Bengaluru Air Quality: ಮಂಗಳೂರಿನಲ್ಲೂ ಕಳಪೆ ಮಟ್ಟಕ್ಕಿಳಿದಿದೆ ವಾಯು ಗುಣಮಟ್ಟ – Kannada News | Bangalore Air Pollution Crisis: Mangalore’s Air quality dropped more than Bengaluru

ಮಂಗಳೂರಿನಲ್ಲೂ ಕಳಪೆ ಮಟ್ಟಕ್ಕಿಳಿದಿದೆ ವಾಯು ಗುಣಮಟ್ಟ

ಬೆಂಗಳೂರು, ಫೆಬ್ರವರಿ 18: ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಮಂಗಳೂರು ಮತ್ತು ಉಡುಪಿಯ ವಾಯು ಗುಣಮಟ್ಟವೂ (Bengaluru Air Quality) ಹದಗೆಟ್ಟಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ನಗರಗಳ ಗಾಳಿಯ ಗುಣಮಟ್ಟ, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇಂದೂ ಸಹ ಹಲವೆಡೆ ಕಳಪೆ ಏರ್ ಕ್ವಾಲಿಟಿ ದಾಖಲಾಗಿದ್ದು, ಮಂಗಳೂರಿನ AQI ಇನ್ನಷ್ಟು ಹದಗೆಟ್ಟಿದೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 156ಕ್ಕೆ ತಲುಪಿದೆ. ಅದಕ್ಕಿಂತ ಹೆಚ್ಚಾಗಿ ಮಂಗಳೂರಿನ ಏರ್ ಕ್ವಾಲಿಟಿ 190 ಆಗಿದೆ. ಜೊತೆಗೆ ಬಳ್ಳಾರಿಯ ವಾಯು ಗುಣಮಟ್ಟವೂ ಸಹ 168 ಆಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –156
  • ಮಂಗಳೂರು-190
  • ಮೈಸೂರು –158
  • ಬೆಳಗಾವಿ – 182
  • ಕಲಬುರ್ಗಿ-144
  • ಶಿವಮೊಗ್ಗ – 181
  • ಬಳ್ಳಾರಿ – 168
  • ಹುಬ್ಬಳ್ಳಿ- 159
  • ಉಡುಪಿ –181
  • ವಿಜಯಪುರ –152

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:37 am, Wed, 18 February 26

Source link

ನಮೀಬಿಯ ಹೀಗೆ ಮಾಡಿದ್ರೆ ಪಾಕಿಸ್ತಾನ್ ವಿಶ್ವಕಪ್​​ನಿಂದ ಔಟ್..! – Kannada News | How Namibia Can Knock Pakistan Out Of T20 World Cup 2026

T20 World Cup 2026: ಟಿ20 ವಿಶ್ವಕಪ್​ನ ಮೊದಲ ಸುತ್ತಿನ ಪಂದ್ಯವು ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಈ ನಿರ್ಣಾಯಕ ಹಂತದ ಪಂದ್ಯದಲ್ಲಿ ಮುಖಾಮುಖಿಯಾಗಲಿರುವುದು ಪಾಕಿಸ್ತಾನ್ ಮತ್ತು ನಮೀಬಿಯ. ಈ ಮ್ಯಾಚ್ ನಮೀಬಿಯ ಪಾಲಿಗೆ ಔಪಚಾರಿಕವಾಗಿದ್ದರೆ, ಪಾಕ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ.

ಅಂದರೆ ಈ ಮ್ಯಾಚ್​​ನಲ್ಲಿ ಗೆದ್ದರೆ ಮಾತ್ರ ಪಾಕಿಸ್ತಾನ್ ತಂಡವು ಸೂಪರ್-8 ಹಂತಕ್ಕೇರಲಿದೆ. ಹೀಗಾಗಿ ಕೊಲಂಬೊದಲ್ಲಿ ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಪಾಕ್ ಪಡೆ ಗೆಲ್ಲಲೇಬೇಕು.

ಒಂದು ವೇಳೆ ನಮೀಬಿಯ ತಂಡವು ಯಾವುದೇ ಅಂತರದಿಂದ ಗೆದ್ದರೂ ಪಾಕಿಸ್ತಾನ್ ತಂಡ ವಿಶ್ವಕಪ್ ಟೂರ್ನಿಯಿಂದ ಹೊರಬೀಳಲಿದೆ. ಅಂದರೆ ನಮೀಬಿಯ ತಂಡ ಕೇವಲ 1 ರನ್​ ಅಥವಾ 1 ವಿಕೆಟ್​​ನಿಂದಲೂ ಗೆದ್ದರೂ ಸಹ ಪಾಕ್ ತಂಡದ ವಿಶ್ವಕಪ್ ಅಭಿಯಾನ ಅಂತ್ಯವಾಗಲಿದೆ.

ಪಾಕಿಸ್ತಾನ್ ತಂಡ ಹೊರಬಿದ್ದರೆ ಯುಎಸ್​ಎ ತಂಡ ಸೂಪರ್-8 ಹಂತಕ್ಕೇರಲಿದೆ. ಅಂದರೆ ಯುಎಸ್​ಎ ತಂಡದ ಪಾಲಿಗೆ ಪಾಕಿಸ್ತಾನ್ ವಿರುದ್ಧ ನಮೀಬಿಯ ತಂಡ ಗೆಲ್ಲಲೇಬೇಕು. ಏಕೆಂದರೆ ಯುಎಸ್​​ಎ ತಂಡದ ನೆಟ್​ ರನ್​ ರೇಟ್ +0.787 ಇದ್ದು, ಇದರಿಂದ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿ ಮುಂದಿನ ಹಂತಕ್ಕೇರಬಹುದು.

ಅತ್ತ ಪಾಕಿಸ್ತಾನ್ ತಂಡ ಸೂಪರ್-8 ಹಂತಕ್ಕೇರಲು 6 ಅಂಕಗಳು ಅತ್ಯವಶ್ಯಕ. ಹೀಗಾಗಿ ನಮೀಬಿಯ ವಿರುದ್ಧ ಗೆಲ್ಲಬೇಕು. ಒಂದು ವೇಳೆ ಸೋತರೆ 4 ಅಂಕಗಳನ್ನು ಹೊಂದಿದ್ದರೂ -0.403 ನೆಟ್​ ರನ್ ಇರುವ ಕಾರಣ ಪಾಕಿಸ್ತಾನ್ ತಂಡ ಟಿ20 ವಿಶ್ವಕಪ್​​ನಿಂದ ಹೊರಬೀಳಲಿದೆ.

