ದಿನ ಭವಿಷ್ಯ: ಇಂದು ಈ ರಾಶಿಯವರನ್ನು ಹಣಕಾಸಿನ ಲಾಭಕ್ಕೆ ಒತ್ತಾಯಿಸುವರು – Kannada News | Horoscope 18 Wednesday 2026; Dina Rashi Bhavishya Today, Checkout the details here

ಮೇಷ ರಾಶಿ:

ಬರಬೇಕಾದ ಹಣದ ಚಿಂತೆ ಬಹಳ ಕಾಡಬಹುದು. ದೊಡ್ಡ ವಿಚಾರವನ್ನು ಸಣ್ಣದಾಗಿ ಮಾಡಿ, ಯಾರಿಗೂ ಗೊತ್ತಾಗದಂತೆ ಮಾಡುವಿರಿ. ಯಾರೂ ನಿಮ್ಮ ಬಗ್ಗೆ ಹೇಳದಿದ್ದಾಗ ಆತ್ಮ ಪ್ರಶಂಸೆಯನ್ನು ಮಾಡಿಕೊಳ್ಳುವಿರಿ. ಗೌಪ್ಯತೆಯ ವಿಚಾರದಲ್ಲಿ ವರ್ತನೆಯು ಎಲ್ಲರೂ ಮೆಚ್ಚುವಂಥದ್ದಾಗಿರಲಿದೆ. ನಿಮ್ಮ ಬಗ್ಗೆ‌ ನಿಮಗೇ ಬೇಕೆಂದು ಏನಾದರೂ ಹೇಳಿಯಾರು. ಕೃತಜ್ಞತೆಯನ್ನು ನೀವು ರೂಢಿಸಿಕೊಳ್ಳಬೇಕಾಗುವುದು. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ.

ವೃಷಭ ರಾಶಿ:

ಸದುಪಯೋಗವಾಗುವಂತಹ ಕೆಲಸದ ಕಡೆ ಗಮನವಿರಲಿ. ಸರಕಿನ ಆಮದು ಮಾಡಿಕೊಳ್ಳಲು ತೊಂದರೆ. ಸುಲಭದ ಕಾರ್ಯವನ್ನು ಸಂಕೀರ್ಣ ಮಾಡಿಕೊಂಡು ಚಿಂತಿಸುವಿರಿ. ಖರೀದಿಯ ವಸ್ತುಗಳು ಕಳೆದುಹೋಗುವ ಸಂಭವವಿದೆ. ಎಲ್ಲರ ಜೊತೆ ಬೆರೆಯುವ ಅವಕಾಶಗಳು ಇಂದು ಕಡಿಮೆ‌ ಇರಲಿದೆ. ಸ್ವತಂತ್ರವಾಗಿ ಬದುಕಬೇಕು ಎಂಬ ಇಚ್ಛೆಯು ಜಾಗರೂಕವಾಗಲಿದೆ. ಪರೋಪಕಾರಕ್ಕೆ ಪ್ರತ್ಯುಪಕಾರದ ಚಿಂತನೆ ಇರಲಿ. ಬೆನ್ನು ನೋವಿನಿಂದ ನಿಮಗೆ ಕಷ್ಟವಾದೀತು.

ಮಿಥುನ ರಾಶಿ:

ಲೆಕ್ಕಪತ್ರದ ವಿಚಾರದಲ್ಲಿ‌ ನಿರ್ದಿಷ್ಟತೆಯನ್ನು ಅಪೇಕ್ಷಿಸುವಿರಿ. ಸಂಗಾತಿಯ ಜೊತೆಗಿನ ವೈಮನಸ್ಯವು ದೂರಾಗಿ ಸಂತೋಷವು ಇಂದು ನೆಲೆಸುವುದು. ಮನೆಯಲ್ಲಿ ನಿಮಗೆ ಪೂರಕವಾದ ವಾತಾವರಣ ಇರಲಿದೆ.‌ ನಿಮ್ಮಿಂದ ನೌಕರರಿಗೆ ಭಡ್ತಿ ಸಿಗಲಿದೆ. ಅಸಾಧ್ಯವಾದ ಕಾರ್ಯವನ್ನು ಮಾಡಿ ಸಮಯವನ್ನು ವ್ಯರ್ಥ ಮಾಡುವುದು ಬೇಡ. ಶರೀರಪೀಡೆಯನ್ನು ನೀವು ಅನುಭವಿಸುವುದು ಕಷ್ಡವಾಗಬಹುದು.‌ ಸಂಗಾತಿಯ ಸ್ವಭಾವವು ಇಂದು ಸ್ಪಷ್ಟವಾಗಿ ತಿಳಿಯಿತು ಎಂದು ಅಂದುಕೊಂಡಿರುವಿರಿ.

ಕರ್ಕಾಟಕ ರಾಶಿ:

ಸಂಗಾತಿಗೆ ಉದ್ಯೋಗವನ್ನು ಕೊಡಿಸಲು ಓಡಾಟ ಮಾಡುವಿರಿ. ಅರ್ಧಬಲದಷ್ಟು ಕೆಲಸವನ್ನು ನೀವು ಮಾಡುವಿರಿ. ನಿಮ್ಮ ಬಳಿಯೇ ಎಲ್ಲವೂ ಇದ್ದರೂ ಇನ್ನೊಬ್ಬರ ಸ್ವತ್ತಿಗೆ ಕಣ್ಣು ಹಾಕುವಿರಿ. ಪ್ರಭಾವೀ ವ್ಯಕ್ತಿಗಳ ಸಂಪರ್ಕವನ್ನೂ ಮಾಡುವಿರಿ. ನೀವಿಲ್ಲದವರಲ್ಲಿ ನಿಮ್ಮನ್ನು ಹುಡುಕುವ ಪ್ರಯತ್ನ ವ್ಯರ್ಥ. ಉದ್ಯೋಗದಲ್ಲಿ ನೀವು ಜಾಣತನವನ್ನು ತೋರಿಸುವ ಅವಶ್ಯಕತೆ ಇಲ್ಲ. ಆಸಕ್ತಿ ಇಲ್ಲದಿದ್ದರೂ ಕೆಲಸವನ್ನು ಅನಿವಾರ್ಯವಾಗಿ ಮಾಡಬೇಕಾಗುವುದು.

ಸಿಂಹ ರಾಶಿ:

ಧನಾತ್ಮಕ ಆಲೋಚನೆಗೆ ಸ್ಪಂದನೆ ಸಿಗಲಿದೆ. ಕಛೇರಿಯ ಕಿರಿಕಿರಿಯಿಂದ‌ ಮನೆಯಲ್ಲಿಯೂ ನಿಮಗೆ ನೆಮ್ಮದಿ ಸಿಗದು. ಖುಷಿಯ ವಾತಾವರಣವಿದ್ದರೂ ನಿಮಗೆ ನಿಮ್ಮದೇ ಚಿಂತೆ ಕಾಡಬಹುದು. ಹಳೆಯ ಸ್ನೇಹಿತರನ್ನು ಭೇಟಿಯಾಗಿ ಸ್ವಲ್ಪ ಹೊಸ ವಾತಾವರಣವನ್ನು ಕಾಣುವಿರಿ. ನಿಮ್ಮ ವಿಚಾರದಲ್ಲಿ ನಿಮ್ಮ ನೌಕರರ ಬಗ್ಗೆ ನಿಮಗೆ ಸಮಾಧಾನ ಇರಲಿದೆ. ಕೆಲಸದ ಆಯಾಸದಿಂದ ಆರೋಗ್ಯವು ಕೆಡಬಹುದು.

ಕನ್ಯಾ ರಾಶಿ:

ಪಾಲುದಾರಿಕೆಗೆ ಅನ್ಯರ ಸೇರ್ಪಡೆ ಸಾಧ್ಯತೆ. ಸಹೋದರಿಯರ ನಡುವೆ ಕಲಹವಾಗಬಹುದು. ಅಮೂಲ್ಯವಾದ ವಸ್ತುಗಳನ್ನು ನಷ್ಟ ಮಾಡಿಕೊಳ್ಳುವ ಸಾಧ್ಯತೆ ಇದೆ. ಬಂಧುಗಳ ಆರೋಪವನ್ನು ನೀವು ನಿರಾಕರಿಸುವಿರಿ.‌ ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದ್ದು ವೈದ್ಯರನ್ನು ಭೇಟಿಯಾಗುವುದು ಸೂಕ್ತ. ದುರಭ್ಯಾಸವನ್ನು ಹಿಡಿಸಿಕೊಳ್ಳುವ ಸಂದರ್ಭವು ಬರಬಹುದು. ಕಲಾವಿದರು ಇತರರ ಸಹಕಾರವನ್ನು ಪಡೆಯುವರು. ಆಸ್ತಿಯ ವಿಚಾರದಲ್ಲಿ ಜಗಳವು ತಾರಕಕ್ಕೆ ಹೋಗಬಹುದು.

