Headlines

ಇಶಾ ಫೌಂಡೇಷನ್, ಸದ್ಗುರು ಕುರಿತ ವಿವಾದಾತ್ಮಕ ವಿಷಯ ಡಿಲೀಟ್ ಮಾಡಿ; ನಕ್ಕೀರನ್ ಮ್ಯಾಗಜಿನ್​​ಗೆ ಕೋರ್ಟ್ ಆದೇಶ

ನವದೆಹಲಿ, ಮಾರ್ಚ್ 19: ಇಶಾ ಫೌಂಡೇಶನ್ ಮತ್ತು ಸದ್ಗುರುಗಳ ಕುರಿತಾದ ವಿವಾದಾತ್ಮಕ ವಿಷಯಗಳನ್ನು ಡಿಲೀಟ್ ಮಾಡಲು ತಮಿಳು ಮಾಧ್ಯಮವಾದ ನಕ್ಕೀರನ್ ಮ್ಯಾಗಜಿನ್​ಗೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ಇಶಾ ಫೌಂಡೇಶನ್ (Isha Foundation) ಮತ್ತು ಸದ್ಗುರುಗಳ ವಿರುದ್ಧ ನಕ್ಕೀರನ್ ಪ್ರಕಟಿಸಿದ ಮಾನಹಾನಿಕರ ವಿಡಿಯೋಗಳು ಮತ್ತು ಲೇಖನಗಳನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಇಂದು ಮಧ್ಯಂತರ ಆದೇಶ ಹೊರಡಿಸಿದೆ. ಈ ಆದೇಶವನ್ನು ಸ್ವಾಗತಿಸಿರುವ ಇಶಾ ಫೌಂಡೇಶನ್ ಸುಳ್ಳು ಮತ್ತು ದುರುದ್ದೇಶಪೂರಿತ ಮಾಹಿತಿಯನ್ನು ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದನ್ನು ಮುಂದುವರಿಸುತ್ತದೆ ಎಂದು…

Read More

ಚಿಕ್ಕಮಗಳೂರು: ಪ್ರತಿಭಟಿಸಿದ 29ಕ್ಕೂ ಹೆಚ್ಚು ಜನರ ಮೇಲೆ ಎಫ್​ಐಆರ್, ಲಾಠಿಚಾರ್ಜ್ ಖಂಡಿಸಿ 3 ತಾಲೂಕು ಬಂದ್​ಗೆ ಕರೆ – Kannada News | Chikkamagaluru Tense After Wild Elephant Attack: FIR Against 29 Protesters, Three Taluks Call for Bandh Over Lathi Charge

ಚಿಕ್ಕಮಗಳೂರು, ಫೆಬ್ರವರಿ 23: ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮಹಿಳೆ ಬೋರಮ್ಮ ಮೃತಪಟ್ಟ ನಂತರದ ಬೆಳವಣಿಗೆಗಳು ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಿವೆ. ಸಾರ್ವಜನಿಕರ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಲಾಠಿಚಾರ್ಜ್ ಘಟನೆ ನಡೆದಿದೆ. ಬಾಳೆಹೊನ್ನೂರು ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಪ್ರತಿಭಟನೆ ನಡೆಸಿದ 29ಕ್ಕೂ ಹೆಚ್ಚು ಜನರ ವಿರುದ್ಧ ಎಫ್​ಐಆರ್ ದಾಖಲಾಗಿವೆ. ಪ್ರತಿಭಟನಾಕಾರರ ಮೇಲೆ ಕಲ್ಲು ತೂರಾಟ, ಪೊಲೀಸ್ ವಾಹನಗಳನ್ನು ಪಲ್ಟಿ ಮಾಡುವ ಯತ್ನ, ಮತ್ತು ರಸ್ತೆ ತಡೆ ನಡೆಸಿದ ಆರೋಪದ ಮೇಲೆ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ಈ ಘಟನೆಗಳಲ್ಲಿ…

