ಯುದ್ಧದ ನಡುವೆಯೂ ಅರ್ಮೇನಿಯಾ ಮೂಲಕ ಇರಾನ್ನಿಂದ 550 ಭಾರತೀಯರ ಸ್ಥಳಾಂತರ
ನವದೆಹಲಿ, ಮಾರ್ಚ್ 16: ಇರಾನ್ನಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಭಾರತ ಸಾಕಷ್ಟು ಪ್ರಯತ್ನಗಳನ್ನು ನಡೆಸಿತ್ತು. ಅದಕ್ಕಾಗಿ ಅಲ್ಲಿನ ರಾಯಭಾರ ಕಚೇರಿ ಸಹಾಯವಾಣಿ, ನಿಯಂತ್ರಣ ಕೊಠಡಿಯನ್ನು ಕೂಡ ತೆರೆದಿತ್ತು. ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ನ ದಾಳಿ ಮುಂದುವರೆದಿರುವುದರಿಂದ ಅರ್ಮೇನಿಯಾ ಮೂಲಕ 550 ಭಾರತೀಯರು ಇರಾನ್ನ ಗಡಿ ದಾಟಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಭೂ ಗಡಿಯ ಮೂಲಕ ಭಾರತೀಯರ ಸ್ಥಳಾಂತರಕ್ಕೆ ಅವಕಾಶ ನೀಡಿದ ಅರ್ಮೇನಿಯಾ ಸರ್ಕಾರಕ್ಕೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಧನ್ಯವಾದ…