ವೇದಿಕೆಯಲ್ಲಿ ಡಿ.ಕೆ. ಶಿವಕುಮಾರ್ ಭುಜ ತಟ್ಟಿ ಕೈಹಿಡಿದ ಮೋದಿ: ಪ್ರಧಾನಿ ಕಿವಿಯಲ್ಲಿ ಸಿಎಂ ಹೇಳಿದ್ದೇನು? – Kannada News | Narendra Modis Mysuru Visit: Viveka Smaraka Inauguration and CM DK Shivakumar Meet

ಮೈಸೂರು, ಆ.1: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮೈಸೂರಿಗೆ ಭೇಟಿ ನೀಡಿ, ನಗರದಲ್ಲಿ ನಿರ್ಮಿಸಲಾಗಿರುವ ವಿವೇಕ ಸ್ಮಾರಕವನ್ನು ಉದ್ಘಾಟಿಸಿದರು. ಮೈಸೂರಿನ ರಾಮಕೃಷ್ಣ ಆಶ್ರಮದ ಆವರಣದಲ್ಲಿ, ದೇವರಾಜ ಮೊಹಲ್ಲಾದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಈ ಸ್ಮಾರಕವು ನಗರದ ಒಂದು ಮಹತ್ವದ ಹೆಗ್ಗುರುತಾಗಿದೆ. ಈ ಉದ್ಘಾಟನಾ ಸಮಾರಂಭವು ರಾಜ್ಯದ ಜನತೆಗೆ ಹೊಸ ಆಶಯಗಳನ್ನು ಮೂಡಿಸಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಮಂತ್ರಿ ಮೋದಿ ಅವರು, ಉದ್ಘಾಟನೆಯ ನಂತರ ಮಾಡಿದ ಭಾಷಣದಲ್ಲಿ ವಿವೇಕ ಸ್ಮಾರಕದ ಮಹತ್ವವನ್ನು ವಿವರಿಸಿದರು. ಭಾಷಣ ಮುಗಿದ ನಂತರ, ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಪ್ರಧಾನಿ ಮೋದಿ ಆತ್ಮೀಯವಾಗಿ ಮಾತುಕತೆ ನಡೆಸಿದರು. ಈ ಕ್ಷಣವು ಸಾರ್ವಜನಿಕವಾಗಿ ಹೆಚ್ಚಿನ ಗಮನ ಸೆಳೆಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಭುಜ ತಟ್ಟಿ, ಸೌಹಾರ್ದಯುತವಾಗಿ ಕೈ ಹಿಡಿದು ವೇದಿಕೆಯಿಂದ ಕೆಳಗೆ ಕರೆದುಕೊಂಡು ಹೋದರು. ಈ ಘಟನೆಯು ರಾಜಕೀಯ ವಲಯದಲ್ಲಿ ಮತ್ತು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿತು. ಪ್ರಧಾನಮಂತ್ರಿಗಳ ಈ ನಡೆ ಉಭಯ ನಾಯಕರ ನಡುವಿನ ಸೌಹಾರ್ದಯುತ ಬಾಂಧವ್ಯವನ್ನು ಎತ್ತಿ ತೋರಿಸುವಂತಿತ್ತು. ಮೈಸೂರು ಭೇಟಿಯ ಈ ಪ್ರಮುಖ ಘಟನೆಗಳು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಪಾಲಿಸಬೇಕಾದ ಸರಳ ಅಭ್ಯಾಸಗಳು! – Kannada News | Daily Habits to Keep Your Eyes Healthy for Years

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಹಾಗೂ ಟಿವಿ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪರಿಣಾಮವಾಗಿ ಕಣ್ಣುಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ ಕಣ್ಣಿನ ಆಯಾಸ, ಒಣಗುವಿಕೆ, ಮಸುಕಾದ ದೃಷ್ಟಿ ಮತ್ತು ತಲೆನೋವು ಮೊದಲಾದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದಲ್ಲದೆ ವಯಸ್ಸಿನ ಹೆಚ್ಚಳ, ಅಸಮತೋಲಿತ ಆಹಾರ ಪದ್ಧತಿ, ಧೂಳು-ಮಾಲಿನ್ಯ, ಅತಿಯಾದ ಸೂರ್ಯನ ಬೆಳಕು ಹಾಗೂ ಕಣ್ಣಿನ ಆರೈಕೆಯ ಕೊರತೆಯೂ ದೃಷ್ಟಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ತಜ್ಞರ ಪ್ರಕಾರ, ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಕೆಲವು ಸರಳ ಜೀವನಶೈಲಿ ಅಭ್ಯಾಸಗಳನ್ನು ಅಳವಡಿಸಿಕೊಂಡರೆ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಬಹುದು.

ಕಣ್ಣಿನ ಆರೋಗ್ಯಕ್ಕಾಗಿ ಈ ಅಭ್ಯಾಸಗಳನ್ನು ಪಾಲಿಸಿ:

20-20-20 ನಿಯಮ ಅನುಸರಿಸಿ: ಮೊಬೈಲ್ ಅಥವಾ ಕಂಪ್ಯೂಟರ್ ಅನ್ನು ದೀರ್ಘ ಸಮಯ ಬಳಸುವವರು ಪ್ರತಿ 20 ನಿಮಿಷಗಳಿಗೊಮ್ಮೆ 20 ಅಡಿ ದೂರದಲ್ಲಿರುವ ವಸ್ತುವನ್ನು ಕನಿಷ್ಠ 20 ಸೆಕೆಂಡುಗಳ ಕಾಲ ನೋಡಿ. ಇದರಿಂದ ಕಣ್ಣಿನ ಸ್ನಾಯುಗಳಿಗೆ ವಿಶ್ರಾಂತಿ ಸಿಗುತ್ತದೆ.

ನಿಯಮಿತವಾಗಿ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಿ: ದೃಷ್ಟಿಯಲ್ಲಿ ಯಾವುದೇ ತೊಂದರೆ ಇಲ್ಲದಿದ್ದರೂ ವರ್ಷಕ್ಕೊಮ್ಮೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಆರಂಭಿಕ ಹಂತದಲ್ಲೇ ಸಮಸ್ಯೆ ಪತ್ತೆಯಾದರೆ ತಡೆಗಟ್ಟುವುದು ಸುಲಭವಾಗುತ್ತದೆ.

ಯುವಿ ರಕ್ಷಣೆ ಇರುವ ಸನ್‌ಗ್ಲಾಸ್ ಧರಿಸಿ: ಬಿಸಿಲಿನಲ್ಲಿ ಹೊರಗೆ ಹೋಗುವಾಗ UV-A ಮತ್ತು UV-B ಕಿರಣಗಳಿಂದ ರಕ್ಷಿಸುವ ಗುಣಮಟ್ಟದ ಸನ್‌ಗ್ಲಾಸ್ ಬಳಸುವುದು ಕಣ್ಣಿನ ಸುರಕ್ಷತೆಗೆ ಸಹಕಾರಿ.

ಕಾಂಟ್ಯಾಕ್ಟ್ ಲೆನ್ಸ್ ಬಳಸುವವರು ಎಚ್ಚರಿಕೆ ವಹಿಸಿ: ಲೆನ್ಸ್ ಹಾಕುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆಯಿರಿ. ಲೆನ್ಸ್ ಧರಿಸಿ ಮಲಗುವುದು ಅಥವಾ ಈಜುವುದು ತಪ್ಪಿಸಿ. ಲೆನ್ಸ್‌ಗಳನ್ನು ವೈದ್ಯರ ಸೂಚನೆಯಂತೆ ಮಾತ್ರ ಬಳಸಿ.

ಇದನ್ನೂ ಓದಿ: ಮಲಬದ್ಧತೆ ಸಮಸ್ಯೆ ಇದ್ದವರು ಯಾವ ರೀತಿಯ ಆಹಾರ ಸೇವಿಸಬೇಕು, ಯಾವುದನ್ನು ಸೇವನೆ ಮಾಡಬಾರದು?

ಕಣ್ಣುಗಳನ್ನು ಅನಗತ್ಯವಾಗಿ ಉಜ್ಜಬೇಡಿ: ಕೈಗಳಲ್ಲಿ ಇರುವ ಬ್ಯಾಕ್ಟೀರಿಯಾ ಅಥವಾ ವೈರಸ್ ಕಣ್ಣಿಗೆ ಹರಡುವ ಸಾಧ್ಯತೆ ಇರುವುದರಿಂದ ಕಣ್ಣುಗಳನ್ನು ಉಜ್ಜುವುದನ್ನು ತಪ್ಪಿಸಿ.