Read More

‘ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ’; ಪ್ರಕಾಶ್ ರಾಜ್

ಪ್ರಕಾಶ್ ರಾಜ್ ನಾಸ್ತಿಕರು. ಅವರು ದೇವರನ್ನು ನಂಬೋದಿಲ್ಲ. ಆದಾಗ್ಯೂ ಕೆಲವೊಮ್ಮೆ ಅವರು ದೇವಸ್ಥಾನಕ್ಕೆ ತೆರಳಿದ್ದು ಇದೆ. ಇದಕ್ಕೆ ಕಾರಣ ಪತ್ನಿ ಎಂದು ಅವರು ಹೇಳಿದ್ದಾರೆ. ‘ನನ್ನ ಪತ್ನಿಗೆ ದೇವರ ಮೇಲೆ ನಂಬಿಕೆ ಇದೆ. ಅವಳು ಹೋಮ-ಹವನ ಮಾಡಿಸೋಣ ಎಂದಾಗ ನಾನು ಹೋಗುತ್ತೇನೆ. ಅದು ಅವಳ ನಂಬಿಕೆ. ಅದಕ್ಕೆ ಪ್ರತಿಯಾಗಿ ನಾನು ಜಗಳ ಮಾಡೋದಿಲ್ಲ. ನನ್ನ ಅನೇಕ ಗೆಳೆಯರು ಕೋಟಿ ಕೋಟಿ ಖರ್ಚು ಮಾಡಿ ಹೋಮ ಮಾಡಿಸುತ್ತಾರೆ. ಇದರಿಂದ ಅವರಿಗೆ ನೆಮ್ಮದಿ ಸಿಗುತ್ತದೆ. ಅದೇ ಕೋಟಿ ಹಣವನ್ನು ನಾನು…

Read More

ಇನ್ಸ್ಪೆಕ್ಟರ್ ಸಂದೇಶ್​ ಕಾಮಕಾಂಡ ಕೇಸ್​​ಗೆ ಬಿಗ್ ಟ್ವಿಸ್ಟ್: ಪೊಲೀಸ್ ವರದಿಯಲ್ಲಿ ಸ್ಫೋಟಕ ಸತ್ಯ ಬಯಲು

ಮಂಗಳೂರು, ಮಾರ್ಚ್​ 21: ಮೂಡಬಿದ್ರೆ ಇನ್ಸ್​ಪೆಕ್ಟರ್​ ಸಂದೇಶ್ (Police inspector Sandesh) ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಇನ್ಸ್‌ಪೆಕ್ಟರ್‌ ಸಂದೇಶ್ ವಿರುದ್ಧ ಮಾಡಿರುವ ಆರೋಪ ಸುಳ್ಳು ಎಂದು ಪೊಲೀಸ್ ವರದಿ ಹೇಳಿದೆ ಎಂದು ಹೇಳಲಾಗುತ್ತಿದೆ. ಮಾಧ್ಯಮಗಳ ಮುಂದೆ ಬಂದಿದ್ದ ಆ ಮಹಿಳೆಯರಿಗೆ ಕಿರುಕುಳ ನೀಡಿಲ್ಲ. ಪ್ರಚೋದನೆಗೆ ಒಳಪಟ್ಟು ಇನ್ಸ್‌ಪೆಕ್ಟರ್ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಮಹಿಳೆಯರ ಆರೋಪ ಸುಳ್ಳು ಹಾಗೂ ಪ್ರೇರಿತ ಎಂಬುದು ಸಾಬೀತಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್…

Read More

‘ರಾಮಾಯಣ ಟ್ರೇಲರ್‌ ನನ್ನನ್ನು ಇಂಪ್ರೆಸ್ ಮಾಡಿಲ್ಲ: ‘ಮಹಾಭಾರತ’ ಖ್ಯಾತಿಯ ಗಜೇಂದ್ರ ಚೌಹಾಣ್ ಪ್ರತಿಕ್ರಿಯೆ – Kannada News | Gajendra Chauhan not impressed with Ranbir Kapoor Ramayana Trailer criticises Kaikeyi Look

ಬಿ.ಆರ್. ಚೋಪ್ರಾ ಅವರ ಪ್ರಸಿದ್ಧ ‘ಮಹಾಭಾರತ’ ಧಾರಾವಾಹಿಯಲ್ಲಿ ಯುಧಿಷ್ಠಿರನ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ಹಿರಿಯ ನಟ ಗಜೇಂದ್ರ ಚೌಹಾಣ್ (Gajendra Chauhan) ಅವರು ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ (Ramayana) ಸಿನಿಮಾದ ಟ್ರೇಲರ್ ಕುರಿತು ತಮ್ಮ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶ್ರೀರಾಮನ ಪಾತ್ರದಲ್ಲಿ ರಣಬೀರ್ ಕಪೂರ್ (Ranbir Kapoor) ಗೆಟಪ್ ಚೆನ್ನಾಗಿದೆ ಎಂದಿರುವ ಅವರು, ಟ್ರೇಲರ್‌ನ ಕೆಲವು ಭಾಗಗಳು ತಮಗೆ ಸಂಪೂರ್ಣ ತೃಪ್ತಿ ನೀಡಿಲ್ಲ ಎಂದು ಹೇಳಿದ್ದಾರೆ. ‘ಹಿಂದಿ ರಶ್’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಗಜೇಂದ್ರ…

Read More

World Turtle Day 2026: ಮನುಷ್ಯದ ಸ್ವಾರ್ಥದಿಂದ ಅಳಿವಿನಂಚಿಗೆ ತಲುಪಿವೆ ಆಮೆಗಳ ಸಂತತಿ – Kannada News | World Turtle Day 2026: Why is it important to celebrate World Turtle Day? Here is the information

