ಈ ಊರಲ್ಲಿ ದೇವಿ ಜಾತ್ರೆ ಮಾಡಬೇಕಂದ್ರೆ ಜನ ಐದು ದಿನ ಮನೆ ಖಾಲಿಮಾಡಬೇಕು!: ಕಾರಣ ಇಲ್ಲಿದೆ – Kannada News | Villagers Vacate Homes for 5 Days During Unique Gramadevi Fair in Kalaghatagi, Dharwad
ಮನೆಗಳಿಗೆ ಬೀಗ, ಊರಿಗೆ ಊರೇ ಖಾಲಿ ಖಾಲಿImage Credit source: Tv9 Kannada ಹುಬ್ಬಳ್ಳಿ, ಫೆಬ್ರವರಿ 17: ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ಎಲ್ಲಿ ನೋಡಿದ್ರೂ ಜನರು ಹೆಂಡತಿ ಮಕ್ಕಳನ್ನು ಕರೆದುಕೊಂಡು ಮನೆ ತೊರೆಯುತ್ತಿರುವ ದೃಶ್ಯಗಳು ಕಂಡು ಬರ್ತಿವೆ. ಅಷ್ಟಕ್ಕೂ ಊರಿಗೇನು ಯಾವುದೇ ಸಾಂಕ್ರಾಮಿಕ ರೋಗ ಲಗ್ಗೆ ಇಟ್ಟಿಲ್ಲ. ಹೀಗಿದ್ರೂ ಪಟ್ಟಣಕ್ಕೆ ಪಟ್ಟಣವೇ ಬಂದ್ ಆಗಿದೆ. ಇದಕ್ಕೆ ಕಾರಣ ದೇವಿಯ ಜಾತ್ರೆ. ಹೌದು, ದೇವಿ ಜಾತ್ರೆ ನಡೆಯಬೇಕಾದ್ರೆ ಐದು ದಿನ ಜನರು ಮನೆ ಖಾಲಿ ಮಾಡಬೇಕು. ಹಿಂದೂಗಳು…