ಇಂಡಿಗೋ ವಿಮಾನಕ್ಕೆ ಬಾಂಬ್​​ ಬೆದರಿಕೆ: ವಿಮಾನದ ಶೌಚಾಲಯದಲ್ಲಿ ಸಿಕ್ತು ಅಚ್ಚರಿಯ ಪತ್ರ – Kannada News | Airport Security Alert: Kolkata Indigo Bomb Scare, Hyderabad Hoax Threat

ಕೋಲ್ಕತ್ತಾ,ಫೆ.14: ಪಶ್ಚಿಮ ಬಂಗಾಳದ ಕೋಲ್ಕತ್ತಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆ ಬಾಂಬ್ ಬೇದರಿಕೆ ಪತ್ರವೊಂದು ಪತ್ತೆಯಾಗಿದೆ. ಈ ವೇಳೆ ಪ್ರಯಾಣಿಕರಲ್ಲಿ ಭಾರಿ ಆತಂಕ ಮೂಡಿಸಿದೆ. ಶಿಲ್ಲಾಂಗ್‌ಗೆ ಹೊರಡಲು ಸಿದ್ಧವಾಗಿದ್ದ ಇಂಡಿಗೋ ವಿಮಾನದ (Indigo flight )ಶೌಚಾಲಯದಲ್ಲಿ ಬಾಂಬ್ ಬೆದರಿಕೆ ಇರುವ ಪತ್ರವೊಂದು ಪತ್ತೆಯಾಗಿದೆ. ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದಿಂದ ಮೇಘಾಲಯದ ಶಿಲ್ಲಾಂಗ್‌ಗೆ ತೆರಳಬೇಕಿದ್ದ ಇಂಡಿಗೋ ವಿಮಾನ (6E-7304) ಬೆಳಿಗ್ಗೆ 9:15ಕ್ಕೆ ಹೊರಡಲು ಸಿದ್ಧವಾಗಿತ್ತು.

ಪ್ರಯಾಣಿಕರು ವಿಮಾನಕ್ಕೆ ಹತ್ತುತ್ತಿದ್ದ ಸಂದರ್ಭದಲ್ಲಿ, ವಿಮಾನದ ಸಿಬ್ಬಂದಿ ಶೌಚಾಲಯದಲ್ಲಿ ಒಂದು ಕಾಗದದ ಚೂರನ್ನು ನೋಡಿದ್ದಾರೆ. ಅದರಲ್ಲಿ ವಿಮಾನದೊಳಗೆ ಬಾಂಬ್ ಇದೆ ಎಂದು ಬರೆಯಲಾಗಿತ್ತು. ತಕ್ಷಣವೇ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ವಿಮಾನವನ್ನು ತಪಾಸಣೆಗಾಗಿ ‘ಐಸೋಲೇಷನ್ ಬೇ’ಗೆ (Isolation Bay) ಸ್ಥಳಾಂತರಿಸಲಾಯಿತು. ತಪಾಸಣೆ ಪ್ರಕ್ರಿಯೆ ನಡೆಯುತ್ತಿದೆ ಮತ್ತು ಭದ್ರತೆಯನ್ನು ತೀವ್ರಗೊಳಿಸಲಾಗಿದೆ, ಎಂದು ವಿಮಾನ ನಿಲ್ದಾಣದ ನಿರ್ದೇಶಕ ವಿಕ್ರಮ್ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: ಪನ್ನೂನ್ ಹತ್ಯೆ ಸಂಚು ಪ್ರಕರಣ: ಅಮೆರಿಕ ನ್ಯಾಯಾಲಯದಲ್ಲಿ ತಪ್ಪು ಒಪ್ಪಿಕೊಂಡ ಭಾರತೀಯ ಪ್ರಜೆ ನಿಖಿಲ್ ಗುಪ್ತಾ!

ಹೈದರಾಬಾದ್ ವಿಮಾನ ನಿಲ್ದಾಣದಲ್ಲೂ ಬಾಂಬ್​​ ಬೆದರಿಕೆ:

ತೆಲಂಗಾಣದ ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಬಹ್ರೇನ್‌ನಿಂದ ಬಂದ ಗಲ್ಫ್ ಏರ್ ವಿಮಾನವು ಹೈದರಾಬಾದ್‌ನಲ್ಲಿ ಇಳಿಯುವ ಸಮಯದಲ್ಲಿ ಟರ್ಮಿನಲ್‌ಗಳಲ್ಲಿ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಇಮೇಲ್‌ನಲ್ಲಿ ಎಚ್ಚರಿಸಲಾಗಿತ್ತು. ಭದ್ರತಾ ಸಿಬ್ಬಂದಿ ಇಡೀ ವಿಮಾನ ನಿಲ್ದಾಣವನ್ನು ಪರಿಶೀಲನೆ ನಡೆಸಿದ್ದಾರೆ. ನಂತರ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಲಿಲ್ಲ ಎಂದು ಖಚಿತಪಡಿಸಿದೆ. ಇದು ಹುಸಿ ಬಾಂಬ್ ಬೆದರಿಕೆ (Hoax) ಎಂದು ತಿಳಿದುಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಮೇಲ್ ಕಳುಹಿಸಿದ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮತ್ತೆ ಶಾಲೆಗೆ ಹೊರಟ ವೈಭವ್ ಸೂರ್ಯವಂಶಿ – Kannada News | Vaibhav Suryavanshi will attend CBSE Class 10 Board Exams

ಟೀಮ್ ಇಂಡಿಯಾದ ಯಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಮತ್ತೆ ಶಾಲೆಯತ್ತ ಮುಖ ಮಾಡಿದ್ದಾರೆ. ಅದು ಸಹ 14 ವಯಸ್ಸಿನೊಳಗೆ 3 ಭರ್ಜರಿ ಟಿ20 ಶತಕ, 4 ಏಕದಿನ ಶತಕ, ಒಂದು ಟೆಸ್ಟ್ ಸೆಂಚುರಿ ಸಿಡಿಸಿದ ಬಳಿಕ ಎಂಬುದು ವಿಶೇಷ. ಆದರೆ ಈ ಬಾರಿ ವೈಭವ್ ಶಾಲೆಗೆ ಹೋಗುತ್ತಿರುವುದು ಪರೀಕ್ಷೆ ಬರೆಯಲು.

