ದೇಶ-ವಿದೇಶಗಳಿಗೆ ಹಣ್ಣು, ತರಕಾರಿ, ಹೂವು ರಫ್ತು ಮಾಡುವ ‘ಕೃಷಿ ಕಣಜ’ ಕೋಲಾರಕ್ಕೆ ದೊಡ್ಡ ಸಂಕಷ್ಟ – Kannada News | Kolar Soil Degradation: Solutions to Revive Farming and Farmer Livelihoods

ಕೋಲಾರ, ಫೆ.24: ದೇಶ-ವಿದೇಶಗಳಿಗೆ ಹಣ್ಣು, ತರಕಾರಿ ಮತ್ತು ಹೂವುಗಳನ್ನು ರಫ್ತು ಮಾಡಿ ‘ಕೃಷಿ ಕಣಜ’ ಎನಿಸಿಕೊಂಡಿದ್ದ ಕೋಲಾರ ಜಿಲ್ಲೆಯಲ್ಲಿ ಈಗ ದೊಡ್ಡ ಸಂಕಷ್ಟವೊಂದು ಎದುರಾಗಿದೆ. ಜಿಲ್ಲೆಯ ಮಣ್ಣು ತನ್ನ ಸಹಜ ಸತ್ವವನ್ನು ಕಳೆದುಕೊಂಡು ವಿಷಯುಕ್ತವಾಗುತ್ತಿದ್ದು, ಇದು ಹೀಗೆಯೇ ಮುಂದುವರೆದರೆ ಇಡೀ ಜಿಲ್ಲೆ ಬಂಜರು ಭೂಮಿಯಾಗಲಿದೆ ಎಂದು ಕೃಷಿ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಕೋಲಾರದ ಸುಮಾರು ಒಂದು ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದ ಮಣ್ಣು ಈಗ ಸತ್ವ ಕಳೆದುಕೊಂಡಿದೆ. ರಾಜ್ಯದಲ್ಲೇ ಅತಿ ಹೆಚ್ಚು ಫಲವತ್ತತೆ ಕಳೆದುಕೊಂಡ ಜಿಲ್ಲೆ ಎಂಬ ಹಣೆಪಟ್ಟಿ ಕೋಲಾರಕ್ಕೆ ಅಂಟಿಕೊಂಡಿದೆ.

ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆ, ಕ್ರಿಮಿನಾಶಕಗಳ ಸಿಂಪಡಣೆ ಮತ್ತು ವರ್ಷವಿಡೀ ಬೆಳೆ ಪರಿವರ್ತನೆ ಮಾಡದೆ ಒಂದೇ ರೀತಿಯ ಬೆಳೆಗಳನ್ನು ಬೆಳೆಯುತ್ತಿರುವುದು ಮಣ್ಣಿನ ಆರೋಗ್ಯ ಹದಗೆಡಲು ಪ್ರಮುಖ ಕಾರಣ ಎಂದು ಕೃಷಿ ವಿಜ್ಞಾನ ಕೇಂದ್ರದ ಮಣ್ಣಿನ ವಿಜ್ಞಾನಿ ಸುನಿಲ್ ಕುಮಾರ್ ತಿಳಿಸಿದ್ದಾರೆ. ಕಳೆದ 3-4 ವರ್ಷಗಳಿಂದ ಜಿಲ್ಲೆಯಲ್ಲಿ ಬೆಳೆಗಳು ಸರಿಯಾಗಿ ಬೆಳೆಯುತ್ತಿಲ್ಲ. ಅಕಸ್ಮಾತ್ ಬೆಳೆದರೂ ಅವು ಗುಣಮಟ್ಟದಿಂದ ಕೂಡಿರುತ್ತಿಲ್ಲ ಮತ್ತು ವಿವಿಧ ರೋಗಗಳಿಗೆ ತುತ್ತಾಗುತ್ತಿವೆ. ಇದರಿಂದಾಗಿ ರೈತರು ಆರ್ಥಿಕವಾಗಿ ಹೈರಾಣಾಗಿದ್ದಾರೆ.

ಜಿಲ್ಲೆಯ ಅಂತರ್ಜಲವೂ ವಿಷಯುಕ್ತವಾಗಿದ್ದು, ಇಲ್ಲಿ ಬೆಳೆಯುವ ತರಕಾರಿಗಳಲ್ಲಿ ‘ಸತು’ವಿನಂತಹ ವಿಷಕಾರಿ ಅಂಶಗಳು ಪತ್ತೆಯಾಗಿರುವುದು ಗ್ರಾಹಕರು ಹಾಗೂ ರೈತರನ್ನು ಆತಂಕಕ್ಕೆ ತಳ್ಳಿದೆ. ಈ ಹಿಂದೆ ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯ ನೀರೇ ಈ ಸಮಸ್ಯೆಗೆ ಕಾರಣ ಎಂದು ಭಾವಿಸಲಾಗಿತ್ತು. ಆದರೆ ಮಣ್ಣಿನ ಪರೀಕ್ಷೆಗಳು ಬೇರೆಯದೇ ಸತ್ಯವನ್ನು ಹೇಳುತ್ತಿವೆ. ಈ ಹಿನ್ನೆಲೆಯಲ್ಲಿ ರೈತ ಮುಖಂಡ ನಾರಾಯಣಗೌಡ ಅವರು, “ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ವಿಶೇಷ ಪ್ಯಾಕೇಜ್ ಘೋಷಿಸಬೇಕು. ಮಣ್ಣಿನ ಸತ್ವ ಮರುಸ್ಥಾಪಿಸಲು ಮತ್ತು ರೈತರಿಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ನನ್ನ ಲೈಫ್​​​​ ಹೇಗಾಗಿದೆ ಅಂದ್ರೆ: ಒಂದು ಕಡೆ ಅಪ್ಪ ಇಲ್ಲ, ಇನ್ನೊಂದು ಕಡೆ ಅಮ್ಮನಿಗೆ ಅನಾರೋಗ್ಯ, ಕೈಯಲ್ಲಿ ಕೆಲಸ ಇಲ್ಲ

ಈ ಬಗ್ಗೆ ಕೆಲವೊಂದು ಸಲಹೆಗಳನ್ನು ತಜ್ಞರು ಕೆಲವೊಂದು ಸಲಹೆ ನೀಡಿದ್ದಾರೆ. ರಾಸಾಯನಿಕ ಗೊಬ್ಬರ ಬಿಟ್ಟು ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಮತ್ತು ಕೊಟ್ಟಿಗೆ ಗೊಬ್ಬರ ಬಳಸಬೇಕು. ಒಂದೇ ಭೂಮಿಯಲ್ಲಿ ಪದೇ ಪದೇ ಒಂದೇ ಬೆಳೆ ಬೆಳೆಯುವ ಬದಲು ಬೆಳೆಗಳನ್ನು ಬದಲಾಯಿಸುತ್ತಿರಬೇಕು. ಪ್ರತಿ ವರ್ಷ ಮಣ್ಣಿನ ಪರೀಕ್ಷೆ ನಡೆಸಿ ಅದಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಮಾತ್ರ ನೀಡಬೇಕು ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಟಮಿನ್ ಡಿ ಸಪ್ಲಿಮೆಂಟ್ ತೆಗೆದುಕೊಳ್ಳುತ್ತಿದ್ದೀರಾ? ಹಾಗಿದ್ರೆ ಈ ವಿಷಯಗಳನ್ನು ತಿಳಿದುಕೊಳ್ಳಿ – Kannada News | How to Take Vitamin D Supplements

ಇತ್ತೀಚಿನ ದಿನಗಳಲ್ಲಿ, ವಿಟಮಿನ್ ಡಿ (Vitamin D) ಸಪ್ಲಿಮೆಂಟ್ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಬದಲಾಗುತ್ತಿರುವ ಜೀವನಶೈಲಿ, ಬಿಸಿಲಿಗೆ ಹೋಗದಿರುವುದು ಮತ್ತು ಮನೆ ಅಥವಾ ಕಚೇರಿಯಲ್ಲಿ ದೀರ್ಘಕಾಲ ಇರುವುದೇ ಈ ವಿಟಮಿನ್ ಕೊರತೆಗೆ ಪ್ರಮುಖ ಕಾರಣಗಳಾಗಿವೆ. ವಿಟಮಿನ್ ಡಿ ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ, ಇದು ಮೂಳೆ ಮತ್ತು ಹಲ್ಲುಗಳನ್ನು ಬಲವಾಗಿಡುತ್ತದೆ. ಅಷ್ಟೇಅಲ್ಲ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಇದರ ಕೊರತೆಯು ಮೂಳೆ ನೋವು, ಆಯಾಸ, ದೌರ್ಬಲ್ಯ, ಆಗಾಗ ಅನಾರೋಗ್ಯ ಮತ್ತು ಮನಸ್ಥಿತಿ ಬದಲಾವಣೆಗಳಂತಹ ಲಕ್ಷಣಗಳಿಗೆ ಕಾರಣವಾಗಬಹುದು. ಅಂತಹ ಸಂದರ್ಭಗಳಲ್ಲಿ, ವಿಟಮಿನ್ ಡಿ ಪೂರಕಗಳನ್ನು ಅಂದರೆ ಸಪ್ಲಿಮೆಂಟ್ ತೆಗೆದುಕೊಳ್ಳುತ್ತಾರೆ. ಆದರೆ ಅದರ ಮೊದಲು ಈ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕಾಗುತ್ತದೆ. ಆಗ ಮಾತ್ರ ದೇಹದ ಅಗತ್ಯಗಳಿಗೆ ಅನುಗುಣವಾಗಿ ಸರಿಯಾದ ರೀತಿಯಲ್ಲಿ ಸೇವಿಸಬಹುದು. ಇಲ್ಲವಾದಲ್ಲಿ ಇದರಿಂದ ಪೂರ್ಣ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾದರೆ ಇದನ್ನು ಯಾವ ರೀತಿ ಮತ್ತು ಹೇಗೆ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ವಿಟಮಿನ್ ಡಿ ಸಪ್ಲಿಮೆಂಟ್ ತೆಗೆದುಕೊಳ್ಳಲು ಹಾಲು ಅಥವಾ ನೀರು ಯಾವುದು ಉತ್ತಮ?