ತುಲಾ ರಾಶಿ:

ದಾಂಪತ್ಯದಲ್ಲಿ ಶಾಂತಿಯು ಬೇಕಾದರೆ ಸುಮ್ಮನಿರುವುದು ಉತ್ತಮ. ಭೂಮಿಯಲ್ಲಿ ಹೊಸ ಸಸ್ಯಗಳ ಆರೋಪಣೆ ಮಾಡುವಿರಿ. ಕೋಪವನ್ನು ದೀರ್ಘಕಾಲ ಮುಂದುವರಿಸುವುದು ಬೇಡ. ಕಛೇರಿಯ ತುರ್ತು ಸ್ಥಿತಿಯು ನಿಮಗೆ ಗೊತ್ತಾಗದೇ ಆರಾಮಾಗಿ ಇರುವಿರಿ. ನಿಮ್ಮ ಸ್ವಭಾವಕ್ಕೆ ಯೋಗ್ಯವಾದ ವ್ಯಕ್ತಿಯ ಗೆಳೆತನವಾಗಲಿದೆ. ಸ್ವಂತ ಉದ್ಯಮವನ್ನು ಮಾಡುತ್ತಿದ್ದರೆ ನಿರೀಕ್ಷಿತ ಲಾಭವನ್ನು ತಲುಪುವುದು ಕಷ್ಟವಾದೀತು. ಸ್ತ್ರೀಯರ ಜೊತೆ ಇಂದು ನಿಮ್ಮ ವ್ಯವಹಾರವು ಬೇಡ.

ವೃಶ್ಚಿಕ ರಾಶಿ:

ದಿನ ಪೂರ್ತಿ ಬೆವರು ಹರಿಸಿ ಮಾಡಿದ ಕೆಲಸಕ್ಕೆ ದಿನದ ಕೊನೆಗೆ ಶುಭ ಫಲವು ಸಿಗುವುದು. ಉದ್ಯೋಗ ಶಿಸ್ತಿಗೆ ಮಹಿಳೆಯರನ್ನು ಜೋಡಿಸಿಕೊಳ್ಳುವಿರಿ. ಹೊಸ ಉದ್ಯೋಗವನ್ನು ಹುಡುಕುವವರಿಗೆ ಹೆಚ್ಚು ಗೊಂದಲವಾಗಬಹುದು. ದಾಂಪತ್ಯದಲ್ಲಿ ಅನುಮಾನದ ಹೊಗೆಯಾಡುವುದು. ಯಾರ ಸಹಾಯವನ್ನೂ ಪಡೆಯದೆ ಕಾರ್ಯವು ನಿಧಾನವಾಗುವುದು. ಉದ್ಯೋಗಕ್ಕಾಗಿ ಖಾಸಗಿ ಸಂಸ್ಥೆಯನ್ನು ಅಲೆಯಬೇಕಾಗುವುದು. ಮಾತನಾಡುವಾಗ ಸೂಕ್ಷ್ಮಸಂಗತಿಗಳನ್ನು ಮರೆಯಬಾರದು.

ಧನು ರಾಶಿ:

ಹಳೆಯ ಮನೆಯನ್ನು ಸುಂದರೀಕರಣ ಮಾಡುವ ಚಿಂತನೆ ನಡೆಸುವಿರಿ. ಪರಿಚಿತರ ಹೊಸ ಮುಖಗಳು ಅನಾವರಣವಾಗುವುದು. ನಿಮ್ಮ ಧಾರ್ಮಿಕ ನಂಬುಗೆಗೆ ಯಾರಿಂದಲಾದರೂ ಘಾಸಿ ಉಂಟಾದೀತು. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸೋಲುವಿರಿ. ನಿಮ್ಮ ಬಗ್ಗೆ ತಪ್ಪು ಕಲ್ಪನೆ ಬರಬಹುದು. ಬಂಧುಗಳ ಆಗಮನವನ್ನು ಇಂದು ನಿರೀಕ್ಷಿಸುವಿರಿ. ವಾಹನದಲ್ಲಿ ಸಂಚಾರ ಮಾಡುವುದಕ್ಕೆ ಕೆಲವು ತೆಡೆಗಳು ಬರಬಹುದು. ದೈಹಿಕ‌ಶ್ರಮವು ಇಂದು ಹೆಚ್ಚಿದ್ದು, ಲಾಭವೂ ಸಮಾಧಾನವನ್ನು ತರುವುದು.

ಮಕರ ರಾಶಿ:

ಇಂದಿನ‌ ಪ್ರಯಾಣದಲ್ಲಿ ಬಂಧುಗಳು ಅನಿರೀಕ್ಷಿತವಾಗಿ ಸಿಗುವರು. ನಿಮ್ಮ ಗುಣವನ್ನು ದುರುಪಯೋಗ ಮಾಡಿಕೊಂಡಾರು. ಇಷ್ಟಪಟ್ಟಿದ್ದನ್ನು ಪಡೆಯಲು ನೀವು ಏನಾದರೂ ಮಾತನಾಡಬೇಕಾಗುವುದು. ವಿವಾಹದ ಮಾತುಕತೆ ನಿಮಗೆ ಖುಷಿ ತಂದರೂ ಅದನ್ನು ಹೇಳಿಕೊಳ್ಳಲು ಸಂಕೋಚಪಡುವಿರಿ. ಹಳೆಯ ಸ್ನೇಹವನ್ನು ನೀವು ಗುರುತಿಸಲಾರಿರಿ. ನಿಮ್ಮ ಉತ್ಸಾಹದ ಕಾರಣ ಜವಾಬ್ದಾರಿಯೂ ಅಧಿಕವಾಗುವುದು. ಆಗಬೇಕಾದ ಕಾರ್ಯವು ಆಗದೇ ಹಣವು ವ್ಯರ್ಥವನ್ನು ಮಾಡಿಕೊಂಡು ಸಂಕಟಪಡಬೇಕಾಗುವುದು.

ಕುಂಭ ರಾಶಿ:

ನೀವು ಯಾರ ಕೈಗೂ ಸುಲಭಕ್ಕೆ ಸಿಗದೇ, ಎಲ್ಲ ಜವಾಬ್ದಾರಿಗಳಿಂದ ದೂರವಿರುವಿರಿ. ಯಾರಾದರೂ ನಿಮ್ಮವರ ಬಗ್ಗೆ ಬಂದು ಕಿವಿಕಚ್ಚಬಹುದು. ಸಕಾಲಕ್ಕೆ ಬಂದ ಸ್ನೇಹಿತನ‌ ಸಹಕಾರವನ್ನು ಸದಾ ಸ್ಮರಿಸಿಕೊಳ್ಳುವುದು ಸೂಕ್ತ. ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ತೊಂದರೆ ಎದುರಾಗಬಹುದು. ವಿದೇಶದಿಂದ ಮರಳುವ ಯೋಚನೆ ಇರುವುದು. ಪ್ರಯಾಣವು ಆರಂಭದಲ್ಲಿ ಸುಖಕರ ಎನಿಸದರೂ ದೇಹಪೀಡೆ ಅಧಿಕವಾದೀತು. ಇನ್ನೊಬ್ಬರನ್ನು ಅವಲಂಬಿಸಿರವುದು ನಿಮಗೆ ಇಷ್ಟವಾಗದು.

