ಮಂಗಳೂರಿನಲ್ಲಿ ನಿಲ್ಲದ ವಂದೇ ಭಾರತ್ ರೈಲು: ನಿಂತು ಟಾಟಾ ಮಾತ್ರ ಮಾಡ್ಬೇಕಾ ಎಂದು ಕರಾವಳಿಗರು ಆಕ್ರೋಶ – Kannada News | Bengaluru Madgaon Vande Bharat train has no stop in Mangaluru: Sparks Outrage on coastal residents
ಮಂಗಳೂರು, ಫೆಬ್ರವರಿ 25: ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಬಾಕಿಯಿದ್ದ ಘಾಟ್ ಸೆಕ್ಷನ್‌ನ ಹಳಿ ವಿದ್ಯುದೀಕರಣ ಪೂರ್ತಿ ಆಗಿದೆ. ಇನ್ನೇನು ಕಡಲನಗರಿಗೆ ವಂದೇ ಭಾರತ್ ರೈಲು (Vande Bharat) ಸಂಚಾರ ಮಾಡುತ್ತೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಮಂಗಳೂರಿಗೆ (Mangaluru) ರೈಲ್ವೆ ಇಲಾಖೆ ಬಿಗ್ ಶಾಕ್ ನೀಡಿದೆ. ವಂದೇ ಭಾರತ್ ರೈಲು ಮಂಗಳೂರು ಮೂಲಕವೇ ಹಾದು ಹೋದರೂ ಇಲ್ಲಿ ನಿಲುಗಡೆ ನೀಡದಿರುವುದು ರೈಲು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕದ ಹೆಬ್ಬಾಗಿಲನ್ನೇ ಮರೆತ ವಂದೇ ಭಾರತ್ ರೈಲು ಕರಾವಳಿ ತೀರದಲ್ಲಿ…