Headlines

ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾಗೆ ‘ವಿಶ್ವಕಪ್’ ಸೋಲಿನ ಭೀತಿ..! – Kannada News | Team India Fears Defeat Following Victory

ಭಾರತ ತಂಡವು ಟಿ20 ವಿಶ್ವಕಪ್​ನ 27ನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಸೂಪರ್-8 ಹಂತಕ್ಕೇರಿದೆ. ಕೊಲಂಬೊದಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 175 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡ 18 ಓವರ್​ಗಳಲ್ಲಿ 114 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು 61 ರನ್​ಗಳ ಜಯ ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾಗೆ ವಿಶ್ವಕಪ್ ಸೋಲಿನ ಭೀತಿ ಎದುರಾಗಿದೆ….

Read More

ಭಾರಿ ಮಳೆಗೆ ಕೊಚ್ಚಿಹೋದ ದುಧಿಯಾ ಸೇತುವೆ; ಡಾರ್ಜಿಲಿಂಗ್-ಸಿಲಿಗುರಿ ಸಂಪರ್ಕ ಸಂಪೂರ್ಣ ಕಡಿತ! – Kannada News | Darjeeling Siliguri route closed after Dudhia bridge washed away due to Heavy Rainfall

ಡಾರ್ಜಿಲಿಂಗ್, ಜೂನ್ 19: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಸುತ್ತಮುತ್ತಲಿನ ಬೆಟ್ಟ ಪ್ರದೇಶಗಳಲ್ಲಿ ದಿಢೀರ್ ಪ್ರಕೃತಿ ವಿಕೋಪ ಸಂಭವಿಸಿದೆ. ಒಂದೇ ಸಮನೆ ಸುರಿದ 200 ಮಿಮೀ ಭಾರಿ ಮಳೆಯಿಂದಾಗಿ (Rain Updates) ಗುಡ್ಡಗಾಡು ಪ್ರದೇಶದ ನದಿಗಳು ಮತ್ತು ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನೀರಿನ ತೀವ್ರ ರಭಸಕ್ಕೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಿಲಿಗುರಿ ಮತ್ತು ಮಿರಿಕ್-ಡಾರ್ಜಿಲಿಂಗ್ ಅನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿರುವ ಪ್ರಮುಖ ‘ದುಧಿಯಾ ಸೇತುವೆ’ ಪ್ರವಾಹಕ್ಕೆ ಸಿಲುಕಿ ಸಂಪೂರ್ಣವಾಗಿ ಕೊಚ್ಚಿಹೋಗಿದೆ. ಸೇತುವೆ ಕೊಚ್ಚಿಹೋಗಿರುವುದು…

Read More

RCB vs GT, IPL 2026 Final Live Score: ಆರ್​​ಸಿಬಿ- ಗುಜರಾತ್ ನಡುವೆ ಫೈನಲ್ ಫೈಟ್

ಐಪಿಎಲ್ 2026 ರ ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಲಿದೆ. ಎರಡೂ ತಂಡಗಳು ತಮ್ಮ ಎರಡನೇ ಐಪಿಎಲ್ ಟ್ರೋಫಿಯನ್ನು ಎತ್ತುವ ಗುರಿಯೊಂದಿಗೆ ಕಣಕ್ಕಿಳಿಯುತ್ತಿವೆ. ಲೀಗ್ ಹಂತದಲ್ಲಿ ಅಗ್ರಸ್ಥಾನದಲ್ಲಿದ್ದ ಆರ್‌ಸಿಬಿ ಕ್ವಾಲಿಫೈಯರ್ -1 ರಲ್ಲಿ ಗುಜರಾತ್ ಮಣಿಸಿ ಫೈನಲ್​ಗೇರಿತ್ತು. ಇತ್ತ ಗುಜರಾತ್ ಕ್ವಾಲಿಫೈಯರ್ -2 ರಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದೆ. ಈ ಆವೃತ್ತಿಯಲ್ಲಿ ಎರಡೂ ತಂಡಗಳು ಮುಖಾಮುಖಿಯಾಗುತ್ತಿರುವುದು ಇದು ನಾಲ್ಕನೇ ಬಾರಿ….

