ಬಸ್​​ ಅಡ್ಡಗಟ್ಟಿ ಕಂಡಕ್ಟರ್‌ಗೆ ಥಳಿಸಿದ ಕಿಡಿಗೇಡಿಗಳು: ವಿಡಿಯೋ ಮಾಡುತ್ತಿದ್ದ ಪ್ರಯಾಣಿಕನಿಗೂ ಹಲ್ಲೆ! – Kannada News | NWKRTC Bus Conductor Attacked Following Auto Dispute in Alamel

ವಿಜಯಪುರ, ಆಗಸ್ಟ್​​ 01: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕರೊಬ್ಬರ ಮೇಲೆ ಕಿಡಿಗೇಡಿಗಳು ಬಸ್ಸಿನಲ್ಲೇ ಭೀಕರವಾಗಿ ಹಲ್ಲೆ (conductor attack) ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ವಿಜಯಪುರ (vijayapura) ಜಿಲ್ಲೆಯ ಆಲಮೇಲ ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೊಳಗಾದ ಬಸ್ ನಿರ್ವಾಹಕರನ್ನು ಮಲ್ಲು ಲಮಾಣಿ ಎಂದು ಗುರುತಿಸಲಾಗಿದೆ.

ನಡೆದಿದ್ದೇನು?

ಶುಕ್ರವಾರದಂದು ಮದರಿ ಗ್ರಾಮದ ಬಸ್ ನಿಲ್ದಾಣದ ಬಳಿ ಆಟೋವೊಂದನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಲಾಗಿತ್ತು. ಇದರಿಂದ ಸಾರ್ವಜನಿಕರಿಗೆ ತೊಂದರೆ ಹಿನ್ನೆಲೆ ಗ್ರಾಮಸ್ಥರು ಆಟೋವನ್ನು ರಸ್ತೆ ಬದಿಗೆ ಸರಿಸಿದ್ದರು. ಇದರಿಂದ ಕೆರಳಿದ ಆಟೋ ಚಾಲಕ ಸಂತೋಷ ದೇವೂರ, ನಿರ್ವಾಹಕ ಮಲ್ಲು ಲಮಾಣಿ ಅವರೊಂದಿಗೆ ತೀವ್ರ ವಾಗ್ವಾದಕ್ಕಿಳಿದಿದ್ದ. ಆ ಸಮಯದಲ್ಲಿ ಸ್ಥಳೀಯರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದ್ದರು.

ಇದನ್ನೂ ಓದಿ: ಲೋಕಾಪುರ ಡಿಸಿಸಿ ಬ್ಯಾಂಕ್​​ನಲ್ಲಿ ಗೋಲ್​ಮಾಲ್: ಪರ್ಸನಲ್ ಖಾತೆಗೆ ಹಣ ಹಾಕಿಸಿಕೊಂಡು ಮ್ಯಾನೇಜರ್ ಎಸ್ಕೇಪ್

ಈ ಘಟನೆಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಸಂತೋಷ ದೇವೂರ ಮತ್ತು ಆತನ ಸಹಚರರು, ಇಂದು ಮದರಿ ಗ್ರಾಮದ ಬಳಿ ಬಸ್​​ ಅಡ್ಡಗಟ್ಟಿ ಬಲವಂತವಾಗಿ ಒಳಗೆ ನುಗ್ಗಿದ್ದಾರೆ. ನಿರ್ವಾಹಕ ಮಲ್ಲು ಲಮಾಣಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ ಎದೆಗೆ ಬಲವಾಗಿ ಗುದ್ದಿದ್ದಾರೆ. ಹಲ್ಲೆ ತೀವ್ರತೆಗೆ ನಿರ್ವಾಹಕ ಬಸ್ಸಿನಲ್ಲೇ ಕುಸಿದು ಬಿದ್ದಿದ್ದಾರೆ.

ಪ್ರಯಾಣಿಕನ ಮೇಲೆಯೂ ಹಲ್ಲೆ

ಇನ್ನು ಈ ಘಟನೆಯನ್ನು ಬಸ್​​ನಲ್ಲಿದ್ದ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಸೆರೆಹಿಡಿದಿದ್ದಾರೆ. ಇದನ್ನು ಗಮನಿಸಿದ ಕಿಡಿಗೇಡಿಗಳು, ‘ಮೊಬೈಲ್‌ನಲ್ಲಿ ವಿಡಿಯೋ ಏಕೆ ಮಾಡುತ್ತಿದ್ದೀಯಾ?’ ಎಂದು ಪ್ರಶ್ನಿಸಿದ್ದು, ಪ್ರಯಾಣಿಕನ ಮೇಲೆಯೂ ಹಲ್ಲೆ ಮಾಡಿದ್ದಾರೆ.

