ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮೀ ತಿಥಿಯ ಬುಧವಾರದಂದು ಯೋಗ್ಯ ಶಿಕ್ಷಣ, ಬರುವ ಸಂಪತ್ತಿನ ರಕ್ಷಣೆ, ಅತಿಯಾದ ಆಹಾರ ಭಕ್ಷಣೆ, ಭವಿಷ್ಯದ ವೀಕ್ಷಣೆ, ಇವೆಲ್ಲ ಇರಲಿದೆ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಅಶ್ವಿನೀ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಪುನರ್ವಸು, ಯೋಗ : ಸೌಭಾಗ್ಯ, ಕರಣ : ಭದ್ರ, ಸೂರ್ಯೋದಯ – 06 – 08 am, ಸೂರ್ಯಾಸ್ತ – 06 – 37 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:23 – 13:57, ಯಮಗಂಡ ಕಾಲ 07:42 – 09:16, ಗುಳಿಕ ಕಾಲ 10:49 – 12:23
ಮೇಷ ರಾಶಿ :
ಆತ್ಮವಿಶ್ವಾಸದಿಂದ ನೀವು ದಿನವನ್ನು ಸುಗಮವಾಗಿ ಕಳೆಯುತ್ತೀರಿ. ಹಣಕಾಸಿನಲ್ಲಿ ಎಚ್ಚರಿಕೆ ಅಗತ್ಯ. ಸಂಗಾತಿಯೊಂದಿಗೆ ಜಗಳವಾದರೂ, ತಾಳ್ಮೆ ಬೇಕು. ಆಸೆಗೆ ಪೂರಕ ವಾತಾವರಣ ಸಿಕ್ಕಿದ್ದು ತೃಪ್ತಿ ನೀಡುವುದು. ಹಿರಿಯರಿಂದ ಮಾರ್ಗದರ್ಶನ ಸಿಗಬಹುದು. ಸಹಾಯ ಮಾಡುವ ಮನೋಭಾವನೆ ನಿಮಗೆ ಸಂತೋಷ ನೀಡುತ್ತದೆ. ಇಂದು ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿದ್ದು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ನಿರ್ಧಾರವನ್ನು ಮಾಡಲು ಸರಿಯಾದ ವ್ಯಕ್ತಿಗಳು ಸಿಗುವರು.
ವೃಷಭ ರಾಶಿ :
ಯಾರ ವ್ಯಕ್ತಿತ್ವವನ್ನೂ ಕೇವಲವಾಗಿ ನೋಡುವುದು ಬೇಡ. ಪ್ರೇಮ ಜೀವನದಲ್ಲಿ ಪ್ರಾಮಾಣಿಕತೆ ಮುಖ್ಯ. ದಿವಸದ ಕೊನೆಯಲ್ಲಿ ಆತ್ಮೀಯರೊಂದಿಗೆ ಸಮಯ ಕಳೆಯಬಹುದು. ಸಂಗಾತಿಯ ಪ್ರೀತಿ ನಿಮ್ಮ ನೆನಪಿನಲ್ಲಿ ಉಳಿಯುವ ರೀತಿಯಲ್ಲಿರುತ್ತದೆ. ಕೆಲವು ಸನ್ನಿವೇಶವು ನಿಮಗೆ ಇಷ್ಟವಾಗದು. ಅದರೂ ಅನಿವಾರ್ಯ ಎನಿಸೀತು. ಕೋಪವನ್ನು ಬಿಟ್ಟರೂ ಬಿಡಲಾಗದು. ನಕಾರಾತ್ಮಕ ಸೂಚನೆ ನಿಮಗೆ ಸಿಗಲಿದ್ದು, ಅದನ್ನು ನಿರ್ಲಕ್ಷ್ಯ ಮಾಡುವಿರಿ.
ಮಿಥುನ ರಾಶಿ :
ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಇರುವಾಗ ಸಹನೆವಹಿಸಿ. ಪ್ರೇಮದಲ್ಲಿ ವಿಶಿಷ್ಟ ಅನುಭವ ಸಾಧ್ಯ. ಕೆಲಸಕ್ಕಾಗಿ ಕೈಗೊಂಡ ಪ್ರಯಾಣ ಯಶಸ್ಸು ತರುತ್ತದೆ. ಭೂಮಿಯನ್ನು ಪಡೆಯಲು ಓಡಾಟಮಾಡುವಿರಿ. ಆರ್ಥಿಕ ಪರಿಸ್ಥಿತಿಯಲ್ಲಿ ಬದಲಾವಣೆ ಇರಲಿದೆ. ವ್ಯವಹಾರದಲ್ಲಿ ನಿಮ್ಮ ನಿರ್ಧಾರಗಳೇ ಅಂತಿಮವಾಗುವುದು. ಯಶಸ್ಸಿನ ಗುಟ್ಟನ್ನು ನೀವು ಯಾರಿಗೂ ಹೇಳಲಾರಿರಿ. ಮನೆಯಲ್ಲಿ ಹರ್ಷದ ವಾತಾವರಣ, ಬಂಧುಗಳ ಸಮಾಗಮ.
