Exam Success Tips: ಮಕ್ಕಳ ಪರೀಕ್ಷಾ ಒತ್ತಡ ನಿವಾರಣೆಗೆ ಪೋಷಕರು ಮಾಡಬೇಕಾದ್ದು ಏನು?

ಖ್ಯಾತ ಶಿಕ್ಷಣ ತಜ್ಞರಾದ ಡಾ.ಗುರುರಾಜ ಕರ್ಜಗಿ ಯವರು ಟಿವಿ9ನ ವಿಶೇಷ ಪಾಡ್‌ಕಾಸ್ಟ್‌ನಲ್ಲಿ ಮಕ್ಕಳ ಪರೀಕ್ಷಾ ಒತ್ತಡ ನಿವಾರಣೆಗೆ ಪೋಷಕರು ಮಾಡಬೇಕಾಗಿರುವುದು ಏನು ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ. ಪರೀಕ್ಷೆ ಎನ್ನುವುದು ಮಕ್ಕಳ ಜೀವನದ ಒಂದು ಅವಿಭಾಜ್ಯ ಅಂಗ. ಆದರೆ, ಪರೀಕ್ಷಾ ಸಮಯದಲ್ಲಿ ಪೋಷಕರು ತಮ್ಮ ಮಕ್ಕಳ ಮೇಲೆ ಒತ್ತಡ ಹಾಕುವುದನ್ನು ನಿಲ್ಲಿಸಬೇಕು. ಮಾನಸಿಕ ಒತ್ತಡವು ಓದಿದ ವಿಷಯಗಳನ್ನು ನೆನಪಿಸಿಕೊಳ್ಳಲು ಅಡ್ಡಿಪಡಿಸುತ್ತದೆ. ಧ್ಯಾನ ಮತ್ತು ಪ್ರಾಣಾಯಾಮವು ಮನಸ್ಸಿನ ವಿಶ್ರಾಂತಿಗೆ ಉತ್ತಮ ಮಾರ್ಗವಾಗಿದೆ. ಪೋಷಕರು ಮಕ್ಕಳ ಜೊತೆ ಕುಳಿತುಕೊಳ್ಳಿ, ಆದರೆ “ಓದಿದ್ದೀಯಾ?” ಎಂದು ಪದೇ ಪದೇ ಕೇಳಿ ಒತ್ತಡ ಹೇರಬಾರದು. ಮಕ್ಕಳಿಗೆ ತಮ್ಮ ಸಾಮರ್ಥ್ಯದ ಬಗ್ಗೆ ಅರಿವಿರುತ್ತದೆ; ಅನಗತ್ಯ ಒತ್ತಡದಿಂದ ಅವರ ಸಾಮರ್ಥ್ಯ ಕಡಿಮೆಯಾಗಬಹುದು ಎಂದು ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಬಡ ಮಕ್ಕಳಿಗೆ ವಿದ್ಯಾ ದೇವತೆಯಾದ ಭಾರತೀಯ ಶಿಕ್ಷಕಿಗೆ ವಿಶ್ವ ಮನ್ನಣೆ: ‘ಜಾಗತಿಕ ಶಿಕ್ಷಕ ಪ್ರಶಸ್ತಿ’ ಪಡೆದ ರೂಬಲ್ ನಾಗಿ

 

ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

Ranji Trophy 2025-26: ಹುಬ್ಬಳ್ಳಿಯಲ್ಲಿ ರಣಜಿ ಫೈನಲ್​​ ಪಂದ್ಯ; ರಾಜ್ ನಗರ ಸ್ಟೇಡಿಯಂ ಬಗ್ಗೆ ನಿಮಗೆಷ್ಟು ಗೊತ್ತು? – Kannada News | Historic Ranji Final in Hubballi: KSCA Stadium Prepares for Karnataka vs Jammu and Kashmir Battle

ರಣಜಿ ಫೈನಲ್​​ ಪಂದ್ಯಕ್ಕೆ ನಡೆಯುತ್ತಿರುವ ತಯಾರಿImage Credit source: Tv9 Kannada

ಹುಬ್ಬಳ್ಳಿ, ಫೆಬ್ರವರಿ 20: ಕರ್ನಾಟಕ ಮತ್ತು ಜಮ್ಮು ಕಾಶ್ಮೀರ ನಡುವೆ ರಣಜಿ ಪೈನಲ್ ಪಂದ್ಯ ರಾಜ್ಯದಲ್ಲಿ ನಡೆಯಲಿದ್ದು, ಫೆ. 24ರಂದು ಹುಬ್ಬಳ್ಳಿ ನಗರದ ರಾಜ್ ನಗರದಲ್ಲಿರೋ KSCA ಮೈದಾನದಲ್ಲಿ ಉಭಯ ತಂಡಗಳು ಸೆಣೆಸಾಡಲಿವೆ. ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಮಾದರಿಯಲ್ಲೇ ಹುಬ್ಬಳ್ಳಿ ನಗರದ ರಾಜ್ ನಗರದಲ್ಲಿ ಕೆಎಸ್​​ಸಿಎ ಅಂತಾರಾಷ್ಟ್ರೀಯ ಮಟ್ಟದ ಸ್ಟೇಡಿಯಂ ಹೊಂದಿದ್ದು, 2012ರಲ್ಲಿ ಇದರ ಉದ್ಘಾಟನೆ ಆಗಿದೆ. ಜಹೀರ್ ಖಾನ್, ಚೇತೇಶ್ವರ ಪೂಜಾರ್ ಸೇರಿದಂತೆ ಅನೇಕ ಆಟಗಾರರು ಈ ಮೈದಾನದಲ್ಲಿ ಆಟವಾಡಿದ್ದಾರೆ.

