Video: ಇದು ಮೂಕ ಜೀವಿಗಳ ಶುದ್ಧ ಗೆಳೆತನ; ತನ್ನ ಸ್ನೇಹಿತ ಡಾಲಿಯೊಂದಿಗೆ ತುಂಟಾಟಕ್ಕೆ ಇಳಿದ ಆನೆ – Kannada News | Elephant playing with dog while splashing water

ಆನೆಗಳು (Elephants) ತುಂಟಾಟ ಮಾಡುವುದರಲ್ಲಿ ಎತ್ತಿದ ಕೈ. ಸೋಶಿಯಲ್ ಮೀಡಿಯಾದಲ್ಲಿ ಗಜರಾಜನ ಆಟ ತುಂಟಾಟದ ವಿಡಿಯೋಗಳನ್ನು ನೀವು ನೋಡಿರುತ್ತೀರಿ.  ಆದರೆ ಇಲ್ಲಿ ತನ್ನ ಸ್ನೇಹಿತನ ಜತೆಗೆ ಆನೆಯೊಂದು ತುಂಟಾಟವಾಡುವುದರಲ್ಲಿ ಬ್ಯುಸಿಯಾಗಿದೆ. ಗಜರಾಜನು ಸೊಂಡಿಲಿನಿಂದ ನೀರು ಎರಚುತ್ತಾ ಶ್ವಾನದೊಂದಿಗೆ ಆಟ ಆಡಿದೆ. ಮುಗ್ಧ ಜೀವಿಗಳ ಈ ಪರಿಶುದ್ಧ ಗೆಳೆತನಕ್ಕೆ ನೆಟಿಗರು ಫುಲ್‌ ಫಿದಾ ಆಗಿದ್ದಾರೆ.

ಮೈಸೂರುಕೆಎ09ವೈಲ್ಡ್‌ ಲೈಫ್‌ (MYSOREKA09WILDLIFE) ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಮಾಣಿಕ್ಯ ತನ್ನ ಸ್ನೇಹಿತ ಡಾಲಿ ಜತೆಗೆ ಆಟ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋದಲ್ಲಿ ಆನೆಯೊಂದು ತನ್ನ ಸೊಂಡಿಲಿನಿಂದ ಶ್ವಾನಕ್ಕೆ ನೀರು ಎರಚುತ್ತಾ ತುಂಟಾಟ ಆಡಿದೆ. ಗಜರಾಜನು ನೀರು ಎರಚುತ್ತಿದ್ದಂತೆ ಓಡಲು ಮುಂದಾಗಿರುವುದು ನೀವು ನೋಡಬಹುದು. ಅಲ್ಲೇ ಇದ್ದವರು ಈ ದೃಶ್ಯ ನೋಡಿ  ನಗುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ರಂಧ್ರದಲ್ಲಿ ಸಿಲುಕಿದ್ದ ಕಲ್ಲಂಗಡಿ ಹಣ್ಣನ್ನು ಬುದ್ಧಿವಂತಿಕೆಯಿಂದ ಹೊರ ತೆಗೆದ ಆನೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಮುದ್ದಾಗಿದೆ ಎಂದರೆ, ಇನ್ನೊಬ್ಬರು, ಮತ್ತೆ ಮತ್ತೆ ನೋಡಬೇಕೆನಿಸುವ ವಿಡಿಯೋ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಸುಮಧುರ ಗೆಳೆತನ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:37 pm, Mon, 16 February 26

Source link

ಹಂಪಿ ಉತ್ಸವದಲ್ಲಿ ನಟಿ ರಚಿತಾ ರಾಮ್ ಕಾರು ಚಾಲಕನಿಂದ ಅಧಿಕಾರಿ ಮೇಲೆ ಹಲ್ಲೆ – Kannada News | Actress rachita ram Car Driver assaults On Vijayangara Officer In Hampi Utsav 2026

ವಿಜಯನಗರ, (ಫೆಬ್ರವರಿ 16): ನಟಿ ರಚಿತಾ ರಾಮ್ ಅವರ ಕಾರು ಚಾಲಕ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರ ಮೇಲೆ ಹಲ್ಲೆ ನಡೆಸಿರುವ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ನಡೆದಿದೆ. ಹಂಪಿ ಉತ್ಸವದ ಕೊನೆಯ ದಿನವಾದ ನಿನ್ನೆ (ಫೆಬ್ರವರಿ 15) ಭದ್ರತಾ ನೆಪದಲ್ಲಿ ರಚಿತಾ ರಾಮ್‌ ಕಾರು ಚಾಲಕ, ಜನರನ್ನು ದೂರ ಸರಿಸುತ್ತಿದ್ದು, ಇದೇ ವೇಳೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರವಿಕುಮಾರ್ ಅವರನ್ನು ಮೊಣಕೈನಿಂದ ಜೋರಾಗಿ ತಿವಿದು ತಳ್ಳಿದ್ದಾರೆ. ಇದರಿಂದ ಅಧಿಕಾರಿ ರವಿಕುಮಾರ್ ಕಣ್ಣಿಗೆ ಗಾಯವಾಗಿದ್ದು, ಘಟನೆಯ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಮಿತಿಮೀರಿ ನಡೆದುಕೊಂಡ ದರ್ಶನ್ ಅಭಿಮಾನಿಗೆ ಪೊಲೀಸ್ ಅಧಿಕಾರಿಯಿಂದ ಕಪಾಳಮೋಕ್ಷ – Kannada News | ASI Hit Darshan Fan Over Misbehave in Bangalore RR Nagara

ದರ್ಶನ್ ಅಭಿಮಾನಿಗಳಿಗೆ ಇಂದು (ಫೆಬ್ರವರಿ 16) ವಿಶೇಷ ದಿನ. ಏಕೆಂದರೆ ಅವರ ನೆಚ್ಚಿನ ನಟನ ಜನ್ಮದಿನ. ಈ ವಿಶೇಷ ದಿನಂದು ಬೆಂಗಳೂರಿನ ಆರ್​ಆರ್​ ನಗರದ ಮನೆಗೆ ನುಗ್ಗಲು ದರ್ಶನ್ ಫ್ಯಾನ್ಸ್ ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಫ್ಯಾನ್ಸ್ ಮಧ್ಯೆ ಕಿರಿಕ್ ಆಗಿದೆ. ಪೊಲೀಸ್ ಅನ್ನೋದನ್ನು ನೋಡದೆ ತಳ್ಳಿ ಒಳ ನುಗ್ಗಲು ಪ್ರಯತ್ನಿಸಿದ ಅಭಿಮಾನಿಗೆ ಕಪಾಳಮೋಕ್ಷ ಮಾಡಲಾಗಿದೆ. ಕುಡಿದು ಬಂದು ಪದೇ ಪದೇ ಕಿರಿ ಕಿರಿ ಮಾಡಿದ್ದಕ್ಕೆ ಎಎಸ್​​ಐ ಯೋಗ ನರಸಯ್ಯ ರಾಜು ಇಷ್ಟು ಕಠಿಣವಾಗಿ ನಡೆದುಕೊಂಡರು ಎಂದು ತಿಳಿದು ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs PAK: ಹೀಗಾದರೆ ಭಾರತ- ಪಾಕ್ ನಡುವೆ ಟಿ20 ವಿಶ್ವಕಪ್​ನಲ್ಲಿ ಮತ್ತೊಂದು ಪಂದ್ಯ – Kannada News | India vs Pakistan T20 World Cup Re Match: Super 8, Semifinal and Final Pathway Explained

ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಕ್ರಿಕೆಟ್ ಪಂದ್ಯವೆಂದರೆ ಅಭಿಮಾನಿಗಳಿಗೆ ಅದೊಂದು ಹಬ್ಬವೇ ಸರಿ. ಆದಾಗ್ಯೂ ಈ ತಂಡಗಳು ಐಸಿಸಿ ಹಾಗೂ ಎಸಿಸಿ ಈವೆಂಟ್​ಗಳಲ್ಲಿ ಮಾತ್ರ ಮುಖಾಮುಖಿಯಾಗುವುದರಿಂದ ವರ್ಷಕ್ಕೆ ಮೂರು ಅಥವಾ ನಾಲ್ಕು ಪಂದ್ಯಗಳು ನಡೆದರೆ ಹೆಚ್ಚು. ಹೀಗಿರುವಾಗ ಒಂದೇ ಈವೆಂಟ್​ನಲ್ಲಿ ಉಭಯ ತಂಡಗಳು ಎರಡು ಬಾರಿ ಮುಖಾಮುಖಿಯಾಗುವುದು ಅಭಿಮಾನಿಗಳ ಪಾಲಿಗೆ ಅದು ಅದೃಷ್ಟವೇ ಸರಿ. ಇದೀಗ ನಡೆಯುತ್ತಿರುವ ಟಿ20 ವಿಶ್ವಕಪ್​ನಲ್ಲೂ (T20 World Cup) ಭಾರತ ಹಾಗೂ ಪಾಕಿಸ್ತಾನ ತಂಡಗಳು ಎರಡು ಬಾರಿ ಮುಖಾಮುಖಿಯಾಗುವ ಸಾಧ್ಯತೆಗಳಿವೆ. ಈಗಾಗಲೇ ಎರಡು ತಂಡಗಳು ಒಮ್ಮೆ ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಭಾರತ ತಂಡ ಏಕಪಕ್ಷೀಯ ಗೆಲುವು ದಾಖಲಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಎರಡು ತಂಡಗಳು ಸೆಮಿಫೈನಲ್ ಅಥವಾ ಫೈನಲ್​ನಲ್ಲಿ ಮತ್ತೊಂದು ಪಂದ್ಯವನ್ನಾಡಲಿವೆ.

ಸೂಪರ್-8 ಸುತ್ತು ಹೇಗಿರಲಿದೆ?

ಗುಂಪು ಹಂತದಲ್ಲಿ ಪಾಕಿಸ್ತಾನ ತನ್ನ ಕೊನೆಯ ಪಂದ್ಯವನ್ನು ನಮೀಬಿಯಾ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಪಾಕ್ ಗೆದ್ದರೆ, 2026 ರ ಟಿ20 ವಿಶ್ವಕಪ್‌ನ ಗ್ರೂಪ್ ಎ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಸೂಪರ್ 8 ಸುತ್ತಿನಲ್ಲಿ ಸ್ಥಾನ ಪಡೆಯುತ್ತದೆ. ಅದೇ ರೀತಿ, ಉಳಿದ ಮೂರು ಗುಂಪುಗಳ ಅಗ್ರ ಎರಡು ತಂಡಗಳು ಸೂಪರ್ 8 ಸುತ್ತಿಗೆ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳುತ್ತವೆ. ಯಾವುದೇ ಪ್ರಮುಖ ಬದಲಾವಣೆಗಳಿಲ್ಲದಿದ್ದರೆ, ಗ್ರೂಪ್ ಎ ಯಿಂದ ಭಾರತ ಮತ್ತು ಪಾಕಿಸ್ತಾನ, ಗ್ರೂಪ್ ಬಿ ಯಿಂದ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ, ಗ್ರೂಪ್ ಸಿ ಯಿಂದ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಮತ್ತು ಗ್ರೂಪ್ ಡಿ ಯಿಂದ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೂಪರ್ 8 ಸುತ್ತಿಗೆ ಪ್ರವೇಶಿಸಬಹುದು. ಸೂಪರ್ 8 ಸುತ್ತಿನಲ್ಲಿ ಎರಡು ಗುಂಪುಗಳು ಈ ಕೆಳಗಿನಂತಿರಬಹುದು.

ಗುಂಪು 1 ರಲ್ಲಿ ಭಾರತ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ

ಗುಂಪು 2 ರಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾ

ಸೂಪರ್ 8 ಸುತ್ತಿನಲ್ಲಿ ಮುಖಾಮುಖಿ ಇಲ್ಲ

ಸೂಪರ್ 8 ಹಂತದಲ್ಲಿ, ಪ್ರತಿ ತಂಡವು ತನ್ನ ಗುಂಪಿನಲ್ಲಿರುವ ಪ್ರತಿಯೊಂದು ತಂಡದ ವಿರುದ್ಧ ಒಂದು ಪಂದ್ಯವನ್ನು ಆಡಲಿದೆ. ಸೂಪರ್ 8 ಗುಂಪು ಬದಲಾಗದೆ ಉಳಿದರೆ, ಭಾರತ ಫೆಬ್ರವರಿ 22 ರಂದು ದಕ್ಷಿಣ ಆಫ್ರಿಕಾ ವಿರುದ್ಧ, ಫೆಬ್ರವರಿ 26 ರಂದು ಆಸ್ಟ್ರೇಲಿಯಾ ವಿರುದ್ಧ ಮತ್ತು ಕೊನೆಯ ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ. ಹೀಗಾಗಿ ಸೂಪರ್ 8 ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯುವುದಿಲ್ಲ

ಸೆಮಿಫೈನಲ್‌ನಲ್ಲಿ ಪಂದ್ಯ ನಡೆಯುವ ಸಾಧ್ಯತೆ

ಆದರೆ ಭಾರತ ಮತ್ತು ಪಾಕಿಸ್ತಾನ ತಮ್ಮ ತಮ್ಮ ಗುಂಪುಗಳಿಂದ ಸೆಮಿಫೈನಲ್ ತಲುಪುವಲ್ಲಿ ಯಶಸ್ವಿಯಾದರೆ, ಇಲ್ಲಿ ಮುಖಾಮುಖಿಯಾಗಬಹುದು. ಗುಂಪು 1 ರಿಂದ ಟೀಂ ಇಂಡಿಯಾ ಅಗ್ರಸ್ಥಾನ ಪಡೆದು ಸೆಮಿಫೈನಲ್‌ಗೆ ಮುನ್ನಡೆದರೆ, ಇತ್ತು ಗುಂಪು 2 ರಿಂದ ಪಾಕಿಸ್ತಾನ ತಂಡ ಎರಡನೇ ತಂಡವಾಗಿ ಸೆಮಿಫೈನಲ್ ತಲುಪಿದರೆ ಎರಡೂ ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಬಹುದು.

