ಇದೆಂತಹ ಅವಮಾನ… ಪಾಕಿಸ್ತಾನ್ ತಂಡಕ್ಕೆ ‘ಬಾಬರ್’ ಭಯ
ಪಾಕಿಸ್ತಾನ್ ತಂಡದ ಸ್ಟಾರ್ ಬ್ಯಾಟರ್ ಬಾಬರ್ ಆಝಂ ಪಾಕ್ ತಂಡದಿಂದಲೇ ಭಾರೀ ಅವಮಾನಕ್ಕೆ ಒಳಗಾಗಿದ್ದಾರೆ. ಇತ್ತೀಚೆಗೆ ನಡೆದ ಬಿಗ್ ಬ್ಯಾಷ್ ಲೀಗ್ನಲ್ಲಿ ಸ್ಟೀವ್ ಸ್ಮಿತ್ ಬಾಬರ್ಗೆ ಸ್ಟ್ರೈಕ್ ನೀಡದೇ ಅವಮಾನಕ್ಕೀಡು ಮಾಡಿದ್ದರು. ಇದೀಗ ಪಾಕಿಸ್ತಾನ್ ತಂಡದ ಕೋಚ್ ಮೈಕ್ ಹೆಸ್ಸೆನ್ ನಿರ್ಣಾಯಕ ಪಂದ್ಯದಲ್ಲಿ ಬಾಬರ್ ಆಝಂ ಅವರನ್ನು ಬ್ಯಾಟಿಂಗ್ಗೆ ಕಳುಹಿಸದೇ ಡಗೌಟ್ನಲ್ಲಿ ಕೂರಿಸಿದ್ದಾರೆ. ಕೊಲಂಬೊದ ಎಸ್ಎಸ್ಸಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ನಮೀಬಿಯ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್…