2026ರ ಐಸಿಸಿ ಅಂಡರ್-19 ವಿಶ್ವಕಪ್ ಗೆದ್ದು ವಿಶ್ರಾಂತಿಯಲ್ಲಿದ್ದ ವೈಭವ್ ಸೂರ್ಯವಂಶಿ ಈಗ ತಮ್ಮ ಶೈಕ್ಷಣಿಕ ಪರೀಕ್ಷೆಗೆ ಸಜ್ಜಾಗಿದ್ದಾರೆ. ಫೆಬ್ರವರಿ 17, 2026 ರಿಂದ ಆರಂಭವಾಗಲಿರುವ CBSE 10ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ಬರೆಯಲು ವೈಭವ್ ಹಾಲ್ ಟಿಕೆಟ್ ಪಡೆದುಕೊಂಡಿದ್ದಾರೆ.

ಬಿಹಾರದ ಸಮಸ್ತಿಪುರದ ಪೋಡಾರ್ ಇಂಟರ್ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಯಾಗಿರುವ ವೈಭವ್ ಸೂರ್ಯವಂಶಿ ಫೆಬ್ರವರಿ 17 ರಿಂದ ಪರೀಕ್ಷೆಗೆ ಹಾಜರಾಗಲಿದ್ದಾರೆ.

ವಿಶ್ವಕಪ್ ಹೀರೊ ಆಗಿದ್ದರೂ ಸಹ, ಶಾಲಾ ನಿಯಮದಂತೆ ಅವರಿಗೆ ಯಾವುದೇ ವಿಶೇಷ ಸೌಲಭ್ಯ ನೀಡದೆ ಸಾಮಾನ್ಯ ವಿದ್ಯಾರ್ಥಿಯಂತೆಯೇ ಪರೀಕ್ಷೆ ನಡೆಸಲಾಗುವುದು ಎಂದು ಶಾಲಾ ಪ್ರಾಂಶುಪಾಲರು ತಿಳಿಸಿದ್ದಾರೆ.

ವೈಭವ್ ಸೂರ್ಯವಂಶಿ ಒಟ್ಟು 5 ಪರೀಕ್ಷೆ ಬರೆಯಲಿದ್ದಾರೆ ಎಂದು ವರದಿಯಾಗಿದೆ. ಈ ಪರೀಕ್ಷೆಗಳ ವಿವರಗಳು ಈ ಕೆಳಗಿನಂತಿದೆ…

  • ಭಾಷೆ I: ಇಂಗ್ಲಿಷ್ (ಸಂವಹನ ಅಥವಾ ಭಾಷೆ ಮತ್ತು ಸಾಹಿತ್ಯ).
  • ಭಾಷೆ II: ಹಿಂದಿ (ಕೋರ್ಸ್ ಎ ಅಥವಾ ಬಿ) ಅಥವಾ ಇನ್ನೊಂದು ಪ್ರಾದೇಶಿಕ/ವಿದೇಶಿ ಭಾಷೆ.
  • ಗಣಿತ: (ಸ್ಟ್ಯಾಂಡರ್ಸ್ – ಬೇಸಿಕ್ ಲೆವೆಲ್).
  • ವಿಜ್ಞಾನ: (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ).
  • ಸಮಾಜ ವಿಜ್ಞಾನ: (ಇತಿಹಾಸ, ಭೂಗೋಳ, ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರ).

ಪರೀಕ್ಷೆ ಬಳಿಕ ಐಪಿಎಲ್​ ಅಗ್ನಿಪರೀಕ್ಷೆ:

10ನೇ ತರಗತಿ ಪರೀಕ್ಷೆ ಬಳಿಕ ವೈಭವ್ ಸೂರ್ಯವಂಶಿ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಸಜ್ಜಾಗಲಿದ್ದಾರೆ. ಮಾರ್ಚ್ 26 ರಿಂದ ಶುರುವಾಗಲಿರುವ ಐಪಿಎಲ್​ ಸೀಸನ್-19 ರಲ್ಲಿ ವೈಭವ್ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯಲಿದ್ದಾರೆ.

ಕಳೆದ ಸೀಸನ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದಿರುವ ಕಾರಣ ಮುಂಬರುವ ಸೀಸನ್​ನಲ್ಲೂ ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್ ಜೊತೆ ಇನಿಂಗ್ಸ್ ಆರಂಭಿಸುವುದನ್ನು ಎದುರು ನೋಡಬಹುದು.

ಇದನ್ನೂ ಓದಿ: ಟೀಮ್ ಇಂಡಿಯಾ ವಿರುದ್ಧ ಅರ್ಧದಲ್ಲೇ ಚೆಂಡೆಸೆದು ಸಿಕ್ಕಿ ಬಿದ್ದ ಎರಾಸ್ಮಸ್..!

ಅದರಲ್ಲೂ ಐಪಿಎಲ್ 2025 ರಲ್ಲಿ ಸ್ಫೋಟಕ ಸೆಂಚುರಿ ಸಿಡಿಸಿರುವ ಯುವ ದಾಂಡಿಗನ ಕಡೆಯಿಂದ ಈ ಬಾರಿ ಭರ್ಜರಿ ಪ್ರದರ್ಶನದ ನಿರೀಕ್ಷೆಯಿದೆ. ಈ ಭರ್ಜರಿ ಪ್ರದರ್ಶನದ ಮೂಲಕ ವೈಭವ್ ಸೂರ್ಯವಂಶಿ ಭಾರತ ಟಿ20 ತಂಡದ ಕದ ತಟ್ಟಲಿದ್ದಾರೆ.

Source link

ಪಿಲಿಕುಳ ಮೃಗಾಲಯದ ಪ್ರಾಣಿಗಳ ಅಸಹಜ ಸಾವಿಗೆ ಕಾರಣವಾಯ್ತಾ ‘ಸ್ಲೋ ಪಾಯಿಸನ್’! – Kannada News | Pilikula Zoo Crisis: Over 150 Animals Dead from Suspected Poisoning

ಮೃತ ಜಿಂಕೆಯ ಶರೀರದಲ್ಲಿ ಸಿಕ್ಕಿದ್ದೇನು ಗೊತ್ತಾ?

ಮಂಗಳೂರು, ಫೆಬ್ರವರಿ 14: ದಕ್ಷಿಣ ಕನ್ನಡದ (Dakshin Kannada) ಹೆಸರಾಂತ ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿಗಳ ಅಸಹಜ ಸಾವುಗಳು ಇದೀಗ ಗಂಭೀರ ಅನುಮಾನಗಳಿಗೆ ಕಾರಣವಾಗಿವೆ. ಕಳೆದ ನಾಲ್ಕು ವರ್ಷಗಳಿಂದ ಸುಮಾರು 150ಕ್ಕೂ ಹೆಚ್ಚು ವನ್ಯಜೀವಿಗಳು ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬಂದಿದ್ದು, ಈ ಘಟನೆಗಳಿಗೆ ವಿಷಪೂರಿತ ಆಹಾರವೇ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಇತ್ತೀಚೆಗೆ ಸಾವನ್ನಪ್ಪಿದ ಜಿಂಕೆಯೊಂದರ ಮರಣೋತ್ತರ ವರದಿಯಲ್ಲಿ ಪ್ರಾಣಿಯ ದೇಹದಲ್ಲಿ ಹೈಡ್ರೋಸೈನೇಡ್ ಹಾಗೂ ನೈಟ್ರೇಟ್ ಅಂಶಗಳು ಪತ್ತೆಯಾಗಿರುವುದು ಬೆಚ್ಚಿಬೀಳಿಸುವ ಸಂಗತಿಯಾಗಿದೆ.

