ಚಿತ್ರೋತ್ಸವದಲ್ಲಿ ಮೆಚ್ಚುಗೆ ಪಡೆದ ‘ಬ್ರಹ್ಮ ಕಮಲ’ ಶೀಘ್ರವೇ ಬಿಡುಗಡೆ; ಬಂತು ಟ್ರೇಲರ್ – Kannada News | Kannada Movie Brahma Kamala Trailer released ft Advithi Shetty Siddu Poornachandra

ಅದ್ವಿತಿ ಶೆಟ್ಟಿ (Advithi Shetty) ಅವರು ಪ್ರಮುಖ ಪಾತ್ರ ಮಾಡಿರುವ ‘ಬ್ರಹ್ಮ ಕಮಲ’ (Brahma Kamala) ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಈ ಸಿನಿಮಾಗೆ ಸಿದ್ದು ಪೂರ್ಣಚಂದ್ರ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಹಿಂದೆ ‘ದಾರಿ ಯಾವುದಯ್ಯ ವೈಕುಂಠಕೆ’ ಸಿನಿಮಾದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡ ಅವರು, ತಾವು ಆಯ್ಕೆ ಮಾಡಿಕೊಳ್ಳುವ ಕಥೆಗಳು ಭಿನ್ನವಾಗಿರುತ್ತವೆ ಎಂಬುದನ್ನು ತಿಳಿಸಿದ್ದರು. ಈಗ ಸಿದ್ದು ಪೂರ್ಣಚಂದ್ರ ಅವರು ಮತ್ತೊಂದು ಸೂಕ್ಷ್ಮ ಕಥನಕ್ಕೆ ದೃಶ್ಯರೂಪ ನೀಡಿದ್ದಾರೆ.

ನಮ್ಮ ನಡುವಿನ ಕೌಟುಂಬಿಕ ವ್ಯವಸ್ಥೆಯೊಳಗಿನ ಹೆಣ್ಣೊಬ್ಬಳ ತಳಮಳಕ್ಕೆ ಕಣ್ಣಾದ ಕಥೆ ‘ಬ್ರಹ್ಮ ಕಮಲ’ ಸಿನಿಮಾದಲ್ಲಿದೆ. ಈ ಚಿತ್ರದ ಶೀರ್ಷಿಕೆಯೇ ಗಮನ ಸೆಳೆಯುತ್ತಿದೆ. ಸಿನಿಮಾದ ಕಥೆ ಏನು ಎಂಬುದನ್ನು ಟ್ರೇಲರ್ ಮೂಲಕ ತಿಳಿಸಲಾಗಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಕೌಟುಂಬಿಕ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗಲಿದೆ ಎಂಬ ಸುಳಿವು ಸಿಕ್ಕಿದೆ.

ಚಿತ್ರರಂಗದಲ್ಲಿ ಸಾಮಾನ್ಯವಾಗಿ ಜನಪ್ರಿಯವಾದ ಕಮರ್ಷಿಯಲ್ ಕಥಾಹಂದರದ ಸಿನಿಮಾಗಳನ್ನೇ ಬಹುತೇಕ ನಿರ್ಮಾಪಕರು ಆಯ್ಕೆ ಮಾಡಿಕೊಳ್ಳುತ್ತಾರೆ. ಅವುಗಳ ನಡುವೆ ಭಿನ್ನ ಕಥಾಹಂದರ ಸಿನಿಮಾಗಳು ಕೂಡ ಚಿತ್ರರಂಗಕ್ಕೆ ಅವಶ್ಯಕ. ಆ ನಿಟ್ಟಿನಲ್ಲಿ ‘ಬ್ರಹ್ಮ ಕಮಲ’ ಮೂಡಿಬಂದಿದೆ ಎಂದು ಚಿತ್ರತಂಡ ಹೇಳಿದೆ. ಸಾಮಾಜಿಕ ಒತ್ತಡಗಳಿಗೆ ಸಿಲುಕಿದ ಮಹಿಳೆಯ ನೋವಿನ ಕಥೆಯನ್ನು ಈ ಸಿನಿಮಾ ತೆರೆದಿಡಲಿದೆ.

‘ಬ್ರಹ್ಮ ಕಮಲ’ ಸಿನಿಮಾ ಟ್ರೇಲರ್:

‘ಬ್ರಹ್ಮ ಕಮಲ’ ಸಿನಿಮಾ ಈಗ ಬಿಡುಗಡೆಗೆ ಸಿದ್ಧವಿದೆ. ಈಗಾಗಲೇ ಬೆಂಗಳೂರು ಅಂತಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಈ ಸಿನಿಮಾಗೆ ಭರಪೂರ ಮೆಚ್ಚುಗೆ ಸಿಕ್ಕಿತ್ತು. ಪ್ರೇಕ್ಷಕರ ಒತ್ತಾಯದ ಮೇರೆಗೆ ಮೂರು ಪ್ರದರ್ಶನಗಳನ್ನು ಕಂಡಿತ್ತು ಎಂದು ಚಿತ್ರತಂಡ ಹೇಳಿದೆ. ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿರುವ ಈ ಸಿನಿಮಾಗೆ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇದನ್ನೂ ಓದಿ: ‘ಮದರ್ ಪ್ರಾಮಿಸ್’ ಬಳಿಕ ‘ಅಣ್ಣ ಫ್ರಮ್‌ ಮೆಕ್ಸಿಕೋ’ ಸಿನಿಮಾ ರಿಲೀಸ್​​ಗೆ ರೆಡಿ ಆದ ಡಾಲಿ ಧನಂಜಯ್

ನಿರ್ದೇಶನದ ಜೊತೆಗೆ ಸಿದ್ದು ಪೂರ್ಣಚಂದ್ರ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ‘ಪೂರ್ಣ ಚಂದ್ರ ಫಿಲ್ಮ್ಸ್’ ಬ್ಯಾನರ್ ಮೂಲಕ ಈ ಚಿತ್ರ ನಿರ್ಮಾಣಗೊಂಡಿದೆ. ಅದ್ವಿತಿ ಶೆಟ್ಟಿ, ಋತು ಚೈತ್ರಾ, ಲೋಕೇಂದ್ರ ಸೂರ್ಯ, ಬಾಲ ರಾಜ್ವಾಡಿ, ಮಮತಾ ರಾವುತ್, ಪ್ರಮೀಳಾ ಸುಬ್ರಮಣ್ಯ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಲೋಕೇಂದ್ರ ಸೂರ್ಯ ಅವರ ಛಾಯಾಗ್ರಹಣ, ಅನಂತ್ ಆರ್ಯನ್ ಅವರ ಸಂಗೀತ ನಿರ್ದೇಶನ, ದೀಪು ಅವರ ಸಂಕಲನ ಈ ಸಿನಿಮಾಗಿದೆ. ನಾಗರತ್ನ ಕೆ.ಹೆಚ್. ಅವರು ನಿರ್ಮಾಣ ನಿರ್ವಹಣೆ ಮಾಡಿದ್ದಾರೆ. ಪುಟ್ಟರಾಜು ಮತ್ತು ಪ್ರಮೀಳಾ ಸುಬ್ರಮಣ್ಯ ಅವರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜಂತರ್ ಮಂತರ್​ನಲ್ಲಿ ಪ್ರತಿಭಟನೆ ಅಡ್ಡಿಪಡಿಸಲು ಜೆಇಎಂ ಶಂಕಿತ ಉಗ್ರನ ಸಂಚು: ಪೊಲೀಸರ ಸಮವಸ್ತ್ರ ಧರಿಸಿ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ – Kannada News | JeM Terror Plot to Disrupt Jantar Mantar Protest: Police Uniform Used for Violence

