ಹಲವು ಕಾಂಗ್ರೆಸ್ ನಾಯಕರು, ಅಭ್ಯರ್ಥಿಗಳನ್ನು ಬಿಜೆಪಿ ಸಂಪರ್ಕಿಸಿದೆ; ಅಸ್ಸಾಂನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ – Kannada News | Karnataka DCM DK Shivakumar claims BJP offered several Assam Congress candidates

ಗುವಾಹಟಿ, ಮೇ 2: ಅಸ್ಸಾಂ ವಿಧಾನಸಭಾ ಚುನಾವಣೆಯ (Assam Assembly Elections) ಕಾಂಗ್ರೆಸ್ ಪಕ್ಷದ ಹಿರಿಯ ವೀಕ್ಷಕರಾದ ಕರ್ನಾಟಕದ ಡಿಸಿಎಂ ಡಿ.ಕೆ ಶಿವಕುಮಾರ್, ಭೂಪೇಶ್ ಬಘೇಲ್ ಮತ್ತು ಜಿತೇಂದ್ರ ಸಿಂಗ್ ಇಂದು ಅಸ್ಸಾಂನಲ್ಲಿ ಮೈತ್ರಿಕೂಟದ ಪಾಲುದಾರರೊಂದಿಗೆ ಸಭೆ ನಡೆಸಿದರು. ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಅಸ್ಸಾಂನ ಇತರ 5 ಪಕ್ಷಗಳಾದ ರೈಜೋರ್ ದಳ, ಅಸ್ಸಾಂ ರಾಷ್ಟ್ರೀಯ ಪರಿಷತ್ (AJP), ಸಿಪಿಐಎಂ (CPIM), ಎಪಿಎಚ್​ಎಲ್​ಸಿ (APHLC) ಮತ್ತು ಸಿಪಿಐಎಂಎಲ್ (CPIML) ಜೊತೆ ಮೈತ್ರಿ ಮಾಡಿಕೊಂಡಿದೆ. ಈ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ…

Read More

ಕಾರವಾರ: 140 ಟನ್ ತೂಕದ ವಿಕಿರಣ ರಕ್ಷಾ ಕವಚ ತರುತ್ತಿದ್ದ ವಾಹನ ಪಲ್ಟಿ; ವಿಡಿಯೋ ನೋಡಿ – Kannada News | Karwar: Truck Carrying 140 Tons of Radiation Protection Equipment Overturns; watch video

ಕಾರವಾರ, ಮೇ 07: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಟುಗಾ ಗ್ರಾಮದ ಬಳಿ ಕೈಗಾ ಅಣುಸ್ಥಾವರಕ್ಕೆ ಸಂಬಂಧಿಸಿದ ಸಲಕರಣೆ ಹೊತ್ತಿದ್ದ ಭಾರೀ ವಾಹನವೊಂದು ಪಲ್ಟಿಯಾಗಿದೆ. ಕೈಗಾ ಅಣುಸ್ಥಾವರದ 5 ಮತ್ತು 6ನೇ ಘಟಕಗಳಿಗಾಗಿ ಸೂರತ್‌ನಿಂದ ತರಲಾಗುತ್ತಿದ್ದ ಸುಮಾರು 140 ಟನ್ ತೂಕದ ವಿಕಿರಣ ರಕ್ಷಾ ಕವಚ ಹೊತ್ತಿದ್ದ ವಾಹನವೇ ಅಪಘಾತಕ್ಕೆ ಈಡಾಗಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ. ಕೈಗಾ ಅಣುಸ್ಥಾವರದ ವಿಸ್ತರಣಾ ಕಾಮಗಾರಿಗಾಗಿ ಅತ್ಯಗತ್ಯವಾಗಿದ್ದ ಈ ವಿಕಿರಣ ರಕ್ಷಾ ಕವಚವನ್ನು ಸೂರತ್‌ನಿಂದ ರಸ್ತೆಯ ಮೂಲಕ ಅತ್ಯಂತ…

Read More

ದೆಹಲಿಗೆ ಹೋಗುವ ಮುನ್ನ ಡಿಕೆಶಿ ವಿಶೇಷ ಪೂಜೆ: ಪ್ರಾರ್ಥನೆಯ ರಹಸ್ಯ ಬಹಿರಂಗಪಡಿಸಿದ ಸ್ವಾಮೀಜಿ – Kannada News | Karnataka leadership change Row: DCM DK Shivakumar Talks after Special Pooja in Mukti Mandir at Gadag