ಮೀನ ರಾಶಿ:

ಉದ್ಯಮಿಗಳ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ಕುಟುಂಬ ಹಾಗೂ ಪ್ರೇಮದ ನಡುವೆ ಸಿಕ್ಕಿಬಿದ್ದು ಗೊಂದಲ ಕಾಡುವುದು. ಯಾವುದನ್ನು ಉಳಿಸಿಕೊಳ್ಳಬೇಕು ಎಂಬ ಭ್ರಮೆಯಲ್ಲಿ ಇರುವಿರಿ. ನಿಮ್ಮ ವ್ಯವಹಾರವನ್ನು ಕಾನೂನಾತ್ಮಕವಾಗಿ ನಡೆಸಿದರೆ ಉತ್ತಮ. ಆದಾಯದ ಮೂಲಗಳನ್ನು ನೀವು ಉಳಿಸಿಕೊಳ್ಳುವುದು ಕಷ್ಟವಾದೀತು. ಸಂಗಾತಿಯ ನೋವನ್ನು ನಿಮ್ಮದೇ ಆದ ವಿಧಾನದಿಂದ ಸರಿ ಮಾಡುವಿರಿ. ಬಂಧುಗಳ ಜೊತೆ ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆಯೇ ಇರಲಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಧನಿಷ್ಠಾ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಶತಭಿಷಾ, ಯೋಗ : ಶಿವ, ಕರಣ : ಬವ, ಸೂರ್ಯೋದಯ – 06 – 47 am, ಸೂರ್ಯಾಸ್ತ – 06 – 28 pm, ಇಂದಿನ ಶುಭಾಶುಭ ಕಾಲ : ರಾಹು 12:38 – 14:06, ಯಮಗಂಡ ಕಾಲ 08:16 – 09:43, ಗುಳಿಕ ಕಾಲ 11:11 – 12:38

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 18ರ ದಿನಭವಿಷ್ಯ

ಮುಕುಂದ ಮಾಲಾ ಸ್ತೋತ್ರದ ಶ್ರವಣ ಅಥವಾ ಪಠಣವನ್ನು ಮಾಡಿ. ದೂರವಾದ ಸ್ನೇಹ- ಸಂಬಂಧ ಮತ್ತೆ ಸರಿಹೋಗುವುದಕ್ಕೆ ಹಾಗೂ ಉದ್ಯೋಗ, ವ್ಯಾಪಾರ- ವ್ಯವಹಾರಗಳಲ್ಲಿ ಯಶಸ್ಸು ಕಾಣುವುದಕ್ಕೆ ಸಹಕಾರಿ ಆಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಪ್ರಾಪಂಚಿಕ ವಿಚಾರಗಳ ಬಗ್ಗೆ ಒಂದು ರೀತಿಯ ನಿರಾಸಕ್ತಿ ನಿಮ್ಮನ್ನು ಕಾಡಬಹುದು. ಯಾರಿಗೋ ಮುಖ್ಯ ಎಂದೆನಿಸಿದ್ದು ನನಗೂ ಮುಖ್ಯ ವಿಷಯ ಏಕಾಗಿರಬೇಕು ಎಂಬಂಥ ಧೋರಣೆ ಈ ದಿನ ಇರುತ್ತದೆ. ವೃತ್ತಿಯೋ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ಸಂಗತಿಗಳ ಚರ್ಚೆಯೋ ಇದ್ದಲ್ಲಿ ಅನಿಸಿದ್ದನ್ನೆಲ್ಲ ಹೇಳಿಬಿಡುತ್ತೇನೆ ಎಂಬ ಮನಸ್ಥಿತಿಯಿಂದ ಆಚೆ ಬನ್ನಿ. ಈಗ ನಿಮಗೆ ಅನಿಸುತ್ತಿರುವುದು ತಾತ್ಕಾಲಿಕ ಮಾತ್ರ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ನಿಮ್ಮಲ್ಲಿ ಕೆಲವರು ಡಿಷ್ ವಾಷರ್, ಮನೆಯನ್ನು ಕಸ ಗುಡಿಸುವಂಥ ರೋಬೋಟ್ ಅಥವಾ ಹೀಗೆ ಮನೆಯ ಸ್ವಚ್ಛತೆಗಾಗಿಯೇ ಯಂತ್ರಗಳನ್ನು ಖರೀದಿಸುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ಇನ್ನೂ ಕೆಲವರು ಇಎಂಐ ಮಾಡಿಸಿ, ಖರೀದಿಸಿಯೇ ಬಿಡುವ ಸಾಧ್ಯತೆ ಸಹ ಇದೆ. ಸ್ನೇಹಿತರು ಯಾವುದಾದರೂ ಆಫರ್ ಗಳನ್ನು ತಂದರೆ ಏಕಾಏಕಿ ಒಪ್ಪಿಕೊಂಡು ಬಿಡಬೇಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮಗೆ ಬಂದಿದ್ದ ಅವಕಾಶವೊಂದು ಅಥವಾ ಈಗಾಗಲೇ ಕೆಲಸ ಅರಂಭಿಸಿಯಾಗಿದೆ ಎಂಬುದೊಂದನ್ನು ಮಧ್ಯದಲ್ಲಿ ನಿಲ್ಲಿಸಬೇಕಾದ ಸನ್ನಿವೇಶ ಎದುರಾಗಲಿದೆ. ಒಂದು ವೇಳೆ ಹಣಕಾಸಿನ ವಿಚಾರದಲ್ಲಿ ಕಮಿಟ್ ಆಗಿದ್ದಲ್ಲಿ, ಅಂದರೆ ಮಾತು ನೀಡಿದ್ದಲ್ಲಿ ಗಾಂಭೀರ್ಯ ಕಾಪಾಡಿಕೊಳ್ಳಿ. ಹೇಗೋ ಸಂಭಾಳಿಸುತ್ತೀನಿ ಎಂಬ ಧೋರಣೆ ಬೇಡ. ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾದ ದಿನ ಇದಾಗಿರುತ್ತದೆ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 18ರ ದಿನಭವಿಷ್ಯ

ಈ ದಿನ ಹಯಗ್ರೀವ ಸೋತ್ರವನ್ನು ಶ್ರವಣ ಮಾಡಿ. ಒಂದು ವೇಳೆ ನಿಮಗೆ ಸಾಧ್ಯವಿದ್ದಲ್ಲಿ ಪಠಣ ಮಾಡಿ. ಪದೇಪದೇ ನಿಮ್ಮ ವಿರುದ್ಧ ದೂರು ಬರುತ್ತಿದೆ ಎಂಬ ಆಕ್ಷೇಪದಿಂದ ಹೊರಗೆ ಬರುವುದಕ್ಕೆ ಇದರಿಂದ ಸಹಾಯ ಆಗಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ವಿವಾಹಿತರಿಗೆ ಸಂಗಾತಿ ಜೊತೆಗೆ ಸ್ವಲ್ಪ ಮಟ್ಟಿಗೆ ಅಭಿಪ್ರಾಯ ಭೇದಗಳು ತಲೆದೋರಬಹುದು. ಅದರಲ್ಲೂ ನಿಮ್ಮ ನಿರ್ಲಕ್ಷ್ಯ ಅಥವಾ ಬೇಜವಾಬ್ದಾರಿಯಿಂದ ಈ ಹಿಂದೆ ಯಾವಾಗಲೋ ಆಗಿದ್ದ ಸಮಸ್ಯೆಗಳನ್ನು ಈಗ ಎತ್ತಾಡಬಹುದು. ಆದ್ದರಿಂದ ಸಣ್ಣ- ಪುಟ್ಟ ವಿಚಾರಗಳಿಗೆ ಹೆಚ್ಚಿಗೆ ಗಮನ ನೀಡುವುದಕ್ಕೆ ಹೋಗಬೇಡಿ. ಆಹಾರ- ನೀರು ಸೇವನೆ ಮಾಡುವಾಗ ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನ ಕೊಡಿ, ಇಲ್ಲದಿದ್ದರೆ ದಿನದ ಕೊನೆಗೆ ಹೊಟ್ಟೆ ಸಮಸ್ಯೆ ಕಾಡಬಹುದು.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಸ್ನೇಹಿತರು ಅಥವಾ ಸಂಬಂಧಿಗಳ ಜೊತೆಗೆ ಅವರ ಕೆಲಸಕ್ಕಾಗಿ ನೀವು ಜೊತೆಗೆ ಹೋಗುವ ಸನ್ನಿವೇಶ ಎದುರಾಗಲಿದೆ. ಹಲವು ಜವಾಬ್ದಾರಿಗಳನ್ನು ಪೂರ್ಣಗೊಳಿಸಿದ ಸಮಾಧಾನವೊಂದು ನಿಮಗೆ ದೊರೆಯಲಿದೆ. ಹಣದ ಹೂಡಿಕೆ, ಉಳಿತಾಯ ಈ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಲಿದ್ದೀರಿ. ಮನೆಯ ಮಟ್ಟಿಗೆ ನಿಮ್ಮ ಆಲೋಚನೆಗಳು ಫಲಿಸುತ್ತವೆ ಎಂಬ ಭಾವನೆ ನಿಮ್ಮದಾಗಿದಲ್ಲಿ ಅದನ್ನು ಮೀರಿದ ವ್ಯಾಪ್ತಿ ನಿಮಗಿದೆ ಎಂದೆನಿಸುವುದಕ್ಕೆ ಶುರು ಆಗಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಕ್ರೀಡೆಯೋ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳೋ ಅಥವಾ ಇವುಗಳ ಸ್ಪರ್ಧೆಯೋ ಇಂಥವುಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಅಂತಾದಲ್ಲಿ ಆಸಕ್ತಿ ವಹಿಸಿ ಪಾಲ್ಗೊಳ್ಳಿ. ಇದರಿಂದ ಭವಿಷ್ಯದಲ್ಲಿ ನಿಮಗೆ ದೊಡ್ಡ ಅನುಕೂಲ ಆಗುವಂಥ ಯೋಗ ಇದೆ. ಖಾದಿ ವಸ್ತ್ರಗಳ ಮಾರಾಟ ಮಾಡುವುದನ್ನೇ ವ್ಯವಹಾರವಾಗಿ ಮಾಡುತ್ತಿರುವವರಿಗೆ ಆ ವ್ಯಾಪಾರದ ಪ್ರಮಾಣ ಕಡಿಮೆ ಮಾಡಬೇಕಾಗಬಹುದು ಅಥವಾ ಸಂಪೂರ್ಣ ನಿಲ್ಲಿಸಿಬಿಡೋಣ ಎಂದೆನಿಸಲಿದೆ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 18ರ ದಿನಭವಿಷ್ಯ