ಕೋಲ್ಕತ್ತಾ, ಆಗಸ್ಟ್ 02: ದೆಹಲಿಯ ಜಂತರ್ ಮಂತರ್‌ನಲ್ಲಿ ‘ನೀಟ್(NEET)’ ಪರೀಕ್ಷಾ ಅಕ್ರಮ ಖಂಡಿಸಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪೊಲೀಸ್ ಸಮವಸ್ತ್ರ ಧರಿಸಿ ಭಾರಿ ವಿಧ್ವಂಸಕ ಕೃತ್ಯ ಎಸಗಲು ‘ಜೈಶ್-ಎ-ಮೊಹಮ್ಮದ್’ (JeM) ಸಂಘಟನೆಯ ಶಂಕಿತ ಭಯೋತ್ಪಾದಕ ಮೊಹಮ್ಮದ್ ಹಮೀಮ್ ಮೊಂಡಲ್ ಸಂಚು ರೂಪಿಸಿದ್ದ ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಪಶ್ಚಿಮ ಬಂಗಾಳದ ವಿಶೇಷ ಕಾರ್ಯಪಡೆ (STF) ಈ ವಾರದ ಆರಂಭದಲ್ಲಿ ಬರ್ಧಮಾನ್‌ನಲ್ಲಿ ಮೊಂಡಲ್‌ನನ್ನು ಬಂಧಿಸಿದ್ದು, ತನಿಖೆಯ ವೇಳೆ ಈ ಸ್ಫೋಟಕ ಸತ್ಯಗಳು ಹೊರಬಂದಿವೆ.

ಪ್ರತಿಭಟನೆಯ ವೇಳೆ ಸಾರ್ವಜನಿಕರ ಹಾಗೂ ಭದ್ರತಾ ಪಡೆಗಳ ಕಣ್ಣು ತಪ್ಪಿಸಲು ಪೊಲೀಸ್ ಸಮವಸ್ತ್ರವನ್ನು ಪಡೆದುಕೊಂಡು ಪ್ರತಿಭಟನಾನಿರತರ ಮಧ್ಯೆ ತೂರಿಬಂದು ದೊಡ್ಡ ಮಟ್ಟದ ಹಿಂಸಾಚಾರಕ್ಕೆ ಸಂಚು ರೂಪಿಸಲಾಗಿತ್ತು. ಜಂತರ್ ಮಂತರ್ ಪ್ರತಿಭಟನೆಯನ್ನು ಅಡ್ಡಿಪಡಿಸುವುದಲ್ಲದೆ, ಪ್ರಮುಖ ರಾಜಕಾರಣಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಯೋಜಿಸಲಾಗಿತ್ತು ಎಂದು ಎಸ್‌ಟಿಎಫ್ ಐಜಿಪಿ ಗೌರವ್ ಶರ್ಮಾ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರನ್ನು ಗುರಿಯಾಗಿಸಲು ಮೊಂಡಲ್ ಯೋಜಿಸಿದ್ದ. ಜಾರ್ಖಂಡ್‌ನ ಸಾಹಿಬ್‌ಗಂಜ್‌ನಿಂದ ಬಂಧಿತಳಾದ ಅರ್ಪಿತಾ ಸರ್ಕಾರ್ ಜೊತೆ ಸೇರಿ ಹೌರಾದ ಹಿರಿಯ ರಾಜಕಾರಣಿಯೊಬ್ಬರ ಮಗನನ್ನು ‘ಹನಿಟ್ರ್ಯಾಪ್’ ಮಾಡಿ ಅಪಹರಿಸಲು ಹಾಗೂ ಭಾರಿ ಹಣ ಸುಲಿಗೆ ಮಾಡಲು ಯೋಜಿಸಲಾಗಿತ್ತು.

ಮತ್ತಷ್ಟು ಓದಿ: ನೋಂದಣಿ ಆಯ್ತು ‘ದಿ ಆಕ್ಸಿಡೆಂಟಲ್ ಕಾಕ್ರೋಚ್ ಪಾರ್ಟಿ’ ಸಿನಿಮಾ ಟೈಟಲ್

ಮೊಂಡಲ್ ಆರಂಭದಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ತನ್ನ ಹ್ಯಾಂಡ್ಲರ್‌ಗಳನ್ನು ಸಂಪರ್ಕಿಸಿ, ನಂತರ ವಾಟ್ಸಾಪ್ ಮತ್ತು ಟೆಲಿಗ್ರಾಮ್‌ನಂತಹ ಎನ್‌ಕ್ರಿಪ್ಟೆಡ್ ಆಪ್‌ಗಳ ಮೂಲಕ ಸಂಭಾಷಣೆ ಮುಂದುವರೆಸಿದ್ದ. ಈತನ ಮೊಬೈಲ್ ಚಾಟ್ ಇತಿಹಾಸವನ್ನು ಪರಿಶೀಲಿಸಿದಾಗ ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐಎಸ್‌ಐ’ (ISI) ಮತ್ತು ಶಹಜಾದ್ ಭಟ್ಟಿ ಗ್ಯಾಂಗ್‌ನ ರಾಣಾ, ಉಜೈರ್, ಅಬಿದ್ ಜಟ್ 333 ಮತ್ತು ಹಮದ್ ಎಂಬ ರಹಸ್ಯ ಹ್ಯಾಂಡ್ಲರ್‌ಗಳ ಜೊತೆ ಸಂಪರ್ಕದಲ್ಲಿರುವುದು ದೃಢಪಟ್ಟಿದೆ.

ಜುಲೈ 25ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದಿದ್ದ ವಿದ್ಯಾರ್ಥಿ ಪ್ರತಿಭಟನೆಯು ದಿಢೀರ್ ಹಿಂಸಾರೂಪಕ್ಕೆ ತಿರುಗಿ, ದೆಹಲಿ ಪೊಲೀಸ್ ಅಧಿಕಾರಿಗಳ ಮೇಲೆ ರೊಚ್ಚಿಗೆದ್ದ ಗುಂಪು ದಾಳಿ ನಡೆಸಿತ್ತು. ಇದೀಗ ಈ ಉಗ್ರ ಜಾಲದ ಪ್ಲಾನ್ ಬೆಳಕಿಗೆ ಬಂದಿರುವುದು, ಅಂದಿನ ಹಿಂಸಾಚಾರದಲ್ಲಿ ಸಮಾಜಘಾತಕ ಶಕ್ತಿಗಳು ಭಾಗಿಯಾಗಿದ್ದವು ಎಂಬ ಶಂಕೆಗೆ ಮತ್ತಷ್ಟು ಪುಷ್ಟಿ ನೀಡಿದೆ.

