ನಾ ಬದಲಾಗಲ್ಲ… ಅಭಿಷೇಕ್ ಶರ್ಮಾ ತಿರುಗೇಟು – Kannada News | ‘I Will Not Change’: Abhishek Sharma
ಟೀಮ್ ಇಂಡಿಯಾ ಆರಂಭಿಕ ದಾಂಡಿಗ ಅಭಿಷೇಕ್ ಶರ್ಮಾ ಫಾರ್ಮ್ನಲ್ಲಿದ್ದಾರಾ? ಈ ಪ್ರಶ್ನೆಗೆ ಉತ್ತರ ಹುಡುಕುವುದೇ ದೊಡ್ಡ ಸವಾಲು. ಏಕೆಂದರೆ ಒಬ್ಬ ಆಟಗಾರ ಫಾರ್ಮ್ನಲ್ಲಿ ಇಲ್ಲ ಎನ್ನಲು ಆತನ ಕೆಲ ಇನಿಂಗ್ಸ್ಗಳನ್ನು ನೋಡಬೇಕಾಗುತ್ತದೆ. ಇನ್ನು ಫಾರ್ಮ್ನಲ್ಲಿದ್ದಾರೆ ಎಂದು ಗೊತ್ತಾಗಲು ಒಂದೆರಡು ಇನಿಂಗ್ಸ್ ನೋಡಿದ್ರೂ ಸಾಕಾಗುತ್ತದೆ. ಆದರೆ ಅಭಿಷೇಕ್ ವಿಷಯದಲ್ಲಿ ಅವರು ಫಾರ್ಮ್ನಲ್ಲಿದ್ದಾರಾ ಅಥವಾ ಇಲ್ಲವಾ ಎಂದೇಳುವುದೇ ಕಷ್ಟಕರ. ಏಕೆಂದರೆ ಅಭಿಷೇಕ್ ಅಬ್ಬರಿಸಿದರೆ ಅದು ಸಿಡಿಲಬ್ಬರ. ಇಲ್ಲದಿದ್ದರೆ ಶೂನ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಾಕ್ಷಿ ಅವರು ಟಿ20 ವಿಶ್ವಕಪ್ಗೂ…