ಸಲ್ಲು ತಂದೆ ಆರೋಗ್ಯ ಸ್ಥಿತಿ ಗಂಭೀರ? ಮೆದುಳು ಭಾಗದಲ್ಲಿ ಸರ್ಜರಿ – Kannada News | Salim Khan Hospitalized: Salman Khan’s Father in ICU with Brain Hemorrhage

ನಟ ಸಲ್ಮಾನ್ ಖಾನ್ ಅವರ ತಂದೆ ಮತ್ತು ಹಿರಿಯ ಕಥೆ ಬರಹಗಾರ ಸಲೀಂ ಖಾನ್ (Salim Khan) ಅವರನ್ನು ಮಂಗಳವಾರ (ಫೆಬ್ರವರಿ 17)ಅನಾರೋಗ್ಯದ ಕಾರಣ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ಈಗ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ ಬೆಳಿಗ್ಗೆ ಅವರ ಸ್ಥಿತಿ ಹದಗೆಟ್ಟ ನಂತರ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಅವರಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಆರಂಭಿಸಲಾಯಿತು. 90 ವರ್ಷದ ಸಲೀಂ ಖಾನ್ ಅವರ ರಕ್ತದೊತ್ತಡ ಹಠಾತ್ತನೆ ಹೆಚ್ಚಾಯಿತು. ಇದರಿಂದಾಗಿ ಅವರ ಮೆದುಳಿನ ಬಲಭಾಗದಲ್ಲಿ ಆಂತರಿಕ ರಕ್ತಸ್ರಾವವಾಗಿದೆ. ಇದರಿಂದಾಗಿ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ. ಇಂದು (ಫೆಬ್ರವರಿ 18) ಶಸ್ತ್ರಚಿಕಿತ್ಸೆ ನಡೆಯಲಿದೆ.

ಮಾಧ್ಯಮಗಳ ವರದಿಯ ಪ್ರಕಾರ, ಅಧಿಕ ರಕ್ತದೊತ್ತಡದಿಂದಾಗಿ ಅವರ ಮೆದುಳಿನ ಬಲಭಾಗದಲ್ಲಿರುವ ರಕ್ತನಾಳಗಳು ಛಿದ್ರಗೊಂಡು ಆಂತರಿಕ ರಕ್ತಸ್ರಾವಕ್ಕೆ ಕಾರಣವಾಯಿತು. ಶಸ್ತ್ರಚಿಕಿತ್ಸೆ ಮಾಡುವ ಮೂಲಕ ರಕ್ತಸ್ರಾವವನ್ನು ನಿಲ್ಲಿಸಲು ವೈದ್ಯರು ಪ್ರಯತ್ನಿಸಲಿದ್ದಾರೆ. ಮಂಗಳವಾರ ಸಂಜೆ ವೈದ್ಯಕೀಯ ಬುಲೆಟಿನ್ ಬಿಡುಗಡೆ ಮಾಡಲಾಗಿದ್ದು, ಸಲೀಂ ಖಾನ್ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಸಲ್ಮಾನ್ ಖಾನ್ ಮಂಗಳವಾರ ಆಸ್ಪತ್ರೆಗೆ ಧಾವಿಸಿದರು. ಅದಾದ ನಂತರ, ಸಲೀಂ ಖಾನ್ ಅವರ ಮೊದಲ ಪತ್ನಿ ಸಲ್ಮಾ ಮತ್ತು ಎರಡನೇ ಪತ್ನಿ ಹೆಲೆನ್ ಕೂಡ ಆಸ್ಪತ್ರೆಗೆ ಬಂದರು. ಅರ್ಬಾಜ್ ಖಾನ್, ಅಲ್ವಿರಾ ಮತ್ತು ಅರ್ಪಿತಾ ಖಾನ್, ಅಳಿಯ ಆಯುಷ್ ಶರ್ಮಾ, ಮೊಮ್ಮಕ್ಕಳಾದ ನಿರ್ವಾಣ ಮತ್ತು ಅರ್ಹಾನ್ ಎಲ್ಲರೂ ಆಸ್ಪತ್ರೆಯಲ್ಲಿದ್ದರು. ಸಂಜಯ್ ದತ್ ಕೂಡ ಆಸ್ಪತ್ರೆಗೆ ಬಂದು ಆರೋಗ್ಯ ವಿಚಾರಿಸಿದ್ದಾರೆ.

ಇದನ್ನೂ ಓದಿ: ಹೇಗಿದೆ ಸಲೀಂ ಖಾನ್ ಆರೋಗ್ಯ ಸ್ಥಿತಿ? ಸಲ್ಮಾನ್ ಖಾನ್ ತಂದೆಗೆ ಐಸಿಯುನಲ್ಲಿ ಚಿಕಿತ್ಸೆ

ಸಲೀಂ ಖಾನ್ ಬಾಲಿವುಡ್ ಉದ್ಯಮದಲ್ಲಿ ಪ್ರಸಿದ್ಧ ಚಿತ್ರಕಥೆಗಾರ. ಜಾವೇದ್ ಅಖ್ತರ್ ಅವರ ಜೋಡಿ ಬಹಳ ಪ್ರಸಿದ್ಧವಾಗಿತ್ತು. ಅವರನ್ನು ಸಲೀಂ-ಜಾವೇದ್ ಎಂದು ಕರೆಯಲಾಗುತ್ತಿತ್ತು. ಅವರು ಇತ್ತೀಚೆಗೆ ತಮ್ಮ 61 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಸಲೀಂ ಖಾನ್ 1964 ರಲ್ಲಿ ಸಲ್ಮಾ ಅವರನ್ನು ವಿವಾಹವಾದರು. ಇಬ್ಬರಿಗೆ ಸಲ್ಮಾನ್, ಅರ್ಬಾಜ್, ಸೊಹೈಲ್ ಮತ್ತು ಅಲ್ವಿರಾ ಎಂಬ ನಾಲ್ಕು ಮಕ್ಕಳಿದ್ದಾರೆ. ನಂತರ 1981 ರಲ್ಲಿ ಅವರು ನಟಿ ಹೆಲೆನ್ ಅವರನ್ನು ವಿವಾಹವಾದರು. ಸಲೀಂ ಅವರು ಅರ್ಪಿತಾ ಅವರನ್ನು ದತ್ತು ಪಡೆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸೈಲೆನ್ಸರ್​ಗಳ ಮೇಲೆ ರೋಡ್ ರೋಲರ್ ಹತ್ತಿಸಿದ್ರು ಪೊಲೀಸರು!