ಮೊದಲ ಬಾರಿಗೆ ರಣಜಿ ಫೈನಲ್ ಪಂದ್ಯ

ಇಲ್ಲಿವರಗೆ ಒಂಭತ್ತು ರಣಜಿ ಪಂದ್ಯಗಳು ಹುಬ್ಬಳ್ಳಿಯಲ್ಲಿ ನಡೆದಿದ್ದು, ಮೂರು ಲಿಸ್ಟ್ ‘ಎ’ ಪಂದ್ಯಗಳು ನಡೆದಿವೆ. ಭಾರತ್-ಶ್ರೀಲಂಕಾ, ಭಾರತ‌ – ವೆಸ್ಟ್ ಇಂಡೀಸ್, ಭಾರತ-ನ್ಯೂಜಿಲೆಂಡ್ ತಂಡಗಳ ಸೆಣೆಸಾಟಕ್ಕೆ ಈ ಮೈದಾನ ಸಾಕ್ಷಿಯಾಗಿದೆ. ಆದರೆ ಇದೇ ಮೊದಲ ಬಾರಿಗೆ ರಣಜಿ ಫೈನಲ್ ಪಂದ್ಯ ಇಲ್ಲಿ ನಡೆಯುತ್ತಿದೆ.

ಇದನ್ನೂ ಓದಿ: ಕ್ಯಾಚ್ ಹಿಡಿದು, ವಿಕೆಟ್ ಪಡೆದು ವಿಶ್ವ ದಾಖಲೆ ಬರೆದ ಶಮರ್ ಜೋಸೆಫ್

16.5 ಎಕರೆ ವಿಸ್ತೀರ್ಣದಲ್ಲಿರುವ ಸ್ಟೇಡಿಯಂ

ಎಂಟು ಮುಖ್ಯ ಪಿಚ್, ಹತ್ತು ಅಭ್ಯಾಸ ಪಿಚ್ ಮತ್ತು ಎರಡು ಕಾಂಕ್ರೀಟ್​ ಪಿಚ್‌ಗಳನ್ನು ಹೊಂದಿರುವ ಈ ಸ್ಟೇಡಿಯಂ 16.5 ಎಕರೆ ವಿಸ್ತೀರ್ಣದಲ್ಲಿದೆ. ಸಾವಿರಾರು ಜನರು ಕೂತು ಪಂದ್ಯ ವೀಕ್ಷಣೆ ಮಾಡುವ ಉದ್ದೇಶದಿಂದ ಸ್ಟ್ಯಾಂಡ್ ಗಳ ನಿರ್ಮಾಣವಾಗಿದ್ದರೂ ಅವು ಬಳಕೆಯಲ್ಲಿಲ್ಲ. ಸ್ಟ್ಯಾಂಡ್ ಮೇಲೆ ನೆರಳಿನ ವ್ಯವಸ್ಥೆ ಇಲ್ಲದೇ ಇರುವ ಕಾರಣ ಪ್ರತಿಬಾರಿ ಮ್ಯಾಚ್ ನಡೆದಾಗ ಪೆಂಡಾಲ್ ಹಾಕಿ ನೆರಳಿನ ವ್ಯವಸ್ಥೆ ಮಾಡಲಾಗುತ್ತದೆ. ತಾತ್ಕಾಲಿಕ ಸ್ಟ್ಯಾಂಡ್​​ಗಳನ್ನು ಕೂಡಾ ನಿರ್ಮಿಸಲಾಗುತ್ತೆ.

ಇನ್ನು ರಣಜಿ ಪೈನಲ್ ಪಂದ್ಯ ಹುಬ್ಬಳ್ಳಿಯಲ್ಲಿ ನಡೆಯುವುದು ಪಿಕ್ಸ್ ಆಗಿರುವ ಕಾರಣ ಈಗಾಗಲೇ ಹತ್ತಕ್ಕೂ ಹೆಚ್ಚು ಸಿಬ್ಬಂದಿ ‌ಪಿಚ್‌ ಸಿದ್ದೊಗೊಳಿಸುವ ಕಾರ್ಯದಲ್ಲಿ ನಿರತವಾಗಿದ್ದು, ಕಳೆದ ಒಂದು ವಾರದಿಂದ ಈ ಸಂಬಂಧಿತ ಕೆಲಸಗಳು ನಡೆಯುತ್ತಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿರುವ KSCA ಕೂಡ ಮೈದಾನವನ್ನು ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:39 pm, Fri, 20 February 26

Source link

‘ಘುಷ್ಖೋರ್ ಪಂಡತ್’ ಹೆಸರು ಬದಲಾವಣೆಗೆ ಒಪ್ಪಿದ ನಿರ್ಮಾಪಕ; ಹೊಸ ಟೈಟಲ್ ಬಗ್ಗೆ ಹೇಳಿದ್ದೇನು? – Kannada News | Neeraj Pandey Renames ‘Ghushkhor Pandit’ After Court Order, Ends Film Title Controversy

ಬಾಲಿವುಡ್ ನಿರ್ಮಾಪಕ ನೀರಜ್ ಪಾಂಡೆ ಅವರ ‘ಘುಷ್ಖೋರ್ ಪಂಡತ್’ ಚಿತ್ರದ ಸುತ್ತಲಿನ ವಿವಾದವು ಅಂತ್ಯಗೊಳ್ಳುವ ಹಂತಕ್ಕೆ ಬಂದಿದೆ. ಮನೋಜ್ ಬಾಜಪೇಯಿ ಅವರ ಮುಂಬರುವ ಚಿತ್ರದ ಕುರಿತು ವಿವಿಧ ವರದಿಗಳು ನಿರಂತರವಾಗಿ ಹೊರಬರುತ್ತಿವೆ. ಕಳೆದ ಕೆಲವು ದಿನಗಳಿಂದ, ಬ್ರಾಹ್ಮಣ ಸಮುದಾಯವು ಚಿತ್ರದ ಶೀರ್ಷಿಕೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಎಫ್‌ಐಆರ್ ಕೂಡ ದಾಖಲಾಗಿದೆ. ಭಾರತದ ಬ್ರಾಹ್ಮಣ ಸಮಾಜದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಅತುಲ್ ಮಿಶ್ರಾ ಅವರು ಚಿತ್ರದ ಬಿಡುಗಡೆಯನ್ನು ನಿಷೇಧಿಸುವಂತೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ಈಗ, ನೀರಜ್ ನ್ಯಾಯಾಲಯದಲ್ಲಿ ಈ ಚಿತ್ರಕ್ಕೆ ಮರುನಾಮಕರಣ ಮಾಡುವುದಾಗಿ ಹೇಳಿದ್ದು, ಇದು ಹಿಂದಿನ ಚಿತ್ರಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ.