ಈ ದಿನ ಸಂಜೆ ಹೊತ್ತಿಗೆ ಹತ್ತು ನಿಮಿಷವಾದರೂ ಧ್ಯಾನ ಮಾಡುವುದಕ್ಕೆ ಪ್ರಯತ್ನಿಸಿ. ಸೂರ್ಯ ನಾರಾಯಣನ ಸ್ಮರಣೆ, ಆರಾಧನೆಯಿಂದಾಗಿ ನಿಮಗೆ ಪದೇಪದೇ ಕಾಡುತ್ತಿರುವ ಹಿನ್ನಡೆಯಿಂದ ಹೊರಗೆ ಬರುವುದಕ್ಕೆ ಸಹಾಯ ಆಗಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಯಾರು ನಿಮ್ಮ ಕೆಲಸ, ಸೌಂದರ್ಯ, ನಿರ್ಧಾರಗಳನ್ನು ಹೊಗಳುತ್ತಿದ್ದರೋ ಅವರೇ ಈ ದಿನ ನಿಮ್ಮನ್ನು ಕಂಡೂ ಕಾಣದಂತೆ ಮುಂದಕ್ಕೆ ಸಾಗಿಬಿಡಬಹುದು. ನೀವು ಸಾಮಾನ್ಯ ದಿನಗಳಲ್ಲಿ ಯಾರ ಮಾತಿಗೆ ಬಹಳ ಖುಷಿಯಿಂದ ಇರುತ್ತಿದ್ದರೋ ಅದು ಈ ದಿನ ಸಾಧ್ಯವಾಗುವುದಿಲ್ಲ. ವಾಹನ ಚಾಲನೆ ವೇಳೆ ಬಹಳ ಎಚ್ಚರಿಕೆ ವಹಿಸುವುದು ಮುಖ್ಯ. ಬಿದ್ದು ಸಣ್ಣ- ಪುಟ್ಟ ಗಾಯವಾದರೂ ಮಾಡಿಕೊಳ್ಳುವ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಯಾರೋ ನಿಮ್ಮನ್ನು ಮೂದಲಿಸಿದರು ಅಥವಾ ಹಂಗಿಸಿದರು ಎಂಬ ಕಾರಣಕ್ಕೆ ಅವರಿಗೆ ಏನೋ ಸಾಬೀತು ಮಾಡಬೇಕು ಎಂದು ಹೊರಟುಬಿಡಬೇಡಿ. ಇನ್ನು ನಿಮ್ಮ ಪಾಲಿನ ಜವಾಬ್ದಾರಿಗಳನ್ನು ಇತರರಿಗೆ ವರ್ಗಾಯಿಸುವುದು ಕೂಡ ಸರಿಯಲ್ಲ. ನಿಮ್ಮಲ್ಲಿ ಕೆಲವರಿಗೆ ವೇರಿಕೋಸ್ ನಂಥ ಸಮಸ್ಯೆಗಳು ಉಲ್ಬಣಿಸಬಹುದು ಅಥವಾ ಕಾಣಿಸಬಹುದು. ಕೂಡಲೇ ವೈದ್ಯರ ಬಳಿ ಸೂಕ್ತ ಔಷಧೋಪಚಾರ ತೆಗೆದುಕೊಳ್ಳುವ ಕಡೆಗೆ ಗಮನ ನೀಡುವುದು ಕ್ಷೇಮ, ನೆನಪಿನಲ್ಲಿ ಇರಲಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಷೇರು, ಮ್ಯೂಚುವಲ್ ಫಂಡ್, ಡಿಬೆಂಚರ್, ಪರ್ಪೆಚುವಲ್ ಬಾಂಡ್, ಗೋಲ್ಡ್ ಹೀಗೆ ಯಾವುದಾದರೊಂದರಲ್ಲಿ ಹೂಡಿಕೆ ಮಾಡುವುದಕ್ಕೆ ನಿರ್ಧಾರ ಮಾಡುತ್ತೀರಿ. ಅಥವಾ ನಿಮಗೆ ಆಪ್ತರಾದವರು ಹಿಂತಿರುಗಿಸಬೇಕಾದ ಹಣದ ಬದಲಿಗೆ ಇಂಥದ್ದು ಯಾವುದಾದರೂ ಒಂದರ ಮೇಲೆ ನಿಮ್ಮ ಹೆಸರಲ್ಲಿ ಹಣ ಹೂಡಿಕೆ ಮಾಡಬಹುದು. ಇನ್ನು ನಿಮ್ಮಲ್ಲಿ ಕೆಲವರು ವಿಲಾಸಿ ಕಾರು ಖರೀದಿಗೆ ಮನಸ್ಸು ಮಾಡುವ ಯೋಗ ಇದೆ.

ಲೇಖನ- ಸ್ವಾತಿ ಎನ್.ಕೆ.

Source link

ಹೇಗಿದೆ ಸಲೀಂ ಖಾನ್ ಆರೋಗ್ಯ ಸ್ಥಿತಿ? ಸಲ್ಮಾನ್ ಖಾನ್ ತಂದೆಗೆ ಐಸಿಯುನಲ್ಲಿ ಚಿಕಿತ್ಸೆ – Kannada News | Salman Khan father Salim Khan health condition is reportedly serious

