Patanjali Insurance: ಇನ್ಷೂರೆನ್ಸ್ ಕ್ಷೇತ್ರಕ್ಕೆ ಕಾಲಿಡುತ್ತಿರುವ ಪತಂಜಲಿ ಆಯುರ್ವೇದ – Kannada News | Patanjali Ayurved entering insurance sector through a deal to acquire Magma

ನವದೆಹಲಿ, ಜುಲೈ 31: ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಆಯುರ್ವೇದ (Patanjali Ayurved) ಕಂಪನಿಯು ವಿಮಾ ಕ್ಷೇತ್ರಕ್ಕೆ ಕಾಲಿಡಲು ಮಹತ್ವದ ಹೆಜ್ಜೆ ಇಟ್ಟಿದೆ. ಮ್ಯಾಗ್ಮಾ ಜನರಲ್ ಇನ್ಷೂರೆನ್ಸ್ ಕಂಪನಿಯ (Magma General Insurance) ಸ್ವಾಧೀನಕ್ಕೆ ಪತಂಜಲಿ ಮುಂದಾಗಿದೆ. ವಿಮಾ ನಿಯಂತ್ರಕ ಸಂಸ್ಥೆಯಾದ IRDAI ಈ ಒಪ್ಪಂದಕ್ಕೆ ಅನುಮೋದನೆ ನೀಡಿದೆ. ಡಿಎಸ್ ಗ್ರೂಪ್ ಮತ್ತು ಪತಂಜಲಿ ಆಯುರ್ವೇದ ಸಂಸ್ಥೆಗಳು ಜಂಟಿಯಾಗಿ ಈ ಖರೀದಿ ಮಾಡುತ್ತಿವೆ. ಒಪ್ಪಂದದ ಒಟ್ಟು ಮೌಲ್ಯ ಅಂದಾಜು ₹4,500 ಕೋಟಿಯಷ್ಟಿದೆ.

ಪತಂಜಲಿ ಪಾಲು 73%

ಮ್ಯಾಗ್ಮಾ ಜನರಲ್ ಇನ್ಷೂರೆನ್ಸ್ ಕಂಪನಿಯಲ್ಲಿ ಸೀರಂ ಇನ್ಸ್​ಟಿಟ್ಯೂಟ್​ನ ಸಿಇಒ ಅದಾರ್ ಪೂನಾವಾಲಾ ಅವರ ಒಡೆತನ ಸನೋತಿ ಪ್ರಾಪರ್ಟೀಸ್ (Sanoti Properties) ಮೊದಲಾದವರು ಪ್ರಮುಖ ಷೇರುದಾರರಿದ್ದಾರೆ. ಪತಂಜಲಿ ಆಯುರ್ವೇದ ಸಂಸ್ಥೆಯು ಮ್ಯಾಗ್ಮಾದಲ್ಲಿ 73.56% ಷೇರುಪಾಲು ಪಡೆದು ಪ್ರಮುಖ ಪ್ರೊಮೋಟರ್ ಎನಿಸಲಿದೆ. ರಜನಿಗಂಧ ಇತ್ಯಾದಿ ಉತ್ಪನ್ನಗಳನ್ನು ಮಾರಾಟ ಮಾಡುವ ಡಿಎಸ್ ಗ್ರೂಪ್ ಸಂಸ್ಥೆಯು ಮ್ಯಾಗ್ಮಾ ಇನ್ಷೂರೆನ್ಸ್ ಕಂಪನಿಯಲ್ಲಿ 24.5% ಪಾಲು ಪಡೆಯುತ್ತದೆ. ಮ್ಯಾಗ್ಮಾದ ಈಗಿರನ ಶೇ. 98ರಷ್ಟು ಷೇರುಗಳನ್ನು ಪತಂಜಲಿ ಮತ್ತು ಡಿಎಸ್ ಗ್ರೂಪ್ ಖರೀದಿಸುತ್ತಿವೆ.

ಇದನ್ನೂ ಓದಿ: ಹೊಸ ಎಲೆಕ್ಟ್ರಾನಿಕ್ಸ್ ಬ್ಯುಸಿನೆಸ್​ಗಳಲ್ಲಿ ಎಲ್ ಅಂಡ್ ಟಿಯಿಂದ 5,000 ಕೋಟಿ ರೂ ಹೂಡಿಕೆ; 45,000 ಕೋಟಿ ರೂ ಮಾರುಕಟ್ಟೆ ಮೇಲೆ ಕಣ್ಣು

ಆಯುರ್ವೇದದಿಂದ ವಿಮಾ ವಲಯಕ್ಕೆ ಪತಂಜಲಿ ಪ್ರವೇಶ

ಎಫ್‌ಎಂಸಿಜಿ (FMCG) ಮತ್ತು ಆಯುರ್ವೇದ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಪ್ರಮುಖ ಆಟಗಾರನಾಗಿರುವ ಪತಂಜಲಿ ಸಂಸ್ಥೆ ಈ ಒಪ್ಪಂದದೊಂದಿಗೆ ಅಧಿಕೃತವಾಗಿ ಹಣಕಾಸು ಸೇವೆಗಳು ಮತ್ತು ವಿಮಾ ಕ್ಷೇತ್ರಕ್ಕೆ (Financial Services & Insurance Sector) ಕಾಲಿಟ್ಟಂತಾಗಿದೆ.

ಪತಂಜಲಿ ವಿಸ್ತೃತವಾದ ರೀಟೇಲ್ ನೆಟ್ವರ್ಕ್ ಮತ್ತು ಡಿಸ್ಟ್ರಿಬ್ಯೂಶನ್ ನೆಟ್ವರ್ಕ್ (Retail & Distribution Network) ಹೊಂದಿದೆ. ಗ್ರಾಮೀಣ ಮಾರುಕಟ್ಟೆಯಲ್ಲೂ ಆಳವಾಗಿ ಬೇರೂರಿದೆ. ಈ ಶಕ್ತಿಯನ್ನು ಬಳಸಿ ದೇಶದ ಮೂಲೆ ಮೂಲೆಗೆ ವಿಮಾ ಸೇವೆ ತಲುಪಿಸುವ ಗುರಿ ಹೊಂದಿದೆ.

ಈ ಒಪ್ಪಂದಕ್ಕೆ ಐಆರ್​ಡಿಎಐ ನೀಡಿರುವ ಸಮ್ಮತಿಯು ಮೂರು ತಿಂಗಳವರೆಗೆ ಸಿಂಧು ಇರುತ್ತದೆ. ಅಂದರೆ, ಈ ಮೂರು ತಿಂಗಳೊಳಗೆ ಪತಂಜಲಿ ಆಯುರ್ವೇದ ಮತ್ತು ಡಿಎಸ್ ಗ್ರೂಪ್ ಸಂಸ್ಥೆಗಳು ಮ್ಯಾಗ್ಮಾವನ್ನು ಖರೀದಿಸಬೇಕು. ಇಲ್ಲವಾದರೆ, ಒಪ್ಪಂದವು ಅನೂರ್ಜಿತಗೊಳ್ಳುತ್ತದೆ.

ಇದನ್ನೂ ಓದಿ: ಸಂಪೂರ್ಣ ಸ್ವಂತವಾಗಿ ಟ್ರಿಲಿಯನ್ ಪ್ಯಾರಾಮೀಟರ್ ಎಐ ಮಾಡಲ್ ಕಟ್ಟುತ್ತಿರುವ ಸರ್ವಂ; ಇದು ಭಾರತಕ್ಕೆ ಹೊಸ ಶಕ್ತಿ

ಮ್ಯಾಗ್ಮಾ ಜನರಲ್ ಇನ್ಷೂರೆನ್ಸ್ ಕಂಪನಿಯು ಜೀವ ವಿಮೆ ಬಿಟ್ಟು ಇತರ ಇನ್ಷೂರೆನ್ಸ್ ಸೆಗ್ಮೆಂಟ್​ಗಳಲ್ಲಿ ಬ್ಯುಸಿನೆಸ್ ಮಾಡುತ್ತಿದೆ. ವಾಹನ ವಿಮೆ, ಆರೋಗ್ಯ ವಿಮೆ, ಆಸ್ತಿ ವಿಮೆ, ವಾಣಿಜ್ಯ ವಿಮೆ ಇತ್ಯಾದಿ ಸೆಗ್ಮೆಂಟ್​ಗಳಲ್ಲಿ ಇದು ವಿಮೆ ಮಾಡುತ್ತದೆ. 2025-26ರಲ್ಲಿ ಈ ಕಂಪನಿಯು 3,615 ಕೋಟಿ ರೂ ಮೊತ್ತದ ಪ್ರೀಮಿಯಮ್​ಗಳನ್ನು ಪಡೆದಿತ್ತು.