ಲೇಡಿ ಹಾರ್ಡಿಂಗ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಮತ್ತು ಮುಖ್ಯಸ್ಥರಾದ ಡಾ. ಎಲ್.ಎಚ್. ​​ಘೋಟೇಕರ್ ಹೇಳುವ ಪ್ರಕಾರ, ಹಾಲಿನಲ್ಲಿ ಕೊಬ್ಬು ಮತ್ತು ಕ್ಯಾಲ್ಸಿಯಂ ಎರಡನ್ನೂ ಹೊಂದಿರುವುದರಿಂದ, ಅನೇಕರು ಇದನ್ನು ಹಾಲಿನೊಂದಿಗೆ ತೆಗೆದುಕೊಳ್ಳಲು ಬಯಸುತ್ತಾರೆ. ಆದರೆ ಕೆಲವರು ಹಾಲು ಕುಡಿಯಲು ಇಷ್ಟಪಡುವುದಿಲ್ಲ ಅಥವಾ ಅವರಿಗೆ ಲ್ಯಾಕ್ಟೋಸ್ ಅಲರ್ಜಿ ಇದ್ದಲ್ಲಿ ಅವರು ನೀರಿನೊಂದಿಗೆ ತೆಗೆದುಕೊಳ್ಳಬಹುದು, ಆದರೆ ಊಟದಲ್ಲಿ ಸ್ವಲ್ಪ ಪ್ರಮಾಣದ ಕೊಬ್ಬಿನಾಂಶ ಹೆಚ್ಚಿರುವ ಆಹಾರ ಸೇವನೆ ಮಾಡುವುದನ್ನು ಮರೆಯಬಾರದು. ಅತ್ಯಂತ ಮುಖ್ಯವಾದ ವಿಷಯವೆಂದರೆ ಪೂರಕವನ್ನು ನಿಯಮಿತವಾಗಿ ಮತ್ತು ವೈದ್ಯರ ಸಲಹೆಯ ಪ್ರಕಾರ ಮಾತ್ರ ತೆಗೆದುಕೊಳ್ಳಬೇಕು, ಇದರಿಂದ ಮಾತ್ರ ದೇಹಕ್ಕೆ ಸಂಪೂರ್ಣ ಪ್ರಯೋಜನ ಸಿಗುತ್ತದೆ.

ಇದನ್ನೂ ಓದಿ: 30ರಲ್ಲಿ ಮೂಳೆಗಳು 50 ವರ್ಷದವರಂತಾಗಬಹುದು; ವಿಟಮಿನ್ ಡಿ, ಕ್ಯಾಲ್ಸಿಯಂ ಒಟ್ಟಿಗೆ ಸಿಗದಿದ್ದರೆ ಏನಾಗುತ್ತೆ ನೋಡಿ

ವಿಟಮಿನ್ ಡಿ ಸಪ್ಲಿಮೆಂಟ್ ತೆಗೆದುಕೊಳ್ಳಲು ಸರಿಯಾದ ಸಮಯ?

ಸಾಮಾನ್ಯವಾಗಿ ಬೆಳಿಗ್ಗೆ ಅಥವಾ ಊಟದ ಸಮಯದಲ್ಲಿ ವಿಟಮಿನ್ ಡಿ ಸಪ್ಲಿಮೆಂಟ್ ತೆಗೆದುಕೊಳ್ಳುವುದು ಉತ್ತಮ. ಏಕೆಂದರೆ ಆ ಸಮಯದಲ್ಲಿ ಜೀರ್ಣಕ್ರಿಯೆ ಸಕ್ರಿಯವಾಗಿರುತ್ತದೆ ಜೊತೆಗೆ ಹೀರಿಕೊಳ್ಳುವಿಕೆ ಸರಿಯಾಗಿ ಆಗುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಇದನ್ನು ತೆಗೆದುಕೊಳ್ಳುವುದರಿಂದ ಕೆಲವರಿಗೆ ಅಸ್ವಸ್ಥತೆ ಉಂಟಾಗಬಹುದು. ಹಾಗಾಗಿ ಸ್ವಲ್ಪ ಜಾಗೃತೆ ವಹಿಸಿ. ಇದರ ಜೊತೆಗೆ 15- 20 ನಿಮಿಷಗಳ ಕಾಲ ಬಿಸಿಲಿನಲ್ಲಿ ಕುಳಿತುಕೊಳ್ಳುವುದು ಕೂಡ ಬಹಳ ಮುಖ್ಯ. ಆದರೆ ಯಾವುದೇ ರೀತಿಯ ಪರೀಕ್ಷೆ ಮಾಡದೆ ದೀರ್ಘಕಾಲದ ವರೆಗೆ ವಿಟಮಿನ್ ಡಿ ಪೂರಕಗಳನ್ನು ತೆಗೆದುಕೊಳ್ಳಬೇಡಿ. ಅವುಗಳನ್ನು ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಮಟ್ಟ ಹೆಚ್ಚಾಗಬಹುದು, ಇದು ಮೂತ್ರಪಿಂಡ ಮತ್ತು ಹೃದಯದ ಮೇಲೆ ಪರಿಣಾಮ ಬೀರುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ದಿ ಕೇರಳ ಸ್ಟೋರಿ 2’ ಸಿನಿಮಾ ವಿವಾದ: ಕೇರಳ ಹೈಕೋರ್ಟ್ ಮಹತ್ವದ ಆದೇಶ – Kannada News | Kerala high court says it will watch The Kerala Story 2 movie before giving order

ದಿ ಕೇರಳ ಸ್ಟೋರಿ 2’ (The Kerala Story 2) ಸಿನಿಮಾದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾ ಫೆಬ್ರವರಿ 27ರ ಶುಕ್ರವಾರ ಬಿಡುಗಡೆ ಆಗಲಿದೆ. ಆದರೆ ‘ದಿ ಕೇರಳ ಸ್ಟೋರಿ 2’ ಸಿನಿಮಾಕ್ಕೆ ಹಲವೆಡೆ ತೀವ್ರ ವಿರೋಧ ವ್ಯಕ್ತವಾಗಿದೆ. ಸ್ವತಃ ಕೇರಳ ಸಿಎಂ ಪಿಣರಾಯಿ ವಿಜಯನ್, ‘ದಿ ಕೇರಳ ಸ್ಟೋರಿ 2’ ಸಿನಿಮಾವನ್ನು ಬಹಿಷ್ಕರಿಸುವಂತೆ ಆಗ್ರಹಿಸಿದ್ದಾರೆ. ಸಿನಿಮಾವು ಕೇರಳ ರಾಜ್ಯವನ್ನು ಕೆಟ್ಟ ರೀತಿಯಲ್ಲಿ ಬಿಂಬಿಸುತ್ತಿದೆ. ಧರ್ಮಗಳ ನಡುವೆ ಸಾಮರಸ್ಯ ಹಾಳು ಮಾಡುವ ಉದ್ದೇಶ ಸಿನಿಮಾಕ್ಕೆ ಇದೆ ಎಂದು ಕೆಲವು ದೂರುಗಳು ಸಹ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಮಂಗಳವಾರ ವಿಚಾರಣೆ ನಡೆಸಿದ್ದು, ಪ್ರಮುಖ ಆದೇಶವೊಂದನ್ನು ನೀಡಿದೆ.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು, ‘ಕೇರಳ ರಾಜ್ಯವು ಸಾಮರಸ್ಯದಿಂದ ಬದುಕುತ್ತಿದೆ. ಆದರೆ ನೀವು ಇಡೀ ಕೇರಳದಲ್ಲೇ ಬಲವಂತದ ಮತಾಂತರದಂಥಹ ಘಟನೆಗಳು ನಡೆಯುತ್ತಿವೆ ಎಂಬಂತೆ ಬಿಂಬಿಸಿದ್ದೀರಿ. ಇದು ತಪ್ಪು ಸಂದೇಶ ರವಾನಿಸುವುದಲ್ಲದೆ, ಜನರ ಭಾವನೆಗಳನ್ನು ಕೆರಳಿಸಬಹುದು’ ಎಂದು ಚಿತ್ರತಂಡಕ್ಕೆ ಚುರುಕು ಮುಟ್ಟಿಸಿದ್ದಾರೆ.

