗ್ರಸ್ತೋದಯ ಎಂದರೆ ಸೂರ್ಯ ಅಸ್ತಮಿಸುವಾಗ ಮತ್ತು ಚಂದ್ರ ಉದಯಿಸುವಾಗ ಗ್ರಹಣ ಸಂಭವಿಸುವುದು. ಈ ಗ್ರಹಣದ ವಿಶೇಷಗಳು, ಆಚರಣೆಗಳು, ವಿಧಿವಿಧಾನಗಳು ಮತ್ತು ರಾಶಿಗಳ ಮೇಲಿನ ಪ್ರಭಾವಗಳ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿರುವ ಮಾಹಿತಿ ಇಲ್ಲಿದೆ.

ಈ ಚಂದ್ರಗ್ರಹಣವು ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಕಾರ್ತಿಕ ಮಾಸದ ಶುಕ್ಲ ಹುಣ್ಣಿಮೆಯಂದು ಸಂಭವಿಸುತ್ತಿದೆ. ಹುಣ್ಣಿಮೆಯು ನೆನ್ನೆ ಸಂಜೆ 5 ಗಂಟೆ 55 ನಿಮಿಷಕ್ಕೆ ಪ್ರಾರಂಭವಾಗಿ, ಇಂದು ಸಂಜೆ 4 ಗಂಟೆ 24 ನಿಮಿಷಕ್ಕೆ ಮುಕ್ತಾಯಗೊಳ್ಳುತ್ತದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದರಿಂದ ಸೂತಕ ಮತ್ತು ಆಚಾರ-ವಿಚಾರಗಳು ಅನ್ವಯಿಸುತ್ತವೆ.

ಗ್ರಹಣದ ಪ್ರಮುಖ ಸಮಯಗಳು:

  • ಸ್ಪರ್ಶ ಕಾಲ: ಮಧ್ಯಾಹ್ನ 2 ಗಂಟೆ 39 ನಿಮಿಷಕ್ಕೆ. ಈ ಗ್ರಹಣವು ಭರಣಿ ನಕ್ಷತ್ರದ ಎರಡನೆಯ ಪಾದದಲ್ಲಿ ಸಂಭವಿಸುತ್ತದೆ. ಆದರೆ ಭಾರತದಲ್ಲಿ ಗ್ರಹಣ ಸ್ಪರ್ಶ ಕಾಲದಲ್ಲಿ ಚಂದ್ರ ಗೋಚರ ಇರುವುದಿಲ್ಲ.
  • ಮಧ್ಯಮ ಕಾಲ: ಸಂಜೆ 4 ಗಂಟೆ 29 ನಿಮಿಷ
  • ಮೋಕ್ಷ ಕಾಲ: ಸಂಜೆ 6 ಗಂಟೆ 19 ನಿಮಿಷಕ್ಕೆ

ಗ್ರಹಣದ ಸಮಯದಲ್ಲಿ ಪಾಲಿಸಬೇಕಾದ ವಿಧಿವಿಧಾನಗಳು:

ಗ್ರಹಣದ ಅವಧಿಯಲ್ಲಿ ದೇವಾಲಯಗಳನ್ನು ಮುಚ್ಚಲಾಗುತ್ತದೆ. ಈ ಸಮಯದಲ್ಲಿ ಅನಗತ್ಯ ಪ್ರಯಾಣ ಮಾಡುವುದು ಅಷ್ಟು ಶುಭಕರವಲ್ಲ. ಗ್ರಹಣ ಪ್ರಾರಂಭವಾಗುವ ಮೊದಲೇ ಆಹಾರ ಸೇವಿಸಬೇಕು. ಕೆಲವರು ಗ್ರಹಣಕ್ಕೂ ಮೊದಲು ಸ್ನಾನ ಮಾಡುತ್ತಾರೆ, ಆದರೆ ಗ್ರಹಣ ನಂತರ ಎಲ್ಲರೂ ಕಡ್ಡಾಯವಾಗಿ ಸ್ನಾನ ಮಾಡಬೇಕು. ಗ್ರಹಣದ ಮೊದಲು ದರ್ಬೆ ಮತ್ತು ತುಳಸಿ ಎಲೆಗಳನ್ನು ಆಹಾರ ಪದಾರ್ಥಗಳ ಮೇಲೆ ಇಡುವುದು ಸಾಂಪ್ರದಾಯಿಕ ಪದ್ಧತಿ. ವೃದ್ಧರು, ಅಶಕ್ತರು, ರೋಗಿಗಳು, ಪುಟ್ಟ ಮಕ್ಕಳು ಮತ್ತು ಗರ್ಭಿಣಿಯರು ಗ್ರಹಣ ಕಾಲದಲ್ಲಿ ಮನೆಯಿಂದ ಹೊರಗೆ ಸಂಚಾರ ಮಾಡದಿರುವುದು ಒಳ್ಳೆಯದು. ಗ್ರಹಣ ಕಾಲದಲ್ಲಿ ಮಂತ್ರ-ಜಪಗಳನ್ನು ಮಾಡುವುದು ಅತ್ಯಂತ ಶುಭಕರ ಎಂದು ನಂಬಲಾಗಿದೆ.