ಮಾರುಕಟ್ಟೆಯಲ್ಲಿ ಸಾಕಷ್ಟು ಗುರುತು ಮಾಡಿರುವ ಮ್ಯಾಗ್ಮಾ ಸಂಸ್ಥೆಯನ್ನು ಸ್ವಾಧೀನ ಪಡಿಸಿಕೊಂಡರೆ ಪತಂಜಲಿ ಸಂಸ್ಥೆ ಸುಲಭವಾಗಿ ಮಾರುಕಟ್ಟೆ ಪ್ರವೇಶಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ವಾಯುಭಾರ ಕುಸಿತದ ಹಿನ್ನೆಲೆ ಕರ್ನಾಟಕದಲ್ಲಿ ಭಾರಿ ಮಳೆ ಮುನ್ಸೂಚನೆ: ಈ ಜಿಲ್ಲೆಗಳಿಗೆ ಆರೆಂಜ್​​ ಅಲರ್ಟ್​​ – Kannada News | Karnataka Weather Update: Depression Triggers Heavy Rain Warning; Orange Alert Issued for 6 Districts

ಕರ್ನಾಟಕದಲ್ಲಿ ಭಾರಿ ಮಳೆ ಮುನ್ಸೂಚನೆImage Credit source: PTI

ಬೆಂಗಳೂರು, ಜುಲೈ 31: ವಾಯುಭಾರ ಕುಸಿತದ ಹಿನ್ನೆಲೆ ಕರ್ನಾಟಕದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಕರಾವಳಿ ಭಾಗ ಸೇರಿ ಚಿಕ್ಕಮಗಳೂರು ಭಾಗದಲ್ಲಿ ಹೆಚ್ಚಿನ ವರ್ಷಧಾರೆಯಾಗಲಿದೆ. ಕೊಡುಗು, ಮೈಸೂರು ಭಾಗದಲ್ಲಿ ಸಾಧಾರಣ ಮಳೆಯಾಗಲಿದೆ. ಫೆಸಿಪಿಕ್ ಸಾಗರದಲ್ಲಿ ಉಷ್ಣಾಂಶ ಹೆಚ್ಚಳವಾಗಿದ್ದು, ಹಿಂಗಾರು ಮಳೆ ವಾಡಿಕೆಯಂತೆ ಬರುವ ನೀರಿಕ್ಷೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.

ಬಹುತೇಕ ಜಿಲ್ಲೆಗಳಿಗೆ ಆರೆಂಜ್​​ ಅಲರ್ಟ್​​

ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಭಾರಿ ಮಳೆಯ ನಿರೀಕ್ಷೆ ಇದ್ದು ಆರೆಂಜ್​​ ಅಲರ್ಟ್​​ ಘೋಷಿಸಲಾಗಿದೆ. ಬಾಗಲಕೋಟೆ, ಬೀದರ್​​, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಗಂಟೆಗೆ 50-60 ಕಿಲೋ ಮೀಟರ್​​ ವೇಗದ ಗಾಳಿಯ ಜೊತೆಗೆ ಸಾಧಾರಣ ಮಳೆಯ ನಿರೀಕ್ಷೆ ಇದೆ. ಉಳಿದಂತೆ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರದಲ್ಲಿಯೂ ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಪಶ್ಚಿಮ ಘಟ್ಟದಲ್ಲಿ ಮಳೆಯ ಅಬ್ಬರ: ಹಾಲ್ನೊರೆಯಂತೆ ಧುಮ್ಮಿಕ್ಕಿದ ಗೋಕಾಕ್ ಜಲಪಾತ

ಸಕಲೇಶಪುರದಲ್ಲಿ ಗರಿಷ್ಠ ಮಳೆ

ನಿನ್ನೆ ಹಾಸನದ ಸಕಲೇಶಪುರದ ಹೊಗದಹಳ್ಳದಲ್ಲಿ 153.5 ಮಿ.ಮೀ., ವಿರಾಜಪೇಟೆಯ ಬಿರುನಾನಿಯಲ್ಲಿ 149 ಮಿ.ಮೀ., ಹೊಸನಗರದ ನಗರದಲ್ಲಿ 128 ಮಿ.ಮೀ., ಬೆಳ್ತಂಗಡಿಯ ನೆರಿಯದಲ್ಲಿ 104 ಮಿ.ಮೀ., ಶೃಂಗೇರಿಯ ಕಿಗ್ಗದಲ್ಲಿ 91.5 ಮಿ.ಮೀ., ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ನಿಲ್ಕುಂದದಲ್ಲಿ 89.5 ಮಿ.ಮೀ. ಮತ್ತು ಕಾರ್ಕಳದ ವರಂಗದಲ್ಲಿ 51.5 ಮಿ.ಮೀ. ಮಳೆಯಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ರಾಮಾಯಣ’ ಟ್ರೇಲರ್‌ ನೋಡಿ ಪಾಕಿಸ್ತಾನಿ ಮಂದಿ ಫಿದಾ: ರಣಬೀರ್, ಯಶ್ ನಟನೆಗೆ ಮೆಚ್ಚುಗೆ – Kannada News | Pakistani Youtubers impressed by Ramayana Trailer ft Ranbir Kapoor Yash Sai Pallavi

ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ ಆ್ಯಕ್ಷನ್-ಕಟ್ ಹೇಳಿರುವ ‘ರಾಮಾಯಣ’ ಚಿತ್ರದ ಟ್ರೇಲರ್ (Ramayana Trailer) ಬಿಡುಗಡೆಯಾಗಿದೆ. ಭಾರತದಲ್ಲಿ ಮಾತ್ರವಲ್ಲದೆ ಗಡಿ ದಾಟಿ ಪಾಕಿಸ್ತಾನದಲ್ಲೂ ಈ ಟ್ರೇಲರ್ ಭಾರಿ ಸದ್ದು ಮಾಡುತ್ತಿದೆ. ಜುಲೈ 30ರಂದು ಬಿಡುಗಡೆಯಾದ ಈ ಟ್ರೇಲರ್ ವೀಕ್ಷಿಸಿದ ಪಾಕಿಸ್ತಾನದ ಪ್ರಸಿದ್ಧ ಯೂಟ್ಯೂಬರ್‌ಗಳು ಮತ್ತು ಕಂಟೆಂಟ್ ಕ್ರಿಯೇಟರ್‌ಗಳು ದೃಶ್ಯ ವೈಭವಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಿಗ್ ಬಜೆಟ್​ನಲ್ಲಿ ನಿರ್ಮಾಣ ಆಗಿರುವ ರಾಮಾಯಣ (Ramayana) ಸಿನಿಮಾದಲ್ಲಿ ಯಶ್, ರಣಬೀರ್ ಕಪೂರ್ ಅವರ ಲುಕ್ ಮತ್ತು ನಟನೆಯನ್ನು ಕಂಡು ಪಾಕ್ ಮಂದಿ ಬೆರಗಾಗಿದ್ದಾರೆ.

ಪಾಕ್ ನೆಟ್ಟಿಗರಿಗೆ ಅಚ್ಚರಿ ಮೂಡಿಸಿದ ಟ್ರೇಲರ್:

ಪಾಕಿಸ್ತಾನದ ಪ್ರಸಿದ್ಧ ಯೂಟ್ಯೂಬರ್ ಮಾವಿಯಾ ಉಮರ್ ಫಾರೂಕಿ ಅವರು ‘ರಾಮಾಯಣ’ ಟ್ರೇಲರ್ ವೀಕ್ಷಿಸಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ರಿಯಾಕ್ಷನ್ ವಿಡಿಯೋ ಹಂಚಿಕೊಂಡಿದ್ದಾರೆ. ‘ಪಾಕಿಸ್ತಾನಿ ಪ್ರೇಕ್ಷಕನಾಗಿ ಹೇಳುವುದಾದರೆ, ರಾಮಾಯಣ ಟ್ರೇಲರ್ ಅದ್ಭುತವಾಗಿದೆ. ಭಾರತ ಮತ್ತು ಬಾಲಿವುಡ್‌ಗೆ ಇಷ್ಟೊಂದು ಹಣ ಎಲ್ಲಿಂದ ಸಿಗುತ್ತದೆ? 1,000 ಕೋಟಿ ರೂಪಾಯಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಿಸಿರುವುದು ದೃಶ್ಯಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಹಾಲಿವುಡ್ ಮಟ್ಟದ VFX ತಂತ್ರಜ್ಞಾನ ಬಳಸಲಾಗಿದೆ. ಇದು ಭಾರತೀಯ ಸಿನಿಮಾ ಹಾಗೂ ಹಿಂದೂ ಧರ್ಮದ ಇತಿಹಾಸ. ಆದರೆ ಒಬ್ಬ ಪಾಕಿಸ್ತಾನಿಯಾಗಿ ನನಗೂ ಈ ಟ್ರೇಲರ್ ನೋಡಿ ರೋಮಾಂಚನವಾಗಿದೆ’ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ಈ ಚಿತ್ರದ ಒಟ್ಟು ಬಜೆಟ್ 1,000 ಕೋಟಿ ಅಲ್ಲ, ಬದಲಿಗೆ ಬರೋಬ್ಬರಿ 4,000 ಕೋಟಿ ರೂಪಾಯಿ ಎಂದು ಭಾರತೀಯ ನೆಟ್ಟಿಗರು ಕಮೆಂಟ್ ಬಾಕ್ಸ್‌ನಲ್ಲಿ ಅವರಿಗೆ ಸರಿಯಾದ ಮಾಹಿತಿಯನ್ನು ನೀಡಿದ್ದಾರೆ. ಎರಡು ಭಾಗಗಳಲ್ಲಿ ನಿರ್ಮಾಣವಾಗುತ್ತಿರುವ ಈ ದೃಶ್ಯಕಾವ್ಯದ ಮೊದಲ ಭಾಗವು ಈ ವರ್ಷದ ದೀಪಾವಳಿ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ರಣಬೀರ್, ಯಶ್ ಮತ್ತು ಸಾಯಿ ಪಲ್ಲವಿಗೆ ಜೈಕಾರ:

ಟ್ರೇಲರ್‌ನಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಯಶ್ ಹಾಗೂ ಶ್ರೀರಾಮನ ಪಾತ್ರದಲ್ಲಿರುವ ರಣಬೀರ್ ಕಪೂರ್ ಅವರ ಎಂಟ್ರಿ ಸೀನ್‌ಗಳನ್ನು ಮಾವಿಯಾ ಉಮರ್ ಮುಕ್ತಕಂಠದಿಂದ ಹೊಗಳಿದ್ದಾರೆ. ರಣಬೀರ್ ಮತ್ತು ಯಶ್ ನಡುವಿನ ನಟನಾ ಜುಗಲ್ಬಂದಿ ನೋಡಲು ಕಾತುರನಾಗಿದ್ದೇನೆ ಎಂದಿದ್ದಾರೆ. ಮತ್ತೊಬ್ಬ ಪಾಕಿಸ್ತಾನಿ ಯೂಟ್ಯೂಬರ್ ಹಸ್ನಾತ್ ಖಾನ್, ‘ರಾವಣನ ಪಾತ್ರದಲ್ಲಿ ಯಶ್ ಲುಕ್ ಕ್ರೇಜಿಯಾಗಿದೆ. ಗ್ರಾಫಿಕ್ಸ್ ಹಾಗೂ ಸಾಹಸ ದೃಶ್ಯಗಳ ವಿನ್ಯಾಸ ಅದ್ಭುತವಾಗಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ಟ್ರೇಲರ್: ನಟಿ ಲಾರಾ ದತ್ತಾ ಸ್ಟೈಲಿಶ್ ಲುಕ್‌ ನೋಡಿ ಟ್ರೋಲ್ ಮಾಡಿದ ಜನ

ಗಮನ ಸೆಳೆದ ಸೀತೆಯ ಪಾತ್ರ:

ಕಂಟೆಂಟ್ ಕ್ರಿಯೇಟರ್ ‘ಪಾಕಿಸ್ತಾನಿ ರಿಯಾಕ್ಷನ್ ಬಾಯ್’ ಹಾಗೂ ‘ಇಮಾನ್ ಮೊಅಜ್ಜಮ್ ಎಂಟರ್‌ಟೇನ್‌ಮೆಂಟ್’ ಚಾನೆಲ್‌ನವರು ಸಾಯಿ ಪಲ್ಲವಿ ಅವರ ಸೀತೆಯ ಪಾತ್ರವನ್ನು ಶ್ಲಾಘಿಸಿದ್ದಾರೆ. ‘ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಅತ್ಯಂತ ದೈವಿಕವಾಗಿ ಹಾಗೂ ಸರಳತೆಯಿಂದ ಕಂಗೊಳಿಸುತ್ತಿದ್ದಾರೆ’ ಎಂದು ಹೊಗಳಿದ್ದಾರೆ. ಟ್ರೇಲರ್‌ನಲ್ಲಿ ಕೈಕೇಯಿ ನೀಡಿದ ಮಾತಿನಂತೆ ಶ್ರೀರಾಮ 14 ವರ್ಷಗಳ ವನವಾಸಕ್ಕೆ ತೆರಳುವುದು, ಸೀತೆ ಹಾಗೂ ಲಕ್ಷ್ಮಣ ಜೊತೆಯಾಗುವುದು ಮತ್ತು ರಾಮ-ರಾವಣರ ನಡುವಿನ ಯುದ್ಧದ ಸನ್ನಿವೇಶಗಳನ್ನು ಭವ್ಯವಾಗಿ ತೋರಿಸಲಾಗಿದೆ. ಆದರೆ, ಇಡೀ ಟ್ರೇಲರ್‌ನಲ್ಲಿ ಹನುಮಂತನ ಪಾತ್ರದ ಯಾವುದೇ ಸುಳಿವು ನೀಡದಿರುವುದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚುನಾವಣಾ ಆಯುಕ್ತರ ನೇಮಕಾತಿಗೆ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರ ಸಮರ್ಥನೆ – Kannada News | No reason to doubt Prime Minister Central Government defends Election Commissioner appointment in Supreme Court

ನವದೆಹಲಿ, ಜುಲೈ 31: ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ, ಕೇಂದ್ರ ಸಚಿವರು ಹಾಗೂ ವಿರೋಧ ಪಕ್ಷದ ನಾಯಕರನ್ನೊಳಗೊಂಡ ಮೂವರು ಸದಸ್ಯರ ಸಮಿತಿಯ ಪ್ರಸ್ತುತ ಆಯ್ಕೆ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಬಲವಾಗಿ ಸಮರ್ಥಿಸಿಕೊಂಡಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಧಾನಮಂತ್ರಿಯವರ ಪಾತ್ರವನ್ನು ಶಂಕಿಸಲು ಯಾವುದೇ ಕಾರಣವಿಲ್ಲ ಎಂದು ಸರ್ಕಾರ ಸುಪ್ರೀಂ ಕೋರ್ಟ್​ಗೆ (Supreme Court) ತಿಳಿಸಿದೆ.

“ಪ್ರಧಾನಮಂತ್ರಿಯವರ ಹುದ್ದೆಗೆ ತನ್ನದೇ ಆದ ಸಾಂವಿಧಾನಿಕ ಪವಿತ್ರತೆ ಇದೆ. ಒಂದು ವೇಳೆ ಪ್ರಧಾನಿಯವರ ನಿರ್ಧಾರವನ್ನೇ ನಂಬಲು ಸಾಧ್ಯವಿಲ್ಲ ಮತ್ತು ಅದನ್ನು ದುರುದ್ದೇಶಪೂರಿತ ಎಂದು ಪರಿಗಣಿಸುವುದಾದರೆ, ಅವರು ತಮ್ಮ ಸಚಿವ ಸಂಪುಟವನ್ನು ಆಯ್ಕೆ ಮಾಡುವಾಗಲೂ ಯಾವುದೋ ಮಾಜಿ ನ್ಯಾಯಮೂರ್ತಿ ಅಥವಾ ಹೊರಗಿನವರನ್ನು ಸಂಪರ್ಕಿಸಬೇಕು ಎಂಬ ನಿಯಮವನ್ನೂ ರೂಪಿಸಬೇಕಾಗುತ್ತದೆ ಅಲ್ಲವೇ?” ಎಂದು ತುಷಾರ್ ಮೆಹ್ತಾ ಕೋರ್ಟ್‌ಗೆ ಪ್ರಶ್ನಿಸಿದರು.

ಕಾರ್ಯಾಂಗವು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತದೆ ಎಂಬ ಪೂರ್ವಾಗ್ರಹ ಪೀಡಿತ ಕಲ್ಪನೆಯೊಂದಿಗೆ ಸಾಂವಿಧಾನಿಕ ನ್ಯಾಯಾಲಯಗಳು ವ್ಯವಹರಿಸಲು ಸಾಧ್ಯವಿಲ್ಲ ಎಂದು ಸರ್ಕಾರ ವಾದಿಸಿದೆ. ಆಯ್ಕೆ ಸಮಿತಿಯನ್ನು ಪ್ರಶ್ನಿಸುವುದು ಸಂಸತ್ತಿನ ಶಾಸಕಾಂಗ ವಿವೇಚನೆ ಮತ್ತು ಸಾಂಸ್ಥಿಕ ನಂಬಿಕೆ ಎರಡನ್ನೂ ಅನುಮಾನಿಸಿದಂತೆ ಎಂದು ಪ್ರತಿಪಾದಿಸಿದೆ.