ಈ ಭಯೋತ್ಪಾದನಾ ಜಾಲದಇತರ ಶಂಕಿತ ಸದಸ್ಯರನ್ನು ಗುರುತಿಸಲು ಹಾಗೂ ಪೂರ್ವ ಭಾರತದಲ್ಲಿ ಇವರ ರಹಸ್ಯ ಜಾಲವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ಎಸ್‌ಟಿಎಫ್ ಪಡೆಗಳು ತನಿಖೆ ತೀವ್ರಗೊಳಿಸಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್, ಬಿಗಿ ಭದ್ರತಾ ವ್ಯವಸ್ಥೆ – Kannada News | Bengaluru on High Alert for Civil Police Constable Written Exam Amidst Strict Security

ಬೆಂಗಳೂರು: ಸಿವಿಲ್ ಪೊಲೀಸ್ ಪೇದೆ ನೇಮಕಾತಿಗಾಗಿ ಲಿಖಿತ ಪರೀಕ್ಷೆಯು ಇಂದು ಬೆಂಗಳೂರು ಸೇರಿದಂತೆ ಹಲವು ಕೇಂದ್ರಗಳಲ್ಲಿ ನಡೆಯುತ್ತಿದೆ. 3,991 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗಾಗಿ ನಡೆಯುತ್ತಿರುವ ಈ ಪರೀಕ್ಷೆಗೆ ಸುಮಾರು 4.5 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ರಾಜಾಜಿನಗರದ ಸಂಯುಕ್ತ ಪದವಿಪೂರ್ವ ಕಾಲೇಜು ಸೇರಿದಂತೆ ಅನೇಕ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಬೆಳಗ್ಗೆಯಿಂದಲೇ ಆಗಮಿಸಿದ್ದಾರೆ.

ಹಿಂದೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ವರದಿಯಾಗಿದ್ದರಿಂದ, ಈ ಬಾರಿ ಪರೀಕ್ಷಾ ಪ್ರಾಧಿಕಾರವು ಅತೀವ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಯಾವುದೇ ಅಕ್ರಮಗಳು ನಡೆಯದಂತೆ ಬಿಗಿ ಭದ್ರತೆ ಒದಗಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್‌ಗಳನ್ನು ಅಳವಡಿಸಲಾಗಿದ್ದು, ಮೊಬೈಲ್‌ಗಳನ್ನು ನಿಷೇಧಿಸಲಾಗಿದೆ. ಅಭ್ಯರ್ಥಿಗಳನ್ನು ಆಧಾರ್ ಕಾರ್ಡ್ ಮತ್ತು ಅರ್ಜಿ ನಮೂನೆಗಳನ್ನು ಪರಿಶೀಲಿಸಿ ಒಳಗಡೆ ಬಿಡಲಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹೂಡಿಕೆದಾರರೇ ಎಚ್ಚರ! ಫೇಸ್‌ಬುಕ್ ಜಾಹೀರಾತು ನಂಬಿ 16.2 ಲಕ್ಷ ರೂ. ಕಳೆದುಕೊಂಡ ಮಹಿಳೆ – Kannada News | Mangaluru Cyber Crime: Senior Citizen Loses Rs 16.2 Lakh in Online Investment Fraud

ಮಂಗಳೂರು, ಆಗಸ್ಟ್ 02: ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ನಡೆಯುತ್ತಿರುವ ಸೈಬರ್ ವಂಚನೆಗೆ ಮಂಗಳೂರಿನ 61 ವರ್ಷದ ಮಹಿಳೆಯೊಬ್ಬರು ಬಲಿಯಾಗಿದ್ದು, ಬರೋಬ್ಬರಿ 16.2 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತನ್ನು ನಂಬಿ ಹೂಡಿಕೆ ಮಾಡಿದ ಮಹಿಳೆ, ಕೊನೆಗೆ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ.

ವಂಚನೆ ನಡೆದಿದ್ದು ಹೇಗೆ?

ಸೈಬರ್ ಆರ್ಥಿಕ ಮತ್ತು ನಾರ್ಕೋಟಿಕ್ಸ್ (CEN) ಪೊಲೀಸ್ ಠಾಣೆಗೆ ನೀಡಿರುವ ದೂರಿನ ಪ್ರಕಾರ, ಕಳೆದ ಏಪ್ರಿಲ್‌ನಲ್ಲಿ ಮಹಿಳೆ ಫೇಸ್‌ಬುಕ್‌ನಲ್ಲಿ ಹೂಡಿಕೆಗೆ ಸಂಬಂಧಿಸಿದ ಜಾಹೀರಾತೊಂದರ ಲಿಂಕ್ ಕ್ಲಿಕ್ ಮಾಡಿ, ಟೆಲಿಗ್ರಾಂ (Telegram) ಗ್ರೂಪ್‌ಗೆ ಸೇರಿಕೊಂಡಿದ್ದರು. ಯುನೈಟೆಡ್ ಕಿಂಗ್‌ಡಮ್ (UK) ದೇಶದ ಕೋಡ್ ಹೊಂದಿರುವ ಫೋನ್ ಸಂಖ್ಯೆಗಳಿಂದ ಅಪರಿಚಿತ ವ್ಯಕ್ತಿಯೊಬ್ಬ ಸಂಪರ್ಕಿಸಿ, ಹೆಚ್ಚಿನ ಲಾಭ ನೀಡುವುದಾಗಿ ಆಮಿಷ ಒಡ್ಡಿದ್ದ.

ವಂಚಕನ ಮಾತು ನಂಬಿದ ಮಹಿಳೆ, ಏಪ್ರಿಲ್ 18 ರಂದು ಮೊದಲ ಬಾರಿಗೆ 20,372 ರೂ. ವರ್ಗಾಯಿಸಿದ್ದರು. ತದನಂತರ ಜೂನ್ 12 ರಂದು 3 ಲಕ್ಷ ರೂ., ಜೂನ್ 22 ರಂದು 3 ಲಕ್ಷ ರೂ., ಜೂನ್ 24 ರಂದು 4 ಲಕ್ಷ ರೂ. ಹಾಗೂ ಜೂನ್ 30 ರಂದು 6 ಲಕ್ಷ ರೂ.ನಂತೆ ಹಂತ-ಹಂತವಾಗಿ ಒಟ್ಟು 16.2 ಲಕ್ಷ ರೂ. ಹಣವನ್ನು ವಂಚಕರು ನೀಡಿದ ಬ್ಯಾಂಕ್ ಖಾತೆಗಳಿಗೆ ಪಾವತಿಸಿದ್ದಾರೆ.