ಮೈಸೂರು, ಫೆಬ್ರವರಿ 18: ನಗರ ಸಂಚಾರಿ ಪೊಲೀಸರು ದೋಷಪೂರಿತ ಬೈಕ್ ಸೈಲೆನ್ಸರ್‌ಗಳ ವಿರುದ್ಧ ವಿನೂತನ ರೀತಿಯಲ್ಲಿ ಸಮರ ಸಾರಿದ್ದಾರೆ. ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಮತ್ತು ಅತಿಯಾದ ಶಬ್ದ ಮಾಲಿನ್ಯಕ್ಕೆ ಕಾರಣವಾಗಿದ್ದ ಇಂತಹ ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡು ನಾಶಪಡಿಸಿದ್ದಾರೆ. ನಗರದ ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ, ಕರ್ಕಶವಾಗಿ ಸದ್ದು ಮಾಡುತ್ತಾ ಜನರಿಗೆ ತೊಂದರೆ ನೀಡುತ್ತಿದ್ದ ಒಟ್ಟು 378 ದ್ವಿಚಕ್ರ ವಾಹನಗಳನ್ನು ಮೈಸೂರು ಪೊಲೀಸರು ವಶಕ್ಕೆ ಪಡೆದಿದ್ದವು. ಈ ಬೈಕ್‌ಗಳಲ್ಲಿ ಅಳವಡಿಸಲಾಗಿದ್ದ ದೋಷಪೂರಿತ ಸೈಲೆನ್ಸರ್‌ಗಳು, ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕ ಶಾಂತಿಗೆ ಭಂಗ ತರುತ್ತಿದ್ದವು. ಈ ಎಲ್ಲಾ ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡು ರೋಡ್ ರೋಲರ್ ಹತ್ತಿಸುವ ಮೂಲಕ ಸಂಪೂರ್ಣವಾಗಿ ನಾಶಪಡಿಸಲಾಯಿತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಬರೋಬ್ಬರಿ 4,352 ದಿನಗಳ ಬಳಿಕ ಇತಿಹಾಸ ನಿರ್ಮಿಸಿದ ನೇಪಾಳ – Kannada News | Nepal end 12 year wait in T20 World Cup 2026

ಬರೋಬ್ಬರಿ 4,352 ದಿನಗಳ ಬಳಿಕ ನೇಪಾಳ ತಂಡವು ಟಿ20 ವಿಶ್ವಕಪ್​ನಲ್ಲಿ ಪಂದ್ಯ ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ವಿಶ್ವಕಪ್ ಇತಿಹಾಸದಲ್ಲೇ ದೀರ್ಘಾವಧಿಯ ಬಳಿಕ ಮ್ಯಾಚ್ ಗೆದ್ದ ತಂಡವೆಂಬ ದಾಖಲೆಯೊಂದನ್ನು ನೇಪಾಳ ತನ್ನದಾಗಿಸಿಕೊಂಢಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್​ನ 33ನೇ ಪಂದ್ಯದಲ್ಲಿ ನೇಪಾಳ ಮತ್ತು ಸ್ಕಾಟ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ತಂಡ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 170 ರನ್​ ಕಲೆಹಾಕಿತು.

ಈ ಗುರಿಯನ್ನು ನೇಪಾಳ ತಂಡ 19.3 ಓವರ್​ಗಳಲ್ಲಿ ಚೇಸ್ ಮಾಡಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ವಿಶೇಷ ಎಂದರೆ ಇದು ನೇಪಾಳ ತಂಡದ ಮೂರನೇ ವಿಶ್ವಕಪ್ ಗೆಲುವು.

ಇದಕ್ಕೂ ಮುನ್ನ 2014 ರಲ್ಲಿ ನಡೆದ ಟಿ20 ವಿಶ್ವಕಪ್​ನ ಮೊದಲ ಸುತ್ತಿನಲ್ಲಿ ನೇಪಾಳ ತಂಡವು 2 ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಈ ಗೆಲುವಿನ ಬಳಿಕ ಮತ್ತೊಮ್ಮೆ ಜಯ ಸಾಧಿಸಲು ಬರೋಬ್ಬರಿ 4352 ದಿನಗಳನ್ನು ತೆಗೆದುಕೊಂಡಿದೆ.

ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲೇ ದೀರ್ಘಾವಧಿಯ ಬಳಿಕ ಪಂದ್ಯ ಗೆದ್ದ ಹಿರಿಮೆಯನ್ನು ನೇಪಾಳ ತನ್ನದಾಗಿಸಿಕೊಂಡಿದೆ. ಇದಕ್ಕೂ ಮುನ್ನ ಈ ದಾಖಲೆ ಐರ್ಲೆಂಡ್ ತಂಡದ ಹೆಸರಿನಲ್ಲಿತ್ತು.

2014 ರಲ್ಲಿ ಪಂದ್ಯ ಗೆದ್ದಿದ್ದ ಐರ್ಲೆಂಡ್ ತಂಡವು ಮತ್ತೊಂದು ವಿಶ್ವಕಪ್ ಗೆಲುವು ದಾಖಲಿಸಲು 2021 ರವರೆಗೆ ಕಾದಿದ್ದರು. ಅಂದರೆ ಬರೋಬ್ಬರಿ 2770 ದಿನಗಳ ಬಳಿಕ ಟಿ20 ವಿಶ್ವಕಪ್​ನಲ್ಲಿ ಗೆಲುವಿನ ನಗೆ ಬೀರಿದ್ದರು.