ಇದನ್ನೂ ಓದಿ: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಗೆ ಡಬಲ್ ಧಮಾಕ!

ಗ್ರಹಣದ ದೋಷ ನಿವಾರಣೆಗೆ ವಿಶೇಷ ಪದ್ಧತಿ:

ಗ್ರಹಣ ಸ್ಪರ್ಶ ಕಾಲದಲ್ಲಿ ಬಾಳೆ ಎಲೆ ಅಥವಾ ವೀಳ್ಯದೆಲೆಯ ಮೇಲೆ ಒಂದು ಚಮಚ ಮೊಸರನ್ನ ಅಥವಾ ಹಾಲು ಮಿಶ್ರಿತ ಅನ್ನವನ್ನು ಇಟ್ಟು, ಮನೆಯ ಮುಂಬಾಗಿಲಿನ ಮುಂದೆ ನೆಲವನ್ನು ಶುದ್ಧಿ ಮಾಡಿ, ಆ ಎಲೆಯನ್ನು ಅಲ್ಲಿ ಇರಿಸಿ, ಅದರ ಮೇಲೆ ಒಂದು ಮುಚ್ಚಳವನ್ನು ಮುಚ್ಚಿ ಬಾಗಿಲನ್ನು ಮುಚ್ಚಿದರೆ, ಆ ಮನೆಗೆ ಗ್ರಹಣದ ಯಾವುದೇ ಕಂಟಕಗಳು ಅಥವಾ ದೋಷಗಳು ಬರುವುದಿಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:00 am, Tue, 3 March 26

Source link

‘ಪೆದ್ದಿ’ ಚಿತ್ರದ ‘ಹೋಯ್ ಹೋಯ್ ವೀರ’ ಹಾಡು ರಿಲೀಸ್; ರಾಮ್ ಚರಣ್ ಸ್ಟೆಪ್ಸ್ ಸೂಪರ್ – Kannada News | Pedddi Movie Hoy Hoy Veeraa Song Released Ram Charan Steps wins fans heart

ರಾಮ್ ಚರಣ್ ಅವರು ‘ಪೆದ್ದಿ’ ಸಿನಿಮಾದಲ್ಲಿ (Peddi Movie) ನಟಿಸುತ್ತಿದ್ದಾರೆ. ಈ ಚಿತ್ರದ ‘ಹೋಯ್ ಹೋಯ್ ವೀರ’ ಹಾಡು ರಿಲೀಸ್ ಆಗಿದೆ. ಈ ಮೊದಲು ಬಿಡುಗಡೆ ಆಗಿದ್ದ ‘ಚಿಕಿರಿ ಚಿಕಿರಿ’ ಹಾಡು ಸೂಪರ್ ಹಿಟ್ ಆಯಿತು. ರಾಮ್ ಚರಣ್ ಡ್ಯಾನ್ಸ್​​ಗೆ ಎಲ್ಲರೂ ಫಿದಾ ಆದರು. ಈಗ ರಿಲೀಸ್ ಆಗಿರುವ ಹಾಡು ಕೂಡ ಗಮನ ಸೆಳೆಯುವ ರೀತಿಯಲ್ಲಿ ಇದೆ.

ಈ ಮೊದಲು ರಿಲೀಸ್ ಆಗಿದ್ದ ‘ಪೆದ್ದಿ’ ಸಿನಿಮಾದ ‘ಚಿಕಿರಿ ಚಿಕಿರಿ’ ಹಾಡು ಕೋಟಿ ಕೋಟಿ ವೀಕ್ಷಣೆ ಪಡೆದಿದೆ. ಇದರಲ್ಲಿ ರಾಮ್ ಚರಣ್ ಅವರ ಸ್ಟೆಪ್ಸ್ ಸಾಕಷ್ಟು ಗಮನ ಸೆಳೆದಿತ್ತು. ಈಗ ರಿಲೀಸ್ ಆಗಿರುವ ‘ಹೋಯ್ ಹೋಯ್ ವೀರ’ದಲ್ಲಿಯೂ ಅವರು ಹೆಜ್ಜೆ ಹಾಕಿದ ರೀತಿ ಗಮನ ಸೆಳೆದಿದೆ.