ಪ್ರಕರಣ ದಾಖಲು

ಹಣ ಹಿಂತಿರುಗಿಸುವಂತೆ ಕೇಳಿದಾಗ ಯಾವುದೇ ಪ್ರತಿಫಲ ಸಿಗದೇ ಇದ್ದಾಗ ತಾನು ಮೋಸ ಹೋಗಿರುವುದು ಮಹಿಳೆಗೆ ಅರಿವಾಗಿದೆ. ತಕ್ಷಣ ಅವರು ಮಂಗಳೂರು ಸಿಇಎನ್ (CEN) ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ವಾಟ್ಸಾಪ್‌ಗಳಲ್ಲಿ ಬರುವ ಅನಧಿಕೃತ ಹೂಡಿಕೆ ಆಮಿಷಗಳ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಅಪರಿಚಿತ ಟೆಲಿಗ್ರಾಂ ಗ್ರೂಪ್‌ಗಳಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಳ್ಳಬೇಡಿ. ಸೈಬರ್ ವಂಚನೆಗೊಳಗಾದರೆ ತಕ್ಷಣ 1930 ಹೆಲ್ಪ್‌ಲೈನ್‌ಗೆ ಕರೆ ಮಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭೂಕುಸಿತದಿಂದ ರೈಲು ಸಂಚಾರ ಸ್ಥಗಿತ: ತೀವ್ರ ಪರದಾಡಿದ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳು – Kannada News | Landslide Disrupts Rail Services Between Hassan and Mangaluru; PC Exam Aspirants Stranded

ಹಾಸನ, ಆಗಸ್ಟ್​​ 02: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಾಸನ ಮತ್ತು ಮಂಗಳೂರು ನಡುವಿನ ರೈಲ್ವೆ ಹಳಿಯಲ್ಲಿ ಭೂಕುಸಿತ ಉಂಟಾಗಿದೆ. ಯೆಡಕುಮಾರಿ ಹಾಗೂ ಶ್ರೀವಾಗಿಲು ನಿಲ್ದಾಣಗಳ ನಡುವೆ ಗುಡ್ಡ ಕುಸಿದ ಪರಿಣಾಮ ಹಲವು ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ದಕ್ಷಿಣ ಪಶ್ಚಿಮ ರೈಲ್ವೆಯ ಮಾಹಿತಿ ಪ್ರಕಾರ, ಏಳು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಎರಡು ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಈ ಘಟನೆಯಿಂದ ನೂರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲಿಯೂ ಇಂದು ನಡೆಯಬೇಕಿದ್ದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆಗೆ ಬೆಂಗಳೂರಿಗೆ ತೆರಳುತ್ತಿದ್ದ ಪರೀಕ್ಷಾರ್ಥಿಗಳು ರೈಲುಗಳ ಅಡಚಣೆಯಿಂದ ತೀವ್ರ ತೊಂದರೆ ಅನುಭವಿಸಿದ್ದಾರೆ. ಹಾಸನ, ಸಕಲೇಶಪುರ ಮತ್ತು ಸುಬ್ರಹ್ಮಣ್ಯದಂತಹ ನಿಲ್ದಾಣಗಳಲ್ಲಿ ರೈಲುಗಳು ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಂಡು ತಮ್ಮ ಗಮ್ಯ ತಲುಪಲು ಪರದಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Happy Friendship Day 2026: ನೋವು-ನಲಿವಿನಲ್ಲಿ ಸದಾ ನಿಮ್ಮೊಂದಿಗಿರುವ ಬೆಸ್ಟ್‌ಫ್ರೆಂಡ್‌ಗೆ ಈ ರೀತಿ ಶುಭಾಶಯಗಳನ್ನು ತಿಳಿಸಿ – Kannada News | Happy Friendship Day 2026: Here Are Best Friendship Quotes To Wish Your Friends

ಸ್ನೇಹಿತರ ದಿನದ ಶುಭಾಶಯಗಳುImage Credit source: Getty Images

ಪ್ರತಿಯೊಬ್ಬರ ಬದುಕಿನಲ್ಲೂ ಬೆಲೆಯೇ ಕಟ್ಟಲಾಗದ ಸಂಬಂಧ ಎಂದರೆ ಅದು ಸ್ನೇಹ (Friendship).  ಸ್ನೇಹಕ್ಕೆ ಬಡವ, ಶ್ರೀಮಂತ ಎಂಬ ಭೇದವಿಲ್ಲ. ಜಾತಿ, ವಯಸ್ಸಿನ ಹಂಗಿಲ್ಲ. ನಿಸ್ವಾರ್ಥ ಪ್ರೀತಿಯ ಬಾಂಧವ್ಯವಿದ್ದರೆ ಅದು ಫ್ರೆಂಡ್‌ಶಿಪ್‌ ಮಾತ್ರ ಎಂದು ಹೇಳಬಹುದು. ಆದ್ದರಿಂದಲೇ ಸ್ನೇಹ ಸಂಬಂಧವನ್ನು ರಕ್ತ ಸಂಬಂಧಗಳಿಗೂ ಮೀರಿದ ಬಂಧವೆಂದು ಹೇಳುವುದು. ಫ್ರೆಂಡ್‌ಶಿಪ್‌ನ ಈ ಮಹತ್ವವನ್ನು ಸಾರಲು, ಸ್ನೇಹ ಸಂಬಂಧವನ್ನು ಸಂಭ್ರಮಿಸಲು ಭಾರತದಲ್ಲಿ ಪ್ರತಿವರ್ಷ ಆಗಸ್ಟ್‌ ಮೊದಲ ಭಾನುವಾರವನ್ನು ಫ್ರೆಂಡ್‌ಶಿಪ್‌ ಡೇ ಯನ್ನು ಆಚರಿಸಲಾಗುತ್ತದೆ. ಇದು ನಮ್ಮ ಸ್ನೇಹಿತರಿಗೆ ಶುಭ ಹಾರೈಸುವ, ಅವರ ಪ್ರೀತಿಗೆ ಧನ್ಯವಾದ ಅರ್ಪಿಸುವ ದಿನವಾಗಿದ್ದು, ಈ ದಿನ ನಿಮ್ಮ ನೋವು ನಲಿವಿನಲ್ಲಿ ಸದಾ ಜೊತೆಯಾಗಿರುವ ನಿಮ್ಮ ಬೆಸ್ಟ್‌ಫ್ರೆಂಡ್‌ಗೆ  ಶುಭಾಶಯ, ಧನ್ಯವಾದ ತಿಳಿಸಲು ಮರೆಯದಿರಿ.