ಧೂಮಪಾನದಿಂದ ದೂರವಿರಿ: ಧೂಮಪಾನದಿಂದ ಕ್ಯಾಟರಾಕ್ಟ್, ಮ್ಯಾಕ್ಯುಲರ್ ಡಿಜನರೇಷನ್ ಹಾಗೂ ದೃಷ್ಟಿ ಹಾನಿಯ ಅಪಾಯ ಹೆಚ್ಚಾಗಬಹುದು.

ಕಣ್ಣಿನ ಆರೋಗ್ಯಕ್ಕೆ ಅಗತ್ಯವಾದ ಆಹಾರಗಳು

  • ಕ್ಯಾರೆಟ್
  • ಪಾಲಕ್ ಹಾಗೂ ಹಸಿರು ಸೊಪ್ಪುಗಳು
  • ಸಿಹಿ ಆಲೂಗಡ್ಡೆ
  • ಕಿತ್ತಳೆ, ಸೀಬೆಹಣ್ಣು
  • ಮೊಟ್ಟೆ
  • ಮೀನು (ಒಮೆಗಾ-3 ಸಮೃದ್ಧ)
  • ಬಾದಾಮಿ, ಅಖ್ರೋಟ್
  • ಕುಂಬಳಕಾಯಿ ಬೀಜ
  • ನೆಲ್ಲಿಕಾಯಿ

ಈ ಆಹಾರಗಳಲ್ಲಿ ವಿಟಮಿನ್ ಎ, ಸಿ, ಈ, ಲ್ಯೂಟಿನ್, ಜಿಯಾಕ್ಸಾಂಥಿನ್ ಮತ್ತು ಒಮೆಗಾ-3 ಕೊಬ್ಬು ಅಮ್ಲಗಳು ಸಮೃದ್ಧವಾಗಿದ್ದು ಕಣ್ಣಿನ ಆರೋಗ್ಯವನ್ನು ಬೆಂಬಲಿಸುತ್ತವೆ.

ಕಣ್ಣುಗಳನ್ನು ಆರೋಗ್ಯವಾಗಿಡಲು ಇನ್ನೇನು ಮಾಡಬೇಕು?

  • ದಿನಕ್ಕೆ 7–8 ಗಂಟೆಗಳ ನಿದ್ರೆ ಪಡೆಯಿರಿ.
  • ಸಾಕಷ್ಟು ನೀರು ಕುಡಿಯುವುದರಿಂದ ಕಣ್ಣು ಒಣಗುವುದು ಕಡಿಮೆಯಾಗುತ್ತದೆ.
  • ಓದುವಾಗ ಅಥವಾ ಕೆಲಸ ಮಾಡುವಾಗ ಸರಿಯಾದ ಬೆಳಕಿರಲಿ.
  • ಮಧುಮೇಹ ಹಾಗೂ ರಕ್ತದೊತ್ತಡ ಇರುವವರು ನಿಯಮಿತ ತಪಾಸಣೆ ಮಾಡಿಸಿಕೊಳ್ಳಬೇಕು.
  • ಮಕ್ಕಳಿಗೆ ಮೊಬೈಲ್ ಬಳಕೆಯನ್ನು ಮಿತಿಗೊಳಿಸುವುದು ಉತ್ತಮ.
  • ಪರದೆ ಬಳಸುವಾಗ ಆಗಾಗ ಕಣ್ಣು ಮಿಟುಕಿಸುವ ಅಭ್ಯಾಸ ಬೆಳೆಸಿಕೊಳ್ಳಿ.

ಗಮನಿಸಿ: ಈ ಲೇಖನವು ಆರೋಗ್ಯ ಜಾಗೃತಿಗಾಗಿ ಮಾತ್ರ. ಕಣ್ಣಿನ ಸಮಸ್ಯೆಗಳು ಕಂಡುಬಂದರೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೆ ನೇತ್ರ ತಜ್ಞರ ಸಲಹೆ ಪಡೆಯುವುದು ಸೂಕ್ತ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಮ ಸ್ನೇಹಿತರು ಎಷ್ಟೇ ಒಳ್ಳೆಯವರಾಗಿದ್ದರೂ, ಅವರೊಂದಿಗೆ ಈ ವಿಚಾರಗಳನ್ನು ಹಂಚಿಕೊಳ್ಳುವುದು ಸರಿಯಲ್ಲ – Kannada News | You should not share these secrets of yours even with close friends

ಪ್ರತಿಯೊಬ್ಬರ ಜೀವನದಲ್ಲೂ ಸ್ನೇಹಿತರು (friends) ಇದ್ದೇ ಇರುತ್ತಾರೆ. ಹೆಚ್ಚಿನವರು ತಮ್ಮ ಜೀನವದಲ್ಲಿ ನಡೆಯುವ ಸುಖ ದುಃಖಗಳನ್ನೆಲ್ಲಾ ಮೊದಲು ಸ್ನೇಹಿತರ ಬಳಿಯೇ ಶೇರ್‌ ಮಾಡುತ್ತಾರೆ. ಎಂತಹ ಸೀಕ್ರೆಟ್‌ ವಿಚಾರಗಳನ್ನು ಸಹ ಬೆಸ್ಟ್‌ಫ್ರೆಂಡ್‌ ಬಳಿ ಹೇಳಿಕೊಳ್ಳುತ್ತಾರೆ. ಹೀಗೆ ಸ್ನೇಹಿತರೊಂದಿಗೆ ಸುಖ-ದು:ಖಗಳನ್ನು ಹಂಚಿಕೊಳ್ಳುವುದು ಒಳ್ಳೆಯದು, ಆದರೆ ಎಲ್ಲಾ ವಿಚಾರಗಳನ್ನು ಹೇಳಬಾರದು. ನಿಮ್ಮ ಒಳಿತಿನ ದೃಷ್ಟಿಯಿಂದ ಕೆಲವೊಂದು ಸಂಗತಿಗಳನ್ನು ಎಲ್ಲರಿಂದ ಗೌಪ್ಯವಾಗಿ ಇಟ್ಟುಕೊಳ್ಳುವುದೇ ಒಳ್ಳೆಯದು. ಅದರಲ್ಲೂ ನಿಮ್ಮ ಈ ವೈಯಕ್ತಿಕ ವಿಚಾರಗಳನ್ನು ಇತರರು ಮಾತ್ರವಲ್ಲ ನಿಮ್ಮ ಕ್ಲೋಸ್‌ ಫ್ರೆಂಡ್‌ ಬಳಿಯೂ ಹಂಚಿಕೊಳ್ಳಬಾರದು. ಸ್ನೇಹಿತರ ಜೊತೆಯೂ ಹಂಚಿಕೊಳ್ಳಬಾರದ ಆ ವಿಚಾರಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಬೆಸ್ಟ್‌ಫ್ರೆಂಡ್‌ ಬಳಿಯೂ ಸಹ ಈ ವಿಚಾರಗಳನ್ನು ಶೇರ್‌ ಮಾಡಬಾರದು:

ಸಂಗಾತಿಯೊಂದಿಗಿನ ಜಗಳದ ಬಗ್ಗೆ: ಕೆಲವರು ತಮ್ಮ ಹೆಂಡತಿ ಅಥವಾ ಗರ್ಲ್‌ಫ್ರೆಂಡ್‌ ಜೊತೆ ಜಗಳ ಮಾಡಿಕೊಂಡಾಗ, ಈ ವಿಚಾರವನ್ನು ನೇರವಾಗಿ ಬೆಸ್ಟ್‌ಫ್ರೆಂಡ್‌ ಬಳಿ ಹೇಳಿಬಿಡುತ್ತಾರೆ. ಆದರೆ ಹೀಗೆ ಸಂಗಾತಿಯೊಂದಿಗೆ ನಡೆದ ಜಗಳದ ಬಗ್ಗೆ ಹೇಳಿಕೊಳ್ಳುವುದು ಸರಿಯಲ್ಲ. ನಿಮ್ಮಿಬ್ಬರ ವಿವಾದವು ನಂತರದ ದಿನಗಳಲ್ಲಿ ಬಗೆಹರಿದರೂ ಸಹ, ನೀವು ನಿಮ್ಮ ಸಂಗಾತಿಯ ಬಗ್ಗೆ ಹೇಳಿದ ಮಾತು  ಸ್ನೇಹಿತರ ಮನಸ್ಸಿನಲ್ಲಿ ನಕಾರಾತ್ಮಕ ಚಿತ್ರಣವನ್ನು ಉಂಟುಮಾಡಬಹುದು. ಹಾಗಾಗಿ ಈ ವೈಯಕ್ತಿಕ ವಿಚಾರವನ್ನು ಸ್ನೇಹಿತರ ಬಳಿ ಹೇಳಿಕೊಳ್ಳಬೇಡಿ, ನೀವು ನೀವೇ ಪರಿಹರಿಸಿಕೊಳ್ಳಿ.