ಇದನ್ನೂ ಓದಿ: ಕಲ್ಲಿದ್ದಲು ಹಗರಣ; ನಿಧನರಾದ 2 ವರ್ಷದ ಬಳಿಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್​ಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್

2023ರ ಈ ಕಾಯ್ದೆಯು ಆಯ್ಕೆ ಸಮಿತಿಯಲ್ಲಿದ್ದ ಭಾರತದ ಮುಖ್ಯ ನ್ಯಾಯಮೂರ್ತಿಗಳ ಬದಲಿಗೆ ಕೇಂದ್ರ ಸಂಪುಟ ಸಚಿವರೊಬ್ಬರನ್ನು ಸೇರಿಸುವ ಮೂಲಕ, ನೇಮಕಾತಿ ಪ್ರಕ್ರಿಯೆಯಲ್ಲಿ ಆಡಳಿತಾರೂಢ ಸರ್ಕಾರಕ್ಕೆ ಮೂರನೇ ಎರಡರಷ್ಟು ಸ್ಪಷ್ಟ ಬಹುಮತವನ್ನು ನೀಡಿದೆ.

2023ರ ಸುಪ್ರೀಂ ಕೋರ್ಟ್ ತೀರ್ಪು ಕೇವಲ ಒಂದು ಮಧ್ಯಂತರ ವ್ಯವಸ್ಥೆಯಾಗಿತ್ತು. ಮುಖ್ಯ ನ್ಯಾಯಮೂರ್ತಿಗಳು ಆಯ್ಕೆ ಸಮಿತಿಯಲ್ಲಿ ಇರಲೇಬೇಕು ಎಂಬುದು ಕಡ್ಡಾಯ ಸಾಂವಿಧಾನಿಕ ನಿಯಮವಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದರು.

ಇದನ್ನೂ ಓದಿ: ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; ಎಸ್‌ಐಟಿ ತನಿಖೆಗೆ ಸುಪ್ರೀಂ ಕೋರ್ಟ್ ಸೂಚನೆ

ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠದ ಮುಂದೆ ಈ ವಾದ ಮಂಡಿಸಲಾಯಿತು. ‘ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯ್ದೆ, 2023’ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಪೀಠವು ತೀರ್ಪನ್ನು ಕಾಯ್ದಿರಿಸಿದೆ.

ಏನಿದು ಪ್ರಕರಣ?:

2023ರ ಕಾಯ್ದೆಯಡಿ, ಆಯ್ಕೆ ಸಮಿತಿಯು ಪ್ರಧಾನಮಂತ್ರಿ, ಪ್ರಧಾನಿ ನಾಮನಿರ್ದೇಶನ ಮಾಡಿದ ಕೇಂದ್ರ ಸಚಿವರು ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡಿರುತ್ತದೆ. ಈ ಪ್ಯಾನೆಲ್‌ನಿಂದ ಸಿಜೆಐ ಅವರನ್ನು ಹೊರಗಿಟ್ಟಿರುವುದು ನೇಮಕಾತಿ ಪ್ರಕ್ರಿಯೆಯ ಸ್ವಾಯತ್ತತೆಯನ್ನು ಧಕ್ಕೆಗೊಳಿಸುತ್ತದೆ ಎಂದು ಪಿಐಎಲ್‌ಗಳಲ್ಲಿ ಆಕ್ಷೇಪಿಸಲಾಗಿದೆ. 2023ರ ಮಾರ್ಚ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಐತಿಹಾಸಿಕ ತೀರ್ಪಿನಲ್ಲಿ ಪ್ರಧಾನಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಸಿಜೆಐ ಒಳಗೊಂಡ ಸಮಿತಿಯು ಚುನಾವಣಾ ಆಯುಕ್ತರನ್ನು ನೇಮಿಸಬೇಕು ಎಂದು ಆದೇಶಿಸಿತ್ತು. ಆದರೆ ಡಿಸೆಂಬರ್ 2023ರಲ್ಲಿ ಸಂಸತ್ತು ಹೊಸ ಕಾನೂನು ತಂದು ಸಿಜೆಐ ಅವರನ್ನು ಸಮಿತಿಯಿಂದ ಹೊರಗಿಟ್ಟಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CWG 2026: ಮಹಿಳೆಯರ ಡಿಸ್ಕಸ್ ಥ್ರೋನಲ್ಲಿ ಕಂಚು ಗೆದ್ದ ಸೀಮಾ ಕಲಿರಾಮನ್ – Kannada News | 2026 Commonwealth Games: India Wins 2 Medals! Lovepreet Silver, Seema Bronze in Discus

2026ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ 8ನೇ ದಿನದಂದು ಭಾರತಕ್ಕೆ 2 ಪದಕಗಳು ಲಭಿಸಿದವು. ಮೊದಲನೆಯದ್ದಾಗಿ ವೇಟ್‌ಲಿಫ್ಟಿಂಗ್​ನಲ್ಲಿ ಲವ್‌ಪ್ರೀತ್ ಸಿಂಗ್ ಬೆಳ್ಳಿ ಗೆದ್ದರೆ, ಮಹಿಳೆಯರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಸೀಮಾ ಕಲಿರಾಮನ್ ಕಂಚಿನ ಪದಕ ಗೆದ್ದರು.

Source link

ಆಗಸ್ಟ್ ಮಾಸಿಕ ರಾಶಿ ಭವಿಷ್ಯ: ಯಾವ ರಾಶಿಗೆ ಧನಲಾಭ, ಯಾರಿಗೆ ಉದ್ಯೋಗದಲ್ಲಿ ಪ್ರಗತಿ? – Kannada News | August 2026 Astrology: Detailed Monthly Forecast for Each Zodiac Sign’s Fortune

​ಆಗಸ್ಟ್​ ತಿಂಗಳಿನಲ್ಲಿ ಕರ್ಕಾಟಕದಲ್ಲಿ ಉಚ್ಚ ಗುರು, ಸಿಂಹದಲ್ಲಿ ಸ್ವಕ್ಷೇತ್ರ ಸೂರ್ಯ ಹಾಗೂ ಬುಧ, ಕನ್ಯಾದಲ್ಲಿ ನೀಚ ಶುಕ್ರ, ಮಿಥುನದಲ್ಲಿ ಮಂಗಳ ಮತ್ತು ಮೀನದಲ್ಲಿ ವಕ್ರ ಶನಿ-ಚಂದ್ರರ ಉಪಸ್ಥಿತಿಯು ೧೨ ರಾಶಿಗಳ ಮೇಲೆಯೂ ವಿಶಿಷ್ಟ ಪ್ರಭಾವ ಬೀರಲಿದೆ.

​ಮೇಷ ರಾಶಿ :

​ನಾಲ್ಕನೇ ಮನೆಯಲ್ಲಿ ಉಚ್ಚ ಗುರುವಿರುವುದರಿಂದ ಕುಟುಂಬದಲ್ಲಿ ನೆಮ್ಮದಿ, ಆಸ್ತಿ ಅಥವಾ ವಾಹನ ಖರೀದಿ ಯೋಗವಿದೆ. ೫ನೇ ಮನೆಯ ಸೂರ್ಯ-ಬುಧರ ಪ್ರಭಾವದಿಂದ ಶೈಕ್ಷಣಿಕ ಪ್ರಗತಿ ಹಾಗೂ ಮಕ್ಕಳಿಂದ ಶುಭವಾರ್ತೆ ಸಿಗಲಿದೆ. ಕೋಪವನ್ನು ನಿಯಂತ್ರಿಸಿ ಮತ್ತು ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ.

​ವೃಷಭ ರಾಶಿ :

​ಮೂರನೇ ಮನೆಯಲ್ಲಿ ಉಚ್ಚ ಗುರು ನಿಮ್ಮ ಸಾಹಸ ಹಾಗೂ ಧೈರ್ಯವನ್ನು ಹೆಚ್ಚಿಸುತ್ತಾನೆ. ೪ನೇ ಮನೆಯ ಸೂರ್ಯನಿಂದಾಗಿ ಸಮಾಜದಲ್ಲಿ ಗೌರವ ಹೆಚ್ಚಲಿದೆ. ಕಿರು ಪ್ರಯಾಣಗಳು ಲಾಭದಾಯಕವಾಗಿರುತ್ತವೆ. ಸಂಬಂಧಿಕರ ಜೊತೆ ಅನಗತ್ಯ ಮಾತಿನ ಚಕಮಕಿ ಬೇಡ.