ಇದೀಗ 2014 ರಲ್ಲಿ ಗೆದ್ದು ಬರೋಬ್ಬರಿ 12 ವರ್ಷಗಳ ಬಳಿಕ, ಅಂದರೆ 4,352 ದಿನಗಳ ನಂತರ ನೇಪಾಳ ತಂಡವು ಗೆಲುವು ದಾಖಲಿಸಿದೆ. ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲೇ ದೀರ್ಘಾವಧಿಯ ಕಾಯುವಿಕೆಯ ಬಳಿಕ ಗೆಲುವು ದಾಖಲಿಸಿದ ತಂಡವೆಂಬ ದಾಖಲೆಯನ್ನು ನೇಪಾಳ ತನ್ನದಾಗಿಸಿಕೊಂಡಿದೆ.

 

Source link

‘ಸೂಪರ್ ಜೋಡಿ’; ಪತಿ ಜೊತೆ ಫೋಟೋ ಹಂಚಿಕೊಂಡ ಗೀತಾ ಭಾರತಿ ಭಟ್ – Kannada News | Geetha Bharathi Bhat Adorable Photo With Husband bramavara rajaram bhat

ಗೀತಾ ಭಾರತಿ ಭಟ್ ಅವರು ಕಳೆದ ವರ್ಷ ಡಿಸೆಂಬರ್​ನಲ್ಲಿ ರಾಜರಾಮ್ ಭಟ್ ಅವರನ್ನು ಮದುವೆ ಆದರು. ಮದುವೆ ಬಳಿಕವೂ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ವಿವಿಧ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾ ಇರುತ್ತಾರೆ.

ಗೀತಾ ಭಾರತಿ ಭಟ್ ಅವರು ಪತಿ ಜೊತೆ ಕಳೆದ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ. ಈ ಜೋಡಿಯನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ. ಇವರು ನೂರು ವರ್ಷ ಸುಖವಾಗಿ ಬಾಳಲಿ ಎಂದು ಹಾರೈಸಿದ್ದಾರೆ.

ಗೀತಾ ಭಾರತಿ ಭಟ್ ಅವರು ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ನಟನೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಗೀತಾ ಭಾರತಿ ಭಟ್ ಅವರು ಈಗ ನಟನೆಯಲ್ಲಿ ಅಷ್ಟು ಆ್ಯಕ್ಟೀವ್ ಆಗಿಲ್ಲ.

ಗೀತಾ ಭಾರತಿ ಭಟ್ ಅವರು ಬಾಡಿಶೇಮಿಂಗ್ ವಿರುದ್ಧ ಸಾಕಷ್ಟು ಬಾರಿ ಸಿಡಿದೆದ್ದಿದ್ದಾರೆ. ತಮಗಾದ ಕಹಿ ಅನುಭವಗಳನ್ನು ಕೂಡ ಅವರು ಹಂಚಿಕೊಂಡಿದ್ದರು. ಈಗ ಅವರನ್ನು ಅವರಾಗಿಯೇ ಒಪ್ಪಿಕೊಳ್ಳುವಂತಹ ಪತಿ ಸಿಕ್ಕಿದ್ದಾರೆ.

ಗೀತಾ ಭಾರತಿ ಭಟ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ವಿವಿಧ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾ ಇರುತ್ತಾರೆ. ಅವರನ್ನು ಇಷ್ಟಪಡುವ ಒಂದು ಅಭಿಮಾನಿ ವರ್ಗವೇ ಇದೆ.

Published On – 10:37 am, Wed, 18 February 26

Source link

ಆಸ್ತಿಗಾಗಿ ದಾಯಾದಿಗಳಿಂದಲೇ ಸಾರಿಗೆ ನೌಕರನ ಹತ್ಯೆ! ಜಮೀನಿನಲ್ಲೇ ಕೊಂದು ಪೆಟ್ರೋಲ್ ಸುರಿದು ಸುಟ್ಟ ಪಾಪಿಗಳು! – Kannada News | Hassan Property Dispute: KSRTC Driver Murdered Over 2 Acre Land

ಹಾಸನ, ಫೆಬ್ರವರಿ 18: ಆಸ್ತಿ ಕಲಹಕ್ಕೆ ಸಂಬಂಧಿಸಿ ಸಾರಿಗೆ ಇಲಾಖೆ ನೌಕರನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹಾಸನ (Hassan) ಜಿಲ್ಲೆಯ ಆಲೂರು ತಾಲೂಕಿನ ರಾಜನಹಳ್ಳಿ ಸಮೀಪ ನಡೆದಿದೆ. ಎರಡು ಎಕರೆ ಆಸ್ತಿಗಾಗಿ ಕೋರ್ಟ್​ ಮೆಟ್ಟಿಲೇರಿದ್ದ ವ್ಯಕ್ತಿಯನ್ನು ಕೇಸ್ ಮುಗಿಸಿ ಬಂದ ಸಂಜೆಯೇ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಆಲೂರು ಪೊಲೀಸರು ತನಿಖೆ ನಡೆಸಿದ್ದಾರೆ.