‘ಘುಷ್ಖೋರ್ ಪಂಡತ್’ ಶೀರ್ಷಿಕೆ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಜಾಹೀರಾತುಗಳನ್ನು ಹಿಂತೆಗೆದುಕೊಳ್ಳುವುದಾಗಿ ಚಲನಚಿತ್ರ ನಿರ್ಮಾಪಕ ನೀರಜ್ ಪಾಂಡೆ ಘೋಷಿಸಿದರು. ಇದರ ನಂತರ, ನ್ಯಾಯಾಲಯವು ಗುರುವಾರ ಚಿತ್ರದ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ವಜಾಗೊಳಿಸಿತು. ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ವಲ್ ಭುಯಾನ್ ಅವರ ಪೀಠವು ಪಾಂಡೆ ಅವರ ಅಫಿಡವಿಟ್ ಅನ್ನು ದಾಖಲಿಸಿಕೊಂಡ ನಂತರ ಅರ್ಜಿಯನ್ನು ವಜಾಗೊಳಿಸಿತು ಮತ್ತು ವಿವಾದ ಬಗೆಹರಿಯುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿತು.

ಚಿತ್ರಕ್ಕೆ ಹೊಸ ಶೀರ್ಷಿಕೆಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ, ಆದರೆ ಅದು ಹಿಂದಿನ ಹೆಸರಿಗೆ ಹೋಲುವಂತಿಲ್ಲ ಎಂದು ಪಾಂಡೆ ತಮ್ಮ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ‘ಘುಷ್ಖೋರ್ ಪಂಡಿತ್ ಎಂಬ ಹಿಂದಿನ ಶೀರ್ಷಿಕೆಯನ್ನು ಸ್ಪಷ್ಟವಾಗಿ ಹಿಂತೆಗೆದುಕೊಳ್ಳಲಾಗಿದೆ ಮತ್ತು ಅದನ್ನು ಯಾವುದೇ ರೀತಿಯಲ್ಲಿ ಬಳಸಲಾಗುವುದಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ. ‘ಹೊಸ ಶೀರ್ಷಿಕೆಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲವಾದರೂ, ಭವಿಷ್ಯದಲ್ಲಿ ಆಯ್ಕೆ ಮಾಡಲಾದ ಯಾವುದೇ ಹೆಸರು ಆಕ್ಷೇಪಣೆಗಳು ಎತ್ತಲ್ಪಟ್ಟ ಹಿಂದಿನ ಹೆಸರಿಗೆ ಹೋಲುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ’ ಎಂದು ಚಿತ್ರ ನಿರ್ಮಾಪಕರು ಹೇಳಿದರು.

ಇದನ್ನೂ ಓದಿ: ನೆಟ್‌ಫ್ಲಿಕ್ಸ್‌ನ ‘ಘೂಸ್‌ಖೋರ್ ಪಂಡತ್’ ವಿವಾದ: ಟೀಸರ್ ಡಿಲೀಟ್ ಮಾಡಿದ ಚಿತ್ರತಂಡ

‘ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರವು ಪ್ರಸ್ತುತ ಎಡಿಟಿಂಗ್ ಹಂತದಲ್ಲಿದೆ. ಆದ್ದರಿಂದ ಚಿತ್ರವನ್ನು ಬಿಡುಗಡೆ ಮಾಡಿಲ್ಲ. ಈ ಅರ್ಜಿಯನ್ನು ಸಲ್ಲಿಸುವಾಗ ಮೂಲ ಶೀರ್ಷಿಕೆಯೊಂದಿಗೆ ಬಿಡುಗಡೆ ಮಾಡಲಾದ ಪೋಸ್ಟರ್‌ಗಳು, ಟ್ರೇಲರ್‌ಗಳು ಮತ್ತು ಇತರ ವಸ್ತುಗಳನ್ನು ಹಿಂಪಡೆಯಲಾಗಿದೆ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ’ ಎಂದರು ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

SSLC, PUC Exam 2026: ಎಕ್ಸಾಂ ಹಾಲ್ ಟಿಕೆಟ್ ತೋರಿಸಿದ್ರೆ ಬಾಲಕರಿಗೂ ಉಚಿತ ಪ್ರಯಾಣ – Kannada News | Karnataka SSLC and PUC Exams 2026: Free Travel for Boys, Strict Anti Malpractice Measures

ಹಾಸನ, ಫೆಬ್ರವರಿ 20: 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 18 ರಿಂದ ಏಪ್ರಿಲ್ 2ರವರೆಗೆ ನಡೆಯಲಿದ್ದು, ಈ ಬಗ್ಗೆ ಹಾಸನದಲ್ಲಿ ಡಿಸಿ ಲತಾಕುಮಾರಿ ಸುದ್ದಿಗೋಷ್ಟಿ ನಡೆಸಿದರು. ಈ ಬಾರಿಯ ಪರೀಕ್ಷೆಗಳಿಗೆ ಸಂಬಂಧಿಸಿದಂತೆ, ಪರೀಕ್ಷಾ ಕೇಂದ್ರಕ್ಕೆ ತೆರಳುವ ಬಾಲಕರಿಗೆ ಹಾಲ್ ಟಿಕೆಟ್ ತೋರಿಸಿದರೆ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಆದಾಗ್ಯೂ, ಇದರ ಲಿಖಿತ ಆದೇಶ ಇನ್ನೂ ಹೊರಬಿದ್ದಿಲ್ಲ, ಆದರೆ ಕೆಎಸ್‌ಆರ್‌ಟಿಸಿಗೆ ಮಾಹಿತಿ ತಲುಪಿದೆ ಎಂದು ಡಿಸಿ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಳಗ್ಗೆ ಬ್ಯೂಟಿ ಪಾರ್ಲರ್ ಓನರ್, ಸಂಜೆ ಮೇಡಂ ಜೆಹರ್, ದೆಹಲಿಯ ಲೇಡಿ ಡಾನ್ ಬಂಧನ – Kannada News | Delhi’s Lady Don Arrested: Beauty Parlor Owner by Day, Gangster by Night