ಪಾಸ್‌ವರ್ಡ್‌ಗಳು ಮತ್ತು ಬ್ಯಾಂಕಿಂಗ್ ಮಾಹಿತಿ: ನಿಮ್ಮ ಫೋನ್ ಪಾಸ್‌ವರ್ಡ್, UPI ಪಿನ್, ಇಮೇಲ್ ಪಾಸ್‌ವರ್ಡ್ ಅಥವಾ ಬ್ಯಾಂಕಿಂಗ್ ಮಾಹಿತಿಯನ್ನು ಎಂದಿಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಡಿ. ವ್ಯಕ್ತಿ ಎಷ್ಟೇ ವಿಶ್ವಾಸಾರ್ಹನಾಗಿದ್ದರೂ, ಅಂತಹ ಮಾಹಿತಿ ಯಾವಾಗಲೂ ಖಾಸಗಿಯಾಗಿರಿಸಬೇಕು. ಇದಲ್ಲದೆ ಇತರರ ರಹಸ್ಯಗಳನ್ನು ಸಹ ಫ್ರೆಂಡ್ಸ್‌ ಬಳಿ ಶೇರ್‌ ಮಾಡಬಾರದು.

ಭವಿಷ್ಯದ ಯೋಜನೆಗಳು: ಹೊಸ ಉದ್ಯೋಗಗಳು, ವಿದೇಶಕ್ಕೆ ತೆರಳುವ ಯೋಜನೆಗಳು ಅಥವಾ ಇತರ ಪ್ರಮುಖ ನಿರ್ಧಾರಗಳನ್ನು, ಅವು ಸಂಪೂರ್ಣ ಕಾರ್ಯರೂಪಕ್ಕೆ ಬಂದ ಬಳಿಕವೇ ನೀವು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಕು. ಈ ವಿಚಾರಗಳನ್ನು ಮೊದಲೇ ಹಂಚಿಕೊಂಡರೇ ಅವರು ಈ ಬಗ್ಗೆ ಪದೇ ಪದೇ ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಯೋಜನೆಗಳು ನನಸಾಗದಿದ್ದರೆ, ಅವರು ಅನಗತ್ಯ ಒತ್ತಡವನ್ನು ಅನುಭವಿಸುತ್ತಾರೆ. ಆದ್ದರಿಂದ ಮೊದಲು ನಿಮ್ಮ ಗುರಿಗಳ ಮೇಲೆ ಕೆಲಸ ಮಾಡಿ, ಅದರಲ್ಲಿ ಯಶಸ್ಸು ಸಾಧಿಸಿದ ಬಳಿಕವಷ್ಟೇ ಅದನ್ನು ಎಲ್ಲರೊಂದಿಗೂ ಹಂಚಿಕೊಳ್ಳಿ.

ಇದನ್ನೂ ಓದಿ: ನಿಮ್ಮ ಬೆಸ್ಟ್‌ಫ್ರೆಂಡ್‌ಗೆ ಗಿಫ್ಟ್‌ಗಳನ್ನು ನೀಡುವ ಮೂಲಕ ಸ್ನೇಹಿತರ ದಿನವನ್ನು ವಿಶೇಷವಾಗಿ ಆಚರಿಸಿ

ನಿಮ್ಮ ದೌರ್ಬಲ್ಯಗಳು ಮತ್ತು ಭಯಗಳು: ಪ್ರತಿಯೊಬ್ಬರಿಗೂ ದೌರ್ಬಲ್ಯಗಳು ಮತ್ತು ಭಯಗಳು ಇರುತ್ತವೆ. ನೀವು ಬೆಂಬಲ ಅಥವಾ ಸಲಹೆಯನ್ನು ಬಯಸುವುದರಿಂದ ಇವುಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಸರಿ ಎಂದು ಅನಿಸಬಹುದು, ಆದರೆ ನಿಮ್ಮ ಎಲ್ಲಾ ದೌರ್ಬಲ್ಯಗಳನ್ನು ಬಹಿರಂಗಪಡಿಸುವುದು ಕೆಲವೊಮ್ಮೆ ವಿರುದ್ಧವಾಗಿ ಪರಿಣಮಿಸಬಹುದು.  ಇದಲ್ಲದೆ ನಿಮ್ಮ ಕುಟುಂಬದಲ್ಲಿನ ದೌರ್ಬಲ್ಯ, ಕಲಹಗಳ ಬಗ್ಗೆ ನೀವು ಎಂದಿಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬಾರದು. ಏಕೆಂದರೆ ಈ ವಿಚಾರಗಳನ್ನು ತಿಳಿದು ಅವರು ನಿಮ್ಮನ್ನು ಕೀಳಾಗಿ ಕಾಣುವ ಸಾಧ್ಯತೆ ಇರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸಂಪುಟ ವಿಸ್ತರಣೆ ಆಗೋವರೆಗೆ ಕಾದು ನೋಡಿ; ಕಾಂಗ್ರೆಸ್​ನ ಒಂದು ದಂಡೇ ಬಿಜೆಪಿ ಸೇರಲಿದೆ’: ಮುರುಗೇಶ್ ನಿರಾಣಿ – Kannada News | Congress Leaders Will Join BJP After Cabinet Expansion: says Murugesh Nirani

ಗದಗ, ಆಗಸ್ಟ್​​ 01: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಅಂತಿಮ ಹಂತ ತಲುಪಿದೆ. ಹೈಕಮಾಂಡ್ ರಾತ್ರಿ ವೇಳೆಗೆ ಪಟ್ಟಿ ಫೈನಲ್ ಮಾಡಲಿದೆ. ಈ ಮಧ್ಯೆ ‘ಸಂಪುಟ ವಿಸ್ತರಣೆ ಬಳಿಕ ಭಿನ್ನಮತದ ಬಿರುಗಾಳಿ ಏಳಲಿದೆ. ಕಾಂಗ್ರೆಸ್​ನ (Congress) ಒಂದು ದೊಡ್ಡ ದಂಡೇ ಬಿಜೆಪಿ (BJP) ಸೇರಲಿದೆ. ಸಚಿವ ಸಂಪುಟ ವಿಸ್ತರಣೆ ಆಗೋವರೆಗೆ ಕಾದು ನೋಡಿ’ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಖಾತೆಗಳ ಹಂಚಿಕೆ ವಿಚಾರದಲ್ಲಿ ಸಾಕಷ್ಟು ಗೊಂದಲ

ಗದಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಮುರುಗೇಶ್ ನಿರಾಣಿ, ‘ರಾಜ್ಯ ಕಾಂಗ್ರೆಸ್​ನಲ್ಲಿ‌ ಭಿನ್ನಮತದ ಬಿರುಗಾಳಿ ಏಳಲಿದೆ. ಖಾತೆಗಳ ಹಂಚಿಕೆ ವಿಚಾರದಲ್ಲಿ ಸಾಕಷ್ಟು ಗೊಂದಲ ಆಗುತ್ತವೆ. ಅಸಮಾಧಾನಿತರ ಕಾಂಗ್ರೆಸ್​​ ತಂಡ ಬಿಜೆಪಿಗೆ ಬರಲಿದೆ. 2028ರ ಚುನಾವಣೆಯಲ್ಲಿ ದೊಡ್ಡ ತಂಡ ಬಿಜೆಪಿ ಸೇರಲಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ ಹಗ್ಗಜಗ್ಗಾಟ ಕೊನೆಗೂ ಅಂತ್ಯ: ಸಿಕ್ತು ಹೈಕಮಾಂಡ್ ಗ್ರೀನ್ ಸಿಗ್ನಲ್! ಸೋಮವಾರ ಪ್ರಮಾಣವಚನ ಸಾಧ್ಯತೆ

‘ಕಾಂಗ್ರೆಸ್​ನ ಸಾಕಷ್ಟು ಜನರು ಸಂಪರ್ಕದಲ್ಲಿ ಇದ್ದೇ ಇರ್ತಾರೆ. ಸಚಿವ ಸಂಪುಟ ವಿಸ್ತರಣೆ ರಿಸಲ್ಟ್ ಬಂದ ಬಳಿಕ ನೋಡಿ. 2028ರವರೆಗೂ ಕಾಂಗ್ರೆಸ್​​ ಪಕ್ಷಕ್ಕೆ ಜನ ಅಧಿಕಾರ ನೀಡಿದ್ದಾರೆ. ಅಲ್ಲಿವರೆಗೂ ಬಿಜೆಪಿ‌ ಸುಮ್ಮನೇ ಇರುತ್ತೆ’ ಎಂದಿದ್ದಾರೆ.