ಕಠಿಣ ಕಾನೂನು ಕ್ರಮಕೈ ಸಾರ್ವಜನಿಕರು ಒತ್ತಾಯ

ಸಾರ್ವಜನಿಕ ಬಸ್‌ನಲ್ಲಿ ಪ್ರಯಾಣಿಕರ ಎದುರೇ ನಡೆದ ಈ ಘಟನೆ ಸದ್ಯ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಕರ್ತವ್ಯ ನಿರತ ಸಾರಿಗೆ ಸಿಬ್ಬಂದಿಯ ಮೇಲಿನ ಹಲ್ಲೆ ಖಂಡನೀಯ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಆಲಮೇಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

2014ರಲ್ಲಿ 74 ವಿಮಾನ ನಿಲ್ದಾಣಗಳು, 2026ರಲ್ಲಿ 166ಕ್ಕೆ ಏರಿಕೆ; ವಿಮಾನಯಾನ ಕ್ಷೇತ್ರದ ಪ್ರಗತಿ ಒತ್ತಿಹೇಳಿದ ಪ್ರಧಾನಿ ಮೋದಿ – Kannada News | 74 airports in 2014 to 166 in 2026 PM Narendra Modi stresses 12 years of extraordinary progress

ವಿಜಯನಗರ, ಆಗಸ್ಟ್ 1: ಭಾರತದ ಕಾರ್ಯನಿರ್ವಹಿಸುತ್ತಿರುವ ವಿಮಾನ ನಿಲ್ದಾಣಗಳ ಸಂಖ್ಯೆಯು 2014ರಲ್ಲಿ 74 ಇದ್ದದ್ದು 2026ರ ವೇಳೆಗೆ 1661ಕ್ಕೆ ಏರಿಕೆಯಾಗಿದೆ. ಇದು ಸಣ್ಣ ಪಟ್ಟಣಗಳ ಸಾಮಾನ್ಯ ನಾಗರಿಕರಿಗೂ ವಿಮಾನ ಪ್ರಯಾಣವನ್ನು ಸುಲಭಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಆಂಧ್ರಪ್ರದೇಶದ ಭೋಗಾಪುರಂನಲ್ಲಿ ಅಲ್ಲೂರಿ ಸೀತಾರಾಮ ರಾಜು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿ ತಿಳಿಸಿದ್ದಾರೆ.

ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ದೇಶದ ವಿಮಾನಯಾನ ಕ್ಷೇತ್ರವು ಅಸಾಮಾನ್ಯ ಪ್ರಗತಿಯನ್ನು ಸಾಧಿಸಿದೆ ಎಂದು ಹೇಳಿದರು. “ಕಳೆದ 12 ವರ್ಷಗಳಲ್ಲಿ ದೇಶದ ವಿಮಾನಯಾನ ಕ್ಷೇತ್ರವು ಅಸಾಧಾರಣ ಪ್ರಗತಿಯನ್ನು ಸಾಧಿಸಿದೆ. 2014ರವರೆಗೆ ದೇಶದಲ್ಲಿ ಕೇವಲ 74 ವಿಮಾನ ನಿಲ್ದಾಣಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಇಂದು ಆ ಸಂಖ್ಯೆ 166 ತಲುಪಿದೆ. ಒಂದು ಕಾಲದಲ್ಲಿ ವಿಮಾನ ಪ್ರಯಾಣವು ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ, ಎನ್‌ಡಿಎ ಸರ್ಕಾರದ ಅಡಿಯಲ್ಲಿ ಈಗ ಸಣ್ಣ ಪಟ್ಟಣಗಳ ಸಾಮಾನ್ಯ ಜನರು ಕೂಡ ವಿಮಾನದಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತಿದೆ” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ನಾಳೆ ನಡೆಯುವ ನೇಮಕಾತಿ ಪರೀಕ್ಷೆಗೆ ಬಿಗಿ ಭದ್ರತೆ; ಸಾಮಾಜಿಕ ಜಾಲತಾಣ, ಹಿಂದಿನ ಅಪರಾಧಿಗಳ ಮೇಲೆ ನಿಗಾ – Kannada News | Karnataka Recruitment Exams: Priyank Kharge Unveils Strict Security to Prevent Malpractice