ಹೀಗಾಗಿ ಕೊಲಂಬೊದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​​ನ 35ನೇ ಪಂದ್ಯವು ಪಾಕ್​ನಂತೆ ಯುಎಸ್​​ಎ ಪಾಲಿಗೂ ಅತೀ ಮುಖ್ಯ. ಅದರಂತೆ ಪಾಕ್ ಪಡೆಯನ್ನು ಬಗ್ಗು ಬಡಿದು ನಮೀಬಿಯ ಯುಎಸ್​​ಎ ತಂಡವನ್ನು ಸೂಪರ್-8 ಹಂತಕ್ಕೇರಿಸಲಿದೆಯಾ ಅಥವಾ ನಮೀಬಿಯ ವಿರುದ್ಧ ಗೆದ್ದು ಪಾಕಿಸ್ತಾನ್ ಮುಂದಿನ ಹಂತಕ್ಕೇರಲಿದೆಯಾ ಕಾದು ನೋಡಬೇಕಿದೆ.

ಪಾಕಿಸ್ತಾನ್ ಟಿ20 ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಬಾಬರ್ ಆಝಂ, ಫಹೀಮ್ ಅಶ್ರಫ್, ಫಖರ್ ಝಮಾನ್, ಖ್ವಾಜಾ ಮೊಹಮ್ಮದ್ ನಫಾಯ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ಮೊಹಮ್ಮದ್ ಸಲ್ಮಾನ್ ಮಿರ್ಝ, ನಸೀಮ್ ಶಾ, ಸಾಹಿಬ್​ಝಾದ ಫರ್ಹಾನ್ (ವಿಕೆಟ್ ಕೀಪರ್), ಸೈಮ್ ಅಯ್ಯೂಬ್, ಶಾಹೀನ್ ಶಾ ಅಫ್ರಿದಿ, ಉಸ್ಮಾನ್ ತಾರಿಖ್, ಶಾದಾಬ್​ ಖಾನ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್).

ಇದನ್ನೂ ಓದಿ: ಟೀಮ್ ಇಂಡಿಯಾದ ‘ಸೂಪರ್-8’ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

ನಮೀಬಿಯ ಟಿ20 ತಂಡ: ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಝೇನ್ ಗ್ರೀನ್, ಬರ್ನಾರ್ಡ್ ಸ್ಕೋಲ್ಟ್ಜ್, ರುಬೆನ್ ಟ್ರಂಪೆಲ್ಮನ್, ಜೆಜೆ ಸ್ಮಿತ್, ಜಾನ್ ಫ್ರಿಲಿಂಕ್, ಲೌರೆನ್ ಸ್ಟೀನ್‌ಕ್ಯಾಂಪ್, ಮಲನ್ ಕ್ರುಗರ್, ನಿಕೋಲ್ ಲಾಫ್ಟಿ-ಈಟನ್, ಜ್ಯಾಕ್ ಬ್ರಾಸ್ಸೆಲ್, ಬೆನ್ ಶಿಕೊಂಗೊ, ಜೆಸಿ ಬಾಲ್ಟ್, ಡೈಲನ್ ಲೀಚರ್, ಡಬ್ಲ್ಯೂಪಿ ಹೀಂಗ್‌ಬರ್ಗ್, ಮ್ಯಾಕ್ಸ್​ ಹಿಯೆಂಗೊ.

Source link

ನಾಳೆ ರಾಜ್ಯಾದ್ಯಂತ ಕೆಎಸ್​ಆರ್​ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ: ನೌಕರರಿಂದ ಬೆಂಗಳೂರು ಚಲೋ – Kannada News | KSRTC Bus Strike on Feb 19: Bengaluru Chalo Protest May Disrupt Bus Services Across Karnataka on Thursday

ಕೆಎಸ್​ಆರ್​ಟಿಸಿ ಬಸ್ (ಸಂಗ್ರಹ ಚಿತ್ರ)Image Credit source: tv9

ಬೆಂಗಳೂರು, ಫೆಬ್ರವರಿ 18: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ (ಫೆಬ್ರವರಿ 19) ಕರ್ನಾಟಕ ರಾಜ್ಯ ಸಾರಿಗೆ ನೌಕರರು ‘ಬೆಂಗಳೂರು ಚಲೋ’ಕ್ಕೆ ಕರೆ ನೀಡಿರುವುದರಿಂದ ಹಲವರು ಕರ್ತವ್ಯಕ್ಕೆ ಗೈರಾಗುವ ಸಾಧ್ಯತೆ ಇದೆ. ಪರಿಣಾಮವಾಗಿ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ (KSRTC) ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಸಾರಿಗೆ ನೌಕರರು ಗುರುವಾರ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರು ಕಡೆಗೆ ಜಮಾಯಿಸುವ ನಿರೀಕ್ಷೆಯಿದೆ.

ಇದರ ನಡುವೆಯೇ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ, ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರಿಗೆ ಸೂಚನೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿರುವ ಅವರು, ಕರ್ತವ್ಯಕ್ಕೆ ಗೈರಾದಲ್ಲಿ ವೇತನ ಕಡಿತ ಸೇರಿದಂತೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಗೈರಾಗುವ ನೌಕರರ ಪಟ್ಟಿಯನ್ನು ಘಟಕವಾರು ಸಿದ್ಧಪಡಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ‘ಕೆಲಸ ಮಾಡದಿದ್ದಾಗ ವೇತನವಿಲ್ಲ’ ಎಂಬ ತತ್ವದಡಿ ಕ್ರಮ ಜರುಗಿಸಲಾಗುತ್ತದೆ ಎಂದು ಎಂಡಿ ಸ್ಪಷ್ಟಪಡಿಸಿದ್ದಾರೆ.

ಪ್ರಯಾಣಿಕರು ಮುನ್ನೆಚ್ಚರಿಕೆ ವಹಿಸಲು ಮನವಿ

ಅನಧಿಕೃತವಾಗಿ ಕರ್ತವ್ಯಕ್ಕೆ ಗೈರಾಗುವ ನೌಕರರ ವಿರುದ್ಧ ಹೈಕೋರ್ಟ್ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಆದಾಗ್ಯೂ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾರಿಗೆ ಸೇವೆ ಭಾಗಶಃ ವ್ಯತ್ಯಯವಾಗುವ ಸಾಧ್ಯತೆ ಇದ್ದು, ಪ್ರಯಾಣಿಕರು ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.