ಈ ಭೂಮಿಯ ಮೇಲಿರುವ ಪ್ರತಿಯೊಂದು ಜೀವ ವೈವಿಧ್ಯವೂ ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿ ತಮ್ಮದೇ ಆದ ಪಾತ್ರವನ್ನು ವಹಿಸುತ್ತಿವೆ. ಅದೇ ರೀತಿ ಸರೀಸೃಪ ಗುಂಪಿಗೆ ಸೇರಿದ ಸಾದು ಜೀವಿಯಾದ ಆಮೆಗಳು (Turtle) ಸಹ ಪರಿಸರ ವ್ಯವಸ್ಥೆಯನ್ನು ಸ್ಥಿರವಾಗಿಡುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಹೌದು ಆಲಿವ್‌ ರಿಡ್ಲಿ, ಲೆದರ್‌ ಬ್ಯಾಕ್‌ ಮುಂತಾದ ಸಮುದ್ರ ಆಮೆಗಳು ಕರಾವಳಿ ಪ್ರದೇಶಗಳನ್ನು ಸ್ವಚ್ಛಗೊಳಿಸವಲ್ಲಿ ಮತ್ತು ಸತ್ತ ಮೀನುಗಳನ್ನು ಕೊಳೆತ ಸಸ್ಯರಾಶಿಗಳನ್ನು ತಿನ್ನುವ ಮೂಲಕ ಸಮುದ್ರವನ್ನು ಸ್ವಚ್ಛವಾಗಿಡುವಲ್ಲಿ  ಮತ್ತು ಭೂಮಿಯ ಮೇಲೆ ವಾಸಿಸುವ ಆಮೆಗಳು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವಲ್ಲಿ…

Read More

ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ – Kannada News | Man climbs train roof of Bhubaneshwar Tirupati at Sompet railway station in Srikakulam

ನವದೆಹಲಿ, ಜನವರಿ 5: ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ಒಬ್ಬ ಯುವಕ ರೈಲಿನ ಮೇಲೆ ಹತ್ತಿದ್ದಾನೆ. ಶ್ರೀಕಾಕುಳಂ ಜಿಲ್ಲೆಯ ಸೋಂಪೇಟ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಭಾನುವಾರ ಮಧ್ಯಾಹ್ನ ಭುವನೇಶ್ವರದಿಂದ ತಿರುಪತಿಗೆ ಸೂಪರ್ ಫಾಸ್ಟ್ ವೀಕ್ಲಿ ಎಕ್ಸ್‌ಪ್ರೆಸ್ ರೈಲು ಸೋಂಪೇಟ ರೈಲು ನಿಲ್ದಾಣಕ್ಕೆ ಬಂದು ನಿಂತಿತು. ರೈಲು (Train) ಆ ನಿಲ್ದಾಣದಲ್ಲಿ ಕೇವಲ ಎರಡು ನಿಮಿಷಗಳ ಕಾಲ ನಿಲ್ಲುತ್ತದೆ. ಪ್ರಯಾಣಿಕರು ರೈಲನ್ನು ಹತ್ತಿ ಹತ್ತುತ್ತಿದ್ದಾಗ ಆ ಯುವಕ ರೈಲಿನ ಮೇಲ್ಭಾಗಕ್ಕೆ ಹತ್ತಿ ಹುಚ್ಚಾಟ ನಡೆಸಿದ್ದಾನೆ. ಭುವನೇಶ್ವರ-ತಿರುಪತಿ ಸೂಪರ್‌ಫಾಸ್ಟ್…

Read More

ರವಿದಾಸ್ ಜಯಂತಿ: ಬಾಂಬ್ ಬೆದರಿಕೆ ನಡುವೆ ಇಂದು ಪ್ರಧಾನಿ ಮೋದಿ ಪಂಜಾಬ್ ಭೇಟಿ; ಅದಂಪುರ್ ಏರ್ಪೋರ್ಟ್​ಗೆ ಗುರು ರವಿದಾಸ್ ಹೆಸರು – Kannada News | PM Narendra Modi Punjab visit on Feb 1st on occasion of Sant Ravidas Jayanti