ಬೆಂಗಳೂರು: ರಾಜ್ಯದಲ್ಲಿ ನಾಳೆ ನಡೆಯುವ ನೇಮಕಾತಿ ಪರೀಕ್ಷೆಗಳಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ತಡೆಯಲು ರಾಜ್ಯ ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಪರೀಕ್ಷಾ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಾಮಾಜಿಕ ಮಾಧ್ಯಮಗಳ ಮೇಲೆ ತೀವ್ರ ನಿಗಾ ಇರಿಸಲಾಗುತ್ತಿದೆ. WhatsApp, Telegram, Snapchat ನಂತಹ ವೇದಿಕೆಗಳಲ್ಲಿ ಹರಡುವ ಗಾಳಿಸುದ್ದಿಗಳು ಮತ್ತು ವದಂತಿಗಳನ್ನು ತಡೆಯಲು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನಿಗಾ ಇರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಹಿಂದೆ ಅಕ್ರಮಗಳಲ್ಲಿ ಭಾಗಿಯಾಗಿದ್ದವರ ಮೇಲೆ ನಿರಂತರ ಕಣ್ಗಾವಲು ಇರಿಸಲಾಗಿದ್ದು, ಬೇಲ್ ಮೇಲೆ ಇರುವವರು ಮತ್ತು ಹಿಂದಿನ ಆರೋಪಿಗಳ ಚಲನವಲನಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಅವರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಕೋಚಿಂಗ್ ಸೆಂಟರ್‌ಗಳು ಮತ್ತು ತರಬೇತಿ ಸಂಸ್ಥೆಗಳಿಗೂ ಎಚ್ಚರಿಕೆ ನೀಡಲಾಗಿದ್ದು, ಯಾವುದೇ ನಿರ್ಲಕ್ಷ್ಯ ಕಂಡುಬಂದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಪ್ರಶ್ನೆಪತ್ರಿಕೆಗಳ ಶಾರ್ಟೇಜ್ ಅಥವಾ ವಿಳಂಬದಿಂದಾಗಿ ವದಂತಿಗಳು ಹರಡುವುದನ್ನು ತಪ್ಪಿಸಲು ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ. ಗೈರುಹಾಜರಾದ ವಿದ್ಯಾರ್ಥಿಗಳ ಪ್ರಶ್ನೆಪತ್ರಿಕೆಗಳನ್ನು ಪರೀಕ್ಷೆ ಮುಗಿಯುವ 5 ನಿಮಿಷಗಳ ಮೊದಲು ಮಾತ್ರ ಮುಟ್ಟಬೇಕು ಎಂಬ ಹೊಸ ನಿಯಮ ಜಾರಿಗೊಳಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Source link

ಕೊಡಗಿನಲ್ಲಿ ಭಾರಿ ಮಳೆ: ಅಪಾಯಮಟ್ಟ ಮೀರಿ ಹರಿಯುತ್ತಿರುವ ನದಿಗಳು, ಭಾಗಮಂಡಲ‌ ತ್ರಿವೇಣಿ ಸಂಗಮ, ಸ್ನಾನಘಟ್ಟ ಜಲಾವೃತ – Kannada News | Kodagu Heavy Rain: Cauvery, Hattihole Rivers Overflow; Harangi Dam Inflow Rises, Bhagamandala Triveni Sangama submerged

ಮಡಿಕೇರಿ, ಆಗಸ್ಟ್ 1: ಕೊಡಗು ಜಿಲ್ಲೆಯಾದ್ಯಂತ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಲವು ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಕಾವೇರಿ ಹಾಗೂ ಹಟ್ಟಿಹೊಳೆ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಹಾಗೂ ಸ್ನಾನಘಟ್ಟ ಜಲಾವೃತಗೊಂಡಿವೆ. ಇದೇ ವೇಳೆ ಹಾರಂಗಿ ಜಲಾಶಯಕ್ಕೂ ಒಳಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

DK Shivakumar Rally in Mysore: ಮೈಸೂರಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಭರ್ಜರಿ ರೋಡ್ ಶೋ

ಮೈಸೂರು, ಆಗಸ್ಟ್ 01: ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಡಿ.ಕೆ. ಶಿವಕುಮಾರ್ ಮೈಸೂರಿಗೆ ಭೇಟಿ ನೀಡಿದ್ದು, ಭರ್ಜರಿ ರೋಡ್‌ಶೋ ನಡೆಸಿದರು. ಕಾರಂಜಿ ಕೆರೆಯಿಂದ ಆರಂಭಗೊಂಡ ಈ ಬೃಹತ್ ರೋಡ್‌ಶೋ ಕುರುಬರಹಳ್ಳಿ ಸರ್ಕಲ್‌ವರೆಗೂ ವಿಸ್ತರಿಸಿತ್ತು. ಡಿ.ಕೆ. ಶಿವಕುಮಾರ್ ಅವರು ತೆರೆದ ವಾಹನದಲ್ಲಿ ಸಾಗುತ್ತಿದ್ದಾಗ, ಹಾದಿಯುದ್ದಕ್ಕೂ ನೆರೆದಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅಭೂತಪೂರ್ವ ಸ್ವಾಗತ ನೀಡಿದರು. ಕಾರ್ಯಕರ್ತರು ವೀಳ್ಯದೆಲೆ, ಆ್ಯಪಲ್ ಮತ್ತು ಬೆಲ್ಲದ ಹಾರಗಳನ್ನು ಹಾಕಿ ತಮ್ಮ ನೆಚ್ಚಿನ ನಾಯಕನನ್ನು ಬರಮಾಡಿಕೊಂಡರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉತ್ತರ ಕನ್ನಡದಲ್ಲಿ ಮಳೆ ಆರ್ಭಟ : ಶಿರಸಿ ನಗರದ ಹಲವು ಬಡಾವಣೆಗಳು ಮುಳುಗಡೆ, ನಿವಾಸಿಗಳ ಪರದಾಟ – Kannada News | Uttara Kannada: Sirsi Flood Update Kote Lake Overflows, Commuters Stranded