ಗದಗ, (ಏಪ್ರಿಲ್ 19): ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆ ಮುಗಿಯುತ್ತಿದ್ದಂತೆಯೆ ಕರ್ನಾಟಕ ಕಾಂಗ್ರೆಸ್​​​ನಲ್ಲಿ (karnataka Congress) ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಒಂದೆಡೆ ಮುಸ್ಲಿಂ ನಾಯಕರ ಅಸಮಾಧಾನ, ಇನ್ನೊಂದೆಡೆ ಸಂಪುಟ ಪುನಾರಚನೆ ಕೂಗು, ಮತ್ತೊಂದೆಡೆ ಇದೀಗ ನಾಯಕತ್ವ ಬದಲಾವಣೆ ಮತ್ತೆ ಮುನ್ನಲೆಗೆ ಬಂದಿದೆ. ಹೌದು….ಸಿಎಂ ಕುರ್ಚಿಗೆ ಪಟ್ಟು ಹಿಡಿದಿರುವ ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳಲಿದ್ದಾರೆ. ಆದ್ರೆ, ಅದಕ್ಕೂ ಮುನ್ನ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಮುಕ್ತಿಮಂದಿರದ ವೀರಗಂಗಾಧರ ಜಗದ್ಗುರುಗಳ ಗದ್ದುಗೆಗೆ ವಿಶೇಷ ಪೂಜೆ…

Read More

‘ಸಿಎಂ, ಸಿಎಂ’ ಎಂದು ಕೂಗಿದ ಅಭಿಮಾನಿಗಳು, ಜೂ ಎನ್​​ಟಿಆರ್ ಪ್ರತಿಕ್ರಿಯೆ ಏನು?

ಜೂ ಎನ್​​ಟಿಆರ್ (Jr NTR), ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟ. ‘ಆರ್​​ಆರ್​​ಆರ್’ ಸಿನಿಮಾದ ಬಳಿಕವಂತೂ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಜೂ ಎನ್​​ಟಿಆರ್ ಅವರ ನಂದಮೂರಿ ಕುಟುಂಬ ಹಲವು ದಶಕಗಳಿಂದಲೂ ತೆಲುಗು ಚಿತ್ರರಂಗ ಮತ್ತು ರಾಜಕೀಯದ ಮೇಲೆ ಪ್ರಭಾವ ಬೀರುತ್ತಲೇ ಬಂದಿದೆ. ಸ್ವತಃ ಜೂ ಎನ್​​ಟಿಆರ್ ಸಹ ಕೆಲವು ವರ್ಷಗಳ ಹಿಂದಿನ ವರೆಗೂ ಸಹ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ತಮ್ಮ ಕುಟುಂಬದ ಪಕ್ಷವಾದ ಟಿಡಿಪಿ (ತೆಲುಗು ದೇಶಂ ಪಾರ್ಟಿ)ಯ ತಾರಾ ಪ್ರಚಾರಕ ಆಗಿದ್ದರು. ಆದರೆ ಇತ್ತೀಚೆಗೆ ಅವರನ್ನು…

Read More

Video: CET ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯರ ಮೂಗಿಗೆ ಗಮ್ ಟೇಮ್ ಅಂಟಿಸಿದ ಭದ್ರತಾ ಸಿಬ್ಬಂದಿ – Kannada News | CET Exam Security: Gum Tape Applied to Students Nose Pins

ಎಂಜಿನಿಯರಿಂಗ್‌ ಸೇರಿದಂತೆ ನಾನಾ ವೃತ್ತಿಪರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪ್ರಾರಂಭವಾಗಿದೆ. ಇದೀಗ CET ಪರೀಕ್ಷೆ ಬರೆಯಲು ವಿದ್ಯಾರ್ಥಿನಿಯರು ಧರಿಸಿದ್ದ ಮೂಗು ಬೊಟ್ಟಿಗೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಗಮ್ ಟೇಪ್ ಅಂಟಿಸಿದ ಘಟನೆ ಬೆಳಕಿಗೆ ಬಂದಿದೆ. ಪರೀಕ್ಷಾ ಕೇಂದ್ರಗಳಲ್ಲಿ ಆಭರಣಗಳನ್ನು ಧರಿಸುವುದನ್ನು ನಿಷೇಧಿಸುವ ಕಟ್ಟುನಿಟ್ಟಿನ ಭದ್ರತಾ ನಿಯಮಗಳ ಭಾಗವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಮೂಗುತ್ತಿ ಧರಿಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಆರಂಭದಲ್ಲಿ ಅವುಗಳನ್ನು…

Read More

Swapna Shastra: ಕನಸಿನಲ್ಲಿ ಕೂದಲು ಉದುರಿದಂತೆ ಕಂಡರೆ ಏನರ್ಥ? ಇದು ಅಶುಭವೇ? – Kannada News | Hair Loss Dream Meaning: Is It Good or Bad According to Swapna Shastra?

