Headlines

ಪ್ರೀತಿಸಿ ಮದ್ವೆಯಾಗಿದ್ರೂ ಮತ್ತೊಬ್ಬಳ ಜತೆ ಲವ್ವಿಡವ್ವಿ: ಪ್ರಶ್ನಿಸಿದ ಹೆಂಡ್ತಿಗೆ ಚಟ್ಟ ಕಟ್ಟಿದ – Kannada News | Shivamogga: Husband kills wife for opposing second marriage; Arrested

ಶಿವಮೊಗ್ಗ, ಜನವರಿ 15: ಎರಡನೇ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪತ್ನಿಯ (wife) ಕತ್ತು ಹಿಸುಕಿ ಪತಿ ಕೊಲೆ (murder) ಮಾಡಿರುವಂತಹ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಪಂಡರಹಳ್ಳಿ ಕ್ಯಾಂಪ್​ನಲ್ಲಿ ನಡೆದಿದೆ. ಜ.11ರಂದು ಮನೆಯಲ್ಲಿ ಉಸಿರುಗಟ್ಟಿಸಿ ಚಂದನಾಬಾಯಿ ಅನ್ನು ಪತಿ ಗೋಪಿ ಕೊಲೆ ಮಾಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹೊಳೆಹೊನ್ನೂರು ಪೊಲೀಸರ ತನಿಖೆ ವೇಳೆ ಗೋಪಿ ಸಿಕ್ಕಿಬಿದಿದ್ದು, ಇದೀಗ ಆತನ ಬಂಧನವಾಗಿದೆ. ನಡೆದದ್ದೇನು? ಡಿ.ಬಿ.ಹಳ್ಳಿಯ ಲಂಬಾಣಿ ಸಮುದಾಯದ ಚಂದನಾಬಾಯಿ ಮತ್ತು ಪಂಡರಹಳ್ಳಿಯ ಬೋವಿ ಸಮಾಜದ ಗೋಪಿ ಪರಸ್ಪರ…

Read More

‘ಅವರ ಬಗೆಗಿನ ಸತ್ಯ ಬಿಚ್ಚೋಕೆ ಆಗ್ತಿಲ್ಲ’; ಸತೀಶ್​​ಗೆ ಶೇಪ್​​ಔಟ್ ಮಾಡಿದ ಸುದೀಪ್ – Kannada News | Dog Satish Trolled by Sudeep at Bigg Boss Kannada 12 Finale: Viral Video Sparks Laughter

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಡಾಗ್ ಸತೀಶ್ ಅವರು ಕೆಲವೇ ವಾರ ಇದ್ದರು. ದೊಡ್ಮನೆಯಲ್ಲಿ ಸುದ್ದಿ ಆಗಿಲ್ಲ. ಅವರು ಬಿಗ್ ಬಾಸ್​​ನಿಂದ ಹೊರ ಬಂದ ಬಳಿಕ ಸಾಕಷ್ಟು ಸುದ್ದಿ ಆಗುತ್ತಿದ್ದಾರೆ. ಅವರು ಸಂದರ್ಶನ ನೀಡಿ ಟ್ರೋಲ್ ಆಗುತ್ತಿದ್ದಾರೆ. ಈ ವಿಷಯವನ್ನು ಇಟ್ಟುಕೊಂಡು ಸುದೀಪ್ ಅವರು ಸತೀಶ್ ಅವರ ಕಾಲೆಳೆದಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ನಡೆಯುತ್ತಿದೆ. ಇದಕ್ಕೆ ಮಾಜಿ ಸ್ಪರ್ಧಿಗಳು ಬಂದಿದ್ದಾರೆ. ಡಾಗ್ ಸತೀಶ್…