ರಜೆ ನೀಡಬೇಡಿ: ಸಾರಿಗೆ ಅಧಿಕಾರಿಗಳಿಗೆ ಸೂಚನೆ

ಗುರುವಾರ ಬಸ್ ಸಂಚಾರದಲ್ಲಿ ವ್ಯತ್ಯಯ ಆಗದಂತೆ ಕ್ರಮಕೈಗೊಳ್ಳಬೇಕೆಂದು ಸಾರಿಗೆ ಅಧಿಕಾರಿಗಳಿಗೆ ಕೆಎಸ್​ಆರ್​ಟಿಸಿ ಎಂಡಿ ಅಕ್ರಂ ಪಾಷಾ ಸೂಚನೆ ನೀಡಿದ್ದಾರೆ. ತುರ್ತು, ಅನಿವಾರ್ಯ ಸಂದರ್ಭ ಹೊರತುಪಡಿಸಿ ನೌಕರರಿಗೆ ಯಾವುದೇ ರಜೆ ನೀಡಬೇಡಿ. ಇದು ವಾರದ ರಜೆ ಅಥವಾ ದೀರ್ಘಾವಧಿ ರಜೆಯಲ್ಲಿರುವವರಿಗೆ ಅನ್ವಯಿಸುವುದಿಲ್ಲ. ಅಗತ್ಯವಿದ್ದರೆ ವಾರದ ರಜೆಯನ್ನು ರದ್ದುಪಡಿಸಿ ಕೆಲಸಕ್ಕೆ ನಿಯೋಜಿಸಬೇಕು ಎಂದು ಅಕ್ರಂ ಪಾಷಾ ನಿರ್ದೇಶನ ನೀಡಿದ್ದಾರೆ.

ಸಾರಿಗೆ ನೌಕರರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆಗಳನ್ನು ನಡೆಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಸಹ ಜನವರಿ 29ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಫ್ರೀಡಂಪಾರ್ಕ್​​ನಲ್ಲಿ ಪ್ರತಿಭಟನೆಗೆ ಕರೆ ಕೊಡಲಾಗಿತ್ತು. ಆದರೆ, ಜನವರಿ 28 ರಂದು ಮುಖಂಡ ಅನಂತ್ ಸುಬ್ಬರಾವ್ ನಿಧನರಾದ ಹಿನ್ನೆಲೆ ಪ್ರತಿಭಟನೆಯ ಕಾವು ತಣ್ಣಗಾಗಿತ್ತು.

ಇದನ್ನೂ ಓದಿ: ಕರ್ನಾಟಕ ಸಾರಿಗೆ ನೌಕರರಿಂದ‘ಬೆಂಗಳೂರು ಚಲೋ’: ಬೇಡಿಕೆ ಈಡೇರದಿದ್ದರೆ ಮುಷ್ಕರಕ್ಕೂ ಪ್ಲ್ಯಾನ್​​!

01-01-2020ರಿಂದ 28-02-2023ರ ವರೆಗಿನ 38 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ಹಾಗೂ 01.01.2024 ರಿಂದ ನಾಲ್ಕು ವರ್ಷಗಳ ವೇತನ ಒಪ್ಪಂದ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಸಾರಿಗೆ ನೌಕರರು ಆಗ್ರಹಿಸುತ್ತಿದ್ದಾರೆ. ಈ ಹಿಂದೆ ಮುಷ್ಕರ ನಡೆಸಿದ್ದಾಗ ಮನವೊಲಿಸಿದ್ದ ಸರ್ಕಾರ, ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿತ್ತು. ಆದರೆ, ನಂತರ ಕ್ರಮ ಕೈಗೊಂಡಿರಲಿಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಆ ವ್ಯಕ್ತಿಗೆ ನಾನು ಯಾವಾಗಲೂ ಋಣಿ’; ಮದುವೆ ವದಂತಿ ಬೆನ್ನಲ್ಲೇ ಮೃಣಾಲ್ ಧನ್ಯವಾದ – Kannada News | Mrunal Thakur Thanks Rumor Mongers for Free Publicity Amid Dhanush Marriage Buzz

ಮದುವೆಯ ಕುರಿತಾದ ವದಂತಿಗಳಿಂದ ಮೃಣಾಲ್ ಠಾಕೂರ್ ಸುದ್ದಿಯಲ್ಲಿದ್ದಾರೆ. ಅವರು ಧನುಶ್ ಜೊತೆ ವಿವಾಹ ಆಗುತ್ತಾರೆ ಎಂಬ ವದಂತಿ ಜೋರಾಗಿದೆ. ಇದನ್ನು ಅವರು ಅಲ್ಲಗಳೆಯುತ್ತಲೇ ಬರುತ್ತಿದ್ದಾರೆ. ಇದರ ಮಧ್ಯೆ, ಈ ಸುಳ್ಳು ಸುದ್ದಿಯಿಂದ ತಮಗೆ ಪ್ರಚಾರ ಸಿಕ್ಕಿತು ಎಂದು ಹೇಳಿದ್ದಾರೆ. ಅವರ ಸ್ಟೇಟ್​​ಮೆಂಟ್ ಗಮನ ಸೆಳೆದಿದೆ.

ಕಾಲಿವುಡ್ ಸ್ಟಾರ್ ಹೀರೋ ಧನುಷ್ ಅವರನ್ನು ಮೃಣಾಲ್ ಪ್ರೀತಿಸುತ್ತಿದ್ದಾರೆ ಮತ್ತು ಫೆಬ್ರವರಿ 14 ರಂದು ಇಬ್ಬರೂ ಮದುವೆಯಾಗಲಿದ್ದಾರೆ ಎಂದು ಬಾಲಿವುಡ್ ಮಾಧ್ಯಮಗಳು ಸುದ್ದಿ ಹಬ್ಬಿಸಿದ್ದವು. ಈ ಸುದ್ದಿಗೆ ಪ್ರತಿಕ್ರಿಯಿಸಿದ ನಟಿ ಪ್ರಚಾರ ಸಿಕ್ಕಿದ್ದಾಗಿ ಖುಷಿಪಟ್ಟಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಪಿಆರ್ ತಂಡಕ್ಕೆ 3 ಕೋಟಿ, 6 ಕೋಟಿ ಅಥವಾ 10 ಕೋಟಿ ಖರ್ಚು ಮಾಡಿದ್ದರೂ ಸಹ, ನನಗೆ ಇಷ್ಟೊಂದು ಪ್ರಚಾರ ಸಿಗುತ್ತಿರಲಿಲ್ಲ. ಯಾರೋ ಉದ್ದೇಶಪೂರ್ವಕವಾಗಿ ನನ್ನ ಮತ್ತು ಧನುಷ್ ಬಗ್ಗೆ ವದಂತಿಗಳನ್ನು ಸೃಷ್ಟಿಸಿದರು. ಆದರೆ ಆ ವದಂತಿಗಳಿಂದಾಗಿ, ಇಡೀ ಭಾರತದಲ್ಲಿ ನನ್ನ ಹೆಸರು ಹರಿದಾಡಿತು. ಆ ವದಂತಿಗಳನ್ನು ಸೃಷ್ಟಿಸಿ, ನನಗೆ ಉಚಿತವಾಗಿ ಪ್ರಚಾರ ನೀಡಿದ್ದಕ್ಕಾಗಿ ನಾನು ಯಾವಾಗಲೂ ಋಣಿಯಾಗಿರುತ್ತೇನೆ’ ಎಂದು ಮೃಣಾಲ್ ಹೇಳಿದರು.