ಮೃಗಾಲಯದ ನಿರ್ಲಕ್ಷ್ಯವೇ ಈ ಸ್ಥಿತಿಗೆ ಕಾರಣವೇ?

ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಪ್ರಯೋಗಾಲಯದಿಂದ ಬಂದ ವರದಿ ಪ್ರಕಾರ, ಮೃಗಾಲಯದಲ್ಲಿ ಎಲೆಕೋಸು ಮತ್ತು ಹೂಕೋಸು ಬೆಳೆಗಳಲ್ಲಿ ಬಳಸುವ ಅತಿಯಾದ ಕೀಟನಾಶಕ ಅವಶೇಷಗಳನ್ನು ಸರಿಯಾಗಿ ಶುಚಿಗೊಳಿಸದೇ ಪ್ರಾಣಿಗಳಿಗೆ ನೀಡಲಾಗುತ್ತಿತ್ತು ಎನ್ನಲಾಗಿದೆ. ಈ ವಿಷಕಾರಿ ಅಂಶಗಳು ನಿಧಾನವಾಗಿ ದೇಹದಲ್ಲಿ ಸಂಗ್ರಹವಾಗಿ ‘ಸ್ಲೋ ಪಾಯಿಸನಿಂಗ್’ ಮೂಲಕ ಸಾವಿಗೆ ಕಾರಣವಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇತ್ತೀಚೆಗೆ ಹುಲಿ, ಜಿಂಕೆ, ಸಾಂಬಾರ್, ಕಾಡುಹಂದಿ ಸೇರಿದಂತೆ ಅನೇಕ ಪ್ರಾಣಿಗಳು ಮೃತಪಟ್ಟಿದ್ದು, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ನಿರ್ಲಕ್ಷ್ಯವೇ ಇದಕ್ಕೆ ಕಾರಣವೇ ಎಂಬ ಪ್ರಶ್ನೆ ಮೂಡಿದೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಾಮಾನ್ಯವಾಗಿ ಹೂಕೋಸು ಮತ್ತು ಎಲೆ ಕೋಸು ಬೆಳೆಯುವಾಗ ಅವುಗಳಿಗೆ ಯಾವುದೇ ರೋಗ ಬರಬಾರದೆಂಬ ಕಾರಣಕ್ಕೆ ಹೈಡೋ ಸೈನೇಡ್ ಮತ್ತು ನೈಟ್ರೇಟ್ ಮಾದರಿಗಳನ್ನು ಸಿಂಪಡಿಸಲಾಗುತ್ತದೆ. ಪ್ರಾಣಿಗಳಿಗೆ ಇವುಗಳನ್ನು ಆಹಾರವಾಗಿ ನೀಡುವ ಮೊದಲು ಸ್ವಚ್ಛಗೊಳಿಸುವುದು ಅಗತ್ಯ. ಆದರೆ ಪಿಲಿಕುಳ ಪ್ರಾಣಿ ಸಂಗ್ರಹಾಲಯದ ಪ್ರಾಣಿಗಳಿಗೆ ಕ್ಯಾಬೇಜ್, ಕಾಲಿಫ್ಲವರ್ ಎಲೆಗಳನ್ನು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ, ಹಸಿಯಾಗಿಯೇ ನೀಡಲಾಗುತ್ತಿದ್ದು, ಇದನ್ನು ತಿಂದ ಪ್ರಾಣಿಗಳು ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಲು ಕಾರಣ ಆಗುತ್ತಿದೆಯಾ ಎಂಬ ಶಂಕೆ ಮೂಡಿದೆ. ಪಿಲಿಕುಳದ ಪ್ರಾಣಿಗಳ ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗುತ್ತಿದ್ದಂತೆ ಕ್ಯಾಬೇಜ್, ಕ್ಯಾಲಿಫ್ಲವರ್ ಎಲೆಗಳನ್ನು ಆಹಾರವನ್ನಾಗಿ ನೀಡುವುದಕ್ಕೆ ಅಧಿಕಾರಿಗಳು ನಿಷೇಧ ಹೇರಿದ್ದಾರೆ.

ಇದನ್ನೂ ಓದಿ ಪಿಲಿಕುಳ ಝೂ ಅವ್ಯವಸ್ಥೆಗೆ ಹೈಕೋರ್ಟ್​​ ಗರಂ: ಆಗದಿದ್ರೆ ತಕ್ಷಣ ಬಂದ್ ಮಾಡಿ ಎಂದ ಪೀಠ

ಈ ಹಿಂದೆಯೂ ಪಿಲಿಕುಳ ಝೂಗೆ ಸಿಕ್ಕಿತ್ತು ಹೈಕೋರ್ಟ್​ ಆದೇಶ!

ಕೆಲ ದಿನಗಳ ಹಿಂದೆ ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿಗಳ ದಯನೀಯ ಸ್ಥಿತಿ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಅಲ್ಲಿ ಪ್ರಾಣಿಗಳು ಅನುಭವಿಸುತ್ತಿದ್ದ ದುಸ್ಥಿತಿಯನ್ನು ಗಮನಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಪ್ರಾಣಿಗಳ ಫೋಟೋಗಳನ್ನು ಪರಿಶೀಲಿಸಿದ ಬಳಿಕ, ಮೃಗಾಲಯವನ್ನು ತಕ್ಷಣ ಮುಚ್ಚಬೇಕು ಎಂದು ಸರ್ಕಾರಕ್ಕೆ ಕೋರ್ಟ್ ಎಚ್ಚರಿಕೆ ನೀಡಿತ್ತು. ಜಂಗು ಹಿಡಿದ ಪಿಂಜರಗಳು, ಅಸ್ವಚ್ಛ ಪರಿಸರ, ಸಮರ್ಪಕ ಸುರಕ್ಷತೆ ಮತ್ತು ಆರೈಕೆಯ ಕೊರತೆ ಬಗ್ಗೆ ನ್ಯಾಯಾಲಯ ಕಿಡಿಕಾರಿತ್ತು.