ಶಾಸಕ ಯತ್ನಾಳ್, ಈಶ್ವರಪ್ಪ ಬಿಜೆಪಿಗೆ ಬಂದರೆ ಬಲ ಹೆಚ್ಚುತ್ತೆ: ಮುರುಗೇಶ್ ನಿರಾಣಿ

‘ಶಾಸಕ ಯತ್ನಾಳ್, ಈಶ್ವರಪ್ಪ ಬಿಜೆಪಿಗೆ ಬಂದರೆ ಬಲ ಹೆಚ್ಚುತ್ತೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಪಕ್ಷ ಬಿಟ್ಟು ಹೋದವರನ್ನು ವಾಪಸ್ ಕರೆತಂದರೆ ಬಲ ಹೆಚ್ಚಾಗಲಿದೆ. ಈಶ್ವರಪ್ಪ, ಬಸನಗೌಡ ಪಾಟೀಲ್ ಯತ್ನಾಳ್ ಇನ್ನೂ ಸಾಕಷ್ಟು ಜನ ಇದ್ದಾರೆ. ಅವರನ್ನೆಲ್ಲಾ ಪಕ್ಷಕ್ಕೆ ಕರೆತರಬೇಕು’ ಎಂದರು.

ರೈತರ ಸಾಲ ಮನ್ನಾ ಮಾಡುವಂತೆ ಸರ್ಕಾರಕ್ಕೆ ಆಗ್ರಹ

ಇನ್ನು ರೈತರ ಸಾಲ ಮನ್ನಾ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲ ಎದುರಾಗಿದೆ, ಕಾಂಗ್ರೆಸ್​​ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು. ರಾಜ್ಯದಲ್ಲಿ ಶೇಕಡಾ 40ರಷ್ಟು ಮಳೆ ಕಡಿಮೆಯಾಗಿದೆ. ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ರೈತರ ಜತೆಗಿರಬೇಕು. ಕಾಂಗ್ರೆಸ್​ ವಿಪಕ್ಷದಲ್ಲಿದ್ದಾಗ ರೈತರಪರ ಗಟ್ಟಿ ಧ್ವನಿ ಆಗಿತ್ತು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ರೈತ ಪರ ಮಾತನಾಡುತ್ತಿದ್ದರು. ಈಗ ದೇವರು ಸಾಲಮನ್ನಾ ಮಾಡುವ ಶಕ್ತಿ ನೀಡಿದ್ದಾನೆ. ಸಾಲಮನ್ನಾ ಮಾಡಿದರೆ ರೈತರು ನಿಮ್ಮನ್ನ ಎಂದೂ ಮರೆಯಲ್ಲ ಎಂದು ಮಾಜಿ ಸಚಿವ ಮುರುಗೇಶ್​ ನಿರಾಣಿ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಗಂಡ ಆಸ್ಟ್ರೇಲಿಯಾದಲ್ಲಿದ್ದಾನೆಂದು 2 ವರ್ಷದಿಂದ ನಂಬಿಸಿದ್ದ ಹೆಂಡತಿ; ದೃಶ್ಯ ಸಿನಿಮಾ ರೀತಿಯೇ ನಡೆದಿತ್ತು ಕೊಲೆ! – Kannada News | Wife claimed husband in Australia but his body found after 2 years in Drishya Movie style murder

ಜಾಮ್​ನಗರ, ಆಗಸ್ಟ್ 1: ಗುಜರಾತ್‌ನ ಜಾಮ್‌ನಗರದ ಜಿಗ್ನೇಶ್ ಮಾವಡಿಯಾ ಕಳೆದ ಎರಡು ವರ್ಷಗಳಿಂದ ನಾಪತ್ತೆಯಾಗಿದ್ದರು. ಅವರು ಕೆಲಸಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. ಅಲ್ಲಿನ ಕಂಪನಿಯ ನಿಯಮದ ಪ್ರಕಾರ ಯಾರೊಂದಿಗೂ ಫೋನ್ ಸಂಪರ್ಕದಲ್ಲಿಲ್ಲ ಎಂದು ಆತನ ಪತ್ನಿ ಪೃಥ್ವಿ ಸಂಬಂಧಿಕರಿಗೆ ಹೇಳುತ್ತಿದ್ದರು. ಜಿಗ್ನೇಶ್ ಎಲ್ಲಿದ್ದಾರೆ ಎಂದು ಕುಟುಂಬದವರು ಪದೇ ಪದೇ ಕೇಳಿದಾಗಲೆಲ್ಲಾ ಆಕೆ ಒಂದಲ್ಲ ಒಂದು ಸುಳ್ಳು ಕಾರಣಗಳನ್ನು ಹೇಳಿ ಸಾಗಹಾಕುತ್ತಿದ್ದರು. ಆದರೆ, ಆತನನ್ನು ಆಕೆಯೇ ಕೊಲೆ ಮಾಡಿರುವ ಸಂಗತಿ 2 ವರ್ಷಗಳ ನಂತರ ಬೆಳಕಿಗೆ ಬಂದಿದೆ. ದೃಶ್ಯ ಸಿನಿಮಾದ ರೀತಿಯಲ್ಲೇ ಗುಂಡಿಯಲ್ಲಿ ಶವ ಹೂತುಹಾಕಿ, ಅದರ ಮೇಲೆ ಕಾಂಕ್ರೀಟ್ ಹಾಕಿದ್ದರು.

ಆಸ್ಟ್ರೇಲಿಯಾಕ್ಕೆ ಹೋಗಿದ್ದಾರೆಂದು ಸುಳ್ಳು:

ನನ್ನ ಗಂಡ ಜಿಗ್ನೇಶ್ ಮಾವಡಿಯಾ ಕೆಲಸಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋಗಿದ್ದಾರೆ. ಕಂಪನಿಯ ನಿಯಮಗಳ ಕಾರಣದಿಂದಾಗಿ ಅವರಿಗೆ ಫೋನ್ ಮಾಡಲು ಅನುಮತಿ ಇಲ್ಲ ಎಂದು ಕುಟುಂಬದ ಸದಸ್ಯರಿಗೆ ಹೇಳುವ ಮೂಲಕ ಆರೋಪಿ ಮಹಿಳೆ ಕೊಲೆಯನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದರು. ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲು ಯೋಚಿಸುತ್ತಿದ್ದ ಸಂಬಂಧಿಕರೊಬ್ಬರು ಜಿಗ್ನೇಶ್ ಅವರ ವಿಳಾಸ ಮತ್ತು ಸಂಪರ್ಕದ ವಿವರಗಳನ್ನು ಕೇಳಿದಾಗ ಜಿಗ್ನೇಶ್ ಅವರ ಪತ್ನಿ ಪೃಥ್ವಿ ಅಲಿಯಾಸ್ ಭೂಮಿಬೆನ್ ವಿವರಗಳನ್ನು ನೀಡಲಿಲ್ಲ. ಇದರಿಂದ ಆಕೆಯ ಗಂಡನ ಕುಟುಂಬಸ್ಥರಿಗೆ ಅನುಮಾನ ಮೂಡಿತು.

ಇದನ್ನೂ ಓದಿ: ಕಾಶ್ಮೀರದ ಕುಲ್ಗಾಮ್‌ನಲ್ಲಿ ಉಗ್ರರ ದಾಳಿ; ಓರ್ವ ಸಾವು, ಒಬ್ಬರ ಸ್ಥಿತಿ ಗಂಭೀರ

ಬಳಿಕ, ಜಿಗ್ನೇಶ್ ಅವರ ಸಹೋದರ ಜುಲೈ 26ರಂದು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದರು. ಇದರಿಂದ ಪೊಲೀಸರು ಪ್ರಕರಣವನ್ನು ಮರುಪರಿಶೀಲಿಸಿದರು. ತನಿಖೆಯ ಸಮಯದಲ್ಲಿ, ಅಧಿಕಾರಿಗಳು ಆರೋಪಿಗಳನ್ನು ಪ್ರಶ್ನಿಸಿ ಜಾಮ್‌ನಗರದ ಕೈಗಾರಿಕಾ ಶೆಡ್‌ನಲ್ಲಿ ಶೋಧ ನಡೆಸಿದರು. ಜುಲೈ 30ರಂದು, ಅವರು ಕಾರ್ಖಾನೆಯ ನೆಲದ ಕೆಳಗೆ ಅಗೆದು, ಸುಮಾರು 12 ಅಡಿ ಭೂಮಿಯ ಅಡಿಯಲ್ಲಿ ಹೂತುಹಾಕಿದ್ದ ಜಿಗ್ನೇಶ್ ಅವರ ಅಸ್ಥಿಪಂಜರದ ಅವಶೇಷಗಳನ್ನು ಹೊರತೆಗೆದರು.