ಮೃಣಾಲ್ ಮತ್ತು ಧನುಷ್ ಅನೇಕ ಕಡೆಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡರು. ಇಬ್ಬರೂ ಆಳವಾಗಿ ಪ್ರೀತಿಸುತ್ತಿದ್ದಾರೆ ಮತ್ತು ಪ್ರೇಮಿಗಳ ದಿನದಂದು ಮದುವೆಯಾಗಲಿದ್ದಾರೆ ಎಂಬ ಕಥೆಗಳನ್ನು ಸೃಷ್ಟಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಮೃಣಾಲ್, ‘ಅವರ ಲೆಕ್ಕಾಚಾರದ ಪ್ರಕಾರ, ನಮ್ಮ ಮದುವೆ ಇಷ್ಟೊತ್ತಿಗಾಗಲೇ ಮುಗಿದಿರಬೇಕಿತ್ತು’ ಎಂದಿದ್ದರು.

ಇದನ್ನೂ ಓದಿ: ‘ನನ್ನ ಮದುವೆ ಏಪ್ರಿಲ್ 1ಕ್ಕೆ’; ದಿನಾಂಕ ರಿವೀಲ್ ಮಾಡಿದ ಮೃಣಾಲ್ ಠಾಕೂರ್

ಮೃಣಾಲ್ ಅವರು ಪ್ರಸ್ತುತ ತಮ್ಮದೇ ಆದ ಪಿಆರ್ ತಂಡವನ್ನು ಹೊಂದಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಅವರ ಮನೆಯ ವಿಳಾಸವೂ ಈಗ ಸಾರ್ವಜನಿಕವಾಗಿದೆ. ಈ ರೀತಿಯ ಸಮಸ್ಯೆಗಳನ್ನು ಪರಿಹರಿಸಲು ಒಂದು ಪಿಆರ್ ತಂಡವನ್ನು ನೇಮಕ ಮಾಡದಾಗಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:08 am, Wed, 18 February 26

Source link

ಒಂದೊಂದು ಹನಿ ನೀರಿಗೂ ಪರಿತಪಿಸಲಿದೆ ಪಾಕಿಸ್ತಾನ, ರಾವಿ ನದಿ ನೀರು ಶೀಘ್ರದಲ್ಲೇ ನಿಲ್ಲಿಸಲಿದೆ ಭಾರತ – Kannada News | India Moves to Restrict Pakistan’s Share of Surplus Ravi Waters After Indus Treaty Review

ಸಚಿವ ಜಾವೇದ್ ಅಹ್ಮದ್Image Credit source: India & the World

ನವದೆಹಲಿ, ಫೆಬ್ರವರಿ 18: ಈ ಬೇಸಿಗೆ ಪಾಕಿಸ್ತಾನ(Pakistan)ಕ್ಕೆ ಬರಗಾಲದ ದೊಡ್ಡ ಬಿಕ್ಕಟ್ಟನ್ನೇ ತಂದೊಡ್ಡಲಿದೆ. ಪಾಕಿಸ್ತಾನ ಒಂದು ಹನಿ ನೀರಿಗೂ ಹಾತೊರೆಯುವಂತಾಗಲಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿದ್ದರಿಂದ ಅದು ಈಗಾಗಲೇ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಆದರೆ ಈಗ ಶಹಪುರ್ ಕಂಡಿ ಬ್ಯಾರೇಜ್ ಪೂರ್ಣಗೊಂಡ ನಂತರ, ಭಾರತವು ರಾವಿ ನದಿಯಿಂದ ಹೆಚ್ಚುವರಿ ನೀರಿನ ಹರಿವನ್ನು ನಿಲ್ಲಿಸಲಿದೆ.

ಇದು ಪಾಕಿಸ್ತಾನದ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಲಿದೆ. ಮಾಹಿತಿಯ ಪ್ರಕಾರ, ಶಾಹಪುರ್ ಕಂಡಿ ಬ್ಯಾರೇಜ್‌ನ ಕೆಲಸವು ಮಾರ್ಚ್ 31 ರೊಳಗೆ ಪೂರ್ಣಗೊಳ್ಳಲಿದೆ. ಇಲ್ಲಿಯವರೆಗೆ, ಸಂಗ್ರಹಣಾ ಸೌಲಭ್ಯಗಳ ಕೊರತೆಯಿಂದಾಗಿ, ರಾವಿಯ ಹೆಚ್ಚುವರಿ ನೀರು ಪಾಕಿಸ್ತಾನಕ್ಕೆ ಹೋಗುತ್ತಿತ್ತು.

ಜಮ್ಮು ಮತ್ತು ಕಾಶ್ಮೀರ ಸಚಿವ ಜಾವೇದ್ ರಾಣಾ ಅಣೆಕಟ್ಟಿನ ಕುರಿತು ಮಾಹಿತಿ ನೀಡಿದರು. ಬರಪೀಡಿತ ಕಥುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿ ನೀರಾವರಿ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.
ಅಣೆಕಟ್ಟು ಪಾಕಿಸ್ತಾನಕ್ಕೆ ಹೆಚ್ಚುವರಿ ನೀರು ಹರಿಯುವುದನ್ನು ತಡೆಯುತ್ತದೆ ಮತ್ತು ಜಮ್ಮು ಮತ್ತು ಕಾಶ್ಮೀರದ ಜನರಿಗೆ ಸಾಕಷ್ಟು ನೀರು ಒದಗಿಸಲು ಸಹಾಯ ಮಾಡುತ್ತದೆ.