T20 World Cup: 43 ವರ್ಷಗಳಲ್ಲಿ 3ನೇ ಬಾರಿಗೆ; ಭಾರತವೇ ಚಾಂಪಿಯನ್ ಎನ್ನುತ್ತಿದೆ ಇತಿಹಾಸ

ಆದಾಗ್ಯೂ, ಭಾರತ ಮತ್ತು ಪಾಕಿಸ್ತಾನ ಎರಡೂ ಸೂಪರ್-8 ಸುತ್ತಿನಲ್ಲಿ ತಮ್ಮ ತಮ್ಮ ಗುಂಪುಗಳಲ್ಲಿ ಅಗ್ರಸ್ಥಾನ ಪಡೆದರೆ ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗುವುದಿಲ್ಲ. ಆದರೆ ಎರಡೂ ತಂಡಗಳು ಸೆಮಿಫೈನಲ್​ನಲ್ಲಿ ಗೆದ್ದರೆ, ಫೈನಲ್​ನಲ್ಲಿ ಮುಖಾಮುಖಿಯಾಗಲಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತಕ್ಕೂ ಬಂದ ಆಂಥ್ರೋಪಿಕ್; ಬೆಂಗಳೂರಿನಲ್ಲಿ ಅಂಗಡಿ ತೆರೆದ ಎಐ ಕಂಪನಿ – Kannada News | Anthropic starts its office in Bengaluru, eyes to reek benefits of one of the largest markets

ಬೆಂಗಳೂರು, ಫೆಬ್ರುವರಿ 16: ಎಐ ಸೇವೆಗಳನ್ನು ನೀಡುವ ಆಂಥ್ರೋಪಿಕ್ (Anthropic) ಸಂಸ್ಥೆ ಬೆಂಗಳೂರಿನಲ್ಲಿ ಹೊಸ ಕಚೇರಿ ತೆರೆದಿದೆ. ಇದು ಭಾರತದಲ್ಲಿ ಆಂಥ್ರೋಪಿಕ್​ನ ಮೊದಲ ಕಚೇರಿಯಾಗಿದೆ. ಏಷ್ಯಾದಲ್ಲಿ ಅದರ ಎರಡನೇ ಕಚೇರಿಯಾಗಿದೆ. ಭಾರತದ ಅಗಾಧ ಮಾರುಕಟ್ಟೆ, ವಿಫುಲ ಅವಕಾಶಗಳಿರುವ ಹಿನ್ನೆಲೆಯಲ್ಲಿ ಈ ಅಮೆರಿಕನ್ ಎಐ ಕಂಪನಿ ಬೆಂಗಳೂರಿನಲ್ಲಿ ಕಚೇರಿ ತೆರೆದಿದೆ.

ಆಂಥ್ರೋಪಿಕ್​ನ ಸೂಪರ್ ಹಿಟ್ ಎಐ ಉತ್ಪನ್ನಗಳಲ್ಲಿ ಕ್ಲಾಡ್ ಎಐ ಒಂದು. ಇದು ಜನರೇಟಿವ್ ಎಐ ಮಾಡಲ್ ಆದರೂ ಕೋಡಿಂಗ್ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವುದಕ್ಕೆ ಖ್ಯಾತಿ ಪಡೆದಿದೆ. ಅದರ ಕ್ಲಾಡ್ ಎಐ ಸರ್ವಿಸ್​ಗೆ ಭಾರತವೇ ಎರಡನೇ ಅತಿದೊಡ್ಡ ಮಾರುಕಟ್ಟೆ ಎನಿಸಿದೆ. ಆ್ಯಪ್​ಗಳನ್ನು ತಯಾರಿಸುವುದು, ಸಿಸ್ಟಂಗಳ ಆಧುನೀಕರಣ, ಪ್ರೊಡಕ್ಷನ್ ಸಾಫ್ಟ್​ವೇರ್ ಸಾಗಣೆ ಇತ್ಯಾದಿಗೆ ಕ್ಲಾಡ್ ಎಐ ಬಳಕೆ ಭಾರತದಲ್ಲಿ ಹೆಚ್ಚಿದೆ. ಹೀಗಾಗಿ, ಭಾರತದ ಮಾರುಕಟ್ಟೆಯ ಮೇಲೆ ಆಂಥ್ರೋಪಿಕ್ ಹೆಚ್ಚಿನ ಕಣ್ಣು ನೆಡಲು ನಿರ್ಧರಿಸಿದೆ.

ಇದನ್ನೂ ಓದಿ: ಐದು ವರ್ಷದಲ್ಲಿ ಐಟಿ ಉದ್ಯೋಗಗಳೇ ಇರೋದಿಲ್ಲ ಎಂದಿದ್ದಾರೆ ವಿನೋದ್ ಖೋಸ್ಲಾ; ಎಐನಿಂದ ಭಾರತವೇನು ಮಾಡಬೇಕು?

‘ಬೆಂಗಳೂರು ಕಚೇರಿಯನ್ನು ಇವತ್ತು ಅಧಿಕೃತವಾಗಿ ತೆರೆದಿದ್ದೇವೆ. ಉದ್ದಿಮೆ, ಶಿಕ್ಷಣ ಮತ್ತು ಕೃಷಿ ಸೆಕ್ಟರ್​ಗಳಲ್ಲಿ ಜೊತೆಗಾರಿಕೆಗಳನ್ನು ಹೊಂದಿದ್ದೇವೆ. ಭಾರತದ ಎಲ್ಲಾ ಸೆಕ್ಟರ್​ಗಳಲ್ಲೂ ಎಐ ಸೇವೆ ಮಾಡಲು ಬದ್ಧರಾಗಿದ್ದೇವೆ. ಹೆಚ್ಚು ಜನರು ಮತ್ತು ಉದ್ದಿಮೆಗಳಿಗೆ ಎಐ ಲಾಭಗಳನ್ನು ಕೊಡಲು ಭಾರತ ಒಳ್ಳೆಯ ಅವಕಾಶ ಕೊಡುತ್ತದೆ. ಭಾರತದಲ್ಲಿ ಅಸಾಧಾರಣ ತಾಂತ್ರಿಕ ಪ್ರತಿಭೆ, ಅಗಾಧ ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್ ಇದೆ. ತಂತ್ರಜ್ಞಾನ ಮೂಲಕ ಜನರ ಜೀವನ ಸುಧಾರಿಸುವ ಕಾರ್ಯದಲ್ಲಿ ಯಶಸ್ಸು ಹೊಂದಿದೆ. ಈ ಎಐ ತಂತ್ರಜ್ಞಾನವು ಜನರಿಗೆ ಅನುಕೂಲವಾಗುವಂತಾಗಲು ಇಂತಹ ವಾತಾವರಣವೇ ಬೇಕಿರುವುದು’ ಎಂದು ಆಂಥ್ರೋಪಿಕ್​ನ ಭಾರತ ವಿಭಾಗದ ಎಂಡಿ ಇರಿನಾ ಘೋಸ್ ಹೇಳುತ್ತಾರೆ.

ಭಾರತದಲ್ಲಿ ಕನ್ನಡ, ಹಿಂದಿ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿ ಎಐ ಮಾಡಲ್ ಅಭಿವೃದ್ಧಿಪಡಿಸುವ ಕಡೆಗೂ ಆಂಥ್ರೋಪಿಕ್ ಗಮನ ಹರಿಸುತ್ತಿದ್ದು, ಈ ನಿಟ್ಟಿನಲ್ಲಿ ವಿವಿಧ ಕಂಪನಿಗಳೊಂದಿಗೆ ಸಹಭಾಗಿತ್ವ ಸಾಧಿಸಿದೆ. ಈಗಿರುವ ಎಐ ಮಾಡಲ್​ಗಳು ಇಂಗ್ಲೀಷ್​ನಲ್ಲಿ ಉತ್ತಮ ಸೇವೆ ಒದಗಿಸುತ್ತವೆ. ಆದರೆ, ಹಿಂದಿ, ಬಂಗಾಳ, ಮರಾಠಿ, ಕನ್ನಡ, ತೆಲುಗು, ತಮಿಳುನ, ಪಂಜಾಬಿ, ಗುಜರಾತಿ, ಮಲಯಾಳಂ, ಉರ್ದು ಭಾಷೆಗಳಲ್ಲಿ ಸಾಕಷ್ಟು ಟ್ರೈನಿಂಗ್ ಮಾಡಿ, ಈ ಅಂತರವನ್ನು ಕಡಿಮೆ ಮಾಡಲು ಆರು ತಿಂಗಳ ಹಿಂದೆಯೇ ಆಂಥ್ರೋಪಿಕ್ ಪ್ರಯತ್ನ ಆರಂಭಿಸಿತ್ತು. ಇದು ತಕ್ಕಮಟ್ಟಿಗೆ ಯಶಸ್ವಿಯಾಗಿದೆ ಎಂದು ಈ ಸಂಸ್ಥೆ ಹೇಳಿಕೊಂಡಿದೆ.