ಖ್ಯಾತ ನಟ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ (Salim Khan) ಅವರ ಆರೋಗ್ಯ ಹದಗೆಟ್ಟಿದೆ. ಇಂದು (ಫೆಬ್ರವರಿ 17) ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯದ ಸದ್ಯದ ಪರಿಸ್ಥಿತಿ ಬಗ್ಗೆ ಆಸ್ಪತ್ರೆ ಕಡೆಯಿಂದ ಅಧಿಕೃತ ಮಾಹಿತಿ ಹೊರಬೀಳುವುದು ಬಾಕಿ ಇದೆ. ಹೆಲ್ತ್ ಅಪ್​ಡೇಟ್ ತಿಳಿಯಲು ಅಭಿಮಾನಿಗಳು ಕಾಯುತ್ತಿದ್ದಾರೆ. ಮೂಲಗಳ ಪ್ರಕಾರ ಸಲೀಂ ಖಾನ್ ಅವರ ಪರಿಸ್ಥಿತಿ ಗಂಭೀರವಾಗಿದೆ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಲ್ಮಾನ್ ಖಾನ್ (Salman Khan) ಸೇರಿದಂತೆ ಕುಟುಂಬದ ಹಲವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಸಲೀಂ ಖಾನ್ ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಸಲ್ಮಾನ್ ಖಾನ್ ಅವರು ತಮ್ಮ ಎಲ್ಲ ಕೆಲಸಗಳನ್ನು ಬಿಟ್ಟು ಆಸ್ಪತ್ರೆಗೆ ಧಾವಿಸಿದರು. ಮಗಳು ಅಲ್ವಿರಾ ಖಾನ್ ಅಗ್ನಿಹೋತ್ರಿ, ಅಳಿಯ ಆಯುಷ್ ಶರ್ಮಾ ಮುಂತಾದವರು ಕೂಡ ಆಸ್ಪತ್ರೆಗೆ ಬಂದಿದ್ದಾರೆ. ಸಲೀಂ ಖಾನ್ ಪತ್ನಿಯರಾದ ಸಲ್ಮಾ ಖಾನ್ ಮತ್ತು ಹೆಲೆನ್ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಈಗ ಐಸಿಯುನಲ್ಲಿ ಇರುವ ಸಲೀಂ ಖಾನ್ ಅವರ ಆರೋಗ್ಯದ ಮೇಲೆ ಬುಧವಾರ (ಫೆ.18) ಬೆಳಗ್ಗೆ 11 ಗಂಟೆವರೆಗೂ ನಿಗಾ ವಹಿಸಲಾಗುವುದು. ಆ ಬಳಿಕ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಮೂಲಗಳು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ. ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಮತ್ತು ಆಪ್ತರು ಪ್ರಾರ್ಥಿಸುತ್ತಿದ್ದಾರೆ.

ಸಲೀಂ ಖಾನ್ ಅವರಿಗೆ ಈಗ 90 ವರ್ಷ ವಯಸ್ಸು. ಬಾಲಿವುಡ್​ನಲ್ಲಿ ಅವರು ಬಹುಬೇಡಿಕೆಯ ಚಿತ್ರಕಥೆ ಬರಹಗಾರನಾಗಿ ಗುರುತಿಸಿಕೊಂಡಿದ್ದರು. ‘ಶೋಲೆ’, ‘ಜಂಜೀರ್’, ‘ದೀವಾರ್’ ಮುಂತಾದ ಸಿನಿಮಾಗಳಿಗೆ ಅವರು ಚಿತ್ರಕಥೆ ಬರೆದಿದ್ದಾರೆ. ಆ ಕಾಲದಲ್ಲಿ ಸಲೀಂ-ಜಾವೇದ್ ಜೋಡಿ ಸೂಪರ್ ಹಿಟ್ ಎನಿಸಿಕೊಂಡಿತ್ತು.

ಇದನ್ನೂ ಓದಿ: ಸೌದಿ ಸಿನಿಮಾನಲ್ಲಿ ಸಲ್ಮಾನ್ ಖಾನ್, ಸಂಜಯ್ ದತ್: ಸಿನಿಮಾ ಯಾವುದು?

ಸಲೀಂ ಖಾನ್ ಅವರನ್ನು ಏಕಾಏಕಿ ಆಸ್ಪತ್ರೆಗೆ ದಾಖಲಿಸಲು ಕಾರಣ ಏನು ಎಂಬುದನ್ನು ಕುಟುಂಬದವರು ಇನ್ನೂ ಬಹಿರಂಗಪಡಿಸಿಲ್ಲ. ವರದಿಗಳ ಪ್ರಕಾರ, ಸಲೀಂ ಖಾನ್ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಅವರಿಗೆ 90 ವರ್ಷ ವಯಸ್ಸು ಆಗಿರುವುದರಿಂದ ಎಲ್ಲರಿಗೂ ಆತಂಕ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಈ ರಾಶಿಯವರಿಗೆ ಮಾರ್ಚ್​​ನಲ್ಲಿ ಆಗುವ ಗ್ರಹಗಳ ಸಂಯೋಗದಿಂದ ಏನೆಲ್ಲ ಪರಿಣಾಮ ಉಂಟಾಗುವುದು? – Kannada News | Simha Rashi March Forecast: Astrological Effects on Career, Health and Love

ಜ್ಯೋತಿಷ್ಯ ಶಾಸ್ತ್ರವು ಗ್ರಹಗಳ ಸಂಯೋಜನೆಯಿಂದ ಮಾರ್ಚ್ ತಿಂಗಳು ಸಿಂಹ ರಾಶಿಯವರಿಗೆ ಮಿಶ್ರ ಫಲಗಳಿಂದ ಕೂಡಿದ್ದು, ಗ್ರಹಗತಿಗಳ ಬದಲಾವಣೆಯು ಜೀವನದ ವಿವಿಧ ಆಯಾಮಗಳ ಮೇಲೆ ಬೇರೆ ಬೇರೆ ಪ್ರಭಾವಗಳನ್ನು ಬೀರಲಿದೆ. ಈ ತಿಂಗಳ ದಶೆ ಮತ್ತು ಫಲಗಳು ಇಂತಿವೆ.

​ಉತ್ತಮ ಫಲಗಳು

​ಈ ತಿಂಗಳು ನಿಮಗೆ ಕೆಲವು ಕ್ಷೇತ್ರಗಳಲ್ಲಿ ಅದೃಷ್ಟದ ಬೆಂಬಲ ಸಿಗಲಿದೆ.

​ವೃತ್ತಿ ಮತ್ತು ಗೌರವ:

ಸೂರ್ಯನ ಸಂಚಾರವು ಹತ್ತನೇ ಮನೆಯಲ್ಲಿ ಪ್ರಬಲವಾಗಿರುವುದರಿಂದ ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಮೇಲಧಿಕಾರಿಗಳಿಂದ ಪ್ರಶಂಸೆ ಹಾಗೂ ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆ ಇದೆ.

​ಧೈರ್ಯ ಮತ್ತು ಆತ್ಮವಿಶ್ವಾಸ:

ನೀವು ಎದುರಿಸುತ್ತಿದ್ದ ಹಳೆಯ ಸಮಸ್ಯೆಗಳನ್ನು ಬಗೆಹರಿಸಲು ಈ ಸಮಯ ಸೂಕ್ತವಾಗಿದೆ. ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವು ಉತ್ತಮವಾಗಿರುತ್ತದೆ.

​ಸಾಮಾಜಿಕ ಸ್ಥಾನಮಾನ:

ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ.

ಮಧ್ಯಮ ಫಲಗಳು

​ಕೆಲವು ವಿಷಯಗಳಲ್ಲಿ ನೀವು ಹೆಚ್ಚಿನ ಪರಿಶ್ರಮ ಹಾಕಬೇಕಾಗುತ್ತದೆ, ಆಗ ಮಾತ್ರ ಸಾಧಾರಣ ಯಶಸ್ಸು ಸಾಧ್ಯ.

​ಆರ್ಥಿಕ ಸ್ಥಿತಿ:

ಆದಾಯದ ಮೂಲಗಳು ಇವೆಯಾದರೂ, ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ಹೂಡಿಕೆ ಮಾಡುವ ಮೊದಲು ಎರಡು ಬಾರಿ ಯೋಚಿಸುವುದು ಒಳಿತು.

​ಕುಟುಂಬ ಜೀವನ:

ಕುಟುಂಬದ ಸದಸ್ಯರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು. ಆದರೆ ಸಂವಹನದ ಮೂಲಕ ಇದನ್ನು ಸರಿಪಡಿಸಿಕೊಳ್ಳಬಹುದು.

​ಶಿಕ್ಷಣ:

ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಕಾಡಬಹುದು, ಆದರೆ ಸತತ ಪ್ರಯತ್ನದಿಂದ ಮಧ್ಯಮ ಮಟ್ಟದ ಸಾಧನೆ ಮಾಡಬಹುದು.

​ಅಧಮ ಫಲಗಳು

​ಈ ಕೆಳಗಿನ ವಿಷಯಗಳಲ್ಲಿ ನೀವು ಹೆಚ್ಚಿನ ಜಾಗರೂಕತೆ ವಹಿಸುವುದು ಅತ್ಯಗತ್ಯ.