ಅಲ್ಲದೇ ಡಿಸೆಂಬರ್ 2025ರಲ್ಲಿ ಮೃಗಾಲಯದ ಪರವಾನಗಿ ಅವಧಿ ಮುಕ್ತಾಯಗೊಂಡಿದ್ದರೂ ನವೀಕರಣವಿಲ್ಲದೆ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಅನುಮಾನವನ್ನೂ ಕೋರ್ಟ್ ವ್ಯಕ್ತಪಡಿಸಿತ್ತು. ಆದರೂ ಇದೀಗ ಮೃತ ಜಿಂಕೆಯೊಂದರ ಮರಣೋತ್ತರ ಪರೀಕ್ಷೆಯಲ್ಲಿ ವಿಷಕಾರಿ ಅಂಶ ಪತ್ತೆಯಾಗಿರುವುದು ಆತಂಕ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹಂಪಿ ಉತ್ಸವದಲ್ಲಿ ಡ್ಯಾನ್ಸ್ ಮಾಡಿ ರಂಜಿಸಿದ ಶಿವರಾಜ್​​ಕುಮಾರ್ – Kannada News | Shivarajkumar Superb Dance In Hampi Utsava

ಶಿವರಾಜ್​ಕುಮಾರ್ ಅವರು ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರು ಈಗ ಹಂಪಿ ಉತ್ಸವದಲ್ಲಿ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಅವರಿಗೆ 60+ ವರ್ಷವಾಯಿತು ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಹಂಪಿ ಉತ್ಸವ ಪ್ರತಿ ವರ್ಷವೂ ಅದ್ದೂರಿಯಾಗಿ ನಡೆಯುತ್ತದೆ. ಚಿತ್ರರಂಗದ ಅನೇಕರು ಇದರಲ್ಲಿ ಭಾಗಿ ಆಗುತ್ತಾರೆ. ಈ ಬಾರಿ ಶಿವಣ್ಣ ಭಾಗಿ ಆಗಿದ್ದು ವಿಶೇಷವಾಗಿತ್ತು. ಶಿವಣ್ಣ ಅವರು ಹಲವು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಕನ್ನಡದ ಜೊತೆಗೆ ಪರಭಾಷೆಯಲ್ಲೂ ಅವರು ಆ್ಯಕ್ಟೀವ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪನ್ನೂನ್ ಹತ್ಯೆ ಸಂಚು ಪ್ರಕರಣ: ಅಮೆರಿಕ ನ್ಯಾಯಾಲಯದಲ್ಲಿ ತಪ್ಪು ಒಪ್ಪಿಕೊಂಡ ಭಾರತೀಯ ಪ್ರಜೆ ನಿಖಿಲ್ ಗುಪ್ತಾ! – Kannada News | Pannun Assassination Plot: Nikhil Gupta Confesses in US Federal Court

ಪನ್ನೂನ್ ಹತ್ಯೆ ಸಂಚು, ನಿಖಿಲ್ ಗುಪ್ತಾ

ನ್ಯೂಯಾರ್ಕ್,ಫೆ.14: ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಖಲಿಸ್ತಾನಿ ನಾಯಕ ಗುರುಪತ್‌ವಂತ್ ಸಿಂಗ್ ಪನ್ನೂನ್ ಹತ್ಯೆ ಯತ್ನದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಈ ಕೊಲೆ ಸಂಚಿನ ಪ್ರಮುಖ ಆರೋಪಿ ಎನ್ನಲಾದ ಭಾರತೀಯ ಮೂಲದ ನಿಖಿಲ್ ಗುಪ್ತಾ (Nikhil Gupta) ಅಮೆರಿಕದ ಮ್ಯಾನ್‌ಹ್ಯಾಟನ್ ಫೆಡರಲ್ ನ್ಯಾಯಾಲಯದಲ್ಲಿ ಹತ್ಯೆ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಅಮೆರಿಕ ಮತ್ತು ಕೆನಡಾ ಪೌರತ್ವ ಹೊಂದಿರುವ ಸಿಖ್ಸ್ ಫಾರ್ ಜಸ್ಟಿಸ್ (SFJ) ಸಂಘಟನೆಯ ನಾಯಕ ಪನ್ನೂನ್ ಹತ್ಯೆಗೆ ನಿಖಿಲ್ ಗುಪ್ತಾ ಸುಪಾರಿ ನೀಡಿದ್ದ ಎಂಬ ಆರೋಪವಿದೆ. ಭಾರತದ ಸರ್ಕಾರಿ ಅಧಿಕಾರಿಯೊಬ್ಬರ ಸೂಚನೆಯ ಮೇರೆಗೆ ನಿಖಿಲ್ ಗುಪ್ತಾ ಈ ಸಂಚು ರೂಪಿಸಿದ್ದರು ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಆರೋಪಿಸಿದ್ದವು.

ಪನ್ನೂನ್ ಹತ್ಯೆಗಾಗಿ ನಿಖಿಲ್ ಗುಪ್ತಾ ಹಂತಕನೊಬ್ಬನನ್ನು ಹುಡುಕುತ್ತಿದ್ದಾಗ, ಆತ ಅಮೆರಿಕದ ಗುಪ್ತಚರ ಇಲಾಖೆಯ ರಹಸ್ಯ ಏಜೆಂಟ್ ಅನ್ನೇ ಸಂಪರ್ಕಿಸಿದ್ದ. ಹತ್ಯೆಗಾಗಿ ಸುಮಾರು 1 ಲಕ್ಷ ಡಾಲರ್ ಮೊತ್ತದ ಒಪ್ಪಂದ ಮಾಡಿಕೊಳ್ಳಲಾಗಿತ್ತು ಮತ್ತು ಅದರಲ್ಲಿ 15,000 ಡಾಲರ್ ಮುಂಗಡವಾಗಿ ನೀಡಲಾಗಿತ್ತು ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ. ಕಳೆದ ವರ್ಷ ಜೆಕ್ ಗಣರಾಜ್ಯದಲ್ಲಿ ನಿಖಿಲ್ ಗುಪ್ತಾನನ್ನು ಬಂಧಿಸಿ ಅಮೆರಿಕಕ್ಕೆ ಹಸ್ತಾಂತರಿಸಲಾಗಿತ್ತು.

ನ್ಯಾಯಾಲಯದಲ್ಲಿ ಏನಾಯಿತು?