​ಮಿಥುನ ರಾಶಿ :

​ಎರಡನೇ ಮನೆಯಲ್ಲಿ ಉಚ್ಚ ಗುರು ನೆಲೆಸಿರುವುದರಿಂದ ಧನಲಾಭ ಹಾಗೂ ಕುಟುಂಬದಲ್ಲಿ ಸುಖ-ಸಂತೋಷ ವೃದ್ಧಿಯಾಗಲಿದೆ. ಮೂರನೇ ಮನೆಯ ಸೂರ್ಯ ಕಾರ್ಯಕ್ಷೇತ್ರದಲ್ಲಿ ಅಪಾರ ಯಶಸ್ಸನ್ನು ತರಲಿದ್ದಾನೆ. ನಿಮ್ಮ ರಾಶಿಯಲ್ಲೇ ಮಂಗಳನಿರುವುದರಿಂದ ಆತುರದ ನಿರ್ಧಾರಗಳನ್ನು ತಡೆಯಿರಿ.

​ಕರ್ಕಾಟಕ ರಾಶಿ :

​ನಿಮ್ಮ ರಾಶಿಯಲ್ಲೇ ಉಚ್ಚ ಗುರುವಿರುವುದರಿಂದ ವ್ಯಕ್ತಿತ್ವ ವಿಕಸನ, ಧಾರ್ಮಿಕ ಚಿಂತನೆ ಹಾಗೂ ಆಂತರಿಕ ಶಾಂತಿ ದೊರೆಯಲಿದೆ. ನೂತನ ಕೆಲಸ-ಕಾರ್ಯಗಳಿಗೆ ಚಾಲನೆ ನೀಡಲು ಶ್ರೇಷ್ಠ ಸಮಯ. ಎರಡನೇ ಮನೆಯಲ್ಲಿ ಕೇತು ಇರುವುದರಿಂದ ಹಣಕಾಸಿನ ವಹಿವಾಟಿನಲ್ಲಿ ಎಚ್ಚರಿಕೆ ವಹಿಸಿ.

​ಸಿಂಹ ರಾಶಿ :

​ನಿಮ್ಮ ರಾಶಿಯಲ್ಲೇ ಸ್ವಕ್ಷೇತ್ರ ಸೂರ್ಯ ಮತ್ತು ಬುಧ ಇರುವುದರಿಂದ ನಾಯಕತ್ವ ಗುಣ, ಅಧಿಕಾರ ಮತ್ತು ಗೌರವ ಲಭಿಸಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ. ಹನ್ನೆರಡನೇ ಮನೆಯ ಗುರುವಿನಿಂದಾಗಿ ಅನಿರೀಕ್ಷಿತ ಧಾರ್ಮಿಕ ಅಥವಾ ಪ್ರಯಾಣದ ವೆಚ್ಚಗಳು ಹೆಚ್ಚಾಗಬಹುದು.

ಇದನ್ನೂ ಓದಿ: ಆಗಸ್ಟ್ 12 ರಂದು ಸೂರ್ಯಗ್ರಹಣ; ಈ 3 ರಾಶಿಯವರಿಗೆ ಒಲಿಯಲಿದೆ ಅಪಾರ ಅದೃಷ್ಟ!

​ಕನ್ಯಾ ರಾಶಿ :

​ಹನ್ನೊಂದನೇ ಮನೆಯಲ್ಲಿ ಉಚ್ಚ ಗುರುವಿರುವುದರಿಂದ ವ್ಯಾಪಾರ-ವ್ಯವಹಾರಗಳಲ್ಲಿ ಅಪಾರ ಲಾಭ ಸಿಗಲಿದೆ. ಹಳೆಯ ಹೂಡಿಕೆಗಳಿಂದ ಶುಭ ಫಲ ನಿರೀಕ್ಷಿಸಬಹುದು. ನಿಮ್ಮ ರಾಶಿಯಲ್ಲಿ ನೀಚ ಶುಕ್ರನಿರುವುದರಿಂದ ವೈಯಕ್ತಿಕ ಸಂಬಂಧಗಳಲ್ಲಿ ತಾಳ್ಮೆ ವಹಿಸುವುದು ಅಗತ್ಯ.

​ತುಲಾ ರಾಶಿ :

​ಹತ್ತನೇ ಮನೆಯಲ್ಲಿ ಉಚ್ಚ ಗುರು ವೃತ್ತಿ ಜೀವನದಲ್ಲಿ ಶ್ರೇಷ್ಠ ಪ್ರಗತಿ ಹಾಗೂ ಬಡ್ತಿ ತಂದುಕೊಡಲಿದ್ದಾನೆ. ಹನ್ನೊಂದನೇ ಮನೆಯ ಸೂರ್ಯನಿಂದಾಗಿ ಹಿರಿಯ ಅಧಿಕಾರಿಗಳಿಂದ ಬೆಂಬಲ ಸಿಗಲಿದೆ. ಖರ್ಚುಗಳ ಮೇಲೆ ನಿಗಾ ಇರಲಿ.

​ವೃಶ್ಚಿಕ ರಾಶಿ :

​ಒಂಭತ್ತನೇ ಮನೆಯಲ್ಲಿ ಉಚ್ಚ ಗುರುವಿರುವುದರಿಂದ ದೈವಾನುಗ್ರಹ, ದೂರದ ಪ್ರಯಾಣ ಹಾಗೂ ಭಾಗ್ಯೋದಯವಾಗಲಿದೆ. ಹತ್ತನೇ ಮನೆಯ ಸೂರ್ಯ ಉದ್ಯೋಗದಲ್ಲಿ ಯಶಸ್ಸು ನೀಡಲಿದ್ದಾನೆ. ತಂದೆಯವರ ಆರೋಗ್ಯದ ಕಡೆ ಗಮನವಿರಲಿ.

​ಧನು ರಾಶಿ :

​ಒಂಭತ್ತನೇ ಮನೆಯಲ್ಲಿ ಸೂರ್ಯ ಸ್ವಕ್ಷೇತ್ರಗತನಾಗಿರುವುದರಿಂದ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಎಂಟನೇ ಮನೆಯ ಉಚ್ಚ ಗುರುವಿನಿಂದ ನಿಗೂಢ ಜ್ಞಾನ ಅಥವಾ ಶೋಧನೆಗಳಲ್ಲಿ ಯಶಸ್ಸು ಸಿಗಲಿದೆ. ನಾಲ್ಕನೇ ಮನೆಯಲ್ಲಿ ಶನಿ ಇರುವುದರಿಂದ ಮಾನಸಿಕ ಒತ್ತಡ ನಿರ್ವಹಣೆಗೆ ಧ್ಯಾನ ಮಾಡಿ.

​ಮಕರ ರಾಶಿ :

​ಏಳನೇ ಮನೆಯಲ್ಲಿ ಉಚ್ಚ ಗುರುವಿರುವುದರಿಂದ ದಾಂಪತ್ಯ ಜೀವನ ಮಧುರವಾಗಿರುತ್ತದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಲಾಭ ದೊರೆಯಲಿದೆ. ಎಂಟನೇ ಮನೆಯ ಸೂರ್ಯ-ಬುಧರ ಪ್ರಭಾವದಿಂದ ಚಾಲನೆ ಮಾಡುವಾಗ ಮತ್ತು ಆರೋಗ್ಯದ ವಿಚಾರದಲ್ಲಿ ಜಾಗ್ರತೆ ಇರಲಿ.

​ಕುಂಭ ರಾಶಿ :

​ಆರನೇ ಮನೆಯಲ್ಲಿ ಉಚ್ಚ ಗುರುವಿರುವುದರಿಂದ ಶತ್ರುಗಳ ಮೇಲೆ ಜಯ, ಸಾಲಗಳಿಂದ ಮುಕ್ತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಲಭಿಸಲಿದೆ. ಏಳನೇ ರಾಶಿಯಲ್ಲಿ ಸೂರ್ಯ-ಕೇತು ಇರುವುದರಿಂದ ಜಂಟಿ ವ್ಯವಹಾರ ಹಾಗೂ ದಾಂಪತ್ಯದಲ್ಲಿ ಸಾಮರಸ್ಯ ಕಾಯ್ದುಕೊಳ್ಳಿ.

