ಅಪ್ರಾಪ್ತರ ಜೀವಕ್ಕೆ ಕುತ್ತು ತರುತ್ತಿರುವ ಬೈಕ್ ಸ್ಟಂಟ್: ಮೂರು ವರ್ಷಗಳಲ್ಲಿ 27 ಮಂದಿ ಸಾವು
ಬೆಂಗಳೂರು, ಏಪ್ರಿಲ್ 05: ಇತ್ತೀಚೆಗೆ ಯುವಕರು ಬೈಕ್ ಸ್ಟಂಟ್, ಅಪಾಯಕಾರಿ ರೀತಿ ವಾಹನ ಚಾಲನೆ ಮಾಡುವಂತಹ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದಾಗಿ ಅದೆಷ್ಟೋ ಸಾವು-ನೋವುಗಳೂ ಸಂಭವಿಸುತ್ತಿವೆ. ಈ ನಡುವೆ ಬಹಿರಂಗಗೊಂಡಿರುವ ಅಂಕಿ-ಅಂಶಗಳು ಬೆಚ್ಚಿಬೀಳಿಸುವಂತಿದೆ. ಇಂತಹ ದುಸ್ಸಾಹಸ ಮಾಡಲು ತೆರಳಿ ಅಪ್ತಾಪ್ತರೇ ಹೆಚ್ಚಾಗಿ ಬಲಿಯಾಗುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ರಾಜ್ಯದಾದ್ಯಂತ ವಾಹನಗಳಿಂದ ಸಂಭವಿಸಿದ ಅಪಘಾತಗಳಲ್ಲಿ 27 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಘಟನೆಗಳ ಸಂಬಂಧ ಅಪ್ರಾಪ್ತರು ಹಾಗೂ ಅವರ ಪೋಷಕರ ವಿರುದ್ಧ 1,805 ಪ್ರಕರಣಗಳನ್ನು ದಾಖಲಿಸಲಾಗಿದ್ದು 1.77 ಕೋಟಿ ರೂಪಾಯಿ…