‘ಪೆದ್ದಿ’ ಸಿನಿಮಾದ ಮತ್ತೊಂದು ಹೈಲೈಟ್ ಎಂದರೆ ಅದು ಎಆರ್ ರೆಹಮಾನ್ ಮ್ಯೂಸಿಕ್. ಆಸ್ಕರ್ ಪ್ರಶಸ್ತಿ ವಿಜೇತರಾದ ಅವರು ಈ ಸಿನಿಮಾಗೆ ಮ್ಯೂಸಿಕ್ ಮಾಡುತ್ತಾರೆ ಎಂದಾಗ ಕುತೂಹಲ ಮೂಡಿತು. ಈಗ ಅವರ ಬತ್ತಳಿಕೆಯಿಂದ ಉತ್ತಮ ಹಾಡುಗಳು ಹೊರ ಬರುತ್ತಿವೆ. ಈ ಹಾಡುಗಳು ಗಮನ ಸೆಳೆಯುವ ರೀತಿಯಲ್ಲಿ ಇವೆ.

‘ಪೆದ್ದಿ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಸಿನಿಮಾ ಏಪ್ರಿಲ್ 30ರಂದು ತೆರೆಗೆ ಬರುತ್ತಿದೆ. ಇತ್ತೀಚೆಗೆ ರಾಮ್ ಚರಣ್ ಅವರು ಸಿನಿಮಾದ ಡಬ್ಬಿಂಗ್ ಕೆಲಸದಲ್ಲಿ ತೊಡಗಿಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು. ಈಗ ಹಾಡುಗಳನ್ನು ರಿಲೀಸ್ ಮಾಡುವ ಮೂಲಕ ಗಮನ ಸೆಳೆಯಲಾಗುತ್ತಿದೆ.

ಇದನ್ನೂ ಓದಿ: ‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ

ಬುಚ್ಚಿ ಬಾಬು ಸನಾ ಅವರು ‘ಪೆದ್ದಿ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಜಾನ್ವಿ ಕಪೂರ್ ಹಾಗೂ ಕನ್ನಡದ ನಟ ಶಿವರಾಜ್​​ಕುಮಾರ್ ಅಭಿನಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Happy Holi 2026: ಹೋಳಿ ಹಬ್ಬಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಅರ್ಥಪೂರ್ಣ ಸಂದೇಶಗಳು – Kannada News | Happy Holi 2026: Share these Best wishes, poster, quotes on Holi with your loved ones

ಹೋಳಿ ಹಬ್ಬದ ಶುಭಾಯಗಳುImage Credit source: vecteezy

ವಸಂತ ಕಾಲದ ಆಗಮನ ಮತ್ತು ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯದ ಸಂಕೇತವನ್ನು ಸೂಚಿಸುವ ಬಣ್ಣಗಳ ಹಬ್ಬ ಹೋಳಿಯನ್ನು (Holi) ದೇಶಾದ್ಯಂತ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಫಾಲ್ಗುಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುವ ಈ ಬಣ್ಣಗಳ ಹಬ್ಬ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬಲು ಇಷ್ಟ. ಈ ಶುಭ ದಿನದಂದು ಜನ ಪರಸ್ಪರ ಬಣ್ಣ ಹಚ್ಚಿ, ಸಿಹಿ ಹಂಚುವ ಮೂಲಕ ತಮ್ಮ ಪ್ರೀತಿಪಾತ್ರರೊಂದಿಗಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತಾರೆ. ಇದು ಬಣ್ಣಗಳೊಂದಿಗೆ ಆಟವಾಡುವ ಹಬ್ಬವಷ್ಟೇ ಅಲ್ಲ, ಪ್ರೀತಿ, ವಾತ್ಸಲ್ಯ, ಸಕಾರಾತ್ಮಕತೆ ಮತ್ತು ಸಹೋದರತ್ವವನ್ನು ಹಂಚಿಕೊಳ್ಳುವ ಸುಸಂದರ್ಭವೂ ಆಗಿದೆ. ಈ ಹಬ್ಬವನ್ನು ಮತ್ತಷ್ಟು ವಿಶೇಷವಾಗಿಸಲು, ಹಬ್ಬದ ಪ್ರೀತಿಪೂರ್ವಕ ಶುಭಾಶಯಗಳನ್ನು ತಿಳಿಸಲು ನಿಮಗಾಗಿ ಇಲ್ಲಿದೆ ಅರ್ಥಪೂರ್ಣ ಸಂದೇಶಗಳು.

