Headlines

‘ಇದು ಬೆಂಗಳೂರಿನಲ್ಲಿ ಸಹಿಸಲಾಗದ ಕ್ಷಣ’: ಟ್ರಾಫಿಕ್‌ನಲ್ಲಿ ಕಸದ ಲಾರಿಯ ಪಕ್ಕದಲ್ಲಿ ಸಿಲುಕಿಕೊಂಡ ಆಟೋದಲ್ಲಿದ್ದ ಮಹಿಳೆ – Kannada News | Pavitra Kulkarni’s Viral Video: Bangalore Traffic, Garbage Woes and Citizen Frustration

ಬೆಂಗಳೂರು, ಡಿ.23: ಕೆಲವರು ಬೆಂಗಳೂರನ್ನು (Bangalore traffic) ಮೆಚ್ಚಿಕೊಂಡರೆ, ಇನ್ನು ಕೆಲವರು ಇಲ್ಲಿನ ವ್ಯವಸ್ಥೆಯನ್ನು ದೂರುತ್ತಾರೆ. ರಾಜ್ಯ ರಾಜಧಾನಿ ಎಲ್ಲರಿಗೂ ಆಸರೆಯಾಗಿದೆ. ಆದರೆ ಇಲ್ಲಿನ ರಸ್ತೆ, ಟ್ರಾಫಿಕ್​​​​​, ವಾತಾವರಣದ ಬಗ್ಗೆ ಅನೇಕರಿಗೆ ಅಸಮಾಧಾನ ಇದೆ. ಇದೀಗ ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಪವಿತ್ರಾ ಕುಲಕರ್ಣಿ ಎಂಬುವವರು, ಹಂಚಿಕೊಂಡಿರುವ ವಿಡಿಯೋದಲ್ಲಿ ಬೆಂಗಳೂರಿನಲ್ಲಿ ತಾವು ಅನುಭವಿಸಿದ ಸಂಕಷ್ಟದ ಬಗ್ಗೆ ಹಂಚಿಕೊಂಡಿದ್ದಾರೆ. ಆಟೋದಲ್ಲಿ ಹೋಗುತ್ತಿದ್ದ ವೇಳೆ ನಡೆದ ಘಟನೆಯನ್ನು ಈ ವಿಡಿಯೋ ಮೂಲಕ ವಿವರಿಸಿದ್ದಾರೆ. ನಗರದ ಜನದಟ್ಟಣೆಯ…

Read More

17 ಶಾಸಕರ ಖರೀದಿಸಿ 2019ರಲ್ಲಿ ಸರ್ಕಾರ ರಚಿಸಿತ್ತಾ ಬಿಜೆಪಿ?: ಈಶ್ವರಪ್ಪ ಹೇಳಿಕೆ ಬೆನ್ನಲ್ಲೇ ಮತ್ತೆ ಮುನ್ನೆಲೆಗೆ ಬಂದ ಚರ್ಚೆ – Kannada News | Did BJP Buy 17 MLAs to Form Govt in 2019? KS Eshwarappa’s Explosive Remarks Reignite ‘Horse Trading’ Debate

ಶಿವಮೊಗ್ಗ, ಜೂನ್​ 22: 17 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಜುಲೈ 23, 2019ರಲ್ಲಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್​​-ಜೆಡಿಎಸ್​​ ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಂಡು ಪತನಗೊಂಡಿತ್ತು. ಬಳಿಕ ಜುಲೈ 26, 2019ರಂದು ಬಿ.ಎಸ್. ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ವೇಳೆ ಬಿಜೆಪಿ ಕುದುರೆ ವ್ಯಾಪಾರ ನಡೆಸಿರುವ ಆರೋಪವನ್ನು ಕಾಂಗ್ರೆಸ್​​ ಮತ್ತು ಜೆಡಿಎಸ್​​ ಮಾಡಿದ್ದವು. ಆದರೆ ಬಿಜೆಪಿ ಮಾತ್ರ ಇದನ್ನು ಅಲ್ಲಗಳೆದಿತ್ತು. ಆದರೀಗ ಮಾಜಿ ಸಚಿವ, ಬಿಜೆಪಿಯಿಂದ ಉಚ್ಛಾಟಿತರಾಗಿರುವ ನಾಯಕ ಕೆ.ಎಸ್​​. ಈಶ್ವರಪ್ಪ…

