Headlines

Video: ಪಿಸ್ತೂಲ್ ಹಿಡಿದು ಹೋದ ವ್ಯಕ್ತಿ, ಗಂಟೆಗಳಿಂದ ಆಗಿದ್ದ ಟ್ರಾಫಿಕ್ ಜಾಮ್ ನಿಮಿಷಗಳಲ್ಲಿ ಕ್ಲಿಯರ್

ಲಕ್ನೋ, ಏಪ್ರಿಲ್ 05: ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲು ವ್ಯಕ್ತಿಯೊಬ್ಬ ಪಿಸ್ತೂಲ್ ಹಿಡಿದು ಹೋದ ಘಟನೆ ಲಕ್ನೋದಲ್ಲಿ ನಡೆದಿದೆ. ಗಂಟೆಗಳಿಂದ ಇದ್ದ ಸಂಚಾರ ದಟ್ಟಣೆ ನಿಮಿಷಗಳಲ್ಲೇ ಕಡಿಮೆಯಾಗಿತ್ತು. ಇದೀಗ ವಿಡಿಯೋ ವೈರಲ್ ಆಗಿದೆ. ಸಹದತ್ ಗಂಜ್ ಪೊಲೀಸ್ ಠಾಣೆ ಪ್ರದೇಶದ ರಾಜಬ್ ಗಂಜ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಆ ವ್ಯಕ್ತಿ ಪಿಸ್ತೂಲ್ ಹಿಡಿದು ರಸ್ತೆಯಲ್ಲಿ ನಡೆಯುತ್ತಿರುವುದು ಪ್ರಯಾಣಿಕರಲ್ಲಿ ಭೀತಿ ಮೂಡಿಸಿತ್ತು. ಟ್ರಾಫಿಕ್ ತೆರವುಗೊಳಿಸಲು ಮತ್ತು ತನ್ನ ವಾಹನವನ್ನು ಮುಂದೆ ಸಾಗಿಸಲು ಪಿಸ್ತೂಲ್ ಬಳಸಿದ್ದಾರೆ….

Read More

ಸಿನಿಮಾ ನಿರ್ಮಾಣ ಪ್ರಾರಂಭಿಸಿದ್ದೇಕೆ? ಲಕ್ಷ್ಮಿ ಹೆಬ್ಬಾಳ್ಕರ್ ಕೊಟ್ಟರು ಉತ್ತರ – Kannada News | Lakshmi Hebbalkar started movie production with Anna from Mexico movie

ಲಕ್ಷ್ಮಿ ಹೆಬ್ಬಾಳ್ಕರ್ (lakshmi Hebbalkar) ಕರ್ನಾಟಕದ ಜನಪ್ರಿಯ ಮಹಿಳಾ ರಾಜಕಾರಣಿಗಳಲ್ಲಿ ಒಬ್ಬರು. ಪ್ರಸ್ತುತ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯೂ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹಲವು ವರ್ಷಗಳಿಂದಲೂ ಸಕ್ರಿಯ ರಾಜಕೀಯದಲ್ಲಿದ್ದಾರೆ. ಇದೀಗ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿನಿಮಾ ನಿರ್ಮಾಪಕಿಯೂ ಆಗುತ್ತಿದ್ದಾರೆ. ಮೊಮ್ಮಗಳ ಹೆಸರಲ್ಲಿ ಸಿನಿಮಾ ನಿರ್ಮಾಣ ಪ್ರಾರಂಭಿಸಿರುವ ಲಕ್ಷ್ಮಿ ಹೆಬ್ಬಾಳ್ಕರ್ ನಿರ್ಮಾಣ ಸಂಸ್ಥೆಗೆ ಐರಾ ಫಿಲಮ್ಸ್ ಎಂದು ಹೆಸರಿಟ್ಟಿದ್ದಾರೆ. ನಿರ್ಮಾಪಕಿಯಾಗಿ ‘ಅಣ್ಣಾ ಫ್ರಂ ಮೆಕ್ಸಿಕೊ’ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಮೊದಲ ಸಿನಿಮಾ ಆಗಿದ್ದು, ಇತ್ತೀಚೆಗಷ್ಟೆ…

Read More

ತೀವ್ರ ಸ್ವರೂಪ ಪಡೆದ ಚಪ್ಪಲಿ ಎಸೆತ ಪ್ರಕರಣ: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಪರ ನಿಂತ ಅಹಿಂದ – Kannada News | Chikkaballapur slipper throwing incident: balija And ahinda Supports to Congress MLA Pradeep Eshwar