ಇದನ್ನೂ ಓದಿ: AI Impact Summit: ಜನಕಲ್ಯಾಣಕ್ಕೆ ಎಐ ಬಳಕೆ, ಇದು ಭಾರತಕ್ಕಿರುವ ಬದ್ಧತೆ: ಅಶ್ವಿನಿ ವೈಷ್ಣವ್

ಆಂಥ್ರೋಪಿಕ್ ಕಂಪನಿ ಇತ್ತೀಚೆಗಷ್ಟೇ 30 ಬಿಲಿಯನ್ ಡಾಲರ್​ನಷ್ಟು ಫಂಡಿಂಗ್ ಪಡೆದಿದೆ. ಇದರ ಮೌಲ್ಯ ಇದೀಗ 380 ಬಿಲಿಯನ್ ಡಾಲರ್ ಎಂದು ಮೌಲ್ಯೀಕರಿಸಲಾಗಿದೆ. ಬಹಳಷ್ಟು ಐಟಿ ಸರ್ವಿಸ್ ಕೆಲಸಗಳನ್ನು ಇದರ ಎಐ ಏಜೆಂಟ್​ಗಳು ತ್ವರಿತವಾಗಿ ಮಾಡಬಲ್ಲುವುದು. ಹೀಗಾಗಿ, ಐಟಿ ಸರ್ವಿಸ್ ಕ್ಷೇತ್ರದಲ್ಲಿ ಆಂಥ್ರೋಪಿಕ್ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಲಬುರಗಿಯಲ್ಲಿ ಮತ್ತೊಂದು ಧರ್ಮ ದಂಗಲ್: ಮುಸ್ಲಿಮರು ಅಲಂಕಾರ ಮಾಡಿದ್ದಕ್ಕೆ ದೇಗುಲ ಶುದ್ಧೀಕರಣ ಮಾಡಿದ ಹಿಂದೂಗಳು – Kannada News | Kalaburagi Shiva Temple Row: Hindu Groups Purify Premises with Gomutra After Muslim Florist Decoration

ಕಲಬುರಗಿ, ಫೆಬ್ರವರಿ 16: ಹಲಾಲ್ ಕಟ್, ಜಟ್ಕಾ ಕಟ್, ಹಿಜಾಬ್ ವಿವಾದಗಳ ಬಳಿಕ ಇದೀಗ ಕಲಬುರಗಿಯಲ್ಲಿ ಮತ್ತೊಂದು ಧರ್ಮ ದಂಗಲ್ ಶುರುವಾಗಿದೆ. ಶಿವನ ದೇವಸ್ಥಾನಕ್ಕೆ (Shiva Temple) ಮುಸ್ಲಿಂ ಯುವಕರು (Muslim boys) ಪುಷ್ಪಾಲಂಕಾರ ಮಾಡಿದ್ದಕ್ಕೆ ಹಿಂದೂ ಸಂಘಟನೆಗಳು ಕೆರಳಿ ಕೆಂಡವಾಗಿವೆ. ಮುಸ್ಲಿಮರು ಪುಷ್ಪಾಲಂಕಾರ ಮಾಡಿದ್ದಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರು ಗೋಮೂತ್ರದಿಂದ ದೇವಸ್ಥಾನ ಶುದ್ಧೀಕರಣ ಮಾಡುವುದರ ಮ‌ೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೊಂದು ಧರ್ಮ ದಂಗಲ್‌ ಶುರು

ಕಲಬುರಗಿಯಲ್ಲಿ ಧರ್ಮ ದಂಗಲ್ ಪ್ರಕರಣಗಳು ನಿಲ್ಲುವ ಹಾಗೆ ಕಾಣಿಸುತ್ತಿಲ್ಲ. ನಿನ್ನೆಯಷ್ಟೇ ಆಳಂದ ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜಾವಿವಾದ, ಕಲಬುರಗಿಯ ಕೋಟೆ ಆವರಣದಲ್ಲಿ ಸ್ವಯಂ ಶಂಭೋ ದೇವಸ್ಥಾನದಲ್ಲಿ ಪೂಜೆಗೆ ಹೈಡ್ರಾಮಾ ನಡೆದಿತ್ತು. ಅದಾದ ಬಳಿಕ ಮತ್ತೊಂದು ಧರ್ಮದಂಗಲ್‌ ಶುರುವಾಗಿದೆ.

ಇದನ್ನೂ ಓದಿ: ಆಳಂದ ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಬದಲಾವಣೆ: ಪೂಜೆ ಬಳಿಕ ಹಿಂದೂಗಳು ಸ್ಫೋಟಕ ಆರೋಪ

ಅಂದಹಾಗೆ ನಿನ್ನೆ ಮಹಾಶಿವರಾತ್ರಿ ಹಬ್ಬವನ್ನ ನಗರದ ಎಲ್ಲಾ ಶಿವನ ದೇವಸ್ಥಾನಗಳಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಅದರಂತೆ ನಗರದ ರಾಮತೀರ್ಥ ಶಿವನ ಮಂದಿರದಲ್ಲಿ ಶಿವರಾತ್ರಿ ನಿಮಿತ್ಯ ದೇವಸ್ಥಾನದ ಆವರಣ ಹಾಗೂ ಗರ್ಭ ಗುಡಿಯಲ್ಲಿನ ಶಿವಲಿಂಗಕ್ಕೆ ಪುಷ್ಪಾಲಂಕಾರ ಮಾಡಲಾಗಿತ್ತು. ಆದರೆ ಆ ಪುಷ್ಪಾಲಂಕಾರ ಮಾಡಿದ್ದು ಹೂವಿನ ವ್ಯಾಪಾರ ಮಾಡುವ ಮುಸ್ಲಿಮರು.

ಮುಸ್ಲಿಂ ಯುವಕರು ಶಿವಲಿಂಗಕ್ಕೆ ಪುಷ್ಪಾಲಂಕಾರ ಮಾಡುವ ವಿಡಿಯೋ ಯಾವಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಯಿತೋ, ಹಿಂದೂ ಸಂಘಟನೆಗಳು ರಾಮತೀರ್ಥ ದೇಗುಲ ಟ್ರಸ್ಟ್ ವಿರುದ್ಧ ಕಿಡಿಕಾರಿವೆ. ಅದರಂತೆ ಇಂದು ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರು ಗೋಮೂತ್ರ ಹಾಕಿ ಶಿವಲಿಂಗ ಶುದ್ಧೀಕರಣ ಮಾಡಿದ್ದಾರೆ. ಬಳಿಕ ಶಾಸ್ತ್ರೋಕ್ತವಾಗಿ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ್ದಾರೆ.