Read More

ಬಿಡುಗಡೆ ಆಯ್ತು, ‘ಗ್ರಾಮಾಯಣ’ ಟ್ರೈಲರ್, ಪಕ್ಕಾ ಹಳ್ಳಿ ಕತೆ – Kannada News | Vinay Rajkumar starrer Gramayana movie trailer released

ವಿನಯ್ ರಾಜ್​​ಕುಮಾರ್ (Vinay Rajkuar) ನಟನೆಯ ‘ಗ್ರಾಮಾಯಣ’ ಸಿನಿಮಾ ಸೆಟ್ಟೇರಿ ವರ್ಷಗಳೇ ಆಗಿದ್ದವು, ಹಲವು ಅಡೆ-ತಡೆ, ಬದಲಾವಣೆಗಳ ಬಳಿಕ ಕೊನೆಗೂ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ‘ಗ್ರಾಮಾಯಣ’ ಸಿನಿಮಾದ ಟ್ರೈಲರ್ ಇಂದು (ಜೂನ್ 28) ರಿಲೀಸ್ ಆಗಿದೆ. ಟ್ರೈಲರ್ ಮೊದಲ ನೋಟದಲ್ಲಿಯೇ ಗಮನ ಸೆಳೆಯುತ್ತಿದ್ದು, ತಮಿಳಿನ ವೆಟ್ರಿಮಾರನ್ ಸಿನಿಮಾಗಳ ಫೀಲ್ ಕೊಡುತ್ತಿದೆ. ‘ಗ್ರಾಮಾಯಣ’ ಟ್ರೈಲರ್ ಹೆಸರಿಗೆ ತಕ್ಕಂತೆ ಪಕ್ಕಾ ಹಳ್ಳಿಯ ಕತೆಯನ್ನು ಒಳಗೊಂಡಿದ್ದು, ಪ್ರೀತಿ, ಪ್ರೇಮ, ದ್ವೇಷ, ರಾಜಕೀಯ, ಅಸೂಯೆ, ಕುಟುಂಬ, ಶ್ರದ್ಧೆ, ಭಕ್ತಿ ಎಲ್ಲವನ್ನೂ ಒಳಗೊಂಡ ಪ್ಯಾಕೇಜಿನಂತೆ…

Read More

ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್ – Kannada News | CM DK Shivakumar Meets Nirmalanandanatha Swamiji in Bengalurus Vijayanagara, Adichunchanagiri Math Branch

ಬೆಂಗಳೂರು, ಜೂನ್ 23: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಸೋಮವಾರ ರಾತ್ರಿ ಭೇಟಿಯಾದರು. ಸಚಿವ ಎನ್. ಚಲುವರಾಯಸ್ವಾಮಿ, ಶಾಸಕ ರವಿ ಗಣಿಗ ಸಹ ಸಿಎಂ ಅವರೊಂದಿಗೆ ಸ್ವಾಮೀಜಿಗಳ ಭೇಟಿಯಾದರು. ಈ ಭೇಟಿಯಲ್ಲಿ ಯಾವುದೇ ರಾಜಕೀಯ ಇಲ್ಲ. ಸಿಎಂ ಜೊತೆ ಬಂದು ಶ್ರೀಗಳ ಆಶೀರ್ವಾದ ಪಡೆದಿದ್ದೇವೆ ಅಷ್ಟೆ ಎಂದು ರವಿ ಗಣಿಗ ಹೇಳಿದ್ದಾರೆ. ಸ್ವಾಮೀಜಿಗಳನ್ನು ಭೇಟಿ ಮಾಡಿ ಬಹಳ ದಿನಗಳಾಗಿತ್ತು. ಅದಕ್ಕಾಗಿ ಸಿಎಂ ಜೊತೆ ಬಂದು ಶ್ರೀಗಳನ್ನು…

Read More

HVF Recruitment 2026: 220 ಜೂನಿಯರ್ ಟೆಕ್ನಿಷಿಯನ್ ಹುದ್ದೆಗೆ ನೇಮಕಾತಿ; 10th ಪಾಸಾಗಿದ್ರೆ ಸಾಕು! – Kannada News | HVF Chennai Recruitment 2026: 220 Jr Technician Jobs in Defense Sector Apply Now!

ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಇಲ್ಲಿದೆ. ಚೆನ್ನೈನ ಅವಡಿಯಲ್ಲಿ ಇರುವ ಹೆವಿ ವೆಹಿಕಲ್ಸ್ ಫ್ಯಾಕ್ಟರಿ (Heavy Vehicles Factory – HVF) ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಜೂನಿಯರ್ ಟೆಕ್ನಿಷಿಯನ್ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಯಡಿಯಲ್ಲಿ ಒಟ್ಟು 220 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ತಾಂತ್ರಿಕ ಕ್ಷೇತ್ರದಲ್ಲಿ ಅನುಭವ ಹೊಂದಿರುವವರಿಗೆ ಇದು ಉತ್ತಮ ಉದ್ಯೋಗ ಅವಕಾಶವಾಗಿದೆ. ಆಸಕ್ತರು ಫೆಬ್ರವರಿ…

Read More

ಮಂಗಳೂರಿನಲ್ಲಿ ಘೋರ ದುರಂತ: ಬಾಲ್ ಎಂದು ಬಾಂಬ್​​​​​ನಿಂದ ಬೌಲಿಂಗ್: ಬ್ಯಾಟ್​ನಿಂದ ಹೊಡೆದಾಗ ಬ್ಲಾಸ್ಟ್ – Kannada News | Mangaluru: Ball Shaped Object Explodes After Boy Hits It With Bat, Injured

ಸ್ಫೋಟಗೊಂಡ ವಸ್ತು, ಬಾಲಕನ ಕಾಲಿಗೆ ಗಾಯ ಮಂಗಳೂರು, ಫೆಬ್ರವರಿ 19: ಚೆಂಡಿನ ಆಕಾರದ ವಸ್ತು ಸ್ಫೋಟಗೊಂಡು (explosion) ಓರ್ವ ಬಾಲಕನಿಗೆ ಗಾಯವಾಗಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ‌ ಬಂದಾರು ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಅಭೀಶ್​ ಎಂಬ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಆಟ ಆಡುತ್ತಿದ್ದ ವೇಳೆ ಪತ್ತೆ ಚೆಂಡಿನಾಕಾರದ ವಸ್ತು ಪತ್ತೆಯಾಗಿದೆ. ಬಾಲ್​ ಅಂದುಕೊಂಡು ಬ್ಯಾಟ್​ನಿಂದ ಹೊಡೆದಾಗ ಬ್ಲಾಸ್ಟ್ ಆಗಿದೆ. ಸದ್ಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ….

Read More

ಎಂಬಿಎ ಕಾಲಘಟ್ಟ ಮುಗಿಯಿತು, ಈಗ ಬೇಕಿರೋದು ಟ್ರೇಡ್ ಸ್ಕಿಲ್ಸ್: ಮುಖ್ಯ ಆರ್ಥಿಕ ಸಲಹೆಗಾರ ಅನಂತ ನಾಗೇಶ್ವರನ್ ಸಲಹೆ – Kannada News | No MBA, future jobs will be of trade skills, says Chief Economic Advisor V Anantha Nageswaran

ವಿ. ಅನಂತ ನಾಗೇಶ್ವರನ್Image Credit source: PTI ನವದೆಹಲಿ, ಜೂನ್ 16: ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾದ (CEA) ವಿ. ಅನಂತ ನಾಗೇಶ್ವರನ್ ಅವರು ದೇಶದ ಪ್ರಸ್ತುತ ಶಿಕ್ಷಣ ವ್ಯವಸ್ಥೆ ಮತ್ತು ಉದ್ಯೋಗ ಮಾರುಕಟ್ಟೆಯ ಕುರಿತು ಅತ್ಯಂತ ಕಟು ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ. “ಕೇವಲ ದೊಡ್ಡ ಪದವಿಗಳನ್ನು (Degrees) ಪಡೆಯುವುದರಿಂದ ಉದ್ಯೋಗ ಸಿಗುವುದಿಲ್ಲ. ಇಂದಿನ ಮಾರುಕಟ್ಟೆಗೆ ಬೇಕಿರುವುದು ಉದ್ಯೋಗದ ಕೌಶಲ್ಯಗಳು (Employability). ಯುವಜನರು ಕೇವಲ ಸರ್ಟಿಫಿಕೇಟ್‌ಗಳ ಹಿಂದೆ ಓಡುವ ಬದಲು ಪ್ರಾಯೋಗಿಕ ಕೌಶಲ್ಯ ಮತ್ತು ಉತ್ತಮ ಆರೋಗ್ಯವನ್ನು…

