ಕೆಲವೇ ದಿನಗಳವರೆಗಿರುವ ಅದ್ಭುತವಾದ ಏಳು ಯೋಗಗಳು..
ವೇದಾಂಗಗಳಲ್ಲಿ ಒಂದಾದ ಖಗೋಳ ಶಾಸ್ತ್ರದ ಪ್ರಕಾರ ಗ್ರಹಗಳು ನಿರ್ದಿಷ್ಟ ಸ್ಥಾನಗಳಲ್ಲಿ ಒಂದಾದಾಗ ಯೋಗಗಳು ಸೃಷ್ಟಿಯಾಗುತ್ತವೆ. ಕುಂಭ ಹಾಗೂ ಮಕರದಲ್ಲಿ ಉಂಟಾದ ಗ್ರಹಗಳ ಸಂಯೋಗದಿಂದ ಶಶ, ಗಜಕೇಸರಿ, ಶಶಿಮಂಗಳ, ಬುಧಾದಿತ್ಯ, ಧನ, ಬಲ, ಪಾಶ ಯೋಗಗಳು ಸಂಭವಿಸಲಿವೆ. ಪ್ರತಿಯೊಂದು ಯೋಗಕ್ಕೂ ಆಯಾ ರಾಶಿಯ ಅಧಿಪತಿ ಮತ್ತು ಗ್ರಹಗಳ ಮೈತ್ರಿಯ ಆಧಾರದ ಮೇಲೆ ಫಲಗಳು ಬದಲಾಗುತ್ತವೆ. ಶಶ ಮಹಾಪುರುಷ ಯೋಗ ವೃಷಭ, ಮಿಥುನ, ಕನ್ಯಾ, ತುಲಾ, ಮಕರ, ಕುಂಭ ರಾಶಿಯವರಿಗೆ ಶನಿಯು ಮಿತ್ರ ಅಥವಾ ಸ್ವಕ್ಷೇತ್ರಾಧಿಪತಿಯಾಗಿರುವುದರಿಂದ, ಜೀವನದಲ್ಲಿ ಸ್ಥಿರತೆ, ಅಪಾರವಾದ…