‘ನಾವು ಸಿನಿಮಾಗಳ ವಿಷಯಕ್ಕೆ ಅಡ್ಡಿಪಡಿಸಿಲ್ಲ, ಕಲಾತ್ಮಕ ಸ್ವಾತಂತ್ರ್ಯಕ್ಕೆ ತಾವು ಧಕ್ಕೆ ತುರುವುದಿಲ್ಲ ಎಂದು ಹೇಳಿದ ನ್ಯಾಯಾಧೀಶರು, ಆದರೆ ಇದು ‘ನೈಜ ಘಟನೆಗಳಿಂದ ಪ್ರೇರಿತ’ ಎಂದು ಹೇಳಿರುವುದು ಕೋಮು ಉದ್ವಿಗ್ನತೆಗೆ ಕಾರಣವಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ, ಅಂತಿಮ ತೀರ್ಪು ನೀಡುವ ಮೊದಲು ತಾವೇ ಸ್ವತಃ ಸಿನಿಮಾವನ್ನು ವೀಕ್ಷಿಸುವುದಾಗಿ ತಿಳಿಸಿದ ನ್ಯಾಯಾಲಯ, ಬುಧವಾರ ಮಧ್ಯಾಹ್ನ ತನಗಾಗಿ ವಿಶೇಷ ಪ್ರದರ್ಶನ ಏರ್ಪಡಿಸುವಂತೆ ಕೇಂದ್ರ ಸರ್ಕಾರ ಮತ್ತು ಚಿತ್ರತಂಡಕ್ಕೆ ಸೂಚಿಸಿದೆ.

ಇದನ್ನೂ ಓದಿ:‘ದಿ ಕೇರಳ ಸ್ಟೋರಿ 2’ ಸಿನಿಮಾ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ ಸಿಎಂ ಪಿಣರಾಯಿ ವಿಜಯನ್

ಉಲ್ಕಾ ಗುಪ್ತಾ, ಅದಿತಿ ಭಾಟಿಯಾ ಮತ್ತು ಐಶ್ವರ್ಯಾ ಓಝಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ‘ಯು/ಎ’ (U/A) ಪ್ರಮಾಣಪತ್ರ ನೀಡಿದೆ. ಕೇರಳದ ಜೊತೆಗೆ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಹಿನ್ನೆಲೆಯಲ್ಲಿ ಮತಾಂತರ ಮತ್ತು ಒತ್ತಾಯದ ವಿಷಯಗಳನ್ನು ಈ ಸಿನಿಮಾ ಒಳಗೊಂಡಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್​​ನಲ್ಲಿ ಹಿಂದೂ ಯುವತಿಗೆ ಮುಸ್ಲಿಂ ಸಮುದಾಯದ ಕೆಲವರು ಬಲವಂತದಿಂದ ಗೋಮಾಂಸ ತಿನ್ನಿಸುತ್ತಿರುವ ದೃಶ್ಯ ಇದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಚಿತ್ರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಧಾರ್ಮಿಕ ಸಾಮರಸ್ಯಕ್ಕೆ ಹೆಸರಾದ ಕೇರಳವನ್ನು ಭಯೋತ್ಪಾದನೆಯ ಕೇಂದ್ರವೆಂದು ಬಿಂಬಿಸುವ ಪ್ರಯತ್ನಗಳನ್ನು ನಾವು ಒಕ್ಕೊರಲಿನಿಂದ ವಿರೋಧಿಸಬೇಕು. ಸುಳ್ಳು ಪ್ರಚಾರದ ಮೂಲಕ ನಮ್ಮ ಜಾತ್ಯತೀತ ಅಡಿಪಾಯವನ್ನು ಹಾಳುಮಾಡಲು ಬಿಡುವುದಿಲ್ಲ’ ಎಂದು ಅವರು ಹೇಳಿಕೆ ನೀಡಿದ್ದಾರೆ. ಹೈಕೋರ್ಟ್ ನಾಳೆ (ಫೆಬ್ರವರಿ 25) ಸಿನಿಮಾ ವೀಕ್ಷಿಸಿದ ಬಳಿಕ ನೀಡುವ ತೀರ್ಪಿನ ಮೇಲೆ ಚಿತ್ರದ ಭವಿಷ್ಯ ಅಡಗಿದೆ. ಶುಕ್ರವಾರ ಸಿನಿಮಾ ತೆರೆಕಾಣಲಿದೆಯೇ ಅಥವಾ ಕಾನೂನು ಅಡೆತಡೆ ಎದುರಾಗಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: 2 ಹಂತಗಳಲ್ಲಿ ಐಪಿಎಲ್ ವೇಳಾಪಟ್ಟಿ ಪ್ರಕಟಿಸಲು ಬಿಸಿಸಿಐ ಚಿಂತನೆ – Kannada News | IPL Schedule Split: Elections Force Two Phase Release; BCCI Navigates Challenges

ಆದಾಗ್ಯೂ, ಈ ಬಾರಿ ಬಿಸಿಸಿಐ ಮುಂದೆ ಕೆಲವು ಸವಾಲುಗಳಿವೆ. ಸಾಮಾನ್ಯವಾಗಿ, ಕೋಲ್ಕತ್ತಾದಲ್ಲಿ ಸಮಸ್ಯೆಗಳಿದ್ದರೆ, ಅಸ್ಸಾಂನ ಗುವಾಹಟಿ ಕ್ರೀಡಾಂಗಣವನ್ನು ಪರ್ಯಾಯವಾಗಿ ಬಳಸಲಾಗುತ್ತದೆ. ಆದರೆ ಈ ಬಾರಿ, ಅಸ್ಸಾಂನಲ್ಲಿಯೂ ಚುನಾವಣೆಗಳು ಇರುವುದರಿಂದ ಅದು ಸಾಧ್ಯವಾಗದಿರಬಹುದು.

Source link

ಡಿಸೆಂಬರ್ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 8.1 ಹಿಗ್ಗಿರುವ ಸಾಧ್ಯತೆ: ಎಸ್​ಬಿಐ ವರದಿಯಲ್ಲಿ ಅಂದಾಜು – Kannada News | India’s GDP might have grown over 8pc in 3rd Quarter, says SBI report

ನವದೆಹಲಿ, ಫೆಬ್ರುವರಿ 24: ಭಾರತದ ಆರ್ಥಿಕತೆ (Indian Economy) ಈ ವರ್ಷ ಉತ್ತಮ ವೇಗದಲ್ಲೇ ಸಾಗುತ್ತಿರುವಂತಿದೆ. ಈ ಹಣಕಾಸು ವರ್ಷದ ಮೊದಲೆರಡು ಕ್ವಾರ್ಟರ್​ಗಳಲ್ಲಿ ಸರಾಸರಿಯಾಗಿ ಶೇ. 8ರಷ್ಟು ಬೆಳವಣಿಗೆ ದಾಖಲಿಸಿದ್ದ ಜಿಡಿಪಿ, ಮೂರನೇ ಕ್ವಾರ್ಟರ್​ನಲ್ಲೂ ಉತ್ತಮ ಬೆಳವಣಿಗೆ ಕಾಣುವ ನಿರೀಕ್ಷೆ ಇದೆ. ಎಸ್​ಬಿಐ ರಿಸರ್ಚ್ ವರದಿ ಪ್ರಕಾರ ಡಿಸೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 8.1ರಷ್ಟು ಹಿಗ್ಗಿರಬಹುದು.

ಅಮೆರಿಕದ ಟ್ಯಾರಿಫ್ ಸೇರಿದಂತೆ ಜಾಗತಿಕವಾಗಿ ಹಲವು ಅಡೆತಡೆಗಳು ಇದ್ದಾಗ್ಯೂ ಭಾರತದ ಆರ್ಥಿಕತೆ ಉತ್ತಮ ಕ್ಷಮತೆ ತೋರಿದೆ. ಪ್ರಬಲ ಆಂತರಿಕ ಬೇಡಿಕೆ ಹಾಗೂ ವಿವಿಧ ಸೆಕ್ಟರ್​ಗಳಲ್ಲಿ ಸ್ಥಿರತೆ ಇರುವುದು ಆರ್ಥಿಕತೆ ಉತ್ತಮ ಗತಿಯಲ್ಲಿ ಬೆಳವಣಿಗೆ ದಾಖಲಿಸಲು ಸಾಧ್ಯವಾಗಿದೆ ಎನ್ನುವುದು ಎಸ್​ಬಿಐನ ಈ ಹೊಸ ವರದಿಯ ಅನಿಸಿಕೆ.