​ಆರೋಗ್ಯ:

ರಾಹುವಿನ ಪ್ರಭಾವ ಅಥವಾ ಅಷ್ಟಮ ಶನಿಯ ದೃಷ್ಟಿಯಿಂದಾಗಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು, ವಿಶೇಷವಾಗಿ ಕಣ್ಣು ಅಥವಾ ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಳ್ಳಬಹುದು. ಆಹಾರ ಕ್ರಮದ ಮೇಲೆ ನಿಯಂತ್ರಣವಿರಲಿ.

​ಪ್ರೇಮ ಮತ್ತು ದಾಂಪತ್ಯ:

ಸಂಗಾತಿಯೊಂದಿಗೆ ಅನಗತ್ಯ ವಾದಗಳು ಮನಸ್ತಾಪಕ್ಕೆ ಕಾರಣವಾಗಬಹುದು. ತಾಳ್ಮೆ ಕಳೆದುಕೊಳ್ಳಬೇಡಿ.

​ಗುಪ್ತ ಶತ್ರುಗಳು:

ನಿಮ್ಮ ಪ್ರಗತಿಯನ್ನು ಸಹಿಸದವರು ನಿಮ್ಮ ವಿರುದ್ಧ ಪಿತೂರಿ ನಡೆಸಬಹುದು. ಯಾರನ್ನೂ ಅತಿಯಾಗಿ ನಂಬಬೇಡಿ.


ಆದಿತ್ಯ ಹೃದಯ ಸ್ತೋತ್ರ ಪಠಿಸುವುದರಿಂದ ಆತ್ಮವಿಶ್ವಾಸ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ.​ಶನಿವಾರದಂದು ದಾನ ಧರ್ಮ ಮಾಡುವುದು ಅಥವಾ ಹನುಮಾನ್ ಚಾಲೀಸಾ ಓದುವುದು ಅಶುಭ ಫಲಗಳನ್ನು ಕಡಿಮೆ ಮಾಡುತ್ತದೆ.

– ಲೋಹಿತ ಹೆಬ್ಬಾರ್

Source link

ನಮ್ಮ ಕೋಲಾರದಲ್ಲಿ ತಯಾರಾಗುವ ಹೆಲಿಕಾಪ್ಟರ್​​ಗಳ ವಿಶೇಷತೆ ಏನು? ತಿಳಿದುಕೊಳ್ಳಿ – Kannada News | Tata Airbus Mini Helicopter Unit Launched In Kolar, here Is what Helicopter Special

ಕೋಲಾರ, ಫೆಬ್ರವರಿ 17): ಇಲ್ಲಿನ ವೇಮಗಲ್‌ನಲ್ಲಿ ಭಾರತದ ಮೊದಲ ಖಾಸಗಿ ಮಿನಿ ಹೆಲಿಕಾಪ್ಟರ್ (helicopter) ಜೋಡಣಾ ಘಟಕಕ್ಕೆ ಪ್ರಧಾನಿ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ವರ್ಚುವಲ್ ಆಗಿ ಚಾಲನೆ ನೀಡಿದ್ದಾರೆ. ಟಾಟಾ ಏರ್‌ಬಸ್ ಸಹಭಾಗಿತ್ವದಲ್ಲಿ ನಿರ್ಮಾಣವಾಗಿರುವ ಈ ಘಟಕದಿಂದ 2027ಕ್ಕೆ ಮೊದಲ H125 ಹೆಲಿಕಾಪ್ಟರ್ ಹೊರಬರುವ ನಿರೀಕ್ಷೆ ಇದೆ. ರಕ್ಷಣಾ ಇಲಾಖೆಗೆ ಸಹಾಯಕವಾಗಲಿರುವ ಈ ಯೋಜನೆ ದೇಶದ ಏರೋಸ್ಪೇಸ್ ಕ್ಷೇತ್ರಕ್ಕೆ ದೊಡ್ಡ ಉತ್ತೇಜನ ಎಂದೇ ಪರಿಗಣಿಸಲಾಗಿದೆ. ಇನ್ನು ನಮ್ಮ ಕೋಲಾರದಲ್ಲಿ (Kolar) ತಯಾರಾಗುವ ಹೆಲಿಕಾಪ್ಟರ್​​ಗಳ ವೈಶಿಷ್ಟತೆ ಏನು ಎನ್ನುವುದನ್ನು ನಮ್ಮ ಪ್ರತಿನಿಧಿ ಮಾಹಿತಿ ನೀಡಿದ್ದಾರೆ ನೋಡಿ.

ಇದನ್ನೂ ಓದಿ: ಕೋಲಾರದ ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ

Source link

ಆ ಉಯ್ಯಾಲೆಯಲ್ಲಿ ನಾನೇ ಕೂತಿದ್ದು: ದೈವದ ಕಾರ್ಣಿಕದ ಬಗ್ಗೆ ಅಚ್ಚರಿಯ ಹೇಳಿಕೆ – Kannada News | From Collapse to Grandeur: The Resurgence of Pilichandi Daiva Temple in Mangaluru

ಮಂಗಳೂರು, ಫೆ.17: ಮಂಗಳೂರಿನ ಇತಿಹಾಸ ಪ್ರಸಿದ್ಧ ಪಿಲಿಚಂಡಿ ದೈವಸ್ಥಾನದಲ್ಲಿ ವಿಚಿತ್ರ ಘಟನೆಯೊಂದು ನಡೆದಿತ್ತು. ಪಿಲಿಚಂಡಿ ದೈವದ ನೇಮೋತ್ಸವದ ವೇಳೆ ದೈವದ ಉಯ್ಯಾಲೆ ತನ್ನಿಂದ ತಾನೇ ತೂಗಿದೆ. ಇದೀಗ ಈ ದೇವಸ್ಥಾನದಲ್ಲಿ ಇಂತಹ ಹಲವು ಅಚ್ಚರಿಯ ಘಟನೆಗಳು ನಡೆದಿದೆ. ಒಂದು ಸಂದರ್ಭದಲ್ಲಿ, ಮಳೆಗಾಲದಲ್ಲಿ ದೈವದ ಆಶ್ರಯ ತಾಣವಾಗಿದ್ದ ಮನೆ ಕುಸಿಯುವ ಹಂತ ತಲುಪಿತ್ತು. ಆ ವೇಳೆ, ದೈವವನ್ನು ಹೊರಗೆ ತೆಗೆದುಕೊಂಡು ಹೋದ ಕೆಲವೇ ನಿಮಿಷಗಳಲ್ಲಿ ಸಂಪೂರ್ಣ ಮನೆ ನೆಲಕ್ಕುರುಳಿತು. ಈ ಘಟನೆಯ ನಂತರ, ದೈವಿಕ ಮಾರ್ಗದರ್ಶನ ಪಡೆದಾಗ, ಈ ಸ್ಥಳದಲ್ಲಿ ಪಿಲಿಚಂಡಿ ದೈವಸ್ಥಾನವನ್ನು ಪುನಃಸ್ಥಾಪಿಸಬೇಕೆಂಬ ಸೂಚನೆ ದೊರೆಯಿತು. 2018ರಲ್ಲಿ ಕುಡುಪೂರು ತಂತ್ರಿಗಳ ನೇತೃತ್ವದಲ್ಲಿ ಶುದ್ಧೀಕರಣ ಕಾರ್ಯಕ್ರಮಗಳನ್ನು ನಡೆಸಿ, ಅದೇ ವರ್ಷದಲ್ಲಿ ಊರಿನವರು ಮತ್ತು ಕೈಗಾರಿಕೋದ್ಯಮಿಗಳನ್ನು ಒಳಗೊಂಡ ಟ್ರಸ್ಟ್ ಒಂದನ್ನು ರಚಿಸಲಾಯಿತು. 2019ರಿಂದ ಆರಂಭವಾದ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯವು, ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಸ್ವಲ್ಪ ವಿಳಂಬಗೊಂಡಿತು. ಅಂತಿಮವಾಗಿ, 2023ರಲ್ಲಿ ಕಾಮಗಾರಿಗಳು ಪೂರ್ಣಗೊಂಡು, ಪಿಲಿಚಂಡಿ ದೈವದ ಪುನರ್‌ಪ್ರತಿಷ್ಠಾಪನೆ ಅದ್ದೂರಿಯಾಗಿ ನೆರವೇರಿತು. ಈ ಐತಿಹಾಸಿಕ ಜೀರ್ಣೋದ್ಧಾರವು ಹೊಳ್ಳರ ಮನೆತನಕ್ಕೆ ಮಾತ್ರ ಸೀಮಿತವಾಗಿಲ್ಲ. ಇಡೀ ಊರಿನ ಹತ್ತು ಸಮಸ್ತರು ಮತ್ತು ಕೈಗಾರಿಕಾ ವಲಯದವರ ಸಹಭಾಗಿತ್ವದಿಂದ ಇದು ಪ್ರತಿ ವರ್ಷ ವಿಜೃಂಭಣೆಯಿಂದ ಆಚರಿಸಲ್ಪಡುತ್ತಿದೆ. ಪಿಲಿಚಂಡಿ ದೈವದ 800 ವರ್ಷಗಳ ಇತಿಹಾಸಕ್ಕೆ ಹೊಸ ಆಯಾಮವನ್ನು ಈ ಜೀರ್ಣೋದ್ಧಾರವು ನೀಡಿದೆ ಎಂದು ಗುತ್ತು ಮನೆಯವರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಂಚ ಪಡೆಯುವಾಗ ಸಿಕ್ಕಿಬಿದ್ದು ಜೈಲು ಸೇರಿದ ಅಧಿಕಾರಿಗೆ ಬಾಳೆಹಣ್ಣು, ಸೊಳ್ಳೆಬತ್ತಿ ಕೊಟ್ಟ ರೈತ – Kannada News | A Chikkamagaluru Farmer Mocks with brings banana And bread to Officer Who In Shivamogga Jail in Bribe Case

