ಅಡುಗೆಯವನ ಕೆಲಸವೇ ಹೋಯ್ತು! ಬೆಂಗಳೂರು ಟೆಕ್ಕಿಗೆ ಎಐ ರೂಮ್ಮೇಟ್ ನೆರವಾಗಿದ್ಹೇಗೆ ಗೊತ್ತೇ! – Kannada News | Bengaluru Techie’s AI Roommate Catches Cook Stealing Fruits, Sparks Debate on AI Surveillance at Home
ಟೆಕ್ಕಿಗೆ ಎಐ ರೂಮ್ಮೇಟ್ ನೆರವಾಗಿದ್ಹೇಗೆ?Image Credit source: X/@the2ndfloorguy ಬೆಂಗಳೂರು, ಮಾರ್ಚ್ 2: ಅಡುಗೆಯಾತ ಫ್ರಿಡ್ಜ್‌ನಿಂದ ಹಣ್ಣುಗಳನ್ನು ಕದಿಯುತ್ತಿರುವುದನ್ನು ಎಐ ರೂಮ್ಮೇಟ್ (AI Roommate) ಪತ್ತೆಹಚ್ಚಿ ತಿಳಿಸಿದ್ದು, ಟೆಕ್ಕಿಯೊಬ್ಬರು ಆತನನ್ನು ಕೆಲಸದಿಂದಲೇ ತೆಗೆದುಹಾಕಿದ ಅಪರೂಪದ ಘಟನೆ ಬೆಂಗಳೂರಿನಲ್ಲಿ (Bangalore) ನಡೆದಿದೆ ಎಂದು ವರದಿಯಾಗಿದೆ. ನಗರದ ಟೆಕ್ಕಿ ಪಂಕಜ್ (ಸಾಮಾಜಿಕ ಜಾಲತಾಣ ಪೋಸ್ಟ್ನಲ್ಲಿರುವಂತೆ) ಮನೆಯ ಅಡುಗೆಮನೆಯ ಚಟುವಟಿಕೆಗಳನ್ನು ಗಮನಿಸಲು ‘AI ರೂಮ್ಮೇಟ್’ ಎನ್ನುವ ವ್ಯವಸ್ಥೆಯನ್ನು ಬಳಸುತ್ತಿದ್ದರು. ಅಡುಗೆಯಾತ ಫ್ರಿಡ್ಜ್‌ನಿಂದ ಸೇಬು, ಬಾಳೆಹಣ್ಣು ಮತ್ತು ಬೆರಿಹಣ್ಣುಗಳನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ ಅನುಮಾನ…