Headlines

ಕಾರನ್ನು ಕಾಪಾಡಲು ತನ್ನ ಜೀವವನ್ನೂ ಲೆಕ್ಕಿಸದ ಮಹಿಳೆ!

ನವದೆಹಲಿ, ಏಪ್ರಿಲ್ 9: ಅಲ್ಲಿ ಸಾಲಾಗಿ ಕಾರುಗಳನ್ನು ನಿಲ್ಲಿಸಲಾಗಿತ್ತು. ಅವುಗಳ ಹಿಂದೆ ಎತ್ತರವಾದ ಕಾಂಪೌಂಡ್ ಇತ್ತು. ಶಿಥಿಲವಾಗಿದ್ದ ಆ ಕಾಂಪೌಂಡ್​ ಗೋಡೆ ಇನ್ನೇನು ಬೀಳುವುದರಲ್ಲಿತ್ತು. ಇದರ ಸುಳಿವು ಸಿಕ್ಕೊಡನೆ ಮಹಿಳೆ ಓಡಿಹೋಗಿ ತನ್ನ ಕಾರನ್ನು ಆ ಸ್ಥಳದಿಂದ ತೆಗೆದಿದ್ದಾರೆ. ಆಕೆ ಕಾರನ್ನು ತೆಗೆದ ಕೆಲವೇ ಸೆಕೆಂಡುಗಳಲ್ಲಿ ಆ ಗೋಡೆ ಮಗುಚಿಬಿದ್ದಿದೆ. ಅಲ್ಲಿದ್ದ ಕಾರುಗಳೆಲ್ಲ ಆ ಗೋಡೆಯಡಿ ಹೂತುಹೋಗಿವೆ. ಆ ಮಹಿಳೆ ತನ್ನ ಪ್ರಾಣವನ್ನೂ ಲೆಕ್ಕಿಸದೆ ಕಾರನ್ನು ತೆಗೆಯಲು ಓಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ನಡೆದಿದ್ದು…

Read More

ತೀವ್ರಗೊಂಡ ಕುರ್ಚಿ ಕಿತ್ತಾಟ: ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ – Kannada News | Power Tussle In Karnataka Congress: CM Siddaramaiah supporters plan Ahinda meet in Mysuru

ಮೈಸೂರು, (ಡಿಸೆಂಬರ್ 23): ಹೈಕಮಾಂಡ್.. ಹೈಕಮಾಂಡ್.. ಹೈಕಮಾಂಡ್.. ನಾಯಕತ್ವ ಬದಲಾವಣೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ (Congress)​​ ನಾಯಕರಲ್ಲಿ ಯಾರನ್ನೇ ಕೇಳಿದರೂ ಸಹ ಎಲ್ಲರ ಬೆರಳು ನೇರವಾಗಿ ಹೈಕಮಾಂಡ್ ಕಡೆಗೆ ತಿರುಗುತ್ತೆ. ಆದ್ರೆ ಗೊಂದಲ ಬಗೆಹರಿಸಿಬೇಕಿದ್ದ ಹೈಕಮಾಂಡ್​ನ ಭಾಗವಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗೊಂದಲ ಸೃಷ್ಟಿ ಮಾಡಿದ್ದು ಹೈಕಮಾಂಡ್ ಅಲ್ಲ.ಇಲ್ಲಿ ಲೋಕಲ್ ಆಗಿ ಏನ್ ಆಗಿದೆಯೋ ಇಲ್ಲೇ ಸೆಟಲ್ ಮಾಡಿಕೊಳ್ಳಿ ಎಂದಿದ್ದಾರೆ. ಇದರಿಂದ ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್ (DK Shivakumar) ಬಣಗಳಲ್ಲಿ ಗೊಂದಲ ಸೃಷ್ಟಿಸಿದೆ. ಹೇಗಾದರೂ…

Read More

ಕೊನೆಗೂ ರಿಲೀಸ್ ಆಗ್ತಿದೆ ಸೂರ್ಯ ಸಿನಿಮಾ; ಈಗಾದ್ರೂ ಸಿಗುತ್ತಾ ಗೆಲುವು?