ಉತ್ತರ ಕನ್ನಡ, ಆ.1: ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಶಿರಸಿ ನಗರದ ಹಲವು ಬಡಾವಣೆಗಳಿಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ಅವಾಂತರ ಸೃಷ್ಟಿಯಾಗಿದೆ. ಸಮೃದ್ಧ ನಗರ, ಶ್ರೀಧರ ನಗರ, ಶ್ರೀರಾಮ ಕಾಲೋನಿ ಹಾಗೂ ಅಯ್ಯಪ್ಪ ನಗರ ಬಡಾವಣೆಯ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮನೆಗಳಲ್ಲಿ ನೀರು ನಿಂತ ಪರಿಣಾಮ ದಿನಬಳಕೆಯ ವಸ್ತುಗಳು ಹಾಳಾಗಿವೆ. ನಗರದ ಪ್ರಮುಖ ಕೋಟೆ ಕೆರೆ ತುಂಬಿ ಹರಿಯುತ್ತಿದ್ದು, ಕೆರೆಯ ನೀರು ರಸ್ತೆಗಳ ಮೇಲೆ ಹರಿಯುತ್ತಿದೆ. ಇದರಿಂದ ಶಿರಸಿಯ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಜಲಾವೃತಗೊಂಡ ರಸ್ತೆಗಳಲ್ಲಿ ವಾಹನ ಸವಾರರು ಮತ್ತು ಪಾದಚಾರಿಗಳು ಸಂಚರಿಸಲು ಪರದಾಡುತ್ತಿದ್ದಾರೆ. ಹಲವು ವಾಹನಗಳು ನೀರಿನಲ್ಲಿ ಸಿಲುಕಿ ನಿಂತಿವೆ. ಮಳೆಯ ಅಬ್ಬರ ಹೀಗೆಯೇ ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಆತಂಕ ಸ್ಥಳೀಯರಲ್ಲಿ ಮನೆಮಾಡಿದೆ. ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2027: ಐಪಿಎಲ್​ಗೆ ಸ್ಟಾರ್ ಆಟಗಾರರು ಡೌಟ್! – Kannada News | IPL 2027: Australian Players Doubtful For Ipl Season 20

ಐಪಿಎಲ್ 2027ರ ಮೆಗಾ ಟೂರ್ನಿಗೆ ಮುನ್ನವೇ ಫ್ರಾಂಚೈಸಿಗಳಿಗೆ ಭಾರಿ ಆಘಾತ ಎದುರಾಗಿದೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ತ್ರಿಮೂರ್ತಿಗಳಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೇಝಲ್​ವುಡ್​ ಮುಂಬರುವ ಐಪಿಎಲ್ ಆವೃತ್ತಿಯಿಂದ ಸಂಪೂರ್ಣವಾಗಿ ಹೊರಗುಳಿಯುವ ಸಾಧ್ಯತೆಯಿದೆ. ರಾಷ್ಟ್ರೀಯ ತಂಡದ ಜವಾಬ್ದಾರಿ ಹಾಗೂ ತೀವ್ರ ಕೆಲಸದ ಒತ್ತಡ ನಿರ್ವಹಣೆಯ ಕಾರಣದಿಂದಾಗಿ ಈ ಮೂವರೂ ಆಟಗಾರರು ಐಪಿಎಲ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇವರೊಂದಿಗೆ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದಲ್ಲಿರುವ ಟ್ರಾವಿಸ್ ಹೆಡ್ ಸೇರಿದಂತೆ ಕೆಲ ಪ್ರಮುಖ ಆಟಗಾರರು ಕೂಡ ಐಪಿಎಲ್​ನ ದ್ವಿತೀಯಾರ್ಧಕ್ಕೆ ಅಲಭ್ಯರಾಗಲಿದ್ದಾರೆ.

ಈ ಬಗ್ಗೆ ಮಾತನಾಡಿರುವ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ “ಮುಂದಿನ ವರ್ಷ ನಮ್ಮ ವೇಳಾಪಟ್ಟಿ ಅತ್ಯಂತ ಬ್ಯುಸಿಯಾಗಿದೆ. ದೇಶಕ್ಕಾಗಿ ಆಡುವ ಟೆಸ್ಟ್ ಪಂದ್ಯಗಳು ಅಥವಾ ಏಕದಿನ ವಿಶ್ವಕಪ್‌ ಅನ್ನು ನಾವು ಕೈಬಿಡಲು ಸಾಧ್ಯವಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ನಾವು ಏನನ್ನಾದರೂ ಒಂದನ್ನು ತ್ಯಾಗ ಮಾಡಲೇಬೇಕಾಗುತ್ತದೆ,” ಎಂದು ಹೇಳುವ ಮೂಲಕ ಐಪಿಎಲ್​ನಿಂದ ಹಿಂದೆ ಸರಿಯುವ ಸುಳಿವು ನೀಡಿದ್ದಾರೆ.