ಚಿಕ್ಕಬಳ್ಳಾಪುರ, (ಜುಲೈ 01): ಮೊನ್ನೆ ಚಿಕ್ಕಬಳ್ಳಾಪುರದಲ್ಲಿ (Chikkaballapur) ಕೆಂಪೇಗೌಡ ಜಯಂತಿ ಆಚರಣೆ ವೇಳೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಮೇಲೆ ಚಪ್ಪಲಿ ಎಸೆತ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು,  ಬಲಿಜ ಸಂಘ ಹಾಗೂ ಅಹಿಂದ ಪ್ರದೀಪ್ ಈಶ್ವರ್ ಬೆಂಬಲಕ್ಕೆ ನಿಂತಿವೆ. ಹೌದು…ಶಾಸಕ ಪ್ರದೀಪ್ ಈಶ್ವರ್ ಪರವಾಗಿ ಚಿಕ್ಕಬಳ್ಳಾಪುರ ತಾಲೂಕು ಬಲಿಜ ಸಂಘ ಬಹಿರಂಗವಾಗಿ ಬೆಂಬಲ ಸೂಚಿಸಿದ್ದು, ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದೆ. ಇನ್ನು ಇಂದು…

Read More

“ಬೆಂಗಳೂರನ್ನು ಮತ್ತೆ ಶ್ರೇಷ್ಠ ನಗರವನ್ನಾಗಿಸೋಣ”: ಈ ಬದಲಾವಣೆಯಾದರೆ ಸಿಲಿಕಾನ್ ಸಿಟಿ ವಿಶ್ವ ದರ್ಜೆಯ ನಗರ ಆಗುವುದು ಖಂಡಿತ – Kannada News | Bangalore Climate Praised: Can Silicon City Overcome Pollution and Infrastructure Woes?

ಬೆಂಗಳೂರು, ಫೆ. 23: ಸಿಲಿಕಾನ್​​ ಸಿಟಿಯ ಹವಾಮಾನ ( Bangalore infrastructure) ದಿನದಿಂದ ದಿನಕ್ಕೆ ಬದಲಾವಣೆ ಆಗುತ್ತ ಇರುತ್ತದೆ. ಅದರಲ್ಲೂ ಗಾಳಿಯ ಮಟ್ಟದಲ್ಲಿ ಪ್ರತಿದಿನ ಬದಲಾವಣೆಗಳು ಇರುತ್ತದೆ. ಒಂದು ವೇಳೆ ಕೆಲವು ಬದಲಾವಣೆಗಳನ್ನು ತಂದರೆ ಖಂಡಿತ ಬೆಂಗಳೂರಿನ ಹವಾಮಾನ ಉತ್ತಮವಾಗಿರುತ್ತದೆ ಎಂದು ಹೇಳಿರುವ ಪೋಸ್ಟ್​​ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಇದೀಗ ಬೆಂಗಳೂರಿನ ಹವಮಾನದ ಬಗ್ಗೆ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. “ನೀವೇನಾದರೂ ವಿದೇಶಗಳಲ್ಲಿ ವಾಸವಿದ್ದರೆ, ಬೆಂಗಳೂರಿನ ಹವಾಮಾನ ಎಷ್ಟು ಶ್ರೇಷ್ಠ…

Read More

ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್​​ ಕೈತಪ್ಪಿದ್ದೇಕೆ?: ಅಸಲಿ ಸತ್ಯ ಬಹಿರಂಗಪಡಿಸಿದ ಕುಮಾರಸ್ವಾಮಿ – Kannada News

ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್​​ ಕೈತಪ್ಪಿದ ಬಗ್ಗೆ ಹೆಚ್​​ಡಿಕೆ ಸ್ಪಷ್ಟನೆImage Credit source: Tv9 Kannada ಮಂಡ್ಯ, ಜೂನ್​​ 09: ರಾಜ್ಯಸಭಾ ಚುನಾವಣೆಗೆ ಎನ್​​ಡಿಎ ಅಭ್ಯರ್ಥಿಯಾಗಿ ಒಬಿಸಿ ನಾಯಕ ಪ್ರೊ. ಎಂ. ನಾಗರಾಜ ಅವರ ಹೆಸರನ್ನು ಬಿಜೆಪಿ (BJP) ಘೋಷಿಸಿದ ಬೆನ್ನಲ್ಲೇ ಬಿಜೆಪಿ ಮತ್ತು ಜೆಡಿಎಸ್​​ ವಿರುದ್ಧ ಕಾಂಗ್ರೆಸ್​​ ಕಿಡಿಕಾರಿತ್ತು. ಮಾಜಿ ಪ್ರಧಾನಿ ದೇವೇಗೌಡಿರಿಗೆ ಟಿಕೆಟ್​​ ಕೈತಪ್ಪಿದ ಬಗ್ಗೆ ರಣದೀಪ್​​ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ ನಡೆಸಿದ್ದರು. ಇದಕ್ಕೆ…