ಇದನ್ನೂ ಓದಿ: ಭಾರತ್ ಟ್ಯಾಕ್ಸಿಗೆ 500 ರೂ ನೀಡಿದರೆ ನೀವೇ ಡ್ರೈವರ್, ನೀವೇ ಮಾಲೀಕರು; ಈ ಕಂಪನಿಯ ಬ್ಯುಸಿನೆಸ್ ಮಾಡಲ್ ಹೇಗೆ?

ವರದಿ ಪ್ರಕಾರ, ಡಿಸೆಂಬರ್ ಕ್ವಾರ್ಟರ್​ನಲ್ಲಿ ಗ್ರಾಮೀಣ ಭಾಗದ ಅನುಭೋಗ ಉತ್ತಮವಾಗಿದೆ. ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳು ಉತ್ತಮವಾಗಿವೆ. ನಗರ ಭಾಗದಲ್ಲಿಯ ಅನುಭೋಗವೂ ಸ್ಥಿರವಾಗಿ ಹೆಚ್ಚುತ್ತಿದೆ. ಸರ್ಕಾರದ ಉತ್ತೇಜನಕಾರಿ ಕ್ರಮಗಳು, ಹಬ್ಬದ ಸೀಸನ್​ನಲ್ಲಿ ಜನರ ವೆಚ್ಚ ಇತ್ಯಾದಿ ಕಾರಣದಿಂದ ಅನುಭೋಗ ಹೆಚ್ಚಿದೆ. ಇದು ಜಿಡಿಪಿ ಹಿಗ್ಗಲು ಕಾರಣವಾಗಬಹುದು.

ಇಡೀ ಹಣಕಾಸು ವರ್ಷಕ್ಕೆ ಜಿಡಿಪಿ ದರ ಎಷ್ಟಿರಬಹುದು?

ಪ್ರಸಕ್ತ ಹಣಕಾಸು ವರ್ಷದಲ್ಲಿ (2025-26) ಆರ್ಥಿಕತೆ ಎಷ್ಟು ಬೆಳೆಯಬಹುದು ಎನ್ನುವ ಮುಂಗಡ ಅಂದಾಜಿನ ವರದಿ ಫೆಬ್ರುವರಿ 27ರಂದು ಬಿಡುಗಡೆಯಾಗಲಿದೆ. ಇದು ಎರಡನೇ ಅಡ್ವಾನ್ಸ್ ಎಸ್ಟಿಮೇಟ್ ಆಗಿರುತ್ತದೆ. ಈ ಹಿಂದೆ ಬಿಡುಗಡೆಯಾದ ಮೊದಲ ಅಡ್ವಾನ್ಸ್ ಎಸ್ಟಿಮೇಟ್ ಅಥವಾ ಮುಂಗಡ ಅಂದಾಜಿನ ಪ್ರಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7.4ರಷ್ಟು ಹೆಚ್ಚಬಹುದು ಎಂದಿತ್ತು. ಆದರೆ, ಮೊದಲ ಮೂರು ಕ್ವಾರ್ಟರ್​ಗಳಲ್ಲಿ ಆರ್ಥಿಕತೆ ಉತ್ತಮ ಬೆಳವಣಿಗೆ ಸಾಧಿಸಿರುವ ಕಾರಣ, ಇಡೀ ವರ್ಷದ ಬೆಳವಣಿಗೆ ಶೇ. 7.5 ಅನ್ನು ದಾಟುವ ಸಾಧ್ಯತೆ ಇಲ್ಲದಿಲ್ಲ. ಎರಡನೇ ಅಡ್ವಾನ್ಸ್ ಎಸ್ಟಿಮೇಟ್​ನಲ್ಲಿ ಹೆಚ್ಚುವರಿ ದತ್ತಾಂಶ, ಅಂದಾಜು ಪರಿಷ್ಕರಣೆಗಳನ್ನು ಒಳಗೊಳ್ಳಲಾಗುತ್ತದೆ.

ಇದನ್ನೂ ಓದಿ: ನಿಷ್ಕ್ರಿಯ ಇಪಿಎಫ್ ಅಕೌಂಟ್​ಗಳಲ್ಲಿರುವ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ?

ಮತ್ತೊಂದು ಕುತೂಹಲದ ಸಂಗತಿ ಎಂದರೆ ಭಾರತವು ಜಿಡಿಪಿಯ ಆಧಾರ ವರ್ಷವನ್ನು 2011-12ರಿಂದ 2022-23ಕ್ಕೆ ಬದಲಾಯಿಸಿದೆ. ಜಿಡಿಪಿ ಲೆಕ್ಕಾಚಾರದ ಕೆಲ ವಿಧಾನಗಳನ್ನೂ ಬದಲಾಯಿಸಿದೆ. ಇದು, ಎರಡನೇ ಅಡ್ವಾನ್ಸ್ ಎಸ್ಟಿಮೇಟ್​ನಲ್ಲಿ ಪ್ರತಿಫಲಿತವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಮನೆಯ ಶಾಂತಿ ನೆಮ್ಮದಿ ಸರ್ವನಾಶವಾಗಲು ಇವೇ ಮುಖ್ಯ ಕಾರಣಗಳು – Kannada News | Chanakya Niti: According to Chanakya, these factors are the reason for the destruction of the house

ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ವಿಷಯ ಮಾತ್ರವಲ್ಲ ಜೀವನ, ಕುಟುಂಬ, ಹಣ ಮತ್ತು ಸಮಾಜಕ್ಕೆ ಸಂಬಂಧಿಸಿದ ಅನೇಕ ಆಳವಾದ ವಿಷಯಗಳನ್ನು ವಿವರಿಸಿದ್ದಾರೆ. ಅದೇ ರೀತಿ ಹಲವು ಸಂಗತಿಗಳ ಬಗ್ಗೆ ಎಚ್ಚರಿಕೆಯನ್ನು ಸಹ ನೀಡಿದ್ದಾರೆ, ಅದರಲ್ಲಿ ಮುಖ್ಯವಾಗಿ ಕುಟುಂಬ ಸದಸ್ಯರ ಕೆಲವೊಂದು ವರ್ತನೆಯಿಂದ ಮನೆಯೇ ವಿನಾಶದತ್ತ ತಲುಪುವ ಸಾಧ್ಯತೆ ಇದೆ.  ಆ ವರ್ತನೆಗಳನ್ನು ಸರಿಪಡಿಸುವ ಮೂಲಕ ನೀವು ನಿಮ್ಮ ಕುಟುಂಬವನ್ನು ಆರ್ಥಿಕ ಸಮಸ್ಯೆಗಳಿಂದ ಮಾತ್ರವಲ್ಲದೆ ಮಾನಸಿಕ ಮತ್ತು ಸಾಮಾಜಿಕ ಹಾನಿಯಿಂದಲೂ ರಕ್ಷಿಸಬಹುದು ಎಂದು ಹೇಳಿದ್ದಾರೆ. ಹಾಗಿದ್ದರೆ ಯಾವ ಅಂಶಗಳು ಒಂದು ಮನೆಯನ್ನು ವಿನಾಶದತ್ತ ಕೊಂಡೊಯ್ಯುತ್ತದೆ ಎಂಬುದನ್ನು ನೋಡೋಣ ಬನ್ನಿ.  ಇಂದು, ಈ ಲೇಖನದಲ್ಲಿ, ನಾವು ಈ ಚಿಹ್ನೆಗಳ ಬಗ್ಗೆ ವಿವರವಾಗಿ ನಿಮಗೆ ಹೇಳಲಿದ್ದೇವೆ. ಆದ್ದರಿಂದ ಅವುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ಮನೆಯ ನೆಮ್ಮದಿ ಹಾಳಾಗಲು ಕಾರಣ ಈ ಅಂಶ:

ಮನೆಯಲ್ಲಿ ನಿರಂತರ ಜಗಳಗಳು ಮತ್ತು ಜಗಳಗಳು: ಆಚಾರ್ಯ ಚಾಣಕ್ಯರ ಪ್ರಕಾರ, ಒಂದು ಮನೆಯಲ್ಲಿ ಪ್ರತಿದಿನ ಜಗಳಗಳು ಮತ್ತು ವಿವಾದಗಳು ನಡೆದರೆ, ಆ ಮನೆಯಲ್ಲಿ ಸಂತೋಷ ಮತ್ತು ಶಾಂತಿ ಶೀಘ್ರದಲ್ಲೇ ಮಾಯವಾಗುತ್ತದೆ.  ಇದು ಕುಟುಂಬದ ಒಗ್ಗಟ್ಟಿನ ಅಡಿಪಾಯವನ್ನೇ ದುರ್ಬಲಗೊಳಿಸುತ್ತದೆ. ಅಂತಹ ವಾತಾವರಣವು ಮಾನಸಿಕ ಒತ್ತಡವನ್ನು ಹೆಚ್ಚಿಸುವುದಲ್ಲದೆ ಪ್ರಗತಿಗೂ ಅಡ್ಡಿಯಾಗುತ್ತದೆ.