ತಮಿಳು ನಟ ಸೂರ್ಯ (Suriya) ಅವರು ಇತ್ತೀಚೆಗೆ ದೊಡ್ಡ ಗೆಲುವು ಕಂಡಿಲ್ಲ. ಅವರ ನಟನೆಯ ‘ಕರುಪ್ಪು’ ಚಿತ್ರ ಹಲವು ಸಮಯದಿಂದ ಮುಂದಕ್ಕೆ ಹೋಗುತ್ತಲೇ ಇತ್ತು. ಕೊನೆಗೂ ಅದಕ್ಕೆ ಬಿಡುಗಡೆ ಭಾಗ್ಯ ಸಿಕ್ಕಿದೆ. ‘ಕರುಪ್ಪು’ ಸಿನಿಮಾ ಮೇ 15ರಂದು ತೆರೆಗೆ ಬರುತ್ತಿದೆ. ಈಗ ಹೊಸ ಪೋಸ್ಟರ್ ಹಂಚಿಕೊಂಡು ಸಿನಿಮಾ ರಿಲೀಸ್ ದಿನಾಂಕವನ್ನು ರಿವೀಲ್ ಮಾಡಲಾಗಿದೆ. ಇದು ಅವರ ಅಭಿಮಾನಿಗಳ ಖುಷಿಗೆ ಕಾರಣ ಆಗಿದೆ. 2020ರಲ್ಲಿ ರಿಲೀಸ್ ಆದ ಸೂರ್ಯ ನಟನೆಯ ‘ಸೂರರೈ ಪೊಟ್ರು’ ಸಿನಿಮಾ ಮೆಚ್ಚುಗೆ ಪಡೆಯಿತು. ಇದಾದ…

Read More

RailOne app : ರೈಲು ಪ್ರಯಾಣಿಕರೇ ಗಮನಿಸಿ; ಹಲವು ಆ್ಯಪ್​ಗಳ ಬದಲು ಈ ಒಂದೇ ಆ್ಯಪ್​ನಲ್ಲಿ ಸಿಗಲಿದೆ ಎಲ್ಲ ರೈಲ್ವೆ ಸೇವೆ – Kannada News | Indian Railways newly launched RailOne app for ticket booking replacing UTS

ನವದೆಹಲಿ, ಫೆಬ್ರವರಿ 14: ಪ್ರಯಾಣಿಕರು ದೀರ್ಘಕಾಲ ವೇಂಟಿಂಗ್​ನಲ್ಲಿರಬೇಕಾದ, ಸರತಿ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆಯನ್ನು ತಪ್ಪಿಸಲು ಭಾರತೀಯ ರೈಲ್ವೆ (Indian Railways) ಹೊಸ ಆ್ಯಪ್ ಒಂದನ್ನು ಬಿಡುಗಡೆ ಮಾಡಿದೆ. ತಮ್ಮ ಸ್ಮಾರ್ಟ್‌ಫೋನ್‌ಗಳ ಮೂಲಕ ಕಾಯ್ದಿರಿಸದ, ಪ್ಲಾಟ್‌ಫಾರ್ಮ್ ಮತ್ತು ಸೀಸನ್ ಟಿಕೆಟ್‌ಗಳನ್ನು ಖರೀದಿಸಲು ಅನುವು ಮಾಡಿಕೊಡಲು ಭಾರತೀಯ ರೈಲ್ವೆ ಕಾಯ್ದಿರಿಸದ ಟಿಕೆಟಿಂಗ್ ಸಿಸ್ಟಮ್ ಅಥವಾ ಯುಟಿಎಸ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಈಗ ಯುಟಿಎಸ್ ಅಪ್ಲಿಕೇಶನ್ ಅನ್ನು ತೆಗೆದುಹಾಕಲಾಗುತ್ತಿದೆ. ರೈಲ್ವೆ ಇಲಾಖೆ ರೈಲ್‌ಒನ್ ಅಪ್ಲಿಕೇಶನ್ ಅನ್ನು ಪರಿಚಯಿಸುತ್ತಿದೆ. ಇದರ ಮೂಲಕ ಎಲ್ಲ…

