Headlines

ಒಟಿಟಿಯಲ್ಲಿ ‘ಧುರಂಧರ್’ ನೋಡಿ ಮೆಚ್ಚಿಕೊಂಡ ಪಾಕಿಸ್ತಾನಿ ಪ್ರೇಕ್ಷಕರು – Kannada News | Pakistani viewer review Dhurandhar after watching it on Netflix OTT

ರಣವೀರ್ ಸಿಂಗ್ ನಟನೆಯ ‘ಧುರಂಧರ್’ (Dhurandhar) ಸಿನಿಮಾ ಪಾಕಿಸ್ತಾನದ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿರಲಿಲ್ಲ. ಅಲ್ಲದೇ ಹಲವು ರಾಷ್ಟ್ರಗಳಲ್ಲಿ ಈ ಸಿನಿಮಾವನ್ನು ಬ್ಯಾನ್ ಮಾಡಲಾಗಿತ್ತು. ಆದರೆ ಈಗ ಒಟಿಟಿಯಲ್ಲಿ ‘ಧುರಂಧರ್’ ಬಿಡುಗಡೆ ಆಗಿದೆ. ಪಾಕಿಸ್ತಾನದ (Pakistan) ಜನರು ಕೂಡ ನೆಟ್​ಫ್ಲಿಕ್ಸ್ ಮೂಲಕ ಈ ಸಿನಿಮಾವನ್ನು ನೋಡಿದ್ದಾರೆ. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ‘ಧುರಂಧರ್’ ಸಿನಿಮಾದ ಪೂರ್ತಿ ಕಥೆ ಪಾಕಿಸ್ತಾನದ ಲಿಯಾರಿ ಪಟ್ಟಣದಲ್ಲಿ ನಡೆಯುತ್ತದೆ. ಆ ದೃಶ್ಯಗಳನ್ನು ಕಂಡು ಪಾಕ್ ಮಂದಿ ಫಿದಾ ಆಗಿದ್ದಾರೆ. 2000ನೇ ಇಸವಿಯ…

Read More

ಕ್ರಿಕೆಟ್ ತಾಳ್ಮೆಯನ್ನೂ ಪರೀಕ್ಷಿಸುತ್ತದೆ… ಸಚಿನ್ ತೆಂಡೂಲ್ಕರ್ ಭಾವುಕ ಪೋಸ್ಟ್ ! – Kannada News | Sachin Tendulkar’s Emotional Post for Son Arjun’s IPL Debut Goes Viral

ಕ್ರಿಕೆಟ್ ಜಗತ್ತಿನ ದಂತಕಥೆ ಸಚಿನ್ ತೆಂಡೂಲ್ಕರ್ ತಮ್ಮ ಮಗ ಅರ್ಜುನ್ ತೆಂಡೂಲ್ಕರ್ ಅವರ ಐಪಿಎಲ್ 2026ರ ಸೀಸನ್‌ನ ಮೊದಲ ಪಂದ್ಯದ ಪ್ರದರ್ಶನವನ್ನು ಶ್ಲಾಘಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹೃದಯಸ್ಪರ್ಶಿ ಸಂದೇಶವೊಂದು ಸದ್ಯ ಭಾರಿ ವೈರಲ್ ಆಗಿದೆ. ಶನಿವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ಪರ ಅರ್ಜುನ್ ತೆಂಡೂಲ್ಕರ್ ಈ ಸೀಸನ್‌ನ ತಮ್ಮ ಮೊದಲ ಪಂದ್ಯವನ್ನು ಆಡಿದರು. ಮುಂಬೈ ಇಂಡಿಯನ್ಸ್‌ನಿಂದ ಲಕ್ನೋ ತಂಡಕ್ಕೆ ಟ್ರೇಡ್ ಆಗಿದ್ದ ಅರ್ಜುನ್, ಇಡೀ ಸೀಸನ್ ಬೆಂಚ್…

Read More

Video: ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹಾಲಿನ ಕ್ಯಾನ್ ತಲೆಗೆ ಹಾಕಿಕೊಂಡು ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿ – Kannada News | Milk Can Mishap: Man in Rajasthan Gets Head Stuck Inside Container