Read More

ಸಿಎಜಿ ವರದಿಯಲ್ಲಿ ಗೃಹಲಕ್ಷ್ಮೀ ಯೋಜನೆ ಕಳ್ಳಾಟ ಬಯಲು: ಲೋಪಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಇಲಾಖೆ ಸ್ಪಷ್ಟನೆ – Kannada News | Gruha Lakshmi CAG Report: Women and Child Development Department Clarifies Bank Account Issues Affecting Beneficiaries

ಗೃಹಲಕ್ಷ್ಮೀ ಯೋಜನೆImage Credit source: karnataka.gov.in ಬೆಂಗಳೂರು, ಜೂನ್​​ 25: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ (gruhalakshmi) ಯೋಜನೆಯಲ್ಲಿ 225 ಕೋಟಿಯಷ್ಟು ಅಕ್ರಮ ನಡೆದಿದೆ ಎಂದು ಸಿಎಜಿ ವರದಿ ಬಹಿರಂಗ ಬೆನ್ನಲ್ಲೇ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸ್ಪಷ್ಟೀಕರಣ ನೀಡಲಾಗಿದೆ. ಇಲಾಖೆಯು ಈ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಮೂರು ತಾಂತ್ರಿಕ ಅಂಶಗಳನ್ನು ಪತ್ತೆಹಚ್ಚಿದ್ದು, ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ಮೂಲಕವೇ ಗೃಹಲಕ್ಷ್ಮೀ ಹಣ ವಿತರಿಸಲಾಗುತ್ತಿದೆ ಎಂದು ತಿಳಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಪತ್ತೆ…

Read More

ಬಲಗೈಯಲ್ಲಿ ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ ಕೀನ್ಯಾ ಶಾಸಕ – Kannada News | Kenya Assembly Leader Caleb Takes Bhagavad Gita Oath: Global Faith and ISKCON Connection

ಕೀನ್ಯಾ, ಫೆಬ್ರವರಿ 26: ಕೀನ್ಯಾದ ಯುವ ನಾಯಕರೊಬ್ಬರು ಬಲಗೈಯಲ್ಲಿ ಭಗವದ್ಗೀತೆ(Bhagavad Gita) ಹಿಡಿದು ಪ್ರಮಾಣವಚನ ಸ್ವೀಕರಿಸಿರುವ ಫೋಟೊ ಎಲ್ಲೆಡೆ ವೈರಲ್ ಆಗಿದೆ. ಈ ಯುವ ನಾಯಕನ ಹೆಸರು ಕ್ಯಾಲೆಬ್. ಮೊಂಬಾಸಾದ ಕೌಂಟಿಯಲ್ಲಿರುವ ವಿಧಾನಸಭೆಯಲ್ಲಿ ಈ ಐತಿಹಾಸಿಕ ಘಟನೆ ನಡೆದಿದೆ. ಮೊಂಬಾಸಾ ಕೌಂಟಿಯ ಚಂಗಮ್ವೆ ಕ್ಷೇತ್ರವನ್ನು ಪ್ರತಿನಿಧಿಸುವ ಯುವ ಶಾಸಕ ಕ್ಯಾಲೆಬ್ ಪ್ರಮಾಣವಚನ ಸ್ವೀಕರಿಸಲು ಭಗವದ್ಗೀತೆಯೊಂದಿಗೆ ಬಂದಿದ್ದರು. ಈ ಕುರಿತು ಇಸ್ಕಾನ್​ನ ಓಂಕಾರ ಮುಕುಂದ ದಾಸ್ ಮಾತನಾಡಿ, ಈ ನಡೆ ನಾಟಕೀಯವಲ್ಲ, ಪ್ರಚಾರಕ್ಕೂ ಅಲ್ಲ ಆ ಭಾವ ಅವರ…

Read More

ಮದುವೆ ನಿಶ್ಚಯವಾಗಿದ್ದ ಯುವಕನ ಬರ್ಬರವಾಗಿ ಕೊಂದ ಸಹೋದರ; ಅತ್ತಿಗೆ ಜೊತೆಗೆ ಅಕ್ರಮ ಸಂಬಂಧ ಆರೋಪಕ್ಕೆ ಹರಿದಿದ್ದು ನೆತ್ತರು