Read More

Judicial Separation: ನಿಮ್ಮ ವಿವಾಹಕ್ಕೆ ತಾತ್ಕಾಲಿಕ ಬ್ರೇಕ್ ಕೊಡುವ ಕಾನೂನು ಮಾರ್ಗಗಳು: ಅಡ್ವೊಕೇಟ್ ಅನಿಕ್ – Kannada News | Legal Ways to Break Your Marriage by Advocate Anik M Iktear Uddin

ಅಡ್ವೊಕೇಟ್ ಅನಿಕ್ ಎಂ ಇಕ್ತಿಯಾರ್ ಉದ್ದಿನ್ ಅಡ್ವೊಕೇಟ್ ಅನಿಕ್ ಎಂ ಇಕ್ತಿಯಾರ್ ಉದ್ದಿನ್ (Advocate Anik M Iktear Uddin) ಪ್ರೈಮ್ ಲೀಗಲ್‌ ಎನ್ನುವ ಕಾನೂನು ಸಂಸ್ಥೆಯ ಸಹ-ಸಂಸ್ಥಾಪಕರಾಗಿದ್ದಾರೆ. ಇವರ ಪತ್ನಿ ಹಾಗೂ ಪಾರ್ಟ್ನರ್ ಆದ ಅಡ್ವೊಕೇಟ್ ಆಯಂತಿಕಾ ಮಂಡಲ್ ಜೊತೆ ಸೇರಿ ನಡೆಸುತ್ತಿರುವ ಈ ಸಂಸ್ಥೆ ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿದ್ದು, ದೇಶಾದ್ಯಂತ ಕಚೇರಿಗಳನ್ನು ಹೊಂದಿದೆ. ಕ್ರಿಮಿನಲ್ ಲಾ, ಸೈಬರ್ ಕ್ರೈಮ್, ಗೃಹ ಕಿರುಕುಳ, ಫ್ಯಾಮಿಲಿ ಲಾ ಮೊದಲಾದ ಕಾನೂನು ಕ್ಷೇತ್ರಗಳಲ್ಲಿ ಪ್ರೈಮ್ ಲೀಗಲ್ ಹೆಸರುವಾಸಿಯಾಗಿದೆ….

Read More

600 ಕ್ಕೂ ಹೆಚ್ಚು ರನ್‌ಗಳ ಹ್ಯಾಟ್ರಿಕ್; ಮಹಾ ದಾಖಲೆ ಬರೆದ ದೇವದತ್ ಪಡಿಕ್ಕಲ್

ವಿಜಯ್ ಹಜಾರೆ ಟ್ರೋಫಿಯಲ್ಲಿ ತನ್ನ ಆರನೇ ಪಂದ್ಯವನ್ನು ಆಡಿದ ಕರ್ನಾಟಕ ತಂಡ ರಾಜಸ್ಥಾನ ವಿರುದ್ಧ 150 ರನ್​ಗಳ ಜಯ ಸಾಧಿಸಿದೆ. ಎಂದಿನಂತೆ ಈ ಪಂದ್ಯದಲ್ಲೂ ಕರ್ನಾಟಕ ಪರ ಮಿಂಚಿದ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ 82 ಎಸೆತಗಳಲ್ಲಿ 91 ರನ್​ಗಳ ಇನ್ನಿಂಗ್ಸ್ ಆಡಿದರು. ಆದರೆ ಕೇವಲ 9 ರನ್​ಗಳಿಂದ ಈ ಟೂರ್ನಿಯ ಐದನೇ ಶತಕದಿಂದ ವಂಚಿತರಾದರು. ಆದಾಗ್ಯೂ ಈ ಪಂದ್ಯದಲ್ಲಿ ಪಡಿಕ್ಕಲ್ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದರು. ಪ್ರಸ್ತುತ ಈ ಟೂರ್ನಿಯಲ್ಲಿ ಆಡಿರುವ 6 ಪಂದ್ಯಗಲ್ಲಿ 600 ಕ್ಕೂ…