ಶಿವಮೊಗ್ಗ (ಫೆಬ್ರವರಿ .17): ಸಾಮಾನ್ಯವಾಗಿ ಜೈಲಿನಲ್ಲಿರುವ ಬಂಧು-ಮಿತ್ರರನ್ನು ನೋಡಲು ಹೋಗುವವರು ಹಣ್ಣು-ಹಂಪಲು ತೆಗೆದುಕೊಂಡು ಹೋಗುವುದು ಸಹಜ. ಆದರೆ, ಲಂಚ (Bribe) ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿರುವ ಭೂಸ್ವಾಧಿನ ಅಧಿಕಾರಿ ಸದ್ಯ ಶಿವಮೊಗ್ಗದ (Shivamogga) ಸೋಗಾನೆ ಕೇಂದ್ರ ಕಾರಾಗೃಹದಲ್ಲಿದ್ದು, ಜೈಲುಪಾಲಾಗಿರುವ ಭೂಸ್ವಾಧಿನ ಅಧಿಕಾರಿ ಸಿದ್ದಲಿಂಗರೆಡ್ಡಿ ಅವರಿಗಾಗಿ ಚಿಕ್ಕಮಗಳೂರಿನ ರೈತರೊಬ್ಬರು ಬ್ರೆಡ್, ಬಾಳೆಹಣ್ಣು ಹಾಗೂ ಸೊಳ್ಳೆಬತ್ತಿಯನ್ನು ನೀಡಿ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಈ ದೃಶ್ಯ ಮಾತ್ರ ಎಲ್ಲರ ಹುಬ್ಬೇರಿಸುವಂತಿತ್ತು. ಈ ಮೂಲಕ ಸಾರ್ವಜನಿಕವಾಗಿ ಕೆಎಎಸ್ ಅಧಿಕಾರಿಯ ಮಾನ ಹರಾಜು ಹಾಕಿರುವ ಪ್ರಸಂಗ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಿದ್ದಲಿಂಗರೆಡ್ಡಿ ಇತ್ತೀಚೆಗೆ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ದಾಳಿಗೆ ಒಳಗಾಗಿ ಸದ್ಯ ಜೈಲಿನಲ್ಲಿದ್ದಾರೆ. ಈ ಅಧಿಕಾರಿಯ ಕಾರ್ಯವೈಖರಿಯಿಂದ ನೊಂದಿದ್ದ ಚಿಕ್ಕಮಗಳೂರಿನ ಶ್ರೀಗಂಧ ಬೆಳೆಗಾರ ವಿಶುಕುಮಾರ್ ಎಂಬುವರು ಇಂದು (ಫೆಬ್ರವರಿ 17) ವಿನೂತನ ರೀತಿಯಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ತಲೆ ಮೇಲೆ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರು ಬಳಸಿದ್ದ ಶ್ರೀಗಂಧದ ಪಾದುಕೆಯನ್ನು ಹೊತ್ತು ಜೈಲಿನ ದ್ವಾರಕ್ಕೆ ಬಂದ ವಿಶುಕುಮಾರ್, ಅಧಿಕಾರಿಯ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ನಟಿಸುತ್ತಾ ವ್ಯಂಗ್ಯವಾಡಿದ್ದಾರೆ.

ಇದನ್ನೂ ನೋಡಿ: ಲಂಚ ನೀಡಲು ಹಣವಿಲ್ಲದ್ದಕ್ಕೆ ಬೆಳೆದ ಮೂಲಂಗಿಯನ್ನೇ ತಾಲೂಕು ಕಚೇರಿಗೆ ತಂದ ರೈತ

ಶ್ರೀಗಂಧದ ಮರಗಳನ್ನು ಕಷ್ಟಪಟ್ಟು ಬೆಳೆಸಿದ ರೈತರಿಗೆ ಸಿಗಬೇಕಾದ ಸೂಕ್ತ ಪರಿಹಾರವನ್ನು ನೀಡದೆ, ಅಧಿಕಾರ ದುರ್ಬಳಕೆ ಮಾಡಿಕೊಂಡ ಅಧಿಕಾರಿಯ ವಿರುದ್ಧದ ಈ ಪ್ರತಿಭಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಭ್ರಷ್ಟ ಅಧಿಕಾರಿಯೊಬ್ಬ ಜೈಲು ಪಾಲಾದಾಗ ರೈತರು ಪಟಾಕಿ ಸಿಡಿಸಿ ಸಂಭ್ರಮಿಸುವುದು ನೋಡಿದ್ದೇವೆ, ಆದರೆ ಹೀಗೆ ಜೈಲಿಗೇ ಹೋಗಿ ಉಪಚಾರ ಮಾಡುವ ಮೂಲಕ ಅಣಕಿಸಿದ್ದು ಮಾತ್ರ ಹೊಸತಾಗಿತ್ತು. ರೈತ ವಿಶುಕುಮಾರ್ ಅವರ ಈ ನಡೆ ಭ್ರಷ್ಟ ವ್ಯವಸ್ಥೆಗೆ ನೀಡಿದ ದೊಡ್ಡ ಪೆಟ್ಟು ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ವಿಶುಕುಮಾರ್, ಸಿದ್ದಲಿಂಗರೆಡ್ಡಿ ಅವರ ಭ್ರಷ್ಟಾಚಾರ ಮತ್ತು ರೈತ ವಿರೋಧಿ ಧೋರಣೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಸರ್ಕಾರಕ್ಕೆ ಹಣ ಉಳಿಸಲು ಈ ಅಧಿಕಾರಿ ಬಹಳ ಶ್ರಮವಹಿಸಿದ್ದಾರೆ. ನನ್ನ ಅತ್ಯಂತ ಬೆಲೆಬಾಳುವ ಶ್ರೀಗಂಧದ ಮರಕ್ಕೆ ಈ ಅಧಿಕಾರಿ ಕೇವಲ 420 ರೂಪಾಯಿ ದರ ನಿಗದಿ ಮಾಡಿದ್ದರು. ರೈತರಿಗೆ ಅನ್ಯಾಯ ಮಾಡಿ ಸರ್ಕಾರಕ್ಕೆ ಹಣ ಉಳಿಸಿಕೊಡಲು ಮುಂದಾಗಿದ್ದ ಇವರು ಈಗ ಲಂಚದ ಕೇಸಿನಲ್ಲಿ ಜೈಲಿಗೆ ಬಂದಿದ್ದಾರೆ. ಸರ್ಕಾರಕ್ಕೆ 6ನೇ ಗ್ಯಾರಂಟಿ ಕೊಡಲು ಇವರು ಇಷ್ಟು ಹಣ ಉಳಿಸಿರಬೇಕು ಎಂದು ಟಾಂಗ್ ಕೊಟ್ಟರು.

