ಚಂದ್ರ ಗ್ರಹಣದಂದು ಭಕ್ತರಿಗೆ ಮಂತ್ರಾಲಯ ರಾಯರ ದರ್ಶನ ಇರುತ್ತಾ? ಇಲ್ಲಿದೆ ಮಾಹಿತಿ – Kannada News | Lunar Eclipse: Mantralaya Raghavendra Swamy Mutt Open for Darshan to devotees
ರಾಯಚೂರು, ಮಾರ್ಚ್ 02: ನಾಳೆ ಖಗ್ರಾಸ್ ಚಂದ್ರಗ್ರಹಣ ಹಿನ್ನೆಲೆ ದೇವಸ್ಥಾನಗಳ ಬಾಗಿಲು ಬಂದ್ ಆಗಲಿದ್ದು, ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಆದರೆ ಮಂತ್ರಾಲಯ ರಾಯರ ಮಠದಲ್ಲಿ (Mantralaya Raghavendra Swamy Mutt) ಮಾತ್ರ ಎಂದಿನಂತೆ ಗ್ರಹಣವದ ವೇಳೆಯೂ ಭಕ್ತರಿಗೆ ರಾಯರ ದರ್ಶನಕ್ಕೆ ಅವಕಾಶ ಇದೆ. ಧಾರ್ಮಿಕ ಸೇವೆಗಳು, ಪ್ರಸಾದ ಸೇವೆ ಇರಲ್ಲ. ಅಷ್ಟೇ ಅಲ್ಲ, ರಾಯರಿಗೂ ವಿಶೇಷ ಅಲಂಕಾರಗಳು ಇರಲ್ಲ, ಕೇವಲ ಜಲಾಭಿಷೇಕ ಮಾತ್ರ ಇರತ್ತೆ. ಧಾರ್ಮಿಕ ಸೇವೆಗಳು ಮಾತ್ರ ಸ್ಥಗಿತ ಸಾಮಾನ್ಯವಾಗಿ ಗ್ರಹಣಗಳು ಗೋಚರಿಸುವ…