Read More

ಬಜೆಟ್​​ ಅಧಿವೆಶನದ ನಡುವೆ ಮಹತ್ವದ ಬೆಳವಣಿಗೆ: ದೀಢೀರ್​​ ಸಿಎಂ ಭೇಟಿಯಾಗಿದ್ದೇಕೆ ಕಾಂಗ್ರೆಸ್​​ನ ಹಿರಿಯ ಶಾಸಕರ ತಂಡ?

ಬೆಂಗಳೂರು, ಮಾರ್ಚ್​​ 17: ಬಜೆಟ್​​ ಅಧಿವೆಶನದ ನಡುವೆಯೇ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬೆಳವಣಿಗೆ ನಡೆದಿದೆ. ಸಚಿವ ಸಂಪುಟ ಪುನಾರಚನೆ ವೇಳೆ ಕನಿಷ್ಠ 20 ಹಿರಿಯ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡುವಂತೆ ವಿಧಾನಸೌಧ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ಎಂಎಲ್​​ಎಗಳು ಮನವಿ ಮಾಡಿದ್ದಾರೆ. ಭೋಜನ ವಿರಾಮದ ಸಮಯದಲ್ಲಿ ಸಿಎಂ ಭೇಟಿಯಾಗಿರುವ ‘ಕೈ’ ಶಾಸಕರು 3ಕ್ಕೂ ಹೆಚ್ಚು ಬಾರಿ ನಾವು ಎಂಎಲ್​​ಎಗಳಾಗಿದ್ದೇವೆ. ಹೀಗಾಗಿ ನಮಗೂ ಅವಕಾಶ ನೀಡಿ ಎಂಬ ಆಗ್ರಹ ಮುಂದಿಟ್ಟಿದ್ದಾರೆ. ಶಾಸಕರಾದ ಎನ್​.ಎ.ಹ್ಯಾರಿಸ್​, ಹಂಪನಗೌಡ ಬಾದರ್ಲಿ, ಬಾಲಕೃಷ್ಣ, ನಾರಾಯಣಸ್ವಾಮಿ, ಅಶೋಕ…

Read More

ಹೈದರಾಬಾದ್​​ಗೆ ನಾಳೆ ಪ್ರಧಾನಿ ಮೋದಿ ಭೇಟಿ; 9,400 ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ – Kannada News | PM Narendra Modi To Visit Telangana Tomorrow to Launch Rs 9400 crore infrastructure projects

ಹೈದರಾಬಾದ್, ಮೇ 9: ನಾಳೆ ತೆಲಂಗಾಣ ರಾಜ್ಯದ ಮೂಲಸೌಕರ್ಯದ ಅಭಿವೃದ್ಧಿಯಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲು ಅನಾವರಣಗೊಳ್ಳಲಿದೆ. ರಾಜ್ಯದ ಅಭಿವೃದ್ಧಿಯನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ನಾಳೆ (ಭಾನುವಾರ) ಹೈದರಾಬಾದ್​​ನಲ್ಲಿ 9,400 ಕೋಟಿ ರೂ. ಮೌಲ್ಯದ ಹಲವಾರು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಿದ್ದಾರೆ. ಈ ಕಾರ್ಯಕ್ರಮವು ಭಾನುವಾರ ಮಧ್ಯಾಹ್ನ 2.30ಕ್ಕೆ ಗಚಿಬೌಲಿಯ HIC ಕೇಂದ್ರದಲ್ಲಿ ನಡೆಯಲಿದೆ. ಪ್ರಧಾನಿ ಮೋದಿ ಉದ್ಘಾಟಿಸಲಿರುವ ಪ್ರಮುಖ ಯೋಜನೆಗಳು: ರಸ್ತೆ ವಿಸ್ತರಣೆ (ರೂ. 3,180 ಕೋಟಿ): ಹೈದರಾಬಾದ್-ಪಣಜಿ ಆರ್ಥಿಕ…