ಟ್ರಸ್ಟ್ ನಡೆ ಖಂಡಿಸಿದ ಹಿಂದೂ ಸಂಘಟನೆಗಳು

ಇನ್ನು ಕಲಬುರಗಿ ನಗರದ ಐತಿಹಾಸಿಕ ಹಾಗೂ ಪುರಾತನ ಕಾಲದ ರಾಮತೀರ್ಥ ದೇಗುಲಕ್ಕೆ ಖುದ್ದು ರಾಮನೇ ಭೇಟಿ ನೀಡಿ ಶಿವಲಿಂಗ ಸ್ಥಾಪನೆ ಮಾಡಿದ್ದು, ಇಂತಹ ಪವಿತ್ರ ಶಿವನ ದೇವಸ್ಥಾನವನ್ನ ಅಲಂಕಾರ ಮಾಡಲು ಮುಸ್ಲಿಂರಿಗೆ ಏಕೆ ಕೊಟ್ಟಿದ್ದಿರಿ ಅಂತಾ ರಾಮತೀರ್ಥ ಟ್ರಸ್ಟ್ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಮುಸ್ಲಿಂ ವ್ಯಾಪಾರಸ್ಥರಿಂದ ಪುಷ್ಪಾಲಂಕಾರ ಮಾಡುವ ಮೂಲಕ ಲಕ್ಷಾಂತರ ಭಕ್ತರ ಭಕ್ತಿಗೆ ಟ್ರಸ್ಟ್ ಅಪಚಾರ ಎಸಗಿದ್ದು, ಟ್ರಸ್ಟ್ ನಡೆಯನ್ನ ಹಿಂದೂ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.

ಮುಸ್ಲಿಂ ವ್ಯಾಪಾರಸ್ಥರು ರಾಮತೀರ್ಥ ಶಿವನ ಮಂದಿರಕ್ಕೆ ಪುಷ್ಪಾಲಂಕಾರ ಮಾಡುವುದು ಇದೇ ಮೊದಲಲ್ಲ. ಕಳೆದ ಸುಮಾರು ವರ್ಷಗಳಿಂದಲೂ ಮುಸ್ಲಿಂ ವ್ಯಾಪಾರಸ್ಥರೇ ಪ್ರತಿವರ್ಷ ಮಹಾಶಿವರಾತ್ರಿಯಂದು ರಾಮತೀರ್ಥ ಶಿವನ ಮಂದಿರಕ್ಕೆ ಹೂವಿನ ಅಲಂಕಾರ ಮಾಡುತ್ತಾ ಬಂದಿದ್ದಾರೆ. ಆದರೆ ಈ ವಿಚಾರ ನಮಗೆ ಈ ವರ್ಷ ತಿಳಿದೆ ಅಂತಾರೆ ಹಿಂದೂ ಸಂಘಟನೆ ಕಾರ್ಯಕರ್ತರು.

ಇದನ್ನೂ ಓದಿ: ಆಳಂದದ ದರ್ಗಾದಲ್ಲಿ ನಡೆಯುತ್ತೆ ಶಿವರಾತ್ರಿ ಪೂಜೆ: ದರ್ಗಾ ಸಮಿತಿಗೆ ಸುಪ್ರೀಂನಲ್ಲೂ ಶಾಕ್

ಒಟ್ಟಿನಲ್ಲಿ ರಾಮತೀರ್ಥ ದೇವಸ್ಥಾನಕ್ಕೆ ಮುಸ್ಲಿಂ ಯುವಕರು ಪುಷ್ಪಾಲಂಕಾರ ಮಾಡಿದ್ದಕ್ಕೆ ಹಿಂದೂ ಸಂಘಟನೆಗಳು ಸಿಡಿದ್ದೆದ್ದಿದ್ದು, ಈ ಮೂಲಕ ಕಲಬುರಗಿಯಲ್ಲಿ ಮತ್ತೊಂದು ಧರ್ಮ ದಂಗಲ್ ನಡೆಯುತ್ತಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹುಡುಗಿಯರು ಹಗ್​ ಮಾಡುವಾಗ ಹುಡುಗರ ಈ ಭಾಗದ ವಾಸನೆ ನೋಡ್ತಾರೆ – Kannada News | Hug Psychology: 7 Things Girls Notice for Deeper Connection and Appeal

ಹುಡುಗಿಯರು ಹಗ್ (ಅಪ್ಪುಗೆ) ಮಾಡುವಾಗ ಕೆಲವು ವಿಷಯಗಳನ್ನು ಅರಿವಿಲ್ಲದೆಯೇ ಗಮನಿಸುತ್ತಾರೆ ಎಂಬುದು ಮನೋವಿಜ್ಞಾನ ಮತ್ತು ದೈನಂದಿನ ಜೀವನದ ಅವಲೋಕನಗಳಿಂದ ತಿಳಿದುಬಂದಿದೆ. ಸಾಮಾನ್ಯವಾಗಿ ಅಪ್ಪುಗೆ ಎನ್ನುವುದು ಪ್ರೀತಿ ಮತ್ತು ಭದ್ರತೆಯ ಸಂಕೇತ. ಆ ಸಮಯದಲ್ಲಿ ಹುಡುಗಿಯರು ಹೆಚ್ಚಾಗಿ ಗಮನಿಸುತ್ತಾರೆ. ಹಗ್ ಮಾಡುವಾಗ ಹುಡುಗಿಯ ಮುಖವು ಹುಡುಗನ ಭುಜ ಅಥವಾ ಕುತ್ತಿಗೆಯ ಹತ್ತಿರ ಇರುತ್ತದೆ. ಆ ಸಮಯದಲ್ಲಿ ಹುಡುಗನ ದೇಹದಿಂದ ಬರುವ ಆಹ್ಲಾದಕರವಾದ ಪರ್ಫ್ಯೂಮ್ ಅಥವಾ ಸೋಪಿನ ಸುವಾಸನೆಯು ಅವರಿಗೆ ತುಂಬಾ ಇಷ್ಟವಾಗುತ್ತದೆ. ಇದು ಅವರಿಗೆ ಒಂದು ರೀತಿಯ ಸಮಾಧಾನ (Comfort) ನೀಡುತ್ತದೆ.

ಹುಡುಗಿಯರು ಹಗ್ ಮಾಡುವಾಗ ಹುಡುಗ ಎಷ್ಟು ಆತ್ಮವಿಶ್ವಾಸದಿಂದ ಮತ್ತು ಪ್ರೀತಿಯಿಂದ ಅಪ್ಪಿಕೊಳ್ಳುತ್ತಾನೆ ಎಂಬುದನ್ನು ಗಮನಿಸುತ್ತಾರೆ. ಹುಡುಗನ ತೋಳುಗಳ ನಡುವೆ ತಮಗೆ ಸುರಕ್ಷತೆ ಸಿಗುತ್ತಿದೆ ಎಂದು ಅನ್ನಿಸಿದರೆ ಅವರು ಅದನ್ನು ಹೆಚ್ಚು ಇಷ್ಟಪಡುತ್ತಾರೆ. ಅಪ್ಪಿಕೊಂಡಾಗ ಕೇಳಿಸುವ ಹೃದಯದ ಬಡಿತ ಅಥವಾ ಹುಡುಗನ ತೋಳುಗಳ ಬಲವು ಅವರು ಎಷ್ಟರ ಮಟ್ಟಿಗೆ ಈ ಸಂಬಂಧದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ಸಾಂಕೇತಿಕವಾಗಿ ತಿಳಿಸುತ್ತದೆ. ಇದರ ಜತೆಗೆ ಹುಡುಗರು ಅತಿಯಾದ ಸ್ಟ್ರಾಂಗ್ ಪರ್ಫ್ಯೂಮ್ ಬಳಸುವ ಬದಲು, ಲಘು ಮತ್ತು ಆಹ್ಲಾದಕರವಾದ ಸುಗಂಧ ದ್ರವ್ಯ ಬಳಸಿ ಎಂದು ಹೇಳಲಾಗಿದೆ.