ಕರ್ಕಾಟಕ ರಾಶಿ :
ಅನಿರೀಕ್ಷಿತ ಲಾಭವು ಉತ್ಸಾಹ ತರುವುದು. ಪ್ರೇಮ ಜೀವನದಲ್ಲಿ ಅನಿರೀಕ್ಷಿತ ಶಾಂತಿ. ಹೆಚ್ಚು ಕೆಲಸವಿದ್ದರೂ ನೀವು ಶಕ್ತಿವಂತನಂತೆ ಕಾಣಬಹುದು. ಕೆಲಸ ಮುಗಿದ ಅನಂತರ ಮನೆಯಲ್ಲಿಯೂ ಸಮಯ ಕಳೆಯಲು ಪ್ರಯತ್ನ ಮಾಡಿ. ನಿಮ್ಮ ತಪ್ಪನ್ನು ಒಪ್ಪಿಕೊಳ್ಳಲು ನಿಮಗೆ ಸಂಕೋಚವಾಗಬಹುದು. ವಾಹನ ಮುಂತಾದ ಉದ್ಯಮವನ್ನು ನಡೆಸುತ್ತಿದ್ದರೆ ಲಾಭವು ಇರುವುದು. ಉದ್ವೇಗಕ್ಕೆ ಒಳಗಾಗಿ ಏನನ್ನಾದರೂ ಎಡವಟ್ಟು ಮಾಡಿಕೊಳ್ಳುವಿರಿ. ಯಾರಿಂದಲೋ ನಿಮಗೆ ಸಂಕಟವಾಗುವುದು.
ಸಿಂಹ ರಾಶಿ :
ಸ್ಥಾನಮಾನಕ್ಕೆ ಶೀತಲ ಸಮರ ಆರಂನಬವಾಗಲಿದೆ. ಹಣದ ಬದಲು ಸುರಕ್ಷಿತ ಹೂಡಿಕೆ ಅತ್ಯುತ್ತಮ. ಮನೆಯಲ್ಲಿ ಸಮಸ್ಯೆಗಳಿದ್ದರೂ ನೀವು ಸಮಾಧಾನದಿಂದಿರುವುದು ಉತ್ತಮ. ಉಚಿತ ಸಮಯದಲ್ಲಿ ಹೊಸದನ್ನು ಕಲಿಯಿರಿ. ಸಂಗಾತಿಯ ಬೆಂಬಲ ನಿಮಗೆ ಬೆರಗಾಗಿಸುವಷ್ಟು ಉತ್ತಮವಾಗಿರಬಹುದು. ಅನವಶ್ಯಕವಾಗಿ ಹಣವನ್ನು ವ್ಯರ್ಥ ಮಾಡಿಕೊಳ್ಳುವಿರಿ. ಸಂಗಾತಿಯ ಬೆಂಬಲ ಸಿಗಲಿದೆ. ಜೀವನಕ್ಕೆ ಕೆಲವು ಮಾರ್ಪಾಡುಗಳು ಅನಿವಾರ್ಯವಾದೀತು.
ಕನ್ಯಾ ರಾಶಿ :
ಪ್ರೇಮ ಜೀವನದಲ್ಲಿ ಗಾಢವಾದ ಅನುಭವ ಆಗುವುದು. ನಿಮ್ಮ ಶ್ರಮದ ಫಲವನ್ನು ಇತರರು ಪಡೆದರೆ ವ್ಯಥೆ ಆಗಬಹುದು. ಹಳೆ ಸ್ನೇಹಿತರ ಭೇಟಿಗೆ ಯೋಜನೆ ಮಾಡುವಿರಿ. ಹಿತಶತ್ರುಗಳು ನಿಮಗೆ ಮಾಡಿದ ಕೆಡುಕು ನಿಮಗೆ ಒಳ್ಳೆಯದೇ ಆಗಲಿದೆ. ಸರ್ಕಾರಿ ಕೆಲಸ ಮಾಡುವವರಿಗೆ ಉನ್ನತ ಸ್ಥಾನದ ವಾರ್ತೆ ಬರುವುದು. ಹೊಸ ಉದ್ಯೋಗವನ್ನು ಆರಂಭಿಸಲು ತೀವ್ರತೆಯು ಇರಲಿದೆ. ಮಕ್ಕಳನ್ನು ದೂರ ಮಾಡಿಕೊಂಡು ಬೇಸರಗೊಳ್ಳುವಿರಿ.