ಹಿರಿಯರಿಗೆ ಅಗೌರವ ತೋರುವುದು ಮತ್ತು ಶಿಷ್ಟಾಚಾರದ ಕೊರತೆ: ಚಾಣಕ್ಯ ನೀತಿಯ ಪ್ರಕಾರ, ಹಿರಿಯರನ್ನು ಗೌರವಿಸದ ಕುಟುಂಬದಲ್ಲಿ ಸಕಾರಾತ್ಮಕ ಶಕ್ತಿ ಎಂದಿಗೂ ಉಳಿಯುವುದಿಲ್ಲ. ಹಿರಿಯರ ಅನುಭವ ಮತ್ತು ಆಶೀರ್ವಾದಗಳು ಮನೆಯ ದೊಡ್ಡ ಶಕ್ತಿ, ಹೀಗಿರುವಾಗ ಹಿರಿಯರ ಮಾತುಗಳನ್ನು, ಸಲಹೆಯನ್ನು ಕುಟುಂಬ ಸದಸ್ಯರು ನಿರ್ಲಕ್ಷಿಸಲು ಪ್ರಾರಂಭಿಸಿದಾಗ, ಸಮಸ್ಯೆಗಳು ಉದ್ಭವಿಸುತ್ತವೆ, ಇದರಿಂದ ಮನೆ ವಿನಾಶದತ್ತ ತಲುಪುತ್ತದೆ ಎಂದಿದ್ದಾರೆ ಚಾಣಕ್ಯ.

ಹಣದ ದುರುಪಯೋಗ ಮತ್ತು ವ್ಯರ್ಥ ಖರ್ಚು: ಆಚಾರ್ಯ ಚಾಣಕ್ಯರ ಪ್ರಕಾರ, ಒಂದು ಮನೆಯ ವಿನಾಶದ ದೊಡ್ಡ ಲಕ್ಷಣವೆಂದರೆ ವಿಪರೀತ ಹಣ ಖರ್ಚು. ನೀವು ಗಳಿಸುವುದಕ್ಕಿಂತ ಹೆಚ್ಚು ಖರ್ಚು ಮಾಡಲು ಪ್ರಾರಂಭಿಸಿದಾಗ ಮತ್ತು ನಿಮ್ಮ ಉಳಿತಾಯವೂ ಖಾಲಿಯಾದಾಗ, ನಿಮ್ಮ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಉದ್ಭವಿಸುವುದು ಖಚಿತ. ಈ ಕಾರಣದಿಂದ ಮನೆಯವರು ಬೀದಿಗೆ ಬರಬೇಕಾಗುತ್ತದೆ. ಆದ್ದರಿಂದ ಹಣವನ್ನು ಸರಿಯಾಗಿ ನಿರ್ವಹಿಸಬೇಕು, ಭವಿಷ್ಯಕ್ಕಾಗಿ ಉಳಿತಾಯವನ್ನು ಮಾಡಬೇಕು ಎಂದು ಚಾಣಕ್ಯರು ಹೇಳಿರುವುದು.

ಇದನ್ನೂ ಓದಿ: ಪ್ರತಿಯೊಬ್ಬರೂ ವಿಷಯಗಳ ಬಗ್ಗೆ ಆದಷ್ಟು ಜಾಗರೂಕರಾಗಿರಬೇಕು

ಕುಟುಂಬ ಸದಸ್ಯರಲ್ಲಿ ಜವಾಬ್ದಾರಿಯ ಕೊರತೆ: ಆಚಾರ್ಯ ಚಾಣಕ್ಯರ ಪ್ರಕಾರ, ಕುಟುಂಬ ಸದಸ್ಯರು ತಮ್ಮ ಜವಾಬ್ದಾರಿಗಳಿಂದ ದೂರ ಸರಿದಾಗ ಅಥವಾ ಇತರರ ಮೇಲೆ ಅವಲಂಬಿತರಾಗಲು ಪ್ರಾರಂಭಿಸಿದರೆ, ಸಮಸ್ಯೆಗಳು ಒಂದೊಂದಾಗಿ ಉದ್ಭವಿಸಲು ಪ್ರಾರಂಭಿಸುತ್ತದೆ. ಹೌದು ಕುಟುಂಬದ ಪ್ರತಿಯೊಬ್ಬ ಸದಸ್ಯರು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ಪೂರೈಸದಿದ್ದರೆ, ಸಮಸ್ಯೆಗಳೂ ಸಹ ಹೆಚ್ಚಾಗುತ್ತದೆ. ಆದ್ದರಿಂದ ಮನೆಯ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

 ಅಸೂಯೆ ಭಾವನೆ: ಚಾಣಕ್ಯರ ಪ್ರಕಾರ, ಇತರರ ಯಶಸ್ಸಿನ ಬಗ್ಗೆ ನಿರಾಶೆ, ಅಸೂಯೆ ಭಾವನೆ ಮನೆಯೊಳಗಿನ ಪ್ರಗತಿಗೆ ಅಡ್ಡಿಯಾಗುತ್ತದೆ. ಸಕಾರಾತ್ಮಕ ಚಿಂತನೆ ಮತ್ತು ಕಠಿಣ ಪರಿಶ್ರಮ ಮಾತ್ರ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ. ಯಾವಾಗಲೂ ನಕಾರಾತ್ಮಕವಾಗಿ ಯೋಚನೆ ಮಾಡುತ್ತಿದ್ದರೆ, ಇತತರ ಬಗ್ಗೆ ಅಸೂಯೆ ಪಡುತ್ತಾ ಕುಳಿತರೆ ಮನೆಯ ಶಾಂತಿ ತಾನಾಗಿಯೇ ಹಾಳಾಗುತ್ತದೆ. ಆದ್ದರಿಂದ ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸಲು ಕಲಿಯಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಶ್ಮಿಕಾ, ವಿಜಯ್ ಮದುವೆಗೆ 100 ಮಂದಿಗೆ ಆಹ್ವಾನ: ಅತಿಥಿಗಳಿಗೆ ಜಪಾನೀಸ್ ಖಾದ್ಯ – Kannada News | Rashmika Mandanna Vijay Deverakonda wedding guests to have Japanese food

ಅಭಿಮಾನಿಗಳ ಕಾಯುವಿಕೆ ಕೊನೆಗೂ ಅಂತ್ಯಗೊಂಡಿದೆ. ಹಲವು ವರ್ಷಗಳಿಂದ ತಮ್ಮ ಪ್ರೇಮಕಥೆಯನ್ನು ಗುಟ್ಟಾಗಿ ಇಟ್ಟಿದ್ದ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಇತ್ತೀಚೆಗೆ ಮದುವೆಯನ್ನು ಅಧಿಕೃತವಾಗಿ ಘೋಷಿಸಿದರು. ರಶ್ಮಿಕಾ ಮತ್ತು ವಿಜಯ್ (Vijay Deverakonda) ಅವರ ವಿವಾಹವು ರಾಜಸ್ಥಾನದ ಉದಯಪುರದ ಖಾಸಗಿ ಹೋಟೆಲ್‌ನಲ್ಲಿ ಫೆಬ್ರವರಿ 26ರಂದು ಅದ್ದೂರಿಯಾಗಿ ನಡೆಯಲಿದೆ. ಅವರ ವಿವಾಹ ಸ್ಥಳದಲ್ಲಿ ಮೂರು ಹಂತದ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಪೊಲೀಸರು, ಹೈದರಾಬಾದ್‌ನ ವಿಶೇಷ ತಂಡ ಹಾಗೂ ಅಂತಾರಾಷ್ಟ್ರೀಯ ಭದ್ರತೆಯ ನಡುವೆ ರಶ್ಮಿಕಾ, ವಿಜಯ್ ಮದುವೆ ಸಮಾರಂಭ ನಡೆಯಲಿದೆ. ಮದುವೆಗೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ವಿಷಯವನ್ನೂ ಕೂಡ ರಹಸ್ಯವಾಗಿಡಲು ಈ ಜೋಡಿ ನಿರ್ಧರಿಸಿದೆ. ಅರಾವಳಿ ಬೆಟ್ಟಗಳ ನಡುವೆ ಇರುವ ಖಾಸಗಿ ಹೋಟೆಲ್​​ನಲ್ಲಿ ಮದುವೆ ನಡೆಯಲಿದೆ. ಇದನ್ನು ವಿರೋಶ್ ವಿವಾಹ ಎಂದು ಕರೆಯಲಾಗುತ್ತಿದೆ.

ವಿವಾಹ ಆಚರಣೆಗಳು ಮಂಗಳವಾರದಿಂದಲೇ (ಫೆಬ್ರವರಿ 24) ಪ್ರಾರಂಭವಾಗಿವೆ. ಮೆಹಂದಿ ಸಮಾರಂಭ ಮಂಗಳವಾರ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಸಂಗೀತ್ ಸೆರೆಮನಿ ಫೆಬ್ರವರಿ 25ರಂದು ನಡೆಯಲಿವೆ. ಈ ವಿವಾಹ ಪೂರ್ವ ಕಾರ್ಯಕ್ರಮಗಳಲ್ಲಿ ಕುಟುಂಬ ಸದಸ್ಯರು ಮತ್ತು ಕೆಲವು ಆಪ್ತರು ಭಾಗವಹಿಸಲಿದ್ದಾರೆ. ಅಲ್ಲದೇ, ಅವರ ಮದುವೆಗೆ ಬರುವ ಅತಿಥಿಗಳಿಗಾಗಿ ಜಪಾನೀಸ್ ಖಾದ್ಯಗಳನ್ನು ತಯಾರಿಸಲಾಗುತ್ತದೆ.