ಸ್ನೇಹಿತರ ದಿನದ ಅರ್ಥಪೂರ್ಣ ಶುಭ ಸಂದೇಶಗಳು:

  • ನಾನು ನೋವು ಅಂದರೆ ಕಣ್ಣೀರು ಹಾಕುವ, ನೋವೆಲ್ಲಾ ನೂಕುವ, ಧೈರ್ಯನಾ ಹೇಳುವ ನನ್ನ ಪ್ರಾಣ ಸ್ನೇಹಿತೆಗೆ ಫ್ರೆಂಡ್‌ಶಿಪ್‌ ಡೇ ಯ ಶುಭಾಶಯಗಳು.
  • ನೀ ನನ್ನ ರಕ್ತ ಸಂಬಂಧಿಯೂ ಅಲ್ಲ, ನೀನು ನನ್ನೊಂದಿಗೆ ಆಡಿ ಬೆಳೆದವಳೂ ಅಲ್ಲ, ಬದುಕಿನ ಹಾದಿಯಲ್ಲಿ ಆಕಸ್ಮಿಕವಾಗಿ ಸಿಕ್ಕ ಅಮೂಲ್ಯ ಜೀವ ನೀನು. ನಿನ್ನಂಥ ಫ್ರೆಂಡ್‌ ಪಡೆದ ನಾನೇ ಧನ್ಯ. ಹ್ಯಾಪಿ ಫ್ರೆಂಡ್‌ಶಿಪ್‌ ಡೇ.
  • ನಮ್ಮ ಭೇಟಿ ಅಪರೂಪವಾಗಿರಬಹುದು ಆದರೆ ಮೊದಲಿದ್ದ ಸಲಿಗೆ, ಆತ್ಮೀಯತೆ, ಪ್ರೀತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬದಲಾಗುತ್ತಿರುವ ಜಗತ್ತಿನಲ್ಲಿ ಬದಲಾಗದೆ ಇರುವ ಅಮೂಲ್ಯ ರತ್ನ ನೀನು. ಈ ನನ್ನ ಮುದ್ದು ಸ್ನೇಹಿತೆಗೆ ಫ್ರೆಂಡ್‌ಶಿಪ್‌ ಡೇಯ ಶುಭಾಶಯಗಳು.
  • ನನ್ನಂತ ಬೆಸ್ಟ್‌ಫ್ರೆಂಡ್‌ ಸಿಗ್ಬೇಕು ಅಂದ್ರೆ ನೀನು ಪುಣ್ಯ ಮಾಡಿರ್ಬೇಕು ಅಂತ ತಮಾಷೆ ಮಾಡುತ್ತಿರುತ್ತೀನಿ ಅಲ್ವಾ, ಆದ್ರೆ ಏನ್‌ ಗೊತ್ತಾ, ನಿನ್ನಂತ ಬೆಸ್ಟ್‌ ಫ್ರೆಂಡ್‌ ಸಿಗೋದಕ್ಕೆ ನಾನು ತುಂಬಾ ಪುಣ್ಯ ಮಾಡಿದ್ದೇನೆ, ಈ ನನ್ನ ಫ್ರೆಂಡ್‌ಗೆ ಹ್ಯಾಪಿ ಫ್ರೆಂಡ್‌ಶಿಪ್‌ ಡೇ.
  • ನನ್ನನ್ನು ಅರಿತುಕೊಂಡು ಸದಾ ನನ್ನ ಯೋಚನೆಗಳಿಗೆ ಸಾತ್‌ ನೀಡುವ ನಿನಗೆ ನಾನೆಂದು ಚಿರಋಣಿ. ಹ್ಯಾಪಿ ಫ್ರೆಂಡ್‌ಶಿಪ್‌ ಡೇ
  • ನನ್ನ ಜೀವನದ ಸಂತೋಷದ ಕ್ಷಣಗಳಲ್ಲಿ ಮಾತ್ರವಲ್ಲ ನೋವಿನ ಸಮಯದಲ್ಲಿಯೂ ನನ್ನ  ಬೆನ್ನೆಲುಬಾಗಿ ನಿಂತಿದ್ದಕ್ಕಾಗಿ ಧನ್ಯವಾದ. ನನ್ನ ಬೆಸ್ಟ್‌ಫ್ರೆಂಡ್‌ಗೆ ಸ್ನೇಹಿತರ ದಿನದ ಶುಭಾಶಯಗಳು.
  • ಸ್ನೇಹಿತರ ದಿನದ ಶುಭಾಶಯಗಳು. ನಾನು ಹೊಂದಿರುವ ಅತ್ಯಂತ ಅಮೂಲ್ಯವಾದ ವಿಷಯವೆಂದರೆ ಅದು ನಿನ್ನ ಸ್ನೇಹ.
  • ನನ್ನ ಖುಷಿಯಲ್ಲಿ ಜೊತೆಯಾಗಿ ನಿಲ್ಲುವ, ದುಃಖದಲ್ಲಿದ್ದಾಗ ನನ್ನನ್ನು ಸಂತೈಸಿ ಶಕ್ತಿ ತುಂಬುವಈ ನನ್ನ ಬೆಸ್ಟ್‌ಫ್ರೆಂಡ್‌ಗೆ ಸ್ನೇಹ ದಿನದ ಶುಭಾಶಯಗಳು.
  • ನನ್ನ ಜೀವನದ ಅತಿ ಅಮೂಲ್ಯವಾದ ಉಡುಗೊರೆ ನೀನು. ನಮ್ಮ ಈ ಸ್ನೇಹ ಸದಾ ಕಾಲ ಹೀಗೆಯೇ ಇರಲಿ. ಹ್ಯಾಪಿ ಫ್ರೆಂಡ್‌ಶಿಪ್‌ ಡೇ.
  • ರಕ್ತ ಸಂಬಂಧ, ಜಾತಿ-ಧರ್ಮಗಳಿಗೂ ಮೀರಿದ ಸುಂದರ ಬಂಧ ಸ್ನೇಹ. ನನ್ನೆಲ್ಲಾ ಸ್ನೇಹಿತರಿಗೂ ಸ್ನೇಹಿತರ ದಿನದ ಶುಭಾಶಯಗಳು.
  • ನಿನ್ನ ಬಾಳಿನಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಗೊಳ್ಳಲಿ, ಆರೋಗ್ಯ, ಆಯಸ್ಸು ವೃದ್ಧಿಯಾಗಲಿ. ನನ್ನ ಪ್ರೀತಿಯ ಗೆಳೆಯ/ಗೆಳತಿಗೆ ಫ್ರೆಂಡ್‌ಶಿಪ್‌ ಡೇಯ ಶುಭಾಶಯಗಳು.
  • ನನ್ನ ಜೀವನದ ಪ್ರತಿಯೊಂದು ಹಂತದಲ್ಲೂ ನಾನು ನಂಬಬಹುದಾದ ವ್ಯಕ್ತಿ ನೀವು. ನಮ್ಮ ಸುಂದರ ಸ್ನೇಹ ಶಾಶ್ವತವಾಗಿ ಉಳಿಯಲಿ. ಸ್ನೇಹ ದಿನದ ಶುಭಾಶಯಗಳು.
  • ನಗೆ ನನ್ನ ಹೃದಯದಲ್ಲಿ ಯಾವಾಗಲೂ ವಿಶೇಷ ಸ್ಥಾನವಿದೆ. ನಮ್ಮ ಈ ಸುಂದರ ಸ್ನೇಹ ಶಾಶ್ವತವಾಗಿ ಉಳಿಯಲಿ. ಹ್ಯಾಪಿ ಫ್ರೆಂಡ್‌ಶಿಪ್‌ ಡೇ.
  • ಇರಬೇಕು ಒಬ್ಬ ಫ್ರೆಂಡ್‌ ನೋವುಗಳಿಗೆ ಸ್ಪಂದಿಸುತ್ತಾ, ಖುಷಿಯನ್ನು ಹಂಚಿಕೊಳ್ಳುತ್ತಾ, ತಪ್ಪುಗಳನ್ನು ತಿದ್ದುತ್ತಾ, ಆಗಾಗ್ಗೆ ರೇಗಿಸುತ್ತಾ, ಬದುಕಿಗೆ ಸ್ಫೂರ್ತಿ ತುಂಬುವ ನಿನ್ನಂಥ ಫ್ರೆಂಡ್‌ ಇರಬೇಕು. ನನ್ನ ಬೆಸ್ಟ್‌ ಫ್ರೆಂಡ್‌ಗೆ ಸ್ನೇಹಿತರ ದಿನದ ಶುಭಾಶಯಗಳು.
  • ಬಡತನ ಸಿರಿತನ ಕಡೆತನಕ ಉಳಿಯುವುದಿಲ್ಲ ಆದರೆ ಗೆಳೆತನ ಮಾತ್ರ ಕೊನೆತನಕ ಉಳಿಯುತ್ತದೆ. ನನ್ನೆಲ್ಲಾ ಸ್ನೇಹಿತರಿಗೂ ಹ್ಯಾಪಿ ಫ್ರೆಂಡ್‌ಶಿಪ್‌ ಡೇ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Weekly Horoscope: ಆಗಸ್ಟ್ 3 ರಿಂದ 9ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ – Kannada News | Zodiac Fortunes: Aries, Taurus, Gemini, Cancer Weekly Astrology