ನವದೆಹಲಿ, ಫೆಬ್ರವರಿ 20: ಲಾರೆನ್ಸ್ ಮತ್ತು ಹಾಶಿಮ್ ಬಾಬಾ ಗ್ಯಾಂಗ್‌ಗಳೊಂದಿಗೆ ಸಂಬಂಧ ಹೊಂದಿರುವ ಲೇಡಿ ಡಾನ್ ನೇಹಾಳನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಪ್ರಿಯಕರ ಗ್ಯಾಂಗ್​ಸ್ಟರ್(Gangster) ಮೆಹ್ಫೂಜ್ ಅಲಿಯಾಸ್ ಬಾಬಿ ಕಬೂತರ್​ನನ್ನು ಕೂಡ ಹರಿಯಾಣದ ಗುರುಗ್ರಾಮ್ ಪಕ್ಕದಲ್ಲಿರುವ ಮಹಿಪಾಲ್‌ಪುರದಲ್ಲಿ ಬಂಧಿಸಲಾಗಿದೆ. ದೆಹಲಿ ಪೊಲೀಸ್ ವಿಶೇಷ ದಳದಿಂದ ಬಂಧಿಸಲ್ಪಟ್ಟ ನೇಹಾಳನ್ನು ಖುಸ್ನುಮಾ ಅನ್ಸಾರಿ ಎಂದು ಕರೆಯಲಾಗುತ್ತದೆ. ಬಾಬಿ ಕಬೂತರ್ ಗ್ಯಾಂಗ್‌ನಲ್ಲಿ ಆಕೆಯನ್ನು ಮೇಡಂ ಜೆಹರ್ ಎಂದು ಕರೆಯಲಾಗುತ್ತದೆ. ಇವರಿಬ್ಬರ ಜೊತೆಗೆ, ಬಾಬಿ ಕಬೂತರ್​​ನ ಇಬ್ಬರು ಸಹಚರರಾದ ಮೊಹಮ್ಮದ್ ರಾಜಿ ಖಾನ್ ಮತ್ತು ಶಹಬಾಜ್ ಅವರನ್ನು ಸಹ ಬಂಧಿಸಲಾಗಿದೆ.

ಪೊಲೀಸರ ಪ್ರಕಾರ, ಬಾಬಿ ಕಬೂತರ್ ಗಾಯಕ ಸಿಧು ಮೂಸೆವಾಲಾ ಹತ್ಯೆಗೂ ಮುನ್ನ ಆತನ ಚಲನವಲನಗಳ ಮಾಹಿತಿಯನ್ನು ಗ್ಯಾಂಗ್​ಸ್ಟರ್​ಗೆ ಕೊಟ್ಟಿದ್ದ.​ ಪ್ರಬಾಲಿವುಡ್ ನಟಿ ದಿಶಾ ಪಟಾನಿ ಅವರ ಮನೆಯ ಮೇಲಿನ ದಾಳಿಗೆ ಶಸ್ತ್ರಾಸ್ತ್ರಗಳ ಪೂರೈಕೆಯಲ್ಲೂ ಆತನ ಕೈವಾಡವಿತ್ತು. ಖುಸ್ನುಮಾ ಅನ್ಸಾರಿ ಅಲಿಯಾಸ್ ನೇಹಾ ಅವರನ್ನು ಮಾದಕವಸ್ತು ಕಳ್ಳಸಾಗಣೆ ಮತ್ತು ಗ್ಯಾಂಗ್‌ನ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಬಂಧಿಸಲಾಗಿದೆ.

ಅವರಿಂದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನೇಹಾ ಈಶಾನ್ಯ ದೆಹಲಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು. ದೆಹಲಿಯ ಸೀಲಾಂಪುರ ಪ್ರದೇಶದಲ್ಲಿ ನಡೆದ ಡಬಲ್ ಮರ್ಡರ್ ಮತ್ತು ಗ್ರೇಟರ್ ಕೈಲಾಶ್‌ನ ಜಿಮ್‌ನ ಹೊರಗೆ ನಾದಿರ್ ಷಾ ಹತ್ಯೆಯಲ್ಲೂ ಬಾಬಿ ಕಬೂತರ್ ಆರೋಪಿಯಾಗಿದ್ದ. ದೆಹಲಿಯ ಈಶಾನ್ಯ ಪ್ರದೇಶದ ಪ್ರಮುಖ ಗ್ಯಾಂಗ್​ಸ್ಟರ್ ಹಾಶಿಮ್ ಬಾಬಾ ಮತ್ತು ಲಾರೆನ್ಸ್ ಬಿಷ್ಣೋಯ್‌ಗಾಗಿಯೂ ಅವರು ಕೆಲಸ ಮಾಡುತ್ತಿದ್ದರು.

