ಹುಟ್ಟುಹಬ್ಬದ ದಿನ ಪ್ರಶಾಂತ್ ನೀಲ್ಗೆ ಧನ್ಯವಾದ ಹೇಳಿದ ಜೂ ಎನ್ಟಿಆರ್ – Kannada News | Jr NTR praised director Prashanth Neel on his Birthday
ಇಂದು (ಮೇ 20) ಜೂ ಎನ್ಟಿಆರ್ (Jr NTR) ಹುಟ್ಟುಹಬ್ಬ. ತಮ್ಮ 43ನೇ ಹುಟ್ಟುಹಬ್ಬವನ್ನು ಜೂ ಎನ್ಟಿಆರ್ ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಜೂ ಎನ್ಟಿಆರ್, ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಧನ್ಯವಾದ ಹೇಳಿದ್ದಾರೆ. ‘ಕೆಜಿಎಫ್’ ಅಂಥಹಾ ಬೃಹತ್ ಸಿನಿಮಾಗಳನ್ನು ನೀಡಿರುವ ಕನ್ನಡದ ಹೆಮ್ಮೆಯ ನಿರ್ದೇಶಕ ಪ್ರಶಾಂತ್ ನೀಲ್ ಈಗ ಜೂ ಎನ್ಟಿಆರ್ ನಟನೆಯ ‘ಡ್ರ್ಯಾಗನ್’ ಸಿನಿಮಾ ನಿರ್ದೇಶಿಸುತ್ತಿದ್ದು, ಆ ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿ ಭಾರಿ ವೈರಲ್ ಆಗಿದೆ….