ಆಳವಾದ ಗುಂಡಿಯೊಳಗೆ ಆಕೆ ಗಂಡನ ಶವವನ್ನು ಹೂತುಹಾಕಿ, ಮಣ್ಣಿನಿಂದ ಮುಚ್ಚಿ, ನಂತರ ಸುಮಾರು ಒಂದು ಅಡಿ ದಪ್ಪವಿರುವ ಕಾಂಕ್ರೀಟ್ ಪದರದಿಂದ ಸೀಲ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವಶೇಷಗಳನ್ನು ಹೊರತೆಗೆಯುವ ಮೊದಲು ಕಾಂಕ್ರೀಟ್ ಅನ್ನು ಒಡೆಯಲು ವಿದ್ಯುತ್ ಉಪಕರಣಗಳನ್ನು ಬಳಸಲಾಯಿತು.

ಇದನ್ನೂ ಓದಿ: ಧರ್ಮದ ಹೆಸರಿನಲ್ಲಿ ಕ್ರೂರತೆ; ಅಂಕಿತ್ ಶರ್ಮಾ ಕೊಲೆ ಪ್ರಕರಣದಲ್ಲಿ ಆಪ್ ನಾಯಕ ತಾಹಿರ್ ಹುಸೇನ್​ಗೆ ಜೀವಾವಧಿ ಶಿಕ್ಷೆ

ಪ್ರೇಮ ಕತೆ ಬಯಲು:

ಜಿಗ್ನೇಶ್ ಅವರ ಹೆಂಡತಿ ಪೃಥ್ವಿ ತಮ್ಮ ಮಾಜಿ ಪ್ರೇಮಿ ನೀಲೇಶ್ ಕಚ್ಚಾತಿಯಾ ಅವರೊಂದಿಗೆ ಸೇರಿಕೊಂಡು ಕೊಲೆಗೆ ಸಂಚು ರೂಪಿಸಿದ್ದರು. ಅವರಿಬ್ಬರೂ ಅಕ್ರಮ ಸಂಬಂಧ ಹೊಂದಿದ್ದರು ಎಂದು ವರದಿಯಾಗಿದೆ. ನಿಲೇಶ್ ತಮ್ಮ ಸ್ನೇಹಿತ ಬಲ್ವೀರ್ ವರ್ಮಾ ಅವರೊಂದಿಗೆ ಸೇರಿಕೊಂಡು, 2024ರ ಮೇ 31ರ ರಾತ್ರಿ ಎಣ್ಣೆ ಪಾರ್ಟಿ ನೆಪದಲ್ಲಿ ಜಿಗ್ನೇಶ್ ಅವರನ್ನು ಶೆಡ್‌ಗೆ ಕರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

“ಜಿಗ್ನೇಶ್ ಸೈನೈಡ್ ಬೆರೆಸಿದ ಮದ್ಯವನ್ನು ಕುಡಿದು ಮೃತಪಟ್ಟ ನಂತರ, ಅವರು ಸುಮಾರು 12 ಅಡಿ ಆಳದ ಗುಂಡಿಯನ್ನು ಅಗೆದು ಶವವನ್ನು ಹೂತುಹಾಕಿ, ಮಣ್ಣಿನಿಂದ ಮುಚ್ಚಿ ನಂತರ ಆ ಸ್ಥಳವನ್ನು ಸುಮಾರು ಒಂದು ಅಡಿ ದಪ್ಪದ ಕಾಂಕ್ರೀಟ್ ಹಾಕಿ ಮುಚ್ಚಿದ್ದಾರೆ. ಆ ಜಾಗವನ್ನು ಅಗೆಯುವ ಮೊದಲು ಆರೋಪಿಗಳ ಸಮ್ಮುಖದಲ್ಲಿ ಅಪರಾಧದ ಸ್ಥಳವನ್ನು ಮರುಸೃಷ್ಟಿಸಲಾಯಿತು” ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಪ್ರತಿಭಾ ಪಿಟಿಐಗೆ ತಿಳಿಸಿದ್ದಾರೆ.

ಮೃತನ ಗುರುತನ್ನು ಖಚಿತಪಡಿಸಲು ಅವಶೇಷಗಳನ್ನು ವಿಧಿವಿಜ್ಞಾನ ತಜ್ಞರಿಗೆ ಹಸ್ತಾಂತರಿಸಲಾಗಿದೆ ಮತ್ತು ಮೃತನ ಪತ್ನಿ, ಆಕೆಯ ಪ್ರೇಮಿ ಹಾಗೂ ಅವರ ಸಹಚರರಲ್ಲಿ ಒಬ್ಬರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು. ಮೂವರು ಆರೋಪಿಗಳ ವಿರುದ್ಧ ಕೊಲೆ, ಸಾಕ್ಷ್ಯ ನಾಶ ಮತ್ತು ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಸೇರಿ ರಾಜ್ಯದ 13 ಜಿಲ್ಲೆಗಳಲ್ಲಿ ನಾಳೆ ಭಾರಿ ಮಳೆ: ದಕ್ಷಿಣ ಕನ್ನಡಕ್ಕೆ ಹವಾಮಾನ ಇಲಾಖೆ ಮಹತ್ವದ ಎಚ್ಚರಿಕೆ – Kannada News | Karnataka rain update imd forecasts heavy rainfall in coastal and malenadu regions

ಬೆಂಗಳೂರು, ಆ.1: ರಾಜ್ಯದ ದಕ್ಷಿಣ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಹಲವು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ (Light to Moderate Rain) ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಹವಾಮಾನ ವರದಿಯ ಪ್ರಕಾರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಹಾಗೂ ವಿಜಯನಗರ ಸೇರಿದಂತೆ ಒಟ್ಟು 13 ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.

ಈ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಹಗುರದಿಂದ ಸಾಧಾರಣ ಮಳೆಯಾಗಲಿದೆ. ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಈಗಾಗಲೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.

ತಗ್ಗು ಪ್ರದೇಶಗಳು ಹಾಗೂ ಮಳೆ ಪೀಡಿತ ರಸ್ತೆಗಳಲ್ಲಿ ಸಂಚರಿಸುವಾಗ ವಾಹನ ಸವಾರರು ಜಾಗರೂಕರಾಗಿರಲು ಹಾಗೂ ವಿದ್ಯುತ್ ಕಂಬ, ಹಳೆಯ ಕಟ್ಟಡಗಳ ಬಳಿ ನಿಲ್ಲದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಮಂಗಳೂರಿನ ಹಲವು ಭಾಗದಲ್ಲಿ ಭೂಕುಸಿತ ಕೂಡ ಆಗಿದೆ. ದಕ್ಷಿಣ ಕನ್ನಡದಲ್ಲಿ ಭಾರೀ ಗಾಳಿ ಮಳೆ ಇದೆ. ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಭಾರಿ ಯಿಂದ ಅತ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇರುವ ಕಾರಣ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿಗಳಲ್ಲಿ 7 ಸಾವಿರ ಹೆಚ್‌ಐವಿ ಸೋಂಕು ವದಂತಿ ಸುಳ್ಳು: ಸ್ಪಷ್ಟನೆ ನೀಡಿದ ಆರೋಗ್ಯ ಇಲಾಖೆ

ಗಾಳಿಯ ವೇಗ ಗಂಟೆಗೆ 40 ರಿಂದ 50 ಕಿ.ಮೀ ಇರಲಿದ್ದು, ಮಲೆನಾಡಿನ ಘಟ್ಟ ಪ್ರದೇಶಗಳು ಹಾಗೂ ಕರಾವಳಿಯ ನದಿ ತೀರದಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರು ಜಾಗರೂಕರಾಗಿರಲು ಸೂಚಿಸಲಾಗಿದೆ. ಹಾಸನ ಮತ್ತು ಕೊಡಗು ಜಿಲ್ಲೆಗಳ ಹಲವೆಡೆ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ನೀಡಿದೆ. ನಿರಂತರ ಸಾಧಾರಣದಿಂದ ಭಾರಿ ಮಳೆ ಹಾಗೂ ಬಿರುಸಿನ ಗಾಳಿ ಬೀಸುವ ಸಾಧ್ಯತೆಯಿದೆ. ತಗ್ಗು ಪ್ರದೇಶದ ನಿವಾಸಿಗಳಿಗೆ ಹಾಗೂ ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆ ವಹಿಸಲು ಆಡಳಿತ ಸೂಚಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CWG 2026: ಪ್ಯಾರಾ-ಶಾಟ್ ಪುಟ್​ನಲ್ಲಿ ಚಿನ್ನ ಗೆದ್ದ ಸೋಮನ್, ಶುಭಮ್​ಗೆ ಬೆಳ್ಳಿ – Kannada News | Commonwealth Games: Soman Rana Wins Historic Gold in Para Shot Put; Shubham Juyal Takes Silver