ಮತ್ತಷ್ಟು ಓದಿ: ಅಂಜನಾದ್ರಿಯಲ್ಲೂ ಲಾರೆನ್ಸ್ ಬಿಷ್ಣೋಯಿ ಫೊಟೋ ಪ್ರತ್ಯಕ್ಷ! ತಾನು ಗ್ಯಾಂಗ್​ಸ್ಟರ್ ಅಭಿಮಾನಿ ಎಂದ ಹನುಮ ಭಕ್ತ

ಉತ್ತರ ಪ್ರದೇಶದ ಬರೇಲಿಯಲ್ಲಿರುವ ಬಾಲಿವುಡ್ ನಟಿ ದಿಶಾ ಪಟಾನಿ ಮನೆಯ ಮೇಲೆ ಗುಂಡು ಹಾರಿಸಿದ ಶೂಟರ್‌ಗಳಿಗೆ ಬಾಬಿ ಕಬೂತರ್ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಬಳಸಲಾದ ಆಯುಧಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿದೆ. ಕಬೂತರ್ ಸುಮಾರು ಒಂದು ದಶಕದಿಂದ ದೆಹಲಿ ಪೊಲೀಸರ ವಾಂಟೆಡ್ ಪಟ್ಟಿಯಲ್ಲಿದ್ದ. ಹಲವಾರು ದಾಳಿಗಳ ಹೊರತಾಗಿಯೂ ಆತ ಬಂಧನದಿಂದ ತಪ್ಪಿಸಿಕೊಂಡಿದ್ದ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

2.9 ಕೋಟಿ ರೂ ಸಂಬಳದ ಉದ್ಯೋಗ ತೊರೆದು ಅಮೆರಿಕದಿಂದ ಭಾರತಕ್ಕೆ ಬರಲು ನಿರ್ಧರಿಸಿದ ಅನಿವಾಸಿ ಭಾರತೀಯ – Kannada News | A man who left a job that paid crores and decided to come to India from America

ಓದು ಮುಗಿಯುತ್ತಿದ್ದಂತೆ ವಿದೇಶಕ್ಕೆ (foreign) ಹಾರುವ ಯುವಕ ಯುವತಿಯರು ಅಲ್ಲೇ ಸೆಟಲ್ ಆಗಲು ಬಯಸುತ್ತಾರೆ. ಆದರೆ ಭಾರತದಲ್ಲಿರುವ ಹೆತ್ತವರಿಗೆ ಮಕ್ಕಳ ಜತೆಗೆ ಇರಬೇಕೇಂಬ ಆಸೆ ಇದ್ದರೂ, ಮಕ್ಕಳ ಕನಸಿಗೆ ಅಡ್ಡಿಯಾಗಬಾರದೆನ್ನುವ ಕಾರಣ ಸುಮ್ಮನಾಗುತ್ತಾರೆ. ಆದರೆ ಅಮೆರಿಕದಲ್ಲಿ (America) ನೆಲೆಸಿರುವ ಅನಿವಾಸಿ ಭಾರತೀಯ ವ್ಯಕ್ತಿಯೊಬ್ಬರು, 2.9 ಕೋಟಿ ರೂ ಸಂಬಳ ಇರುವ ಉದ್ಯೋಗವನ್ನು ತೊರೆದು ಭಾರತಕ್ಕೆ ಬರಲು ನಿರ್ಧಾರ ಮಾಡಿದ್ದಾರೆ. ಇದಕ್ಕೆ ಮುಖ್ಯ ಕಾರಣವೇ ಆ ವ್ಯಕ್ತಿಯ ತಂದೆತಾಯಿಯಂತೆ. ಈ ಬಗ್ಗೆ ಪೋಸ್ಟ್ ಮಾಡಿ ನನ್ನ ನಿರ್ಧಾರ ಸರಿ ಇದೆಯೇ ಎಂದು ನೆಟ್ಟಿಗರಲ್ಲಿ ಸಲಹೆ ಕೇಳಿದ್ದಾರೆ.

r/returnToIndia ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಅನಿವಾಸಿ ಭಾರತೀಯರೊಬ್ಬರು, ಅಮೆರಿಕದಲ್ಲಿ ನೆಲೆಸಿದ್ದು, 12 ವರ್ಷಗಳ ನಂತರ ಭಾರತಕ್ಕೆ ಹಿಂತಿರುಗುತ್ತಿದ್ದೇನೆ. ನಾನು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆಯೇ?” ಎಂಬ ಶೀರ್ಷಿಕೆ ನೀಡಿದ್ದಾರೆ. ಆಂತರಿಕ ಉದ್ಯೋಗ ವರ್ಗಾವಣೆಯ ನಂತರ ಈ ಜೂನ್‌ನಲ್ಲಿ ತಮ್ಮ ಕುಟುಂಬವನ್ನು ನವಿ ಮುಂಬೈಗೆ ಸ್ಥಳಾಂತರಿಸಲು ನಿರ್ಧರಿಸಿದ್ದೇವೆ. ಅಮೆರಿಕದಲ್ಲಿ ತನ್ನ ಒಟ್ಟು ಆದಾಯ 2.9 ಕೋಟಿ ರೂ ಆಗಿದ್ದು, ಅಡಮಾನ ರಹಿತ ಮನೆ ಸೇರಿದಂತೆ ನಿವ್ವಳ ಮೌಲ್ಯ 1 ಮಿಲಿಯನ್ ಮೀರಿದೆ ಎಂದು ಹೇಳಿದ್ದಾರೆ.