ನ್ಯಾಯಾಧೀಶರ ಮುಂದೆ ಹಾಜರಾದ ನಿಖಿಲ್ ಗುಪ್ತಾ, “ಹೌದು, ನಾನು ಈ ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದೆ” ಎಂದು ಒಪ್ಪಿಕೊಂಡಿದ್ದಾರೆ. ಇದೀಗ ಈ ಹೇಳಿಕೆಯ ಮೂಲಕ ಈ ವಿವಾದಾತ್ಮಕ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈ ತಪ್ಪೊಪ್ಪಿಗೆಯಿಂದಾಗಿ ನಿಖಿಲ್ ಗುಪ್ತಾಗೆ ಸುಮಾರು 10 ರಿಂದ 20 ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇನ್ನು ಆತನ ಹಿಂದೆ ಬೇರೆಯಾದರೂ ಇದ್ದರೆ ಎಂಬ ಬಗ್ಗೆಯೂ ತನಿಖೆಯಾಗಬಹುದು ಎಂದು ಹೇಳಲಾಗಿದೆ.

ಭಾರತ ಸರ್ಕಾರದ ನಿಲುವು:

ಈ ಪ್ರಕರಣಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಭಾರತ ಮೊದಲಿನಿಂದಲೂ ಹೇಳುತ್ತಾ ಬಂದಿದೆ. ಆದರೆ, ಅಮೆರಿಕ ನೀಡಿದ ಸಾಕ್ಷ್ಯಗಳ ಆಧಾರದ ಮೇಲೆ ಭಾರತವು ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಿ ತನ್ನದೇ ಆದ ತನಿಖೆ ನಡೆಸುತ್ತಿದೆ.

ವಿಕಾಶ್ ಯಾದವ್ (CC-1) ಯಾರು?

ವಿಕಾಶ್ ಯಾದವ್ ಅವರು ಈ ಹಿಂದೆ ಭಾರತದ ಅತಿದೊಡ್ಡ ಅರೆಸೇನಾ ಪಡೆಯಾದ ಸಿಆರ್‌ಪಿಎಫ್ (CRPF) ನಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸಿದ್ದರು. ನಂತರ ಇವರು ಭಾರತದ ಸಂಪುಟ ಸಚಿವಾಲಯದ ಅಡಿಯಲ್ಲಿ ಬರುವ ವಿದೇಶಿ ಗುಪ್ತಚರ ಸಂಸ್ಥೆ ‘ರಾ’ (RAW – Research and Analysis Wing) ನಲ್ಲಿ ‘ಸೀನಿಯರ್ ಫೀಲ್ಡ್ ಆಫೀಸರ್’ ಆಗಿ ನಿಯೋಜನೆಗೊಂಡಿದ್ದರು. ಅಮೆರಿಕದ ಚಾರ್ಜ್‌ಶೀಟ್ ಪ್ರಕಾರ, ಯಾದವ್ ಅವರು ‘ಸೆಕ್ಯೂರಿಟಿ ಮ್ಯಾನೇಜ್‌ಮೆಂಟ್’ ಮತ್ತು ‘ಇಂಟೆಲಿಜೆನ್ಸ್’ (ಗುಪ್ತಚರ) ವಿಭಾಗಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರು ಎಂದು ಹೇಳಿದೆ. ಭಾರತೀಯ ಪ್ರಜೆ ನಿಖಿಲ್ ಗುಪ್ತಾ ತನ್ನ ತಪ್ಪು ಒಪ್ಪಿಕೊಂಡ ಬೆನ್ನಲ್ಲೇ, ಈ ಸಂಚಿನ ಹಿಂದಿದ್ದ ಮಾಸ್ಟರ್ ಮೈಂಡ್ ಎನ್ನಲಾದ ‘CC-1’ ಅಲಿಯಾಸ್ ವಿಕಾಶ್ ಯಾದವ್ ಕುರಿತಾದ ಚರ್ಚೆ ಜೋರಾಗಿದೆ. ಅಮೆರಿಕದ ತನಿಖಾ ಸಂಸ್ಥೆಗಳು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಇವರ ಹೆಸರು ಕೂಡ ಇದೆ ಎಂದು ಹೇಳಿದೆ.

ಇದನ್ನೂ ಓದಿ: ಕರ್ನಾಟಕ ಮೂಲದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆ

ಹತ್ಯೆ ಸಂಚಿನಲ್ಲಿ ಇವರ ಪಾತ್ರವೇನು?

ಅಮೆರಿಕ ತನಿಖೆ ಸಂಸ್ಥೆಗಳು ಸಲ್ಲಿರುವ ದೋಷಾರೋಪ ಪಟ್ಟಿಯ ಪ್ರಕಾರ, 2023ರ ಮೇ ತಿಂಗಳಲ್ಲಿ ವಿಕಾಶ್ ಯಾದವ್ ಅವರು ನಿಖಿಲ್ ಗುಪ್ತಾನನ್ನು ಸಂಪರ್ಕಿಸಿ, ನ್ಯೂಯಾರ್ಕ್‌ನಲ್ಲಿರುವ ಪನ್ನೂನ್‌ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಇವರು ಪನ್ನೂನ್‌ನ ಮನೆಯ ವಿಳಾಸ, ದೂರವಾಣಿ ಸಂಖ್ಯೆ ಮತ್ತು ಆತನ ದೈನಂದಿನ ಚಟುವಟಿಕೆಗಳ ಮಾಹಿತಿಯನ್ನು ಗುಪ್ತವಾಗಿ ನೀಡಿದ್ದರು. ಹತ್ಯೆಗಾಗಿ 1 ಲಕ್ಷ ಡಾಲರ್ ಸುಪಾರಿ ನಿಗದಿಪಡಿಸಲಾಗಿತ್ತು ಮತ್ತು 15,000 ಡಾಲರ್ ಮುಂಗಡವಾಗಿ ನೀಡಲು ವ್ಯವಸ್ಥೆ ಮಾಡಿದ್ದರು. “ಅಮಾನತ್” (Amanat) ಎಂಬ ಗುಪ್ತನಾಮದ ಮೂಲಕ ಇವರು ಸಂವಹನ ನಡೆಸುತ್ತಿದ್ದರು ಎಂದು ಹೇಳಿದೆ.

ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಿರಿನಗರ ಬ್ಯಾಂಕ್​ನಲ್ಲಿಟ್ಟಿದ್ದ 4 ಕೋಟಿ ರೂ. ಮೌಲ್ಯದ ಚಿನ್ನಾಭರಣಕ್ಕೆ ಕನ್ನ! ಅಸಿಸ್ಟೆಂಟ್ ಮ್ಯಾನೇಜರ್​ನಿಂದಲೇ ನಡೀತು ಕಳ್ಳತನ – Kannada News | Girinagar Bank Manager Stole rs.4 Crore for Betting

ಗಿರಿನಗರ ಬ್ಯಾಂಕ್​ನಲ್ಲಿಟ್ಟಿದ್ದ 4 ಕೋಟಿ ರೂ. ಮೌಲ್ಯದ ಚಿನ್ನಾಭರಣಕ್ಕೆ ಕನ್ನ!