Read More

ಕ್ರಿಸ್ ಗೇಲ್​ ವಿಶ್ವ ದಾಖಲೆ ಮುರಿದ ವಿರಾಟ್ ಕೊಹ್ಲಿ

ದಾಖಲೆಗಳ ಸರದಾರ ವಿರಾಟ್ ಕೊಹ್ಲಿ (Virat Kohli) ಹೆಸರಿಗೆ ಮತ್ತೊಂದು ವಿಶ್ವ ದಾಖಲೆ ಸೇರ್ಪಡೆಯಾಗಿದೆ. ಈ ಬಾರಿ ಕೊಹ್ಲಿ ಮುರಿದಿರುವುದು ಯುನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಅವರ ವಿಶ್ವ ದಾಖಲೆಯನ್ನು. ಅದು ಸಹ ಶತಕದ ಜೊತೆಯಾಟವಾಡುವ ಮೂಲಕ. ಹೌದು, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಸ್ಫೋಟಕ ದಾಂಡಿಗ ಫಿಲ್ ಸಾಲ್ಟ್ ಜೊತೆಗೂಡಿ 120 ರನ್​ಗಳ ಜೊತೆಯಾಟವಾಡಿದ್ದರು. ಈ ಜೊತೆಯಾಟದೊಂದಿಗೆ…

Read More

IPL 2026: ಆರ್​ಸಿಬಿ, ಆರ್​ಆರ್ ಮಾರಾಟದಿಂದ ಬಿಸಿಸಿಐಗೆ ಹರಿದು ಬಂತು ಸಾವಿರ ಕೋಟಿಗೂ ಅಧಿಕ ಆದಾಯ

2026 ರ ಐಪಿಎಲ್ (IPL 2026) ಆರಂಭಕ್ಕೂ ಮುನ್ನ ಲೀಗ್​ನ ಎರಡು ಚಾಂಪಿಯನ್‌ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ರಾಜಸ್ಥಾನ್ ರಾಯಲ್ಸ್ (RR) ತಂಡವನ್ನು ದಾಖಲೆಯ ಮೊತ್ತಕ್ಕೆ ಮಾರಾಟ ಮಾಡಲಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡವನ್ನು ಕಾಲ್ ಸೊಮಾನಿ ನೇತೃತ್ವದ ಕನ್ಸಾರ್ಟಿಯಂ 15000 ಸಾವಿರ ಕೋಟಿ ರೂ.ಗೆ ಖರೀದಿ ಮಾಡಿದೆ. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಅಮೆರಿಕದ ಖಾಸಗಿ ಇಕ್ವಿಟಿ…

Read More

ಬೂದಿ ಮುಚ್ಚಿದ ಕೆಂಡವಾದ ರಾಯರ ಜಪದ ಕಟ್ಟೆ ವಿವಾದ: ಅರ್ಚಕರ ಕುಟುಂಬದಿಂದ ಕಾನೂನು ಹೋರಾಟದ ಚಿಂತನೆ – Kannada News | Mantralaya Rayaru Bichchali Land Dispute: Priest’s family considering legal action

ರಾಯರ ಜಪದ ಕಟ್ಟೆ ವಿವಾದImage Credit source: tv9 kannada ರಾಯಚೂರು, ಏಪ್ರಿಲ್​ 14: ಮಂತ್ರಾಲಯ ರಾಯರು (Mantralaya Rayaru) ತಪಸ್ಸು ಮಾಡಿದ್ದ ಜಪದ ಕಟ್ಟೆ ಬಳಿಯ ಜಮೀನು ವಿವಾದ ಬೂದಿ ಮುಚ್ಚಿದ ಕೆಂಡದಂತಿದೆ. ವ್ಯಾಪಕ ವಿರೋಧದ ಮಧ್ಯೆಯೂ ಜಿಲ್ಲಾಡಳಿತ ಸರ್ವೆ ಕಾರ್ಯ ಮುಗಿಸಿದೆ. ತಳ್ಳಾಟ, ನೂಕಾಟದ ಮಧ್ಯೆ ಭಾರೀ ಹೈಡ್ರಾಮಾಗೆ ಸಾಕ್ಷಿಯಾಗಿದ್ದ ವಿವಾದ ಸಂಬಂಧ ಹೈಕೋರ್ಟ್​ ಆದೇಶ ಪ್ರಶ್ನಿಸಿ, ಅರ್ಚಕರ ಕುಟುಂಬ ಕಾನೂನು ಹೋರಾಟಕ್ಕೆ ಸಜ್ಜಾಗಿದೆ. ಭಕ್ತರ ಆರಾಧ್ಯ ದೈವ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು ತಪಸ್ಸು…