ನವದೆಹಲಿ, ಜನವರಿ 31: ಸಂತ ಗುರು ರವಿದಾಸ್ ಅವರ 649ನೇ ಜಯಂತಿ ಆಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನಾಳೆ ಭಾನುವಾರ (ಫೆ. 1) ಪಂಜಾಬ್​ಗೆ ಭೇಟಿ ನೀಡಲಿದ್ದಾರೆ. ಭಾನುವಾರ ಮಧ್ಯಾಹ್ನ 3:45ಕ್ಕೆ ಪಂಜಾಬ್​ಗೆ ತೆರಳಲಿರುವ ಪಿಎಂ, ಜಲಂಧರ್ ಜಿಲ್ಲೆಯಲ್ಲಿನ ದೇರಾ ಸಖಚಂದ್ ಬಲ್ಲನ್​ಗೆ ಭೇಟಿ ನೀಡಲಿ್ದಾರೆ. ಅಲ್ಲಿ ಸಂತ ಗುರು ರವಿದಾಸ್ ಗೌರವಾರ್ಥ ನಡೆಯುವ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ನರೇಂದ್ರ ಮೋದಿ ಅವರು ದೇರಾ ಸಖಚಂದ್ ಬಲ್ಲನ್ ಮಂದಿರಕ್ಕೆ ತೆರಳಿ ಸಂತ…

Read More

‘ಅಮೃತಧಾರೆ’ ಧಾರಾವಾಹಿ: ಮಗಳು ಮಿಂಚು ಕಿಡ್ನ್ಯಾಪ್, ಭದ್ರಕಾಳಿ ಅವತಾರ ತಾಳಿದ ಭೂಮಿಕಾ – Kannada News

ಜೀ ಕನ್ನಡ ವಾಹಿನಿಯ ಜನಪ್ರಿಯ ‘ಅಮೃತಧಾರೆ’ ಧಾರಾವಾಹಿಯು (Amruthadhare Serial) ದಿನದಿಂದ ದಿನಕ್ಕೆ ತಿರುವಿನೊಂದಿಗೆ ಸಾಗುತ್ತಿದೆ. ಈಗ ಕಥೆ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ಇತ್ತೀಚಿನ ಸಂಚಿಕೆಗಳಲ್ಲಿ ಭೂಮಿಕಾಳ ಸಾಕು ಮಗಳು ಮಿಂಚು ನಿಗೂಢವಾಗಿ ನಾಪತ್ತೆಯಾಗಿದ್ದು, ಆಕೆಯನ್ನು ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡಿರುವುದು ಬೆಳಕಿಗೆ ಬಂದಿದೆ. ಮಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕು ಎಂದು ಪಣತೊಟ್ಟಿರುವ ಭೂಮಿಕಾ, ಈಗ ರೌಡಿಗಳ ಹೆಡೆಮುರಿ ಕಟ್ಟಲು ಭದ್ರಕಾಳಿ ಅವತಾರ ತಾಳಿದ್ದಾಳೆ. ಮಗಳು ಕಾಣೆಯಾದ ಸುದ್ದಿ ತಿಳಿಯುತ್ತಿದ್ದಂತೆ ಆತಂಕಕ್ಕೊಳಗಾಗುವ ಭೂಮಿಕಾ ಹಳೆ ರೌಡಿಗಳ…

Read More

ಇಂದಿರಾನಗರ ಮೆಟ್ರೋ ನಿಲ್ದಾಣದ ಬಳಿ ಅನುಮಾನಾಸ್ಪದ ಘಟನೆ: ಸ್ಪ್ರೇ ಮಾಡಿ ಓಡಿಹೋದ ಅನಾಮಿಕ – Kannada News | Mystery Spray at Indiranagar Metro Station: BMRCL Hunts for Anonymous Suspect

ಇಂದಿರಾನಗರ ಮೆಟ್ರೋ‌ ನಿಲ್ದಾಣImage Credit source: tv9 kannada ಬೆಂಗಳೂರು, ಜುಲೈ 16: ಸಿಲಿಕಾನ್ ಸಿಟಿಯ ಅತ್ಯಂತ ಜನನಿಬಿಡ ಮೆಟ್ರೋ (Namma Metro) ನಿಲ್ದಾಣಗಳಲ್ಲಿ ಒಂದಾದ ಇಂದಿರಾನಗರ ಮೆಟ್ರೋ ಸ್ಟೇಷನ್ ಬಳಿ ಗುರುವಾರ ಸಂಜೆ ಭೀತಿ ಮೂಡಿಸುವಂತಹ ಅನುಮಾನಾಸ್ಪದ ಘಟನೆಯೊಂದು ನಡೆದಿದೆ. ಮೆಟ್ರೋ ನಿಲ್ದಾಣದ ಹೊರಗಿನ ಆವರಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಏನೋ ಸ್ಪ್ರೇ ಮಾಡಿ ಸ್ಥಳದಿಂದ ಓಡಿ ಹೋಗಿರುವ ಘಟನೆ ನಡೆದಿದೆ. ಸದ್ಯ ಅಪರಿಚಿತ ವ್ಯಕ್ತಿಗಾಗಿ ಬಿಎಂಆರ್​ಸಿಎಲ್​ (BMRCL) ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ನಡೆದಿದ್ದೇನು? ವೈಟ್‌ಫೀಲ್ಡ್‌ನಿಂದ…

Read More