Read More

ಚುನಾವಣೆ ಭರವಸೆ ಘೋಷಣೆ ಮಾಡಿದ ವಿಜಯ್: ಮಹಿಳೆಯರಿಗೆ ಉಚಿತ ಬಸ್, ಮಗುವಿಗೆ ಚಿನ್ನದ ಉಂಗುರ

ಮಹಾಬಲಿಪುರಂ ಮಾ.7: ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿರುವ ನಟ ವಿಜಯ್, ತಮ್ಮ ‘ತಮಿಳಗ ವೆಟ್ರಿ ಕಳಗಂ’ ( TVK ) ಪಕ್ಷದ ವತಿಯಿಂದ ಇಂದು (ಮಾ.7) ಚುನಾವಣೆ ಭರವಸೆಯನ್ನು ನೀಡಿದ್ದಾರೆ. ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣಕ್ಕಾಗಿ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಪ್ರಕಟಿಸಿದ್ದಾರೆ. “ವಿಜಯದ ಪಯಣ” (Vetri Payanam) ಎಂಬ ಹೆಸರಿನಡಿ ಮಹಿಳೆಯರಿಗೆ ಹಲವು ಕೊಡುಗೆಗಳನ್ನು ಅವರು ಘೋಷಿಸಿದ್ದಾರೆ. ರಾಜ್ಯದ ಎಲ್ಲಾ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಸಂಪೂರ್ಣ ಉಚಿತ ಪ್ರಯಾಣದ ಸೌಲಭ್ಯ. ಮಹಿಳಾ ಸುರಕ್ಷತೆಗಾಗಿ ವಿಶೇಷ ಪಡೆ…

Read More

ಪವನ್ ಕಲ್ಯಾಣ್ ಅನುಪಸ್ಥಿತಿಯಲ್ಲಿ ಪ್ರಚಾರದ ಜವಾಬ್ದಾರಿ ಹೊತ್ತ ಶ್ರೀಲೀಲಾ

ಪವನ್ ಕಲ್ಯಾಣ್ (Pawan Kalyan) ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ರಣ್ವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಅದೇ ದಿನ ಬಿಡುಗಡೆ ಆಗಲಿದ್ದು, ದೊಡ್ಡ ಪ್ರತಿಸ್ಪರ್ಧೆಯನ್ನು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಕ್ಕೆ ಒಡ್ಡಿದೆ. ಸಿನಿಮಾದ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿದೆ. ಸಿನಿಮಾದ ನಾಯಕ ಪವನ್ ಕಲ್ಯಾಣ್ ರಾಜಕೀಯದಲ್ಲಿ ಬ್ಯುಸಿಯಾಗಿದ್ದು, ಪ್ರಚಾರಗಳಲ್ಲಿ ಪಾಲ್ಗೊಳ್ಳುವಷ್ಟು ಸಮಯ ಅವರಿಗಿಲ್ಲ. ಆಡಳಿತದ ದೃಷ್ಟಿಯಿಂದ ಅದು ಉಚಿತವೂ ಅಲ್ಲ. ಆದರೆ ಪವನ್ ಕಲ್ಯಾಣ್ ಗೈರು…

Read More

ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಚಳ್ಳಕೆರೆ ಗೇಟ್ ಬಳಿ ಗೂಡಂಗಡಿಗಳು ನೆಲಸಮ

ಚಿತ್ರದುರ್ಗ, ಡಿಸೆಂಬರ್ 30: ಬೆಂಗಳೂರಿನಲ್ಲಿ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್​​ ತೆರವು ವಿಚಾರ ದೇಶದಾದ್ಯಂತ ಸದ್ದು ಮಾಡುತ್ತಿರುವ ಸಂದರ್ಭದಲ್ಲೇ, ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿ ಅಕ್ರಮವಾಗಿ ಇಡಲಾಗಿದ್ದ ಗೂಡಂಗಡಿಗಳ ತೆರವು ಮಾಡಲಾಗಿದೆ. ನಗರಸಭೆ‌ ಆಯುಕ್ತೆ ಲಕ್ಷ್ಮೀ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆದಿದೆ. ಜೆಸಿಬಿ ಬಳಸಿ ಹಣ್ಣು, ತರಕಾರಿ, ಟೀಸ್ಟಾಲ್, ಗುಜರಿ ಅಂಗಡಿಗಳ ತೆರವು ಮಾಡಲಾಗಿದೆ. ನಗರಸಭೆ ಅಧಿಕಾರಿಗಳ ವಿರುದ್ಧ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಕೋರ್ಟ್ ಆದೇಶದಂತೆ ನಾವು ಗೂಡಂಗಡಿ ತೆರವು ಮಾಡುತ್ತಿದ್ದೇವೆ ಎಂದು…