46 ವರ್ಷಗಳ ಕನಸು ನನಸಾಗುವ ಗಳಿಗೆ
ರಾವಿ ನದಿಗೆ ಕಟ್ಟುವ ಈ ಅಣೆಕಟ್ಟು ಯೋಜನೆಯನ್ನು 1979 ರಲ್ಲಿ ಕಲ್ಪಿಸಲಾಗಿತ್ತು. ಹೆಚ್ಚುವರಿ ನೀರು ಪಾಕಿಸ್ತಾನಕ್ಕೆ ಹರಿಯದಂತೆ ತಡೆಯಲು ರಂಜಿತ್ ಸಾಗರ್ ಅಣೆಕಟ್ಟು ಮತ್ತು ಶಹಪುರ್ ಕಂಡಿ ಬ್ಯಾರೇಜ್ ಅನ್ನು ಕೆಳಭಾಗದಲ್ಲಿ ನಿರ್ಮಿಸಲು ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಈ ಯೋಜನೆಗೆ 1982 ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಅಡಿಪಾಯ ಹಾಕಿದರು. ಆದಾಗ್ಯೂ, ನಂತರದ ವರ್ಷಗಳಲ್ಲಿ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರ ನಡುವಿನ ಆಂತರಿಕ ವಿವಾದಗಳು ಮತ್ತು ರಾಜಕೀಯ ನಿರ್ಲಕ್ಷ್ಯದಿಂದಾಗಿ, ಯೋಜನೆಯು 46 ವರ್ಷಗಳ ಕಾಲ ಸ್ಥಗಿತಗೊಂಡಿತು. 2018 ರಲ್ಲಿ, ಮೋದಿ ಸರ್ಕಾರ ಮಧ್ಯಪ್ರವೇಶಿಸಿ ಯೋಜನೆಯ ಕೆಲಸ ವೇಗವನ್ನು ಪಡೆಯಿತು.

ಮತ್ತಷ್ಟು ಓದಿ: Indus Waters Treaty: ಭಾರತದಿಂದ ಸಿಂಧೂ ನದಿ ನೀರು ಒಪ್ಪಂದ ಸ್ಥಗಿತ, ಪಾಕಿಸ್ತಾನಕ್ಕಾಗುವ ನಷ್ಟವೇನು?

1960 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸಹಿ ಹಾಕಿದ ಸಿಂಧೂ ಜಲ ಒಪ್ಪಂದದ ಅಡಿಯಲ್ಲಿ, ಭಾರತಕ್ಕೆ ಪೂರ್ವಕ್ಕೆ ಹರಿಯುವ ಮೂರು ನದಿಗಳಾದ ರಾವಿ, ಬಿಯಾಸ್ ಮತ್ತು ಸಟ್ಲೆಜ್ ನೀರನ್ನು ಬಳಸುವ ಸಂಪೂರ್ಣ ಹಕ್ಕುಗಳನ್ನು ನೀಡಲಾಯಿತು.

ಈ ಯೋಜನೆಯು 32,000 ಹೆಕ್ಟೇರ್‌ಗೂ ಹೆಚ್ಚು ಭೂಮಿಗೆ ನೀರಾವರಿ ಒದಗಿಸಲು ಸಹಾಯ ಮಾಡುತ್ತದೆ. ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದ ನಂತರ, ಇದು ಪಂಜಾಬ್‌ನಲ್ಲಿ 5,000 ಹೆಕ್ಟೇರ್‌ಗೂ ಹೆಚ್ಚು ಕೃಷಿ ಭೂಮಿಗೆ ಪ್ರಯೋಜನವನ್ನು ನೀಡುವ ನಿರೀಕ್ಷೆಯಿದೆ.

ಪಾಕಿಸ್ತಾನದ ಮೇಲೆ ಏನು ಪರಿಣಾಮ ಬೀರುತ್ತೆ?
ಪಾಕಿಸ್ತಾನ ಕೂಡ ಕೃಷಿ ನಂಬಿ ಬದುಕುತ್ತಿರುವ ದೇಶ, ಪಾಕಿಸ್ತಾನದ GDP ಗೆ ಕೃಷಿ ಶೇ. 25 ಕೊಡುಗೆ ನೀಡುತ್ತದೆ.ಅದರ ಕೃಷಿಯಲ್ಲಿ 80% ಸಿಂಧೂ ನದಿ ವ್ಯವಸ್ಥೆಯನ್ನು ಅವಲಂಬಿಸಿದೆ. ಆದಾಗ್ಯೂ, ಭಾರತದ ಕಠಿಣ ನಿಲುವು ಅದರ ತೊಂದರೆಗಳನ್ನು ಹೆಚ್ಚಿಸುತ್ತಿದೆ. ಹೆಚ್ಚುವರಿ ರಾವಿ ನೀರನ್ನು ತಡೆಹಿಡಿಯುವುದರಿಂದ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನೀರಾವರಿ ವ್ಯವಸ್ಥೆಗೆ ಅಡ್ಡಿಯಾಗಬಹುದು. ಇದಲ್ಲದೆ, ಲಾಹೋರ್ ಮತ್ತು ಮುಲ್ತಾನ್‌ನಂತಹ ಪ್ರಮುಖ ನಗರಗಳಿಗೆ ನೀರು ಸರಬರಾಜು ನೇರವಾಗಿ ಪರಿಣಾಮ ಬೀರುತ್ತದೆ. ನೀರಿನ ಕೊರತೆಯು ಬೆಳೆ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ, ಇದು ಪಾಕಿಸ್ತಾನದ ದುರ್ಬಲ ಆರ್ಥಿಕತೆ ಮತ್ತು ಆಹಾರ ಭದ್ರತೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ.

ಭಯೋತ್ಪಾದನೆ ವಿರುದ್ಧ ಭಾರತದ ಕಠಿಣ ನಿಲುವು
ಕಳೆದ ವರ್ಷ ಏಪ್ರಿಲ್​ನಲ್ಲಿ ಪಹಲ್ಗಾಮ್​​ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಕಠಿಣ ನಿಲುವು ತಳೆದು ಸಿಂಧೂ ಜಲ ಒಪ್ಪಂದ ಸ್ಥಗಿತಗಳಿಸಿತ್ತು. ಜಮ್ಮು ಮತ್ತು ಕಾಶ್ಮೀರದ ಚೆನಾಬ್ ನದಿಯಲ್ಲಿ ಹಲವು ಜಲವಿದ್ಯುತ್ ಯೋಜನೆಗಳ ಕೆಲಸವನ್ನು ಭಾರತ ಚುರುಕುಗೊಳಸಿದೆ. ಇವು 2027-28ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ನೀರಿನ ಹರಿವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಇದಲ್ಲದೆ, ಝೀಲಂ ನದಿಯಿಂದ ನೀರಿನ ಸಂಗ್ರಹವನ್ನು ನಿಯಂತ್ರಿಸುವ ಸ್ಥಗಿತಗೊಂಡ ವುಲ್ಲಾರ್ ಬ್ಯಾರೇಜ್‌ನ ಕೆಲಸವನ್ನು ಭಾರತ ಪುನರಾರಂಭಿಸುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 8:11 am, Wed, 18 February 26

Source link

ಟೀಮ್ ಇಂಡಿಯಾದ ‘ಸೂಪರ್-8’ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ – Kannada News | India’s T20 World Cup Super 8 Schedule