ಕೋರ್ಟ್​ ಕೇಸ್ ಮುಗಿಸಿ ಬಂದ ಸಂಜೆಯೇ ಹತ್ಯೆ

ಮೃತ ವೀರಪ್ಪ (58)ಕೆಎಸ್‌ಆರ್‌ಟಿಸಿ ಹಾಸನ ಡಿಪೋದಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದು, ನಿವೃತ್ತಿ ಹೊಂದುವ ಹಂತದಲ್ಲಿದ್ದರು. ಕೆಲ ವರ್ಷಗಳ ಹಿಂದೆ ವೀರಪ್ಪನ ಚಿಕ್ಕಪ್ಪ ಬಾಗಲಯ್ಯ ತನ್ನ 2 ಎಕರೆ ಆಸ್ತಿಯನ್ನು ಅವರಿಗೆ ಕೊಡುವುದಾಗಿ ದಾನಪತ್ರ ನೀಡಿದ್ದರು. ಚಿಕ್ಕಪ್ಪನ ನಿಧನದ ಬಳಿಕ ಆ ಆಸ್ತಿ ವೀರಪ್ಪನ ಹೆಸರಿಗೆ ರಿಜಿಸ್ಟರ್ ಆಗಿತ್ತು. ಆದರೆ ಆತನ ಮಕ್ಕಳಾದ ಮಲ್ಲಮ್ಮ ಹಾಗೂ ಮಹದೇವಮ್ಮ ಮತ್ತು ಅವರ ಕುಟುಂಬಸ್ಥರು ಆಸ್ತಿ ಹಂಚಿಕೆ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು.ಈ ಹಿನ್ನೆಲೆ ಮಂಗಳವಾರ ಆಲೂರು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗೆ ವೀರಪ್ಪ ಹಾಜರಾಗಿದ್ದರು.

ಹೆಚ್ಚಿನ ಮಾಹಿತಿಗೆ ವೀಡಿಯೋ ನೋಡಿ

11 ಆರೋಪಿಗಳ ವಿರುದ್ಧ ಕೇಸ್

ವಿಚಾರಣೆ ಮುಗಿಸಿ ಜಮೀನಿನ ಬಳಿ ತೆರಳಿದ್ದ ವೀರಪ್ಪರನ್ನು ಹಿಂಬಾಲಿಸಿದ ಮಲ್ಲಮ್ಮನ ಮಕ್ಕಳಾದ ಹರೀಶ ಹಾಗು ಪ್ರಕಾಶ ಮತ್ತು ಮಹದೇವಮ್ಮನ ಮಗನಾದ ಮಹದೇವ, ಹಲ್ಲೆ ನಡೆಸಿ ಕೊಲೆಗೈದು, ಬಳಿಕ ಮೃತದೇಹಕ್ಕೆ ಪೆಟ್ರೋಲ್ ಸುರಿದು ಸುಟ್ಟು ಹಾಕಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ವೀರಪ್ಪನ ಪುತ್ರ ವಿವೇಕ್ ನೀಡಿದ ದೂರಿನ ಮೇರೆಗೆ ಮಲ್ಲಮ್ಮ, ಮಹದೇವಮ್ಮ, ಹರೀಶ್, ಲೋಕೇಶ್, ಮಹದೇವ್ ಸೇರಿದಂತೆ ಒಟ್ಟು 11 ಜನರ ವಿರುದ್ಧ ಆಲೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಎಲ್ಲರಿಗೂ ಸಿದ್ದರಾಮಯ್ಯ ಉತ್ತರ ಕೊಡುತ್ತಾರೆ: ಮತ್ತೆ ಕೊಟ್ಟ ಮಾತು ನೆನಪಿಸಿದ್ರಾ ಡಿಕೆ ಶಿವಕುಮಾರ್? – Kannada News | Power Sharing Row in Karnataka Congress: DK Shivakumar Reminds Promise, Says Siddaramaiah Will Respond

ಬೆಂಗಳೂರು, ಫೆಬ್ರವರಿ 18: ಶಾಸಕರ ವಿದೇಶ ಪ್ರವಾಸದೊಂದಿಗೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಚರ್ಚೆ ಮತ್ತೆ ತೀವ್ರಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಡುವಣ ಮುಸುಕಿನ ರಾಜಕೀಯ ತಿಕ್ಕಾಟ ತೀವ್ರಗೊಂಡಿದೆ. ಡಿಕೆ ಶಿವಕುಮಾರ್ ಅವರು ಪದೇ ಪದೇ ಅಧಿಕಾರ ಹಂಚಿಕೆ ಕುರಿತು ಆದ ಒಪ್ಪಂದವನ್ನು ನೆನಪಿಸುತ್ತಿದ್ದು, ಸೂಕ್ತ ಸಮಯ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಜನರಿಗೆ ಉತ್ತರ ನೀಡುತ್ತಾರೆ ಎಂದು ಹೇಳಿದ್ದಾರೆ.

ಈ ನಡುವೆ, ಸಚಿವ ಹೆಚ್​ಸಿ ಮಹದೇವಪ್ಪ ‘ಬೀದಿ ನಾಯಿ’ ಪದ ಬಳಸಿದ್ದಕ್ಕೆ ಡಿಕೆ ಸುರೇಶ್ ಕೌಂಟರ್ ಕೊಟ್ಟಿದ್ದಾರೆ. ಕಟ್ಟಾ ಕಾಂಗ್ರೆಸ್ಸಿಗರು ನಿಯತ್ತಿನ ನಾಯಿಗಳು ಎಂದು ಡಿಕೆ ಸುರೇಶ್ ತಿರುಗೇಟು ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಅಳಿಲು ಮನೆಯೊಳಗೆ ಬಂದರೆ ಏನರ್ಥ? ಇದು ಅಶುಭ ಸೂಚನೆಯೇ? – Kannada News | Squirrels in Your Abode: Exploring the Sacred Significance in Hindu Traditions

ಅಳಿಲು ಮನೆಯೊಳಗೆ ಪ್ರವೇಶಿಸಿದರೆ ಏನಾಗುತ್ತದೆ, ಹಿಂದೂ ನಂಬಿಕೆಗಳಲ್ಲಿ ಇದರ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಅಳಿಲು ಮನೆ ಒಳಗೆ, ಕಚೇರಿಯ ಒಳಗೆ, ದೇವಸ್ಥಾನದ ಒಳಗೆ, ಅಥವಾ ಯಾವುದೇ ಕಟ್ಟಡದ ಒಳಗೆ ಬಂದರೆ ಅದು ಶುಭವೋ ಅಶುಭವೋ ಎಂಬ ಪ್ರಶ್ನೆಗೆ ಗುರೂಜಿ ಉತ್ತರ ನೀಡಿದ್ದಾರೆ.