ತುಮಕೂರು, ಮಾರ್ಚ್​​ 30:  ಕೌಟುಂಬಿಕ ಕಲಹಕ್ಕೆ ಯುವಕನೋರ್ವ ಬಲಿಯಾಗಿರುವ ಘಟನೆ ತುಮಕೂರು ನಗರದ ಬನಶಂಕರಿಯಲ್ಲಿ ನಡೆದಿದೆ. ಅಣ್ಣನಿಂದಲೇ ತಮ್ಮ ಭೀಕರವಾಗಿ ಕೊಲೆಯಾಗಿದ್ದರೆ, ತಂದೆಯೂ ಕೃತ್ಯಕ್ಕೆ ಸಾಥ್​​ ಕೊಟ್ಟಿದ್ದ ಎಂಬ ವಿಷಯ ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ. ಸ್ಟಾಲಿನ್​​ (29) ಮೃತ ಯುವಕನಾಗಿದ್ದು, ಆತನ ಸಹೋದರ ನವೀನ್​​ ಮತ್ತು ತಂದೆ ಜಾನ್​​ ಪಾಲ್​​ ಎಂಬುವವರೇ ಆರೋಪಿಗಳಾಗಿದ್ದಾರೆ. ಮೃತ ನವೀನ್​​ಗೆ ವಿವಾಹ ಕೂಡ ನಿಶ್ಚಯವಾಗಿತ್ತು. ಆತ ಜೊತೆಯಾಗಿ ಬಾಳಬೇಕಿದ್ದ ಯುವತಿ ಆಡಿದ್ದ ಒಂದು ಮಾತೇ ಸ್ಟಾಲಿನ್​​ ಕುಟುಂಬದಲ್ಲಿ ಬೆಂಕಿಯ ಕಿಡಿ…

Read More

‘ಪೆದ್ದಿ’ ಟ್ವಿಟರ್ ವಿಮರ್ಶೆ: ರಾಮ್ ಚರಣ್ ನಟನೆಗೆ ಪ್ರೇಕ್ಷಕರು ಫಿದಾ; ಶಿವಣ್ಣನಿಗೂ ಜೈಕಾರ

ಬುಚಿ ಬಾಬು ಸನಾ ನಿರ್ದೇಶನದಲ್ಲಿ ಮೂಡಿಬಂದಿರುವ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ‘ಪೆದ್ದಿ’ (Peddi Movie) ಜೂನ್ 4ರಂದು ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿದೆ. ಜೂನ್ 3ರ ರಾತ್ರಿಯೇ ಸಿನಿಮಾಗೆ ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಲಾಗಿತ್ತು. ಇದನ್ನು ವೀಕ್ಷಿಸಿದ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕ್ರಿಕೆಟ್ ದೇವರಾದ ಸಚಿನ್ ತೆಂಡೂಲ್ಕರ್ ಆರಂಭದಲ್ಲಿ ಟೆನ್ನಿಸ್ ಇಷ್ಟಪಟ್ಟಿದ್ದರು, ಎಂ.ಎಸ್. ಧೋನಿ ಕ್ರಿಕೆಟ್‌ಗೆ ಬರುವ ಮುನ್ನ ಫುಟ್‌ಬಾಲ್ ಆಡುತ್ತಿದ್ದರು. ಹಾಗೆಯೇ…

Read More

ಗಿಲ್ಲಿಯಿಂದ ಅಶ್ವಿನಿ ಗೌಡ ತನಕ: ಬಿಗ್ ಬಾಸ್ ಫಿನಾಲೆ ಸ್ಪರ್ಧಿಗಳ ಪ್ಲಸ್ ಏನು? ಮೈನಸ್ ಏನು? – Kannada News | Plus and Minus of Bigg Boss Kannada Season 12 Finale contestants Gilli Nata Ashwini Gowda

ನೋಡನೋಡುತ್ತಿದ್ದಂತೆಯೇ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಫಿನಾಲೆ ಬಂದೇ ಬಿಟ್ಟಿದೆ. ಎಲ್ಲವೂ ನಿನ್ನೆ ಮೊನ್ನೆ ಶುರು ಆದಂತಿದೆ. ಆದರೆ ಮೂರೂವರೆ ತಿಂಗಳು ಕಳೆದುಹೋಗಿದೆ. ಹಲವಾರು ಸ್ಪರ್ಧಿಗಳಿಂದ ತುಂಬಿದ್ದ ಬಿಗ್ ಬಾಸ್ ಮನೆ ಈಗ ಕೇವಲ 6 ಮಂದಿಗೆ ಬಂದು ನಿಂತಿದೆ. ಅಶ್ವಿನಿ ಗೌಡ, ಕಾವ್ಯಾ ಶೈವ, ಮ್ಯೂಟೆಂಟ್ ರಘು, ಧನುಷ್, ರಕ್ಷಿತಾ ಶೆಟ್ಟಿ ಹಾಗೂ ಗಿಲ್ಲಿ ನಟ (Gilli Nata) ಅವರು ಫಿನಾಲೆ ತಲುಪಿದ್ದಾರೆ. ಜನವರಿ 18ರಂದು ಅದ್ದೂರಿಯಾಗಿ…

Read More