ಹೊರಗುಳಿಯಲು ಕಾರಣವೇನು?

ಆಸ್ಟ್ರೇಲಿಯಾ ತಂಡವು 2027ರಲ್ಲಿ ಸತತವಾಗಿ ದೊಡ್ಡ ಸರಣಿಗಳನ್ನು ಆಡಬೇಕಾಗಿದೆ. ಇದೇ ಕಾರಣದಿಂದಾಗಿ ಆಟಗಾರರು ಐಪಿಎಲ್​ ವೇಳೆ ವಿಶ್ರಾಂತಿ ಪಡೆಯಲಿದ್ದಾರೆ ಎಂದು ವರದಿಯಾಗಿದೆ.

  • ಜನವರಿ-ಫೆಬ್ರವರಿಯಲ್ಲಿ ಭಾರತದ ವಿರುದ್ಧ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆಡಲಿದೆ.
  • ಮಾರ್ಚ್​ನಲ್ಲಿ ಇಂಗ್ಲೆಂಡ್ ವಿರುದ್ಧ 150ನೇ ವರ್ಷದ ಐತಿಹಾಸಿಕ ಟೆಸ್ಟ್ ಪಂದ್ಯವನ್ನಾಡಲಿದೆ.
  • ಜೂನ್-ಜುಲೈನಲ್ಲಿ ಇಂಗ್ಲೆಂಡ್‌ ವಿರುದ್ಧ ಪ್ರತಿಷ್ಠಿತ 5 ಪಂದ್ಯಗಳ ಆ್ಯಶಸ್ ಟೆಸ್ಟ್‌ ಸರಣಿ ನಡೆಯಲಿದೆ.
  • ಆಸ್ಟ್ರೇಲಿಯಾ ಅರ್ಹತೆ ಪಡೆದರೆ 2027ರ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯವಾಡಲಿದೆ.
  • ಅಕ್ಟೋಬರ್-ನವೆಂಬರ್‌ನಲ್ಲಿ ಏಕದಿನ ವಿಶ್ವಕಪ್​ನಲ್ಲೂ ಕಣಕ್ಕಿಳಿಯಬೇಕಿದೆ.

ಅಂದರೆ ಜನವರಿಯಿಂದ ಶುರುವಾಗುವ ಆಸ್ಟ್ರೇಲಿಯಾದ ವೇಳಾಪಟ್ಟಿ ನಿಲ್ಲುವುದು ನವೆಂಬರ್​ನಲ್ಲಿ. ಅಂದರೆ ಇಲ್ಲಿ ಜನವರಿ-ಜುಲೈ ನಡುವೆ ಆಸ್ಟ್ರೇಲಿಯಾ 11 ಪ್ರತಿಷ್ಠಿತ ಟೆಸ್ಟ್ ಪಂದ್ಯಗಳನ್ನಾಡಬೇಕಿದೆ. ಇದರ ನಡುವೆ, ಅಂದರೆ ಮಾರ್ಚ್-ಮೇ ನಡುವೆ ಐಪಿಎಲ್ ನಡೆಯಲಿದೆ.

ಇತ್ತ ಮೇ ಅಂತ್ಯದಲ್ಲಿ ಐಪಿಎಲ್ ಮುಗಿಸಿ ಆಸ್ಟ್ರೇಲಿಯನ್ನರು ಜೂನ್​ನಲ್ಲಿ ಟೆಸ್ಟ್ ಸರಣಿಗೆ ತೆರಳುವ ಸಾಧ್ಯತೆಯಿಲ್ಲ. ಹೀಗಾಗಿ ಪ್ಯಾಟ್ ಕಮಿನ್ಸ್, ಜೋಶ್ ಹೇಝಲ್​ವುಡ್ ಹಾಗೂ ಮಿಚೆಲ್ ಸ್ಟಾರ್ಕ್​ನಂತಹ ಪ್ರಮುಖ ವೇಗಿಗಳು ಐಪಿಎಲ್​ನಿಂದ ಹಿಂದೆ ಸರಿಯುವುದು ಖಚಿತ.

ಇನ್ನು ಟ್ರಾವಿಸ್ ಹೆಡ್​, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್ ಸೇರಿದಂತೆ ಕೆಲ ಆಟಗಾರರು ಐಪಿಎಲ್​ನ ಮೊದಲಾರ್ಧದಲ್ಲಿ ಮಾತ್ರ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅಂದರೆ ದ್ವಿತೀಯಾರ್ಧದ ಆರಂಭಕ್ಕೂ ಮುನ್ನ ಈ ಆಟಗಾರರು ಟೆಸ್ಟ್ ತಂಡವನ್ನು ಕೂಡಿಕೊಳ್ಳುವುದು ಖಚಿತ ಎಂದೇ ಹೇಳಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಐಪಿಎಲ್ 2027ರ ಸೀಸನ್ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರನ್ನು ನೆಚ್ಚಿಕೊಂಡಿರುವ ಫ್ರಾಂಚೈಸಿಗಳಿಗೆ ಅಕ್ಷರಶಃ ಅಗ್ನಿಪರೀಕ್ಷೆಯಾಗಲಿದೆ. ವಿಶ್ವಕಪ್ ಹಾಗೂ ಪ್ರತಿಷ್ಠಿತ ಆಶಸ್ ಸರಣಿಗಾಗಿ ದೇಶದ ಜವಾಬ್ದಾರಿಗೆ ಮೊದಲ ಆದ್ಯತೆ ನೀಡಿರುವ ಆಸೀಸ್ ಆಟಗಾರರ ನಿರ್ಧಾರ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದೆ.