ತುಲಾ ರಾಶಿ :
ನಿಮ್ಮ ವಸ್ತು ಕೈಗೆ ಸಿಗದೇ ಇರುವುದನ್ನು ನೀವು ಮಾಡಿದ ತ್ಯಾಗ ಎಂದು ತಿಳಿಯಿರಿ. ಸಂಗಾತಿಯ ಅತಿಯಾದ ಆಸಕ್ತಿ ನಿಮ್ಮ ಮನಸ್ಸಿಗೆ ಒತ್ತಡ ತರಬಹುದು. ಆದರೆ ಅವರ ನಿಜವಾದ ಉದ್ದೇಶ ನಿಮಗೆ ನಂತರ ಸ್ಪಷ್ಟವಾಗಲಿದೆ. ಅನುಭವಿ ವ್ಯಕ್ತಿಯಿಂದ ನೀವು ಪ್ರಯೋಜನಕಾರಿ ಸಲಹೆಯು ಸಿಗುವುದು. ನಿಮ್ಮ ವ್ಯಾಪಾರ ವಿಸ್ತರಣೆಯನ್ನು ಮಾಡಲು ನಿರ್ಧಾರ ಮಾಡುವಿರಿ. ಹಳೆಯ ಘಟನೆಯನ್ನು ನೆನಪಿಸಿಕೊಂಡು ಸಂಕಟ.
ವೃಶ್ಚಿಕ ರಾಶಿ :
ಅನಿರೀಕ್ಷಿತ ಆರ್ಥಿಕ ನಷ್ಟ ಸಂಭವಿಸುವುದು. ನಿಮಗೆ ಅರಿವಿಲ್ಲದೇ ಯೋಗವು ನಷ್ಟವಾಗುವುದು. ಅಪರೂಪದ ಭೇಟಿಗಳು ಸಂತೋಷ ತರಬಹುದು. ಪ್ರೇಮದಲ್ಲಿ ಹೊಸ ಚೈತನ್ಯ ಜಾಗರೂಕವಾಗಲಿ. ವೃತ್ತಿ ಯೋಜನೆಗಳು ಸಕಾರಾತ್ಮಕ ಫಲಿತಾಂಶ ತರುತ್ತವೆ. ವಹಿಸಿಕೊಂಡ ಕೆಲಸವನ್ನು ಸರಿಯಾದ ಸಮಯಕ್ಕೆ ಪೂರ್ಣ ಮಾಡುವಿರಿ. ತೊಂದರೆಗಳನ್ನು ನೀವು ಎದುರಿಸಲು ಸಕ್ಷಮರಾಗಿರುವಿರಿ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಳ್ಳಬಹುದು.
ಧನು ರಾಶಿ :
ಅವಶ್ಯಕತೆ ಇಲ್ಲದಿದ್ದರೂ ಕೃತಜ್ಞತೆಯನ್ನು ಅರ್ಪಿಸುವುದು ಕರ್ತವ್ಯ. ಸಹೋದ್ಯೋಗಿಗಳ ಜೊತೆ ಒಳ್ಳೆಯ ಸಂಬಂಧ ಬೆಳೆಸಿಕೊಳ್ಳಿ. ಕೆಲಸದಲ್ಲಿ ಹೊಸ ಜನರನ್ನು ಭೇಟಿಯಾಗಿ ಮುಂದಿನ ಅವಕಾಶಗಳತ್ತ ಗಮನ ಹರಿಸಿ. ಸಮಯದ ಪೂರಕವಾಗಿ ಕೆಲಸ ಮಾಡಿದರೆ ಯಶಸ್ಸು ಖಚಿತ. ತುರ್ತು ಹಣವು ಬೇಕಿದ್ದರಿಂದ ಸ್ನೇಹಿತರನ್ನು ಕೇಳುವಿರಿ. ಮನೆಯ ಕಾರ್ಯದಲ್ಲಿ ನಿಮ್ಮ ಇಡೀ ದಿನವು ಕಳೆದು ಹೋದುದ್ದು ಗೊತ್ತಾಗದೇ ಹೋಗಬಹುದು.