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿ ಅವರು ಆಗಸ್ಟ್ 3 ರಿಂದ ಆಗಸ್ಟ್ 9 ವರೆಗಿನ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ವಿವರಿಸಿದ್ದಾರೆ. ಈ ವಾರವು ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು ಮತ್ತು ಕೃಷ್ಣ ಪಕ್ಷವನ್ನು ಒಳಗೊಂಡಿದೆ. ಈ ವಾರದಲ್ಲಿ ಮೇಲುಕೋಟೆ ರಾಜಮುಡಿ ಉತ್ಸವ, ಗಂಗಾವತಿ ಶಿವಯೋಗಿಗಳ ವರ್ಧಂತ್ಯೋತ್ಸವ, ಬಾಲಗಂಗಾಧರ ತಿಲಕರ ಆರಾಧನಾ ಮಹೋತ್ಸವ ಮತ್ತು ಚಾಮುಂಡೇಶ್ವರಿ ವರ್ಧಂತ್ಯೋತ್ಸವದಂತಹ ಪ್ರಮುಖ ಕಾರ್ಯಕ್ರಮಗಳು ನಡೆಯಲಿವೆ. ಗ್ರಹಗಳ ಗೋಚಾರದ ಪ್ರಕಾರ, ಶನಿ ಗ್ರಹ ಮೀನ ರಾಶಿಯಲ್ಲಿ, ಬುಧ ಮತ್ತು ಕುಜ ಗ್ರಹಗಳು ಮಿಥುನ ರಾಶಿಯಲ್ಲಿ ಸಂಚಾರ ಮಾಡಲಿದ್ದು, ಗುರು ಮತ್ತು ರವಿ ಗ್ರಹಗಳು ಕರ್ಕಾಟಕ ರಾಶಿಯಲ್ಲಿ ನೆಲೆಸಿವೆ. ಕೇತು ಸಿಂಹ ರಾಶಿಯಲ್ಲಿ, ಶುಕ್ರ ಕನ್ಯಾ ರಾಶಿಯಲ್ಲಿ ಮತ್ತು ರಾಹು ಕುಂಭ ರಾಶಿಯಲ್ಲಿ ಸಂಚಾರ ಮಾಡಲಿವೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಧೋನಿಯ ವಿಶ್ವ ದಾಖಲೆ ಮುರಿದ ಇಮ್ರಾನ್ ತಾಹಿರ್ – Kannada News | Imran Tahir Breaks MS Dhoni’s All Time World Record

ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಮಹೇಂದ್ರ ಸಿಂಗ್ ಧೋನಿಯ ಹೆಸರಿನಲ್ಲಿತ್ತು. 2023 ರಲ್ಲಿ ಧೋನಿ ಐಪಿಎಲ್ ಟ್ರೋಫಿ ಗೆದ್ದಾಗ ಅವರಿಗೆ 41 ವರ್ಷ, 325 ದಿನಗಳಾಗಿತ್ತು. ಈ ಮೂಲಕ ಟಿ20 ಟ್ರೋಫಿ ಗೆದ್ದ ಅತ್ಯಂತ ಹಿರಿಯ ನಾಯಕ ಎಂಬ ವಿಶ್ವ ದಾಖಲೆ ಬರೆದಿದ್ದರು. (PC: IPL)

Source link

ಅಯೋಧ್ಯೆಯ ವೈದ್ಯಕೀಯ ಕಾಲೇಜಿನಲ್ಲಿ ಬಾಂಬ್ ‘ಸೂತ್ರ’ ಪತ್ತೆ: ಪ್ರಥಮ ವರ್ಷದ ವಿದ್ಯಾರ್ಥಿ ಸರ್ಫರಾಜ್ ಖಾನ್ ಪೊಲೀಸರ ವಶಕ್ಕೆ – Kannada News | Ayodhya Medical College Bomb Formula: Student Sarfaraz Khan Arrested, UP ATS Probe

ಅಯೋಧ್ಯೆ, ಆಗಸ್ಟ್​ 02: : ಉತ್ತರ ಪ್ರದೇಶದ ಅಯೋಧ್ಯೆ(Ayodhya)ಯಲ್ಲಿರುವ ರಾಜರ್ಷಿ ದಶರಥ್ ಸ್ವಾಯತ್ತ ವೈದ್ಯಕೀಯ ಕಾಲೇಜಿನಲ್ಲಿ ಬಾಂಬ್ ತಯಾರಿಸುವ ವಿವರಗಳಿದ್ದ ಕೈಬರಹದ ಟಿಪ್ಪಣಿ ಸಿಕ್ಕ ಬೆನ್ನಲ್ಲೇ, ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವಿದ್ಯಾರ್ಥಿಯನ್ನು ಬಲರಾಂಪುರ ಮೂಲದ ಸರ್ಫರಾಜ್ ಖಾನ್ ಎಂದು ಗುರುತಿಸಲಾಗಿದೆ. ಈತ ಕಾಲೇಜಿನ 2025 ರ ಎಕ್ಸ್-ರೇ ಟೆಕ್ನಾಲಜಿ ಬ್ಯಾಚ್‌ನ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಾನೆ. ಶನಿವಾರ ಬೆಳಗ್ಗೆ ಎಕ್ಸ್-ರೇ ಕೊಠಡಿಗೆ ಕರ್ತವ್ಯಕ್ಕೆ ತೆರಳಿದ್ದ ವಿದ್ಯಾರ್ಥಿಗಳಿಗೆ ಕಾಗದದ ಟಿಪ್ಪಣಿಯೊಂದು ಸಿಕ್ಕಿದೆ. ಶುಕ್ರವಾರ ರಾತ್ರಿ ಇದೇ ಕೊಠಡಿಯಲ್ಲಿ ಸರ್ಫರಾಜ್ ಇದ್ದ ಎನ್ನಲಾಗಿದೆ.