ಇಲ್ಲಿವೆ ನಿಮಗಾಗಿ ಹೋಳಿ ಹಬ್ಬದ ಶುಭ ಸಂದೇಶಗಳು:

  • ಬಣ್ಣಗಳ ಹಬ್ಬ ಹೋಳಿ ನಿಮಗೆ ಸುಖ ಶಾಂತಿ, ಸಮೃದ್ಧಿ ತರಲಿ, ನಿಮ್ಮ ಬಣ್ಣ ಬಣ್ಣದ ಕನಸುಗಳೆಲ್ಲಾ ನನಸಾಗಲಿ.
  • ನಿಮ್ಮ ಇಷ್ಟಾರ್ಥಗಳೆಲ್ಲಾ ನೆರವೇರಲಿ, ಹೋಳಿ ಹಬ್ಬ ಖುಷಿ, ಸಂತೋಷವನ್ನೆಲ್ಲಾ ನಿಮಗೆ ಕರುಣಿಸಲಿ, ಹೋಳಿ ಹಬ್ಬದ ಶುಭಾಶಯಗಳು.
  • ಬದುಕಿನಲ್ಲಿರುವ ಕಷ್ಟ, ನೋವುಗಳೆಲ್ಲಾ ಸುಟ್ಟು ಬೂದಿಯಾಗಲಿ, ಆನಂದದ ಬಣ್ಣ ಎಲ್ಲೆಲ್ಲೂ ತುಂಬಲಿ, ಅನುದಿನವೂ ಅನುಕ್ಷಣವೂ ನೆಮ್ಮದಿ ನಿಮ್ಮ ಬಾಳಲ್ಲಿ ನೆಲೆಗೊಳ್ಳಲ್ಲಿ, ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.
  • ಹಿಂದಿನ ಕಷ್ಟಗಳನ್ನೆಲ್ಲಾ ಮರೆಯೋಣ, ಮುಂದಿನ ಖುಷಿಯ ಜೀವನದ ವಿಶ್ವಾಸದಲ್ಲಿ ಹೆಜ್ಜೆ ಇಡೋಣ, ಸವಾಲುಗಳನ್ನು ಮೆಟ್ಟಿ ನಿಂತಿ ಜಯಿಸೋಣ, ಸರ್ವರಿಗೂ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.
  • ಬಣ್ಣಗಳ ಹಬ್ಬ ನಿಮ್ಮ ಬದುಕಿನಲ್ಲಿ ಖುಷಿಯ ಚಿತ್ತಾರವನ್ನು ಮೂಡಿಸಲಿ. ಕಷ್ಟಗಳೆಲ್ಲಾ ಮಂಜಿನಂತೆ ಕರಗಿ, ಸುಖ, ಶಾಂತಿ ನಿಮ್ಮ ಬಾಳಲ್ಲಿ ಶಾಶ್ವತವಾಗಿ ನೆಲೆಸಲಿ. ಹೋಳಿ ಹಬ್ಬದ ಶುಭಾಶಯಗಳು.
  • ಬಣ್ಣಗಳ ಹಬ್ಬದ ಈ ಶುಭ ದಿನ ನಿಮ್ಮ ಇಷ್ಟಾರ್ಥಗಳೆಲ್ಲಾ ನೆರವೇರಲಿ, ಹೋಳಿ ಹಬ್ಬ ಖುಷಿ, ಸಂತೋಷವನ್ನು ನಿಮಗೆ ಕರುಣಿಸಲಿ. ಹ್ಯಾಪಿ ಹೋಳಿ.
  • ರಂಗು ರಂಗಿನ ಹೋಳಿ ನಿಮ್ಮ ಬಾಳಲ್ಲಿ ಹರುಷ ತರಲಿ, ಬಣ್ಣಗಳ ಹಬ್ಬ ಹೋಳಿಯ ಶುಭಾಶಯಗಳು.
  • ನಿಮ್ಮ ಬದುಕಿನ ಕಹಿಗಳೆಲ್ಲಾ ಮಾಯವಾಗಿ, ಜೀವನ ಸಂತೋಷ, ಶಾಂತಿ, ನೆಮ್ಮದಿ, ಯಶಸ್ಸಿನ ಬಣ್ಣಗಳಿಂದ ತುಂಬಿರಲಿ. ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.
  • ಬಣ್ಣಗಳು, ಸಂತೋಷ, ಸಕಾರಾತ್ಮಕತೆಯ ಈ ಹಬ್ಬವನ್ನು ನಾವೆಲ್ಲರೂ ಒಟ್ಟಾಗಿ ಖುಷಿಯಿಂದ ಆಚರಿಸೋಣ. ನಿಮಗೂ ನಿಮ್ಮ ಕುಟುಂಬಕ್ಕೂ ಹೋಳಿ ಹಬ್ಬದ ಶುಭಾಶಯಗಳು.