ಇದನ್ನೂ ಓದಿ: ಏಕದಿನ ವಿಶ್ವಕಪ್​ಗೆ ಬಲಿಷ್ಠ ಭಾರತ ತಂಡ ಹೆಸರಿಸಿದ ಡಿಕೆ

ಪ್ರಮುಖ ವೇಗಿಗಳ ಸಂಪೂರ್ಣ ಗೈರು ಒಂದೆಡೆಯಾದರೆ, ಟ್ರಾವಿಸ್ ಹೆಡ್ ಮತ್ತು ಕ್ಯಾಮರೋನ್ ಗ್ರೀನ್ ಅವರಂತಹ ಮ್ಯಾಚ್ ವಿನ್ನರ್‌ಗಳು ಟೂರ್ನಿಯ ದ್ವಿತೀಯಾರ್ಧದಲ್ಲಿ ಲಭ್ಯವಿರುವುದಿಲ್ಲ ಎಂಬುದು ತಂಡಗಳ ಪ್ಲೇ-ಆಫ್ಸ್ ರಣತಂತ್ರಕ್ಕೆ ದೊಡ್ಡ ಹಿನ್ನಡೆ ತರಲಿದೆ. ಹೀಗಾಗಿಯೇ ಮಿನಿ ಹರಾಜಿನಲ್ಲಿ ಸೂಕ್ತ ಬದಲಿ ಆಟಗಾರರನ್ನು ಹುಡುಕಿ, ಹೊಸ ರಣತಂತ್ರ ಹೆಣೆಯುವುದೇ ಈಗ ಐಪಿಎಲ್​ ಫ್ರಾಂಚೈಸಿಗಳ ಮುಂದಿರುವ ಬಹುದೊಡ್ಡ ಸವಾಲು.

Source link

Video: ಸರ್ಕಾರಿ ಹುದ್ದೆಗಳ ನೇಮಕಾತಿಗೆ ಕಟ್ಟುನಿಟ್ಟಿನ ಕ್ರಮ; ಸಚಿವ ಪ್ರಿಯಾಂಕ್ ಖರ್ಗೆ ಘೋಷಣೆ – Kannada News | Karnataka Government Implements Strict Measures for 74,000 Job Recruitments

 ಬೆಂಗಳೂರು: ಕರ್ನಾಟಕದಲ್ಲಿ 74,000ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಮುಂದಿನ ಆರು ತಿಂಗಳಲ್ಲಿ 36,773 ಹುದ್ದೆಗಳಿಗೆ ಪರೀಕ್ಷೆ ನಡೆಸುವ ಗುರಿ ಹೊಂದಲಾಗಿದ್ದು, ಇದಕ್ಕೆ ಸುಮಾರು 3.5 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ.

ಕಳೆದ ದಿನಗಳಲ್ಲಿ ನಡೆದ ನೀಟ್ ಮತ್ತು ಸಿಬಿಎಸ್‌ಇ ಪರೀಕ್ಷೆಗಳಲ್ಲಿ ಎದುರಾದ ಸಮಸ್ಯೆಗಳನ್ನು ತಪ್ಪಿಸಲು, ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಸೂಚನೆಯಂತೆ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯಲು ಕೆಇಎ ಮುಖಾಂತರ ರಾಂಡಮ್ ಪ್ರಶ್ನೆ ಬ್ಯಾಂಕ್ ಸಿದ್ಧಪಡಿಸಲಾಗಿದೆ. ಇದು ಪ್ರತಿ ಪ್ರಶ್ನೆಗೆ 10 ವಿವಿಧ ಆವೃತ್ತಿಗಳನ್ನು ಒಳಗೊಂಡಿರುತ್ತದೆ. ಜೊತೆಗೆ, ಬಹು-ಲೇಯರ್ ಟ್ಯಾಂಪರ್-ಪ್ರೂಫ್ ಸೆಕ್ಯೂರಿಟಿ ಪ್ಯಾಕೇಜಿಂಗ್ ಮತ್ತು ಒಂದು ಬಾರಿ ಲಾಕ್ ಮಾಡಬಹುದಾದ ಭದ್ರತಾ ಟ್ರಂಕ್‌ಗಳನ್ನು ಬಳಸಲಾಗುವುದು. ಅಕ್ರಮ ಚಟುವಟಿಕೆಗಳನ್ನು ತಡೆಯಲು ಪರೀಕ್ಷಾ ಕೊಠಡಿಗಳಲ್ಲಿ ಜಾಮರ್‌ಗಳನ್ನು ಅಳವಡಿಸಲಾಗುತ್ತಿದೆ. ಈ ಮೂಲಕ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಖರ್ಗೆ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Source link