ಇನ್ನು ಹುಡುಗಿಯರು ಬಟ್ಟೆಗಳು ಮತ್ತು ಕುತ್ತಿಗೆಯ ಭಾಗ ಸ್ವಚ್ಛವಾಗಿರುವುದು ಮುಖ್ಯ. ಹಗ್ ಮಾಡುವಾಗ ಎದುರಿಗಿನ ವ್ಯಕ್ತಿಗೆ ಮುಜುಗರವಾಗದಂತೆ ಗೌರವಯುತವಾಗಿ ಅಪ್ಪಿಕೊಳ್ಳುವುದು ಅತ್ಯಂತ ಅಗತ್ಯ. ನೀವು ಎಷ್ಟೇ ಬೆಲೆಬಾಳುವ ಬಟ್ಟೆ ತೊಟ್ಟರೂ, ಮುಖದಲ್ಲಿ ನಗು ಇಲ್ಲದಿದ್ದರೆ ನಿಮ್ಮ ಆಕರ್ಷಣೆ ಶೂನ್ಯ. ನಗು ನಿಮ್ಮನ್ನು ಹೆಚ್ಚು ಸಮೀಪಿಸಬಲ್ಲ ವ್ಯಕ್ತಿಯನ್ನಾಗಿ ಮಾಡುತ್ತದೆ. ಅನೇಕರು ಮುಖವನ್ನು ಗಮನಿಸುತ್ತಾರೆ ಎಂದು ಭಾವಿಸುತ್ತಾರೆ, ಆದರೆ ಸಂಶೋಧನೆಗಳ ಪ್ರಕಾರ ಜನರು ಮೊದಲು ಗಮನಿಸುವುದು ನಿಮ್ಮ ಕೈಗಳನ್ನು. ಉಗುರುಗಳು ಕತ್ತರಿಸಲ್ಪಟ್ಟಿರಲಿ ಮತ್ತು ಸ್ವಚ್ಛವಾಗಿರಲಿ.

ಇದನ್ನೂ ಓದಿ: ತಾಜಾ ಮೆಂತ್ಯ ಸೊಪ್ಪು ಸಿಕ್ರೆ ಮನೆಯಲ್ಲಿಯೇ ಈ ರೀತಿ ಕಸೂರಿ ಮೇಥಿ ತಯಾರಿಸಿ

ವ್ಯಕ್ತಿಯ ಗುಣವನ್ನು ಅವನ ಪಾದರಕ್ಷೆ ನೋಡಿ ಹೇಳಬಹುದು ಎಂಬ ಮಾತಿದೆ. ನಿಮ್ಮ ಶೂಗಳು ಅಥವಾ ಚಪ್ಪಲಿಗಳು ಧೂಳಿಲ್ಲದೆ ಶುಚಿಯಾಗಿರುವುದು ನಿಮ್ಮ ಶಿಸ್ತನ್ನು ಪ್ರತಿಬಿಂಬಿಸುತ್ತದೆ. ನೀವು ಒಬ್ಬರ ಜೊತೆ ಮಾತನಾಡುವಾಗ ಅವರ ಕಣ್ಣನ್ನು ನೋಡಿ ಮಾತನಾಡಿದರೆ, ಅವರು ನಿಮ್ಮನ್ನು ಹೆಚ್ಚು ನಂಬುತ್ತಾರೆ ಮತ್ತು ನೀವು ಹೆಚ್ಚು ಆತ್ಮವಿಶ್ವಾಸವುಳ್ಳವರು ಎಂದು ಭಾವಿಸುತ್ತಾರೆ. ಸಂಶೋಧನೆಯ ಪ್ರಕಾರ, ಒಬ್ಬ ವ್ಯಕ್ತಿಗೆ ಜಗತ್ತಿನಲ್ಲಿ ಅತ್ಯಂತ ಪ್ರಿಯವಾದ ಶಬ್ದ ಎಂದರೆ ಅವರ ಸ್ವಂತ ಹೆಸರು. ಸಂಭಾಷಣೆಯ ನಡುವೆ ಅವರ ಹೆಸರನ್ನು ಬಳಸಿ ಮಾತಾಡಿದರೆ ಅವರಿಗೆ ನಿಮ್ಮ ಮೇಲೆ ಬೇಗನೆ ಗೌರವ ಮತ್ತು ಪ್ರೀತಿ ಮೂಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉದ್ಯೋಗದ ವೇಳೆ ಲವ್; ಮದುವೆಯಲ್ಲಿ ತಮ್ಮ ಕಂಪನಿಗೆ ಡಿಫರೆಂಟಾಗಿ ಥ್ಯಾಂಕ್ಸ್ ಹೇಳಿದ ವಧು! – Kannada News | Girl Met Her Groom At Amazon Gets Company Logo On Mehendi At Her Wedding Watch Video

ನವದೆಹಲಿ, ಫೆಬ್ರವರಿ 16: ಕಂಪನಿಗಳಲ್ಲಿ ಅನೇಕ ಲವ್ ಸ್ಟೋರಿಗಳು ನಡೆಯುತ್ತಿರುತ್ತವೆ, ಕೆಲವೊಮ್ಮೆ ಅಲ್ಲೇ ಇರುವ ಸಹೋದ್ಯೋಗಿಗಳಿಗೂ ಈ ವಿಷಯ ಗೊತ್ತಾಗುವುದಿಲ್ಲ. ಅಮೆಜಾನ್‌ (Amazon) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಅಲ್ಲೇ ಕೆಲಸ ಮಾಡುತ್ತಿದ್ದ ಯುವಕನನ್ನು ಪ್ರೀತಿಸಿದಳು. ಆತನ ಜೊತೆ ಮದುವೆಯೂ ನಿಶ್ಚಯವಾಯಿತು. ಆಕೆ ತನಗೆ ಬಾಳ ಸಂಗಾತಿಯನ್ನು ಕೊಟ್ಟ ಕಂಪನಿಯಾದ ಅಮೆಜಾನ್​​ನ ಲೋಗೋವನ್ನು ತನ್ನ ಮೆಹಂದಿ ಶಾಸ್ತ್ರದಲ್ಲಿ ಕೈಯಲ್ಲಿ ಚಿತ್ರಿಸಿಕೊಳ್ಳುವ ಮೂಲಕ ತಮ್ಮಿಬ್ಬರ ಪರಿಚಯಕ್ಕೆ ಕೊಂಡಿಯಾದ ಸಂಸ್ಥೆಗೆ ಧನ್ಯವಾದ ತಿಳಿಸಿದ್ದಾಳೆ.

ವಧು ಪ್ರಿಯಾಂಶಿ ಶ್ರೀಮಲ್ ತನ್ನ ಪ್ರಿಯಕರನ ಜೊತೆ ಅದ್ದೂರಿಯಾಗಿ ವಿವಾಹವಾಗಿದ್ದಾಳೆ. ಈ ವೇಳೆ ಮೆಹಂದಿ ಶಾಸ್ತ್ರದಲ್ಲಿ ತನ್ನ ಕೈಗಳ ಮೇಲೆ ಅಮೆಜಾನ್ ಕಂಪನಿಯ ಲೋಗೋ ಡಿಸೈನ್ ಹಾಕಿಸಿಕೊಳ್ಳುವ ಮೂಲಕ ತಮ್ಮ ಪ್ರೇಮಕತೆಗೆ ನಾಂದಿ ಹಾಡಿದ ಸ್ಥಳಕ್ಕೂ ತನ್ನ ಮದುವೆಯಲ್ಲಿ ವಿಶೇಷ ಸ್ಥಾನ ನೀಡಿದ್ದಾಳೆ. ಈ ವಿಡಿಯೋ ಇನ್​ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಡಿವೋರ್ಸ್​​​ ಸಿಕ್ಕ ಖುಷಿಗೆ ಕೈ ತುಂಬಾ ಮೆಹಂದಿ ಹಚ್ಚಿ ಸಂಭ್ರಮಿಸಿದ ಮಹಿಳೆ