  • ಹೋಳಿಯ ಈ ಶುಭ ದಿನದ ಸಂದರ್ಭದಲ್ಲಿ ದೇವರು ನಿಮಗೆ ಉತ್ತಮ ಆರೋಗ್ಯ, ಸಂಪತ್ತು ಧೀರ್ಗಾಯುಷ್ಯ, ಶಾಂತಿ, ನೆಮ್ಮದಿ ಮತ್ತು ಸಂತೋಷವನ್ನು ಕರುಣಿಸಲಿ.
  • ಹೋಳಿ ಹಬ್ಬದಲ್ಲಿ ಹಚ್ಚುವ ಬಣ್ಣಗಳಂತೆ ನಿಮ್ಮ ಬದುಕು ಕಲರ್‌ಫುಲ್‌ ಆಗಿರಲಿ ಎಂದು ನಾನು ಆರೈಸುತ್ತೇನೆ, ಹ್ಯಾಪಿ ಹೋಳಿ.
  • ಹೋಳಿ ಹಬ್ಬ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಬದುಕಿನಲ್ಲಿ ಖುಷಿಯೆಂಬ ರಂಗನ್ನು ತುಂಬಲಿ, ಹೋಳಿ ಹಬ್ಬದ ಶುಭಾಶಯಗಳು. ಹೋಳಿಯ ಶುಭ ಸಂದರ್ಭದಲ್ಲಿ ದೇವರು ನಿಮಗೆ ಉತ್ತಮ ಆರೋಗ್ಯ, ಸಂಪತ್ತು, ದೀರ್ಘಾಯುಷ್ಯವನ್ನು ಕರುಣಿಸಲಿ, ಶಾಂತಿ, ನೆಮ್ಮದಿ, ಸಂತೋಷವನ್ನು ಆಶಿರ್ವದಿಸಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಹೋಳಿ ಹಬ್ಬದ ಶುಭಾಶಯಗಳು.
  • ಬಣ್ಣಗಳ ರಂಗಿನಂತೆ ನಿಮ್ಮ ಲೈಫ್‌ ಕೂಡ ಕಲರ್‌ಫುಲ್‌ ಆಗಿರಲಿ, ಹ್ಯಾಪಿ ಹೋಳಿ.
  • ಬಣ್ಣಗಳ ಜೊತೆಗೆ ಬಾಂಧವ್ಯವನ್ನು ಬೆಸೆಯುವ ಹೋಳಿ ಹಬ್ಬ, ನಮ್ಮ ಸಂಬಂಧ, ಬಾಂಧವ್ಯವವನ್ನು ಮತ್ತಷ್ಟು ಬಲಪಡಿಸಲಿ, ಹೋಳಿ ಹಬ್ಬದ ಶುಭಾಶಯಗಳು.
  • ಕಲರ್‌ಫುಲ್ ಹೋಳಿ ನಿಮ್ಮ ಜೀವನದಲ್ಲಿ ಸಂತೋಷ, ಸುಖ, ಶಾಂತಿ, ನೆಮ್ಮದಿಯನ್ನು ತರಲಿ. ಹೋಳಿ ಹಬ್ಬದ ಶುಭಾಶಯಗಳು
  • ನಿಮ್ಮ ಜೀವನದ ಪ್ರತಿ ಹೆಜ್ಜೆಯಲ್ಲೂ ಸಂತೋಷವು ತುಂಬಿರಲಿ, ಹೋಳಿ ಹಬ್ಬದ ಶುಭಾಶಯಗಳು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಖಮೇನಿ ಇದ್ದ ನಿಖರವಾದ ಸ್ಥಳ, ಅಮೆರಿಕ ಹಾಗೂ ಇಸ್ರೇಲ್​ಗೆ ತಿಳಿದಿದ್ಹೇಗೆ? – Kannada News | Iran Leader Khamenei Killed: US Israel Spy Operation Uncovered Through Traffic Cam Hacks