ಕಾಮನ್‌ವೆಲ್ತ್ ಕ್ರೀಡಾಕೂಟದ (Commonwealth Games) 10ನೇ ದಿನದಂದು ಭಾರತಕ್ಕೆ ಅಥ್ಲೆಟಿಕ್ಸ್ ಮತ್ತು ಬಾಕ್ಸಿಂಗ್‌ನಲ್ಲಿ ಪದಕಗಳು ಲಭಿಸಿವೆ. ಇದರ ಜೊತೆಗೆ, ಪ್ಯಾರಾ-ಅಥ್ಲೆಟಿಕ್ಸ್‌ನಲ್ಲಿಯೂ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಗೆಲ್ಲುವಲ್ಲಿ ಭಾರತದ ಪ್ಯಾರಾ-ಅಥ್ಲೆಟ್ಸ್​ಗಳು ಯಶಸ್ವಿಯಾಗಿದ್ದಾರೆ. ಪ್ಯಾರಾ-ಅಥ್ಲೀಟ್ ಸೋಮನ್ ರಾಣಾ ಪುರುಷರ ಪ್ಯಾರಾ-ಶಾಟ್ ಪುಟ್ F57 ( Para Shot Put F57) ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರೆ, ಇನ್ನು ಇದೇ ವಿಭಾಗದಲ್ಲಿ ಮತ್ತೊಬ್ಬ ಭಾರತೀಯ ಶುಭಮ್ ಜುಯಾಲ್ ಬೆಳ್ಳಿ ಪದಕವನ್ನು ಗೆದ್ದುಕೊಂಡರು. ಸೋಮನ್ ರಾಣಾ 13.40 ಮೀಟರ್ ಎಸೆದು ಚಿನ್ನಕ್ಕೆ ಮುತ್ತಿಕ್ಕಿದರೆ, ಶುಭಮ್ ಜುಯಾಲ್ 13.08 ಮೀಟರ್ ಎಸೆಯುವ ಮೂಲಕ ಬೆಳ್ಳಿಗೆ ಕೊರಳೊಡ್ಡಿದರು.

ಚಿನ್ನ ಗೆದ್ದ ಮೊದಲ ಭಾರತೀಯ

ಪುರುಷರ ಪ್ಯಾರಾ-ಶಾಟ್ ಪುಟ್ F57 ಸ್ಪರ್ಧೆಯಲ್ಲಿ ಭಾರತೀಯರ ನಡುವೆಯೇ ಚಿನ್ನಕ್ಕಾಗಿ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಸೋಮನ್ ರಾಣಾ ಮತ್ತು ಶುಭಮ್ ಜುಯಾಲ್ ಚಿನ್ನದ ಪದಕ ಗೆಲ್ಲುವುದಕ್ಕಾಗಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದರು. ಒಂದು ಹಂತದಲ್ಲಿ, ಶುಭಮ್ ಜುಯಾಲ್ 13.08 ಮೀಟರ್ ಎಸೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದರು. ಆದರೆ ಅನುಭವಿ ಪ್ಯಾರಾ-ಅಥ್ಲೀಟ್ ಸೋಮನ್ 13.40 ಮೀಟರ್ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದರು. ಈ ಮೂಲಕ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಈ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ನೆಲಬಾಂಬ್ ಸ್ಫೋಟದಿಂದ ಅಂಗವೈಕಲ್ಯ

ದೇಶಕ್ಕೆ ಚಿನ್ನದ ಪದಕದ ಕಿರೀಟ ತೊಡಿಸಿದ ಸೋಮನ್ ರಾಣಾ ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿದ್ದು, ಸುಮಾರು ಒಂದೂವರೆ ದಶಕಗಳಿಂದ ಪ್ಯಾರಾ-ಅಥ್ಲೆಟಿಕ್ಸ್‌ನಲ್ಲಿ ಸಕ್ರಿಯರಾಗಿದ್ದಾರೆ. ಪ್ಯಾರಾ-ಶಾಟ್‌ಪುಟ್‌ಗೆ ತಮ್ಮ ಆಟವನ್ನು ಬದಲಾಯಿಸುವ ಮೊದಲು, ಅವರು ಬಾಕ್ಸಿಂಗ್‌ನಲ್ಲಿ ಸಕ್ರಿಯರಾಗಿದ್ದರು. 2005 ರವರೆಗೆ ಬಾಕ್ಸಿಂಗ್‌ನಲ್ಲಿ ತೊಡಗಿಸಿಕೊಂಡಿದ್ದ ಬಿಹಾರದ ಸೋಮನ್, 2005 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಗಸ್ತು ತಿರುಗುತ್ತಿದ್ದಾಗ, ಅವರು ನೆಲಬಾಂಬ್ ಸ್ಫೋಟಕ್ಕೆ ತುತ್ತಾಗಿ ಒಂದು ಕಾಲು ಕಳೆದುಕೊಂಡರು.

ಇದು ಅವರ ಇಡೀ ಜೀವನವನ್ನು ಬದಲಾಯಿಸಿತು. ಅವರು ಒಂದು ಕಾಲನ್ನು ಕಳೆದುಕೊಂಡ ಕಾರಣದಿಂದಾಗಿ ತಮ್ಮ ಆಟವನ್ನು ಬದಲಾಯಿಸಬೇಕಾಯಿತು. ಆದರೆ ಎಂದು ಛಲ ಬಿಡದ ಸೋಮನ್ ಪ್ಯಾರಾ-ಶಾಟ್‌ಪುಟ್‌ಗೆ ತಮ್ಮ ಆಟವನ್ನು ಬದಲಾಯಿಸುವ ಮೂಲಕ 2022 ರಲ್ಲಿ ನಡೆದ ಪ್ಯಾರಾ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ನಂತರ 2025 ರಲ್ಲಿ ಪ್ಯಾರಾ-ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದರು.

CWG 2026: ಟ್ರಿಪಲ್ ಜಂಪ್​ನಲ್ಲಿ ಬೆಳ್ಳಿ ಮತ್ತು ಕಂಚು ಗೆದ್ದ ಚಿತ್ರಾವೆಲ್, ಸೆಲ್ವ ಪ್ರಭು

ಬೆಳ್ಳಿ ಗೆದ್ದ ಶುಭಮ್

ಮೊದಲ ಬಾರಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಿದ ಶುಭಮ್ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಸೋಮನ್ ಅವರಂತೆಯೇ, ಶುಭಂ ಕೂಡ ಭಾರತೀಯ ಸೇನೆಯ ಸದಸ್ಯರಾಗಿದ್ದು, ಲ್ಯಾನ್ಸ್ ನಾಯಕ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತರಾಖಂಡದ ರೂರ್ಕಿಯಿಂದ ಬಂದ ಅವರು 2012 ರಲ್ಲಿ ಆರ್ಮಿ ಕೆಡೆಟ್ ಕಾಲೇಜಿನಲ್ಲಿ ಸಂದರ್ಶನಕ್ಕೆ ಹೋಗುವಾಗ ಬೈಕ್ ಅಪಘಾತದಲ್ಲಿ ಸಿಲುಕಿ ಒಂದು ಕಾಲು ಕಳೆದುಕೊಂಡರು. ನಂತರ ಸೇನೆಯು ಅವರಿಗೆ ಪ್ರಾಸ್ಥೆಟಿಕ್ ಕಾಲನ್ನು ಅಳವಡಿಸಿತು. ಆ ನಂತರ ಶುಭಮ್ ಕೂಡ ಪ್ಯಾರಾ-ಶಾಟ್ ಪುಟ್‌ನಲ್ಲಿ ವೃತ್ತಿಜೀವನವನ್ನು ಮುಂದುವರಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:23 pm, Sat, 1 August 26

Source link

‘ಕರ್ನಾಟಕ ಮೂಲಕ ಭಾರತವನ್ನ ಇಡೀ ಜಗತ್ತು ನೋಡ್ತಿದೆ’: ರಾಜ್ಯದ ಅಭಿವೃದ್ಧಿಗೆ ಸಹಕರಿಸುವಂತೆ ಪ್ರಧಾನಿಗೆ ಡಿಕೆಶಿ ಮನವಿ – Kannada News | The Entire World Is Looking at India Through Karnataka: DK Shivakumar Urges PM to Support State’s Development

