ಬಾಗಲಕೋಟೆ ಬೆನ್ನಲ್ಲೇ ಕಲಬುರಗಿಯಲ್ಲೂ ಶಿವಾಜಿ ಜಯಂತಿ ವೇಳೆ ಕಲ್ಲು ತೂರಾಟ: ವಿಡಿಯೋ ವೈರಲ್ – Kannada News | Kalaburagi: Stone pelting during Shivaji Jayanti celebrations after Bagalkot; video goes viral
ಕಲಬುರಗಿ, ಫೆಬ್ರವರಿ 22: ಬಾಗಲಕೋಟೆಯಲ್ಲಿ (Bagalkote) ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಗಲಾಟೆ ಮಾಸುವ ಮುನ್ನವೇ ನಿನ್ನೆ ಕಲಬುರಗಿಯಲ್ಲೂ (Kalaburagi) ಅಂತಹದೊಂದು ಗಲಾಟೆ ನಡೆದಿದೆ. ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದಲ್ಲಿ ಕೂಡ ಶಿವಾಜಿ ಜಯಂತಿ ಮೆರವಣಿಗೆ ವೇಳೆ ಡಿಜೆ ಸೌಂಡ್ ವಿಚಾರಕ್ಕೆ ಎರಡು ಕೋಮುಗಳ ಮಧ್ಯೆ ಸಂಘರ್ಷವೇ ನಡೆದಿದ್ದು, ಅಕ್ಷರಶಃ ಗ್ರಾಮ ಬೂದಿ ಮುಚ್ಚಿದ ಕೆಂಡವಾಗಿದೆ. ಮೆರವಣಿಗೆ ವೇಳೆ ಕಲ್ಲು ತೂರಾಟವಾಗಿರುವ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್…