@insideamazon Instagram ಎಂಬ ಖಾತೆಯಿಂದ ಹಂಚಿಕೊಳ್ಳಲಾದ ಈ ವಿಡಿಯೋ ಪ್ರಿಯಾಂಶಿಯ ಕೈಗಳ ಮೇಲೆ ಮೆಹಂದಿಯ ವೇಳೆ ಅಮೆಜಾನ್ ಲೋಗೋವನ್ನು ಹಾಕಿಸಿಕೊಂಡಿರುವುದನ್ನು ನೋಡಬಹುದು. ಈ ಖಾತೆಯು ಅಮೆಜಾನ್‌ನಲ್ಲಿನ ಜೀವನ ಮತ್ತು ಕೆಲಸದ ಬಗ್ಗೆ ತೆರೆಮರೆಯ ಕಥೆಗಳನ್ನು ಹೈಲೈಟ್ ಮಾಡುತ್ತದೆ. ಈ ಖಾತೆಯನ್ನು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಸಹ ಫಾಲೋ ಮಾಡುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚೆಕ್ ಬೌನ್ಸ್ ಕೇಸ್; ಜಾಮೀನು ಪಡೆದು ನಿಟ್ಟುಸಿರು ಬಿಟ್ಟ ರಾಜ್​ಪಾಲ್ ಯಾದವ್ – Kannada News | Actor Rajpal Yadav gets bail in Cheque Bounce case

ಹಿಂದಿ ಚಿತ್ರರಂಗದ ಖ್ಯಾತ ನಟ ರಾಜ್​ಪಾಲ್ ಯಾದವ್ (Rajpal Yadav) ಅವರು ತಿಹಾರ್ ಜೈಲು ಸೇರಿದ್ದರು. 9 ಕೋಟಿ ರೂಪಾಯಿ ಸಾಲ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ಅವರನ್ನು ಜೈಲಿಗೆ ಕಳಿಸಲಾಗಿತ್ತು. ಈಗ ಅವರು ಜಾಮೀನು ಪಡೆದುಕೊಂಡಿದ್ದಾರೆ. ಇಂದು (ಫೆಬ್ರವರಿ 16) ರಾಜ್​ಪಾಲ್ ಯಾದವ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು (Bail) ನೀಡಿದೆ. ಮಧ್ಯಾಹ್ನ 3 ಗಂಟೆ ಒಳಗೆ 1.3 ಕೋಟಿ ರೂಪಾಯಿ ಹಣವನ್ನು ಪಾವತಿ ಮಾಡುವಂತೆ ಸೂಚಿಸಲಾಗಿತ್ತು. ಹಣ ಹೊಂದಿಸಿದ ಬಳಿಕ ಅವರಿಗೆ ಜಾಮೀನು ನೀಡಲಾಯಿತು.

ಸಂಬಂಧಿಕರ ಮದುವೆ ಇದೆ ಎಂಬ ಕಾರಣವನ್ನು ನೀಡಿ ರಾಜ್​ಪಾಲ್ ಯಾದವ್ ಅವರು ಜಾಮೀನು ಅರ್ಜಿ ಸಲ್ಲಿಸಿದ್ದರು. ಸೋಮವಾರಕ್ಕೆ (ಫೆ.16) ಅವರ ಅರ್ಜಿ ವಿಚಾರಣೆ ಮುಂದೂಡಿಕೆ ಆಗಿತ್ತು. ಇಂದು (ಫೆ.16) ವಿಚಾರಣೆ ನಡೆಸಿದ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಇದರಿಂದಾಗಿ ರಾಜ್​ಪಾಲ್ ಯಾದವ್ ಮತ್ತು ಅವರ ಕುಟುಂಬದವರು ನಿಟ್ಟುಸಿರು ಬಿಟ್ಟಿದ್ದಾರೆ.

ಮಾರ್ಚ್ 18ರ ತನಕ ರಾಜ್​ಪಾಲ್ ಯಾದವ್ ಅವರು ಜೈಲಿನಿಂದ ಹೊರಗೆ ಇರಲಿದ್ದಾರೆ. ಅಂದು ಮತ್ತೆ ಈ ಪ್ರಕರಣದ ವಿಚಾರಣೆ ನಡೆಯಲಿದೆ. ಸಿನಿಮಾ ನಿರ್ಮಾಣ ಮಾಡುವ ಸಲುವಾಗಿ ಅವರು ಹಲವು ವರ್ಷಗಳ ಹಿಂದೆ ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದರು. ಸಿನಿಮಾ ಸೋತ ಬಳಿಕ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಅಲ್ಲದೇ, ಹಲವು ಬಾರಿ ಚೆಕ್ ಬೌನ್ಸ್ ಆಗಿದ್ದರಿಂದ ಪ್ರಕರಣ ದಾಖಲಿಸಲಾಗಿತ್ತು.

ರಾಜ್​ಪಾಲ್ ಯಾದವ್ ಅವರಿಗೆ ಈ ಮೊದಲು ಅನೇಕ ಬಾರಿ ಕಾಲಾವಕಾಶ ನೀಡಲಾಗಿತ್ತು. ಆದರೆ ಪ್ರತಿ ಬಾರಿಯೂ ಅವರು ಹಣ ಹಿಂದಿರುಗಿಸಲು ಹಿಂದೇಟು ಹಾಕುತ್ತಿದ್ದರು. ಅದರಿಂದಾಗಿ ಕೆಲವೇ ದಿನಗಳ ಹಿಂದೆ ಅವರಿಗೆ ಜೈಲು ಶಿಕ್ಷೆ ನೀಡಲಾಯಿತು. ಆ ಬಳಿಕ ರಾಜ್​ಪಾಲ್​ ಯಾದವ್ ಅವರು ತಿಹಾರ್ ಜೈಲು ಅಧಿಕಾರಿಗಳಿಗೆ ಶರಣಾಗಿದ್ದರು.

ಇದನ್ನೂ ಓದಿ: ಇಂದಿನ ಹಲವು ಸ್ಟಾರ್​​ಗಳಿಗೆ ಅಂದು ಊಟ ಹಾಕಿ ಸಾಕಿದ್ದರು ರಾಜ್​ಪಾಲ್ ಯಾದವ್: ಈಗ ನೆರವಿಗೆ ಯಾರೂ ಇಲ್ಲ?

ರಾಜ್​ಪಾಲ್ ಯಾದವ್ ಅವರು ಬಹುಬೇಡಿಕೆಯ ಹಾಸ್ಯ ನಟ. ‘ಚುಪ್ ಚುಪ್​ ಕೆ’, ‘ಭೂಲ್ ಭುಲಯ್ಯ’ ಮುಂತಾದ ಸಿನಿಮಾಗಳ ಮೂಲಕ ಅವರು ಜನರನ್ನು ನಗಿಸಿದ್ದಾರೆ. ಸಾಲದ ಸುಳಿಯಿಂದಾಗಿ ಅವರು ಜೈಲುವಾಸ ಅನುಭವಿಸುವಂತಾಯಿತು. ಅವರು ಜೈಲು ಸೇರಿದ ಬಳಿಕ ಸೋನು ಸೂದ್ ಸೇರಿದಂತೆ ಹಲವರು ಅವರ ನೆರವಿಗೆ ಧಾವಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಾಂಗ್ರೆಸ್ MLA​ಗೆ ಬಿಗ್ ಶಾಕ್: ಶಾಸಕ ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್ – Kannada News | Karnataka High Court Invalidates bagepalli Congress MLA Subba Reddy elect

ಬೆಂಗಳೂರು, (ಫೆಬ್ರವರಿ 16): ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಎಸ್‌.ಎನ್‌. ಸುಬ್ಬಾರೆಡ್ಡಿ (bagepalli Congress MLA Subba Reddy )ಆಯ್ಕೆ ಅಸಿಂಧುಗೊಳಿಸಿ ಕರ್ನಾಟಕ ಹೈಕೋರ್ಟ್ (Karnataka High Court) ಆದೇಶ ಹೊರಡಿಸಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ಬಿಜೆಪಿಯ ಸಿ ಮುನಿರಾಜು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರಿದ್ದ ಹೈಕೋರ್ಟ್ ಪೀಠ, ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿ ಆದೇಶಿಸಿದೆ. ಇನ್ನು ಅಸಿಂಧುಗೊಳಿಸಿದ ಆದೇಶವನ್ನು ಕೋರ್ಟ್, ಚುನಾವಣಾ ಆಯೋಗ ಹಾಗೂ ವಿಧಾನಸಭೆ ಕಾರ್ಯದರ್ಶಿಗೂ ರವಾನಿಸಿದೆ.