ಅಲ್ವಾರ್, ಏಪ್ರಿಲ್ 26: ಬೇಸಿಗೆಯ ಸುಡುವ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನರು ತರಹೇವಾರಿ ಹರಸಾಹಸ ಮಾಡುವುದು ಸಾಮಾನ್ಯ. ಆದರೆ, ಅಲ್ವಾರ್‌ನ ಮಾಧೋಗಢ ಗ್ರಾಮದ ಕಲೂರಾಮ್ ರೆಬಾರಿ ಎಂಬ ವ್ಯಕ್ತಿ ಮಾಡಿದ ಉಪಾಯ ಮಾತ್ರ ಆತನನ್ನೇ ಸಂಕಷ್ಟಕ್ಕೆ ದೂಡಿತ್ತು. ತಲೆಯ ಮೇಲೆ ಸಿಲುಕಿಕೊಂಡ ಹಾಲಿನ ಕ್ಯಾನ್‌ನಿಂದಾಗಿ ಎರಡು ಗಂಟೆಗಳ ಕಾಲ ಪರದಾಡಿದ ಘಟನೆ ಈಗ ಬೆಳಕಿಗೆ ಬಂದಿದೆ. ಏಪ್ರಿಲ್ 24ರಂದು ಕಲೂರಾಮ್ ರೆಬಾರಿ ಗೋಧಿ ವಿತರಿಸಲು ಹೋಗುತ್ತಿದ್ದರು. ಅಂದು ಬಿಸಿಲು ವಿಪರೀತವಾಗಿದ್ದರಿಂದ, ತಲೆಗೆ ಬಿಸಿ ತಗುಲಬಾರದೆಂದು ತಮಾಷೆಗಾಗಿ ಅಥವಾ ರಕ್ಷಣೆಗಾಗಿ…

Read More

‘ಕೆಲಸ ಮುಗಿಸಿ ರಾತ್ರಿ 11 ಗಂಟೆಗೆ ಮನೆಗೆ ಹೋದ್ರೆ ಅದು ಜೀವನವೇ ಅಲ್ಲ’: ಸೈಫ್ ಅಲಿ ಖಾನ್ – Kannada News | Saif Ali Khan shares thoughts on work life balance and his new movie Kartavya

ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ತಮ್ಮ ಹೊಸ ಸಿನಿಮಾ ‘ಕರ್ತವ್ಯ’ (Kartavya) ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರು ‘ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್’ ಸಂಸ್ಥೆಯ ಮೂಲಕ ನಿರ್ಮಿಸಿದ್ದಾರೆ. 2022ರಿಂದ ವರ್ಷಕ್ಕೆ ಒಂದೇ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಸೈಫ್, ಇತ್ತೀಚಿನ ಸಂದರ್ಶನವೊಂದರಲ್ಲಿ ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುವ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮಕ್ಕಳಾದ ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಅಲಿ ಖಾನ್…

Read More

‘ಲಗಾನ್’ ಸಿನಿಮಾಕ್ಕೆ 25ರ ಸಂಭ್ರಮ, ಮತ್ತೆ ಜೊತೆಯಾದ ಹಳೆಯ ‘ತಂಡ’ – Kannada News | 25 years for Lagaan, movie re release in many cities

ಭಾರತೀಯ ಚಿತ್ರರಂಗದ ಐಕಾನಿಕ್ ಸಿನಿಮಾ ‘ಲಗಾನ್’ (Lagaan). ಆಸ್ಕರ್​​ಗೆ ನಾಮಿನೇಟ್ ಆಗಿದ್ದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆ ಪಡೆದ ಈ ಸಿನಿಮಾ ಬಿಡುಗಡೆಯಾಗಿ 25 ವರ್ಷಗಳು ಪೂರ್ಣಗೊಂಡಿವೆ. ಇದೇ ಖುಷಿಯಲ್ಲಿ ‘ಲಗಾನ್’ ಸಿನಿಮಾ ಮರು ಬಿಡುಗಡೆ ಆಗಿದೆ. ಮುಂಬೈ, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಸಿನಿಮಾ ಮರು ಬಿಡುಗಡೆ ಆಗಿದ್ದು, ಅಭಿಮಾನಿಗಳು ತಂಡೋಪತಂಡವಾಗಿ ಸಿನಿಮಾಕ್ಕೆ ಹೋಗಿ ಎಂಜಾಯ್ ಮಾಡುತ್ತಿದ್ದಾರೆ. ಮಾತ್ರವಲ್ಲದೆ, ಸಿನಿಮಾದ ಮರು ಬಿಡುಗಡೆ ಖುಷಿಯಲ್ಲಿ ‘ಲಗಾನ್’ ಚಿತ್ರತಂಡವೂ ಸಹ ಮತ್ತೆ ಒಂದಾಗಿ ಸಂವಾದ ನಡೆಸಿದೆ. ಆಮಿರ್…

Read More

ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಪೋಷಕರಿಗೆ ಉಚಿತ ಸಮವಸ್ತ್ರವೇ ಹೊರೆ: ಬಟ್ಟೆಗಿಂತ ಹೊಲಿಗೆ ಕೂಲಿಯೇ ದುಪ್ಪಟ್ಟು! – Kannada News | Bengaluru Government School Parents Outraged as Uniform Stitching Charges Cost More Than Ready Made Clothes