T20 World Cup 2026: ಟಿ20  ವಿಶ್ವಕಪ್​ನ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. 20 ತಂಡಗಳಲ್ಲಿ ಈಗಾಗಲೇ 7 ಟೀಮ್​​ಗಳು ಸೂಪರ್-8 ಹಂತಕ್ಕೇರಿದೆ. ಗ್ರೂಪ್-ಎ ಯಿಂದ ಈಗಾಗಲೇ ಭಾರತ ತಂಡವು ಮುಂದಿನ ಸುತ್ತಿಗೆ ಪ್ರವೇಶಿಸಿದ್ದು, ದ್ವಿತೀಯ ಸುತ್ತಿನಲ್ಲಿ ಮೂರು ತಂಡಗಳನ್ನು ಎದುರಿಸಲಿದೆ. ಅದರಂತೆ ಸೂಪರ್-8 ಸುತ್ತಿನಲ್ಲಿ ಟೀಮ್ ಇಂಡಿಯಾ ಎದುರಿಸಲಿರುವ ತಂಡಗಳಾವುವು ಎಂದು ನೋಡುವುದಾದರೆ…

Source link

ಬೆಂಗಳೂರಿನಲ್ಲಿ ಬಂದ್ ಆಗುತ್ತಾ ಕಸ ಸಂಗ್ರಹಣೆ? ಡಂಪಿಂಗ್‌ ಯಾರ್ಡ್‌ಗಳಲ್ಲಿ ಕಸದ ಲಾರಿಗಳಿಗೆ ದಿಗ್ಬಂಧನ – Kannada News | Garbage Collection Disruption in Bengaluru as Villagers Block Dumping Yards, Waste Trucks Stalled Across City

ಬೆಂಗಳೂರು, ಫೆಬ್ರವರಿ 18: ಬೆಂಗಳೂರಿನಲ್ಲಿ (Bangalore) ಪೌರಕಾರ್ಮಿಕರು ಒಂದು ದಿನ ಕಸ ಎತ್ತಿಲ್ಲ ಎಂದರೂ ಗಬ್ಬೆದ್ದು ನಾರಲು ಶುರುವಾಗುತ್ತದೆ. ರಸ್ತೆ ರಸ್ತೆಗಳಲ್ಲೂ ಕಸ ಚೆಲ್ಲಾಡಿರುತ್ತದೆ. ಪ್ರತಿನಿತ್ಯ ಬೆಂಗಳೂರು ನಗರದಾದ್ಯಂತ ಸಂಗ್ರಹವಾಗುವ ಸಾವಿರಾರು ಟನ್ ಕಸವನ್ನು ವಿಲೇವಾರಿ ಮಾಡುವುದೇ ಸವಾಲು. ಇಂಥದ್ದರ ನಡುವೆ ಬೆಂಗಳೂರಿನಲ್ಲಿ ಮತ್ತೆ ಕಸದ ಸಮಸ್ಯೆ ಸೃಷ್ಟಿಯಾಗುವ ಆತಂಕ ಎದುರಾಗಿದೆ. ಇದಕ್ಕೆ ಕಾರಣ ನೂರಾರು ಕಸತುಂಬಿರುವ ಲಾರಿಗಳು ನಿಂತಲ್ಲೇ ನಿಲ್ಲುವಂತಾಗಿರುವುದು! ಬೆಂಗಳೂರಿನ ಕಸವನ್ನು ತುಂಬಿಕೊಂಡು ವಿಲೇವಾರಿಗೆ ಹೊರಟ್ಟಿದ್ದ ಲಾರಿಗಳಿಗೆ ಗ್ರಾಮಸ್ಥರು ತಡೆ ನೀಡಿದ್ದಾರೆ. ಮಹದೇವಪುರ ವ್ಯಾಪ್ತಿಯ ಮಿಟ್ಟಗಾನಹಳ್ಳಿ, ಬೆಳ್ಳಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ತೆರಳುತ್ತಿದ್ದ ಲಾರಿಗಳಿಗೆ ಅಲ್ಲಿನ ಸ್ಥಳೀಯರು ದಿಗ್ಬಂಧನ ಹಾಕಿದ್ದಾರೆ.

ಗ್ರಾಮ ಅಭಿವೃದ್ದಿ ನಿಧಿ ಕೊಡಲಿಲ್ಲವೆಂದು ಆಕ್ರೋಶ

2 ವರ್ಷಗಳಿಂದ ಗ್ರಾಮ ಅಭಿವೃದ್ಧಿ ನಿಧಿ ಕೊಡಲಿಲ್ಲ ಎಂದು ಜಿಬಿಎ ವಿರುದ್ಧ ಮಿಟ್ಟಗಾನಹಳ್ಳಿ, ಬೆಳ್ಳಹಳ್ಳಿ ಗ್ರಾಮಸ್ಥರು ತಿರುಗಿಬಿದ್ದಿದ್ದಾರೆ. ಸ್ಥಳೀಯ ಶಾಸಕಿ ಮಂಜುಳ ಅರವಿಂದ ಲಿಂಬಾವಳಿ ಸೂಚನೆ ಮೇರೆಗೆ ಗ್ರಾಮಸ್ಥರು ಕಸದ ಲಾರಿಗಳನ್ನು ತಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಗ್ರಾಮಸ್ಥರ ಪ್ರತಿಭಟನೆ ಮುಂದುವರಿದಿದ್ದೇ ಆದಲ್ಲಿ ಬೆಂಗಳೂರಿನಲ್ಲಿ ಕಸದ ಸಮಸ್ಯೆ ಉಲ್ಬಣವಾಗುವುದು ನಿಶ್ಚಿತವಾಗಿದೆ.

ಬಾಗಲೂರಿನಲ್ಲೂ ಕಸದ ಲಾರಿಗಳಿಗೆ ತಡೆ: ದೊಡ್ಡಬಳ್ಳಾಪುರದಲ್ಲೂ ಕಸದ ಲಾರಿಗಳಿಗೆ ಬ್ರೇಕ್!