ಟೆಹ್ರಾನ್, ಮಾರ್ಚ್​ 03: ಅಮೆರಿಕ ಹಾಗೂ ಇಸ್ರೇಲ್(Israel) ಜಂಟಿಯಾಗಿ ಇರಾನ್ ಮೇಲೆ ಸಮರ ಸಾರುತ್ತಿವೆ. ಕಳೆದ ಮೂರು ದಿನಗಳಿಂದ ದಾಳಿ, ಪ್ರತಿದಾಳಿಗಳು ನಡೆಯುತ್ತಿವೆ. ಅಮೆರಿಕ ಹಾಗೂ ಇಸ್ರೇಲ್ ಸೇನೆಯು ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲ ಅಲಿ ಖಮೇನಿಯನ್ನು ಹತ್ಯೆ ಮಾಡಿದೆ.

ಹಾಗಾದರೆ ಖಮೇನಿ ಇದ್ದ ಜಾಗ ಅಮೆರಿಕ ಹಾಗೂ ಇಸ್ರೇಲ್ ಪಡೆಗಳಿಗೆ ಅಷ್ಟು ನಿಖರವಾಗಿ ಹೇಗೆ ತಿಳಿಯಿತು ಎನ್ನುವುದಕ್ಕೆ ಉತ್ತರ ಇಲ್ಲಿದೆ. ಇಸ್ರೇಲ್ ಸುಪ್ರೀಂ ನಾಯಕ ಅಲಿ ಖಮೇನಿ ಮತ್ತು ಅವರ ಭದ್ರತಾ ಸಿಬ್ಬಂದಿಯ ಚಲನವಲನಗಳನ್ನು ಮೇಲ್ವಿಚಾರಣೆ ಮಾಡಲು ಇರಾನ್‌ನ ಟ್ರಾಫಿಕ್ ಕ್ಯಾಮೆರಾ ನೆಟ್‌ವರ್ಕ್ ಅನ್ನು ಹ್ಯಾಕ್ ಮಾಡಿ ಮೊಬೈಲ್ ಫೋನ್ ಸಿಗ್ನಲ್ ಕೂಡ ಟ್ರ್ಯಾಕ್ ಮಾಡಿತ್ತು. ಇದಕ್ಕೆ ವರ್ಷಗಳ ಕಾಲ ಸಮಯ ತೆಗೆದುಕೊಂಡಿತ್ತು ಎಂದು ಫಿನಾನ್ಶಿಯಲ್ ಟೈಮ್ಸ್​ ವರದಿ ಮಾಡಿದೆ.

ಟೆಹ್ರಾನ್‌ನಲ್ಲಿರುವ ಬಹುತೇಕ ಎಲ್ಲಾ ಟ್ರಾಫಿಕ್ ಕ್ಯಾಮೆರಾಗಳನ್ನು ಹೈಜಾಕ್ ಮಾಡಿ, ವರ್ಷಗಳಿಂದ ಮಾಹಿತಿ ಕದಿಯಲಾಗುತ್ತಿತ್ತು. ದೃಶ್ಯಗಳನ್ನು ಎನ್‌ಕ್ರಿಪ್ಟ್ ಮಾಡಿ ಟೆಲ್ ಅವಿವ್ ಮತ್ತು ದಕ್ಷಿಣ ಇಸ್ರೇಲ್‌ನಲ್ಲಿರುವ ಸರ್ವರ್‌ಗಳಿಗೆ ರವಾನಿಸಲಾಗಿದೆ.

ಅಮೆರಿಕ ಹಾಗೂ ಇಸ್ರೇಲಿ ಗುಪ್ತಚರ ಅಧಿಕಾರಿಗಳು ಖಮೇನಿ ದಿನಚರಿಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದರು. ಅವರು ಇರುವುದೆಲ್ಲಿ, ಯಾರ್ಯಾರನ್ನು ಭೇಟಿಯಾಗುತ್ತಾರೆ, ಹೇಗೆ ಮಾತನಾಡುತ್ತಾರೆ, ಏನು ಮಾತನಾಡುತ್ತಾರೆ, ಅವರನ್ನು ಕೊಲ್ಲುವುದು ಹೇಗೆ ಎಂಬುದರ ಕುರಿತು ಸಾಕಷ್ಟು ಅಧ್ಯಯನ ಮಾಡಿದ್ದರು.
ಖಮೇನಿ ಸೇರಿದಂತೆ ಇರಾನಿನ ಉನ್ನತ ಅಧಿಕಾರಿಗಳು ಶನಿವಾರ ಬೆಳಗ್ಗೆ ಟೆಹ್ರಾನ್​ನ ಸರ್ವೋಚ್ಚ ನಾಯಕನ ಮನೆಯಲ್ಲಿ ಸಭೆ ಸೇರಲು ನಿರ್ಧರಿಸಿದ್ದರು.