ನನಗೆ 6 ರಿಂದ 9 ವರ್ಷ ವಯಸ್ಸಿನ 3 ಮಕ್ಕಳಿದ್ದಾರೆ. ಎಲ್ಲರೂ ಯುಎಸ್ ನಾಗರಿಕರಾಗಿದ್ದಾರೆ. ಭಾರತದಲ್ಲಿ ಈ ಉದ್ಯೋಗವು 1.5 ಕೋಟಿ ಪ್ಯಾಕೇಜ್‌ನೊಂದಿಗೆ ಬರುತ್ತದೆ. ನನ್ನ ಹೆತ್ತವರು ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ. ನನ್ನ ಮಕ್ಕಳು ಅಜ್ಜ-ಅಜ್ಜಿ ಮತ್ತು ಸೋದರಸಂಬಂಧಿಗಳ ಜತೆಯಲ್ಲಿ ಬೆಳೆಯಬೇಕೆಂದು ಬಯಸಿದ್ದಾರೆ. ಇಲ್ಲಿನ ಮನೆ ಹಾಗೂ ಅಧಿಕ ಸಂಬಳದ ಉದ್ಯೋಗ ತೊರೆಯುವುದು ಬೃಹತ್ ಬದಲಾವಣೆಯಂತೆ ಭಾಸವಾಗುತ್ತದೆ ಎಂದು ಉಲ್ಲೇಖಿಸಿದ್ದಾರೆ. ಅಮೆರಿಕದಲ್ಲಿ ಹುಟ್ಟಿ ಬೆಳೆದ ಮಕ್ಕಳು ಭಾರತದಲ್ಲಿನ ಶಾಲಾ ಶಿಕ್ಷಣಕ್ಕೆ ಹೇಗೆ ಹೊಂದಿಕೊಳ್ಳುತ್ತಾರೆ. ಇದು , ಉನ್ನತೀಕರಣದ ಹೆಜ್ಜೆಯಾಗಿ ಅಥವಾ ಕುಟುಂಬಕ್ಕಾಗಿ ನಾನು ಮಾಡಿದ ತ್ಯಾಗವಾಗಿ ನೋಡಬೇಕೇ ಎಂದು ಕೇಳಿದ್ದಾರೆ.

ಇದನ್ನೂ ಓದಿ: ದುಬೈನಿಂದ ಭಾರತಕ್ಕೆ ಮರಳಿದ ಕೇರಳದ ಮಹಿಳೆ; ಕಾರಣ ಇದೇ ನೋಡಿ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಸರಿ ಮತ್ತು ತಪ್ಪುಗಳು ಜೀವನದಲ್ಲಿ ನಿಮ್ಮ ಆದ್ಯತೆಗಳನ್ನು ಅವಲಂಬಿಸಿರುತ್ತದೆ. ಭಾರತದಲ್ಲಿ 1.5 ಕೋಟಿ ರೂ ಉತ್ತಮ ಸಂಬಳವಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಭಾರತದಲ್ಲಿ 1.5 ಕೋಟಿ ರೂ ಸಂಬಳದ ವಾರ್ಷಿಕ ಪ್ಯಾಕೇಜ್ ನೊಂದಿಗೆ ಕೆಲಸ ಸಿಕ್ಕಿರುವುದು ನಿಮ್ಮ ಪುಣ್ಯ. ಅಮೆರಿಕಕ್ಕಿಂತ ಇಲ್ಲಿನ ಜೀವನಶೈಲಿ ಉತ್ತಮವಾಗಿರುತ್ತದೆ ಎಂದು ಧೈರ್ಯ ತುಂಬಿದ್ದಾರೆ. ಮತ್ತೊಬ್ಬರು, ನಿಮ್ಮ ಇಂಡಿಯಾ ಜಾಬ್ ಪ್ಯಾಕೇಜ್ ಚೆನ್ನಾಗಿದೆ. ನೀವು ಕನಿಷ್ಠ 50 ಪ್ರತಿಶತವನ್ನು ಉಳಿಸುತ್ತೀರಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಸಿಟಿವಿಯಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ: ಸ್ಕೂಟರ್​​​​​ನಲ್ಲಿ ಬಂದ ಮಹಿಳೆಗೆ ಡಿಕ್ಕಿ ಹೊಡೆದ ಕಾರು – Kannada News | Viral Madakkal Junction Crash: Scooter Woman Thrown by Car, Road Safety Warning

ಕೇರಳ ಫೆ.20: ಮಡಕ್ಕಲ್ ಜಂಕ್ಷನ್‌ನಲ್ಲಿ (Madakkal Junction) ನಡೆದ ಭೀಕರ ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸ್ಕೂಟರ್​​​​​ನಲ್ಲಿ ಬಂದ ಮಹಿಳೆಯೊಬ್ಬರಿಗೆ ರಸ್ತೆ ಕ್ರಾಸ್​​ ಮಾಡುವ ವೇಳೆ, ವೇಗವಾಗಿ ಬಂದ ಕೆಂಪು ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಎತ್ತರಕ್ಕೆ ಗಾಳಿಯಲ್ಲಿ ಹಾರಿ ಬಿದ್ದಿದ್ದಾರೆ. ಈ ವಿಡಿಯೋವನ್ನು ಎಕ್ಸ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅಪಘಾತದ ಭೀಕರತೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆ, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ವಿಡಿಯೋ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಧುರ ಪ್ರೇಮಕ್ಕೆ 10 ವರ್ಷ; ಮೊದಲ ಭೇಟಿಯ ಫೋಟೋ ಹಂಚಿಕೊಂಡ ಚೈತ್ರಾ ಕುಂದಾಪುರ – Kannada News | Chaitra Kundapura reveals her Cute love story

ಚೈತ್ರಾ ಕುಂದಾಪುರ ಹಾಗೂ ಕಶ್ಯಪ್ ಅವರ ಮಧುರ ಪ್ರೇಮಕ್ಕೆ ಈಗ 10 ವರ್ಷ ತುಂಬಿದೆ. ಈ ಸುಂದರ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಮೊದಲ ಭೇಟಿ ಹೇಗಿತ್ತು, ನಂತರ ಅದು ಹೇಗೆ ಪ್ರೇಮಕ್ಕೆ ತಿರುಗಿತು ಎಂಬುದನ್ನು ಅವರು ವಿವರಿಸಿದ್ದಾರೆ. 10 ವರ್ಷಗಳ ಪ್ರಯಾಣವನ್ನು ಅವರು ಫೋಟೋ ಮೂಲಕವೇ ವಿವರಿಸಿದ್ದಾರೆ ಎಂಬುದು ಮತ್ತೊಂದು ವಿಶೇಷ. ಜೀವನದಲ್ಲಿ ಸಾಕಷ್ಟು ಏರಿಳಿತ ಇದ್ದರೂ ಪರಸ್ಪರ ಒಬ್ಬರಿಗೊಬ್ಬರು ಬೆಂಬಲವಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ: 8 ಆರೋಪಿಗಳ ಬಂಧನ! – Kannada News | Bagalkote Shivaji Jayanti Stone Pelting: SP Clarifies Incident, 8 Arrested

ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ: 8 ಆರೋಪಿಗಳ ಬಂಧನ!