ಮಕರ ರಾಶಿ :
ನೀವು ಉದ್ಯೋಗವನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ತಾನಾಗಿಯೇ ಬೀಳುವ ಮರವನ್ನು ನೀವು ತಲೆಯ ಮೇಲೆ ಬೀಳಿಸಿಕೊಳ್ಳುವಿರಿ. ಹಣದ ವಿಚಾರದಲ್ಲಿ ಜಾಣೆ ಅಗತ್ಯ ಸಂಗಾತಿಯೊಂದಿಗೆ ಜಗಳ ಉಂಟಾದರೂ ಅವರು ಶಾಂತಿ ಕಾಪಾಡುತ್ತಾರೆ. ನಿಮ್ಮ ಸಂಗಾತಿಯ ಆರೋಗ್ಯವೂ ವ್ಯತ್ಯಾಸವಾಗಿ ಉದ್ವೇಗಕ್ಕೆ ಒಳಗಾಗುವರು. ಶುಭಕರ್ಮವನ್ನು ಮಾಡುವ ಉತ್ಸಾಹವಗಬಹುದು. ಸಂಗಾತಿಯ ಜೊತೆಗಿನ ಕಲಹವು ನಿಮ್ಮ ಇಡೀ ದಿನವನ್ನು ಸರಿಯಾಗಿ ಕಳೆಯುವಂತೆ ಮಾಡದು.
ಕುಂಭ ರಾಶಿ :
ಸೋತೆನೆಂದು ಹತಾಶರಾಗುವ ಬದಲು ಗೆಲವಿಗೆ ಇನ್ನೊಂದು ಅವಕಾಶ ಎಂದುಕೊಂಡರೆ ಸುಖ. ದಿನದ ಕೊನೆಯಲ್ಲಿ ನಿಮ್ಮ ತಾಳ್ಮೆ ಯಶಸ್ಸಿಗೆ ಕಾರಣವಾಗಲಿದೆ. ದುಃಖವನ್ನು ಅನುಭವಿಸುವ ಸಂದರ್ಭ ಬರಬಹುದು. ಮನಸ್ಸು, ಬುದ್ಧಿಗಳನ್ನು ನಿಶ್ಚಲಗೊಳಿಸಿ. ಇಂದು ನೀವು ಸೋಮಾರಿತನವನ್ನು ಬೆಳೆಸಿಕೊಳ್ಳುವಿರಿ. ಹಣಕ್ಕೆ ಸಂಬಂಧಿಸಿದ ಯಾವುದಾದರೂ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಸುಲಭದ ದಾರಿಯು ನಿಮಗೆ ಕಾಣಿಸುವುದು. ವೃತ್ತಿಶೀಲರು ತಮ್ಮನ್ನು ಅತಿಮಾನುಷರಂತೆ ತೋರ್ಪಡಿಸುವರು.
ಮೀನ ರಾಶಿ :
ಇಂದು ಎಲ್ಲವೂ ಖಾಲಿ ಖಾಲಿ ಎನ್ನುವ ಮನೋಭಾವ ಬರಬಹುದು. ಶಕ್ತಿಯ ಮಟ್ಟವನ್ನು ಬಾಕಿಯಿರುವ ಕೆಲಸಗಳಿಗೆ ಬಳಸಬಹುದು. ಹಣಕಾಸಿನ ಕಾರ್ಯದಿಂದ ಯಶಸ್ಸು ಸಿಗಬಹುದು. ಸಂಗಾತಿಯ ಕುಟುಂಬದ ಅಡ್ಡಿ ಕೆಲವೊಂದು ವ್ಯತ್ಯಯ ತಂದರೂ, ನಿಮ್ಮ ಸಹನೆಗೆ ಅದರ ಬಗ್ಗೆ ಪ್ರಭಾವ ಬೀರುವುದಿಲ್ಲ. ಆರ್ಥಿಕಸ್ಥಿತಿಯಲ್ಲಿ ಪ್ರಗತಿಯ ಲಕ್ಷಣವಿದೆ. ವ್ಯವಹಾರದಲ್ಲಿ ಇಂದು ನಿಮಗೆ ತುಂಬಾ ಒತ್ತಡದ ದಿನವಾಗಿರುತ್ತದೆ. ನಿಮ್ಮ ಹಣವನ್ನು ಬಲಾತ್ಕಾರದಿಂದ ಪಡೆಯಬೇಕಾಗಬಹುದು.
-ಲೋಹಿತ ಹೆಬ್ಬಾರ್ – 8762924271 (what’s app only)