Read More

ಸಾರ್ವಜನಿಕರ ಗಮನಕ್ಕೆ: ಮೇ 9ರಂದು ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ – Kannada News | Disruption to bus services over 10 thousand Bus Book For yediyurappa utsava On May 9th

ಚಿತ್ರದುರ್ಗ, (ಮೇ 06): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (bs yediyurappa ) ಅವರ 50 ವರ್ಷದ ರಾಜಕೀಯ ಜೀವನ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮೇ 9ರಂದು ಚಿತ್ರದುರ್ಗದಲ್ಲಿ ಭವ್ಯ “ಯಡಿಯೂರಪ್ಪ ಅಭಿಮಾನೋತ್ಸವ” (yediyurappa utsava) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಾದಾರ ಚನ್ನಯ್ಯ ಮಠದ ಬಳಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ 10 ಲಕ್ಷ ಜನ ಸೇರುವ ನಿರೀಕ್ಷೆಗಳಿವೆ. ಬೇರೆ ಬೇರೆ ಜಿಲ್ಲೆಗಳಿಂದ ಜನರನ್ನು…

Read More

ಹಾಸನ: ಟೈರ್ ಸ್ಫೋಟಗೊಂಡು ಧಗಧಗನೆ ಹೊತ್ತಿ ಉರಿದ ಖಾಸಗಿ ಬಸ್, 36 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು! – Kannada News | Moving Private Bus Catches Fire Near Hassan Shanthigrama After Tyre Burst; 36 Passengers Narrowly Escape

ಹಾಸನ, ಮೇ 16: ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದರ ಟೈರ್ ಸ್ಫೋಟಗೊಂಡು ಅದಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ಹಾಸನ ತಾಲೂಕಿನ ಶಾಂತಿಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಬಸ್‌ನಲ್ಲಿ ಸುಮಾರು 36 ಪ್ರಯಾಣಿಕರಿದ್ದು, ಟೈರ್ ಸ್ಫೋಟಗೊಳ್ಳುತ್ತಿದ್ದಂತೆಯೇ ಚಾಲಕ ತಕ್ಷಣವೇ ಜಾಗರೂಕತೆಯಿಂದ ಬಸ್ ನಿಲ್ಲಿಸಿ ಎಲ್ಲರನ್ನೂ ಕೆಳಗಿಳಿಸಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಆದರೆ, ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಪ್ರಯಾಣಿಕರ ಲಗೇಜ್‌ಗಳು, ಮೊಬೈಲ್‌ಗಳು ಹಾಗೂ ಬೆಲೆಬಾಳುವ ವಸ್ತುಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿವೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ…

Read More

ಮಂಗಳೂರು ಯುವಕನ ಆತ್ಮಹತ್ಯೆ ಕೇಸ್​​ಗೆ ಟ್ವಿಸ್ಟ್​​: ಪ್ರೀತಿಸಿದ ಯುವತಿಯಿಂದಾದ ಅವಮಾನಕ್ಕೆ ನೊಂದು ಆತ್ಮಹತ್ಯೆ?

ಮಂಗಳೂರು, ಏಪ್ರಿಲ್​​ 12: ಮೂಡುಶೆಡ್ಡೆಯ ಎದುರುಪದವು ನಿವಾಸಿ ಮಹಮ್ಮದ್ ಆಶಿಕ್(22) ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್​ಟ್​ ಸಿಕ್ಕಿದೆ. ಪ್ರೀತಿಸಿದ ಯುವತಿಯ ಕಿರುಕುಳವೇ ಸಾವಿಗೆ ಕಾರಣ ಎನ್ನಲಾಗಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಯುವತಿ ಮತ್ತು ಆಕೆಯ ತಾಯಿ ಸೇರಿದಂತೆ ಮೂವರ ವಿರುದ್ಧ ಮಂಗಳೂರಿನ (Mangaluru) ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಚ್ 21ರಂದು ಈದ್ ಹಬ್ಬದ ದಿನವೇ ಆಶಿಕ್​​ ಆತ್ಮಹತ್ಯೆ ಮಾಡಿಕೊಂಡಿದ್ದರು. ಆರಂಭದಲ್ಲಿ ಯಾವುದೋ ಕಾರಣಕ್ಕೆ ಮನನೊಂದು ಆಶಿಕ್​​ ಈ ನಿರ್ಧಾರ ಕೈಗೊಂಡಿರಬಹುದು ಎಂದು ಭಾವಿಸಲಾಗಿತ್ತಾದರೂ, ಮೊಬೈಲ್​​…