ಬಾಗಲೂರು ರಸ್ತೆಯಲ್ಲಿ ಬಾಲಕನ ದುರ್ಮರಣ ಬಳಿಕ ಸ್ಥಳೀಯರು ರೊಚ್ಚಿಗೆದ್ದಿದ್ದಾರೆ. ಕಸ ಸಾಗಿಸುತ್ತಿದ್ದ ಲಾರಿಗೆ ತಡೆಯೊಡ್ಡಿದ್ದಾರೆ. ಹೀಗಾಗಿ ಇಲ್ಲೂ ಗಾರ್ಬೆಜ್ ತುಂಬಿದ ಲಾರಿಗಳು ನಿಂತಲ್ಲೇ ನಿಲ್ಲುವಂತಾಗಿವೆ.
ಇನ್ನು ಮಿಟ್ಟಗಾನಹಳ್ಳಿ, ಬೆಳ್ಳಹಳ್ಳಿ ಗ್ರಾಮಗಳಲ್ಲಿ ಕಸ ವಿಲೇವಾರಿಗೆ ಬ್ರೇಕ್ ಬೀಳುತ್ತಿದ್ದಂತೆಯೇ, ಹೆಚ್ಚುವರಿಯಾಗಿ 400 ಗಾಡಿಗಳನ್ನು ದೊಡ್ಡಬಳ್ಳಾಪುರದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಳಿಸಲು ಪ್ಲ್ಯಾನ್ ಮಾಡಲಾಗಿತ್ತು. ಇದನ್ನು ಅರಿತ ಶಾಸಕ ಧೀರಜ್‌ ಮುನಿರಾಜು ಮಂಕಲಾಳ ಬಳಿ ಕಸದ ಲಾರಿಗಳಿಗೆ ತಡೆಯೊಡ್ಡಿದ್ದಾರೆ.

ಇದನ್ನೂ ಓದಿ: ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿಯಾಗಿ ಮಹಿಳೆ ಸಾವು, ಮಗ ಬದುಕಿದ್ದೇ ಪವಾಡ!

ಒಟ್ಟಾರೆಯಾಗಿ ತ್ಯಾಜ್ಯ ಸಂಸ್ಕರಣಾ ಘಟಕದತ್ತ ತೆರಳುತ್ತಿದ್ದ ಲಾರಿಗಳೆಲ್ಲ ನಿಂತಲ್ಲೇ ನಿಂತಿವೆ. ಇದರಿಂದಾಗಿ ಬೆಂಗಳೂರಿನಲ್ಲಿ ಇವತ್ತು ಕಸ ಸಂಗ್ರಹದ ಮೇಲೆ ಪರಿಣಾಮ ಬೀರಲಿದೆ.

ವರದಿ: ಭೀಮಪ್ಪ ಪಾಟಿಲ್ ಚಿಕ್ಕಬಳ್ಳಾಪುರ ಹಾಗೂ ಲಕ್ಷ್ಮೀ ನಾರಾಯಣ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ಇಂದೂ ರಾಜ್ಯದಲ್ಲಿ ಮುಂದುವರೆಯಿದೆ ಶುಷ್ಕ ವಾತಾವರಣ – Kannada News | Bengaluru temperature: Dry weather all over Karnataka

ಇಂದೂ ರಾಜ್ಯದಲ್ಲಿ ಮುಂದುವರೆಯಿದೆ ಶುಷ್ಕ ವಾತಾವರಣ

ಬೆಂಗಳೂರು, ಫೆಬ್ರವರಿ 18: ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ (Weather Forecast) ಇಂದೂ ಮುಂದುವರೆಯಲಿದ್ದು, ದಕ್ಷಿಣ ಒಳನಾಡಿನಲ್ಲಿಯೂ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹತ್ತಾರು ದಿನಗಳಿಂದ ರಾಜ್ಯದಲ್ಲಿ ಒಣ ಹವೆ ಆವರಿಸಿದೆ. ಬೆಂಗಳೂರಿನಲ್ಲಿ ಚಳಿಯ ಹವಾಮಾನ ತಕ್ಕಮಟ್ಟಿಗೆ ಇಂದು ಸುಧಾರಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕೆಲ ದಿನಗಳಿಂದ ಒಣ ಹವೆಯ ವಾತಾವರಣವಿದೆ. ಇನ್ನೂ ಕೆಲ ದಿನಗಳ ಕಾಲ ಇದೇ ವಾತಾವರಣ ಮುಂದುವರೆಯಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಒಣಹವೆ?

ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಮೈಸೂರು , ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ , ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಬೆಂಗಳೂರಿನಲ್ಲಿ ಶುಷ್ಕ ವಾತಾವರಣ

ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 17°C ಇದ್ದು, ಗರಿಷ್ಠ 31°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ. ಇಂದು ನಗರದಲ್ಲಿ ಎಂದಿನಂತೆ ಚಳಿಯ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಧುರಂಧರ್ 2’ ಚಿತ್ರಕ್ಕೆ ಶಾಕ್; ಬ್ಯಾನ್ ಆಗುತ್ತಾ ಆದಿತ್ಯ ಧಾರ್ ನಿರ್ಮಾಣ ಸಂಸ್ಥೆ? – Kannada News | Dhurandhar 2 Controversy: Aditya Dhar’s B62 Studios Faces BMC Blacklist Threat

ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿದೆ. ಈ ಚಿತ್ರದ ಮುಂದುವರಿದ ಭಾಗಕ್ಕಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ‘ಧುರಂಧರ್ 2’ ಮಾರ್ಚ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈಗ ಸಿನಿಮಾ ಬಗ್ಗೆ ದೊಡ್ಡ ವಿವಾದ ಹುಟ್ಟಿಕೊಂಡಿದೆ. ಈ ವಿವಾದವು ಧುರಂಧರ್ ನಿರ್ಮಾಪಕರು ಮತ್ತು ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನಡುವೆ ಇದೆ. ಚಿತ್ರೀಕರಣದ ಸಮಯದಲ್ಲಿ ತಂಡವು ನಿಯಮಗಳನ್ನು ಉಲ್ಲಂಘಿಸಿದೆ ಎಂದು ಮುನ್ಸಿಪಲ್ ಕಾರ್ಪೊರೇಷನ್ ಆರೋಪಿಸಿದೆ. ನಿರ್ಮಾಣ ಕಂಪನಿಯ ವಿರುದ್ಧ ಮುನ್ಸಿಪಲ್ ಕಾರ್ಪೊರೇಷನ್ ಹಲವು ಆರೋಪಗಳನ್ನು ಮಾಡಿದೆ.

ನಿರ್ಮಾಣ ತಂಡವು ಅನುಮತಿ ಇಲ್ಲದ ಕಡೆ ಚಿತ್ರೀಕರಣ ನಡೆಸುತ್ತಿದೆ ಎಂದು ಮುನ್ಸಿಪಲ್ ಕಾರ್ಪೊರೇಷನ್ ಆರೋಪಿಸಿದೆ. ಈ ನಿಟ್ಟಿನಲ್ಲಿ, ನಿರ್ದೇಶಕ ಆದಿತ್ಯ ಧರ್ ಅವರ ನಿರ್ಮಾಣ ಕಂಪನಿ ಬಿ62 ಸ್ಟುಡಿಯೋಸ್ ಅನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಒತ್ತಾಯ ಕೇಳಿ ಬಂದಿದೆ. ‘ಧುರಂಧರ್ 2’ ಚಿತ್ರೀಕರಣದ ಸಮಯದಲ್ಲಿ ಸುರಕ್ಷತೆ ಮತ್ತು ನಿಯಮಗಳನ್ನು ಪದೇ ಪದೇ ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ.