ಎಥನಾಲ್ ಮಿಶ್ರಣ ಇಲ್ಲದಿದ್ದರೆ ಪೆಟ್ರೋಲ್ ಬೆಲೆ ಈ ಹೊತ್ತಿಗೆ 125 ರೂಗೆ ಏರಿರುತ್ತಿತ್ತು: ಕೇಂದ್ರ ಸರ್ಕಾರ – Kannada News | Ethanol blending saved Petrol price from going too high during oil crisis, says govt

ನವದೆಹಲಿ, ಆಗಸ್ಟ್ 1: ಪೆಟ್ರೋಲ್​ಗೆ ಎಥನಾಲ್ ಬೆರೆಸುವ ಸರ್ಕಾರದ ನಿರ್ಧಾರವನ್ನು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗು ಇತರರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಎಥನಾಲ್ ಮಿಶ್ರಣ (Ethanol Blending) ಇಲ್ಲದೇ ಇದ್ದಿದ್ದರೆ ಪೆಟ್ರೋಲ್ ದುಬಾರಿಯಾಗಿ ಹೋಗುತ್ತಿತ್ತು ಎಂದು ಪೆಟ್ರೋಲಿಯಂ ಸಚಿವಾಲಯ ಹೇಳಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 135 ಡಾಲರ್‌ ತಲುಪಿದಾಗ, ಶುದ್ಧ ಪೆಟ್ರೋಲ್ ಬೆಲೆ ದೆಹಲಿಯಲ್ಲಿ ಲೀಟರ್‌ಗೆ ₹125 ದಾಟುತ್ತಿತ್ತು. ಆದರೆ ದೇಶೀಯವಾಗಿ ಪೂರೈಕೆಯಾಗುವ ಎಥನಾಲ್ ಅನ್ನು 20% ಪ್ರಮಾಣದಲ್ಲಿ (E20) ಮಿಶ್ರಣ ಮಾಡಿದ್ದರಿಂದ ಗ್ರಾಹಕರಿಗೆ ಪ್ರತಿ ಲೀಟರ್‌ಗೆ ಸುಮಾರು ₹30 ರಷ್ಟು ಉಳಿತಾಯವಾಯಿತು ಎಂದು ಸಚಿವಾಲಯವು ವಾದಿಸಿದೆ.

ಮೈಲೇಜ್ ಮತ್ತು ಇಂಜಿನ್ ಮೇಲಾಗುವ ಪರಿಣಾಮ

ಎಥನಾಲ್ ಮಿಶ್ರಣದಿಂದ ವಾಹನದ ಇಂಜಿನ್ ಹಾಳಾಗುತ್ತದೆ ಅಥವಾ ಫ್ಯುಯೆಲ್ ಪಂಪ್ ಹಾನಿಗೊಳಗಾಗುತ್ತದೆ ಎಂಬ ವದಂತಿಗಳನ್ನು ಕೇಂದ್ರ ತೈಲ ಸಚಿವಾಲಯ ತಳ್ಳಿಹಾಕಿದೆ. ದೇಶದಲ್ಲಿ ಸುಮಾರು 20 ಕೋಟಿಗೂ ಹೆಚ್ಚು ದ್ವಿಚಕ್ರ ವಾಹನಗಳು ಮತ್ತು 3 ಕೋಟಿಗೂ ಹೆಚ್ಚು ಕಾರುಗಳು ಈ ಇಂಧನದಲ್ಲಿ ಸುರಕ್ಷಿತವಾಗಿ ಚಲಿಸುತ್ತಿವೆ.

ಇದನ್ನೂ ಓದಿ: ‘ನಿಂದನೆಯಿಂದ ಏನೂ ಪರಿಹಾರವಾಗಲ್ಲ’: ನೋಯ್ಡಾ ಮಹಿಳೆಯ ಹೇಳಿಕೆ ವಿವಾದದ ನಡುವೆ ತಡರಾತ್ರಿ ಮತ್ತೊಂದು ವಿಡಿಯೋ ಹಂಚಿಕೊಂಡ ಮೋದಿ

ಮೈಲೇಜ್ ವ್ಯತ್ಯಾಸ: E10 ಇಂಧನಕ್ಕಾಗಿ ವಿನ್ಯಾಸಗೊಳಿಸಲಾದ ಹಳೆಯ ವಾಹನಗಳಲ್ಲಿ (BS-III, BS-IV, BS-VI) E20 ಪೆಟ್ರೋಲ್ ಬಳಸಿದಾಗ ಮೈಲೇಜ್‌ನಲ್ಲಿ ಕೇವಲ 2% ರಿಂದ 6% ನಷ್ಟು ಸಣ್ಣ ಪ್ರಮಾಣದ ಇಳಿಕೆ ಕಂಡುಬರಬಹುದು ಎಂದು ARAI (ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ) ವರದಿ ಸ್ಪಷ್ಟಪಡಿಸಿದೆ.