ಇದನ್ನೂ ಓದಿ: ವಿಜಯ್ ಪಾಲಕರು ರಶ್ಮಿಕಾ ಮಂದಣ್ಣಗೆ ಹಾಕಿದ ಷರತ್ತು ಏನು?

ವರದಿಗಳ ಪ್ರಕಾರ, ಸಂಪೂರ್ಣ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ವಿವಾಹದ ಸಮಯದಲ್ಲಿ ಕಟ್ಟುನಿಟ್ಟಾಗಿ ಫೋನ್ ಬಳಕೆ ನಿಷೇಧಿಸಲಾಗಿದೆ. ಮದುವೆಗೆ ಕೇವಲ 100 ಅತಿಥಿಗಳನ್ನು ಮಾತ್ರ ಆಹ್ವಾನಿಸಲಾಗಿದೆ. ಇನ್ನುಳಿದ ಸ್ನೇಹಿತರಿಗಾಗಿ ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಟಾಕ್ಸಿಕ್’ ಚಿತ್ರದ ಇಂಗ್ಲಿಷ್ ಆವೃತ್ತಿ ರಿಲೀಸ್ ಬಗ್ಗೆ ಯಶ್ ಅಭಿಮಾನಿಗಳಲ್ಲಿ ಗೊಂದಲ – Kannada News | Yash fans express doubts about Toxic movie English version release

‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ, ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ಸದ್ಯ ಸ್ಯಾಂಡಲ್‌ವುಡ್ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಕುತೂಹಲ ಮೂಡಿಸಿದೆ. ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡಿದ ಈ ಆ್ಯಕ್ಷನ್ ಅಬ್ಬರದ ಸಿನಿಮಾ ಯಶ್ (Yash) ವೃತ್ತಿಜೀವನದ ಅತಿ ದೊಡ್ಡ ಬಜೆಟ್‌ನ ಚಿತ್ರ ಆಗಿದೆ. ಇತ್ತೀಚೆಗೆ ಬಿಡುಗಡೆಯಾದ ಟೀಸರ್ ನೋಡಿದರೆ ಸಿನಿಮಾದಲ್ಲಿ ರಕ್ತಸಿಕ್ತ ದೃಶ್ಯಗಳು ಹೇರಳವಾಗಿವೆ ಎಂಬ ಸುಳಿವು ಸಿಕ್ಕಿದೆ. ಅದರಿಂದ ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಆದರೆ, ಸಿನಿಮಾದ ಬಿಡುಗಡೆ ವಿಚಾರದಲ್ಲಿ ಈಗ ಹೊಸದೊಂದು ಚರ್ಚೆ ಶುರುವಾಗಿದೆ. ಇಂಗ್ಲಿಷ್ ವರ್ಷನ್ ಬಿಡುಗಡೆ ಆಗುತ್ತಾ ಇಲ್ಲವಾ ಎಂಬ ಅನುಮಾನ ಕಾಡಿದೆ.

‘ಟಾಕ್ಸಿಕ್’ ಚಿತ್ರವನ್ನು ಕನ್ನಡದ ಜೊತೆಗೆ ಇಂಗ್ಲಿಷ್ ಭಾಷೆಯಲ್ಲೂ ಏಕಕಾಲಕ್ಕೆ ಚಿತ್ರೀಕರಿಸಲಾಗಿತ್ತು. ಮೊದಮೊದಲು ಚಿತ್ರತಂಡ ಇಂಗ್ಲಿಷ್ ಆವೃತ್ತಿಯ ಬಗ್ಗೆ ಸಾಕಷ್ಟು ಸುಳಿವುಗಳನ್ನು ನೀಡಿತ್ತಾದರೂ, ಇತ್ತೀಚಿನ ಬೆಳವಣಿಗೆಗಳು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿವೆ. ಇತ್ತೀಚೆಗೆ ಬಿಡುಗಡೆಯಾದ ನಟ ಅಕ್ಷಯ್ ಓಬೆರಾಯ್, ಬಾಲಾಜಿ ಮನೋಹರ್ ಅವರ ಕ್ಯಾರೆಕ್ಟರ್ ಪೋಸ್ಟರ್‌ನಲ್ಲಿ ಇಂಗ್ಲಿಷ್ ಆವೃತ್ತಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಅದರಿಂದ ಈ ಅನುಮಾನ ಮೂಡುವಂತಾಗಿದೆ.

ಸಿನಿಮಾವನ್ನು ಇಂಗ್ಲಿಷ್‌ನಲ್ಲಿ ಚಿತ್ರೀಕರಿಸಿದ ಮೇಲೆ, ಬಿಡುಗಡೆಯ ಸಮಯದಲ್ಲಿ ಅದರ ಬಗ್ಗೆ ಮೌನ ವಹಿಸಿರುವುದು ಏಕೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ನಿರ್ಮಾಣ ಸಂಸ್ಥೆಯನ್ನು ಪ್ರಶ್ನಿಸುತ್ತಿದ್ದಾರೆ. ಇಂಗ್ಲಿಷ್ ಆವೃತ್ತಿಯ ಪ್ರತ್ಯೇಕ ಟೀಸರ್ ಆಗಲಿ ಅಥವಾ ಬಿಡುಗಡೆಯ ದಿನಾಂಕವಾಗಲಿ ಪ್ರಕಟವಾಗದಿರುವುದು ಕುತೂಹಲದ ಜೊತೆಗೆ ಬೇಸರವನ್ನೂ ಮೂಡಿಸಿದೆ.

ಇತ್ತೀಚೆಗೆ ‘ಟಾಕ್ಸಿಕ್’ ಸಿನಿಮಾದ ಟೀಸರ್ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಿದೆ. ಆದರೆ ಇಂಗ್ಲಿಷ್ ವರ್ಷನ್ ಟೀಸರ್ ರಿಲೀಸ್ ಆಗಿಲ್ಲ. ಅದಕ್ಕೆ ಕಾರಣ ಏನಿರಬಹುದು ಎಂದು ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದಾರೆ. ಚಿತ್ರದ ಮೇಕಿಂಗ್ ಗುಣಮಟ್ಟ ಹಾಲಿವುಡ್ ಶೈಲಿಯಲ್ಲಿ ಇದೆ. ಹಾಗಾಗಿ ಇಂಗ್ಲಿಷ್ ವರ್ಷನ್ ಬಗ್ಗೆ ಜನರಿಗೆ ಕುತೂಹಲ ಹೆಚ್ಚಿದೆ.

ಇದನ್ನೂ ಓದಿ:  ಧುರಂಧರ್ 2 Vs ಟಾಕ್ಸಿಕ್: 10 ಕೋಟಿ ಮಂದಿ ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ

ಈ ಸಿನಿಮಾದ ಹಾಡುಗಳು ‘ಜೀ ಮ್ಯೂಸಿಕ್’ ಮೂಲಕ ಬಿಡುಗಡೆ ಆಗಲಿವೆ. ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ ಮುಂತಾದ ಸ್ಟಾರ್ ಕಲಾವಿದರ ದಂಡೇ ಈ ಸಿನಿಮಾದಲ್ಲಿ ಇದೆ. ತೆಲುಗಿನಲ್ಲಿ ಖ್ಯಾತ ನಿರ್ಮಾಪಕ ದಿಲ್ ರಾಜು ಈ ಚಿತ್ರವನ್ನು ವಿತರಿಸುತ್ತಿದ್ದಾರೆ. ಚಿತ್ರತಂಡವು ಇಂಗ್ಲಿಷ್ ಆವೃತ್ತಿಯ ಬಗ್ಗೆ ಶೀಘ್ರದಲ್ಲೇ ಸ್ಪಷ್ಟನೆ ನೀಡಲಿದೆ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನನ್ನ ಲೈಫ್​​​​ ಹೇಗಾಗಿದೆ ಅಂದ್ರೆ: ಒಂದು ಕಡೆ ಅಪ್ಪ ಇಲ್ಲ, ಇನ್ನೊಂದು ಕಡೆ ಅಮ್ಮನಿಗೆ ಅನಾರೋಗ್ಯ, ಕೈಯಲ್ಲಿ ಕೆಲಸ ಇಲ್ಲ – Kannada News | Unemployed Youth in Dharwad Demand Action on Vacant Posts, Criticise Government