ಈ ಕೈಬರಹದ ದಾಖಲೆಯಲ್ಲಿ ಬಾಂಬ್ ತಯಾರಿಸಲು ಬೇಕಾದ ಅಮೋನಿಯಂ ಕಾರ್ಬೋನೇಟ್, ನೈಟ್ರಿಕ್ ಆಮ್ಲ, ಕೆಂಪು ರಂಜಕ, ಕೆಂಪು ಸಲ್ಫೈಡ್ ಹಾಗೂ ಗೇಜ್ ವೈರ್‌ನಂತಹ ರಾಸಾಯನಿಕಗಳ ವಿವರಗಳಿದ್ದವು. ಕಾಲೇಜಿನ ಮುಖ್ಯ ವೈದ್ಯಕೀಯ ಅಧೀಕ್ಷಕ (CMS) ಡಾ. ಅರವಿಂದ್ ಸಿಂಗ್ ಅವರು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದು, ಸರ್ಫರಾಜ್ ಜೊತೆ ಕರ್ತವ್ಯದಲ್ಲಿದ್ದ ಇನ್ನಿಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಅಯೋಧ್ಯೆಯಲ್ಲಿ ತೀವ್ರಗೊಂಡ ಭದ್ರತೆ ಮತ್ತು ತನಿಖೆ
ಟಿಪ್ಪಣಿ ಬರೆದಿರುವುದರ ಹಿಂದೆ ಯಾವುದೇ ಕ್ರಿಮಿನಲ್ ಅಥವಾ ಭಯೋತ್ಪಾದನಾ ಸಂಚು ಇದೆಯೇ ಎಂಬ ಬಗ್ಗೆ ಪೊಲೀಸರು ಹಾಗೂ ಉತ್ತರ ಪ್ರದೇಶ ಎಟಿಎಸ್‌ (UP-ATS) ಪಡೆಗಳು ತನಿಖೆ ನಡೆಸುತ್ತಿವೆ. ಘಟನೆ ಬೆನ್ನಲ್ಲೇ ವೈದ್ಯಕೀಯ ಕಾಲೇಜು ಆಡಳಿತ ಮಂಡಳಿಯು ಕ್ಯಾಂಪಸ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದು, ಎಕ್ಸ್-ರೇ, ಲ್ಯಾಬ್ ಹಾಗೂ ಹಾಸ್ಟೆಲ್ ಕೊಠಡಿಗಳಲ್ಲಿ ತಪಾಸಣೆ ನಡೆಸಿದೆ.

ಮತ್ತಷ್ಟು ಓದಿ: ಅಯೋಧ್ಯೆ ರಾಮ ಮಂದಿರದಲ್ಲಿ ಮಹಾವಂಚನೆ ಬಯಲು:ಕಾಣಿಕೆ ಕಳ್ಳತನ ಮಾತ್ರವಲ್ಲ, ನಕಲಿ ರಶೀದಿ ನೀಡಿ ಭಕ್ತರಿಗೆ ಕೋಟಿ ಕೋಟಿ ನಾಮ

2025ರ ನವೆಂಬರ್ 10 ರಂದು ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟಗೊಂಡು 15 ಜನರು ಮೃತಪಟ್ಟಿದ್ದರು. ಆ ಪ್ರಕರಣದಲ್ಲಿ ಹರಿಯಾಣದ ‘ಅಲ್ ಫಲಾಹ್ ವಿಶ್ವವಿದ್ಯಾಲಯ’ದ ಸಿಬ್ಬಂದಿ ಭಾಗಿಯಾಗಿದ್ದ ‘ಜೈಶ್-ಎ-ಮೊಹಮ್ಮದ್’ ಜಾಲ ಬೆಳಕಿಗೆ ಬಂದಿತ್ತು. ಇದೀಗ ಅಯೋಧ್ಯೆಯಂತಹ ಸೂಕ್ಷ್ಮ ಪ್ರದೇಶದ ವೈದ್ಯಕೀಯ ಕಾಲೇಜಿನಲ್ಲೇ ಇಂತಹ ಟಿಪ್ಪಣಿ ಪತ್ತೆಯಾಗಿರುವುದು ತನಿಖಾ ಸಂಸ್ಥೆಗಳಲ್ಲಿ ಆತಂಕ ಮೂಡಿಸಿದೆ.

ಬಂಧಿತ ವಿದ್ಯಾರ್ಥಿ ಸರ್ಫರಾಜ್ ಖಾನ್‌ಗೆ ಯಾವುದೇ ಉಗ್ರ ಸಂಘಟನೆಗಳ ಜೊತೆ ಸಂಪರ್ಕವಿದೆಯೇ ಅಥವಾ ಪ್ರಚೋದನಾಕಾರಿ ಜಾಲಕ್ಕೆ ಬಿದ್ದಿದ್ದಾನೆಯೇ ಎಂಬ ಕೋನದಲ್ಲಿ ಎಸ್‌ಟಿಎಫ್ (STF) ಮತ್ತು ವಿಧಿವಿಜ್ಞಾನ ತಂಡಗಳು ತನಿಖೆ ಚುರುಕುಗೊಳಿಸಿವೆ. ಘಟನೆಯ ನಂತರ ಕಾಲೇಜು ಮತ್ತು ಆಸ್ಪತ್ರೆಯ ಎಕ್ಸ್-ರೇ, ಲ್ಯಾಬ್ ಹಾಗೂ ಹಾಸ್ಟೆಲ್ ಕೊಠಡಿಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:32 am, Sun, 2 August 26

Source link

ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆ ಅಬ್ಬರ: ಪ್ರಮುಖ ಡ್ಯಾಂಗಳಿಗೆ ಹೆಚ್ಚಿದ ನೀರಿನ ಒಳಹರಿವು – Kannada News | Monsoon Boom: Heavy Rain Lashes Cauvery Basin; Massive Inflows to KRS, Kabini & Major Karnataka Dams

ಕಬಿನಿ ಜಲಾಶಯದ ನೀರಿನ ಪ್ರಮಾಣImage Credit source: Tv9 Kannada

ಮೈಸೂರು, ಆಗಸ್ಟ್​​ 02: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೃಷ್ಣರಾಜಸಾಗರ (KRS) ಹಾಗೂ ಕಬಿನಿ ಜಲಾಶಯಗಳಿಗೆ ಒಳಹರಿವು ಹೆಚ್ಚಿದ್ದು, ಕಾವೇರಿ ನೀರು ಹಂಚಿಕೆ ವಿವಾದದ ನಡುವೆ ಸಂಕಷ್ಟದಲ್ಲಿದ್ದ ಕರ್ನಾಟಕ ಸರ್ಕಾರಕ್ಕೆ ತಾತ್ಕಾಲಿಕ ನೆಮ್ಮದಿ ದೊರೆತಿದೆ. ಕಳೆದ 24 ಗಂಟೆಗಳಲ್ಲಿ ಕೊಡಗು, ಕೇರಳದ ವಯನಾಡು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಿಗೆ ಒಳಹರಿವು ಗಣನೀಯವಾಗಿ ಹೆಚ್ಚಿದೆ. ಕಬಿನಿಯಿಂದ ಸುಮಾರು 25,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಪ್ರವಾಹ ಮುನ್ನೆಚ್ಚರಿಕೆ ಕೂಡ ನೀಡಲಾಗಿದೆ.