ನಿದ್ರೆಯಲ್ಲಿ ಕಾಣುವ ಪ್ರತಿಯೊಂದು ಕನಸಿಗೂ ತನ್ನದೇ ಆದ ವಿಶೇಷ ಮಹತ್ವವಿದೆ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ಕನಸುಗಳು ನಮಗೆ ಭವಿಷ್ಯದಲ್ಲಿ ಸಂಭವಿಸಬಹುದಾದ ಘಟನೆಗಳ ಒಂದು ಮುನ್ಸೂಚನೆಯನ್ನು ನೀಡುತ್ತವೆ. ಒಂದು ವೇಳೆ ನಿಮ್ಮ ಕೂದಲು ಉದುರುತ್ತಿರುವಂತೆ ನೀವು ಕನಸು ಕಂಡರೆ, ಅದು ಕೇವಲ ಕಾಕತಾಳೀಯವಲ್ಲ. ನಿಜ ಜೀವನದಲ್ಲಿ ಕೂದಲು ಉದುರುವುದು ಒಂದು ದೊಡ್ಡ ಸಮಸ್ಯೆಯಾಗಿರುವಂತೆ, ಕನಸಿನಲ್ಲಿಯೂ ಇದು ಹಲವು ಪ್ರಮುಖ ಸುಳಿವುಗಳನ್ನು ಒಳಗೊಂಡಿರುತ್ತದೆ. ಈ ಲೇಖನದಲ್ಲಿ ಅಂತಹ ಕನಸುಗಳು ಶುಭವೋ ಅಥವಾ ಅಶುಭವೋ ಎಂಬುದನ್ನು ತಿಳಿಯೋಣ. ಸ್ವಪ್ನ ಶಾಸ್ತ್ರ ಹೇಳುವುದೇನು?…

Read More

‘ಅದೇ ಕಣ್ಣು’ ಖ್ಯಾತಿಯ ಸತೀಶ್ ಈಗೇನು ಮಾಡುತ್ತಿದ್ದಾರೆ? ಪುನೀತ್ ಭೇಟಿಯೂ ಸಾಧ್ಯವಾಗಲಿಲ್ಲ – Kannada News | Actor Satish from ‘Ade Kannu’: Where is the Rajkumar co star now

1985ರಲ್ಲಿ ರಿಲೀಸ್ ಆದ ‘ಅದೇ ಕಣ್ಣು’ ಸಿನಿಮಾ ಸಾಕಷ್ಟು ಗಮನ ಸೆಳೆಯಿತು. ಈ ಚಿತ್ರದಲ್ಲಿ ರಾಜ್​​ಕುಮಾರ್, ಗಾಯತ್ರಿ ಮೊದಲಾದವರು ನಟಿಸಿದ್ದರು. ಗಾಯತ್ರಿ ಜೊತೆಗೆ ರಾಜ್​​ಕುಮಾರ್ ನಟಿಸಿದ ಕೊನೆಯ ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ ಸತೀಶ್ ಅವರು ಪೊಲೀಸ್ ಇನ್​​ಸ್ಪೆಕ್ಟರ್ ಪಾತ್ರ ಮಾಡಿದ್ದರು. ಅವರು ಇತ್ತೀಚೆಗೆ ಸ್ಯಾಂಡಲ್​ವುಡ್​​ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಹಾಗಾದರೆ ಅವರು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಈ ಬಗ್ಗೆ ನಿರ್ದೇಶಕ ರಘುರಾಮ್ ಅವರು ವಿಡಿಯೋ ಮಾಡಿ ಹಾಕಿದ್ದಾರೆ. ಸತೀಶ್​ ಬಗೆಗಿನ ವಿವರವನ್ನು ಅವರು ನೀಡಿದ್ದಾರೆ. 1.ಅಪರೂಪದ ನಟ ಸತೀಶ್…