ಧಾರವಾಡ, ಫೆ.24: ಸರ್ಕಾರಿ ಹುದ್ದೆಗಳ ಭರ್ತಿಗಾಗಿ ನಿರುದ್ಯೋಗಿ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಶ್ರೀನಗರ ವೃತ್ತದಿಂದ ಜುಬಿಲಿ ವೃತ್ತದವರೆಗೆ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರತಿಭಟನೆಗೆ ಸಾರ್ವಜನಿಕರಿಂದ ವ್ಯಾಪಕ ಬೆಂಬಲ ದೊರೆತಿದ್ದು, ವಿದ್ಯಾರ್ಥಿಗಳ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಯೊಬ್ಬರು ತಮ್ಮ ನೋವನ್ನು ಹಂಚಿಕೊಳ್ಳುತ್ತಾ, “ನಾನು ಕಳೆದ ಮೂರು ವರ್ಷಗಳಿಂದ ಓದಲು ಬಂದಿದ್ದೇನೆ. ನನ್ನ ತಂದೆ ಇಲ್ಲ. ನನ್ನ ತಾಯಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬದ ದೊಡ್ಡ ಮಗನಾಗಿ ನಾನು ಸಾಲ ಮಾಡಿ ಓದುತ್ತಿದ್ದೇನೆ. ನಾವು ಬೆಳಿಗ್ಗೆ ಟಿಫಿನ್ ಮಾಡಿದರೆ ರಾತ್ರಿ ಊಟ ಮಾಡಲು ಕಷ್ಟಪಡುವ ಪರಿಸ್ಥಿತಿ ಇದೆ” ಎಂದು ಕಣ್ಣೀರು ಹಾಕಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಪ್ರಸ್ತಾಪಿಸಿದ ವಿದ್ಯಾರ್ಥಿ, “ಸಿದ್ದರಾಮಯ್ಯನವರು ತಮ್ಮ ಮೊಮ್ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ರಾಜಕೀಯ ಕಾರ್ಯಕ್ರಮಗಳಿಗೆ ಕರೆದೊಯ್ಯುತ್ತಾರೆ. ನಮ್ಮಂತಹ ಬಡ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವವರು ಯಾರು?” ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ನಿರುದ್ಯೋಗಿಗಳಿಗೆ ನೀಡಿರುವ ನುಡಿದಂತೆ ನಡೆ ಭರವಸೆಯ 3,000 ರೂಪಾಯಿ ಆರ್ಥಿಕ ನೆರವು ಬೇಕಾಗಿಲ್ಲ, ಬದಲಾಗಿ ಉದ್ಯೋಗ ಬೇಕು ಎಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಅಹಿಂದ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಹೆಸರಿನಲ್ಲಿ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ ವಿದ್ಯಾರ್ಥಿಗಳು, ಈ ವರ್ಗದ ಜನರಿಗೇ ಸರ್ಕಾರಿ ಉದ್ಯೋಗಗಳ ಅತಿ ಹೆಚ್ಚು ಅಗತ್ಯವಿದೆ. ಅವರಿಗೆ ಉದ್ಯೋಗ ನೀಡಲು ಸರ್ಕಾರ ಏಕೆ ವಿಫಲವಾಗಿದೆ ಎಂದು ಕೇಳಿದ್ದಾರೆ. 2019ರಲ್ಲಿ ನಡೆದ ಕೆಪಿಎಸ್‌ಸಿ ಎಸ್‌ಡಿಎ ಮತ್ತು ಎಫ್‌ಡಿಎ ಪರೀಕ್ಷೆಗಳ ನೇಮಕಾತಿಯ ಬಗ್ಗೆಯೂ ಇನ್ನೂ ಸ್ಪಷ್ಟತೆ ಇಲ್ಲ ಎಂದು ದೂರಿದ್ದಾರೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನಗಳಿದ್ದರೂ, ಸರ್ಕಾರ ನೇಮಕಾತಿ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿದೆ. ಸುಮಾರು 2,20,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ ಸರ್ಕಾರ ಜನತೆಗೆ ದ್ರೋಹ ಮಾಡುತ್ತಿದೆ. ಇದು ಕಾಂಗ್ರೆಸ್ ಸರ್ಕಾರಕ್ಕೆ ಭ್ರಷ್ಟತೆಯ ಹೆಸರನ್ನು ತರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಮ್ಮ ದುಡ್ಡಲ್ಲಿ ನಿಮ್ಮ ಬೇಳೆ ಬೇಯಿಸಿಕೊಳ್ಳಬೇಡಿ, ಮಕ್ಕಳ ಬಾಳಲ್ಲಿ ಆಟವಾಡಬೇಡಿ” ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡ್ರಗ್ಸ್, ಅತ್ಯಾಚಾರ, ಮತಾಂತರ; ಭೋಪಾಲ್​​ನ ಅಕ್ಕ-ತಂಗಿಯರ ಲೈಂಗಿಕ ಜಾಲ ಪತ್ತೆ – Kannada News | From Slum To Villa Drugged forced to convert Bhopal Sisters Arrested for Sex Racket

ನವದೆಹಲಿ, ಫೆಬ್ರವರಿ 24: ಮಧ್ಯಪ್ರದೇಶದ ರಾಜಧಾನಿ ಭೋಪಾಲ್​ನಲ್ಲಿ ಒಂದು ಘಟನೆ ಆಘಾತಕಾರಿ ಅಲೆಗಳನ್ನು ಎಬ್ಬಿಸಿದೆ. ಭೋಪಾಲ್‌ನ (Bhopal) ಇಬ್ಬರು ಸಹೋದರಿಯರನ್ನು ಅತ್ಯಾಚಾರ, ಬಲವಂತದ ಮತಾಂತರ ಮತ್ತು ಯುವತಿಯರಿಗೆ ಉದ್ಯೋಗ ನೀಡುವ ನೆಪದಲ್ಲಿ ಲೈಂಗಿಕ ಜಾಲ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ. ಬ್ಯೂಟಿಷಿಯನ್ ಮತ್ತು ಮಹಿಳೆಯೊಬ್ಬರು ನೀಡಿದ 2 ಪ್ರತ್ಯೇಕ ದೂರುಗಳಿಂದಾಗಿ ಭೋಪಾಲ್‌ನಲ್ಲಿ ಇಬ್ಬರು ಸಹೋದರಿಯರು ಮತ್ತು ಅವರ ಗ್ಯಾಂಗ್ ನಡೆಸುತ್ತಿದ್ದ ಲೈಂಗಿಕ ಮತ್ತು ಧಾರ್ಮಿಕ ಮತಾಂತರ ಜಾಲ ಬಯಲಾಗಿದೆ.

ಛತ್ತೀಸ್‌ಗಢದ 21 ವರ್ಷದ ಮತ್ತು ಭೋಪಾಲ್‌ನ 30 ವರ್ಷದ ಮಹಿಳೆಯರ ವಿರುದ್ಧ ಉದ್ಯೋಗದ ಭರವಸೆ ನೀಡಿ, ನಂತರ ಡ್ರಗ್ಸ್ ಸೇವಿಸಿ, ಅತ್ಯಾಚಾರ ಮಾಡಿಸಿ ಮತ್ತು ಬಲವಂತವಾಗಿ ಮತಾಂತರಗೊಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಕ್ಕ-ತಂಗಿಯರಾದ ಅಫ್ರೀನ್ ಮತ್ತು ಅಮ್ರೀನ್ ಅವರನ್ನು ಬಂಧಿಸಲಾಗಿದೆ. ಆದರೆ ಇನ್ನೂ ಮೂವರು ಪರಾರಿಯಾಗಿದ್ದಾರೆ.

ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲದ ಹಿನ್ನೆಲೆಯ ಹುಡುಗಿಯರನ್ನು ಗುರಿಯಾಗಿಸಿಕೊಳ್ಳುತ್ತಿದ್ದ ಈ ಇಬ್ಬರು ಸಹೋದರಿಯರು ಉದ್ಯೋಗದ ಭರವಸೆ ನೀಡಿ ಅವರನ್ನು ನಂಬಿಸಿ, ಅವರ ವಿಶ್ವಾಸ ಗಳಿಸಿ, ನಂತರ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು. ಅಮ್ರೀನ್ ತನ್ನ ಜೊತೆ ರೂಂನಲ್ಲಿದ್ದ 21 ವರ್ಷದ ಬ್ಯೂಟಿಷಿಯನ್‌ ಅನ್ನು ನವೆಂಬರ್ 2025ರಲ್ಲಿ ತನ್ನ ಸಂಬಂಧಿಕರನ್ನು ಭೇಟಿ ಮಾಡಲು ಭೋಪಾಲ್‌ನ ಅಬ್ಬಾಸ್ ನಗರಕ್ಕೆ ಕರೆದೊಯ್ದಿದ್ದಳು. ಅಲ್ಲಿ, ಅಮ್ರೀನ್‌ಳ ಸಹೋದರ ಬಿಲಾಲ್ ಚಹಾದಲ್ಲಿ ಡ್ರಗ್ಸ್ ಬೆರೆಸಿ ಆಕೆ ಪ್ರಜ್ಞಾಹೀನಳಾದ ನಂತರ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದ.