ಬೆಂಗಳೂರು, ಜೂನ್ 30: ಕರ್ನಾಟಕದಲ್ಲಿ (Karnataka) ಈಗಾಗಲೇ ಶಾಲೆಗಳು ಶುರುವಾಗಿವೆ. ಆದರೆ, ಇತ್ತ ಶಾಲಾ ಶಿಕ್ಷಣ ಇಲಾಖೆ ಮಕ್ಕಳಿಗೆ ನೀಡಬೇಕಾದ ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಉಚಿತ ಸಮವಸ್ತ್ರ ನೀಡುವ ವಿಷಯದಲ್ಲಿ ಪೋಷಕರನ್ನು ಸಂಕಷ್ಟಕ್ಕೆ ತಳ್ಳಿದೆ. ರಾಜಧಾನಿ ಬೆಂಗಳೂರಿನ ಸರ್ಕಾರಿ ಶಾಲೆಗಳ ಪೋಷಕರು ‘ನಮಗೆ ಸರ್ಕಾರದ ಉಚಿತ ಸಮವಸ್ತ್ರದ ಬಟ್ಟೆಯೇ ಬೇಡ, ನಾವೇ ಸ್ವಂತ ಹಣದಲ್ಲಿ ಖರೀದಿ ಮಾಡುತ್ತೇವೆ’ ಎನ್ನುತ್ತಿದ್ದಾರೆ. ಇದಕ್ಕೆ ಕಾರಣ, ಶಿಕ್ಷಣ ಇಲಾಖೆ ನೀಡುವ ಉಚಿತ ಬಟ್ಟೆಗಿಂತ ಅದರ ಹೊಲಿಗೆ ಕೂಲಿಯೇ ದುಪ್ಪಟ್ಟಾಗಿರುವುದು. ಇದು ಪೋಷಕರ…

Read More

ಐಡಿ ಇಲ್ಲದಿದ್ರೆ ಪ್ರವೇಶವಿಲ್ಲ: ಅಪ್ರಾಪ್ತರ ಮದ್ಯಪಾನ ತಡೆಗೆ ಹೊಸ ರೂಲ್ಸ್ ಜಾರಿಗೆ ತಂದ ಗೃಹ ಸಚಿವ ಖರ್ಗೆ – Kannada News

ಬೆಂಗಳೂರು, (ಜೂನ್ 08): ಹದಿಹರೆಯದವರಲ್ಲಿ ಹೆಚ್ಚುತ್ತಿರುವ ಮದ್ಯಪಾನ ಮತ್ತು ಮಾದಕ ದ್ರವ್ಯಗಳ ಅತಿಯಾದ ಬಳಕೆಯು ಸರ್ಕಾರಕ್ಕೆ ದೊಡ್ಡ ಆತಂಕವನ್ನುಂಟುಮಾಡಿದೆ. ಅಲ್ಲದೇ ಚಿಕ್ಕವಯಸ್ಸಿನಲ್ಲೇ ದುಶ್ಚಟಗಳಿಗೆ ದಾಸರಾಗಿ ಆರೋಗ್ಯ ಹಾಳು ಮಾಡುಕೊಳ್ಳುತ್ತಿದ್ದಾರೆ. ಹೀಗಾಗಿ ಇದನ್ನು ತಡೆಗಟ್ಟಲು ನೂತನ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge)  ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಈ ಸಂಬಂಧ ಬೆಂಗಳೂರು ನಗರದ ಪಬ್‌ಗಳು, ಬಾರ್‌ಗಳು ಮತ್ತು ಮದ್ಯ ಸರಬರಾಜು ಮಾಡುವ ಎಲ್ಲಾ ವಾಣಿಜ್ಯ ಸಂಸ್ಥೆಗಳ ಮೇಲೆ ಕಠಿಣ ನಿಗಾ ವಹಿಸಲು ಪೊಲೀಸ್ ಇಲಾಖೆಗೆ ಖಡಕ್ ಸೂಚನೆ…

Read More

Red Coral Gemstone: ಹವಳವನ್ನು ಯಾರು ಧರಿಸಬಹುದು? ಇದರ ಪ್ರಯೋಜನ ಮತ್ತು ಧರಿಸುವ ವಿಧಾನ ತಿಳಿಯಿರಿ – Kannada News | Red Coral Gemstone: Astrological Benefits and How to Wear Guide for Mars