Read More

ಈ ವಾರ ಒಟಿಟಿಗೆ ಬಂದಿವೆ ಬ್ಲಾಕ್ ಬಸ್ಟರ್ ಸಿನಿಮಾಗಳು: ಇಲ್ಲಿದೆ ಪಟ್ಟಿ

ಸೂಪರ್ ಹಿಟ್ ವೆಬ್ ಸರಣಿ ‘ಮನಿ ಹೈಸ್ಟ್’ನ ಜನಪ್ರಿಯ ಪಾತ್ರ ‘ಬರ್ಲಿನ್’ ಅನ್ನು ಪ್ರಧಾನವಾಗಿರಿಸಿ ಈಗಾಗಲೇ ಒಂದು ವೆಬ್ ಸರಣಿ ಬಿಡುಗಡೆ ಆಗಿದ್ದು, ಇದೀಗ ಅದೇ ವೆಬ್ ಸರಣಿಯ ಎರಡನೇ ಸೀಸನ್ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ. ರಣ್ವೀರ್ ಸಿಂಗ್ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ‘ಧುರಂಧರ್ 2’ ಕೊನೆಗೂ ಒಟಿಟಿಗೆ ಬಂದಿದೆ ಆದರೆ ಭಾರತದಲ್ಲಿ ಅಲ್ಲ. ‘ಧುರಂಧರ್ 2’ ಈ ವಾರ ನೆಟ್​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದ್ದು, ಭಾರತದ ಹೊರತಾಗಿ ಬೇರೆ ದೇಶದವರು ಮಾತ್ರ ಸಿನಿಮಾ ನೋಡಬಹುದಾಗಿದೆ. ‘ಎಕ್ಸಾಮ್’…

Read More

ಅತೀ ವೇಗ… ಬೆನ್​ ಡಕೆಟ್​ಗೆ ಬರೋಬ್ಬರಿ 1,100 ಪೌಂಡ್ ಫೈನ್..!

ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಬೆನ್ ಡಕೆಟ್ ಇತ್ತೀಚೆಗೆ ಎರಡು ಪ್ರಮುಖ ಕಾರಣಗಳಿಗಾಗಿ ಸುದ್ದಿಯಲ್ಲಿದ್ದಾರೆ. ಒಂದು, ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಹಿಂದೆ ಸರಿದಿರುವುದು. ಮತ್ತೊಂದು, ಅತಿವೇಗದ ಚಾಲನೆಗಾಗಿ ನ್ಯಾಯಾಲಯದಿಂದ ದಂಡಕ್ಕೆ ಗುರಿಯಾಗಿರುವುದು. ಬೆನ್ ಡಕೆಟ್ ಅವರು ತಮ್ಮ ಲ್ಯಾಂಡ್ ರೋವರ್ ಕಾರನ್ನು ನಿಗದಿಗಿಂತ ಹೆಚ್ಚಿನ ವೇಗದಲ್ಲಿ ಚಲಾಯಿಸಿದ್ದಕ್ಕಾಗಿ ದಂಡ ತೆತ್ತಿದ್ದಾರೆ. ಆಗಸ್ಟ್ 24, 2025 ರಂದು ಸ್ಟಾಫರ್ಡ್‌ಶೈರ್‌ನ ಎ50 ರಸ್ತೆಯಲ್ಲಿ ಡಕೆಟ್​ 93 ಮೈಲಿ ವೇಗದಲ್ಲಿ ಕಾರು ಚಲಾಯಿಸಿದ್ದರು. ಈ ರಸ್ತೆಯಲ್ಲಿ ಗಂಟೆಗೆ 70…

Read More

ಮಹರಾಜ ಲೀಗ್​​ನಲ್ಲಿ ಅನ್​​ಸೋಲ್ಡ್ ಆದ ಕೆಎಲ್ ರಾಹುಲ್; ಕಾರಣ ಇಲ್ಲಿದೆ – Kannada News

ಮಹಾರಾಜ ಟ್ರೋಫಿ ಕೆಎಸ್​​ಸಿಎ ಟಿ20 ಲೀಗ್ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಕನ್ನಡಿಗ ಕೆಎಲ್ ರಾಹುಲ್ ಅವರು 2 ಲಕ್ಷ ರೂಪಾಯಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದಿದ್ದಾರೆ. ಆದಾಗ್ಯೂ ಅವರು ಅನ್​​ಸೋಲ್ಡ್ ಆಗಿದ್ದಾರೆ. ಇದಕ್ಕೆ ಕಾರಣವೂ ಇದೆ. ಪ್ರಸ್ತುತ ರಾಹುಲ್ ಅಫ್ಘಾನಿಸ್ತಾನ ವಿರುದ್ಧದ ಸರಣಿ ಹಾಗೂ ಮುಂಬರುವ ಇಂಗ್ಲೆಂಡ್ ಪ್ರವಾಸದಂತಹ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಿದೆ. ಹೀಗಾಗಿ, ಅವರಿಗೆ ಮಹರಾಜ ಟ್ರೋಫಿ ಆಡಲು ಸಾಧ್ಯವಿಲ್ಲ. ಆಡಲು ಸಾಧ್ಯವಿಲ್ಲದಿದ್ದರೂ ರಾಹುಲ್ ಹರಾಜಿಗೆ ಹೆಸರು ನೋಂದಾಯಿಸಿದ್ದು ಏಕೆ ಎಂಬ ಪ್ರಶ್ನೆ…

Read More