ಬಾಗಲಕೋಟೆ, ಫೆಬ್ರವರಿ 20: ನಗರದಲ್ಲಿ ಶಿವಾಜಿ ಜಯಂತಿ ಭಾವಚಿತ್ರ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ (Stone pelting) ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್​ ಗೋಯಲ್ ಪ್ರತಿಕ್ರಿಯೆ ನೀಡಿದ್ದು, ಘಟನೆಯ ಕುರಿತ ಎಲ್ಲಾ ಮಾಹಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಬುಧವಾರ ಸಂಜೆ ನಡೆದ ಈ ಘಟನೆಯ ಹಿನ್ನೆಲೆ 8 ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ತನಿಖೆ ನಡೆಸಿದ್ದಾರೆ. ಈ ವೇಳೆ ಹೊರಬಂದ ಸತ್ಯವನ್ನು ಎಸ್ಪಿ ಮಾಧ್ಯಮದ ಮುಂದಿಟ್ಟಿದ್ದಾರೆ.

8 ಆರೋಪಿಗಳ ಬಂಧನ

ಶಿವಾಜಿ ಜಯಂತಿಯ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ್ದ ನವನಗರ ನಿವಾಸಿ ತನ್ವೀರ್ ಬಂಧಿಸಲಾಗಿದ್ದು, ಸುಮೋಟೋ ಕೇಸ್​​​ ದಾಖಲಿಸಿಕೊಂಡು FIR ಮಾಡಿದ್ದೇವೆ ಎಂದು ಎಸ್ಪಿ ಸಿದ್ಧಾರ್ಥ್​ ಹೇಳಿಕೆ ನೀಡಿದ್ದಾರೆ. ಸಿಸಿಟಿವಿ ದೃಶ್ಯ ಪರಿಶೀಲಿಸಿ 8 ಆರೋಪಿಗಳನ್ನು ಬಂಧಿಸಲಾಗಿದ್ದು, ತನ್ವೀರ್​ನನ್ನು ಹೊರತುಪಡಿಸಿ ಬೇರೆ ಯಾರೂ ಕಲ್ಲು ತೂರಾಟ ಮಾಡಿಲ್ಲವೆಂದು ಆತನೇ ಒಪ್ಪಿಕೊಂಡಿರುವುದಾಗಿ ಎಸ್ಪಿ ಹೇಳಿದ್ದಾರೆ.

ಈ ಗಲಾಟೆ ಪೂರ್ವ ಯೋಜಿತವಾಗಿದ್ದಲ್ಲ ಮತ್ತು ಡಿಜೆ ವಿಚಾರಕ್ಕಾಗಿಯಾಗಿ ಕಲ್ಲು ತೂರಾಟ ನಡೆದಿಲ್ಲ. ರಾತ್ರಿ ಸುಮಾರು 10 ಗಂಟೆ 6 ನಿಮಿಷಕ್ಕೆ ಕಲ್ಲು ತೂರಾಟವಾಗಿದ್ದು, ಈ ವೇಳೆ ನನಗೆ ಮತ್ತು ಇಬ್ಬರು ಕಾನ್ಸ್​ಟೇಬಲ್​ಗಳಿಗೆ ಗಾಯಗಳಾಗಿವೆ ಎಂದು ಎಸ್ಪಿ ತಿಳಿಸಿದ್ದಾರೆ. ಕಲ್ಲು ತೂರಾಟದ ಜೊತೆ ಚಪ್ಪಲಿಯನ್ನು ಕೂಡ ಎಸೆಯಲಾಗಿದೆ. ಮಸೀದಿ ಒಳಗೆ ಕಲ್ಲಿನಿಂದ ಶೂ ರ್ಯಾಕ್ ಮಾಡಲಾಗಿತ್ತು. ಅದೇ ರ್ಯಾಕ್ನ ಕಲ್ಲು ತೆಗೆದುಕೊಂಡು ತೂರಾಟ ನಡೆಸಲಾಗಿದೆ. ಮಸೀದಿಯೊಳಗೆ ಯಾವುದೇ ರಾಡ್ ಆಗಲಿ ಬೇರೆ ಅಸ್ತ್ರವಾಗಲಿ ಇರಲಿಲ್ಲ. ಗಲಾಟೆ ಹಿನ್ನೆಲೆ ಬಿಎನ್​​ಎಸ್​​​​​​​ 163ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಬಾಗಲಕೋಟೆ ಎಸ್​​​ಪಿ ಸಿದ್ಧಾರ್ಥ ಗೋಯಲ್ ಹೇಳಿದ್ದಾರೆ.

ಇದನ್ನೂ ಓದಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ: ಘಟನೆಗೆ ಕಾರಣ ಬಿಚ್ಚಿಟ್ಟ ಎಸ್ಪಿ