ಹಿಂದೂ ನಂಬಿಕೆಗಳು ಮತ್ತು ಸಂಪ್ರದಾಯಗಳ ಪ್ರಕಾರ, ಅಳಿಲು ಎಂದರೆ ನಮ್ಮ ಮನಸ್ಸಿಗೆ ತಕ್ಷಣವೇ ಬರುವುದು ಶ್ರೀರಾಮಚಂದ್ರನ ಒಡನಾಡಿ ಎಂಬ ಭಾವನೆ. ಶ್ರೀರಾಮಚಂದ್ರರಿಗೆ ಸೇವೆ ಸಲ್ಲಿಸಿದ ಒಂದು ವಿಶೇಷವಾದ ಪವಿತ್ರ ಪ್ರಾಣಿ ಅಳಿಲು. ಅದೇ ರೀತಿ, ಅಳಿಲು ಲಕ್ಷ್ಮಿಯ ಸಂಕೇತವೂ ಆಗಿದೆ. ಅಳಿಲನ್ನು ನೋಡುವುದೇ ಶುಭಕರ (“ದರ್ಶನಂ ಪುಣ್ಯಂ”). ಆದರೆ ಅದನ್ನು ಸ್ಪರ್ಶಿಸಲು ಪ್ರಯತ್ನಿಸಬಾರದು. ಅಳಿಲು ಅತ್ಯಂತ ಸಾಧು ಮತ್ತು ಸೌಮ್ಯ ಪ್ರಾಣಿಯಾಗಿದ್ದರೂ, ಅದಕ್ಕೆ ಹಿಂಸೆ ಅಥವಾ ತೊಂದರೆ ನೀಡಲು ಹೋಗಬಾರದು. ಅದು ತನ್ನಷ್ಟಕ್ಕೆ ತಾನೇ ನಿಮ್ಮ ಭುಜದ ಮೇಲೆ ಕುಳಿತರೆ ಅದು ಶುಭಕರ.

ಹಾಗಾಗಿ, ಅಳಿಲು ಮನೆ ಒಳಕ್ಕೆ ಬಂದರೆ ಅದನ್ನು ಮಹಾ ಶುಭ ಎಂದು ಪರಿಗಣಿಸಲಾಗುತ್ತದೆ. ಬಂದ ದಿನ, ಸಮಯ, ತಿಥಿ, ನಕ್ಷತ್ರಗಳನ್ನು ಗಮನಿಸಿದರೆ ಇನ್ನೂ ಹೆಚ್ಚಿನ ಶುಭ ಫಲಗಳು ದೊರೆಯುತ್ತವೆ. ಮನೆಗೆ ಬಾಗಿಲು ಅಥವಾ ಕಿಟಕಿಯ ಮೂಲಕ ಅಳಿಲು ಪ್ರವೇಶಿಸುವುದು ಮಹಾ ಶುಭ ಸೂಚಕವಾಗಿದೆ. ಇಂತಹ ಸಂದರ್ಭದಲ್ಲಿ ದೊರೆಯುವ ಫಲಗಳು ಹೀಗಿವೆ: ಸಂಪತ್ತು ವೃದ್ಧಿಯಾಗುತ್ತದೆ, ದುಷ್ಟ ಜನರ ಸಹವಾಸ ಅಥವಾ ದೃಷ್ಟಿಯಿಂದ ದೂರವಿರಲು ಸಹಾಯವಾಗುತ್ತದೆ, ಆರ್ಥಿಕವಾಗಿ ಸುಧಾರಣೆಯಾಗುತ್ತದೆ ಮತ್ತು ಕೆಲಸ ಕಾರ್ಯಗಳಲ್ಲಿ ಯಶಸ್ಸು ಪ್ರಾಪ್ತವಾಗುತ್ತದೆ. ಕೆಲವೇ ದಿನಗಳಲ್ಲಿ ಅಧಿಕಾರ ಯೋಗ ಪ್ರಾಪ್ತಿಯಾಗುವ ಸಾಧ್ಯತೆಗಳೂ ಇರುತ್ತವೆ. ಅಳಿಲಿನ ಸೇವೆಯಿಂದಲೇ ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕ ಯೋಗ ಪ್ರಾಪ್ತವಾಯಿತು ಮತ್ತು ಅವರ ಸೇವಾ ಫಲವಾಗಿ ಶ್ರೀರಾಮಚಂದ್ರರಿಗೆ ಜಯವೂ ದೊರೆಯಿತು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಅಳಿಲ ದರ್ಶನವು ಜಯ ಮತ್ತು ಅದೃಷ್ಟವನ್ನು ತರುತ್ತದೆ. ಪ್ರಕೃತಿಯ ಸುಂದರ ಪ್ರಾಣಿಗಳಲ್ಲಿ ಇದೂ ಒಂದು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಅಳಿಲನ್ನು ಇಷ್ಟಪಡುತ್ತಾರೆ. ಇದು ಭಕ್ತಿಪೂರ್ವಕವಾಗಿ ಶ್ರೀರಾಮಚಂದ್ರರಿಗೆ ಸಹಾಯ ಮಾಡಿದ ಪ್ರಾಣಿ. ಆದ್ದರಿಂದ ಅಳಿಲಿಂದ ಕೀರ್ತಿ, ಪ್ರತಿಷ್ಠೆ, ಆರ್ಥಿಕ ಲಾಭ ಮತ್ತು ಮಕ್ಕಳಿಂದ ಶುಭವಾಗುತ್ತದೆ. ಅದರಲ್ಲೂ ಬೆಳಗಿನ ಜಾವ ಅಳಿಲ ದರ್ಶನವಾದರೆ ಸಂಜೆಯವರೆಗಿನ ಎಲ್ಲಾ ಕೆಲಸ ಕಾರ್ಯಗಳು ಯಶಸ್ವಿಯಾಗಿ ನೆರವೇರುತ್ತವೆ. ಅಳಿಲು ಮೈ ಮೇಲೆ ಬಿದ್ದರೂ ಸಹ ಅದನ್ನು ಒಳ್ಳೆಯದೆಂದು ಪರಿಗಣಿಸಲಾಗುತ್ತದೆ. ಅಳಿಲು ಕನಸಿನಲ್ಲಿ ಕಂಡರೆ ಅದು ಇನ್ನೂ ಉತ್ತಮ.