Read More

ಮಂಗಳವಾರದಿಂದ ರಾಜ್ಯದಲ್ಲಿ SIR ಪ್ರಕ್ರಿಯೆ ಶುರು: ಜಾಗೃತಿ ವಹಿಸದಿದ್ರೆ ಮಾರಣಹೋಮ ಎಂದ ಸಿದ್ದರಾಮಯ್ಯ – Kannada News | SIR Process Begins Tuesday: Siddaramaiah Urges Public Awareness to Avoid Major Issues

ಬೆಂಗಳೂರು, ಜೂನ್​​ 28: ಕರ್ನಾಟಕ ಸೇರಿದಂತೆ 5 ರಾಜ್ಯಗಳಲ್ಲಿ ಜೂನ್ 30ರಿಂದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಯಲಿದೆ. ಪಶ್ಚಿಮ ಬಂಗಾಳ ಫಲಿತಾಂಶದ ಬಳಿಕ SIR ವಿಚಾರದಲ್ಲಿ ಕಾಂಗ್ರೆಸ್ ಎಚ್ಚರಿಕೆ ಹೆಜ್ಜೆ ಇಟ್ಟಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಸಚಿವ ಯತೀಂದ್ರ ಸಿದ್ದರಾಮಯ್ಯ ಭಾಗಿಯಾಗಿ ಕಾರ್ಯಕರ್ತರಿಗೆ ಎಚ್ಚರಿಕೆ ಸಂದೇಶಗಳನ್ನ ನೀಡಿದ್ದಾರೆ. ಕರ್ನಾಟಕದಲ್ಲಿ ಎಸ್​ಐಆರ್​ ಮಾಡುತ್ತಿರುವ ಮುಖ್ಯ ಉದ್ದೇಶ ಏನು ಅಂದರೆ ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ಸ್ವಚ್ಛ ಮತ್ತು ದೋಷಮುಕ್ತ ಮತದಾರರ…

Read More

ಫಿಟ್ನೆಸ್‌ ಕಾಪಾಡಿಕೊಳ್ಳಲು ಊಟ ಬಿಡುತ್ತಿದ್ದೀರಾ? ಹಾಗಿದ್ರೆ ನೀವು ಈ ಒಂದಿಷ್ಟು ವಿಚಾರಗಳನ್ನು ತಿಳಿದುಕೊಳ್ಳಲೇಬೇಕು – Kannada News

ಇತ್ತೀಚಿನ ದಿನಗಳಲ್ಲಿ ಬೇಗನೆ ತೂಕ ಇಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಹಲವರು ಊಟವನ್ನೇ ಬಿಟ್ಟು ಫಿಟ್ನೆಸ್ ಪ್ರಯಾಣ ಆರಂಭಿಸುತ್ತಿದ್ದಾರೆ. ಬೆಳಗಿನ ಉಪಹಾರ ಬಿಡುವುದು, ಮಧ್ಯಾಹ್ನದ ಊಟ ತಡಮಾಡುವುದು ಅಥವಾ ಕೇವಲ ಕಾಫಿ, ಟೀ ಅಥವಾ ಹಣ್ಣಿನ ಜ್ಯೂಸ್ ಕುಡಿದು ದಿನ ಕಳೆಯುತ್ತಾರೆ. ಆದರೆ ಈ ರೀತಿ ಮಾಡುವುದು ಆರೋಗ್ಯಕರ ವಿಧಾನ ಅಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ತೂಕ ಇಳಿಕೆ ಎಂದರೆ ಕೇವಲ ಜಿಮ್‌ನಲ್ಲಿ ವ್ಯಾಯಾಮ ಮಾಡುವುದಲ್ಲ. ಸರಿಯಾದ ಆಹಾರ ಪದ್ಧತಿ, ಉತ್ತಮ ನಿದ್ರೆ, ಒತ್ತಡ ನಿಯಂತ್ರಣ ಮತ್ತು…

Read More