ಬೆಂಗಳೂರು, ಫೆಬ್ರವರಿ 14: ಬೆಂಗಳೂರು ಗಿರಿನಗರದ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಭಾರೀ ಚಿನ್ನ ಕಳ್ಳತನದ (Gold robbery) ಘಟನೆ ನಡೆದಿದ್ದು, ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್​ನಿಂದಲೇ ಈ ಕೃತ್ಯ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಬ್ಯಾಂಕ್‌ನಲ್ಲಿ ಅಡ ಇಟ್ಟಿದ್ದ ಗ್ರಾಹಕರ ಚಿನ್ನಾಭರಣವನ್ನು ಕದ್ದು ಬೆಟ್ಟಿಂಗ್ ಗೇಮ್ ಆಡುವ ಚಟಕ್ಕಿಳಿದಿದ್ದ ಈತ, ಸುಮಾರು 4 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಜೇಬಿಗಿಳಿಸಿಕೊಂಡಿದ್ದಾನೆಂದು ಆರೋಪಿಸಲಾಗಿದೆ.

ಆನ್‌ಲೈನ್ ಬೆಟ್ಟಿಂಗ್ ಗೀಳಿಗೆ ಬಿದ್ದಿದ್ದ ಮ್ಯಾನೇಜರ್

ಕಿರಣ್ ಕುಮಾರ್ ಗಿರಿನಗರದ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಿದ್ದು, ಲಾಕರ್ ಕೀ ಮ್ಯಾನೇಜರ್ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಹತ್ತಿರ ಇದ್ದ ಕಾರಣ, ಮ್ಯಾನೇಜರ್ ಅವರ ಅನುಪಸ್ಥಿತಿಯಲ್ಲಿ ಸ್ವಲ್ಪಸ್ವಲ್ಪ ಚಿನ್ನ ಕದಿಯುತ್ತಿದ್ದ . ಜನವರಿ 2ರಂದು ಗ್ರಾಹಕರು ತಮ್ಮ ಅಡವಿಟ್ಟ ಚಿನ್ನ ಪಡೆಯಲು ಬಂದಾಗ ಲಾಕರ್ ಪರಿಶೀಲನೆ ನಡೆಸಿದ ವೇಳೆ ಕೆಲವು ಚಿನ್ನಾಭರಣಗಳ ನಾಪತ್ತೆ ಪತ್ತೆಯಾಗಿತ್ತು. ಬಳಿಕ ಇತರೆ ಪ್ಯಾಕೇಟ್ ಪರಿಶೀಲಿಸಿದ ಮ್ಯಾನೇಜರ್ 21 ಪ್ಯಾಕೇಟ್‌ಗಳಲ್ಲಿ ಕೆಲವು ಹಾಗೂ 3 ಪ್ಯಾಕೇಟ್‌ಗಳಲ್ಲಿ ಸಂಪೂರ್ಣ ಚಿನ್ನ ಕಾಣೆಯಾಗಿರುವುದನ್ನು ಗಮನಿಸಿದ್ದಾರೆ. ಈ ವೇಳೆ ಸುಮಾರು 4 ಕೋಟಿ ರೂ. ಮೌಲ್ಯದ 2,783 ಗ್ರಾಂ ಚಿನ್ನ ಕಾಣೆಯಾಗಿದೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

ಇದನ್ನೂ ಓದಿ ಕಾರಿನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಐವರು ಆರೋಪಿಗಳ ಬಂಧನ; 2 ಲಕ್ಷ ರೂ.ಗೂ ಅಧಿಕ ಮೌಲ್ಯದ ಡ್ರಗ್ಸ್ ಸೀಜ್

ಆಂತರಿಕ ವಿಚಾರಣೆ ವೇಳೆ ಕೃತ್ಯ ತಪ್ಪೊಪ್ಪಿಕೊಂಡಿದ್ದ ಕಿರಣ್, ಕದ್ದ ಚಿನ್ನವನ್ನು ಬೇರೆ ಬೇರೆ ಅಂಗಡಿಯಲ್ಲಿ ಗಿರವಿ ಹಾಕಿ ಬಂದ ಹಣವನ್ನು ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟದಲ್ಲಿ ಬಳಸಿದ್ದನು ಎನ್ನಲಾಗಿದೆ. ಪ್ರಕರಣದ ಹಿನ್ನೆಲೆಯಲ್ಲಿ ಗಿರಿನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ತನಿಖೆ ನಂತರ ಕಿರಣ್ ಕುಮಾರ್ ಬಂಧಿತರಾಗಿದ್ದಾರೆ. ಈಗಾಗಲೇ 700 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಉಳಿದ ಚಿನ್ನ ಮತ್ತು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ವರದಿ: ಪ್ರದೀಪ್ ಚಿಕ್ಕಾಟೆ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಶಿವರಾತ್ರಿಗೆ ಮಾದಪ್ಪನ ಸನ್ನಿಧಿಗೆ ತೆರಳುವ ಭಕ್ತರೇ ಎಚ್ಚರ: ಮಲೆಮಹದೇಶ್ವರ ಬೆಟ್ಟದ ಮಾರ್ಗದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ – Kannada News | Leopard Spotted on Road to Male Mahadeshwara Hills Ahead of Shivaratri, Devotees Alerted

ಚಾಮರಾಜನಗರ, ಫೆಬ್ರವರಿ 14: ಶಿವರಾತ್ರಿಗೆ ಇನ್ನೊಂದೇ ದಿನ ಬಾಕಿ ಇರುವಾಗ ಮಲೆಮಹದೇಶ್ವರ ಬೆಟ್ಟದ ಮಾರ್ಗದಲ್ಲಿ ಮತ್ತೆ ಚಿರತೆ ಆತಂಕ ಎದುರಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಹದೇಶ್ವರಬೆಟ್ಟದ ತಾಳುಬೆಟ್ಟದ 4ನೇ ತಿರುವಿನ ರಸ್ತೆಯಲ್ಲಿ ಯಾತ್ರಿಕರಿಗೆ ಚಿರತೆ ಕಾಣಿಸಿಕೊಂಡಿದೆ. ರಸ್ತೆಯಲ್ಲೇ ಚಿರತೆ ಕಾಣಿಸಿದ ಕಾರಣ ಮಾದಪ್ಪನ ಭಕ್ತರಲ್ಲಿ ಆತಂಕ ಸೃಷ್ಟಿಯಾಗಿದೆ. ವಾಹನಗಳು ಓಡಾಡುತ್ತಿದ್ದರೂ ಕ್ಯಾರೆ ಎನ್ನದೇ ಕುಳಿತಿರುವ ಚಿರತೆಯ ದೃಶ್ಯ ವಾಹನ ಸವಾರರೊಬ್ಬರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಿವರಾತ್ರಿ ಹಬ್ಬ ಹಿನ್ನೆಲೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಿರುವ ಸಂದರ್ಭದಲ್ಲೇ ಚಿರತೆ ಕಾಣಿಸಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಇತ್ತೀಚೆಗಷ್ಟೇ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತನೊಬ್ಬನನ್ನು ಚಿರತೆ ಹೊತ್ತೊಯ್ದಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ವಾರಣಾಸಿ’ ಚಿತ್ರಕ್ಕಾಗಿ ಅತ್ಯಂತ ವೇಗದಲ್ಲಿ ಕೆಲಸ ಮಾಡುತ್ತಿದ್ದಾರೆ ರಾಜಮೌಳಿ – Kannada News | Rajamouli Mahesh Babu’s ‘Varanasi’: Release Date, Shooting Updates and VFX Insights