ಜೈಲಿನಲ್ಲಿ ಅವರಿಗೆ ಸೊಳ್ಳೆಗಳು ಕಚ್ಚಿ ತೊಂದರೆಯಾಗಬಾರದು ಎಂದು ಸೊಳ್ಳೆಬತ್ತಿ ತಂದಿದ್ದೇನೆ. ಸ್ನಾನಕ್ಕೆ ಮೈಸೂರು ಸ್ಯಾಂಡಲ್ ಸೋಪ್, ತಿನ್ನಲು ಬ್ರೆಡ್ ಮತ್ತು ಬಾಳೆಹಣ್ಣು ತಂದಿದ್ದೇನೆ. ಅವರಿಗೆ ಆರೋಗ್ಯ ಕೊಡಲಿ ಮತ್ತು ಸರ್ಕಾರಕ್ಕೆ ಇನ್ನಷ್ಟು ಹಣ ಉಳಿಸಲು ಅವರಿಗೆ ದೇವರು ಶಕ್ತಿ ನೀಡಲಿ ಎಂದು ವಿಶುಕುಮಾರ್ ವ್ಯಂಗ್ಯವಾಗಿ ಹಾರೈಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಎರಡು ಕಾಲಘಟ್ಟದ ಲವ್ ಸ್ಟೋರಿ ಹೇಳುವ ‘ಮತ್ತೆ ಮಳೆ ಹೊಯ್ಯುತ್ತಿದೆ’ ಸಿನಿಮಾ – Kannada News | Matthe Male Hoyyutthide new Kannada movie songs released

ಮಳೆಗೂ ಚಿತ್ರರಂಗಕ್ಕೂ ಬಿಡದ ನಂಟು. ಮಳೆಯ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಬರುತ್ತಿದೆ. ‘ಮತ್ತೆ ಮಳೆ ಹೊಯ್ಯುತ್ತಿದೆ’ (Matthe Male Hoyyutthide) ಎಂಬುದು ಈ ಸಿನಿಮಾದ ಶೀರ್ಷಿಕೆ. ಇತ್ತೀಚೆಗೆ ಈ ಸಿನಿಮಾದ ಹಾಡುಗಳನ್ನು ರಿಲೀಸ್ ಮಾಡಲಾಯಿತು. ಚಿತ್ರವನ್ನು ಗಂಗಾಧರ್ ಅವರ ‘ಶ್ರೀ ಗವಿರಂಗನಾಥ ಸ್ವಾಮಿ ಪಿಕ್ಚರ‍್ಸ್’ ಬ್ಯಾನರ್ ಮೂಲಕ ಸುಮ ಅವರು ನಿರ್ಮಾಣ ಮಾಡುತ್ತಿದ್ದರೆ. ಶ್ರುತಿ ಅನಿಲ್‌ಕುಮಾರ್ ಅವರು ಸಹ ನಿರ್ಮಾಪಕಿ ಆಗಿದ್ದಾರೆ. ಪರಮ್‌ ಗುಬ್ಬಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಇತ್ತೀಚೆಗೆ ಉತ್ಸವ್ ಲೆಗಸಿಯಲ್ಲಿ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಈ ಸಿನಿಮಾಗೆ ಕಬ್ಬಡಿ ನರೇಂದ್ರ ಬಾಬು ಅವರು ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದಿದ್ದಾರೆ. ಸಹ ನಿರ್ಮಾಪಕಿ ಶ್ರುತಿ ಅವರು ಪ್ರಾಧ್ಯಾಪಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾಡುಗಳ ಬಿಡುಗಡೆ ಬಳಿಕ ಸುದ್ದಿಗೋಷ್ಠಿ ನಡೆಸಿ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು.

‘ಮತ್ತೆ ಮಳೆ ಹೊಯ್ಯುತ್ತಿದೆ’ ಸಿನಿಮಾದ ಸಾಂಗ್ ರಿಲೀಸ್ ಕಾರ್ಯಕ್ರಮಕ್ಕೆ ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಹಾಗೂ ಹಿರಿಯ ನಿರ್ದೇಶಕ ನಾಗಣ್ಣ ಅವರು ಚಾಲನೆ ನೀಡಿದರು. ಈ ವೇಳೆ ಪ್ರಸ್ತುತ ಚಿತ್ರರಂಗವು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅದಕ್ಕೆ ಇರುವ ಪರಿಹಾರಗಳ ಬಗ್ಗೆ ನಾಗಣ್ಣ ಬೆಳಕು ಚೆಲ್ಲಿದರು. ನಂತರ ಇದೇ ಬ್ಯಾನರ್‌ನಿಂದ ನಿರ್ಮಾಣ ಆಗುತ್ತಿರುವ, ಕಬ್ಬಡ್ಡಿ ನರೇಂದ್ರಬಾಬು ನಿರ್ದೇಶನದ ‘ಭೀಮ ತೀರದ ಹಂತಕರು’ ಸಿನಿಮಾದ ಪೋಸ್ಟರ್‌ನ್ನು ಲೋಕಾರ್ಪಣೆ ಮಾಡಲಾಯಿತು.

ಈ ಸಿನಿಮಾದಲ್ಲಿ ನಿರ್ಮಾಪಕರ ಪುತ್ರ ಜಿ. ಲಿಖಿತ್ ಹೀರೋ ಆಗಿ ನಟಿಸಿದ್ದರೆ. ರಂಗಭೂಮಿ ಹಿನ್ನೆಲೆ ಹೊಂದಿರುವ ಜಯವರ್ಧನ್ ಅವರು ಎರಡು ಶೇಡ್‌ಗಳಲ್ಲಿ ನಟಿಸಿ ಮತ್ತೋರ್ವ ಹೀರೋ ಆಗಿದ್ದಾರೆ. ಸುಲಕ್ಷಖೈರ, ಭೂಮಿಕಾ ಗೌಡ ಅವರು ಈ ಸಿನಿಮಾದ ನಾಯಕಿಯರು. ಚಂದ್ರಶೇಖರ ರೆಡ್ಡಿ ಎ.ಎಂ, ಕುಮಾರಿ ಸ್ವರ್ಣ, ದಿನಮಣಿ, ಪ್ರಕಾಶ್‌ ಮೂರ್ತಿ, ಕಾವ್ಯ ಕುಮಾರಿ ಮುಂತಾದ ಕಲಾವಿದರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: ಹಾಸನ ಎಸ್​ಪಿ ಕಚೇರಿ ಹೊರಗೆ ಕಾದು ಕುಳಿತ ಯಶ್ ತಾಯಿ ಪುಷ್ಪಾ

ನಿರ್ದೇಶಕ ಪರಮ್‌ ಗುಬ್ಬಿ ಮಾತನಾಡಿ, ‘ಸಾಹಿತಿ ಕೆ. ಸದಾಶಿವ ವಿರಚಿತ ಸಣ್ಣಕತೆಗಳಲ್ಲಿ ಒಂದಾದ ‘ಮತ್ತೆ ಮಳೆ ಹೂಯ್ಯುತಿದೆ’ ಕೃತಿಯನ್ನು ಬಳಸಲಾಗಿದೆ. ಅವರಿಗೆ ನೀಡಬಹುದಾದ ಸಂಭಾವನೆಯ ಮೊತ್ತವನ್ನು ಸಾಹಿತ್ಯ ಪರಿಷತ್‌ನಲ್ಲಿ ದತ್ತಿಯಾಗಿ ನೀಡಿ, ಪ್ರತಿ ವರ್ಷ ಸದಾಶಿವ ಹೆಸರಿನಲ್ಲಿ ಯುವ ಬರಹಗಾರರಿಗೆ ಪ್ರಶಸ್ತಿ ನೀಡುವ ಯೋಜನೆ ಬಗ್ಗೆ ನಿರ್ಮಾಪಕರಿಗೆ ತಿಳಿಸಿದಾಗ ಖುಷಿಯಿಂದ ಒಪ್ಪಿಕೊಂಡರು’ ಎಂದು ಹೇಳಿದರು. ಶಾಂತಾರಾವ್ ಇಪಿಲಿ ಅವರ ಛಾಯಾಗ್ರಹಣ, ಧನುಷ್ ವೀರ್ ಅವರ ಸಂಕಲನ, ಬಾಬು ಖಾನ್ ಅವರ ಕಲಾ ನಿರ್ದೇಶನ, ನಂದ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version