ಮೀನ ರಾಶಿ :

​ಐದನೇ ಮನೆಯಲ್ಲಿ ಉಚ್ಚ ಗುರುವಿರುವುದರಿಂದ ಬುದ್ಧಿವಂತಿಕೆ, ಜ್ಞಾನಾರ್ಜನೆ ಹಾಗೂ ಮಕ್ಕಳಿಂದ ಅಪಾರ ಸಂತೋಷ ಸಿಗಲಿದೆ. ಆರ್ಥಿಕ ಮೂಲಗಳು ಗಟ್ಟಿಯಾಗಲಿವೆ. ನಿಮ್ಮ ರಾಶಿಯಲ್ಲೇ ಶನಿ-ಚಂದ್ರರಿರುವುದರಿಂದ ಅನಗತ್ಯ ಆತಂಕಕ್ಕೆ ಒಳಗಾಗಬೇಡಿ, ಶಿವಾರಾಧನೆ ಮಾಡಿ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:23 pm, Fri, 31 July 26

Source link

ಕಿಯಾರಾ ಹುಟ್ಟುಹಬ್ಬ: ‘ಟಾಕ್ಸಿಕ್’ ಅಡ್ಡದಿಂದ ಬಂತು ‘ನಾಡಿಯಾ’ಳ ಹೊಸ ಪೋಸ್ಟರ್ – Kannada News | Kiara Advani birthday Toxic movie team released new poster

ಬಾಲಿವುಡ್‌ನ ಸ್ಟಾರ್ ನಟಿ ಕಿಯಾರಾ ಅಡ್ವಾಣಿ (Kiara Advani) ತಮ್ಮ ಜನ್ಮದಿನ ಆಚರಣೆ ಮಾಡಿಕೊಂಡಿದ್ದಾರೆ. ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಕಿಯಾರಾ ಅವರು ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾನಲ್ಲಿ ಸಹ ನಟಿಸಿದ್ದು, ಟಾಕ್ಸಿಕ್ ಚಿತ್ರತಂಡ ಕಿಯಾರಾಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದೆ. ಜೊತೆಗೆ ಸಿನಿಮಾದ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.

ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ ‘ನಾಡಿಯಾ’ (Nadia) ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ಪೋಸ್ಟರ್‌ನಲ್ಲಿ ಕಿಯಾರಾ ಅವರ ಲುಕ್ ವಿಭಿನ್ನವಾಗಿದ್ದು, ಕೆಂಪು ಬಣ್ಣದ ಉಡುಗೆ ಜೊತೆಗೆ ಕೆಂಪು ಬಣ್ಣದ ಗಾಢ ತುಟಿ ರಂಗು ಪೋಸ್ಟರ್​​ನಲ್ಲಿ ಎದ್ದು ಕಾಣುತ್ತಿದೆ. ಜೊತೆಗೆ ಕಿಯಾರಾ ಅವರ ಕಿಲ್ಲರ್ ಲುಕ್ ಸಹ ಪೋಸ್ಟರ್​​ಗೆ ವಿಶೇಷ ಚುಂಬಕತೆಯನ್ನು ನೀಡಿದೆ.

ಕಿಯಾರಾ ಅವರು ‘ಟಾಕ್ಸಿಕ್’ ಸಿನಿಮಾನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಯಶ್ ಹಾಗೂ ಕಿಯಾರಾ ನಟನೆಯ ‘ತಬಾಹಿ’ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಆ ಹಾಡಿನಲ್ಲಿ ಕಿಯಾರಾ ಹಾಗೂ ಯಶ್ ನಡುವೆ ಸಾಕಷ್ಟು ರೊಮ್ಯಾಂಟಿಕ್ ಮತ್ತು ಹಾಟ್ ದೃಶ್ಯಗಳು ಇದ್ದವು. ಕಿಯಾರಾ ಅಡ್ವಾಣಿ, ‘ಟಾಕ್ಸಿಕ್’ ಸಿನಿಮಾದ ಮುಖ್ಯ ನಾಯಕಿ ಎನ್ನಲಾಗುತ್ತಿದೆ. ಸಿನಿಮಾನಲ್ಲಿ ಅವರದ್ದು ಸರ್ಕಸ್ ಒಂದರ ಪ್ರಮುಖ ಪ್ರದರ್ಶನಕಾರ್ತಿಯ ಪಾತ್ರ.

ಇದನ್ನೂ ಓದಿ:ಕಿಯಾರಾ ಬೋಲ್ಡ್ ಅವತಾರಕ್ಕೆ ಸಿದ್ದಾರ್ಥ್ ಫ್ಯಾನ್ಸ್​ಗೆ ಬೇಸರ?

ಈ ಹಿಂದೆ ಸಂದರ್ಶನವೊಂದರಲ್ಲಿ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಮಾತನಾಡಿದ್ದ ನಟಿ ಕಿಯಾರಾ, ‘ಟಾಕ್ಸಿಕ್’ ಅತ್ಯಂತ ಭಿನ್ನ ಸಿನಿಮಾ ಎಂದಿದ್ದರು. ಮಾತ್ರವಲ್ಲದೆ, ಆ ಸಿನಿಮಾ ಒಂದು ಮಹಿಳಾ ಪ್ರಧಾನ ಸಿನಿಮಾ ಎಂದು ಸಹ ಹೇಳಿದ್ದರು. ಕಿಯಾರಾ ಅವರ ಈ ಹೇಳಿಕೆ ಸಿನಿಮಾದ ಬಗ್ಗೆ ಕುತೂಹಲವನ್ನು ಹೆಚ್ಚಿಸಿದೆ. ಯಶ್ ಅಂಥಹಾ ಮಾಸ್, ಕಮರ್ಶಿಯಲ್ ನಾಯಕ ನಟಿಸಿರುವ ಸಿನಿಮಾವನ್ನು ಕಿಯಾರಾ ಮಹಿಳಾ ಪ್ರಧಾನ ಎಂದಿರುವುದು ಅಭಿಮಾನಿಗಳ ಕುತೂಹಲಕ್ಕೆ ಸಹ ಕಾರಣವಾಗಿದೆ.

ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾವು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ನಿರೀಕ್ಷಿತ ಪ್ರಾಜೆಕ್ಟ್‌ಗಳಲ್ಲಿ ಒಂದಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾನಲ್ಲಿ ಕಿಯಾರಾ ಸೇರಿದಂತೆ ಒಟ್ಟು ಐವರು ನಾಯಕಿಯರಿದ್ದಾರೆ. ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರುಗಳು ಈ ಸಿನಿಮಾನಲ್ಲಿ ನಾಯಕಿಯರಾಗಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 11:46 am, Fri, 31 July 26

Source link

ತಮಿಳುನಾಡು ಸಿಎಂ ಬೆಂಗಳೂರಿಗೆ ಬರುವುದು ಬೇಡ ಎಂದ ಡಿಕೆ ಶಿವಕುಮಾರ್, ಕಾರಣವೇನು? – Kannada News | Cauvery water Dispute: Karnataka CM DK Shivakumar asks his Tamil Nadu counterpart Vijay to defer his visit to Bengaluru

ಬೆಂಗಳೂರು, (ಜುಲೈ 31): ಮಳೆ ಕೊರತೆ ಮಧ್ಯೆ ಕಾವೇರಿ ನೀರು ನಿಯಂತ್ರಣ ಸಮಿತಿಯು ತಮಿಳುನಾಡಿಗೆ (Tamil Nadu) ನೀರು ಬಿಡುವಂತೆ ಕರ್ನಾಟಕಕ್ಕೆ (Karnataka) ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಕನ್ನಡಿಗರು ಸಿಡಿದೆದ್ದಿದ್ದು, ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೇ  ಆಗಸ್ಟ್ 13ರಂದು ಕರ್ನಾಟಕ ಬಂದ್​​​ಗೆ (Karnataka Bandh) ಕರೆ ನೀಡಲಾಗಿದೆ. ಇನ್ನೊಂದೆಡೆ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಯಾವುದೇ ಕಾರಣಕ್ಕೂ ಬಂದ್ ಮಾಡಬೇಡಿ. ನಿಮ್ಮ ಪರವಾಗಿ ಇರುತ್ತೇನೆಂದು ಭರವಸೆ ನೀಡಿದ್ದಾರೆ. ಇನ್ನು ಇದೇ ವೇಳೆ ತಮಿಳುನಾಡು ಸಿಎಂ ವಿಜಯ್ ಅವರನ್ನು ಆಗಸ್ಟ್ 3ರಂದು ಕರ್ನಾಟಕಕ್ಕೆ ಬರುವುದು ಬೇಡ ಎಂದು ಹೇಳಿದ್ದಾರೆ. ಯಾಕಂದ್ರೆ, ಕಾವೇರಿ ನೀರಿನ ಸಂಬಂಧ ರಾಜ್ಯದೆಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಮಾತುಕತೆ ಬರುವುದು ಬೇಡ ಎಂದು ಸಲಹೆ ನೀಡಿದ್ದಾರೆ.