ಮಹೇಶ್ ಬಾಬು ಅವರ ‘ವಾರಣಾಸಿ’ (Varanasi) ಚಿತ್ರದ ಶೀರ್ಷಿಕೆಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಇದರೊಂದಿಗೆ, ಈ ಚಿತ್ರದ ಬಗ್ಗೆ ಸಾಕಷ್ಟು ಹೈಪ್ ಸೃಷ್ಟಿಯಾಗಿದೆ. ಇದರ ಜೊತೆಗೆ, ಇದು ರಾಜಮೌಳಿ-ಮಹೇಶ್ ಕಾಂಬೊ ಆಗಿರುವುದರಿಂದ, ಸ್ವಾಭಾವಿಕವಾಗಿಯೇ ಈ ಕ್ರೇಜಿ ಪ್ರಾಜೆಕ್ಟ್ ಮೇಲೆ ಭಾರಿ ನಿರೀಕ್ಷೆಗಳಿವೆ. ಆದರೆ, ರಾಜಮೌಳಿ ಚಿತ್ರಕ್ಕೆ ಕನಿಷ್ಠ 2-3 ವರ್ಷಗಳು ಬೇಕಾಗುತ್ತದೆ. ಚಿತ್ರದಲ್ಲಿ ಎಲ್ಲವೂ ಪರಿಪೂರ್ಣವಾಗಿರಬೇಕೆಂದು ರಾಜಮೌಳಿ ಬಯಸುತ್ತಾ ಇದ್ದಾರೆ.

ಅದ್ಭುತ ದೃಶ್ಯಗಳನ್ನು ಕಟ್ಟಿಕೊಡೋ ನಿರ್ದೇಶಕ ರಾಜಮೌಳಿ ಈ ಬಾರಿಯೂ ಅದನ್ನು ಮುಂದುವರಿಸುತ್ತಿದ್ದಾರೆ. ರಾಜಮೌಳಿ ತಮ್ಮ ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿ ವಾರಣಾಸಿಯನ್ನು ಪ್ರಚಾರ ಮಾಡುತ್ತಿದ್ದಾರೆ. ಹಲವು ಸಮಯದವರೆಗೆ ಒಂದೇ ಒಂದು ಅಪ್ಡೇಟ್ ನೀಡದ ರಾಜಮೌಳಿ ಈಗ ಎಲ್ಲವನ್ನೂ ಹಿಂಜರಿಕೆಯಿಲ್ಲದೆ ಹೇಳುತ್ತಿದ್ದಾರೆ.

ಮಹೇಶ್ ಮತ್ತು ಪ್ರಿಯಾಂಕಾ ಅವರು ಇನ್ನೊಂದು ದಿನ ಒಂದೇ ಸಂದರ್ಶನದಲ್ಲಿ ಹಲವು ವಿಷಯಗಳನ್ನು ಹೇಳಿದ್ದರು. ಇತ್ತೀಚೆಗೆ, ರಾಜಮೌಳಿ ಕೂಡ ವಾರಣಾಸಿಯ ಬಗ್ಗೆ ಹಾಟ್ ಅಪ್ಡೇಟ್ಗಳನ್ನು ನೀಡಿದರು. ಅವರ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ, ನಿರ್ದೇಶಕರು ವಾರಣಾಸಿಯ ಚಿತ್ರೀಕರಣವನ್ನು ರಾಕೆಟ್ ವೇಗದಲ್ಲಿ ಪೂರ್ಣಗೊಳಿಸುತ್ತಿದ್ದಾರೆ. ಈಗಾಗಲೇ ಶೇಕಡಾ 50 ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ರಾಜಮೌಳಿ ಎಲ್ಲಾ ಪ್ರಮುಖ ಸನ್ನಿವೇಶಗಳನ್ನು ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ: ಬ್ಲಾಕ್ ಬಸ್ಟರ್ ಸಿನಿಮಾಗಳ ನಿರ್ದೇಶಕ ರಾಜಮೌಳಿಗೆ ಇಷ್ಟವಾದ ಸಿನಿಮಾ ಯಾವುದು?

ರಾಜಮೌಳಿ ಅವರು ‘ವಾರಣಾಸಿ’ ಮಾಡುತ್ತಿದ್ದಾರೆ. ಇದು ಅವರ ವೃತ್ತಿಜೀವನದ ಅತ್ಯಂತ ಕಷ್ಟಕರವಾದ ದೃಶ್ಯವಾಗಿದೆ ಎಂದು ಹೇಳಿದ್ದಾರೆ. VFX ಗಾಗಿ ನಾವು ಶ್ರಮಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಜೂನ್ 2026 ರೊಳಗೆ ‘ವಾರಣಾಸಿ’ಯ ಚಿತ್ರೀಕರಣ ಪೂರ್ಣಗೊಳ್ಳಲಿದೆ ಎಂದು ಜಕ್ಕಣ್ಣ ಸ್ಪಷ್ಟಪಡಿಸಿದರು. ಜುಲೈನಿಂದ ಅವರು ಸಂಪೂರ್ಣವಾಗಿ ಪೋಸ್ಟ್-ಪ್ರೊಡಕ್ಷನ್ ಮೇಲೆ ಗಮನಹರಿಸಲಿದ್ದಾರೆ. ತಂಡವು ಏಪ್ರಿಲ್ 7, 2027 ರಂದು ಬಿಡುಗಡೆ ದಿನಾಂಕವನ್ನು ನೀಡಿದೆ. ನಿರ್ದೇಶಕರು ಅದಕ್ಕೆ ತಕ್ಕಂತೆ ಚಿತ್ರೀಕರಣವನ್ನು ಯೋಜಿಸುತ್ತಿದ್ದಾರೆ. ‘ಮರ್ಯಾದ ರಾಮಣ್ಣ’ ನಂತರ ರಾಜಮೌಳಿ ಪೂರ್ಣಗೊಳಿಸಿದ ಅತ್ಯಂತ ವೇಗದ ಚಿತ್ರ ‘ವಾರಣಾಸಿ’ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Solar Eclipse 2026: ಧನುಸ್ಸು ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ? – Kannada News | Solar Eclipse 2026: Auspicious Predictions for Sagittarius by Dr. Basavaraj Guruji