ಮೈಸೂರು, ಆಗಸ್ಟ್​ 01: ‘ಕರ್ನಾಟಕ ಮೂಲಕ ಭಾರತವನ್ನ ಇಡೀ ಜಗತ್ತು ನೋಡುತ್ತಿದೆ. ಹಾಗಾಗಿ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುವಂತೆ ಪ್ರಧಾನಿ ನರೇಂದ್ರ ಮೋದಿ’ ಅವರಿಗೆ ಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದರು. ​ಇಂದು ಮೈಸೂರಿನಲ್ಲಿ ನಡೆದ ವಿವೇಕ ಸ್ಮಾರಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿವಹಿಸಿ ಮಾತನಾಡಿದ ಅವರು, ‘ಇದೊಂದು ಐತಿಹಾಸಿಕ ಕಾರ್ಯಕ್ರಮ. ಯುವಕರ ಕನಸು ದೇಶದ ಕನಸಾಗಿದೆ. ವಿವೇಕಾನಂದರ ಯೋಚನೆಗಳನ್ನ ನಮ್ಮ ಸರ್ಕಾರ ಪಾಲಿಸುತ್ತೆ. ಇಡೀ ವಿಶ್ವವೇ ಇಂದು ಕರ್ನಾಟಕವನ್ನ ಗಮನಿಸುತ್ತಿದೆ. ಹಳ್ಳಿ, ನಗರಗಳಲ್ಲಿ ಯುವಶಕ್ತಿ ಸರಿಯಾಗಿ ಬಳಸಿಕೊಳ್ಳಬೇಕು, ಹಾಗಾಗಿ ಕೆಲ ಯೋಜನೆಗಳನ್ನ ಜಾರಿಗೆ ತರಲು ಚಿಂತನೆ ನಡೆದಿದೆ’ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ವಿಶ್ವದ ಅತಿಶ್ರೀಮಂತನ ಅರ್ಧದಷ್ಟು ಸಂಪತ್ತು ಕರಗಿದರೂ ಆತನೇ ನಂಬರ್ ಒನ್ – Kannada News | Elon musk asset value down by almost half as spacex and tesla shares going down

ವಾಷಿಂಗ್ಟನ್, ಆಗಸ್ಟ್ 1: ವಿಶ್ವದ ಮೊದಲ ಮತ್ತು ಏಕೈಕ ಟ್ರಿಲಿಯನೇರ್ ಎನಿಸಿದ್​ದ ಇಲಾನ್ ಮಸ್ಕ್ (Elon Musk) ಅವರ ಗರಿಷ್ಠ ಸಂಪತ್ತು ಅರ್ಧದಷ್ಟು ನಶಿಸಿದೆ. ಕಳೆದುಕೊಂಡಿದ್ದಾರೆ. ಸ್ಪೇಸ್‌ಎಕ್ಸ್ (SpaceX) ಶೇರುಗಳ ಭಾರಿ ಕುಸಿತದಿಂದಾಗಿ ಇಲಾನ್ ಮಸ್ಕ್ ತಮ್ಮ ಸಂಪತ್ತು ಗಣನೀಯವಾಗಿ ಕರಗಿದೆ. ಆದರೂ ಕೂಡ ಅವರು ಎರಡನೇ ಅತಿ ಶ್ರೀಮಂತನಿಗಿಂತ ಎರಡು ಪಟ್ಟು ಹೆಚ್ಚು ಶ್ರೀಮಂತಿಕೆ ಹೊಂದಿದ್ದಾರೆ.

ಜೂನ್ 16 ರಂದು ಇಲಾನ್ ಮಸ್ಕ್ ಅವರ ಆಸ್ತಿ ಗರಿಷ್ಠ $1.33 ಟ್ರಿಲಿಯನ್ ಮುಟ್ಟಿತ್ತು. ಸ್ಪೇಸ್ ಎಕ್ಸ್ ಐಪಿಒ ಭರ್ಜರಿ ಯಶಸ್ಸು ಕಂಡು ಶೇರುಬೆಲೆ ಸಖತ್ ಏರಿದಾಗ ಅವರು ವಿಶ್ವದ ಮೊದಲ ಟ್ರಿಲಿಯನೇರ್ ಎನಿಸಿದ್ದರು. ಆದರೆ ಸ್ಪೇಸ್‌ಎಕ್ಸ್ ಶೇರುಗಳ ಕುಸಿತದಿಂದಾಗಿ ಪ್ರಸ್ತುತ ಅವರ ನಿವ್ವಳ ಆಸ್ತಿ ಮೌಲ್ಯ $684 ಬಿಲಿಯನ್‌ಗೆ ಕುಸಿದಿದೆ. ಅಂದರೆ, ಸುಮಾರು $600 ಬಿಲಿಯನ್‌ಗಿಂತಲೂ ಹೆಚ್ಚಿನ ನಷ್ಟ ಕಂಡಿದ್ದಾರೆ.

ಇದನ್ನೂ ಓದಿ: ಕೇಂದ್ರದಿಂದ ರಾಜ್ಯಗಳಿಗೆ 1 ಲಕ್ಷ ಕೋಟಿ ರೂ ತೆರಿಗೆ ಹಂಚಿಕೆ; ಕರ್ನಾಟಕಕ್ಕೆ 4,504 ಕೋಟಿ ರೂ; ಬೇರೆ ರಾಜ್ಯಗಳಿಗೆ ಸಿಕ್ಕಿದ್ದು ಎಷ್ಟು?

ಸ್ಪೇಸ್‌ಎಕ್ಸ್ ಷೇರು ಕುಸಿತ ಯಾಕೆ?

ಸಾರ್ವಜನಿಕ ಶೇರು ಮಾರುಕಟ್ಟೆಗೆ (IPO) ಬಂದ ನಂತರ ಸ್ಪೇಸ್‌ಎಕ್ಸ್ ಷೇರಿನ ಬೆಲೆ ಸಾರ್ವಕಾಲಿಕ ಗರಿಷ್ಠ $201.80 ತಲುಪಿತ್ತು. ಆದಾಗ್ಯೂ, ಅಲ್ಲಿಂದ ಅದರ ಬೆಲೆ ಸುಮಾರು 46% ರಷ್ಟು ಕುಸಿದು ಪ್ರಸ್ತುತ $108.37 ತಲುಪಿದೆ. ಐಪಿಒದಲ್ಲಿ ಶೇರು ಪಡೆದಿದ್ದವರು ಪ್ರಾಫಿಟ್ ಬುಕಿಂಗ್ ಮಾಡಿದ್ದರಿಂದ ಈ ಕುಸಿತ ಉಂಟಾಗಲು ಮೊದಲ ಪ್ರಮುಖ ಕಾರಣ. ಹಾಗೆಯೇ, ಮುಂದಿನ ಹಣಕಾಸು ವರದಿಗಳ ಬಗ್ಗೆ ಆತಂಕ ಇರುವಂತಹವರು ಶೇರುಗಳನ್ನು ಮಾರಿ, ಮುಂದಿನ ಅವಕಾಶಗಳಿಗಾಗಿ ಕಾಯುತ್ತಿರಲು ನಿರ್ಧರಿಸಿರಬಹುದು. ಹಾಗೆಯೇ, ಸ್ಪೇಸ್​ಎಕ್ಸ್ ಶೇರು ಬೆಲೆ ಕುಸಿಯಲು ಇನ್ನೊಂದು ಕಾರಣವೆಂದರೆ ಕೋಟ್ಯಂತ ಶೇರುಗಳ ಲಾಕಿನ್ ಅವಧಿ ಮುಗಿದು ಮಾರುಕಟ್ಟೆಗೆ ಪ್ರವಹಿಸಲಿರುವುದು.

ಸಂಸ್ಥೆಯ ಉದ್ಯೋಗಿಗಳು ಹಾಗೂ ಆರಂಭಿಕ ಹೂಡಿಕೆದಾರರ ಶೇರು ಲಾಕ್-ಇನ್ ಅವಧಿ (Lockup Expiry) ಮುಕ್ತಾಯಗೊಳ್ಳಲಿದ್ದು, ಸುಮಾರು 911.5 ಮಿಲಿಯನ್ ಶೇರುಗಳು ಮಾರುಕಟ್ಟೆಗೆ ಬರಲಿವೆ. ಇದರಿಂದಾಗಿ ಶೇರು ಬೆಲೆ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ.