ಕಾವೇರಿ ನದಿ ನೀರು ಹಾಗೂ ಮೇಕೆದಾಟು ಸಂಬಂಧ ಮಾತುಕತೆಗೆ ಬರುವಂತೆ ತಮಿಳುನಾಡು ಸಿಎಂ ವಿಜಯ್ ಅವರಿಗೆ ಖುದ್ದು ಡಿಕೆ ಶಿವಕುಮಾರ್ ಆಹ್ವಾನ ನೀಡಿದ್ದರು. ಹೀಗಾಗಿ ಆಗಸ್ಟ್ 3ರಂದು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಮಾತುಕತೆಗೆ ವಿಧಾನಸೌಧದಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದ್ರೆ, ಈ ಪರಿಸ್ಥಿತಿಯಲ್ಲಿ ವಿಜಯ್ ಅವರನ್ನು ಬರುವುದು ಬೇಡ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ: 3,991 ಹುದ್ದೆಗಳಿಗೆ 4.54 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು; ಇಂಜಿನಿಯರಿಂಗ್‌, ಪಿಎಚ್‌ಡಿ ಪದವೀಧರರಿಂದಲೂ ಅರ್ಜಿ – Kannada News | Police Constable Recruitment: Over 454,000 Candidates Compete for 3,991 Posts; Engineering Graduates and PhD Holders Among Applicants

ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ

ಬೆಂಗಳೂರು, ಜುಲೈ 31: ಕರ್ನಾಟಕ ಸರ್ಕಾರ ಪೊಲೀಸ್ ಕಾನ್‌ಸ್ಟೆಬಲ್‌ಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು, 3,991 ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಗಸ್ಟ್‌ 2ರಂದು ನೇಮಕಾತಿ ಸಂಬಂಧ ಲಿಖಿತ ಪರೀಕ್ಷೆ ನಡೆಯಲಿದ್ದು, ಬರೋಬ್ಬರಿ 4,54,536ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್‌ ಹುದ್ದೆಗೆ ಪಿಯುಸಿ ವಿದ್ಯಾರ್ಹತೆ ಕನಿಷ್ಠ ಅರ್ಹತೆಯಾಗಿದ್ದರೂ, ಪದವೀಧರರು, ಸ್ನಾತಕೋತ್ತರ ಪದವೀಧರರು, ಇಂಜಿನಿಯರಿಂಗ್‌ ಪದವೀಧರರು ಹಾಗೂ ಪಿಎಚ್‌ಡಿ ಪದವೀಧರರೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿರೋದು ಕಂಡುಬಂದಿದೆ.

ಒಟ್ಟು 7,925 ಕಾನ್‌ಸ್ಟೆಬಲ್‌ ಹುದ್ದೆಗಳ ನೇಮಕಾತಿ ಘೋಷಣೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ರಾಜ್ಯದ ಕಲ್ಯಾಣ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕೇತರ ಪ್ರದೇಶಗಳಲ್ಲಿ ಪರೀಕ್ಷೆಯನ್ನು ನಡೆಸುತ್ತಿದೆ. ಒಟ್ಟು ಹುದ್ದೆಗಳ ಪೈಕಿ 3,395 ಹುದ್ದೆಗಳು ಕಲ್ಯಾಣ ಕರ್ನಾಟಕೇತರ ಪ್ರದೇಶಕ್ಕೆ ಹಾಗೂ 596 ಹುದ್ದೆಗಳುಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೀಸಲಾಗಿವೆ. ಇದರ ಜೊತೆಗೆ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP), ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (KSISF), ವಿಶೇಷ ಮೀಸಲು ಪೊಲೀಸ್ ಪಡೆ (SRPF), ಸಿಟಿ ಆರ್ಮ್ಡ್ ರಿಸರ್ವ್ (CAR) ಹಾಗೂ ಜಿಲ್ಲಾ ಆರ್ಮ್ಡ್ ರಿಸರ್ವ್ (DAR) ಸೇರಿ ಇತರೆ ವಿಭಾಗಗಳ 3,934 ಕಾನ್‌ಸ್ಟೆಬಲ್‌ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯೂ ಆರಂಭಗೊಂಡಿದ್ದು, ಅವುಗಳ ಪರೀಕ್ಷೆಯೂ ಶೀಘ್ರದಲ್ಲೇ ನಡೆಯಲಿದೆ. ಹೀಗೆ, ರಾಜ್ಯ ಸರ್ಕಾರ ಸಿವಿಲ್ ಹಾಗೂ ಇತರೆ ವಿಭಾಗಗಳನ್ನು ಸೇರಿ ಒಟ್ಟು 7,925 ಕಾನ್‌ಸ್ಟೆಬಲ್‌ ಹುದ್ದೆಗಳ ನೇಮಕಾತಿಯನ್ನು ಘೋಷಿಸಿದೆ.

ಇದನ್ನೂ ಓದಿ: ಪೊಲೀಸ್ ಪರೀಕ್ಷೆಗೆ ಟಫ್ ರೂಲ್ಸ್: ಮಾಂಗಲ್ಯಸರ, ಜನಿವಾರಕ್ಕೆ ಓಕೆ; ಕಳ್ಳದಾರಿ ಹಿಡಿದ್ರೆ ಲೈಫ್‌ಟೈಮ್ ಡಿಬಾರ್

ನಿವೃತ್ತ ಐಪಿಎಸ್‌ ಅಧಿಕಾರಿಯೊಬ್ಬರ ಪ್ರಕಾರ, ಸರ್ಕಾರಿ ಉದ್ಯೋಗದ ಮೇಲಿನ ಆಕರ್ಷಣೆ ಹೆಚ್ಚಾಗಿದೆ. ಈಗ ವೇತನ ಶ್ರೇಣಿ ಸುಧಾರಿಸಿರುವುದರಿಂದ ಮಹಾನಗರಗಳ ಯುವಕರೂ ಕಾನ್‌ಸ್ಟೆಬಲ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಅನೇಕ ಇಂಜಿನಿಯರ್‌ಗಳು ಹಾಗೂ ಪಿಎಚ್‌ಡಿ ಪದವೀಧರರೂ ಸರ್ಕಾರಿ ನೌಕರಿಗಾಗಿ ಈ ಹುದ್ದೆಗಳನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ತಿಳಿಸಿರೋದಾಗಿ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರೈಲ್ವೆ ಗ್ರೂಪ್ ಡಿ ಪರೀಕ್ಷೆ: ಪರಿಷ್ಕೃತ ವೇಳಾಪಟ್ಟಿ ಪ್ರಕಟ, ಅಡ್ಮಿಟ್ ಕಾರ್ಡ್ ಮತ್ತು ನಿಯಮಗಳ ಪೂರ್ಣ ವಿವರ ಇಲ್ಲಿದೆ – Kannada News | RRB Group D Exam Date 2026 Revised: Check New CBT Schedule, Admit Card and Exam Pattern

ರೈಲ್ವೆ ಗ್ರೂಪ್ ಡಿ ಪರೀಕ್ಷೆImage Credit source: Getty Images

ರೈಲ್ವೆ ಗ್ರೂಪ್ ಡಿ ನೇಮಕಾತಿಗೆ ತಯಾರಿ ನಡೆಸುತ್ತಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ರೈಲ್ವೆ ನೇಮಕಾತಿ ಮಂಡಳಿಯಿಂದ (RRB) ಅತ್ಯಂತ ಪ್ರಮುಖ ಉದ್ಯೋಗ ನವೀಕರಣ ಬಂದಿದೆ. ರೈಲ್ವೆ ಮಂಡಳಿಯು ಕಂಪ್ಯೂಟರ್ ಆಧಾರಿತ ಪರೀಕ್ಷೆಯ (CBT) ವೇಳಾಪಟ್ಟಿಯನ್ನು ಪರಿಷ್ಕರಿಸಿದ್ದು, ಪರೀಕ್ಷಾ ಅವಧಿಯನ್ನು ಮತ್ತಷ್ಟು ವಿಸ್ತರಿಸಿದೆ. ಈ ಬೃಹತ್ ನೇಮಕಾತಿ ಅಭಿಯಾನದ ಮೂಲಕ ರೈಲ್ವೆಯಲ್ಲಿ ಖಾಲಿ ಇರುವ ಒಟ್ಟು 22,195 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಆಗಸ್ಟ್ 25 ರವರೆಗೆ ಹಂತ ಹಂತವಾಗಿ ಪರೀಕ್ಷೆಗಳು:

ಮೂಲ ವೇಳಾಪಟ್ಟಿಯ ಪ್ರಕಾರ ಈ CBT ಪರೀಕ್ಷೆಯು ಆಗಸ್ಟ್ 3 ರಿಂದ ಆಗಸ್ಟ್ 21 ರವರೆಗೆ ನಡೆಯಬೇಕಿತ್ತು. ಆದರೆ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಈಗ ಪರೀಕ್ಷಾ ದಿನಾಂಕಗಳನ್ನು ಆಗಸ್ಟ್ 25 ರವರೆಗೆ ವಿಸ್ತರಿಸಲಾಗಿದೆ. ಹೊಸ ವೇಳಾಪಟ್ಟಿಯಂತೆ ಪರೀಕ್ಷೆಯನ್ನು ಒಟ್ಟು 16 ದಿನಗಳಲ್ಲಿ ಹಂತ ಹಂತವಾಗಿ ನಡೆಸಲಾಗುತ್ತದೆ. ಮೊದಲ ಹಂತದ ಪರೀಕ್ಷೆಗಳು ಆಗಸ್ಟ್ 3 ರಿಂದ 6 ರವರೆಗೆ, ಎರಡನೇ ಹಂತ ಆಗಸ್ಟ್ 9 ರಿಂದ 14 ರವರೆಗೆ, ಮೂರನೇ ಹಂತ ಆಗಸ್ಟ್ 17 ರಿಂದ 21 ರವರೆಗೆ ಮತ್ತು ಅಂತಿಮ ಹಂತದ ಪರೀಕ್ಷೆಗಳು ಆಗಸ್ಟ್ 25 ರವರೆಗೆ ನಡೆಯಲಿವೆ.