ಆದರೆ, ಸಾಮಾನ್ಯವಾಗಿ ಎಲ್ಲರಿಗೂ ಎದುರಾಗುವ ಒಂದು ಪ್ರಶ್ನೆಯೆಂದರೆ, ನಾವು ವಾಹನ ಚಲಾಯಿಸುವಾಗ ಅಚಾತುರ್ಯದಿಂದ ಅಳಿಲಿಗೆ ಹಾನಿಯಾದರೆ ಏನು ಮಾಡಬೇಕು? ಅಂತಹ ಸಂದರ್ಭದಲ್ಲಿ ನೀವು ಪ್ರಾಯಶ್ಚಿತ್ತ ಮಾಡಿಕೊಳ್ಳಲೇಬೇಕು. ಇದಕ್ಕಾಗಿ ಶ್ರೀರಾಮಚಂದ್ರನ ಮೆರವಣಿಗೆಯಲ್ಲಿ ಭಾಗವಹಿಸುವುದು, ರಾಮಚಂದ್ರ ಅಥವಾ ಹನುಮಾನ್ ಭಜನೆಗಳನ್ನು ಮಾಡುವುದು, ಮತ್ತು ಜನರಿಗೆ ಅನ್ನದಾನ ಮಾಡುವುದು ಬಹಳ ಶುಭಕರವಾದ ಪ್ರಾಯಶ್ಚಿತ್ತಗಳು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಕಡಲ್ ಥೆರಪಿ ಟ್ರೆಂಡ್: ಇಲ್ಲಿ ಅಪ್ಪಿಕೊಳ್ಳುತ್ತಾರೆ, ಕೈ ಹಿಡಿಯುತ್ತಾರೆ, ಗಂಟೆಗೆ 5,000 ರೂ. – Kannada News | Professional Snuggling in India: How Cuddle Therapy Fights Stress and Loneliness in Cities

ಬೆಂಗಳೂರು, ಫೆ.18: ಜೀವನದಲ್ಲಿ ತುಂಬಾ ಸೋತು, ಕೆಲಸದ ಒತ್ತಡ, ಮತ್ತೊಂದು ಕಡೆ ಮಾನಸಿಕ ನೆಮ್ಮದಿ ಇಲ್ಲದಾಗ ಒಂಟಿತನ ಕಾಡುವುದು ಸಹಜ, ಆದರೆ ಅದರಿಂದ ಹೊರಗೆ ಬರುಲು ತುಂಬಾ ಸಮಯ ತೆಗೆದುಕೊಳ್ಳುತ್ತೇವೆ. ಅದರಲ್ಲೂ ಬೆಂಗಳೂರಿಗರೇ ಈ ಎಲ್ಲ ತೊಂದರೆಗಳ ನಡುವೆ ಟ್ರಾಫಿಕ್​​​​​​ ಗೋಳು ಕೂಡ ಮಾಸನಸಿಕ ಒತ್ತಡವಾಗಿದೆ. ಅದಕ್ಕಾಗಿ ಇಂದಿನ ಯಾಂತ್ರಿಕ ಜೀವನದಲ್ಲಿ ಜನರು ಎದುರಿಸುತ್ತಿರುವ ಒಂಟಿತನ ಮತ್ತು ಒತ್ತಡವನ್ನು ನಿವಾರಿಸಲು ‘ಕಡಲ್ ಥೆರಪಿ’ ಅಥವಾ ವೃತ್ತಿಪರ ಆಲಿಂಗನ ಚಿಕಿತ್ಸೆ (Professional Snuggling) ಜನಪ್ರಿಯವಾಗುತ್ತಿದೆ. ಬೆಂಗಳೂರಿನಂತಹ ನಗರಗಳಲ್ಲಿ 32-35 ವರ್ಷ ವಯಸ್ಸಿನ ಜನರು ಹೆಚ್ಚಾಗಿ ಈ ಸೇವೆಯನ್ನು ಬಳಸುತ್ತಿದ್ದಾರೆ .

ಕಡಲ್ ಥೆರಪಿ ಎಂದರೇನು?

ಇದು ಸಂಪೂರ್ಣವಾಗಿ ಲೈಂಗಿಕೇತರ (Non-sexual), ಸ್ನೇಹಪೂರ್ವಕ ಸ್ಪರ್ಶ ಚಿಕಿತ್ಸೆಯಾಗಿದೆ. ಇದರಲ್ಲಿ ತರಬೇತಿ ಪಡೆದ ಥೆರಪಿಸ್ಟ್‌ಗಳು ಗ್ರಾಹಕರ ಜೊತೆ ಸಮಯ ಕಳೆಯುತ್ತಾರೆ. ಅವರು ಗ್ರಾಹಕರ ಕೈ ಹಿಡಿಯುವುದು, ಪಕ್ಕದಲ್ಲಿ ಕುಳಿತು ಹರಟೆ ಹೊಡೆಯುವುದು ಅಥವಾ ಆತ್ಮೀಯವಾಗಿ ಆಲಿಂಗಿಸಿಕೊಳ್ಳುವ ಮೂಲಕ ಅವರ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತಾರೆ.

ಭಾರತದಲ್ಲಿ ಈ ಟ್ರೆಂಡ್ ಹೇಗಿದೆ?