Read More

ನಿಮ್ಮಂತ ಕೋಚ್ ನಮಗೆ ಬೇಡ: ಗಂಭೀರ್​ನ ಅಣಕಿಸಿದ ​ಐಸ್‌ಲ್ಯಾಂಡ್ ಕ್ರಿಕೆಟ್ – Kannada News | Iceland Cricket Trolls Team India Coach Gautam Gambhir

ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಆಘಾತಕಾರಿ ಸೋಲನುಭವಿಸಿದೆ. ಮೊದಲ ಮ್ಯಾಚ್​ನಲ್ಲಿ 34 ರನ್​ಗಳಿಂದ ಸೋತಿದ್ದ ಟೀಮ್ ಇಂಡಿಯಾ ದ್ವಿತೀಯ ಪಂದ್ಯದಲ್ಲಿ 1 ರನ್​ನಿಂದ ಸೋಲೊಪ್ಪಿಕೊಂಡಿದೆ. ಈ ಎರಡು ಸೋಲುಗಳೊಂದಿಗೆ ಭಾರತ ತಂಡವು ಇದೇ ಮೊದಲ ಬಾರಿಗೆ ಐರ್ಲೆಂಡ್ ವಿರುದ್ಧ ಸರಣಿ ಸೋತಂತಾಗಿದೆ. ಈ ಸೋಲಿನ ಬೆನ್ನಲ್ಲೇ ಐಸ್‌ಲ್ಯಾಂಡ್ ಕ್ರಿಕೆಟ್ ವ್ಯಂಗ್ಯಭರಿತ ಪೋಸ್ಟ್​ವೊಂದು ಹಂಚಿಕೊಂಡು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರ ಕಾಲೆಳೆದಿದ್ದಾರೆ. ಐಸ್‌ಲ್ಯಾಂಡ್ ಕ್ರಿಕೆಟ್ ಪೋಸ್ಟ್: ಕ್ರಿಕೆಟ್ ಅಂಗಳದಲ್ಲಿ ನಡೆಯುವ ಕೆಲ ಸನ್ನಿವೇಶಗಳಿಗೆ ತಮ್ಮ…

Read More

ತಾಯಿ ಸತ್ತ ನೋವಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿ ಈಗ ಟಾಪರ್! ಸಾಧನೆಗೆ ಅಮ್ಮನ ಮಾತುಗಳೇ ಸ್ಪೂರ್ತಿಯಾಗಿದ್ದು ಹೇಗೆ?

ಮಂಗಳೂರು, ಏಪ್ರಿಲ್ 10: ಗುರುವಾರ ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ ದಕ್ಷಿಣಕನ್ನಡ  ಜಿಲ್ಲೆಯ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ರಾಜ್ಯಕ್ಕೆ ಪ್ರಥಮ ಸ್ಥಾನ (PUC Topper Disha) ಪಡೆದಿದ್ದಾಳೆ. ಈಕೆಯ ಈ ಸಾಧನೆಯ ಹಿಂದೆ ಒಂದು ನೋವಿನ ಕಥೆಯಿದೆ. ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದ ಸಮಯದಲ್ಲೇ ಅಮ್ಮನನ್ನು ಕಳೆದುಕೊಂಡ ದಿಶಾಳಿಗೆ ಧೃತಿಗೆಡದೆ ತನ್ನ ಗುರಿ ಸಾಧಿಸಲು ಪ್ರೇರೇಪಿಸಿದ್ದು ಆಕೆಯ ತಾಯಿಯ ಮಾತುಗಳು. ಪರೀಕ್ಷೆ ಮುಗಿಸಿ ಬಂದ ದಿಶಾಳಿಗೆ ಕಾದಿತ್ತು ಆಘಾತ! ದಿನೇಶ್…

Read More

5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್ – Kannada News | Devdutt Padikkal Smashed Century in VHT 2026

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಜಯ ಹಝಾರೆ ಟೂರ್ನಿಯ ಗ್ರೂಪ್-ಎ ಪಂದ್ಯದಲ್ಲಿ ಕರ್ನಾಟಕ ಪರ ದೇವದತ್ ಪಡಿಕ್ಕಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ತ್ರಿಪುರ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಪರ ಆರಂಭಿಕನಾಗಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಮೂಲಕ ಕೇವಲ 49 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹಾಫ್ ಸೆಂಚುರಿ ಬಳಿಕ ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರೆಸಿದ ದೇವದತ್ ಪಡಿಕ್ಕಲ್ 105 ಎಸೆತಗಳಲ್ಲಿ…

Read More