ಜುಲೈ 28ರಂದು ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಕರ್ನಾಟಕವು ಬಿಳಿಗುಂಡ್ಲುವಿನಲ್ಲಿ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ನಿರ್ದೇಶಿಸಿತ್ತು. ಈ ಆದೇಶ ಸಂಬಂಧ ಕರ್ನಾಟಕ ಸರ್ಕಾರ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಬಳಿ ಮನವಿ ಸಲ್ಲಿಸಿದ್ದರೂ, ಜುಲೈ 30ರಂದು ಪ್ರಾಧಿಕಾರ ಸಮಿತಿಯೂ ನೀರು ಹರಿಸುವಂತೆ ಆದೇಶಿಸಿತ್ತು. ಡ್ಯಾಂಗಳಲ್ಲಿ ಹೆಚ್ಚಿದ ಒಳಹರಿವಿನಿಂದ CWRC ಮತ್ತು CWMA ಆದೇಶಗಳನ್ನು ಪಾಲಿಸುವುದು ಸರ್ಕಾರಕ್ಕೆ ಈಗ ಸುಲಭವಾಗಿದ್ದು, ರೈತರ ಆಕ್ರೋಶವೂ ತಾತ್ಕಾಲಿಕವಾಗಿ ತಗ್ಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಮಳೆ ಆರ್ಭಟ: ಭಾಗಮಂಡಲದಲ್ಲಿ ಸ್ನಾನಘಟ್ಟ, ತ್ರಿವೇಣಿ ಸಂಗಮ, ಉದ್ಯಾನವನ ಮುಳುಗಡೆ

ರಾಜ್ಯದ ಡ್ಯಾಂಗಳ ಇಂದಿನ ನೀರಿನ ಮಟ್ಟ

ಕಬಿನಿ ಜಲಾಶಯ

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ನೀರಿನ ಒಳಹರಿವು ಗಣನೀಯ ಹೆಚ್ಚಳವಾಗಿದ್ದು, ಜಲಾನಯನ ಪ್ರದೇಶದಲ್ಲಿ ಪ್ರವಾಹದ ಭೀತಿ ಎದುರಾಗಿದೆ. 25 ಸಾವಿರ ಕ್ಯೂಸೆಕ್‌ನಿಂದ 30 ಸಾವಿರ ಕ್ಯೂಸೆಕ್‌ಗೆ ಒಳಹರಿವು ಹೆಚ್ಚಿದ್ದು, ಹೊರಹರಿವಿನ ಪ್ರಮಾಣ 12 ಸಾವಿರದಿಂದ 25ಸಾವಿರ ಕ್ಯೂಸೆಕ್‌ಗೆ ಏರಿಕೆ ಕಂಡಿದೆ.

ಕೆಆರ್​​ಎಸ್​​ ಡ್ಯಾಂ

124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್​​ಸೆಸ್​​ ಡ್ಯಾಂನ ನೀರು 97 ಅಡಿಗೆ ತಲುಪಿದೆ. 22,055 ಕ್ಯೂಸೆಕ್ ಒಳಹರಿವು ಮತ್ತು 1,766 ಕ್ಯೂಸೆಕ್ ಹೊರ ಹರಿವನ್ನು ಜಲಾಶಯ ಹೊಂದಿದೆ.

ಆಲಮಟ್ಟಿ ಅಣೆಕಟ್ಟೆ

ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಡ್ಯಾಂನಲ್ಲಿ 518.96 ಮೀಟರ್ ನೀರಿದ್ದು, ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಆಗಿದೆ. 1,03,773 ಕ್ಯೂಸೆಕ್ ಒಳಹರಿವು ಮತ್ತು 1,11,308 ಕ್ಯೂಸೆಕ್ ಹೊರ ಹರಿವನ್ನು ಡ್ಯಾಂ ಹೊಂದಿದೆ.

ಹೇಮಾವತಿ ಜಲಾಶಯ

ಗರಿಷ್ಠ 2922 ಅಡಿ ಸಾಮರ್ಥ್ಯ ಹೊಂದಿರುವ ಗೊರೂರು ಸಮೀಪದ ಹೇಮಾವತಿ ಜಲಾಶಯದಲ್ಲಿ 2910.37 ಅಡಿ ನೀರಿದೆ. ಡ್ಯಾಂನಲ್ಲಿ 11884 ಕ್ಯೂಸೆಕ್ ಒಳಹರಿವು ಮತ್ತು 500 ಕ್ಯೂಸೆಕ್ ಹೊರ ಹರಿವಿದೆ.

ಹಾರಂಗಿ ಡ್ಯಾಂ

ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಹಾರಂಗಿಯಲ್ಲಿರೋ ಜಲಾಶಯ ಗರಿಷ್ಟ 2859 ಅಡಿ ಮಟ್ಟ ಹೊಂದಿದ್ದು, ಹಾಲಿ 2856.79 ಅಡಿ ನೀರಿದೆ. ಜಲಾಶಯಕ್ಕೆ ಒಳಹರಿವು 10430 ಕ್ಯೂಸೆಕ್ ಇದ್ದರೆ, ಹೊರ ಹರಿವು 14470 ಕ್ಯೂಸೆಕ್ ಇದೆ.

ತುಂಗಭದ್ರಾ ಜಲಾಶ

ಗರಿಷ್ಠ 105 ಟಿಎಂಸಿ ಸಾಮರ್ಥ್ಯ ಹೊಂದಿರುವ ತುಂಗಭದ್ರಾ ಜಲಾಶಯದಲ್ಲಿ ಇಂದಿನ ನೀರಿನ ಮಟ್ಟ 40.805 ಟಿಎಂಸಿಯಷ್ಟಿದೆ. ಡ್ಯಾಂಗೆ ಒಳಹರಿವು 24,468 ಕ್ಯೂಸೆಕ್ ಇದ್ದರೆ, ಹೊರ ಹರಿವು 3,003 ಕ್ಯೂಸೆಕ್ ಇದೆ.

ನವಿಲು ತೀರ್ಥ ಮತ್ತು ಹಿಡಕಲ್​​ ಡ್ಯಾಂಗಳು

37.7 ಟಿಎಂಸಿ ನೀರಿನ ಸಾಮರ್ಥ್ಯವಿರುವ ನವಿಲು ತೀರ್ಥ ಜಲಾಶಯದಲ್ಲಿ ಇಂದು 16.170 ಟಿಎಂಸಿ ನೀರಿನ ಸಂಗ್ರಹವಿದೆ. ಹಾಗೆಯೇ 51 ಟಿಎಂಸಿ ಗರಿಷ್ಠ ಹೊಂದಿರುವ ಹಿಡಕಲ್ (ರಾಜಾ ಲಖಮಗೌಡ) ಡ್ಯಾಂನಲ್ಲಿ 35 ಟಿಎಂಸಿ ನೀರಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version