ಮತ್ತಷ್ಟು ಓದಿ: Iran Israel War: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತ್ಯಾನಹುಗೆ ಪಿಎಂ ಮೋದಿ ಕರೆ: ಯುದ್ಧ ನಿಲ್ಲಿಸಲು ಆಗ್ರಹ

ಸ್ಥಳೀಯ ಸಮಯ ಬೆಳಿಗ್ಗೆ 6 ಗಂಟೆ ಸುಮಾರಿಗೆ ಇರಾನ್ ಮೇಲೆ ಇಸ್ರೇಲ್  ದಾಳಿ ಆರಂಭಿಸಿತ್ತು. ವೈಮಾನಿಕ ದಾಳಿಗಳು 60 ಸೆಕೆಂಡುಗಳ ಒಳಗೆ ಮೂರು ಗುರಿಗಳನ್ನು ಹೊಡೆಯಲಾಗಿತ್ತು. ಇರಾನ್‌ನ ಸರ್ವೋಚ್ಚ ನಾಯಕ ಮತ್ತು ಕ್ರಾಂತಿಕಾರಿ ಗಾರ್ಡ್‌ನ ಮುಖ್ಯಸ್ಥರು ಸೇರಿದಂತೆ ಸುಮಾರು 40 ಹಿರಿಯ ಅಧಿಕಾರಿಗಳು ಸಾವನ್ನಪ್ಪಿದ್ದರು.
ಇರಾನ್ ತನ್ನ ಸರ್ವೋಚ್ಚ ನಾಯಕನ ಮರಣದ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ಕೆಟ್ಟ ಸುದ್ದಿ ಬಂದಿತ್ತು.

ಇಸ್ರೇಲ್ ಮಾಜಿ ಇರಾನ್ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಅವರನ್ನು ಸಹ ದಾಳಿಯಲ್ಲಿ ಕೊಂದಿದೆ ಎಂದು ಮೂಲಗಳು ಹೇಳಿವೆ. ಅಯತೊಲ್ಲಾ ಖಮೇನಿಯವರ ಸಾವು ಇರಾನ್ ಬೆಂಬಲಿಗರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಅಪರಾಧಕ್ಕೆ ಶಿಕ್ಷೆಯಾಗದೆ ಬಿಡುವುದಿಲ್ಲ ಎಂದು ಇರಾನ್‌ನ ಹೊಸ ನಾಯಕ ಪ್ರತಿಜ್ಞೆ ಮಾಡಿದ್ದಾರೆ, ಸೇಡು ತೀರಿಸಿಕೊಳ್ಳುವುದಾಗಿ ಟೆಹ್ರಾನ್ ಸ್ಪಷ್ಟಪಡಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಇಂಡಿಯಾ ಸೋತರೆ… ಅಮೀರ್ ಗೆ ಸವಾಲಾಕಿದ ಪಾಕ್ ಕ್ರಿಕೆಟಿಗ – Kannada News | Pakistan’s Ahmed Shehzad and Mohammad Amir place bets over India’s Semi Final Spot

T20 World Cup 2026: ಟಿ20 ವಿಶ್ವಕಪ್​ನ ಸೆಮಿಫೈನಲ್​ಗೆ ವೇದಿಕೆ ಸಿದ್ಧವಾಗಿದೆ. ಈ ಸೆಮಿಫೈನಲ್​ ಸುತ್ತಿಗೂ ಮುನ್ನ ಸೂಪರ್-8 ಲೀಗ್​ನ ಕೊನೆಯ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಿದ್ದವು. ಸೆಮಿಫೈನಲ್​ಗೇರಲು ಉಭಯ ತಂಡಗಳ ಪಾಲಿಗೆ ನಿರ್ಣಾಯಕವಾಗಿದ್ದ ಈ ಪಂದ್ಯಕ್ಕೂ ಮುನ್ನ ಪಾಕಿಸ್ತಾನ್ ಕ್ರಿಕೆಟಿಗರಾದ ಅಹ್ಮದ್ ಶೆಹಝಾದ್ ಹಾಗೂ ಮೊಹಮ್ಮದ್ ಅಮೀರ್ ಬಹಿರಂಗವಾಗಿಯೇ ಪಂಥ ಕಟ್ಟಿದ್ದರು. ಅದು ಸಹ ಶೋ ತ್ಯಜಿಸುತ್ತೇನೆ ಎನ್ನುವ ಮೂಲಕ ಎಂಬುದು ವಿಶೇಷ.