ಇ-ಪ್ರವೇಶ ಪತ್ರ ಮತ್ತು ಪರೀಕ್ಷಾ ನಗರದ ಮಾಹಿತಿ ಬಿಡುಗಡೆ:

ಅಭ್ಯರ್ಥಿಗಳಿಗೆ ತಮ್ಮ ಪರೀಕ್ಷಾ ಕೇಂದ್ರ ಮತ್ತು ದಿನಾಂಕ ತಿಳಿಯಲು ಅನುಕೂಲವಾಗುವಂತೆ ಪರೀಕ್ಷಾ ದಿನಾಂಕದ 10 ದಿನಗಳ ಮೊದಲು ಪರೀಕ್ಷಾ ನಗರದ (Exam City Slip) ಮಾಹಿತಿ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಉಚಿತ ಪ್ರಯಾಣ ಪ್ರಾಧಿಕಾರದ ಲಿಂಕ್ ಅನ್ನು ಆಯಾ RRB ಅಧಿಕೃತ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ. ಇನ್ನು ಪರೀಕ್ಷೆಗೆ ಹಾಜರಾಗಲು ಅಗತ್ಯವಿರುವ ಮುಖ್ಯ ಇ-ಪ್ರವೇಶ ಪತ್ರಗಳನ್ನು (E-Admit Card) ಪರೀಕ್ಷೆಗೆ ಸರಿಯಾಗಿ 4 ದಿನಗಳ ಮೊದಲು ಬಿಡುಗಡೆ ಮಾಡಲಾಗುತ್ತದೆ. ಉದಾಹರಣೆಗೆ, ಆಗಸ್ಟ್ 3 ರಂದು ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಜುಲೈ 31 ರಿಂದ ತಮ್ಮ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಪರೀಕ್ಷಾ ಮಾದರಿ ಮತ್ತು ಅಂಕಗಳ ಹಂಚಿಕೆ:

ರೈಲ್ವೆ ಗ್ರೂಪ್ ಡಿ CBT ಪರೀಕ್ಷೆಯು ಒಟ್ಟು 90 ನಿಮಿಷಗಳ (1.5 ಗಂಟೆ) ಅವಧಿಯದ್ದಾಗಿದ್ದು, 100 ಬಹು ಆಯ್ಕೆಯ (MCQ) ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ವಿಷಯವಾರು ಅಂಕಗಳ ವಿಂಗಡಣೆಯನ್ನು ನೋಡುವುದಾದರೆ, ಸಾಮಾನ್ಯ ಬುದ್ಧಿಮತ್ತೆ ಮತ್ತು ತಾರ್ಕಿಕತೆಯಿಂದ (Reasoning) 30 ಪ್ರಶ್ನೆಗಳು, ಗಣಿತ (Mathematics) ಮತ್ತು ಸಾಮಾನ್ಯ ವಿಜ್ಞಾನದಿಂದ (Science) ತಲಾ 25 ಪ್ರಶ್ನೆಗಳು ಹಾಗೂ ಸಾಮಾನ್ಯ ಅರಿವು ಮತ್ತು ಪ್ರಚಲಿತ ವಿದ್ಯಮಾನಗಳಿಂದ (General Awareness & CA) 20 ಪ್ರಶ್ನೆಗಳನ್ನು ಕೇಳಲಾಗುತ್ತದೆ.

ನೆಗೆಟಿವ್ ಮಾರ್ಕಿಂಗ್ ಮತ್ತು ಅಂಕಗಳ ಲೆಕ್ಕಾಚಾರ:

ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಉತ್ತರ ನೀಡುವಾಗ ಹೆಚ್ಚಿನ ಎಚ್ಚರ ವಹಿಸುವುದು ಅಗತ್ಯವಾಗಿದೆ. ಏಕೆಂದರೆ ಪ್ರತಿ ತಪ್ಪು ಉತ್ತರಕ್ಕೂ ಮೂರನೇ ಒಂದು ಭಾಗ ಋಣಾತ್ಮಕ ಅಂಕಗಳನ್ನು (Negative Marking) ಕಳೆಯಲಾಗುತ್ತದೆ. ಅಂತಿಮವಾಗಿ ಅಭ್ಯರ್ಥಿಗಳ ಪರೀಕ್ಷಾ ಅಂಕಗಳನ್ನು ವಿವಿಧ ಹಂತಗಳ ಪರೀಕ್ಷಾ ಕಠಿಣತೆಯನ್ನು ಸರಿದೂಗಿಸಲು ‘ಸಾಮಾನ್ಯೀಕರಣ’ (Normalization) ವಿಧಾನದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಪರೀಕ್ಷಾ ಕೇಂದ್ರಕ್ಕೆ ತರಬೇಕಾದ ದಾಖಲೆಗಳು ಮತ್ತು ಆಧಾರ್ ನಿಯಮಗಳು:

ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಅಡಚಣೆಯಿಲ್ಲದೆ ಪ್ರವೇಶ ಪಡೆಯಲು ಅಭ್ಯರ್ಥಿಗಳು ಕಡ್ಡಾಯವಾಗಿ ಎರಡು ಮೂಲ ಗುರುತಿನ ಚೀಟಿಗಳನ್ನು (Original ID Proofs) ತರಬೇಕೆಂದು ಆರ್‌ಆರ್‌ಬಿ ಸೂಚಿಸಿದೆ. ಇವುಗಳಲ್ಲಿ ಒಂದು ಗುರುತಿನ ಚೀಟಿಯು ಅರ್ಜಿ ನಮೂನೆಯಲ್ಲಿ ನೀವು ನೀಡಿರುವ ಮಾಹಿತಿಗೆ ಸಂಪೂರ್ಣವಾಗಿ ಹೊಂದಿಕೆಯಾಗಬೇಕು. ಇದರೊಂದಿಗೆ ಪರೀಕ್ಷಾ ಕೇಂದ್ರದಲ್ಲಿ ಬಯೋಮೆಟ್ರಿಕ್ ಸತ್ಯಾಪನೆ ಸುಗಮವಾಗಿ ನಡೆಯಲು ಅಭ್ಯರ್ಥಿಗಳು ಯುಐಡಿಎಐ (UIDAI) ವ್ಯವಸ್ಥೆಯಲ್ಲಿ ತಮ್ಮ ಆಧಾರ್ ಕಾರ್ಡ್ ಅನ್ನು ಮುಂಚಿತವಾಗಿಯೇ ಅನ್‌ಲಾಕ್ ಮಾಡಿಕೊಳ್ಳುವುದು ಅತ್ಯಗತ್ಯ.

ಹಂತ ಹಂತದ ಆಯ್ಕೆ ಪ್ರಕ್ರಿಯೆ:

ರೈಲ್ವೆ ಗ್ರೂಪ್ ಡಿ ನೇಮಕಾತಿಯ ಆಯ್ಕೆ ಪ್ರಕ್ರಿಯೆಯು ಪ್ರಮುಖವಾಗಿ ಮೂರು ಹಂತಗಳಲ್ಲಿ ನಡೆಯುತ್ತದೆ. ಮೊದಲ ಹಂತವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಯಲಿದ್ದು, ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಎರಡನೇ ಹಂತವಾದ ದೈಹಿಕ ದಕ್ಷತೆ ಪರೀಕ್ಷೆಗೆ (PET) ಕರೆಯಲಾಗುತ್ತದೆ. ಇಲ್ಲಿ ಖಾಲಿ ಹುದ್ದೆಗಳ ಸಂಖ್ಯೆಯ ಮೂರು ಪಟ್ಟು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. PET ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಅಂತಿಮವಾಗಿ ದಾಖಲೆಗಳ ಪರಿಶೀಲನೆ (Document Verification) ಮತ್ತು ವೈದ್ಯಕೀಯ ಪರೀಕ್ಷೆಯನ್ನು (Medical Examination) ನಡೆಸಿ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

Exit mobile version