ಶೂಟಿಂಗ್ ಸಮಯದಲ್ಲಿ ಭದ್ರತಾ ಪ್ರದೇಶದಲ್ಲಿ ದೊಡ್ಡ ದೊಡ್ಡ ಟಾರ್ಚ್‌ಗಳನ್ನು ಬಳಸಲಾಗಿದೆ. ಇದನ್ನು ಅತ್ಯಂತ ಗಂಭೀರ ಭದ್ರತಾ ಲೋಪವೆಂದು ಪರಿಗಣಿಸಲಾಗಿದೆ. ಮುಂಬೈ ಪೊಲೀಸರು ಕೂಡ ಮಧ್ಯಪ್ರವೇಶಿಸಿ ಆ ಉಪಕರಣಗಳನ್ನು ವಶಪಡಿಸಿಕೊಂಡರು. ಇದಲ್ಲದೆ, ಚಿತ್ರದ ಸಿಬ್ಬಂದಿ ಅನುಮತಿಯಿಲ್ಲದೆ ಶೂಟಿಂಗ್ ಸ್ಥಳವನ್ನು ಬದಲಾಯಿಸಿದರು ಮತ್ತು ಅಗತ್ಯ ಅನುಮತಿಯನ್ನು ಪಡೆಯದೆ ಕಟ್ಟಡದ ಟೆರೇಸ್ ಅನ್ನು ಬಳಸಿದರು. ಇದರೊಂದಿಗೆ, ಸ್ಥಳೀಯ ಆಡಳಿತದಿಂದ ಮಾನ್ಯ ಅನುಮತಿಯನ್ನು ಪಡೆಯದೆ ಎರಡು ಜನರೇಟರ್ ವ್ಯಾನ್‌ಗಳು ಸಹ ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದವು.

ಈ ನಿಟ್ಟಿನಲ್ಲಿ ಪಾಲಿಕೆಯು ಜಿಲ್ಲಾಧಿಕಾರಿಗಳಿಗೆ ಔಪಚಾರಿಕ ಪತ್ರವನ್ನು ಕಳುಹಿಸಿದ್ದು, ರಾಜ್ಯದ ಏಕ-ವಿಂಡೋ ಚಿತ್ರೀಕರಣ ಪೋರ್ಟಲ್ ಮೂಲಕ ಸ್ಟುಡಿಯೋವನ್ನು ಚಿತ್ರೀಕರಣದಿಂದ ಶಾಶ್ವತವಾಗಿ ನಿಷೇಧಿಸುವ ಪ್ರಸ್ತಾಪವನ್ನು ಸಲ್ಲಿಸಿದೆ. ಈ ಕ್ರಮದ ಭಾಗವಾಗಿ, ಪಾಲಿಕೆಯು ಈಗಾಗಲೇ 25,000 ರೂ.ಗಳ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ ಮತ್ತು 1 ಲಕ್ಷ ರೂ.ಗಳ ಹೆಚ್ಚುವರಿ ದಂಡವನ್ನು ವಿಧಿಸಲು ಪ್ರಸ್ತಾಪಿಸಿದೆ. ಆದಿತ್ಯ ಧರ್ ಅವರ ಸ್ಟುಡಿಯೋವನ್ನು ಇನ್ನೂ ಅಧಿಕೃತವಾಗಿ ಕಪ್ಪುಪಟ್ಟಿಗೆ ಸೇರಿಸಲಾಗಿಲ್ಲ.

ಇದನ್ನೂ ಓದಿ: ‘ಧುರಂಧರ್’ ಬಗ್ಗೆ ಹೃತಿಕ್ ಹೇಳಿದ ಮಾತಿಗೆ ಪ್ರತಿಕ್ರಿಯಿಸಿದ ಆದಿತ್ಯ ಧಾರ್

ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಚಿತ್ರ ಡಿಸೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ರಣವೀರ್ ಜೊತೆಗೆ, ಸಂಜಯ್ ದತ್, ಅಕ್ಷಯ್ ಖನ್ನಾ, ಆರ್. ಮಾಧವನ್, ಅರ್ಜುನ್ ರಾಂಪಾಲ್ ಮತ್ತು ರಾಕೇಶ್ ಬೇಡಿ ಕೂಡ ಇದರಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಹಿಮದಲ್ಲಿ ಸಿಲುಕಿದ್ದ ವಾಹನವನ್ನು ತಳ್ಳಲು ಸಹಾಯ ಮಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು – Kannada News | Kiren Rijiju Steps In to Move Snow Stuck Vehicle in Arunachal’s Harsh Winter

ನವದೆಹಲಿ, ಫೆಬ್ರವರಿ 18: ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಭಾರೀ ಹಿಮಪಾತ ಸಂಭವಿಸಿದೆ, ಹಿಮದಲ್ಲಿ ಸಿಲುಕಿಕೊಂಡಿದ್ದ ವಾಹನವನ್ನು ತಳ್ಳಲು ಕೇಂದ್ರ ಸಚಿವ ಕಿರಣ್ ರಿಜಿಜು ಸಹಾಯ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶೋಂಗಟ್ಸರ್ ಸರೋವರ ಮತ್ತು ಪಿಟಿ ತ್ಸೋ ಪ್ರದೇಶದ ನಡುವೆ ಈ ಘಟನೆ ನಡೆದಿದ್ದು, ಭಾರಿ ಹಿಮಪಾತವು ಪ್ರಮುಖ ರಸ್ತೆ ತಡೆಗೆ ಕಾರಣವಾಯಿತು. ಹಿಮದಿಂದ ಆವೃತವಾದ ರಸ್ತೆಯಲ್ಲಿ ಸಿಲುಕಿಕೊಂಡಿದ್ದ ವಾಹನವನ್ನು ಸ್ಥಳಾಂತರಿಸಲು ಮತ್ತು ದಾರಿಯನ್ನು ತೆರವುಗೊಳಿಸಲು ಸ್ಥಳೀಯರು ಮತ್ತು ಕಾರ್ಮಿಕರೊಂದಿಗೆ ತಾವು ಕೂಡ ಸೇರಿ ವಾಹನವನ್ನು ತಳ್ಳುತ್ತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ಖುದ್ದಾಗಿ ಅವರೇ ಹಂಚಿಕೊಂಡಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version