ಸಚಿವ ನಿತಿನ್ ಗಡ್ಕರಿ ಮತ್ತು ಹರ್ದೀಪ್ ಸಿಂಗ್ ಪುರಿ ಅವರ ಸ್ಪಷ್ಟನೆ

ಸಚಿವ ನಿತಿನ್ ಗಡ್ಕರಿ ಅವರು ಲೋಕಸಭೆಯಲ್ಲಿ ಮಾತನಾಡಿ, E20 ಇಂಧನ ತರುವ ಮುನ್ನ ವಾಹನ ತಯಾರಕರು ಮತ್ತು ತಜ್ಞರೊಂದಿಗೆ ವೈಜ್ಞಾನಿಕವಾಗಿ ಚರ್ಚಿಸಿ, ಇಂಜಿನ್ ಬಾಳಿಕೆ ಹಾಗೂ ಕಾರ್ಯಕ್ಷಮತೆಯನ್ನು ಪರೀಕ್ಷಿಸಿದ ನಂತರವೇ ಈ ಯೋಜನೆ ಜಾರಿಗೊಳಿಸಲಾಗಿದೆ. E20 ಬಳಕೆಯಿಂದ ಯಾವುದೇ ವಾಹನಕ್ಕೆ ಹಾನಿಯಾದ ವರದಿಯಾಗಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: LPG Cylinder price: ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ದರ ₹200ಕ್ಕೂ ಹೆಚ್ಚು ಇಳಿಕೆ

ಇದೇ ವೇಳೆ, ಬಡವರಿಗೆ ಹೋಗಬೇಕಿದ್ದ ಆಹಾರ ಧಾನ್ಯಗಳು ಎಥನಾಲ್ ಯೋಜನೆಗೆ ವರ್ಗವಾಗುತ್ತಿವೆ ಎನ್ನುವ ಆರೋಪವನ್ನು ಸಚಿವ ಹರ್ದೀಪ್ ಸಿಂಗ್ ಪುರಿ ತಳ್ಳಿಹಾಕಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಖಾಲಿ ಸೈಟ್​ಗಳಲ್ಲಿ 5 ವರ್ಷದ ಒಳಗೆ ಕಟ್ಟಡ ಕಟ್ಟಲೇಬೇಕು, ಇಲ್ಲಾಂದ್ರೆ ಡಬ್ಬಲ್ ಆಸ್ತಿ ತೆರಿಗೆ: ಸಿಎಂ ಖಡಕ್ ಸೂಚನೆ – Kannada News | Bengaluru Vacant Sites Must Have Buildings Within 5 Years, Double Property Tax for Violators: DK Shivakumar

ಬೆಂಗಳೂರು, ಆಗಸ್ಟ್ 1: ಬೆಂಗಳೂರಿನಲ್ಲಿ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಹತ್ವದ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ನಗರದ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡುವ ನಿಟ್ಟಿನಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ, ಬೆಂಗಳೂರಿನಲ್ಲಿರುವ ಖಾಲಿ ನಿವೇಶನಗಳಿಗೆ ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ಘೋಷಿಸಲಾಗಿದೆ.

ಖಾಸಗಿ ಅಥವಾ ಸರ್ಕಾರಿ ಸ್ವಾಮ್ಯದ ಯಾವುದೇ ಖಾಲಿ ನಿವೇಶನಗಳಲ್ಲಿ ಮುಂದಿನ ಐದು ವರ್ಷದೊಳಗೆ ಕಟ್ಟಡ ನಿರ್ಮಿಸುವುದು ಕಡ್ಡಾಯ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಐದು ವರ್ಷದೊಳಗೆ ಕಟ್ಟಡ ನಿರ್ಮಿಸದಿದ್ದರೆ, ಆ ನಿವೇಶನದ ಆಸ್ತಿ ತೆರಿಗೆಯನ್ನು ದುಪ್ಪಟ್ಟು ಪಾವತಿಸಬೇಕಾಗುತ್ತದೆ. ಖಾಲಿ ನಿವೇಶನಗಳು ಕಸ ಸುರಿಯುವ ತಾಣಗಳಾಗಿ ಮಾರ್ಪಡುತ್ತಿದ್ದು, ಇದರಿಂದ ಸುತ್ತಮುತ್ತಲಿನ ಪರಿಸರ ಮತ್ತು ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಇದನ್ನು ತಡೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಅಭಿಯಾನವು ಬೆಂಗಳೂರನ್ನು ಸ್ವಚ್ಛ ಮತ್ತು ಅಂದವಾದ ನಗರವನ್ನಾಗಿ ಮಾಡುವ ಗುರಿ ಹೊಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version