ಡಾ. ಬಸವರಾಜ ಗುರೂಜಿ ಅವರ ಪ್ರಕಾರ, 2026ರ ರಾಹುಗ್ರಸ್ತ ಸೂರ್ಯಗ್ರಹಣವು ಧನುಸ್ಸು ರಾಶಿಯವರಿಗೆ ಅತ್ಯಂತ ಶುಭಕರವಾಗಿದೆ. ರಾಶ್ಯಾಧಿಪತಿ ಗುರು ವಕ್ರಗತಿಯಲ್ಲಿದ್ದು ಮಿಥುನದಲ್ಲಿದ್ದಾನೆ. ಗ್ರಹಣವು ಧನುಸ್ಸು ರಾಶಿಯವರಿಗೆ ಮೂರನೇ ಮನೆಯಲ್ಲಿ ಸಂಭವಿಸುತ್ತಿದ್ದು, ಇದು ಸಾಮಾನ್ಯವಾಗಿ ಮಂಗಳಕರವಾಗಿದೆ. ಗುರುವಿನ ದೃಷ್ಟಿಯು ಗ್ರಹಣದ ಮೇಲಿರುವುದರಿಂದ ಯಾವುದೇ ದೋಷಗಳು ಅಂಟುವುದಿಲ್ಲ ಎಂದು ಹೇಳಲಾಗಿದೆ.

ಮೂಲಾ, ಪೂರ್ವಾಷಾಢ, ಉತ್ತರಾಷಾಢ ನಕ್ಷತ್ರದವರಿಗೆ ಈ ಗ್ರಹಣವು ಜಾಕ್ ಪಾಟ್ ಅಥವಾ ಡಬಲ್ ಧಮಾಕದಂತಹ ಫಲಿತಾಂಶಗಳನ್ನು ನೀಡುತ್ತದೆ. ಆದಾಯ ವೃದ್ಧಿ, ಸಹೋದರರೊಂದಿಗೆ ಉತ್ತಮ ಸಂಬಂಧಗಳು, ಬಂಧುಮಿತ್ರರೊಂದಿಗೆ ಪ್ರೀತಿ ವಿಶ್ವಾಸ, ಹೊಸ ವ್ಯಾಪಾರಕ್ಕೆ ಪ್ರಯತ್ನ, ಅರ್ಧಂಬರ್ಧ ನಿಂತ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಗಳಿವೆ. ಆರೋಗ್ಯದಲ್ಲಿ ಸುಧಾರಣೆ, ಉನ್ನತ ಶಿಕ್ಷಣಕ್ಕೆ ಶುಭ, ಹಾಗೂ ವಿಚ್ಛೇದನ ಹಂತದಲ್ಲಿರುವ ಸಂಬಂಧಗಳಲ್ಲಿ ರಾಜಿ ಏರ್ಪಡುವ ಸೂಚನೆಗಳಿವೆ. ರಾಜಕೀಯವಾಗಿ ಪ್ರಗತಿ, ಉದ್ಯಮಿದಾರರಿಗೆ ಲಾಭ ಹಾಗೂ ಕೆಲಸ ಕಾರ್ಯಗಳಲ್ಲಿ ಶುಭ ಫಲ ಇರಲಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ವರ್ಷದ ಮೊದಲ ಸೂರ್ಯಗ್ರಹಣ ಮೇಷ ರಾಶಿಯವರಿಗೆ ಹೇಗಿರಲಿದೆ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Solar Eclipse 2026: ವೃಶ್ಚಿಕ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?

2026ರ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವವು ವೃಶ್ಚಿಕ ರಾಶಿಯವರ ಮೇಲೆ ಮಧ್ಯಮವಾಗಿದೆ ಎಂದು ಜ್ಯೋತಿಷಿ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ. ಈ ಅವಧಿಯಲ್ಲಿ ವೃಶ್ಚಿಕ ರಾಶಿಯವರು ಮಿಶ್ರಫಲಗಳನ್ನು ನಿರೀಕ್ಷಿಸಬಹುದು. ಗ್ರಹಣವು ನಾಲ್ಕನೇ ಮನೆಯಲ್ಲಿ ಸಂಭವಿಸುವುದರಿಂದ ಅನಾವಶ್ಯಕ ಆರೋಗ್ಯ ಸಮಸ್ಯೆಗಳು ಮತ್ತು ಕೌಟುಂಬಿಕ ವಿಷಯಗಳಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಆಹಾರದ ವಿಷಯದಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ.

ವಾಹನ ಯೋಗ ಉತ್ತಮವಾಗಿದ್ದು, ಪ್ರಾಥಮಿಕ ಶಿಕ್ಷಣದಲ್ಲಿ ಮಕ್ಕಳಿಗೆ ಶುಭವಾಗಲಿದೆ. ಹೊಸ ವ್ಯಾಪಾರಕ್ಕೆ ಪ್ರಯತ್ನಿಸುವವರಿಗೆ, ಪಾಲುದಾರಿಕೆಯಲ್ಲಿ ಮತ್ತು ನಿರ್ದಿಷ್ಟ ವೃತ್ತಿಯವರಿಗೆ (ಸಾಫ್ಟ್‌ವೇರ್, ಪೊಲೀಸ್, ಕಂಪ್ಯೂಟರ್ ಇಂಜಿನಿಯರ್‌ಗಳು) ಶುಭ ಫಲಗಳು ದೊರೆಯಲಿವೆ. ಮಾನಸಿಕ ದುರಾಲೋಚನೆಗಳನ್ನು ಕಡಿಮೆ ಮಾಡಿಕೊಂಡರೆ ಉತ್ತಮ. ಗ್ರಹಣದ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಶಿವಲಿಂಗಕ್ಕೆ ಅಭಿಷೇಕ, ಬಿಲ್ವಪತ್ರೆ ಅರ್ಪಣೆ ಮತ್ತು “ಓಂ ನಮೋ ಭಗವತೇ ರುದ್ರಾಯ” ಮಂತ್ರ ಜಪಿಸುವುದು ಪರಿಣಾಮಕಾರಿ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ವರ್ಷದ ಮೊದಲ ಸೂರ್ಯಗ್ರಹಣ ಮೇಷ ರಾಶಿಯವರಿಗೆ ಹೇಗಿರಲಿದೆ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Exit mobile version