Read More

LA 2028 Olympics: ಕ್ರಿಕೆಟ್ ಅರ್ಹತಾ ನಿಯಮಗಳು ಪ್ರಕಟ; ಯಾವೆಲ್ಲ ತಂಡಗಳಿಗೆ ಸಿಕ್ಕಿದೆ ಸ್ಥಾನ? – Kannada News | LA28 Olympic Cricket: ICC and IOC Announce Qualification Criteria for Men’s and Women’s Teams

ಬರೋಬ್ಬರಿ 128 ವರ್ಷಗಳ ನಂತರ ಒಲಿಂಪಿಕ್ಸ್​ಗೆ ಕ್ರಿಕೆಟ್ ಮರಳುತ್ತಿದೆ. 2028 ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಅನ್ನು ಕೂಡ ಒಂದು ಕ್ರೀಡೆಯಾಗಿ ಸೇರಿಸಲಾಗಿದೆ. ಇದೀಗ ಐಸಿಸಿ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅರ್ಹತಾ ಮಾನದಂಡಗಳನ್ನು ಘೋಷಿಸಿವೆ. ಅಂದರೆ 2028 ರ ಒಲಿಂಪಿಕ್ಸ್​ಗೆ ತಂಡಗಳನ್ನು ಯಾವ ಮಾನದಂಡಗಳ ಮೇಲೆ ಆಯ್ಕೆ ಮಾಡಲಾಗುತ್ತದೆ ಎಂಬುದನ್ನು ಈ ಎರಡು ಸಮಿತಿಗಳು ಜಂಟಿಯಾಗಿ ಸ್ಪಷ್ಟಪಡಿಸಿವೆ. ಅದರಂತೆ ಮುಂಬರುವ ಒಲಿಂಪಿಕ್ಸ್​ನಲ್ಲಿ ಪುರುಷ ಮತ್ತು ಮಹಿಳಾ ಎರಡೂ ವಿಭಾಗಗಳಲ್ಲಿ ತಲಾ ಆರು ತಂಡಗಳು…

Read More

ಹಿಂದಿ ಗೊಂದಲ: SSLC ಫಲಿತಾಂಶ ವಿಳಂಬ, ಸಚಿವ ಮಧು ಬಂಗಾರಪ್ಪ ಹೇಳಿದ್ದೇನು? – Kannada News | SSLC Hindi Language Row: Madhu Bangarappa Reacts Over Karnataka High Court Halting Midway Grading Shift

ಬೆಂಗಳೂರು, (ಏಪ್ರಿಲ್ 21): ಎಸ್‌ಎಸ್‌ಎಲ್‌ಸಿ ಹಿಂದಿ (SSLC Hindi) ವಿಷಯಕ್ಕೆ ಗ್ರೇಡ್ ಬದಲಿಗೆ ಅಂಕ ನೀಡುವಂತೆ ಆದೇಶ ಸಂಬಂಧ ರಾಜ್ಯ ಸರ್ಕಾರದ ಮರುಪರಿಶೀಲನಾ ಅರ್ಜಿಯನ್ನು ಹೈಕೋರ್ಟ್​​ (Karnataka High Court) ಇತ್ಯರ್ಥಪಡಿಸಿದೆ. 2025-26ರಿಂದ ಹಿಂದಿ ವಿಷಯಕ್ಕೆ ಅಂಕ ನೀಡಬೇಕೆಂದು ಪೀಠ ಸ್ಪಷ್ಟಪಡಿಸಿದ್ದು, ನೀವು ಎಲ್ಲರನ್ನೂ ಪಾಸ್ ಮಾಡಬೇಕೆಂದಿದ್ದರೆ ಪರೀಕ್ಷೆಯನ್ನೇ ರದ್ದು ಮಾಡಿ. ನಿಯಮ ರೂಪಿಸುವ ಮುನ್ನ ಪರೀಕ್ಷಾ ಪದ್ಧತಿ ಬದಲಾವಣೆ ಸೂಕ್ತವಲ್ಲ ಎಂದು ತಿಳಿಸಿದೆ. ಇನ್ನು ಈ ಹೈಕೋರ್ಟ್ ಆದೇಶದ ಬಗ್ಗೆ ಸಿಎಂ ಜತೆ ಮಾತನಾಡುವುದಾಗಿ ಸಚಿವ…