ವಿದೇಶಗಳಲ್ಲಿ ಮೊದಲೇ ಜನಪ್ರಿಯವಾಗಿದ್ದ ಈ ಚಿಕಿತ್ಸೆ ಈಗ ಭಾರತದ ಬೆಂಗಳೂರು, ದೆಹಲಿ ಮತ್ತು ಮುಂಬೈನಂತಹ ನಗರಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಈ ಸೇವೆಯನ್ನು ಪಡೆಯಲು ಗಂಟೆಗೆ ಅಥವಾ 3-4 ಗಂಟೆಗಳ ಅವಧಿಗೆ ಸುಮಾರು 5,000 ರೂಪಾಯಿಗಳವರೆಗೆ ದರ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಿಂದ 60 ದಶಲಕ್ಷ ಗುಲಾಬಿ ರಫ್ತು: ಹೂವಿನ ರಫ್ತಿನಲ್ಲಿ ದಾಖಲೆ

ಹೇಗೆ ಕೆಲಸ ಮಾಡುತ್ತದೆ?

ಚಿಕಿತ್ಸೆಯ ಮೊದಲು ಇದರಲ್ಲಿ ಭಾಗಿಯಾಗುವ ಗ್ರಾಹಕ ನಿಯಮಗಳಿಗೆ ಒಪ್ಪಿಗೆ ನೀಡಬೇಕು. ಚಿಕಿತ್ಸೆಯ ಸಮಯದಲ್ಲಿ ಪೂರ್ಣವಾಗಿ ಬಟ್ಟೆ ಧರಿಸಿರಬೇಕು. ಮುದ್ದು ಮಾಡುವುದು ಅಥವಾ ಲೈಂಗಿಕ ಸ್ಪರ್ಶಕ್ಕೆ ಇಲ್ಲಿ ಅವಕಾಶವಿಲ್ಲ.

ಮಾನವ ಸ್ಪರ್ಶದಿಂದ ದೇಹದಲ್ಲಿ ‘ಆಕ್ಸಿಟೋಸಿನ್’ (Oxytocin) ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದನ್ನು ‘ಫೀಲ್ ಗುಡ್’ ಹಾರ್ಮೋನ್ ಎನ್ನಲಾಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಿ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.

ಮುನ್ನೆಚ್ಚರಿಕೆಗಳು:

ಈ ಸೇವೆಯನ್ನು ಒದಗಿಸುವವರ ಹಿನ್ನೆಲೆಯನ್ನು ಸರಿಯಾಗಿ ಪರಿಶೀಲಿಸಬೇಕು.

ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರಿಕೆ ಇರಬೇಕು.

ಇದು ಕೇವಲ ತಾತ್ಕಾಲಿಕ ಪರಿಹಾರವಾಗಿದ್ದು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳುವುದೇ ಅತ್ಯುತ್ತಮ ಮಾರ್ಗ ಎಂದು ತಜ್ಞರು ಸಲಹೆ ನೀಡುತ್ತಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಪಾನಿಪುರಿ ಮಸಾಲೆ ಪಾತ್ರೆಯಲ್ಲಿ ಈಜಾಡಿದ ಇಲಿ – Kannada News | Viral Video From Amritsar Raises Hygiene Concerns Over Popular Street Food

ಅಮೃತಸರ, ಫೆಬ್ರವರಿ 18: ಪಂಜಾಬ್‌ನ ಅಮೃತಸರದಲ್ಲಿ ರಸ್ತೆಬದಿಯ ಅಂಗಡಿಯೊಂದರಲ್ಲಿ ಪಾನಿ ಪುರಿ ಮಸಾಲೆ ಪಾತ್ರೆಯಲ್ಲಿ ಇಲಿಯೊಂದು ಈಜಾಡಿದ ವಿಡಿಯೋ ವೈರಲ್ ಆಗಿದೆ. ಇಬ್ಬರು ಪಾನಿಪುರಿ ತಿನ್ನಲೆಂದು ಅಂಗಡಿಯಲ್ಲಿ ನಿಂತಿರುತ್ತಾರೆ ಆಗ ಮಸಾಲೆ ಪಾತ್ರೆಯಲ್ಲಿ ಇಲಿ ಇರುವುದು ಶಾಪ್ ಮಾಲೀಕ ನೋಡುತ್ತಾರೆ. ಬಳಿಕ ಮಸಾಲೆ ಪಾತ್ರೆಯಿಂದ ಅದನ್ನು ತೆಗೆದು ಕೆಳಗೆ ಹಾಕುತ್ತಾರೆ. ಗ್ರಾಹಕರು ಅದನ್ನು ನೋಡಿ ಅಲ್ಲಿಂದ ಕಾಲ್ಕೀಳುತ್ತಾರೆ. ಅಯ್ಯೋ ಇದು ಎಐ ವಿಡಿಯೋ ಆಗಿರಲಿ ಎಂದು ಪಾನಿಪುರಿ ಪ್ರಿಯರು ಬೇಡಿಕೊಳ್ಳುತ್ತಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪಾಕಿಸ್ತಾನ್ ಪಂದ್ಯ ಮಳೆಯಿಂದಾಗಿ ರದ್ದಾದ್ರೆ ಯಾರಿಗೆ ಚಾನ್ಸ್​? – Kannada News | What Happens If Namibia vs Pakistan T20 World Cup Match Washes Out