ವೈದಿಕ ಜ್ಯೋತಿಷ್ಯದಲ್ಲಿ ಹವಳವನ್ನು ಮಂಗಳ ಗ್ರಹಕ್ಕೆ ಸಂಬಂಧಿಸಿದ ಅತ್ಯಂತ ಶಕ್ತಿಶಾಲಿ ರತ್ನವೆಂದು ಪರಿಗಣಿಸಲಾಗುತ್ತದೆ. ಇದು ಶಕ್ತಿ, ಧೈರ್ಯ, ಕ್ರಿಯಾಶೀಲತೆ ಮತ್ತು ಹೋರಾಟದ ಮನೋಭಾವವನ್ನು ಪ್ರತಿನಿಧಿಸುತ್ತದೆ. ಜಾತಕದಲ್ಲಿ ಮಂಗಳ ದುರ್ಬಲವಾಗಿದ್ದರೆ ಅಥವಾ ಅಶುಭ ಗ್ರಹಗಳ ಪ್ರಭಾವದಲ್ಲಿದ್ದರೆ, ಭಯ, ಅತಿಯಾದ ಕೋಪ, ಶಕ್ತಿಯ ಕೊರತೆ ಹಾಗೂ ವೈವಾಹಿಕ ಅಥವಾ ವೃತ್ತಿಜೀವನದ ಸಮಸ್ಯೆಗಳು ಉಂಟಾಗಬಹುದು ಎಂಬ ನಂಬಿಕೆ ಇದೆ. ಹವಳವು ಸಮುದ್ರ ಜೀವಿಗಳಿಂದ ಉತ್ಪತ್ತಿಯಾದ ನೈಸರ್ಗಿಕ ರತ್ನವಾಗಿದ್ದು, ಮುಖ್ಯವಾಗಿ ಮೆಡಿಟರೇನಿಯನ್ ಸಮುದ್ರ ಪ್ರದೇಶದಲ್ಲಿ ಕಂಡುಬರುತ್ತದೆ. ಇದರ ಬಣ್ಣ ತಿಳಿ ಕೆಂಪಿನಿಂದ ಹಿಡಿದು…

Read More

IND vs AFG: 25 ಓವರ್‌ಗಳ ಪಂದ್ಯ; ಟಾಸ್ ಗೆದ್ದ ಗಿಲ್, ಟೀಂ ಇಂಡಿಯಾ ಪರ ಇಬ್ಬರ ಪಾದಾರ್ಪಣೆ – Kannada News | India vs Afghanistan ODI: Rain Delays, Gill Wins Toss, 25 Over Thriller and Debut

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಏಕದಿನ ಸರಣಿ ಜೂನ್ 13 ರಿಂದ ಆರಂಭವಾಗಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮಳೆಯಿಂದಾಗಿ ಈ ಪಂದ್ಯದ ಟಾಸ್ ವಿಳಂಬವಾಯಿತು. ಅದೃಷ್ಟವಶಾತ್ ಮಳೆ ನಿಂತಿದ್ದು, ಪಂದ್ಯ ಆರಂಭವಾಗಿದೆ. ತಲಾ 25 ಓವರ್​ಗಳ ಪಂದ್ಯವನ್ನು ನಡೆಸಲು ತೀರ್ಮಾನಿಸಲಾಗಿದೆ. ಅಂದರೆ ಉಭಯ ತಂಡಗಳು ತಲಾ 25 ಓವರ್​ಗಳ ಇನ್ನಿಂಗ್ಸ್ ಆಡಲಿವೆ. ಇನ್ನು ಈ ಪಂದ್ಯದ ಟಾಸ್ ಕೂಡ…

Read More

ಅಕ್ರಮ ಮರಳು ದಂಧೆ ವಿರುದ್ಧ ಸಮರ ಸಾರಿದ ಜೆಡಿಎಸ್​ ಶಾಸಕಿ ಮನೆಗೆ ನುಗ್ಗಿ ಧಮ್ಕಿ – Kannada News | Sand mafia In Raichur: A Gang threatens to Devadurga JDS MLA Karemma Nayak, case Book

ರಾಯಚೂರು, (ಜನವರಿ 20): ಅಕ್ರಮ ಮರಳು ದಂಧೆ (illegal sand mining )ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ದೇವದುರ್ಗ (Devadurga) ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಶಾಸಕಿ ಕರೆಮ್ಮ ನಾಯಕ್ (Karemma Nayak) ಮನೆಗೆ ನುಗ್ಗಿ ಧಮ್ಕಿ ಹಾಕಿರುವ ಆರೋಪ ಕೇಳಿಬಂದಿದೆ. ಕೃಷ್ಣಾ ನದಿ ತೀರದಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಕೋರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಪೊಲಿಸರಿಗೆ ಶಾಸಕಿ ಕರೆಮ್ಮ ಸೂಚನೆ ನೀಡಿದ್ದರು. ಈ ಸೂಚನೆ ಮೇರೆಗೆ ಪೊಲೀಸರು, ಅಕ್ರಮ ಮರಳು ದಂಧೆ ಮೇಲೆ ದಾಳಿ ಮಾಡಿದ್ದು, ಜೆಸಿಬಿ,ಟಿಪ್ಪರ್,…

Read More