ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ; ಭಾರತೀಯ ಕೃಷಿಕರ ಆದಾಯ ಏರುತ್ತದೆ ಎಂದ ಪೀಯೂಶ್ ಗೋಯಲ್ – Kannada News | India US trade deal, Indian farmers set to gain from lower tariffs says Piyush Goyal
ನವದೆಹಲಿ, ಫೆಬ್ರುವರಿ 8: ಅಮೆರಿಕದೊಂದಿಗೆ ಭಾರತ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದದಲ್ಲಿ (US India trade deal) ರೈತರ ಹಿತಾಸಕ್ತಿಯನ್ನು ಬಲಿ ಕೊಡಲಾಗಿದೆ ಎನ್ನುವ ಆರೋಪವನ್ನು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವ ಪೀಯೂಶ್ ಗೋಯಲ್ (Piyush Goyal) ತಳ್ಳಿಹಾಕಿದ್ದಾರೆ. ಅಮೆರಿಕದೊಂದಿಗಿನ ಒಪ್ಪಂದದಿಂದ ಭಾರತದ ಕೃಷಿ ಕ್ಷೇತ್ರಕ್ಕೆ ಹಾನಿಯಾಗುವುದಿಲ್ಲ. ಬದಲಾಗಿ, ಕೃಷಿಕರ ಆದಾಯ ಹೆಚ್ಚಲು ಸಹಾಯವಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಭಾರತ ಮತ್ತು ಅಮೆರಿಕ ನಡುವೆ ಫೆಬ್ರುವರಿ 7ರಂದು ಮಧ್ಯಂತರ ವ್ಯಾಪಾರ ಒಪ್ಪಂದದ ಅಂಶಗಳನ್ನು ಪ್ರಕಟಿಸಲಾಯಿತು. ಅದರ ಪ್ರಕಾರ,…