ಇದನ್ನೂ ಓದಿ: ಜುಲೈನಲ್ಲಿ ಭರ್ಜರಿ ಜಿಎಸ್​ಟಿ ಕಲೆಕ್ಷನ್ಸ್; ಸರ್ಕಾರದ ಖಜಾನೆ ಮುಟ್ಟಿದ ತೆರಿಗೆ ಮೊತ್ತ 2 ಲಕ್ಷ ಕೋಟಿ ರೂಗೂ ಅಧಿಕ

ಟೆಸ್ಲಾ (Tesla) ಷೇರುಗಳ ಕುಸಿತ: ಸ್ಪೇಸ್‌ಎಕ್ಸ್ ಜೊತೆಗೆ ಮಸ್ಕ್ ಅವರ ಮತ್ತೊಂದು ಕಂಪನಿಯಾದ ಟೆಸ್ಲಾದ ಶೇರುಗಳು ಕೂಡ ಜುಲೈ 22 ರ ದ್ವಿತೀಯ ತ್ರೈಮಾಸಿಕ ವರದಿಯ ನಂತರ 17% ನಷ್ಟು ಕುಸಿದಿವೆ.

ಎಐ ಮತ್ತು ರೊಬೊಟಿಕ್ಸ್ ವೆಚ್ಚ: ಟೆಸ್ಲಾ ಕಂಪನಿಯು ಆಟೋಮೇಷನ್, ಎಐ ರೋಬೋಟಿಕ್ಸ್ ಮತ್ತು ಸ್ವಯಂ ಚಾಲಿತ ವಾಹನಗಳ (Robotaxis) ತಂತ್ರಜ್ಞಾನಕ್ಕಾಗಿ ಈ ವರ್ಷ $25 ಬಿಲಿಯನ್‌ಗಿಂತಲೂ ಹೆಚ್ಚು ಬಂಡವಾಳ ವೆಚ್ಚ ಮಾಡುತ್ತಿರುವುದು ಕಂಪನಿಯ ಲಾಭಾಂಶದ ಮೇಲೆ ಪರಿಣಾಮ ಬೀರಿದೆ. ಇವೆಲ್ಲವೂ ಕೂಡ ಇಲಾನ್ ಮಸ್ಕ್ ಅವರ ಒಟ್ಟಾರೆ ಶೇರು ಸಂಪತ್ತಿನ ಮೌಲ್ಯವನ್ನು ಕಡಿಮೆ ಮಾಡಲು ಕಾರಣಗಳಾಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

CWG 2026: ಟ್ರಿಪಲ್ ಜಂಪ್​ನಲ್ಲಿ ಬೆಳ್ಳಿ ಮತ್ತು ಕಂಚು ಗೆದ್ದ ಚಿತ್ರಾವೆಲ್, ಸೆಲ್ವ ಪ್ರಭು – Kannada News | India’s CWG 2026 Medal Rush: Chithravel and Selva Prabhu adds silver and bronz in triple jump

2026 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ (Commonwealth Games 2026) ಭಾರತದ ಪದಕಗಳ ಭೇಟೆ ಮುಂದುವರೆದಿದೆ. ಕ್ರೀಡಾಕೂಟದ 10 ನೇ ದಿನದಂದು ಭಾರತ ಒಂದರ ಮೇಲೊಂದು ಪದಕಗಳನ್ನು ತನ್ನದಾಗಿಸಿಕೊಳ್ಳುತ್ತಿದೆ. ಬಾಕ್ಸಿಂಗ್ ವಿಭಾಗದಲ್ಲಿ ಭಾರತಕ್ಕೆ ಹೆಚ್ಚಿನ ಪದಕಗಳು ಸಿಗುವುದು ಈ ಮೊದಲೇ ಖಚಿತವಾಗಿತ್ತು. ಇದೀಗ ಬಾಕ್ಸಿಂಗ್ ಜೊತೆಗೆ ಅಥ್ಲೇಟಿಕ್ಸ್​ನಲ್ಲೂ ಭಾರತಕ್ಕೆ 2 ಪದಕಗಳು ಲಭಿಸಿವೆ. ಭಾರತೀಯ ಅಥ್ಲೀಟ್‌ಗಳಾದ ಪ್ರವೀಣ್ ಚಿತ್ರಾವೆಲ್ (Praveen Chithravel) ಮತ್ತು ಸೆಲ್ವ ಪ್ರಭು ತಿರುಮಾರನ್ (Selva Prabhu) ಅವರು ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ದೇಶಕ್ಕೆ ಎರಡೆರಡು ಪದಕಗಳನ್ನು ಗೆದ್ದುಕೊಟ್ಟಿದ್ದಾರೆ. ಚಿತ್ರಾವೆಲ್ ತಮ್ಮ ನಾಲ್ಕನೇ ಪ್ರಯತ್ನದಲ್ಲಿ 16.58 ಮೀಟರ್‌ ಜಿಗಿತದೊಂದಿಗೆ ಬೆಳ್ಳಿ ಪದಕ ಗೆದ್ದರೆ, ಸೆಲ್ವ ಪ್ರಭು 16.52 ಮೀಟರ್‌ ಜಿಗಿತದೊಂದಿಗೆ ಮೂರನೇ ಸ್ಥಾನ ಪಡೆದು ಕಂಚಿನ ಪದಕಕ್ಕೆ ಮುತ್ತಿಕ್ಕಿದರು.

ಬೆಳ್ಳಿ ಗೆದ್ದ ಚಿತ್ರಾವೆಲ್

ಚಿತ್ರಾವೆಲ್ ಮೊದಲ ಮೂರು ಸುತ್ತುಗಳ ನಂತರ ಐದನೇ ಸ್ಥಾನದಲ್ಲಿದ್ದರು. ತಮ್ಮ ಮೊದಲ ಪ್ರಯತ್ನದಲ್ಲಿ 16.05 ಮೀಟರ್ ಜಿಗಿದ ಚಿತ್ರಾವೆಲ್ ಮೂರನೇ ಸುತ್ತಿನಲ್ಲಿ 16.31 ಮೀಟರ್‌ ದೂರ ಜಿಗಿಯುವ ಮೂಲಕ ತಮ್ಮ ಪ್ರದರ್ಶನವನ್ನು ಸುಧಾರಿಸಿಕೊಂಡರು. ನಂತರ ತಮ್ಮ ನಾಲ್ಕನೇ ಪ್ರಯತ್ನದಲ್ಲಿ 16.58 ಮೀಟರ್ ಜಿಗಿತದೊಂದಿಗೆ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು.

ಕಂಚಿಗೆ ಕೊರಳೊಡ್ಡಿದ ಸೆಲ್ವ ಪ್ರಭು

ಇತ್ತ ಸೆಲ್ವ ಪ್ರಭು ತಮ್ಮ ಎರಡನೇ ಪ್ರಯತ್ನದಲ್ಲಿ 16.17 ಮೀಟರ್ ದೂರದೊಂದಿಗೆ ಕಂಚಿನ ಪದಕದ ಸ್ಥಾನವನ್ನು ಪಡೆದುಕೊಂಡರು. ಮೂರನೇ ಸುತ್ತಿನಲ್ಲಿ 16.43 ಮೀಟರ್‌ ದೂರ ಜಿಗಿಯುವ ಮೂಲಕ ತಮ್ಮ ಪ್ರದರ್ಶನವನ್ನು ಸುಧಾರಿಸಿಕೊಂಡರು. ನಂತರ 16.52 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದೊಂದಿಗೆ ತಮ್ಮ ಸರದಿಯನ್ನು ಮುಗಿಸುವುದರ ಜೊತೆಗೆ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

CWG 2026: ಬಾಕ್ಸಿಂಗ್​ನಲ್ಲಿ ಭಾರತಕ್ಕೆ 2ನೇ ಚಿನ್ನ; 57 ಕೆಜಿ ವಿಭಾಗದಲ್ಲಿ ಬಂಗಾರ ಗೆದ್ದ ಜಾಸ್ಮಿನ್ ಲಂಬೋರಿಯಾ

ಬಾಕ್ಸಿಂಗ್​ನಲ್ಲಿ 2 ಚಿನ್ನ

ಇದಕ್ಕೂ ಮೊದಲು ಮಹಿಳೆಯರ 54 ಕೆಜಿ ವಿಭಾಗದಲ್ಲಿ ಭಾರತೀಯ ಬಾಕ್ಸರ್ ಪ್ರೀತಿ ಪನ್ವಾರ್ ಚಿನ್ನ ಗೆದ್ದರೆ, ಸ್ವಲ್ಪ ಸಮಯದ ನಂತರ ಮಹಿಳೆಯರ 57 ಕೆಜಿ ವಿಭಾಗದಲ್ಲಿ ಜಾಸ್ಮಿನ್ ಲಂಬೋರಿಯಾ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು. ಇದು ಭಾರತಕ್ಕೆ ದಿನದ ಎರಡನೇ ಬಾಕ್ಸಿಂಗ್ ಚಿನ್ನವನ್ನು ತಂದುಕೊಟ್ಟಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:06 pm, Sat, 1 August 26

Source link

Exit mobile version