T20 World Cup 2026: ಟಿ20 ವಿಶ್ವಕಪ್​ನ 32ನೇ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಪಲ್ಲೆಕೆಲೆ ಇಂಟರ್​​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಝಿಂಬಾಬ್ವೆ ಹಾಗೂ ಐರ್ಲೆಂಡ್ ನಡುವಣ ಈ ಪಂದ್ಯವು ಸಂಪೂರ್ಣ ಮಳೆಗೆ ಆಹುತಿಯಾಗಿದ್ದು, ಹೀಗಾಗಿ ಉಭಯ ತಂಡಗಳು ಒಂದೊಂದು ಅಂಕಗಳನ್ನು ಹಂಚಿಕೊಂಡಿದೆ. ಈ ಒಂದು ಅಂಕದೊಂದಿಗೆ ಒಟ್ಟು 5 ಪಾಯಿಂಟ್ಸ್ ಗಳಿಸಿ ಝಿಂಬಾಬ್ವೆ ತಂಡ ಸೂಪರ್-8 ಹಂತಕ್ಕೇರಿದೆ. ಇತ್ತ ಪಾಕಿಸ್ತಾನ್ ಕೂಡ ಇಂದು ಕೊಲಂಬೊದಲ್ಲಿ ನಿರ್ಣಾಯಕ ಪಂದ್ಯವಾಡಬೇಕಿದೆ. ಅಂದರೆ ನಮೀಬಿಯ ವಿರುದ್ಧದ ಪಂದ್ಯದಲ್ಲಿ ಗೆದ್ದರೆ ಮಾತ್ರ ಪಾಕ್ ಪಡೆ ಮುಂದಿನ ಹಂತಕ್ಕೇರಲಿದೆ.

ಈ ಪಂದ್ಯವು ಕೊಲಂಬೊದ ಎಸ್​ಎಸ್​ಎ ಸ್ಟೇಡಿಯಂನಲ್ಲಿ ನಡೆಯಲಿರುವುದರಿಂದ ಈ ಮ್ಯಾಚ್​​ಗೂ ಮಳೆ ಭೀತಿ ಎದುರಾಗಿದೆ. ಒಂದು ವೇಳೆ ಈ ಪಂದ್ಯವು ಮಳೆಯಿಂದಾಗಿ ರದ್ದಾದರೆ ಯಾರಿಗೆ ಚಾನ್ಸ್? ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ…

  • ಪಾಕಿಸ್ತಾನ್ ಮತ್ತು ನಮೀಬಿಯ ನಡುವಣ ಪಂದ್ಯವು ಮಳೆಯಿಂದಾಗಿ ರದ್ದಾದರೆ ಪಾಕಿಸ್ತಾನ್ ತಂಡವೇ ಸೂಪರ್-8 ಹಂತಕ್ಕೇರಲಿದೆ. ಏಕೆಂದರೆ ಪಾಕ್ ತಂಡವು ಈಗಾಗಲೇ 4 ಅಂಕಗಳನ್ನು ಹೊಂದಿದ್ದು, ಇನ್ನೊಂದು ಅಂಕ ಪಡೆದರೆ 5 ಪಾಯಿಂಟ್ಸ್​​ನೊಂದಿಗೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಬಹುದು.
  • ಒಂದು ವೇಳೆ ನಮೀಬಿಯ ವಿರುದ್ಧ ಪಾಕಿಸ್ತಾನ್ ತಂಡ ಸೋತರೆ ಮಾತ್ರ ಯುಎಸ್​​ಎ ತಂಡ ಸೂಪರ್-8 ಹಂತಕ್ಕೇರಲಿದೆ. ಏಕೆಂದರೆ ಯುಎಸ್​​ಎ ತಂಡದ ನೆಟ್​ ರನ್​ ರೇಟ್ +0.787 ಇದ್ದು, ಪಾಕಿಸ್ತಾನ್ ತಂಡ -0.403 ನೆಟ್​ ರನ್ ಹೊಂದಿದೆ. ಹೀಗಾಗಿ ನಮೀಬಿಯ ವಿರುದ್ಧ ಪಾಕ್ ತಂಡ ಸೋತರೆ ನೆಟ್ ರನ್ ರೇಟ್ ಆಧಾರದ ಮೇಲೆ ಯುಎಸ್​​​ಎ ತಂಡ ಸೂಪರ್-8 ಹಂತಕ್ಕೆ ಪ್ರವೇಶಿಸಲಿದೆ.

ಅಂದರೆ ಮಳೆ ಬಂದು ಪಂದ್ಯ ರದ್ದಾದರೆ ಪಾಕಿಸ್ತಾನ್ ತಂಡ ನೇರವಾಗಿ ಸೂಪರ್-8 ಹಂತಕ್ಕೇರುವುದು ಖಚಿತ. ಹೀಗಾಗಿ ಯುಎಸ್​ಎ ಪಾಲಿಗೆ ಪಾಕ್ ಮತ್ತು ನಮೀಬಿಯ ನಡುವಣ ಪಂದ್ಯ ನಡೆಯುವುದು ಅನಿವಾರ್ಯ. ಅಲ್ಲದೆ ಈ ಪಂದ್ಯದಲ್ಲಿ ನಮೀಬಿಯ ಗೆದ್ದರೆ ಮಾತ್ರ ಯುಎಸ್​​ಎ ತಂಡ ದ್ವಿತೀಯ ಸುತ್ತಿಗೆ ಪ್ರವೇಶಿಸಲಿದೆ.

ಇದನ್ನೂ ಓದಿ: ಟೀಮ್ ಇಂಡಿಯಾದ ‘ಸೂಪರ್-8’ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

ಒಂದು ವೇಳೆ ಪಾಕಿಸ್ತಾನ್ ತಂಡವು ನಮೀಬಿಯ ವಿರುದ್ಧ ಗೆದ್ದರೆ ಅಥವಾ ಈ ಪಂದ್ಯವು ಕಾರಣಾಂತರದಿಂದ ರದ್ದಾದರೆ, ಪಾಕ್ ಪಡೆಯು ಸೂಪರ್-8 ಹಂತಕ್ಕೇರುವುದು ಖಚಿತ. ಅದರಂತೆ ಪಾಕಿಸ್ತಾನ್ ತಂಡ ಕೊನೆಯ ಲೀಗ್​ ಮ್ಯಾಚ್​ನಲ್ಲಿ ಗೆದ್ದು ಮುಂದಿನ ಹಂತಕ್ಕೇರಲಿದೆಯಾ ಕಾದು ನೋಡಬೇಕಿದೆ.

Source link

Exit mobile version