ಅದರ ಮುಂದಿನ ತಿಂಗಳು, ಅಮ್ರೀನ್ ಆಕೆಯನ್ನು ವೈಯಕ್ತಿಕ ಕೆಲಸದ ನೆಪದಲ್ಲಿ ಅಹ್ಮದಾಬಾದ್‌ಗೆ ಕರೆದೊಯ್ದಳು. ಅಲ್ಲಿ ಯಾಸಿರ್ ಎಂಬ ವ್ಯಕ್ತಿಯ ಪರಿಚಯವಾಯಿತು. ಅವನು ಕೂಡ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಅಮ್ರೀನ್‌ಳ ಆಪ್ತ ಸಹಾಯಕ ಚಂದನ್ ಯಾದವ್ ಕೂಡ ಆಗಸ್ಟ್ 2025 ಮತ್ತು ಜನವರಿ 2026ರ ನಡುವೆ ಹಲವು ಬಾರಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ. ಈ ವಿಷಯವನ್ನು ಯಾರಿಗೂ ಹೇಳದಂತೆ ಆಕೆಗೆ ಬೆದರಿಕೆ ಹಾಕಲಾಗಿತ್ತು. ಅತ್ಯಾಚಾರ ನಡೆಸುವಾಗ ಫೋಟೋಗಳನ್ನು ತೆಗೆದುಕೊಂಡು ಬ್ಲಾಕ್​ಮೇಲ್ ಮಾಡುತ್ತಿದ್ದರು ಎಂದು ಕೂಡ ಆಕೆ ದೂರಿನಲ್ಲಿ ಆರೋಪಿಸಿದ್ದಾಳೆ.

ಇದನ್ನೂ ಓದಿ: ಡಾಕ್ಟರ್ ಆಗು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ, ತಂಗಿ ಎದುರೇ ದೇಹ ಕತ್ತರಿಸಿ ಡ್ರಮ್​​ನಲ್ಲಿಟ್ಟ

ಇದಿಷ್ಟೇ ಅಲ್ಲದೆ, ಬಲವಂತವಾಗಿ ಪಬ್​ಗೆ ಕರೆದುಕೊಂಡು ಹೋಗುತ್ತಿದ್ದ ಅವರು ಡ್ರಗ್ಸ್ ಸೇವಿಸುವಂತೆ ಒತ್ತಾಯಿಸುತ್ತಿದ್ದರು. ಅಲ್ಲಿ ಲೈಂಗಿಕ ದೌರ್ಜನ್ಯವನ್ನು ಕೂಡ ನಡೆಸುತ್ತಿದ್ದರು. ಹಾಗೇ, ಅವಳಿಗೆ ಆಕೆಯ ಧರ್ಮವನ್ನು ಬದಲಾಯಿಸುವಂತೆ ಮತ್ತು ಬುರ್ಖಾ ಧರಿಸುವಂತೆ ಒತ್ತಾಯಿಸುತ್ತಿದ್ದರು. ಕೊನೆಗೂ ಆಕೆ ಅವರಿಂದ ತಪ್ಪಿಸಿಕೊಂಡು ಜನವರಿ ತಿಂಗಳಲ್ಲಿ ಅಲ್ಲಿಂದ ಪರಾರಿಯಾದಳು. ಕೊನೆಗೆ ಫೆಬ್ರವರಿಯಲ್ಲಿ ಅವಳು ಭೋಪಾಲ್‌ಗೆ ಹಿಂತಿರುಗಿ, ಬಾಗ್ಸೆವಾನಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಳು. ಇದರಿಂದಲೇ ಆ ಸಹೋದರಿಯರ ದಂಧೆ ಬಯಲಾಯಿತು.

ಅಮ್ರೀನ್ ಮನೆಯಲ್ಲಿ ಮನೆಕೆಲಸಗಾರನಾಗಿ ಕೆಲಸ ಮಾಡುತ್ತಿದ್ದ ಮತ್ತೊಬ್ಬಳು ಮಹಿಳೆ ಕೂಡ ಈ ಆರಂಭದಲ್ಲಿ ಇದೇ ರೀತಿಯ ದೂರು ದಾಖಲಿಸಿದ್ದಳು. ಆಕೆ ಕೂಡ ಯಾಸಿರ್, ಬಿಲಾಲ್ ಮತ್ತು ಚಂದನ್ ತನಗೆ ಡ್ರಗ್ಸ್​ ಸೇವಿಸುವಂತೆ ಒತ್ತಾಯಿಸಿದ್ದಾರೆ, ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ. ಆಕೆ ಪೊಲೀಸರಿಗೆ ವೀಡಿಯೊ ಪುರಾವೆಗಳನ್ನು ಸಹ ಒದಗಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮೂವರು ಪುರುಷರು ಮತ್ತು ಸಹೋದರಿಯರ ವಿರುದ್ಧ ಅತ್ಯಾಚಾರ, ಕ್ರಿಮಿನಲ್ ಪಿತೂರಿ ಮತ್ತು ಬಲವಂತದ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಇದನ್ನೂ ಓದಿ: ಒಡಿಶಾದ ನವವಧು ಕಿಡ್ನಾಪ್​ ಪ್ರಕರಣಕ್ಕೆ ಹೊಸ ತಿರುವು; ಪ್ರಿಯಕರನ ಜೊತೆ ಸೇರಿ ಮಾಡಿದ ಪ್ಲಾನ್ ಅಂತಿಂಥದ್ದಲ್ಲ!

ಭೋಪಾಲ್‌ನ ಹೋಶಂಗಾಬಾದ್‌ನಲ್ಲಿರುವ ದುಬಾರಿ ಸಾಗರ್ ರಾಯಲ್ ವಿಲ್ಲಾಸ್ ಕಾಲೋನಿಯಲ್ಲಿರುವ ಐಷಾರಾಮಿ ಫ್ಲಾಟ್‌ನಲ್ಲಿ ಸಹೋದರಿಯರು ವಾಸಿಸುತ್ತಿದ್ದರು. ಈ ಇಬ್ಬರು ಸಹೋದರಿಯರ ಚಟುವಟಿಕೆಗಳು ಬಹಳ ಅನುಮಾನವನ್ನು ಹುಟ್ಟುಹಾಕಿದ್ದವು ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಪುರುಷರು ಮತ್ತು ಚಿಕ್ಕ ಹುಡುಗರು ಆಗಾಗ ತಡರಾತ್ರಿ ಅವರ ಫ್ಲಾಟ್‌ಗೆ ಭೇಟಿ ನೀಡುತ್ತಿದ್ದರು ಎಂದು ನೆರೆಹೊರೆಯವರು ಹೇಳಿದ್ದಾರೆ.

ಬುರ್ಖಾ ಧರಿಸಿದ ಮಹಿಳೆಯರು ಹೆಚ್ಚಾಗಿ ಫ್ಲಾಟ್‌ಗೆ ಭೇಟಿ ನೀಡುತ್ತಿರುವುದು ಕಂಡುಬಂದರೂ ಅಫ್ರೀನ್ ಮತ್ತು ಅಮ್ರೀನ್ ಮಾತ್ರ ಯಾವಾಗಲೂ ಜೀನ್ಸ್ ಧರಿಸುತ್ತಿದ್ದರು ಎಂದು ನಿವಾಸಿಗಳು ಹೇಳಿದ್ದಾರೆ. ಈ ಘಟನೆ ಬೆಳಕಿಗೆ ಬಂದ ನಂತರ ಸ್ಥಳೀಯ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ಶುರುವಾಗಿದೆ. ಭೋಪಾಲ್‌ನಲ್ಲಿ ಮಹಿಳೆಯರು ಮತ್ತು ಯುವತಿಯರಿಗಾಗಿ ಜಾಗೃತಿ ಅಭಿಯಾನಗಳನ್ನು ಸಂಘಟನೆ ಪ್ರಾರಂಭಿಸಲಿದೆ ಎಂದು ಹಿಂದೂ ಉತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ತಿವಾರಿ ಹೇಳಿದ್ದಾರೆ. ನೆರೆಹೊರೆಯ ಮಟ್ಟದಲ್ಲಿ ಮಹಿಳಾ ಬ್ರಿಗೇಡ್‌ಗಳನ್ನು ರಚಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಒಂದು ಕಾಲದಲ್ಲಿ ಅಬ್ಬಾಸ್ ನಗರದ ಸಾಧಾರಣ ಸ್ಲಮ್​ನಲ್ಲಿ ವಾಸಿಸುತ್ತಿದ್ದ ಈ ಸಹೋದರಿಯರು ಇತ್ತೀಚೆಗೆ ಭೋಪಾಲ್‌ನ ಸಾಗರ್ ರಾಯಲ್ ವಿಲ್ಲಾದಲ್ಲಿರುವ ಐಷಾರಾಮಿ ವಿಲ್ಲಾಕ್ಕೆ ಸ್ಥಳಾಂತರಗೊಂಡಿದ್ದರು ಎಂದು ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ. ಲೈಂಗಿಕ ಜಾಲದ ಮೂಲಕವೇ ಅವರಿಬ್ಬರೂ ಅಕ್ರಮವಾಗಿ ಹಣ ಸಂಪಾದಿಸಿದ್ದರು ಎಂದು ತಿಳಿದುಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Exit mobile version