ಚುನಾವಣೆಯಲ್ಲಿ ಎಸ್‌.ಎನ್‌. ಸುಬ್ಬಾರೆಡ್ಡಿ ಸಲ್ಲಿಸಿದ್ದ ನಾಮಪತ್ರ ದೋಷದಿಂದ ಕೂಡಿದೆ. ತಮ್ಮ ಆಸ್ತಿ ವಿವರಗಳನ್ನು ಮುಚ್ಚಿಟ್ಟು ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕೆಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮುನಿರಾಜು ಅವರು ಕೋರ್ಟ್ ಮೆಟ್ಟಿಲೇರಿದ್ದರು. ಇನ್ನೊಂದೆಡೆ ಸುಬ್ಬಾರೆಡ್ಡಿ ಸಹ ತಮ್ಮ ಅರ್ಜಿ ವಜಾ ಮಾಡಬೇಕೆಂದು ಮನವಿ ಮಾಡಿದ್ದರು. ಚುನಾವಣಾ ತಕರಾರು ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ. ಅದನ್ನು ವಜಾಗೊಳಿಸಬೇಕೆಂದು ಸುಬ್ಬಾರೆಡ್ಡಿ ಮನವಿ ಮಾಡಿದ್ದರು. ಎರಡು ಕಡೆಯ ವಾದ ಪ್ರತಿವಾದ ಆಲಿಸಿದ್ದ ಹೈಕೋರ್ಟ್, ಸುಬ್ಬಾರೆಡ್ಡಿ ಅರ್ಜಿಯನ್ನು ವಜಾ ಮಾಡಿತ್ತು. ಇದೀಗ ಕೋರ್ಟ್, ಸುಬ್ಬಾರೆಡ್ಡಿ ಆಯ್ಕೆಯನ್ನು ಅಸಿಂಧುಗೊಳಿಸಿದೆ. ಆದ್ರೆ, ಎದುರಾಳಿ ಅಭ್ಯರ್ಥಿಯಾಗಿದ್ದ ಸಿ.ಮುನಿರಾಜು ವಿಜಯಿ ಎಂದು ಘೋಷಿಸಲು ಹೈಕೋರ್ಟ್ ನಿರಾಕರಿಸಿದೆ.

ಇದನ್ನೂ ಓದಿ: Bengaluru ED Raid: ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಮನೆಗಳು ಸೇರಿ ಬೆಂಗಳೂರಿನ 5 ಕಡೆ ಇಡಿ ದಾಳಿ

ಅಸಿಂಧು ಆದೇಶಕ್ಕೆ ಮಧ್ಯಂತರ ತಡೆ

ಮೇಲ್ಮನವಿ ಸಲ್ಲಿಕೆವರೆಗೆ ತನ್ನ ಆದೇಶಕ್ಕೆ ತಡೆಯಾಜ್ಞೆ ನೀಡಲು ಎಸ್.ಎನ್.ಸುಬ್ಬಾರೆಡ್ಡಿ ಪರ ಹಿರಿಯ ವಕೀಲ ಜಯಕುಮಾರ್ ಎಸ್ ಪಾಟೀಲ್ ಮನವಿ ಮಾಡಿದ್ದಾರೆ. ಆದ್ರೆ, ಈ ಮನವಿಗೆ ಅರ್ಜಿದಾರರ ಪರ ಹಿರಿಯ ವಕೀಲೆ ನಳಿನಾ ಮಾಯಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಕೋರ್ಟ್, ಅಸಿಂಧು ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಹೀಗಾಗಿ ಸುಬ್ಬಾರೆಡ್ಡಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದ್ದು, ಸುಪ್ರೀಂಕೋರ್ಟ್ ಮೊರೆ ಹೋಗುವುದೊಂದೇ ಸುಬ್ಬಾರೆಡ್ಡಿಗೆ ಉಳಿದ ಮಾರ್ಗ.  ಇನ್ನು ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ 6 ತಿಂಗಳೊಳಗಾಗಿ ತಡೆಯಾಜ್ಞೆ ನೀಡದಿದ್ದರೆ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಮರು ಚುನಾವಣೆ ನಡೆಸಬೇಕಾಗುತ್ತೆ.  ಹೀಗಾಗಿ ಸುಪ್ರೀಂಕೋರ್ಟ್ ಯಾವ ತೀರ್ಪು ನೀಡುತ್ತೆ ಎನ್ನುವುದೇ ಕುತೂಹಲ ಮೂಡಿಸಿದೆ.

ಪ್ರಕರಣದ ಹಿನ್ನೆಲೆ

2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದ ಎಸ್‌.ಎನ್‌. ಸುಬ್ಬಾರೆಡ್ಡಿ ಗೆಲುವು ಸಾಧಿಸಿದ್ದರು. ಆದ್ರೆ, ಬಿಜೆಪಿಯಿಂದ ಸ್ಪರ್ಧೆ ಮಾಡಿ ಸೋಲುಕಂಡಿದ್ದ ಮುನಿರಾಜು, ಸುಬ್ಬಾರೆಡ್ಡಿ ನಾಮಪತ್ರ ಕ್ರಮವಾಗಿಲ್ಲ. ಚುನಾವಣೆಯಲ್ಲಿ ಎಸ್‌.ಎನ್‌. ಸುಬ್ಬಾರೆಡ್ಡಿ ಸಲ್ಲಿಸಿದ್ದ ನಾಮಪತ್ರ ದೋಷದಿಂದ ಕೂಡಿದೆ. ತಮ್ಮ ಆಸ್ತಿ ವಿವರಗಳನ್ನು ಮುಚ್ಚಿಟ್ಟು ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಜತೆಗೆ ಆಸ್ತಿಗಳ ತೆರಿಗೆ ಪಾವತಿ ಬಾಕಿ ಮಾಹಿತಿಯನ್ನು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿಲ್ಲ. ಹಾಗಾಗಿ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಬೇಕೆಂದು ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಇನ್ನೊಂದೆಡೆ ಆ ಅರ್ಜಿಯನ್ನು ವಜಾಗೊಳಿಸಲು ಎಸ್‌.ಎನ್‌. ಸುಬ್ಬಾರೆಡ್ಡಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಇದೀಗ ಕೋರ್ಟ್, ಅಂತಿಮವಾಗಿ ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿದ್ದು, ಕಾನೂನು ಹೋರಾಟದದಲ್ಲಿ ಬಿಜೆಪಿ ಪರಾಜಿತ ಅಭ್ಯರ್ಥಿ ಮುನಿರಾಜುಗೆ ಗೆಲುವು ಸಿಕ್ಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:06 pm, Mon, 16 February 26

Source link

Exit mobile version