Read More

ಇಶಾ ಫೌಂಡೇಷನ್​​ನಲ್ಲಿ ಅದ್ದೂರಿ ಶಿವರಾತ್ರಿ ಸಂಭ್ರಮ; ನೇರ ಪ್ರಸಾರ ಇಲ್ಲಿದೆ – Kannada News | Isha Foundation Maha Shivaratri 2026 Live: Rajnath Singh, VIPs and Celebrations in Coimbatore

ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ನಡೆಯುತ್ತಿರುವ ಶಿವರಾತ್ರಿ ಸಂಭ್ರಮದ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ. ಈ ಬಾರಿಯ ಉತ್ಸವದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಸಂಸದೀಯ ವ್ಯವಹಾರಗಳ ಸಚಿವ ಎಲ್. ಮುರುಗನ್ ಮತ್ತು ಇತರ ಗಣ್ಯರು ಕೂಡ ಪಾಲ್ಗೊಳ್ಳಲಿದ್ದಾರೆ. ಮಹಾ ಶಿವರಾತ್ರಿ ಉತ್ಸವವು ಇಂದು ಸಂಜೆ6 ಗಂಟೆಯಿಂದ ಪ್ರಾರಂಭವಾಗಿದ್ದು, ಮರುದಿನ ಬೆಳಿಗ್ಗೆ 6 ಗಂಟೆಯವರೆಗೆ ನಡೆಯಲಿದೆ. ಈ ವೇಳೆ ಧ್ಯಾನ, ಮಂತ್ರ ಪಠಣ, ಯೋಗೇಶ್ವರಲಿಂಗ ಮಹಾ…

Read More

ಬಾಯಾರಿಕೆಯಿಂದ ಬಸ್ ಅಡ್ಡಗಟ್ಟಿ ನೀರು ಕುಡಿದ ಕೋತಿಗಳು; ವಿಡಿಯೋ ವೈರಲ್ – Kannada News | Thirsty monkeys blocked bus to drink water in maharashtra video goes viral

ನವದೆಹಲಿ, ಮೇ 22: ಭಾರತದಲ್ಲಿ ಬೇಸಿಗೆಯ ಧಗೆ ಜೋರಾಗಿದೆ. ಇದರಿಂದಾಗಿ ವಿವಿಧ ರಾಜ್ಯಗಳಲ್ಲಿ ಶಾಖದ ಮಟ್ಟವು ತುಂಬಾ ತೀವ್ರವಾಗಿದೆ. ನಿಮ್ಮ ಮನೆಯ ಮುಂದೆ ಒಂದು ಬಟ್ಟಲಿನಲ್ಲಿ ಸ್ವಲ್ಪ ನೀರಿಟ್ಟರೆ ಪ್ರಾಣಿ-ಪಕ್ಷಿಗಳ ಬಾಯಾರಿಕೆ ನೀಗುತ್ತದೆ. ನೀರು ಸಿಗದೆ ಎಷ್ಟೋ ಪಕ್ಷಿಗಳು ಸಾಯುತ್ತಿವೆ. ಮಹಾರಾಷ್ಟ್ರದಲ್ಲಿ ನೀರಿಗಾಗಿ ಸರ್ಕಾರಿ ಬಸ್ ಅನ್ನು ಮಂಗಗಳ (Monkey Video) ಗುಂಪೊಂದು ತಡೆಯುತ್ತಿರುವ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೂ ಒಮ್ಮೆ ನೋಡಿ. ಭಾರತದಲ್ಲಿನ ಹೆಚ್ಚಿನ ತಾಪಮಾನವು ಮನುಷ್ಯರನ್ನು…

Read More