Read More

ಮಂಡ್ಯ: ಜಿಂಕೆ ನುಂಗಿದ್ದ 10 ಅಡಿ ಉದ್ದದ ಬೃಹತ್ ಹೆಬ್ಬಾವು ಸೆರೆ! – Kannada News | 10 Foot Long Python Swallows Deer, Rescued Near Water Pipeline

ಮಂಡ್ಯ, ಮೇ 25: ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ಬೆಂಗಳೂರು ಜಲಮಂಡಳಿಯ ನೀರು ಸರಬರಾಜು ಮಾಡುವ ಪೈಪ್‌ಲೈನ್ ಬಳಿ ಬೃಹತ್ ಗಾತ್ರದ ಹೆಬ್ಬಾವೊಂದು ಪತ್ತೆಯಾಗಿದೆ. ಸುಮಾರು 10 ಅಡಿ ಉದ್ದ ಹಾಗೂ 30 ಕೆಜಿಗೂ ಹೆಚ್ಚು ತೂಕವಿದ್ದ ಈ ಹೆಬ್ಬಾವು, ಜಿಂಕೆಯೊಂದನ್ನು ಸಂಪೂರ್ಣವಾಗಿ ನುಂಗಿ ಮುಂದೆ ಹೋಗಲಾರದೆ ಒಂದೇ ಕಡೆ ಮಲಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಉರಗ ತಜ್ಞರು ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆಹಿಡಿದು, ಮುತ್ತತ್ತಿ ಅರಣ್ಯ…

Read More

ಇಂದು ಆದಿಚುಂಚನಗಿರಿ ಕ್ಷೇತ್ರಕ್ಕೆ ಬರ್ತಿದ್ದಾರೆ ಪ್ರಧಾನಿ ಮೋದಿ! ಮಠದ ಸುತ್ತಲೂ ಸೆಕ್ಯೂರಿಟಿ ಹೇಗಿದೆ ನೋಡಿ! – Kannada News | PM Modis Historic Visit to Adichunchanagiri: Bhairavaikya Mandira Inauguration and High Security

ಮಂಡ್ಯ, ಏಪ್ರಿಲ್ 15: ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಲು ಸಕಲ ಸಿದ್ಧತೆಗಳು ನಡೆದಿವೆ. ಪ್ರಧಾನಿಗಳು ಶ್ರೀ ಗುರು ಭೈರವೈಕ್ಯ ಮಂದಿರವನ್ನು ಉದ್ಘಾಟಿಸಲಿದ್ದಾರೆ. ಇದು ಆದಿಚುಂಚನಗಿರಿಗೆ ಮೋದಿಯ ಮೊದಲ ಭೇಟಿಯಾಗಿದೆ. ಪ್ರಧಾನಿಯ ಸ್ವಾಗತಕ್ಕಾಗಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಮುಖಂಡರು ಫ್ಲೆಕ್ಸ್ ಹಾಕಿ ಸ್ವಾಗತ ಕೋರಿದ್ದಾರೆ. ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಯಿದೆ. ಪ್ರಧಾನಿಗಳ ಭೇಟಿಯ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಆರು ಎಸ್ಪಿಗಳು, ಎಂಟು…

Read More