ಪಾಕಿಸ್ತಾನದ ಜಿಯೋ ಚಾನೆಲ್​ನಲ್ಲಿ ಪ್ರಸಾರವಾಗುವ ಹಸ್ನಾ ಮನಾ ಹೈ ಕ್ರಿಕೆಟ್ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟಿಗರಾದ ಮೊಹಮ್ಮದ್ ಅಮೀರ್, ಅಹ್ಮದ್ ಶೆಹಝಾದ್ ಹಾಗೂ ರಶೀದ್ ಲತೀಫ್ ವಿಶ್ಲೇಷಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ನಿರ್ಣಾಯಕ ಪಂದ್ಯದ ವಿಶ್ಲೇಷಣೆ ವೇಳೆ ಮೊಹಮ್ಮದ್ ಅಮೀರ್ ಟೀಮ್ ಇಂಡಿಯಾ ಸೆಮಿಫೈನಲ್​ಗೇರಲ್ಲ ಎಂದಿದ್ದರು.

ಇದೇ ವೇಳೆ ಅಹ್ಮದ್ ಶೆಹಝಾದ್ ಭಾರತ ತಂಡ ಸೆಮಿಫೈನಲ್​ನಲ್ಲಿ ಸ್ಥಾನ ಪಡೆಯುವುದು ಖಚಿತ ತಿರುಗೇಟು ನೀಡಿದ್ದರು. ಆದರೆ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಗೆಲ್ಲುವ ಸಾಧ್ಯತೆಯೇ ಇಲ್ಲ. ಟೀಮ್ ಇಂಡಿಯಾ ಸೋಲಲಿದೆ ಎಂದು ಅಮೀರ್ ಪುನರುಚ್ಚರಿಸಿದರು.

ಈ ವೇಳೆ “ಭಾರತ ಸೋತರೆ ನಾನು ಶೋ ಬಿಡುತ್ತೇನೆ” ಎಂದು ಅಹ್ಮದ್ ಶೆಹಝಾದ್ ಸವಾಲು ಹಾಕಿದ್ದಾರೆ. ಈ ಪಂಥಹ್ವಾನವನ್ನು ಮೊಹಮ್ಮದ್ ಅಮೀರ್ ಸ್ವೀಕರಿಸಿದ್ದಾರೆ.

ಇದೀಗ ವೆಸ್ಟ್ ಇಂಡೀಸ್ ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ಸೆಮಿಫೈನಲ್​ಗೇರಿದೆ. ಭಾರತ ತಂಡದ ಈ ಗೆಲುವಿನೊಂದಿಗೆ ಅಹ್ಮದ್ ಶೆಹಝಾದ್ ಅಮೀರ್​ ಜೊತೆಗಿನ ಪಂಥಹ್ವಾನದಲ್ಲಿ ಗೆದ್ದಿದ್ದಾರೆ. ಹೀಗಾಗಿ ಅವರು ಶೋ ಬಿಡುವ ಅಗತ್ಯವಿಲ್ಲ.

ಅತ್ತ ಮೊದಲಿಂದಲೂ ಭಾರತ ತಂಡ ಈ ಬಾರಿ ಸೆಮಿಫೈನಲ್​ಗೆ ತಲುಪಲ್ಲ ಎಂದೇಳುತ್ತಾ ಬಂದಿರುವ ಮೊಹಮ್ಮದ್ ಅಮೀರ್ ಇದೀಗ ಮುಖಭಂಗ ಅನುಭವಿಸಿದ್ದಾರೆ. ಅದರಲ್ಲೂ ಶೆಹಝಾದ್ ಜೊತೆ ಪಂಥ ಕಟ್ಟಿ ಇದೀಗ ಸೋತಿದ್ದಾರೆ. ಹೀಗಾಗಿಯೇ ಭಾರತೀಯ ಕ್ರಿಕೆಟ್ ಪ್ರೇಮಿಗಳು ಮೊಹಮ್ಮದ್ ಅಮೀರ್​ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ: T20 World Cup 2026: ಸೆಮಿಫೈನಲ್​ನಲ್ಲಿ 10 ಓವರ್​ಗಳ ನಿಯಮ ಜಾರಿ

ಸದ್ಯ ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಸೆಮಿಫೈನಲ್​ಗೆ ಪ್ರವೇಶಿಸಿರುವ ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಮಾರ್ಚ್ 5 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಫೈನಲ್​ಗೇರಲಿದೆ.

Source link

Exit mobile version