ಘಟನೆಯ ವಿವರ

  • ಸಂಜೆ 5ಗಂಟೆ: ಕೊತ್ತಲೇಶ್ವರ ದೇವಸ್ಥಾನದಿಂದ ಶಿವಾಜಿ ಭಾವಚಿತ್ರ ಮೆರವಣಿಗೆ ಆರಂಭ.
  • 9.45: ವಲ್ಲಭಭಾಯಿ ವೃತ್ತ,ಬಸವೇಶ್ವರ ಮಾರ್ಗವಾಗಿ ಪಂಕಾ ಮಸೀದಿ ಬಳಿ ಮೆರವಣಿಗೆ ಆಗಮನ
  • 9.50: ಮಸೀದಿ ಪ್ರಾರ್ಥನೆಗೆ ಬಂದಿದ್ದವರಿಂದ ಸೌಂಡ್ ಬಗ್ಗೆ ತಕರಾರು. ಪ್ರಚೋಧನಾತ್ಮಕ ಮಾತು,ಸ್ಥಳದಲ್ಲಿ ಪೊಲೀಸರಿಂದ ಸಮಾಧಾನ ಯತ್ನ
  • 10 ಗಂಟೆಗೆ: ಕಲ್ಲು ತೂರಾಟ, ಎಸ್ ಪಿ ಸಿದ್ದಾರ್ಥ ಗೋಯೆಲ್ ಹಾಗೂ ಓರ್ವ ಕಾನ್ಸ್ಟೇಬಲ್, ಓರ್ವ ಹಿಂದು ಕಾರ್ಯಕರ್ತನಿಗೆ ಗಾಯ
  • 10.15ರಿಂದ: ಹಿಂದು ಕಾರ್ತಕರ್ತರ ಬೃಹತ್ ಪ್ರತಿಭಟನೆ. ತಡೆಯಲು ಬಂದ ಪೊಲೀಸರ ಜೊತೆ ವಾಗ್ವಾದ.ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ.
  • 11 ಗಂಟೆ: ಕೊತ್ತಲೇಶ್ವರ ದೇವಸ್ಥಾನದ ಎದುರು ಹಿಂದು ಮುಖಂಡರ ಪ್ರತಿಭಟನೆ.
  • 12 ಗಂಟೆ: ಎಲ್ಲರನ್ನು ಸ್ಥಳದಿಂದ ಕಳುಹಿಸಿದ ಪೊಲೀಸರು.
  • 12.25: ತರಕಾರಿ ಮಾರುಕಟ್ಟೆಯಲ್ಲಿನ ನಾಲ್ಕು ತಳ್ಳುಗಾಡಿಗಳಿಗೆ ಬೆಂಕಿ.ಪೊಲೀಸರಿಂದ ಬೆಂಕಿ ಶಮನ.

ಇದನ್ನೂ ಓದಿ ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ: ಬಾಗಲಕೋಟೆ ಉದ್ವಿಗ್ನ

ಹಿಂದೂ ಮುಖಂಡರ ಸಭೆ

ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣದ ಹಿನ್ನೆಲೆ ಹಿಂದೂ ಮುಖಂಡರ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಮಾತನಾಡಿ,ಯಾರು ಭಾಗಿಯಾಗಿದ್ದಾರೋ ಎಲ್ಲರನ್ನೂ ಬಂಧಿಸಬೇಕು. ನಾಲ್ಕು ಮಂದಿಯನ್ನು ಮಾತ್ರ ಬಂಧಿಸುವುದರಿಂದ ಸಾಲದು. ಪ್ರಕರಣದಲ್ಲಿ ಸಂಪೂರ್ಣವಾಗಿ ತನಿಖೆ ನಡೆಸಿ ಎಲ್ಲಾ ಆರೋಪಿಗಳನ್ನೂ ಕಾನೂನು ಮುಂದಿಡಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೇಸಿಗೆಗೂ ಮುನ್ನ ಮಂತ್ರಾಲಯದಲ್ಲಿ ನೀರಿಗೆ ತತ್ವಾರ: ಭಕ್ತರ ಪುಣ್ಯಸ್ನಾನಕ್ಕೂ ಪರದಾಟ – Kannada News | Mantralayam Faces Severe Water Scarcity Ahead of Summer

ರಾಯಚೂರು, ಫೆಬ್ರವರಿ 20: ಮಂತ್ರಾಲಯದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ತೀವ್ರ ನೀರಿನ ಸಮಸ್ಯೆ ತಲೆದೋರಿದೆ. ಪುಣ್ಯಸ್ನಾನ ಮಾಡಲು ಬರುವ ರಾಯರ ಭಕ್ತರು ತುಂಗಭದ್ರಾ ನದಿಯಲ್ಲಿ ನೀರಿಲ್ಲದೆ ಪರದಾಡುತ್ತಿದ್ದಾರೆ. ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಕುಸಿದಿದ್ದು, ಜಲಾಶಯದಲ್ಲಿ ಸ್ವಲ್ಪ ಪ್ರಮಾಣದ ನೀರು ಮಾತ್ರ ಲಭ್ಯವಿದೆ. ನದಿಯ ಗೇಟುಗಳನ್ನು ಈಗಾಗಲೇ ಮುಚ್ಚಲಾಗಿದೆ. ಈ ಸಮಸ್ಯೆಯನ್ನು ನಿವಾರಿಸಲು ಮತ್ತು ಭಕ್ತರಿಗೆ ಯಾವುದೇ ಅನಾನುಕೂಲವಾಗದಂತೆ ನೋಡಿಕೊಳ್ಳಲು ಮಂತ್ರಾಲಯ ಮಠವು ಪರ್ಯಾಯ ವ್ಯವಸ್ಥೆಗಳನ್ನು ಮಾಡಿದೆ. ಮಠದ ವತಿಯಿಂದ ಬೋರ್‌ವೆಲ್‌ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಅಲ್ಲದೆ, ನದಿಯ ಮೇಲ್ಭಾಗದಲ್ಲಿ ಹರಿಯುವ ಅಲ್ಪ ಪ್ರಮಾಣದ ನೀರನ್ನು ಪಂಪ್‌ ಮಾಡಿ, ಶುದ್ಧೀಕರಿಸಿ ಕುಡಿಯಲು ಮತ್ತು ಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭವಿಷ್ಯದಲ್ಲಿ ಶವರ್‌ಗಳನ್ನೂ ಅಳವಡಿಸಿ, ಭಕ್ತರಿಗೆ ಇನ್ನಷ್ಟು ಸೌಕರ್ಯ ಒದಗಿಸಲು ಮಠವು ಯೋಜಿಸಿದೆ. ಮಂತ್ರಾಲಯಕ್ಕೆ ಬರುವ ಭಕ್ತರಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವುದಾಗಿ ಸುಭುದೇಂದ್ರ ತೀರ್ಥರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version